top of page

ರಾಜಕೀಯ

​ತಮ್ಮ ವಚನಗಳ ಮೂಲಕ, ದೇವರು ಆಡಳಿತವನ್ನು ಹಾವಳಿ ಮಾಡುವ ಭ್ರಷ್ಟಾಚಾರ, ಅಪ್ರಾಮಾಣಿಕತೆ ಮತ್ತು ಅಧಿಕಾರದ ಹೋರಾಟಗಳನ್ನು ಟೀಕಿಸುತ್ತಾರೆ. ಈ ಸಮಸ್ಯೆಗಳು ಸಮಾಜದ ಮೇಲೆ ಬೀರುವ ಆಳವಾದ ಪ್ರಭಾವದ ಮೇಲೆ ಬೆಳಕು ಚೆಲ್ಲುತ್ತಾರೆ. ಅವರ ಕೆಲಸವು ಆಧ್ಯಾತ್ಮಿಕ ಒಳನೋಟಗಳು ಮತ್ತು ವೈಯಕ್ತಿಕ ಪ್ರತಿಬಿಂಬಗಳೊಂದಿಗೆ ತುಂಬಿದೆ. ಸಮಗ್ರತೆ, ನ್ಯಾಯ ಮತ್ತು ಏಕತೆಯನ್ನು ಉಲ್ಲೇಖಿಸುತ್ತದೆ. ದೇವರ ಕಾವ್ಯಯಾತ್ರೆಯು ಓದುಗರನ್ನು ನಮ್ಮ ಕಾಲದ ರಾಜಕೀಯ ವಾಸ್ತವಗಳೊಂದಿಗೆ ಚಿಂತನಶೀಲವಾಗಿ ತೊಡಗಿಸಿಕೊಳ್ಳಲು ಆಹ್ವಾನಿಸುತ್ತದೆ.

Politics

Channa Basava Devaru's vachanas delves deeply into the complexities of politics, offering a critical lens on the moral and ethical challenges within the political landscape. Through his verses, Devaru critiques the corruption, dishonesty, and power struggles that plague governance, shedding light on the profound impact these issues have on society. Devaru's poetic journey invites readers to engage thoughtfully with the political realities of our time.

Crowd at a Demonstration
ಕ್ಯಾನ್ಸರ್
08.11.1992 2.55 P.M.

ಮುಖ್ಯ ಚುನಾವಣಾಧಿಕಾರಿ ಎಂದರು, ಬಹುಮಂದಿ ರಾಜಕಾರಣಿಗಳೆಲ್ಲ ಕ್ಯಾನ್ಸರ್ ಇದ್ದ ಹಾಗೆ; ಕೇವಲ ಕೆಲವು ರಾಜಕಾರಣಿಗಳನ್ನು ಬಿಟ್ಟು, ಬಹಳ ರಾಜಕಾರಣಿಗಳಿಗೆ ಕೋಪ ಬಂದು ಚುನಾವಣಾಧಿಕಾರಗಳನ್ನು ತೆಗಳಿದರು. ಕುಂಬಳಕಾಯಿ ಕಳ್ಳ ಎಂದರೆ ಮುಟ್ಟಿ ನೋಡಿಕೊಳ್ಳುವುದಾದರೂ ಏತಕ್ಕೆ? ಸತ್ಯ ಹೇಳಿದ್ದಕ್ಕೆ ಅವಹೇಳನಕಾರಿ ಪದಗಳು ರಾಜಕಾರಣಿಗಳಿಂದ ಮುಖ್ಯ ಚುನಾವಣಾಧಿಕಾರಿಗೆ, AIDS ಇದ್ದ ಹಾಗೆ ಎಂದು ಹೇಳಿದರೂ ತಪ್ಪೇನಿಲ್ಲ, ರಾಜಕಾರಣಿಗಳಿಗೆ ಕಾರಣ ಸತ್ಯಕ್ಕೆ ಸಾವಿಲ್ಲ-ಸುಳ್ಳಿಗೆ ಮುಕ್ತಿಯಿಲ್ಲ. ಆದರೂ ತೋರಿಸುತ್ತದೆ.

ಅಧಿಕಾರ

08.11.1992 2.55 P.M.

ಶಿಸ್ತಿನ ಸೋಗಿನಲ್ಲಿ ಮರೆಸಿತು ’ಪ್ರೇಮ-ಪ್ರೀತಿ’
ವ್ಯಕ್ತ ಪಡಿಸುವುದು ಎಲ್ಲರಿಗೂ ತನ್ನ ’ಅಹಂ’
ತೆರೆಯ ಮರೆಯಲ್ಲಿ ಮೂಡಿಸಿತು ’ವ್ಯಾಪಾರ’
ದರ್ಪದ ಇನ್ನೊಂದು ಮುಖವೇ ’ಅಧಿಕಾರ’
ಅಡಗಿಸಿತ್ತು ದರ್ಪವು ’ಅಂತರಂಗದ ಪ್ರತಿಭೆ’
ಹೊರಬಂದಿತು ನಾಲಗೆ ’ಲಂಚಕ್ಕೆ’
ದೂರ ಇರಿಸಿತು ಬಂಧು ಬಳಗ ’ಸ್ನೇಹಿತರ’
ಮುಳಗಿಸಿತು ಜೀವನವ ’ಅಧಿಕಾರದ ಗುಂ’ನಲ್ಲಿ
ಜೀವನದ ಕೊನೆಯಲ್ಲಿ ಸಿಕ್ಕಿತ್ತು ’ಕಹಿ’
ಉಪಯೋಗಿಸಲಿಲ್ಲ ಇದ್ದಾಗ ’ಸಿಹಿ’
ಏಕೆ ಬೇಕೋ? ಯಾರಿಗೆ ಬೇಕೋ ’ಇಂತಹ ಅಧಿಕಾರ’
ಕೇವಲ ಕೆಲವರು ಮಾತ್ರ ಉಪಯೋಗಿಸುವರು ನೈಜ ಅಧಿಕಾರ.

ಸಾಧನೆಯ-ಸಮಾವೇಶ 

08.11.1992

ನಿಷ್ಟಾವಂತರ ಪಕ್ಷಕ್ಕೆ ಈ ಸಮಾವೇಶ,

ಒಳಗೆ ನಡೆದಿತ್ತು ಬಹಳ ಮಾರುವೇಶ,

ಆಗದ ಶಾಸಕರಿಗೆ ಬಂದಿತ್ತು ಆವೇಶ,

ಕರ್ನಾಟಕದ ಜನತೆಗೆ ಇದು ವಿಷ,

ಸಮಯವ ಕಾದಿಹರು ಕಟ್ಟಲು ಪಾಶ,

ತಿದ್ದಲೂ ಆಗಲಿಲ್ಲ ಆ ಜಗದೀಶ,

ಬರಿದಾಯಿತು ಪೂರ್ತಿ ಖಜಾನೆಯ ಕೋಶ.

ಸರ್ಕಾರದ ಸಾಧನೆ 

08.11.1992

ಒಳಗೆ-ಹೊರಗೆ
ನಿಷ್ಟಾವಂತರ ಪಕ್ಷದಪಾಲಿಗೆ ಇದು ಸ್ವರ್ಗ,
ಅವರ ಬಂಧು ಬಳಗ ಸ್ನೇಹಿತರ ಪಾಲಿಗೆ ಇದು ಮಾರ್ಗ,
ಸರ್ಕಾರದ ಖರ್ಚಿನಲ್ಲಿ ನಡೆಸಿದರು ಮೋಜು,
ಕೆಲವರು ಜಮಾಯಿಸಿದರು ಹಣವ,
ಜನತೆಗೆ ತೋರಿಸಿದರು ಪೇಪರ್ ಪ್ರದರ್ಶನ,
ಒಳಗೆ ಆಗಿತ್ತು ಶೂನ್ಯ ಸಾಧನೆ,
ಹೊರಗೆ ತೋರಿಸಿದರು ಸಮಾವೇಶದ ಸಾಧನೆ,
ನಿಜವಾಗಿ ನಡೆದಿದ್ದು ತಿಂದು ತೇಗಿದ ಸಾಧನೆ,
ವಿಚಾರವಂತರಿಗೆ ಇದು ಒಂದು ರೀತಿ ವೇದನೆ,
ಗೊತ್ತಿದ್ದು ಸುಮ್ಮನೆ ಕುಳಿತಿತ್ತು ಕೇಂದ್ರ ಸರಕಾರ,
ಆರ್ಭಟಿಸಿ, ಸುಸ್ತಾಗಿ ಕುಳಿತರು ಆಗದ ಶಾಸಕರು,
ಖುಷಿ ಅನುಭವಿಸಲಿಕ್ಕಾಗಿ ಬಂದಿದೆ ಈಗಿನ ಸರಕಾರ,
ಜನತೆಯ ಹಣವ ತನ್ನ ಅನುಕೂಲಕ್ಕಾಗಿ,
ಅನುಭವಿಸುವುದೇ ಈ ಸರ್ಕಾರದ ದೊಡ್ಡ ಸಾಧನೆ,
ಜನತೆಗೆ ಆಗಿದೆ PILES ರೀತಿ ಬೇನೆ.


ಹಣದುಬ್ಬರ

08.11.1992

ಎಲ್ಲರಿಗೂ ಭಾರ ಮೂಡಿತು ಸಂಸಾರ,
ಬಡ-ಮಧ್ಯಮವರ್ಗದ ಜನರಿಗೆ ಆಯಿತು ಭಾರ,
ದರ ಕೇಳಿದರೆ ಸಾಕು ಆಯಿತು ಮನಸು ಖಾರ,
ಹಣವಿರುವವರಿಗೆ ಇದು ಬಲು ಹಗುರ,
ಇಲ್ಲದವರಿಗೆ ಇರುವುದು ಹರ-ಹರ,
ಕೆಲವರು ಸಾಲವಾಗಿ ಮಾಡುವರು ಆಡಂಬರ,
ಮನಸ್ಸಿನಲ್ಲಿ ಇಲ್ಲದಿದ್ದರೂ ಮುಖದಲ್ಲಿ ಸುಂದರ,
ಸರ್ಕಾರಕ್ಕೆ ಗೊತ್ತಿಲ್ಲವೇ ಇದರ ವ್ಯವಹಾರ ?

ಬಡ್ತಿ

08.11.1992

ಇದು ಸಂಸ್ಥೆಗಳ ಸರ್ಕಾರಗಳ ಕುಯುಕ್ತಿ, ಕೆಲಸ ತೆಗೆದುಕೊಳ್ಳಲು
ಉಪಯೋಗಿಸುವ ಸಾಧನ.
ರೀತಿ ನೀತಿಗಳಿಲ್ಲ, ಇದ್ದರೂ ಪರಿಪಾಲಿಸುವುದಿಲ್ಲ,
ವಿವಿಧ ರೀತಿ ನೀತಿಗಳು, ವಿವಿಧ ಸಂಸ್ಥೆ /ಇಲಾಖೆಗಳಲ್ಲಿ
'Divide & Rule' ರೀತಿಯ ಬ್ರಿಟಿಷ್ ಕುಯುಕ್ತಿ,
ನೋಡಲಿಕೆ ಅಂದವಾಗಿ ಕಂಡರೂ, ಗುಣದಲ್ಲಿ ಅಸಹ್ಯ,
ಆಡಳಿತದ ಅಭದ್ರತೆಯ ಕುರುಹಿನ ಸಂಕೇತ ಮೆಚ್ಚುಗೆಯ ಗುಣಕ್ಕಿಂತ,
ಬೆಳೆಸುವುದು ಅಶಾಂತಿಯ ವಾತಾವರಣ
ಅಡ್ಡ ಬರುವುದು ಕಾರ್ಯ ದಕ್ಷತೆಯಲ್ಲಿ
ಒಡಕು ಹುಟ್ಟಿಸುವುದು ಸಹ ಉದೋಗಿಗಳಲಿ
ನಿಧಾನವಾಗಿಹುದು ಕೆಲಸದ ವೇಗ
ಕುಂಠಿತವಾಗುವುದು ಗುಣಮಟ್ಟದಲ್ಲಿ
ಹಿಂದೆ ಹೋಗಿರುವುದು-ಗುರಿಮುಟ್ಟುವುದರಲ್ಲಿ
ಹಾಳಾಗಿ ಹೋಗುವುದು ಸಂಸ್ಥೆ-ಸರ್ಕಾರ ಕೊನೆಗೆ,
ತಾನೇ ತಾನಾಗಿ ಸಂಸ್ಥೆ-ಸರ್ಕಾರ ತೋಡಿಸಿದ ಗೋರಿ.


ಶಾಸಕ 

18.11.1993

 

ಪ್ರಾರಂಭದಲ್ಲಿ ಆಗಿದ್ದ ತಿರುಕ,
ಬಹಳ ಮತದಾರರಿಗೆ ಗೊತ್ತು ಇವನು ಬಿಕ್ಷುಕ,
ನಂತರ ಸಹವಾಸ ಮಾಡಿಸಿತು ಇವನ ಕುಡುಕ,
ಹಣ-ಅಧಿಕಾರ ದಾಹಕ್ಕೆ ಆದ ತಲೆ ಹಿಡುಕ,
ದುರಾಸೆ ಮಾಡಿಸಿತು ಇವನ ಆಸೆಬುರುಕ,
ಜೀವನದಲ್ಲಿ ಎಂದೂ ಆಗಲಿಲ್ಲ ಚಿಂತಕ,
ರಾಜಕೀಯ ಹಾಡುಗಳಿಂದ ಆದ ಗಾಯಕ,
ಮತದಾರರ ಒಲಿಸಲು ಆದ ಬಾಯಿ ಬಡುಕ,
ಇವನಿಗೆ ಗೊತ್ತಾಗುವುದಿಲ್ಲ ಏನು ಎಂದು ಕಾಯಕ.

ಅಯೋಧ್ಯೆ

28.01.1993

ನಿದ್ರೆ ಮಾಡುತ್ತಿರುವ ’ಹಿಂದು’ಗಳನ್ನು ಬಡಿದೆಬ್ಬಿಸಲು,
ಕುತಂತ್ರ ನಡೆಸುತ್ತಿರುವ ಕೇಂದ್ರ ಸರ್ಕಾರವನ್ನು ಕಿತ್ತೊಗೆಯಲು, ದುರುಪಯೋಗ
ಪಡೆದುಕೊಳ್ಳುತ್ತಿರುವ ಇತರರನ್ನು ಬಡಿಯಲು, ಕೆಲವರು ಉಪಯೋಗಿಸಿದ ವಿಶೇಷ ಅಸ್ತ್ರ-ಬಾಂಬ್.
 

ಭಾರತ

28.01.1993

 

ಪರಿಸರಗಳನ್ನು ಸೂರೆಗೊಂಡು, ಹೀರಿ ಹೆಪ್ಪೆಕಾಯಿ ಮಾಡಿ, ನಿಸರ್ಗವ ಕೊರಗಿಸಿ,
ಅನಾಥವನ್ನಾಗಿ ಮಾಡಿ, ಯಾರಿಗೂ ಬೇಡದ ಭಾರತೀಯರಿಂದಲೇ ಅನಾಥವಾದ ದೇಶ.

ಅಭಿವೃದ್ಧಿಯ ಕುಂಠಿತಕ್ಕೆ ಕಾರಣ

28.10.03 - 5.25.a.m.

ಜನತೆಯ, ದೇಶದ, ಸಮಾಜದ, ಎಲ್ಲ ವರ್ಗಗಳ ಅಭಿವೃದ್ಧಿಯ ಕುಂಠಿತಕ್ಕೆ ಕಾರಣಗಳು ಐದು (5) ಡಾ|| ಮರುಳಸಿದ್ದಯ್ಯನವರ ಪ್ರಕಾರ ಅಸಡ್ಡೆ- ಪರಾವಲಂಬತೆ, ನೈತಿಕ ಅದಃಪತನ-ಸ್ವಾರ್ಥಪರತೆ- ಹಕ್ಕು ಮತ್ತು ಹೊಣೆಗಾರಿಕೆಯಲ್ಲಿ ಅಸಮತೋಲನೆ [Apathy-Alienation-Demoralination-Selfishness-Imbalance of rights and responsibilities].

ನಮ್ಮಲ್ಲಿರುವ ಈ ಕೆಟ್ಟ ಅಭ್ಯಾಸ, ಗುಣಗಳನ್ನು ಸರಿಪಡಿಸಿಕೊಂಡರೆ ನೋಡಬಹುದು ಬೆಳವಣಿಗೆ ಮತ್ತು ಅಭಿವೃದ್ಧಿ. ನಮಗೆ ನಾವೇ ಶತ್ರು. ಅಂತರ್ಮುಖಿಯಾಗಿ ವಿಚಾರಿಸಿಕೊಂಡರೆ ತಿಳಿಯುವುದು ನಮ್ಮ ನಮ್ಮ ಕೆಟ್ಟ ಹವ್ಯಾಸಗಳು-ಗುಣಗಳು. ಇದು ಶತಃ ಸಿದ್ದ. ಅಭಿವೃಧ್ಧಿ ಹೊಂದಿದ ದೇಶಗಳಲ್ಲಿ ಈ ಹವ್ಯಾಸ-ಗುಣಗಳು ಇದ್ದರೂ ಅವುಗಳ ಸಂಖ್ಯೆ ಕಡಿಮೆ. ಈ ಹವ್ಯಾಸಗಳು ನಮ್ಮನ್ನು ತಿಂದುವು. ಇಲ್ಲದಿದ್ದಲ್ಲಿ ನೋಡಬಹುದಾಗಿತ್ತು. ಅಭಿವೃದ್ಧಿಯ ಗುರುತುಗಳ ನಾನಾ ರೀತಿಗಳಲ್ಲಿ, ಮಾಡಬಾರದ್ದನ್ನು ಮಾಡಿದರೆ, ಆಗಬಾರದ್ದು ಆಗುತ್ತದೆ, ಬರಬಾರದ್ದು ಬರುತ್ತದೆ, ಹೋಗಬಾರದ್ದು ಹೋಗುತ್ತದೆ, ಅನ್ನುವ ಗಾದೆ ನಿಜ ಆಗುತ್ತದೆ-ಅನಿಸುತ್ತಿದೆ. ನೀವೇನಂತೀರಿ???

ಪರಿಸ್ಠಿತಿ 

05.11.2003 -4.54 a.m

ಕಟ್ಟುವ ಹಾಗಿಲ್ಲ, ಮಂದಿರ, ಕಾರಣ ಜಾತ್ಯಾತೀತ ಎನ್ನಬೇಕು. ತೋರಿಸಬೇಕು -ಹೇಳಬೇಕು ಅನೇಕ ಸಲ ಅನ್ವಯಿಸುವುದಿಲ್ಲ -ಕಾರಣ ಅಲ್ಪ ಸಂಖ್ಯಾತರು. ಸವಲತ್ತುಗಳು ಅನೇಕ-ಕಾರಣ ಅಲ್ಪ ಸಂಖ್ಯಾತರು, ರಿಯಾಯಿತುಗಳು ಅನೇಕ -ಕಾರಣ ಶೋಷಿತವರ್ಗದವರು. ಆದರೂ ಮುಂದುವರೆಯಲಿಲ್ಲ ಅಲ್ಪ ಸಂಖ್ಯಾತರು -ಶೋಷಿತ ವರ್ಗದವರು. ಎಲ್ಲ ಕ್ಷೇತ್ರಗಳಲ್ಲಿ - ಕಾರಣ ಆ ವರ್ಗದ ಮುಖಂಡರುಗಳು. ವರ್ಗದ ಹೆಸರಿನಲಿ ತಾವು ತಿಂದರು ತಮ್ಮ ಕೆಲವು ವರ್ಗದ ಹಿಂಬಾಲಕರು-ಚೇಲರು. ಗೋಮುಖ ವ್ಯಾಘ್ರನಂತಿರುವ ಇವರು, ಮೀರಸಾಧಕನಂತಿಹವರು. ತಮ್ಮ ವರ್ಗದವರು ಮುನ್ನೆಡೆಯಲು ಬಿಡಲಿಲ್ಲ. ತಮ್ಮ ವರ್ಗಕ್ಕೆ ಇವರೇ ಶತ್ರುಗಳು. ರಿಯಾಯಿತಿ ಸವಲತ್ತುಗಳು ಕೆಲವರ ಪಾಲದವು. ಇವರ ಬಹುಪಾಲು ವರ್ಗದವರು ಇದ್ದಲ್ಲೇ ಇದ್ದಾರೆ. ಸಮಾನ ನಾಗರಿಕ ಸಂಹಿತೆ ಬೇಕಿಲ್ಲ. ಕಾರಣ ಅಲ್ಪ ಸಂಖ್ಯಾತಕರುಗಳು. ಮಿತ ಸಂತಾನ ಬೇಕಿಲ್ಲ -ಕಾರಣ ಅವರ ಧರ್ಮವು ಒಪ್ಪುವಿದಿಲ್ಲ. ಬಿಡುವುದಿಲ್ಲ, ಇವರ ಕೆಲವು ಮುಖಂಡರುಗಳು ತಿಳಿಯಲಿಕೆ -ಮುಂದುವರಿಯಲಿಕೆ, ಆದರೂ, ಯೋಜನೆಗಳು ಮುಂದುವರೆಯಬೇಕು ಗೊತ್ತು -ಗುರಿ ಇಲ್ಲದ, ಮಿತ ಸಂತಾನ ಇಲ್ಲದ ಮೌಢ್ಯನಂಬಿಕೆಗಳ ಬೇರು ಬಿಟ್ಟಿರುವ ಜಾಗದಲಿ. ಆದರೂ ಬೇಕು- ಮುಂದುವರೆಯಬೇಕು ಸರ್ಕಾರಿ ಸವಲತ್ತುಗಳು -ರಿಯಾಯಿತಿಗಳು ಇದಕ್ಕೆ ಬೇಕಾಗಿಲ್ಲ -ಅರ್ಹತೆಗಳು. ವರ್ಗದ ಪಟ್ಟಿ -ಹೆಸರು ಇದ್ದರೆ ಸಾಕು. ಆದರೂ ಮುಂದುವರಿದರು ಬಹು ಸಂಖ್ಯಾತರು -ಇವರ ವರ್ಗದವರು ತಮ್ಮ ನೈಜ ಸಾಧನೆ-ಛಲ, ನಂಬಿಕೆಯಿಂದ, ಮೀರಸಾಧಕರನ್ನು ನಂಬಲಿಲ್ಲ. ಮೂಲೆಗಿಟ್ಟವರನ್ನು. ಬಸವಣ್ನನಂತಹವರು- ಅಂಬೇಡ್ಕರ್ರಂತಹವರ ಜೀವನ -ವಿಧಾನ-ಆಚಾರ-ವಿಚಾರಗಳೂ ದೂರವಾದವು. ಬರೀ ಉಳಿದವು ನಾಟಕೀಯ ವರ್ಷಗಳ ಆಚರಣೆಗಳು. ಒಲವಿಲ್ಲದೆ ಪೂಜೆ -ಚಿತ್ರದ ರೂಪು ಅಷ್ಟೆ. ಆಡಂಬರದ ಹೊಗಳು ಭಟ್ಟರ ಆಚರಣೆ, ನೇಹವಿಲ್ಲದ ಮಾಟ-ಚಿತ್ರದ ಕಬ್ಬು ಅಷ್ಟೆ. ಅಪ್ಪಿದರೆ ಸುಖವಿಲ್ಲ. ಮೆಲಿದರೆ ರುಚಿಯಿಲ್ಲ, ಸರಿಯಾದ ನೇತಾರರಿಲ್ಲದೆ, ಮಾರ್ಗವಿಲ್ಲದೆ, ಮೀರಸಾಧಕರಂತಹ ಮುಖಂಡರಲ್ಲಿ ಸಿಕ್ಕಿ, ಆಮೆಯ ವೇಗದಲಿ ನಡೆಯುತಿದೆ. ಇವರ ವರ್ಗಗಳ ಬೆಳವಣಿಗೆ. ಬೇಲಿಯೇ ಎದ್ದು ಹೊಲವ ಮೇಯ್ದೊಡೆ, ಇನ್ನಾರಿಗೆ ದೂರುವಿರಿ??? ನೀವು ಮೀರ ಸಾಧಕರೆ.​


ಸುಲಿಗೆಗಳು -ಪರಿಹಾರ

11.01.2004 - 2.30.am

ಸುಲಿಗೆಗಳು ನಾನ ರೀತಿ ಸಮಾಜದಲ್ಲಿ, ಕೆಲವು ದೇವಸ್ಥಾನಗಳಲ್ಲಿ ವ್ರತ-ನಿಯಮಗಳಿಗೆಂದು, ಪೂಜೆ-ಪುನಸ್ಕಾರಗಳಿಗೆಂದು ವಸೂಲಿ ಭಕ್ತರಿಂದ. ಟ್ರಸ್ಟ್ ಮಾಡಿ, ಭಕ್ತರಿಂದ ವಸೂಲಿ, ಅಭಿವೃದ್ಧಿಗಳಿಗೆಂದು ಮನ ಒಂದು ಕಡೆ, ಮಂತ್ರ ಒಂದು ಕಡೆ, ಪೂಜಾರಿಗಳ ಮೂಲಕ ಭಕ್ತರಿಗೆ ದೇವನೊಲಿವನೆಂತು? ಮಾನಸಿಕ ಪೂಜೆ, ಪ್ರಾರ್ಥನೆ ಇದಕ್ಕೆ ಉತ್ತಮ ಪರಿಹಾರ. ದಾನ, ಧರ್ಮಗಳಿಗೆಂದು ವಸೂಲಿ ಕೆಲವು ಸಂಸ್ಥೆಗಳಿಂದ ಖೋಟಾ ರಶೀತಿ ನೀಡಿ ದಾನಿಗಳಿಂದ ವಸೂಲಿ. ಬಡವೃದ್ದರಿಗೆ, ಅಂಗವಿಕಲರಿಗೆಂದು ಸಹಾಯ ಎಂದು ವಸೂಲಿ. ಅಶಕ್ತರ ವೈದ್ಯಕೀಯ ಖರ್ಚಿಗಳಿಗೆಂದು ವಸೂಲಿ. ಆದರೆ ಎಲ್ಲ ವ್ಯಕ್ತಿ, ಸಂಸ್ಠೆಗಳಿಂದ ಅಲ್ಲ. ನೈಜ ಸಂಸ್ಥೆ, ವ್ಯಕ್ತಿಗಳು ಇದಕ್ಕೆ ಹೊರತು ನಾಟಕೀಯ ಆಟ ಆಡಿ, ವಸೂಲಿ, ಸುಲಿಗೆ ವ್ಯವಸ್ಠೆ. ಇದಕ್ಕೆ ಪರಿಹಾರ, ನೇರ ಪರೀಕ್ಷೆ ಮಾಡಿ ಧನ ಸಹಾಯ. ಅಪಾತ್ರಕ್ಕೆ ಮಾಡಿದ ಸಹಾಯ ದಾನ ಎನಿಸುವುದಿಲ್ಲ. ವಿಚಾರಿಸಿ, ಯೋಚಿಸಿ, ಆಲೋಚಿಸಿಕೊಡುವುದು ಉತ್ತಮ. ನೇರ ವ್ಯಕ್ತಿಗೆ ಕೊಟ್ಟರೆ ಮನಕ್ಕೆ ಹಿತ, ನೆಮ್ಮದಿ. ಅವರ ಹಾರೈಕೆ, ಆಶೀರ್ವಾದದ ಫಲಗಳು ನಮಗೆ ಸಿಗಬಹುದು. ಹಳೇ ಬಟ್ಟೆ, ಉಡುಪುಗಳು, ಹೊದಿಕೆಗಳು, ರಗ್ಗುಗಳು ಬೆಚ್ಚನೆಯ ಉಡುಪುಗಳು, ಇತ್ಯಾದಿ, ಉಪಯೋಗಿಸದ ವಸ್ತುಗಳು, ಅಗತ್ಯವಸ್ತುಗಳು -ನೇರ ದಾನ ಉತ್ತಮ. ಒಬ್ಬ ಬಡ-ಬಗ್ಗರ ಮಗುವನ್ನು ಸಾಕಿ ಸಲುಹಿ, ವಿದ್ಯಾಭ್ಯಾಸಕೊಟ್ಟು, ಅವನು ತನ್ನ ಕಾಲ ಮೇಲೆ ತಾನು ನಿಲ್ಲುವಂತೆ ಮಾಡುವುದು ಅತ್ಯುತ್ತಮ. ನಮ್ಮ ದಾನ ಧರ್ಮ, ಸೊಂಬೇರಿಗಳಾಗಲು ಅವಕಾಶವಿರಬಾರದು. ಆಡಂಬರ, ಪ್ರಚಾರಕ್ಕೆ, ಹೋಗಬಾರದು.


ಶಾಸಕರ ಸವಲತ್ತು ಇವರ ನಿಯತ್ತು- ಶಿಸ್ತು [ವಿಡಂಬನೆ]  

22.10.2003 -3.30 p.m.

ನಮ್ಮಲ್ಲೂ ಇಲ್ಲ -ನಿಮ್ಮಲ್ಲೂ ಇಲ್ಲ, ಆದರೆ ಉಂಟು ಚುನಾಯಿತ ಸದಸ್ಯರಲ್ಲಿ MLA -MLC-MP ಆದವರಲ್ಲಿ ಉಂಟು ನಿಯತ್ತು, ತಮ್ಮ ಸಂಬಳ -ಸಾರಿಗೆ-ಸವಲತ್ತು ಹೆಚ್ಚಿಸುವುದರಲ್ಲಿ, ಎಲ್ಲೂ ವಿರೋಧಿಸದಿರುವುದೇ ಇವರ ಶಿಸ್ತು. ವಿರೋಧಿಸಿದವರಿಗೆ ಕಾದಿದೆ ಮುಂದೆ ವಿಪತ್ತು. ಸಿಗುವುದಿಲ್ಲ ಇವರಿಗೆ ಚುನಾವಣೆಯಲ್ಲಿ ಸೀಟು. ಜನತೆ ವಿರೋಧಿಸಿದರೆ ಅಂತಾರೆ ಅಶಿಸ್ತು. ಕಾನೂನು ಸಹ ಕೇಳಬೇಕಾಗಿಲ್ಲ ಇವರ ಸವಲತ್ತು. ಬರ-ಅತಿವೃಷ್ಟಿ- ಅನಾವೃಷ್ಟಿ ಇವೆಲ್ಲ ಇತ್ತು ಇವರಿಗೆ, ಇವರು ಚುನಾಯಿತರಾಗದೇ ಇದ್ದಾಗ. ಆಡಳಿತ ಪಕ್ಷ ವಿರೋಧಪಕ್ಷಗಳಿಗೆಲ್ಲ ಇಲ್ಲ ವಿರೋಧ ತಮ್ಮ ಸ್ವಾರ್ಥ ಹಿತರಕ್ಷಣೆ ಕಾಯುವುದೇ ಇವರ ಶಿಸ್ತು. ಮತದಾರರ ಮುಂದೆ ಇವರು ಹೋದರೆ ಶಿಸ್ತು. ಅದೇ ಮತದಾರ ಇವನ ಮುಂದೆ ಹೋಗಿ ಕೇಳಿದರೆ ಅಶಿಸ್ತು. ವಿರೋಧಿಸಿ, ಕೂಗಾಡಿ, ಕಿರುಚಾಟ ಮಾಡಿದ್ದೆಲ್ಲ ಅಶಿಸ್ತು. ನೈಜ ಜನತೆಯಲ್ಲಿಲ್ಲದಿರುವ ಅಶಿಸ್ತು. ಇವರ ಶಿಸ್ತು -ಸಂಪತ್ತು ದೇಹ- ಮನಸ್ಸು-ಬುದ್ದಿ ಒರಟಾಗಿರುವುದೇ ಇವರ ಶಿಸ್ತು. ಅಲ್ಪ ಸಂಖ್ಯಾತರುಗಳು ಮಾಡಿದ್ದೆಲ್ಲಾ ಶಿಸ್ತು. ಉಳಿದವರು ಮಾಡಿದ್ದೆಲ್ಲಾ ಅಶಿಸ್ತು-ಅನಿಯತ್ತು. ಇವರು ಅಭಿವೃಧ್ಧಿ ಹೆಸರುಗಳಲ್ಲಿ ನುಂಗಿದ್ದು ಶಿಸ್ತು. ಉಳಿದವರು ಅಲ್ಪ ಸ್ವಲ್ಪ ಮಾಡಿ ನುಂಗಿದ್ದು ಅಶಿಸ್ತು. ತಮ್ಮ ಸಂಸಾರ ಬಂಧು ಬಳಗ ಗಳಿಸಿದ್ದೆಲ್ಲಾ ನಿಯತ್ತು. ಇವರಿಗೆ ಆಗದವರು ಮಾಡಿ ಗಳಿಸಿದ್ದೆಲ್ಲಾ ಅನಿಯತ್ತು. ಜೀವನದಲ್ಲಿ ಕಲಿಯಲ್ಲಿಲ್ಲ. ತೋರಿಸಲಿಲ್ಲ. ನೈಜ ಕಸರತ್ತು ಆಡಂಬರದಲ್ಲಿ ತೋರಿಸಿದರು ಇವರ ಖೋಟಾ ಕಸರತ್ತು ಬಂದಿರುವ ಸವಲತ್ತುಗಳೇ ಇವರ ಶಿಸ್ತು-ನಿಯತ್ತು. ಆದೇವನೂ ಸಹ ಇವರನ್ನು ನೋಡಿ ಆದ ಸುಸ್ತು.

ಒಳ ಅರ್ಥ - ಹಸ್ತ

00.00.0000 - 0.00 p.m.

ನುಗ್ಗಬಿಡಬೇಡಿ, ನಿಲ್ಲಿ ಅಲ್ಲೇ.

ಕಾರಣ, ನುಂಗಬೇಕಾದದ್ದು,

ಗಳಿಸ ಬೇಕಾದದ್ದು, ಬೇಕಾದಷ್ಟಿದೆ.

ಚಿಹ್ನೆ ತೋರಿಸುತ್ತಾ ನಿಂತಿರುವ

ಚೇಲಾ - ಹಿಂಬಾಲಕರ - ರಾಜಕಾರಣಿಗಳ

ಭ್ರಷ್ಟರ ಚೀಲ ಇನ್ನೂ ತುಂಬಿಲ್ಲ.

ರಾಜಕಾರಣಿಗಳ ಏಕತೆ

00.00.0000 - 0.00 p.m.

ತೋರಿಸಿದರು ಜನತೆಗೆ,

ವ್ಯೆವಿದ್ಯತೆಯಲಿ ಏಕತೆ.

ತಮ್ಮ ಸಂಬಳ-ಸಾರಿಗೆ,

ಸವಲತ್ತುಗಳ ಏರಿಸಿಕೊಂಡು,

ಪ್ರತಿಭಟಿಸದೆ ಎನನ್ನೂ

ಒಕ್ಕೊರಿಲಿನಲಿ ತೋರಿಸಿತು ಏಕತೆ. 

ಪಕ್ಷದ ಟಿಕೇಟ್

00.00.0000 - 0.00 p.m.

ಕೋಟಿಗಟ್ಟಲೆ ದುಡ್ಡು,

ಪಕ್ಷಕ್ಕೆ ಕೊಡುವುದಾದರೆ,

ನಿನಗೂ ಸಿಗುವುದು ಟಿಕೇಟ್.

ಅರ್ಹತೆ ಇಲ್ಲದಿದ್ದರು ಪರವಾಗಿಲ್ಲ,

ಪಕ್ಷದಿಂದ ಪಕ್ಷಕ್ಕೆ ಹಾರಿದರೂ ಪರವಾಗಿಲ್ಲ,

ಮನುಷ್ಯತ್ವ ಇಲ್ಲದಿದ್ದರೂ ಪರವಾಗಿಲ್ಲ,

ಪಕ್ಷದ ಚಿಹ್ನೆಯೇ ನಮ್ಮ ಹೈಕಮಾಂಡ್.

ನಾನು

00.00.0000 - 0.00 p.m.

ಪಕ್ಷದ ಚಿಹ್ನೆಯಲ್ಲಿ ಸಿಕ್ಕಿದರೆ ಟಿಕೆಟ್,

ಗೆಲ್ಲುವುದು ಗ್ಯಾರಂಟಿ. ಬರುವುದು ಗ್ಯಾರಂಟಿ,

ಬಹಳ ಬಹಳ ಹೆಚ್ಚು ಹಣ.

ಕಾರಣ, ನಾನು ಭ್ರಷ್ಟ ರಾಜಕಾರಣಿ. 

ರಾಜಕಾರಣಿಯ ಸಾದನೆ

00.00.0000 - 0.00 p.m.

ಹೊಗಳು ಭಟ್ಟರನ್ನು ಸೇರಿಸಿಕೊಂಡು,

ಚೇಲಾಗಳು-ಹಿಂಬಾಲಿಕರನ್ನು ಮುಂದೆಕೂರಿಸಿ,

ಎಲ್ಲರ ಮುಂದೆ ತಮ್ಮನ್ನೇ ಹೊಗಳಿಸಿಕೊಂಡು,

ಸುದ್ದಿಯಲ್ಲಿ ಬರವುದು

ಸಾದನೆ ಸ್ವಲ್ಪ-ಸುದ್ದಿ ಅಪಾರ. 

ಸರ್ಕಾರದ ಪ್ರಶ್ನೋತ್ತರ

00.00.0000 - 0.00 p.m.

ಸುದ್ದಿಗಾರರ ಪ್ರಶ್ನೆಗಳಿಗುತ್ತರ.

ಬಡತನ ಮಾಡುತ್ತಿದೇವೆ

ದಾರಿದ್ರ್ಯ ಹೋಗುತ್ತೆ (ನಮ್ಮದು).

ನಿರುದ್ಯೋಗ ಯೋಜನೆಗಳಲ್ಲಿದೆ

ಹಸಿವು ನೀಗುಸುತ್ತಿದೇವೆ (ನಮ್ಮದು).

ಭ್ರಷ್ಟಾಚಾರ ಹೋಗುವುದಿಲ್ಲ.

ಏಕೆ? ಅದು ನಮ್ಮಗಳ ರಕ್ತ. 

 

ರಿಯಾಯಿತಿ

00.00.0000 - 0.00 p.m.

ಇರುವುದು ಕೊನೆಯವರೆಗೆ,

ಪ್ರಳಯ ಆಗುವುವವರೆಗೂ

ಕಾರಣ, ಮುಂದುವರೆಯಬಾರದೆಂದು,

ಅವರು ಯಾವಾಗಲೂ ಮತ-ಬ್ಯಾಂಕ್.

ಗಾಂಧಿ

00.00.0000 - 0.00 p.m.

ಕೊನೆಗೆ ಈ ಹೆಸರು ಇದ್ದರೆ ಸಾಕು.

ಎಲ್ಲಿದ್ದರೂ, ಹೇಗಿದ್ದರೂ, ಜಯ ನಿನ್ನದೆ.

ನೆಹರು ಮನೆಯಲ್ಲಿ ಎಲ್ಲರೂ ಗಾಂಧಿಗಳೇ.

ತತ್ವಕ್ಕೆ ತಿಲಾಂಜಲಿ ಇಟ್ಟರೂ ಪರವಾಗಿಲ್ಲ.

ಗಾಂಧಿ ಹೆಸರೇ ಉಸಿರು - ಜೀವಕ್ಕೆ ರಕ್ತ.

ಪಕ್ಷದ ಹೊಸ ಚಿಹ್ನೆ

00.00.0000 - 0.00 p.m.

ಬಿರುಕು ಬಿಟ್ಟಿರುವ

ಒರಟಾಗಿರುವ

ಉಪಯೋಗಿಸಲಾಗದ

"ಕ್ರಿಕೆಟ್ ಬಾಲ್" ಈಗ ಚಿಹ್ನೆ.

ಏಕೆಂದರೆ ಸದಸ್ಯರೆಂದು ಕೊಡುವುದಿಲ್ಲ.

ಮನ ಒರಟು-ಬುದ್ದಿ ಬಿರುಕು.

Father of the World

13.05.2002 - 4.30.a.m.

Father of the nations here born and gone to lead their nations. But Father of the world has not born so far. If father of the world borns, then people of the nation will become people of the world and they may expect, uniform civil laws, uniform criminal laws, salvations to unemployment, poverty, illhealth, common problems like shelter, food, clothing, education, -then the defence expenditure of the nations could be diverted for the development of the [nations/ countries ] world as a whole – if the unemployment problem is solved. The world may not have terrorists & wars. Let us expect & hope for the born of the Father of the World –viz God in the form of human being.

Solution - Removal of Poverty

17.6.2002 -5 a.m.-Monday

If proper deployment of funds poured/pouring in doing by the public for construction of religious buildings [viz temples-churches-mosques etc] and for celebration of various parties’ functions like birthday parties/marriages. etc., is used/diverted for improvement/development of the under privileged class of the society, then within years may not expect the below the poverty line people in the world. Such an amount of huge quantity is/are being wasted daily by some of the public for their fun and fancy works who have lost logical thinking & rationalists approach towards the well being of their neighbourers/ societies.

 

Fun –Fancy & False Prestiges & notions have became the order of the day. Simple living & high level thinking about the problems of the world are the present basic needs of the societies /public to solve the common problem of the society/societies like population control, poverty ill health, shelter, under employment etc., etc. Earning by somehow & some method is ruining the society, ethics of the people natural logical behavior which should/must need to be avoided.

Increments - Promotions

28.01.1993

Legally recognized official bribe to get the official legal work done regularly which otherwise would have not been possible.

bottom of page