top of page

ಸ್ವಯಂ ಪ್ರತಿಫಲನ

ಸರಳವಾದ ಕವಿತೆಗಳು ಮತ್ತು ಗದ್ಯಗಳಲ್ಲಿ ಅವರು ತಮ್ಮ ವೃತ್ತಿಜೀವನವನ್ನು ಅನುಸರಿಸಿದಾಗ ಅವರು ಅನುಭವಿಸಿದ ಆತ್ಮಾವಲೋಕನವನ್ನು ವಿವರಿಸುತ್ತಾರೆ. ತಮಾಷೆಯ ರೀತಿಯಲ್ಲಿ, ಅವರು ನಾನು ಭ್ರಷ್ಟ ಎಂದು ಹೇಳುತ್ತಾರೆ ಮತ್ತು ಮುಂದಿನ ಭಾಗದಲ್ಲಿ ಅವರು ತಮ್ಮ ನೈಜ ಫಲಿತಾಂಶವನ್ನು ಹಂಚಿಕೊಳ್ಳುತ್ತಾರೆ. ಒಬ್ಬ ಮಹಾನ್ ವ್ಯಕ್ತಿ ಬಾಹ್ಯ ಸನ್ನಿವೇಶಗಳೊಂದಿಗೆ ಹೋರಾಡುತ್ತಿರುವಾಗ ಆಂತರಿಕ ಶಾಂತಿಯನ್ನು ಹೇಗೆ ಸಾಧಿಸಲು ಸಾಧ್ಯವಾಯಿತು ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ.

introspection

ಬ್ಯಾಂಕ್ ವಿ.ಆರ್.ಎಸ್

ಭಾಗ 1 - ವಿಡಂಬನೆ

27.10.03 - 7.30 am

 

ನಾನು ಬ್ಯಾಂಕ್ ಉದ್ಯೋಗಿ,

ಲಂಚ ಹೊಡೆಯಲಿಲ್ಲ,

ಹಣ ಗಳಿಸಲಿಲ್ಲ.

ಆತ್ಮ ಸಾಕ್ಷಿಗೆ ಮೋಸ ಮಾಡಿದೆ,

ಸರಿಯಾಗಿ ಕೆಲಸ ನಿರ್ವಹಿಸಲಿಲ್ಲ.

 

O.C. ಹೆಸರಿನಲ್ಲಿ ಕಾಲ ಕಳೆದೆ.

Leader ಆಗಿ ಮ್ಯಾನೇಜರ್ ಹೆದರಿಸಿ ಸ್ವಂತ ಕೆಲಸ ಮಾಡುತ್ತಿದ್ದೆ.

Side Business ಮಾಡಿ ಹಣ ಸಂಪಾದಿಸಿದೆ.

ಹೆಂಡತಿ ಕೆಲಸದಲ್ಲಿ ಬಂತು

ಹಣ

ಮನೆ ಕಟ್ಟಿಸಿದ್ದೂ ಆಯಿತು.

ಮಕ್ಕಳ ವಿದ್ಯಾಭ್ಯಾಸವೂ ಆಯಿತು.

ಉದ್ಯೋಗ ದೊರಕಿತು.

ವಿವಾಹಗಳು ಆಯಿತು.

 

ಆಗ ಬಂತು VRS -2001

ಜೊತೆಗೆ ಕೊಟ್ಟರು Ex-gratia ಆಗಿ

ಲಕ್ಷ ಲಕ್ಷ

ಬಿಟ್ಟಿ ರೀತಿಯಲ್ಲಿ ಕಟ್ಟಿದ ಹಾಗಯಿತು ನನ್ನ ಮನೆ

ಕೆಲಸ ಮಾಡದೆ ಸಾಧಿಸಿದ್ದಾಯಿತು.

ಉಂಡು ಹೋದ ಕೊಂಡು ಹೋದ ಹಾಗಾಯಿತು

ನನ್ನ ಸ್ಠಿತಿ.

 

VRS ಒಂದು ರೀತಿ ಬ್ಯಾಂಕ್ ಕೊಟ್ಟ ಲಂಚ ಹೊರಹಾಕಿದರು ಕೆಲವು ಕೆಟ್ಟ ಹುಳುಗಳ.
 

ಭಾಗ 2 - ಸತ್ಯ

27.10.03 - 7.30 am

ನಾನು ಬ್ಯಾಂಕ್ ಉದ್ಯೋಗಿ

ಈಗ ಅಧಿಕಾರಿ ಕಾರಕೂನನಾಗಿ ಒಂದೇ ಕಡೆ-ಶಾಖೆಯಲ್ಲಿ 8 ವರ್ಷ ಅಧಿಕಾರಿ ಆದ ಮೇಲೆ ಮಾಡಿದ್ದು

15 ಶಾಖೆಗಳಲ್ಲಿ ಅಧಿಕಾರಿ ಆಗಿ ಮಾಡಿದ ವರ್ಷ -22 ವರ್ಷ.


ನಾನಾ ಶಾಖೆಗಳಿಗೆ ವರ್ಗ ಕಾರಣ ನನ್ನ ನೇರ ಮಾತು

Boss -Leaders ಗಳ ಚಮಚಾ ಆಗದೇ ಇದ್ದಿದ್ದು.


ನನ್ನ ಅದೃಷ್ಟಕ್ಕೆ 2 ಗಂಡು ಮಕ್ಕಳು

VRS- ಸಮಯದಲ್ಲಿ ಕೆಲಸದಲ್ಲಿದ್ದ ಒಬ್ಬ,

ಇನ್ನೊಬ್ಬ Lawyer ಆಗಿ ಕೆಲಸಕ್ಕೆ ಹೋದ.

 

ಕಷ್ಟ ಪಟ್ಟು ಕಟ್ಟಿಸಿದ್ದಾಯಿತು 8 ಚದರದ ಮನೆ.

ಬ್ಯಾಂಕ್ ಸಾಲ - ಇತರೆ ಸಾಲಗಳಲ್ಲಿ ಕಟ್ಟಿಸಿದ್ದಾಯಿತು ಮತ್ತೆ 2 ಅಂತಸ್ತುಗಳ ಚಿಕ್ಕ ಮನೆಗಳ.

 

ಲಂಚ ಹೊಡೆಯಲಿಲ್ಲ.

ಚಮಚಾಗಿರಿ ಮಾಡಲಿಲ್ಲ.


ಆತ್ಮ ಸಾಕ್ಷಿಯಾಗಿ ನಡೆದೆ-ದುಡಿದೆ,

ಅತ್ತಿದ್ದೇನೆ ನೈಜ ಜೀವನದ ಕಷ್ಟಕ್ಕಾಗಿ.

 

BANK ನನ್ನ ಪಾಲಿನ ದೇವರು.

ಆಗ ಬಂತು VRS-2001

ನನಗೂ ಸಿಕ್ಕಿತು.

VRS ಎಲ್ಲಾ ಸೇರಿ ಒಟ್ಟು ಬಂತು 22 ಲಕ್ಷ

Income Tax ಗೆ ಹೋಯಿತು 2.50 ಲಕ್ಷ,

ಎಲ್ಲಾ ಸಾಲ ತೀರಿಸಿ ಉಳಿದಿದ್ದು 4 ಲಕ್ಷ

VRS -Exgratia ದಿಂದ ಬಂದ ಹಣ ನನ್ನ ಪಾಲಿಗೆ ಉಚಿತ ಕೊಡುಗೆ.

ಅದುವೇ ಮನೆಗೆ ಖರ್ಚು ಮಾಡಿದ ಹಣ

ದೇವರು ಕೊಟ್ಟ ನೆಮ್ಮದಿಯ ಜೀವನ.


ಭಾಗ 3 - ವಿಡಂಬನೆ

27.10.03 - 7.30 am

ನಾನು ಬ್ಯಾಂಕ್ ಉದ್ಯೋಗಿ.

ಅಧಿಕಾರಿಯಾಗಿ ಹಲವಾರು ವರ್ಷ.

ಕಾರಕೂನನಾಗಿ ಕೆಲವು ವರ್ಷ.

ಚಮಚಾಗಿರಿ ನನ್ನ ಹವ್ಯಾಸ,

Boss - Leaders ಗಳು

ನನ್ನ ದೇವರುಗಳು.

 

ನಾನು ಲಂಚ ಹೊಡೆದು-ಹಣ ಸಂಪಾದಿಸಿದೆ

Boss ಗಳಿಗೂ ಸುರಿದೆ ಲಂಚದ ಹಣ.

 

Leaderಗಳಿಗೂ ಕೊಟ್ಟೆ ಅಲ್ಪ ಸ್ವಲ್ಪ

ಆಗಾಗ್ಗೆ

Field Officer-Manager ಆಗಿದ್ದಾಗ

ಹೆದರಿಸಿ ಪಡೆದೆ ಲಂಚ

ಸಾಲಗಾರರಿಂದ ಕೊಡುಗೆಯಾಗಿ

 

1995-1996 ರಿಂದ ಬಂತು ಸಾಲ ಮನ್ನಾ (write-off) ಪದ್ದತಿ. ನಾನು ಕೊಟ್ಟ ಸಾಲಗಳೆಲ್ಲಾ ಬಹುಪಾಲು ಆಗಿತ್ತು ಮನ್ನಾ, ಸಾಲ ಮನ್ನಾ ಸಮಯದಲ್ಲೂ ಬೆದರಿಸಿ ತಿಂದೆ ಸಾಲಗಾರರಿಂದ ಸಾಲ ಮನ್ನಾ ಹೆಸರಿನಲ್ಲಿ ಲಂಚದ ರೂಪದಲಿ Boss ಗಳಿಗೂ ಲಂಚ ತಿನ್ನಿಸಿ ಮನ್ನಾ ಮಾಡಿಸಿದೆ ಕೆಲವೂ ಕೊಟ್ಟ ಸಾಲಗಳನ್ನು ಲಂಚ ಹಣದಿಂದ ಕಟ್ಟಿಸಿದ್ದೆ. ಅನೇಕ ಮಹಡಿ ಮನೆಗಳನ್ನು, ಮಕ್ಕಳ ವಿದ್ಯಾಭ್ಯಾಸ ಮುಗಿದಿದೆ, ಕೆಲಸಗಳು ಸಿಕ್ಕಿವೆ-ಮದುವೆ ಆಗಿದೆ VRS ನಿಂದ ಬಂದ ಹಣ ಉಳಿದಿದೆ ಇಪ್ಪತ್ತು ಲಕ್ಷ ಉಳಿದಿದೆ ಲಂಚಹ ಹಣ ಇದೆ. Pension/PF ಹಣ ಇದೆ. ನಾಟಕೀಯವಾಗಿ ಇಟ್ಟಿದ್ದು ಸಾಲ ತೀರಿಸಿದೆ. ಆದರೆ ಒಂದಿಲ್ಲ ನೆಮ್ಮದಿಯ ಜೀವನ ಕಾರಣ ಆತ್ಮ ವಿಮರ್ಷೆಯ ದಿನ ವಿಮರ್ಷಿಸಿದಾಗ ಗೊತ್ತಾಯಿತು ನನ್ನ ದುರ್ವ್ಯವಹಾರದ ಪಾಪದ ಕೂಪ ಇನ್ನೂ ಗೊತ್ತಿಲ್ಲ ತೀರಿಸಬೇಕೆಂದಿರುವ ತೀರಿಸಬೇಕಾಗಿರುವ ಪುನರ್ಜನ್ಮಗಳ ಸಂಖ್ಯೆ. ದೀನ ದಲಿತನಾಗಿ ಹುಟ್ಟಬಹುದು, ದರಿದ್ರನಾಗಿ ಬಾಳಬಹುದು, ಕಷ್ಟ ಕಾರ್ಪಣ್ಯಗಳಿಗೆ ಸಿಲುಕಿ ಹಾಕಿಕೊಳ್ಳಬಹುದು. ಈಗ ನನ್ನ ಜೀವನ ಬದುಕಿದ್ದು ಸತ್ತ ಹಾಗಿ ಎಂದೆನಿಸುತ್ತಿದೆ. Thank God. VRS ಬರದೇ ಇದ್ದಿದ್ದರೆ, Retire ಆಗುವವರೆಗೂ ಎಷ್ಟು ಸಂಪಾದಿಸುತ್ತಿದ್ದೆನೋ ಲಂಚದ ರೂಪದಲ್ಲಿ VRS ಮೂಲಕ ನನ್ನ ಮನೆಗೆ ಕಳಿಸಿದ್ದೆ BANK ಗೆ ಲಾಭ. ಮನಕೊಳಕಾಗಿದೆ-ಬುದ್ದಿ ಹಾಳಾಗಿದೆ. ಹೊರಗೆ ಮಾತ್ರ ದೇಹ ಸ್ವಚ್ಛವಾಗಿದೆ. ನಡೆ-ನುಡಿ ಒಂದಾಗದೆ ಮನ ಕೊರಗುತ್ತಿದೆ.



ಭಾಗ 4 - ಸತ್ಯ

30.10.03 - 8.46 a.m

ನಾನು ಬ್ಯಾಂಕ್ ಉದ್ಯೋಗಿ.

ಬಹು ವರುಷಗಳಿಂದ ಅನೇಕ ಶಾಖೆಗಳಿಗೆ ವರ್ಗ ಮಾಡುತ್ತಾರೆಂದು,

ಅಧಿಕಾರಿ ಬಡ್ಡಿಗೆ ಪ್ರಯತ್ನ ಮಾಡಲಿಲ್ಲ.

 

ನಮ್ಮ ಬ್ಯಾಂಕಿನಲ್ಲಿ Union ನೇ Management,

Management ನೇಮಕಾವಸ್ತೆ SBI-Agent.

 

Union Leaders ಅಂದರೆ ರೌಡಿಯ ಇನ್ನೊಂದು ರೂಪ

ಕೆಲಸ ಮಾಡಿದರೆ ಮಾಡಬಹುದು,

ಮಾಡದಿದ್ದರೆ ಏನು ಮಾಡುವುದಿಲ್ಲ.

 

ಅಧಿಕಾರಿಗಳು Management Union ಗೆ ಅಧೀನರು.

ಅಧಿಕಾರಿಗಳ Union ಗೂ ತಾಕತ್ತಿಲ್ಲ.

 

ಜವಾನವರ್ಗದವರೂ ಎರಡನೇ ಗ್ರೇಡ್ Union.

ಇದು ನಮ್ಮ ಬ್ಯಾಂಕ್ ನ ವೈಖರಿ,

ಇಂತಹ ವಾತಾವರಣದಲ್ಲಿ ನಮ್ಮ ಕೆಲಸ.

 

ನಮ್ಮ ಬ್ಯಾಂಕ್ ನಲ್ಲಿ ಬಾಯಿದ್ದವನು ಬದುಕಿಕೊಂಡ.

ಆದರೂ ನಾನು ಉದ್ಯೋಗದಲ್ಲಿ ವಂಚಿಸಲಿಲ್ಲ.

 

ಕಾಣದ ಹಾಗೆ ಅಧಿಕಾರಿಗಳಿಗೆ ಕೆಲಸದಲ್ಲಿ ಸಹಕರಿಸುತ್ತಿದ್ದೆ.

ಶಾಖೆಯ ಅಭಿವೃಧ್ಧಿಗೆ ನನ್ನ ಪಾಲೂ ಸ್ವಲ್ಪ ಇದೆ.

ಅದೇ ನನ್ನ ಪಾಲಿನ ಅಲ್ಪ ಸಂತೋಷ.

 

ದಿನದ 70-75 ಭಾಗ ನನ್ನ ಕೆಲಸ ನ್ಯಾಯ ರೀತಿಯದು,

ಉಳಿದಿದ್ದು Leaders ಗೆ ಹೆದರಿ ಮಾಡಿದ್ದು.

ಅರೆಮನಸ್ಸಿನಲ್ಲಿ ಆತ್ಮ ಸಾಕ್ಷಿಗೆ ವಿರುದ್ಧವಾಗಿ,

ಮಾಡುತ್ತಿದ್ದಾಗ ಕೆಲಸ ನನ್ನ ಮನಸ್ಸು ನೋಯುತ್ತಿತ್ತು.

ಆಗ ಬಂತು VRS-2001.

Apply ಮಾಡಿದೆ ನನಗೂ ಸಿಕ್ಕಿತು.

ಚಿಕ್ಕ ಮನೆ ಕಟ್ಟಿಸಿದ್ದೆ

ಅಂತಸ್ತಿಲ್ಲದ ಮನೆ;

ಮಗ ಕೆಲಸದಲ್ಲಿ ದುಡಿಯುತ್ತಿದ್ದ,

ಮಗಳು ಓದುತ್ತಿದ್ದಳು.

 

Pension - ಮಗನ ಆದಾಯ,

ನನ್ನ ಜೀವನಕ್ಕೆ ಆಧಾರ VRS ನಿಂದ ಬಂದ ಹಣ,

ಸಾಲ ತೀರಿಸಿದ ಮೇಲೆ,

ಮಗಳ ವಿದ್ಯಾಭ್ಯಾಸಕ್ಕೆ,

ಮಗಳ ಮದುವೆಗೆ ಮೀಸಲೂ ಉಳಿದ ಹಣ -ಇದು ನನ್ನ ಪರಿಸ್ಥಿತಿ.

 

ಬೇರೆ Business ಗೆ Try ಮಾಡುತ್ತಿದ್ದೇನೆ.

ವಯಸ್ಸು ಬೇಡ ಎನಿಸುತ್ತಿದೆ.

ಅಲ್ಪ ತೃಪ್ತಿ

ಹಾಸಿಗೆಯಿದ್ದಷ್ಟು ಕಾಲು ಚಾಚು ಎನಿಸುತ್ತಿದೆ.

 

ಹೆದರಿಕೆಯಿಂದ ಜೀವನ ನಡೆಸುವುದೇ ನನ್ನ ಅಭ್ಯಾಸ.

ಕಾಲ ಕಳೆಯಲು ಕಷ್ಟ.

ಆಧ್ಯಾತ್ಮದ ಕಡೆಗೆ ಒಲವು ತಿರುಗಿಸುತ್ತಿದ್ದೇನೆ.

 

ಮನ ಪೂರ್ತಿ ತಿರುಗಿಲ್ಲ-ಬುದ್ದಿ ಸ್ಥಿತಿಗೆ ಬಂದಿಲ್ಲ.

ನನ್ನ ಜೀವನದಲ್ಲಿ ಆತ್ಮ ಸಾಕ್ಷಿಯಾಗಿ ಮಾಡಿದ್ದು ಅರ್ಧ ಕೆಲಸ.

 

ಬೇರೆ ಬೇರೆ ಕಡೆಗೆ ವರ್ಗ ಮಾಡುವರೆಂಬ ಭಯ,

Head clerk-Special Assistant ಆಗಿ ಕೆಲಸ ಮಾಡಿದೆ.

 

ಮನಸ್ಸಿಗೆ ಪೂರ್ತಿ ನೆಮ್ಮದಿ ಇಲ್ಲ.

ಅರೆ ಬೆಂದ ಮಡಕೆ ನನ್ನ ಮನ.

ಇದ ನನ್ನ ಜೀವನ ರೀತಿ.

 

VRS ನಿಂದ ಬಂದ ಕೊಡುಗೆ ನನ್ನ ಮಗಳ-ವಿದ್ಯಾಭ್ಯಾಸ

ಮದುವೆ ಖರ್ಚಿಗೆ

ನನ್ನಂತಹವರು ಬಹು ಮಂದಿ ಇದ್ದಾರೆ.

 

VRS ತೆಗೆದುಕೊಂಡ ಉದ್ಯೋಗಿಗಳಲ್ಲಿ,

VRS ಹಣ ನನ್ನ ಪಾಲಿಗೆ ಕೊಟ್ಟ GIFT,

Bank ಗೆ ಚಿರು ಋಣಿ.


ಅಂತಿಮ ಭಾಗ - ವಿಡಂಬನೆ

31.10.2003 - ಶುಕ್ರವಾರ- 5.40 p.m.

ನಾನು ಬ್ಯಾಂಕ್ ಉದ್ಯೋಗಿ,

ತಾನಾಗಿ ಬಂತು ಆ ಕಾಲದಲ್ಲಿ ಉದ್ಯೋಗ,

ಕಾರಣ ನಮ್ಮಪ್ಪನೂ ಬ್ಯಾಂಕ್ ಉದ್ಯೋಗಿ.

 

ಆಗ R.R.B- ಉದ್ಯೋಗ ಕೇಂದ್ರ ಇರಲಿಲ್ಲ.

ಚಮಾಚಾಗಿರಿ- Influence ನಲ್ಲಿ ಕೆಲಸ ಸಿಕ್ಕಿತು.

ಬೆಂಗಳೂರಿನಲ್ಲಿ ಕೆಲಸ-ವರ್ಗಾವಣೆ ಇರಲಿಲ್ಲ.

 

ನನ್ನ ಪಾಲಿಗೆ ಒಳ್ಳೆ Bank.

ಕೆಲಸ ಮಾಡು ಅಂತ ಹೇಳುತ್ತಾ ಇರಲಿಲ್ಲ.

ಮೊದಲೆರಡು-ಮೂರು ವರ್ಷ ಕೆಲಸ ಮಾಡಿದ್ದೆ.

ಕೆಲಸ ಮಾಡದಿದ್ದರೆ ಕೇಳುತ್ತಾ ಇರಲಿಲ್ಲ.

ಕಾರಣ ನಾನು Union Leader.

 

ನಮ್ಮ ಅಪ್ಪನೂ Leader ಆಗಿದ್ದವರು.

ಕಾಲ ಕಳೆಯಲಿಕ್ಕೆ ಒಳ್ಳೆಯ ಅವಕಾಶ

ಕಷ್ಟ ಎನ್ನುವುದು ಗೊತ್ತಿಲ್ಲ- ಗೊತ್ತಾಗಲಿಲ್ಲ.

 

ಸಿನಿಮಾ ನೋಡುವುದು,

ರೇಸ್ಗೆ ಹೋಗೋದು,

ಹರಟೆ ಹೊಡೆಯುವುದು,

ಬೀದಿ ತಿರುಗುವುದು.

Tease ಮಾಡಿ ರೇಗಿಸುವುದು.

ನನ್ನ ಹವ್ಯಾಸ

 

ಬೆಳ್ಳಿಗ್ಗೆ ಹತ್ತುವರೆ ಗಂಟೆಗೆ ಮನೆ ಬಿಡುವುದು.

ಸಂಜೆ ಐದು ಮೂವತ್ತರ ಒಳಗೆ ಮನೆ ಸೇರುವುದು.

 

Bank ಗೆ ಯಾವಾಗ ಬೇಕಾದರೂ ಹೋಗಬಹುದು.

Bank ಗೆ ಯಾವಾಗ ಬೇಕಾದರೂ ಬರಬಹುದು.

ಏಕೆಂದರೆ ನಾನು Bank Union Leader.

 

ಹತ್ತಿರದ ಸಂಭಂಧಿಯ ಮದುವೆ ಆಯ್ತು,

ಮಕ್ಕಳು ಆಯ್ತು,

ಅವರ ವಿದ್ಯಾಬ್ಯಾಸ ಅಷ್ಟಕಷ್ಟೆ.

ನನ್ನ ಹಾಗೆ ಸೋಂಬೇರಿಗಳು.

 

ಮಗಳನ್ನು ಮದುವೆ ಮಾಡಿ ಸಾಗಿ ಹಾಕಿದ್ದಾಯಿತು.

ಮಗ ಮನೆಯಲ್ಲಿ ದಂಡ ಪಿಂಡ ಹಾಗೆ ಕುಳಿತ್ತಿದ್ದಾನೆ.

ಹೆಣ್ಣು ಕೊಡೋಕೆ ಯಾರೂ ಬರುತ್ತಿಲ್ಲ.

ಕಾರಣ ಆತ ಎಲ್ಲದರಲ್ಲೂ FAIL.

 

ನಮ್ಮಪ್ಪ ಸತ್ತಮೇಲೆ,

ನನ್ನ ಮನೇಲಿ ಅಮ್ಮನೇ ದುಡೀತಾಳೆ.

ಕಾರಣ ನನ್ನ ಹೆಂಡತಿ ಸೋಂಬೇರಿ,

ನನ್ನ ಹಾಗೆ ಕಾಲ ಕಳೆಯುತ್ತಾ ಇರುತ್ತಾಳೆ.

ಗಳಿಸಿದ ದುಡ್ಡು ಕೆಟ್ಟ ಕೆಲಸಗಳ ಚಟಗಳಿಗೆ ಹೋಯ್ತು.

ನಮ್ಮಪ್ಪ ಮಾಡಿದ ಮನೇನೆ ನನಗೆ Shelter.

 

ನನ್ನ ಮಗನಿಗೂ ಅದೇ ಸಹ ಸೂರು

ಅಳಿಯ-ಮಗಳ ಸಂಸಾರ ಅಷ್ಟಕಷ್ಟೆ.

ಕಾರಣ ನನ್ನ ಮಗಳು ನಮ್ಮ ಹಾಗೆ ತಾನೆ.

ನನ್ನ ಬುದ್ದಿ ಮಕ್ಕಳಿಗೂ ಅಂಟಿಕೊಂಡಿವೆ.

 

VRS ಬಂತು-ಹಣ ಬಂತು

ಸಾಕಷ್ಟು ಸಾಲ ತೀರಿಸಕ್ಕೆ ಬಹಳ ಹಣ ಹೋಯಿತು.

ಸ್ವಲ್ಪ ಉಳಿದಿದ್ದು,

Pension ಈಗ ಉಳಿದಿದೆ.

 

ಅದರಲ್ಲೇ ಜೀವನ

ನನ್ನ ಸಂಸಾರಕ್ಕೆ.

ನನ್ನ ಮಗನ ಜೀವನ ಹರೋಹರ

ಈಗ ಶುರು ಆಗಿದೆ ಜೀವನದ ಕಷ್ಟ.

ಇನ್ನೇನು ಕಾದಿದೆಯೋ ನೋಡಬೇಕು

ನನ್ನ ದೇಹಕ್ಕೂ ಬರುತ್ತಿದೆ ಆಗಾಗ ಕುತ್ತು

ಮಾಡಿದ್ದುಣ್ಣೋ ಮಹರಾಯ ಅದು ನನ್ನ ಪಾಲಿಗೆ ಸತ್ಯ.

 

ಹಿಂದೆ ಮಾಡಿದ

ತಿಂದ-ಕುಡಿತದ ಕಿಮ್ಮತ್ತು ಈಗ ನನ್ನ ದೇಹಕ್ಕೆ,

ಜೀವಕ್ಕೆ ಕುತ್ತು.

 

VRS ಬಂದರೂ ನಾನು ಸೋತೆ ಜೀವನದಲ್ಲಿ

ಅದಕ್ಕೆಲ್ಲಾ ಕಾರಣ ನನ್ನ ಬೆಳೆಸಿದ Bank Union.​

ಅಪಘಾತ

೨೪.೦೧.೨೦೦೨ - ೭.೫೦ ಬೆಳಿಗ್ಗೆ

14.01.2002 - 7.50 AM


೨೭/೧೧/೨೦೦೧ ರಂದು ಸಂಜೆ- ರಾತ್ರಿ ೮.೩೦ ಕ್ಕೆ ಅಪಘಾತದಿಂದಾಗಿ ಎಡಕಾಲಿನ ಮೂಳೆ ಮುರಿದು, ಚಿಕಿತ್ಸೆ ಪಡೆಯುತ್ತಿದ್ದು, ಇದರಿಂದ ಆದ ಮಾನಸಿಕ ಅಘಾತ ಮತ್ತು ದೇಹದ ಅಫಘಾತದ ನೋವಿನ ಕತೆ ಮಾನಸಿಕವಾಗಿ ಆ ದೇವರ ಮುಂದೆ ಕೇಳಿದ ಪ್ರಶ್ನೆಗಳು??

ಓ | ಲಿಂಗದೇವಾ!! ಏಕೆ? ಈ ಅಪಘಾತ! ಆಘಾತ!! ನನಗೆ?
ಓ ಪರಮಾತ್ಮ ! ಲಿಂಗದೇವಾ !! ಏಕೆ ಈ ಅಪಘಾತ ! ಆಘಾತ?
ಕಾರಣ ತಿಳಿಯದು - ಮನಸ್ಸು ನಿಲ್ಲದು.
ಸುಳಿದಾಡುತಿಹುದು ಕಾರಣ ಹುಡುಕಲು-ಮನಸ್ಸು ||ಅದಕ್ಕಾಗಿ ಓ ! ಲಿಂಗದೇವಾ||

ಹೃದಯ ಬಡಿದಾಡುತಿಹುದು-ಮನಸ್ಸು ದುರ್ಬಲ ಎನಗೆ ಸಹಿಸಲಾರೆನು ಮನ ನೋವ-ದೇಹದ ನೋವ.
ಏಕೆ ಈ ಆಘಾತ? ತಪ್ಪು ಮಾಡಿದದಾದರೂ ಏನು? ಎಂತು?? ||ಅದಕ್ಕಾಗಿ ಓ ! ಲಿಂಗದೇವಾ||

ನನ್ನ ಪ್ರತಿ ನಿತ್ಯ ಪ್ರಾರ್ಥನೆ ಕೇಳಿದೆಯಾ ದೇವ,
"ಮಾಡಿದ ತಪ್ಪು ಕ್ಷಮಿಸು" ಎಂಬ ಪ್ರಾರ್ಥನೆ ತಿಳಿಯದಾಯಿತೆ?
ಅನ್ಯಥಾ ಭಾವಿಸಿ ನನಗೆ ಈ ಶಿಕ್ಷೆಯೇ ! ದೇವಾ ||ಅದಕ್ಕಾಗಿ ಓ ! ಲಿಂಗದೇವಾ||

’ಕೊಡಲಿ ಏಟಿಗಿಂತ ಇದು ಉಗುರು ಏಟು’ ಎಂಬ ಶಿಕ್ಷೆಯೆ? ಆದರೂ ನನ್ನ ಮನ ನೊಂದಿಹುದು-ದೇಹದ ನೋವು ಇಹುದು.
ದಿನ ದಿನ ಕಾಲ ಕಳೆಯಲಿಕ್ಕೆ ಬಹಳ ಕಷ್ಟ ಆಗಿಹುದು ||ಅದಕ್ಕಾಗಿ ಓ ! ಲಿಂಗದೇವಾ||

ಆದದ್ದೆಲ್ಲಾ ಒಳ್ಳೆಯದಕ್ಕೆ ಎಂಬ ಭಾವನೆಯಿಂದ ಇರಲೇ ?
ಇದರ ಫಲ ಮುಂದಿಹುದು ಎಂದು ಸುಮ್ಮನಿರಲೆ?
ನನ್ನ ಮನ ಮರ್ಕಟ -ಸಹನೆಯ ತಾಳ್ಮೆ ಇದಕ್ಕಿಲ್ಲ ||ಅದಕ್ಕಾಗಿ ಓ ! ಲಿಂಗದೇವಾ||

ಆಧ್ಯಾತ್ಮಿಕದ ಕಡೆಗೆ ಮನಸ್ಸು ಪೂರ್ಣ ನಿಲ್ಲದು
ಅರೆ ಬೆಂದ ಮನಸ್ಸು-ಅರೆ ಬೆಂದ ದೇಹ
ಮನಸ್ಸು ಚಂಚಲ ನನಗೆ -ಏಕಾಗ್ರತೆ ಎನಗಿಲ್ಲ ||ಅದಕ್ಕಾಗಿ ಓ ! ಲಿಂಗದೇವಾ||

ಪ್ರತಿ ನಿತ್ಯ ಕಾಲ ಕಳೆಯುವುದಾದರೂ ಎಂತು?
ಯಾವುದರಲ್ಲಿಯೂ ಆಸಕ್ತಿ ಎನಗಿಲ್ಲ-ಎಲ್ಲ ನಿರಾಸಕ್ತಿ.
ಕಾಲಿನ ಅಪಘಾತದಿಂದ ತಿರುಗಾಟ-ನಡೆ ಇಲ್ಲ. ||ಅದಕ್ಕಾಗಿ ಓ ! ಲಿಂಗದೇವಾ||

ಓದಲಿಕ್ಕೆ ಮನಸ್ಸಿಲ್ಲ-ಕೇಳಲಿಕ್ಕೂ ಮನಸ್ಸಿಲ್ಲ.
ನಡೆ-ತಿರುಗಾಟ ಆಗದೆ ನಿಂತಿಹುದು,
ಮನಸ್ಸು ನಿಲ್ಲದು ಒಂದೆಡೆ ||ಅದಕ್ಕಾಗಿ ಓ ! ಲಿಂಗದೇವಾ||

ನಿದ್ರೆಯು ಅರೆನಿದ್ರೆಯಾಗಿ ಬಹುವರ್ಷವಾಯಿತು,
ಅರೆ ನಿದ್ರೆ, ಅರೆನಿದ್ರೆ ಆಗಾಗ್ಗೆ ಆಗಾಗ್ಗೆ,
ಮನಸ್ಸಿಗೂ ಭಾರ-ದೇಹಕೂ ಭಾರ ||ಅದಕ್ಕಾಗಿ ಓ ! ಲಿಂಗದೇವಾ||

ಹಲವು ವರ್ಷಗಳ ಹಿಂದೆ [೧೯೭೯-೭-೧೭] ಆಗಿತ್ತು ಅಪಘಾತ,
ಅಂದಿನಿಂದ ಅರೆನಿದ್ರೆ ಎನಗೆ,
ನಿದ್ರೆ ಗುಳಿಗೆ ದೂರಇಟ್ಟು ಕಾಲ ಕಳೆದೆ ಹಾಗೂ ಹೀಗೂ ||ಅದಕ್ಕಾಗಿ ಓ ! ಲಿಂಗದೇವಾ||

ಹೊರಗೆ ಹೋಗದೆ ಕಾಲ ಕಳೆಯುವುದಾದರೂ ಎಂತು?
ನಿಲ್ಲದ ಮನಸ್ಸ ನಿಲ್ಲಿಸಿ ಕೂಡುವುದು ಎಂತು?
ಮನ ಒಂದು ಕಡೆ -ದೇಹ ಒಂದು ಕಡೆ ||ಅದಕ್ಕಾಗಿ ಓ ! ಲಿಂಗದೇವಾ||

ಇದೆಲ್ಲವ ತಿಳಿದು, ಅರಿತಿಕೊ,
ನನ್ನ ಮನದ ಬಳಲಾಟ-ದೇಹದ ಬಡಿದಾಟ
ಕೊಡು ನನಗೆ ನಿದ್ರೆ-ಬೇಕಾದಷ್ಟು ನನಗೆ ||ಅದಕ್ಕಾಗಿ ಓ ! ಲಿಂಗದೇವಾ||

ಇಲ್ಲವಾದರೆ ಕೊಡು ಚಿರನಿದ್ರೆ
ನನಗೇನು ಇರಬೇಕೆಂಬ ಆಸೆಇಲ್ಲ,
ಈ ಆಘಾತದಿಂದ ಇಲ್ಲ ಶಾಂತಿ-ನೆಮ್ಮದಿ ||ಅದಕ್ಕಾಗಿ ಓ ! ಲಿಂಗದೇವಾ||

ಶರಣಾಗಿಹೆ ನಿನ್ನ ಪಾದಕ್ಕೆ ಸಂಪೂರ್ಣ
ಅರಿತಿಕೊ ನನ್ನ ಮನ-ದೇಹ ಆಟಗಳ,
ಕೊಡು ನಿನ್ನ ಸಂಪೂರ್ಣ ರಕ್ಷೆ ಎನಗೆ ||ಅದಕ್ಕಾಗಿ ಓ ! ಲಿಂಗದೇವಾ||

ಆರೋಗ್ಯ, ಭಾಗ್ಯ- ಕಾಯಕ ಕೊಟ್ಟು ಕಾಪಾಡು,
ನೆಮ್ಮದಿ, ಶಾಂತಿ ಸದಾ ಮನದಲಿ ನೆಲೆಸಲಿ,
ಅರೆನಿದ್ರೆ ಹೋಗಿ- ಸಂಪೂರ್ಣ ನಿದ್ರೆ ಬರಲಿ ||ಅದಕ್ಕಾಗಿ ಓ ! ಲಿಂಗದೇವಾ||

 

ಆಧ್ಯಾತ್ಮಿಕ ತಿರುಗು

02.01.2004 - 6.10. pm.

ಆಧ್ಯಾತ್ಮಿಕ ಕಡೆಗೆ ತಿರುಗಿಸಲು ಕಾರಣರಿವರು:

ನನ್ನ ಮನದಲ್ಲಿ ಏನಾದರೂ ಕಿಂಚಿತ್ತು,

ಸ್ವಲ್ಪ ಆಧ್ಯಾತ್ಮಿಕ ಭಾವನೆ ಇದ್ದರೆ,

ಅದಕ್ಕೆ ಕಾರಣರಿವರು.


೧. ಮೊಟ್ಟ ಮೊದಲು ತಂದೆ-ಭಯದಿಂದ ಪೂಜೆ.

ಪ್ರತಿದಿನ ೨ ಬಾರಿ.

ದೇವರೆಂಬ ಭಾವನೆ ಮನದಲ್ಲಿ ಮೂಡದಿದ್ದರೂ

ಆಕಾಶದಲ್ಲಿ ದೇವರೆಂಬುವನು ಇದ್ದಾನೆ,
ನೋಡುತ್ತಿದ್ದಾನೆ ಎಂಬ ಭಯದ ಪೂಜೆ.

೨. ಆನಂತರ ಲಿಂಗದೀಕ್ಷೆಯ

ನಂತರ ೧೯೫೪ ರಲ್ಲಿ ತರೀಕೆರೆ ತಾಲ್ಲೋಕು,

ಅಜ್ಜಂಪುರದ ಹತ್ತಿರ ಇರುವ ಗಿರಿಯಾಪುರದ ಮಠದಲ್ಲಿ

ನಮ್ಮ ಮಲತಾಯಿ-ಚಿಕ್ಕಮನೊಂದಿಗೆ.

 

ಶ್ರೀ ರೇಣುಕಪೀಠದ ಸ್ವಾಮಿಗಳಿಂದ.

ಶ್ರೀ ರೇಣುಕಾಚಾರ್ಯರು ನಮ್ಮ ಪೀಠದ ಗುರುಗಳೆಂಭ,

 

ನನ್ನ ೮ನೇ ವಯಸ್ಸಿನಲ್ಲಿ;

ಸ್ವಾಮಿಗಳು ದೇವರು ಕಳಿಸಿದ ಪ್ರತಿನಿಧಿ,

ಭಕ್ತರನ್ನು ತಿದ್ದಲು,

ದೀಕ್ಷೆ ಮಾಡಲು,

ಕಳಿಸಿದ ಜಂಗಮರು ಎಂಬ ನಂಬಿಕೆ.

ಪೂಜೆ ಮಾಡದಿದ್ದರೆ ದೇವರ ಶಿಕ್ಷೆ ಎಂಬ ಭಯದ ಪೂಜೆ.

೩. ಮೂರನೆಯದಾಗಿ,

೧೯೬೪ ರಿಂದ ಶ್ರೀ ಎಡೆಯೂರು ಸಿದ್ದಲಿಂಗೇಶ್ವರರು,

ಭಕ್ತಿಯಿಂದ ಪೂಜೆ,

PUC ಯಲ್ಲಿ ಓದುತ್ತಿದ್ದಾಗ,

1 Subject ನಲ್ಲಿ Physics ನಲ್ಲಿ 7 ಕಡಿಮೆ ಅಂಕೆಯಲ್ಲಿ ನಪಾಸು- Fail.

Fail ಆಗಿದ್ದಕ್ಕೆ,

ದೇವಸ್ಥಾನಕ್ಕೆ ಹೋಗಿ ಬಂದ ಮೇಲೆ ತೇರ್ಗಡೆ.

 

ಕ್ರಿಕೆಟ್ ಆಟದ ಕಡೆಗೆ ಗಮನ ಕಡಿಮೆ.

B.sc, B.Ed, ಡಿಗ್ರಿಗಳು ಒಂದೇ ಸಲ ಪಾಸು ತೇರ್ಗಡೆ ನಪಾಸು ಇಲ್ಲ.

 

ಆಗ ಭಕ್ತಿ ಇಮ್ಮಡಿ ಆಗಿ

ಪ್ರತಿ ವರ್ಷಕೊಮ್ಮೆ ಯಡೆಯೂರಿಗೆ ಹೋಗಿ

ಶ್ರೀ ಸಿದ್ದಲಿಂಗೇಶ್ವರರಿಗೆ ಪೂಜೆ ಮಾಡಿ ಬರುವ ಪರಿಪಾಠ.

ಭಯ ಭಕ್ತಿಯ ಪೂಜೆ,

ಶ್ರೀ ಸಿದ್ದಲಿಂಗೇಶ್ವರರು ಮನೆ ದೇವರು ಎಂಬುದು ಕೂಡ.

೪. ನಾಲ್ಕನೆಯದಾಗಿ,

೧೯೭೩ ರ ಡಿಸೆಂಬರ್ ನಿಂದ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳವರು.

ಇವರ ಮೂಲಕ ಶ್ರೀ ಬಸವಣ್ನನವರು ನನ್ನ ನೆಚ್ಚಿನ ಧರ್ಮಪಿತ ಗುರುಗಳಾದರು.

ನನಗೆ ಜ್ವರ ಬಂದ ಕಾರಣಕ್ಕೆ, ೧೯೭೩ -ಡಿಸೆಂಬರ್ನಲ್ಲಿ,

ವಿಜಯನಗರದ ನಮ್ಮ ತಂದೆಯವರ ಮನೆಯಲ್ಲಿದ್ದಾಗ,

ಔಷಧಿ ತರಲಿಕ್ಕೆಂದು ಡಾಕ್ಟರ್ ಹತ್ತಿರ ಹೋದಾಗ,

ಅಲ್ಲಿ ಬಸವೇಶ್ವರ ಶಾಲೆಯ ಮೈದಾನದಲ್ಲಿ ನಡೆಯುತ್ತಿದ್ದ,

ಶ್ರೀ ಲಿಂಗಾನಂದರ ಪ್ರವಚನದಿಂದ ಮೈಪುಳಕಿತ.

 

ನಂತರ ಸತತವಾಗಿ ೪೦-೫೦ ದಿನಗಳ

ಚಾಮರಾಜಪೇಟೆ ಮಸೀದಿ ಮೈದಾನದ ಹತ್ತಿರ ಪ್ರವಚನಗಳಿಗೆ ಹಾಜರಾಗಿ,

ನನ್ನ ಮನಸ್ಸಿನಲ್ಲಿ ದೇವರೆಂಬ ಕಲ್ಪನೆ ಅಚ್ಛೊತ್ತಿದ್ದವರು ಶ್ರೀಪೂಜ್ಯ ಶ್ರೀಲಿಂಗಾನಂದ ಸ್ವಾಮಿಗಳವರು.

 

ನನ್ನ ಪಾಲಿಗೆ ನನ್ನ ಭಕ್ತಿಯೆಂಬ ನಾಣ್ಯಕ್ಕೆ ಎರಡು ಮುಖ.

ಒಂದರ ಕಡೆ ಶ್ರೀ ಬಸವಣ್ಣನವರು,

ಮತ್ತೊಂದೆಡೆ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು.

 

ದೇವರ ರೂಪದ ವಿವರ

ಇವರಿಂದ ತಿಳಿದು ಬಂದು

ನನ್ನ ಆಧ್ಯಾತ್ಮಿಕ ಒಲವು ಜಾಸ್ತಿ ಆಗಿ ಬಂದು,

ಭಕ್ತಿಯ ಹುಚ್ಚು ಜಾಸ್ತಿ ಆಗಿ,

ಪೂಜೆ ಏಕಾಗ್ರತೆಗೆ ಕಾರಣವಾಯಿತು.

 

ಭಯದ ಪೂಜೆ ಕಡಿಮೆ ಆಗುತ್ತ ಬಂತು.

ಮಾನಸಿಕ ಪೂಜೆ ಪ್ರಾರಂಭ ಆಯಿತು.

 

ಪ್ರವಚನಗಳನ್ನು ಕೇಳಿ,

ಸಾಕಷ್ಟು ಮನ ತುಂಬಿ,

ಪೂಜ್ಯ ಶ್ರೀ ಲಿಂಗಾನದರು ನನ್ನ ಪಾಲಿಗೆ ಆಧ್ಯಾತ್ಮಿಕ ಗುರು.

 

ಆನಂತರ ಅವರ ಶಿಷ್ಯೆ

ಪೂಜ್ಯ ಶ್ರೀಮಾತೆ ಮಹಾದೇವಿ

ಅವರುಗಳ ವಾಕ್ ಚಾತುರ್ಯ ನನ್ನನ್ನು ಬಹಳ ಹಿಡಿಸಿತು.

 

ಬುದ್ದಿ ಸ್ವಲ್ಪ ವಿಕಾಸವಾಗತೊಡಗಿತು.

ಮನದಲ್ಲಿ ಕೆಲವು ವಿಷಯಗಳಲ್ಲಿ,

ನನ್ನ ವಿಚಾರಗಳಿಗೂ ಅವರ ವಿಚಾರಗಳಿಗೂ ಭಿನ್ನಾಭಿಪ್ರಾಯಗಳಿದ್ದರೂ

ಈಗಲೂ ಇವರುಗಳೇ ಆಧ್ಯಾತ್ಮ ಗುರುಗಳು.

೫.ಐದನೆಯದಾಗಿ,

1990ರ ಸೆಪ್ಟೆಂಬರ್

ಮಾಹೆಯಿಂದ ಶ್ರೀ ಮಹದೇಶ್ವರ ಬೆಟ್ಟದ ಶ್ರೀಮಲೈ ಮಹದೇಶ್ವರರು.

SBM-Manager ಆಗಿ ಹೋದಾಗಿನಿಂದ,

1993 ರಿಂದ ನನ್ನ ಕವನ-ಲೇಖನ-ದೇವರ ನಾಮ ರಚನೆಗೆ ಸ್ಪೂರ್ತಿ ಶ್ರೀಮಹದೇಶ್ವರರು

1979 ರಲ್ಲಿ ಬಳ್ಳಾರಿಯಲ್ಲಿದ್ದಾಗ,

ಕಛೇರಿ ಕೆಲಸದಲ್ಲಿದ್ದಾಗ,

Field officer ಆಗಿದ್ದಾಗ,

Motor Cycle Accident ಆದಾಗಿನಿಂದ,

ಮೆದುಳಿಗೆ ಪೆಟ್ಟಾಗಿ,

ಆದಾಗಿನಿಂದ ಇಲ್ಲಿಯವರೆವಿಗೆ ಅರೆನಿದ್ರೆಯಿಂದ ಬಳಲುತ್ತಿದ್ದೇನೆ.

 

ಆದಾಗ್ಯೂ ಸಹ ಅದರ ಕಡೆ ಗಮನ ಕೊಡದೆ,

1993 ರಿಂದ ಕವನ -ಲೇಖನ-ದೇವರ ನಾಮಕ್ಕೆ ಸ್ಪೂರ್ತಿ ಶ್ರೀ ಮಹದೇಶ್ವರರು.

 

ಸಂಸಾರ ಬೆಂಗಳೂರಿನಲ್ಲಿದ್ದರೂ,

ನಾನೊಬ್ಬನೇ ಶ್ರೀ ಮಹದೇಶ್ವರ ಬೆಟ್ಟದಲ್ಲಿದ್ದರೂ,

ನನ್ನ ಮನಸ್ಸಿನಲ್ಲಿ Home Sick 1990 Sept 1993 July ತನಕ ಇರಲಿಲ್ಲ.

 

ಬೆಂಗಳೂರಿನಲ್ಲಿದ್ದಾಗ ಶ್ರೀ ಬೆಟ್ಟವನ್ನು ಮರೆತುಬಿಡುತ್ತಿದ್ದೆ.

ಬೆಟ್ಟದಲ್ಲಿದ್ದಾಗ ಬೆಂಗಳೂರನ್ನು ಮರೆತುಬಿಡುತ್ತಿದ್ದೆ.

ಶ್ರೀ ಬೆಟ್ಟದ ಪ್ರಶಾಂತ ವಾತಾವರಣ,

ದೈವಾಂಶ ಸೇರಿದ ಜಾಗ,

ಶ್ರೀ ಮಹದೇಶ್ವರರ ಕೃಪೆ ಎಂಥೆಂತಹ ಭಕ್ತರನ್ನು ಆಕರ್ಷಿಸಿದೆ.

 

ಪ್ರತಿಯೋಬ್ಬ ಭಕ್ತರಿಗೆ ಆಗಿರುವ ಪವಾಡಗಳು

ನೂರಾರು-ಸಾವಿರಾರು ಲಕ್ಷಾಂತರ ಭಕ್ತರು.

ಅವರ ಅನುಭವಗಳು,

ಲಾಭಗಳು,

ಮಾನಸಿಕನೆಮ್ಮದಿ,

ಆರ್ಥಿಕ ನಿವಾರಣೆಗಳು,

ಹರಕೆಗಳು ನಡೆಸಿಕೊಟ್ಟಿರುವುದು,

ವಿವಾಹಗಳು ಆರೋಗ್ಯ,

ಸುಧಾರಣೆ, [ಅನಾರೋಗ್ಯ-ನಿವಾರಣೆ],

ವಿದ್ಯಾಭ್ಯಾಸದಲ್ಲಿ ಪ್ರಗತಿ,

ಉದ್ಯೋಗ ನಿವಾರಣೆ,

ಇತ್ಯಾದಿ ಇತ್ಯಾದಿ ಎಷ್ಟು?

 

ಈಗ ಪ್ರತಿ ನಿತ್ಯದ ಪೂಜೆಯ ಸಮಯದಲ್ಲಿ ಇವರುಗಳ ಸ್ಮರಣೆಯಿಲ್ಲದೆ ಪೂಜೆ ಇಲ್ಲ.

ಕೋರಿಕೆ

02.01.2004 - 6.10. pm.

ಆಗಾಗ್ಗೆ ಆಟ ಅರಿಷಡ್ವರ್ಗಗಳ ಹತೋಟಿಗೆ

ನನ್ನನಾ ತಿಳಿಯಲಿಕೆ ಕಾರಣ

ವಚನಗಳ ಸಾರಾಂಶ,

ದಾಸರ ಪದಗಳು,

ಭಗವದ್ಗೀತೆಯ ಸಾರಂಶ.

 

ಕೊನೆಗೆ ಗೊತ್ತಾಯಿತು

ವೈವಿದ್ಯತೆಯಲ್ಲಿ ಏಕತೆ,

ಇದರಲ್ಲಿ ಅಡಗಿದೆ ಮರ್ಮ

ಜೀವನದ ಗುಟ್ಟುಸಾಕಷ್ಟು.

ಬರೆದೆ-ಕವನಗಳ

ಬರೆಯುತ್ತಿದ್ದೇನೆ 

ಲೇಖಗನಗಳ-ಕವನಗಳ

ದಿನಾಂಕ-ಸಮಯ-ವಾರ

ತೋರಿಸಿ ಬರೆಯುವುದು

ನನ್ನ ಹವ್ಯಾಸ

 

ನಿಂತು ಹೋಗಿತ್ತು

ಸ್ಪೂರ್ತಿ ಮಧ್ಯದಲ್ಲಿ

ಹಲವು ವರ್ಷಗಳು

ಇದಕೆ ಕಾರಣ ಕೊಡಲಿಲ್ಲ,

ಸ್ಪೂರ್ತಿ ಆದೇವ.

 

೨೭.೧೧.೨೦೦೧ ರಲ್ಲಿ ಆಯಿತು

ಪುನಃ ಅಪಘಾತ.

೧೦.೪.೨೦೦೩ ರಲ್ಲಿ

ಹೊಟ್ಟೆ ಖಾಯಿಲೆಗೆ ಚಿಕಿತ್ಸೆ ಆಯಿತು.

 

ಜೀವವೇ ಬೇಡ ಎಂದೆನಿಸಿತು.

ಜೀವನಕ್ಕೆ ಜಿಗುಪ್ಸೆ ತಂದಿತು.

ಆದರೂ ಬಿಡಲಿಲ್ಲ.

 

ಆ ದೇವನ ನೆನೆವುದ

ಪ.ರಾ.ಶ್ರೀ.ಯವರ ಮೂಲಕ ಪುನಃ ಕೊಟ್ಟ ಸ್ಪೂರ್ತಿ

ಆ ದೇವ ಆ ಬಸವನ ಆರಾಧ್ಯ ದೈವ.

 

ಈಗ ಬರೆಯುತ್ತಿದ್ದೇನೆ ಕವನಗಳ

ಲೇಖನಗಳ ಮುಂದೆ ಬರೆಯಬಹುದೇನೋ ನೋಡಬೇಕು.

 

ಇದಕೆಲ್ಲ ಕಾರಣ ಆ ದೇವನ ಸ್ಪೂರ್ತಿ

ಎಂದು ನಿಲ್ಲಿಸುವಣೋ ನಾ ಕಾಣೆ.

 

ಆ ದೇವನೂ ನೆಲೆಸಿಹನು

ನನ್ನ ಹೃದಯ ಮಂದಿರದಲ್ಲಿ

ನಾ ಪೂರ್ತಿ ಶರಣಾಗಿಹೆ.

 

ಆತನ ಪಾದಕ್ಕೆ ಕೇಳಿಕೊಳ್ಳುತ್ತಿರುವೆ ಪ್ರತಿ ನಿತ್ಯ ಜೀವಕ್ಕೆ ಮುಕ್ತಿ.

bottom of page