ಚಿಂತನ
ಚನ್ನ ಬಸವ ದೇವರವರ ಈ ವಚನಗಳು ಶಿಸ್ತು, ಸಂಸ್ಕೃತಿ, ಏಕತೆ ಮತ್ತು ಆಧ್ಯಾತ್ಮಿಕ ಬೆಳವಣಿಗೆ ಕುರಿತು ಚರ್ಚಿಸುತ್ತವೆ, ಮಾನವ ಹಾಸ್ಯ ಮತ್ತು ಸಮಾಜದ ಮೌಲ್ಯಗಳನ್ನು ಪರಿಕಲ್ಪಿಸುತ್ತವೆ. ಸ್ಪಷ್ಟ ಚಿತ್ರಣ ಮತ್ತು ಯೋಗ್ಯ ಚಿಂತನಗಳ ಮೂಲಕ, ಚನ್ನ ಬಸವ ದೇವರು ನಮಗೆ ಆತ್ಮಾಭಿವೃದ್ಧಿ ಮತ್ತು ಸಮೂಹ ಹಾರ್ಮನಿಯ ಉತ್ಸವದಲ್ಲಿ ಮಾರ್ಗದರ್ಶನ ನೀಡುತ್ತಾನೆ. ಪ್ರತಿ ವಚನವೂ ಜೀವನದ ಸವಾಲುಗಳು ಮತ್ತು ಅವುಗಳನ್ನು ಜಯಿಸಲು ಸಹಾಯ ಮಾಡುವ ಶೀಲಗಳನ್ನು ವಿಶಿಷ್ಟ ದೃಷ್ಟಿಕೋಣದಲ್ಲಿ ನೀಡುತ್ತದೆ, ಓದುಗರನ್ನು ಆಂತರಿಕ ಶಕ್ತಿ, ಜ್ಞಾನ ಮತ್ತು ಕರುಣೆಯನ್ನು ಬೆಳೆಯಿಸಲು ಪ್ರೇರೇಪಿಸುತ್ತದೆ. ಈ ಕಾವ್ಯದ ಸಾಲುಗಳಲ್ಲಿ ನಿಖರವಾದ ಜ್ಞಾನವನ್ನು ಅನ್ವೇಷಿಸಲು ನಮೋಡಾಗಿ.
Thoughts
These verses from Channa Basava Devaru, delve into themes of discipline, culture, unity, and spiritual growth, reflecting on human virtues and societal values. Through vivid imagery and thoughtful reflections, Channa Basava Devaru guides us on a journey of self-improvement and collective harmony. Each vachana offers a unique perspective on life's challenges and the virtues that help us overcome them, encouraging readers to cultivate inner strength, wisdom, and compassion. Join us in unraveling the timeless wisdom embedded in these poetic lines.
28.01.1993
11. ಚಿಂತನ : ಮಾನವ ಭವ ಬಂಧನದಿಂದ ಅರಿಷಡ್ವರ್ಗಗಳಿಂದ ದೂರವಾಗಿಸಲು ಮನಸ್ಸಿನ
ಶುಭ್ರತೆಗೆ, ಸ್ವಚ್ಛತೆಗೆ ಉಪಯೋಗಿಸುವ ಟಾನಿಕ್ ಚಿಂತನ.
16.11.1992
67. ಚಿಂತನ : ’ಚಿಂ’ತೆಯ ಮನದಿಂದ ದೂರವಿರಿಸಲು,
’ತ’ನುವ ಹಗುರವಾಗಿರಿಸಲು
’ನ’ಗೆ ಮುಖದಲ್ಲಿ ಮೂಡಿಸಲು ಬೇಕು ಚಿಂತನ ಎಲ್ಲರಿಗೂ.
68. ಶಿಸ್ತು : ಇರಬೇಕು ಜೀವನದಲ್ಲಿ ಶಿಸ್ತು
ಇಲ್ಲದಿರೆ ಆಗುವೆ ಬೇಸ್ತು
ತೆಗೆದುಕೋ ’ಚಿಂತನ’ದ ತಾಕತ್ತು
ನೋಡು ಬೆಳೆಸುವೆ ಮನಸ್ಸಿನಲಿ ಗಮ್ಮತ್ತು,
ಆಗ ಭವ ಬಂಧನದಲ್ಲಿ ಆಗುವುದಿಲ್ಲ ಸುಸ್ತು.
“ಶಿಸ್ತಿನಿಂದ ಮಾನವ’ ಎಂಬುದು ಗೊತ್ತಿತ್ತು
ಸತ್ ಸಂಗಗಳ ಒಡನಾಟ ಬೇಕಿತ್ತು.
ಅಷ್ಟರೊಳಗೆ ದೇಹ ಬಿಟ್ಟು ದೂರ ಹೋಗಿತ್ತು.
69. ಸಂಸ್ಕೃತಿ : ’ಸಂ’ಪಾದನೆಯೇ ಜೀವನದ ಮುಖ್ಯಗುರಿಯೆಂದು, ಸಂ
’ಸ್ಕೃ’ತಿಯ ಜೀವನವಿಡೀ ದೂರವಿರಿಸಿ
’ತಿ’ರಸ್ಕರಿಸಿದ ಮಾನವ ಹಿರಿಯರ ಬುದ್ದಿವಾದ.
18.11.1992
71. ಇರುವೆ : ಜೀವನದ ಶಿಸ್ತಿಗೆ ಇನ್ನೊಂದು ಹೆಸರು ಇರುವೆ ಮಾನವ ಕಲಿಯುವುದು ಬೇಕಾದಷ್ಟಿದೆ ಇದರಿಂದ ಆಹಾರ ಸಂಗ್ರಹಣೆಯೇ ಇದರ ಕಾಯಕ.
ಶಿಸ್ತಿನಿಂದ ಹೋಗುವುವು ಒಂದರ ಹಿಂದೆ ಒಂದು.
ಸಾಮೂಹಿಕ ಪ್ರಯತ್ನವೇ ಒಗ್ಗಟ್ಟಿನ ಗುಟ್ಟು,
ಹಾಳು ಮಾಡುವುದಿಲ್ಲ ತನ್ನ ಅಮೂಲ್ಯ ಸಮಯ.
72. ಮಾನವ-ಗುಣಗಳ ರಾಶಿ : ಸಕಲ ಜೀವರಾಶಿಗಳ ಗುಣಗಳು ಮಾನವನಲ್ಲಿ ಹರಿದು ಹಂಚಿ ಹೋಗಿರುವುದು.
ನಾಯಿಯಂತೆ ನಿಷ್ಟೆಯ ಗುಣಗಳು ಕೆಲವರಲ್ಲಿ,
ನರಿಯ ಹಾಗೆ ಯುಕ್ತಿಯ ಗುಣಗಳು ಇನ್ನು ಕೆಲವರಲ್ಲಿ,
ಇರುವೆಯಂತೆ ಶಿಸ್ತಿನ ಗುಣಗಳು ಹಲವರಲ್ಲಿ,
ಹಸುವಿನ ರೀತಿ ಸಾಧು ಪ್ರಾಣಿಗಳ ಗುಣಗಳು ಹಲವರಲ್ಲಿ,
ಬೆಕ್ಕಿನ ರೀತಿಯ ಕದ್ದು ತಿನ್ನುವ ಗುಣಗಳು ಕೆಲವರಲ್ಲಿ,
ದುಷ್ಟ ಪ್ರಾಣಿಗಳ ಹಾಗೆ ಹಿಂಸೆಯಗುಣಗಳು ಬಹುಜನರಲ್ಲಿ
ಹೀಗೆ ಇತ್ಯಾದಿ ಇತ್ಯಾದಿಯಾಗಿ ಮಾನವ ವಿಶಿಷ್ಟ ರೀತಿಯಲಿ ಗುಣಗಳ ರಾಶಿ,
ಉಪಯೋಗಿಸುವನು ಇದನು ಭವ ಬಂಧನಕ್ಕೆ ಒಳಗಾಗಿ.
73. ಸಾರ್ಥಕ-ಜೀವನ : ಕೇಳು-ಕೂಡಿಡು ಚಿಂತನಗಳ ರಾಶಿಯ,
ಬಳಸು ಬೇಕಾದ ಸಮಯದಲಿ,
ಕದ್ದು ಅಪಹರಿಸುವ ವಸ್ತುವಲ್ಲವಿದು,
ಎಷ್ಟು ಬಳಿಸಿದರೂ ಸವೆಯದ ವಸ್ತುವಿದು,
ಸಮಾಜದ ಋಣ ತೀರಿಸಲಿಕೆ ಬಳಸು,
ಕಾದಿರುವನು ದೇವ ನಿನ್ನ ಸ್ವೀಕರಿಸಲಿಕಾಗಿ,
ಮುನ್ನುಗ್ಗಿ ಒಳಹೋಗಿ ಸೇರು,
ಮೋಕ್ಷವೆಂಬ ಜೋಳಿಗೆಗೆ; ಇಲ್ಲಿ ಸೇರಿದ ಮೇಲೆ ಪುನರ್ಜನ್ಮದ ಮಾತಿಲ್ಲ,
ಆಗ ಹುಟ್ಟಿದಕ್ಕೂ ಸಾರ್ಥಕ ಈ ಜೀವನ.
75. ಆಸೆ : ಇರಬೇಕು ಮಾನವನಿಗೆ ಸಮಾಜಕೆ ಒಳಿತು ಮಾಡುವ ’ಆಸೆ’
ತೊಂದರೆ-ಅಡಚಣೆ ಬಂದರೂ ಆಗಬಾರದು ಆಗ ನಿರಾಶೆ,
ಸಮಾಜ ಸೇವೆಗೆ ನಿಂತು, ಮಾಡಿ ತೋರಿಸಬೇಕು ಮುಗಿಲಾಸೆ,
ಸ್ವಾರ್ಥಕ್ಕಾಗಿ ಉಪಯೋಗಿಸಬಾರದು ದುರಾಸೆ,
ಕೆಲಸ, ಕಾರ್ಯ ದಕ್ಷತೆಯಲ್ಲಿ ತೋರಿಸಬೇಕು ಅತಿ ಆಸೆ,
ಕಳಂಕರಹಿತ ಸೇವೆ ಇರಲೆಂದು ಕೇಳುವುದು ಕೊನೆಯಾಸೆ.
76. ಚಿಂತನ-ಟಾನಿಕ್ : ಉಪಯೋಗಿಸಿ ನೋಡಿರೋ ಈ ಗುಳಿಗೆ ’ಚಿಂತನ’ ದ
ಟಾನಿಕ್ ಆಗಿ ಸೇವಿಸಲು ಸಿಗುವುದು ’ಚಿಂತನ’ ದ ಬಾಟಲಿ
ಭವ ಬಂಧನದ ಬಿಡುಗಡೆಗೆ,
ಅರಿಷಡ್ವರ್ಗಗಳ ದೂರವಿರಿಸುವಿಕೆಗೆ,
ದುರಾಸೆ-ಅತಿಆಸೆಗಳ ಕಿತ್ತು ಬಿಸಾಡಲು,
ಮನಸ್ಸಿನ ಆಹ್ಲಾದಕ್ಕೆ,
ಮನಸ್ಸಿನ ಸ್ವಚ್ಛತೆಗೆ,
ಮನಸ್ಸಿನ ಶುಭ್ರತೆಗೆ,
ಮನಸ್ಸು ಸದಾ ಹೊಳೆಯಲು, ಮತ್ತು ಮುಖವ ಮನಸ್ಸಿನ ಕನ್ನಡಿಯಾಗಿ
ಮಾಡಲು ಉಪಯೋಗಿಸಿ ಸದಾ ಈ ’ಚಿಂತನ ಟಾನಿಕ್’.
20.11.1992
77. ಕಾಯಕ-ಸಾಧನ : ಕೆಲಸಕ್ಕೆ ದೈವಾಂಶ ಲೇಪನ ಸೇರಿದಾಗ
ಆಗುವುದು ಕಾಯಕ ಒಂದು ಸಾಧನ
ಕಾರ್ಯ ದಕ್ಷತೆಯನ್ನು ಹೆಚ್ಚಿಸುವುದು ಈ ಸಾಧನ
ಭವ ಬಂಧನಗಳ ಕಾಲವಿಲ್ಲ ಈ ಸಾಧನಕೆ
ಅರಿಷಡ್ವರ್ಗಗಳ ವ್ಯಾಮೋಹವಿಲ್ಲ ಈ ಸಾಧನಕೆ
ಮಾನವನನ್ನು ವಿಶ್ವ ಮಾನವನನ್ನಾಗಿ ಮಾಡುವುದು ಈ ಸಾಧನ
ಕೊನೆಗೆ ಸೂರ್ಯ-ಚಂದ್ರ ಇರುವವರೆಗೂ ಇರುವುದು ಈ ಕಾಯಕ-ಸಾಧನ.
78. ಕಾಯಕ : ಇದು ಬಹು ದೊಡ್ಡ ವಿಶಾಲ ಹೃದಯದ ಪದ ತೋರಿಸುವುದು
ದೇವನ ಕೆಲಸ ಕಾರ್ಯದಲ್ಲಿ ಶರಣರು ಮಾಡಿ ತೋರಿಸಿದ ಸಾಧನವಿದು,
ಸಮಾಜದ ಒಳಿತು ಈ ಸಾಧನದಿಂದ,
ಮಾನವನನ್ನು ದೇವನಾಗಿ ಮಾಡುವುದು ಸಾಧನ
ಸ್ವ ಉದ್ಯೋಗ ಕಲ್ಪಿಸುವುದು ಸಕಲ ಮಾನವರಿಗೆ ಈ ಸಾಧನ
ಅತಿ ಆಸೆ-ದುರಾಸೆಗಳ ಕಿತ್ತು ಬಿಸಾಡಿತು ಈ ಸಾಧನ
ಕಾಯಕವೇ-ಕೈಲಾಸ’ ಎಂದರು ಶರಣರು
ಕೆಲಸಕ್ಕೆ ದೈವಾಂಶ ಲೇಪನವು ಈ ಕಾಯಕದಿಂದ
ಸತ್ಯ-ಶುದ್ಧ-ಆಸೆ ರಹಿತ ಕೆಲಸವೇ ಕಾಯಕ
ನಾಳಿನ ಯೋಚನೆಗಾಗಿ ಕೂಡಿಡಬೇಡ ಈಗಲೇ ಎನ್ನುವುದು ಕಾಯಕ
ಹೆಚ್ಚಿನದನ್ನು ಸಮಾಜದ ಒಳಿತಿಗೆ ಬಳಸು ಎನ್ನುವುದು ಕಾಯಕ
ಸಮಾಜಕ್ಕೆ ನಾವು ಮಾಡಿದ್ದೇನು ಎಂದು ತೋರಿಸಿತು ಕಾಯಕ
ಕಾಯಕ ಮಾಡುವ ಜನತೆಯಿಂದಲೇ ಸಮಾಜದ (ಅಳಿವಲ್ಲ) ಉಳಿವು ಎಂದು ಹೇಳಿತು
ಈ ಕಾಯಕ.
21.11.1992
79. ಮನಸಿನ ಆಹಾರ [ಮನಸ್ಸು-ಆಹಾರ] :ದೇಹದಂತೆಯೇ ಮನಸಿಗೆ ಬೇಕು ಆಹಾರ,
ಚಿಂತನದ ವಿಷಯಗಳು, ಆಚಾರ, ವಿಚಾರಗಳು, ಮನಸಿಗೆ ಆರೋಗ್ಯಕರ, ಸತ್ವಭರಿತ, ವಿಟಮಿನ್ ಯುಕ್ತ ಆಹಾರ, ಮಂಥನದಿಂದ ಹೊರ ಬಂದ ವಿಚಾರಗಳೇ ಮನಸಿಗೆ ರುಚಿಯಾದ ಅಡಿಗೆ,
ದೇವರ ನಾಮಗಳು ಇದಕೆ ಉಪ್ಪಿನಕಾಯಿ, ಭವ ಬಂದನಗಳು ಅಡಿಗೆಯಲ್ಲಿರುವ ಕಲ್ಲು-ನಾರುಗಳು, ಅರಿಷಡ್ವರ್ಗಗಳು ಮನಸಿಗೆ ಮಧು-ಮೇಹರೋಗ,
ಸತ್-ಸಂಗಗಳ ಒಡನಾಟವೇ ಈ ರೋಗಕ್ಕೆ ಮದ್ದು,
ಮನಸ್ಸಿನಿಂದ ಹೊರಬರುವ ಸುವಿಚಾರವೇ ತೃಪ್ತಿ,
ಆಗುವನು ಆಗ ಮಾನವ-ದೇವ ಮಾನವ ವಿಶ್ವ ಮಾನವ
ದಿನಾಂಕ : 18.10.1992 ರಿಂದ ಪ್ರಾರಂಭ [ಭಾನುವಾರ]
1. ಕವಿತೆ : ನಿದ್ರೆ ಬಾರದೇ ಕಾಲ ಕಳೆಯಲು, ಮನಸ್ಸಿನಲ್ಲಿ ತೃಪ್ತಿ ಪಡೆಯಲು ಮನಸ್ಸಿನ ಭಾವನೆಗಳನ್ನು ‘ಕ’ ನ್ನಡದಲ್ಲೇ ‘ವಿ’ವರವಾಗಿ ‘ತೆ’ರೆದು ತೋರಿಸಿದ ಅಕ್ಷರಗಳ ಮಾಲೆ.
2. ಕವನ : ರಸಮಯವಾಗಿ ಚಿಕ್ಕದಾಗಿ ಚೊಕ್ಕದಾಗಿ ‘one day limited over’ ನ ಕ್ರಿಕೆಟ್ ರೀತಿಯಲ್ಲಿನ ಹಾಡು.
3. ಪ್ರತಿಭೆ : ಕವನ-ಕಾವ್ಯಗಳ ‘ಪ್ರತಿ’ಗಳನ್ನೇ ಮಾಡಿ, ಆ ರೀತಿಯಲ್ಲಿಯೇ ‘ಗುಣ’ ಜೀವನ ನಡೆಸಲು ಹೋಗಿ ಇದ್ದುದರಲ್ಲಿಯೇ ಸಂ[some]ತೃಪ್ತಿ ಜೀವನ ನಡೆಸಿ ಕೊನೆಗೂ, ಎರಡೇ ವರ್ಷಗಳಲ್ಲಿ ದೇವಲೋಕದಲ್ಲಿ ‘ಪ್ರತಿಭೆ’ ಪ್ರಶಸ್ತಿ ಗಿಟ್ಟಿಸಿದ ನಮ್ಮ ಗುಂಡ.
4. ಬ್ಯಾಂಕ್ : ನಿಗದಿತ ಕಾಲಕ್ಕೆ ಬಾರದೇ ಬೇಕಾಬಿಟ್ಟಿ ಕೆಲಸಮಾಡಿ ಗ್ರಾಹಕರಿಗೆ ಗ್ರಹಬಿಡಿಸಿ ಕಿರಿಕಿರಿ ಮಾಡುತ್ತಿರುವ ‘white-ಲೇಟರ್’ ಉದ್ಯೋಗಿಗಳನ್ನು ಬೊಜ್ಜಾಗಿ, ಬೆಳಸಿ, ಪೋಷಿಸಿ, ಬೇರೂರಿಸುತ್ತಿರುವ ಸಂಸ್ಥೆ.
5. ಉದ್ಯೋಗಿ : ಅಂದು-ಇಂದು : ‘ಕಾಯಕವೇ ಕೈಲಾಸ’ ಎಂದು ನಂಬಿದ್ದ ಉದ್ಯೋಗಿ -ಅಂದು.
‘ಕೈ -ಬೆಚ್ಚಗಿದ್ದರೆ ಕೈಲಾಸ’ ಎಂದು ನಂಬಿದ್ದಾನೆ-ಇಂದು.
6. ಜೀವನ : ಅಂದು-ಇಂದು : ರಸವೇ ಜೀವನ ವಿರಸವೇ ಮರಣ ಸಮರಸವೇ ಜೀವನ -ಅಂದು.
ಆದರಿಂದು ವಿರಸವೇ ಜನನ ರಸವೇ ಮರಣ ಕಸವೇ ಜೀವನ.
7. ತೃಪ್ತಿ- ಅತೃಪ್ತಿ : ತಾನಾಗಿ ಬಂದುದ, ಅನುಭವಿಸಿಲೋಸುಗ ಅರ್ಪಿಸುವುದೇ ತೃಪ್ತಿ, ಹುಡುಕಿತಂದು ಖುಷಿಪಡುವುದು ಅತೃಪ್ತಿ. ಕೊನೆಗೂ ತಾತ್ಕಾಲಿಕ ತೃಪ್ತಿಯೇ ಅತೃಪ್ತಿ.
ಚಿಂತೆ ಮಾಡದೇ ಇರುವುದೇ ತೃಪ್ತಿ.
8. convent (Teacher) ಟೀಚರ್ : ಹತ್ತು ತಿಂಗಳು ಪಾಠ ಹೇಳಲಿಕ್ಕೆ, ಹನ್ನೆರಡು ತಿಂಗಳು ಸಂಬಳಕ್ಕೆ ಸಹಿ ಹಾಕಿ ಆರು ತಿಂಗಳ ಅರೆ ಸಂಬಳ ತೆಗೆದುಕೊಂಡು ಕೆಲಸಕ್ಕೆ ಸೇರುವ ಮೊದಲೇ ಮುಂಗಡ ರಾಜೀನಾಮೆ ಪತ್ರ ಬರೆದುಕೊಟ್ಟು, ‘ಜೀವನ’ ವೆಂಬ ರಥ ನಡೆಸುತ್ತಿರುವ ಯಾರಿಗೂ ಬೇಡದ ಅನಾಥ ವ್ಯಕ್ತಿ.
9. ಉದೋಗಿ : ಅಂದು-ಇಂದು : ಹಗಲಿರುಳೆನ್ನದೆ ದುಡಿಯುತ ದೇಶಕ್ಕೆ ಮಾದರಿ ಆಗುತ್ತ ಸೇವೆಯ ಕಂಕಣ ಕಟ್ಟುತ್ತ ದೇಹವ ಬೆವರಿಸುತ ಜೀವವ ಸೆಣೆಸುತ್ತ ಜೀವನ ನಡೆಸಿದರು – ಅಂದು.
ಆದರೆ ಇಂದು ‘ಹಗಲೇ’ ಸಾಕು ಎನ್ನುತ ದೇಶಕ್ಕೆ ಕಿರಿಕಿರಿ ಮಾಡುತ ‘shave’ (ಶೇವ್) ಮಾಡುವ ಕಂಕಣಕಟ್ಟುತ ಅಡ್ಡದಾರಿಯಲ್ಲಿ ಹಣವ ಗಳಿಸುತ ಜೀವವ ಕುಣಿಸುತ ಜೀವನ ನಡೆಸಿದರಿಂದು.
10. ವಿ-ವಾ-ಹ : ವಿವಾಹ ಎಂದರೆ, we, wai hai ಎಂದು Joy ಆಗಿ ಇರಬಹುದೆಂದು ಮದುವೆ ಆದರೆ, we (ದಂಪತಿ) ‘ವಾ’ ರ್ ಗೆ ಇಳಿದು ‘ಹ’ ಲ್ಲು ಕಿರಿಯ ಬೇಕಾಯಿತು.
11. ಇಂದಿನ ಗಂಡ : ಹೆತ್ತವರನ್ನು ದೂರ ಮಾಡಿ, ಹೆಂಡತಿಯ ಕೈಲಿ ನರಳಿ, ಸಮಾಜದಲ್ಲಿ ತಲೆ ಬಗ್ಗಿಸಿ ಕೊರಗಿ ಕೊರಗಿ ಬದುಕ್ಕಿದ್ದು ಸತ್ತಂತಿರುವ ಭಂಡ ಪ್ರಾಣಿ.
12. ಕಾಮ-ಪ್ರೀತಿ : ‘ಕಾಮ’ವನ್ನು colm ಆಗಿ ಉಪ್ಪಿನಕಾಯಿ ರೀತಿಯಲ್ಲಿ ಪ್ರೀತಿ ಎಂಬ ಊಟಕ್ಕೆ ಸೇರಿಸಿ ಉಂಡರೆ-ಜೀವನ ರಸ‘ಮಯ’ ಎಂದು ನಂಬಿದ್ದ ನಮ್ಮ ‘ಗುಂ’ಪ್ಪನಿಗೆ ‘ಕಾಮ’ ಊಟವಾಗಿತ್ತು ಪ್ರೀತಿ ಉಪ್ಪಿನಕಾಯಿಯಾಗಿತ್ತು. ಕೊನೆಗೆ ‘ಕಸಮಯ’ ವಾಗಿ ಜೀವನ ‘AIDS’ ಗೆ ಬಲಿಯಾಗಿತ್ತು.
13. WE-ಚಿತ್ರರಂಗ : we (ವಿ) ಚಿತ್ರ ಜೀವನದ we (ವಿ) ಚಿತ್ರ ರೀತಿಯ ವ್ಯವಹಾರ ನೋಡಿ we (ವಿ)ಚಿತ್ರ ರೀತಿಯಲ್ಲೇ ಮದುವೆ ಮಾಡಿಕೊಂಡು ಕೊನೆಗೆ we ಚಿತ್ರವಾಗಿಯೇ “AIDS” ಗೆ ಬಲಿಯಾದರು.
14. ಸಂಬಳ-ಗಿಂಬಳ : ಸಂಬಳ ಕೊಡದಿದ್ದರೂ ಪರವಾಗಿಲ್ಲ ಗಿಂಬಳ ಸಾಕು ಆಗಾಗೆಲ್ಲಾ ಕುರ್ಚಿಗೆ ಬೇಕು ಸಂಬಳ ಕೆಲಸಕ್ಕಿದೆಯೆಲ್ಲ ಗಿಂಬಳ ದಿನದ ಪಾಕೆಟ್ ಖರ್ಚಿಗೆ ಸಂಬಳ ಭೋಗ ಜೀವನದ ಖರ್ಚಿಗೆ ಗಿಂಬಳ.
15. ಮಾದರಿ-ಹೇಗೆ ? : ಏನು ಹೇಳಲಿ?, ಹೇಗೆ ಹೇಳಲಿ? ನಮ್ಮ ಮಾತಾಪಿತರು ನಮಗೆ ಪಾಠ ಓದಿಸಲಿಲ್ಲ, ತಿದ್ದಿ ಹೇಳಲಿಲ್ಲ, ನೀತಿ ತಿಳಿಸಲಿಲ್ಲ, ಪ್ರೀತಿ ತೋರಿಸಲಿಲ್ಲ. ತಿಂಡಿ ತಿನಸು ತಿನಿಸಲಿಲ್ಲ. ಆದರೂ ಆಗಬೇಕದವರಿಗೆ ನಾವು ಮಾದರಿ-ಹೇಗೆ?
16. ರೇಷನ್ -shop : ಯಾವಾಗಲೂ ಮುಚ್ಚಿ, ಗ್ರಾಹಕರಿಗೆ ಕಿರಿಕಿರಿ ಕೊಡುತ್ತಾ ಬಾಗಿಲು ತೆಗೆದಾಗ, ಬೇಡದ ರೇಷನ್ ಕೊಡುವ, ಬೇಕಾಗುವ ರೇಷನ್ ಇಲ್ಲವೆನ್ನುವ ಯಾರಿಗೂ ಬೇಡದ, ಸರ್ಕಾರಕ್ಕೆ ಬೇಕೆನಿಸುವ ಶಾಪೇ, Ration Shop ರೇಷನ್.
17. ನಮ್ಮ ಸರ್ಕಾರ : ನಮ್ಮಲ್ಲಿರುವುದು ಕಾಗದದ ಮೇಲೆ ಸರಕಾರ ಬೇಕು ಅವರಿಗೆ ಪ್ರಚಾರಕ್ಕೆ ಆಡಂಬರ ಹಾಕಬೇಕು. ಕೊರಳಿಗೆ ಹಣದ ಸರ-ಸರ ನಿಮ್ಮ ಕೆಲಸ ಆದಾಗ ಬಲು ಹಗುರ ನಿಜವಾಗಿಯೂ ಎಲ್ಲರ ಪಾಲಿಗೆ ಸತ್ತಿದ್ದ ಸರಕಾರ ಹಣ ಕಂಡ ತಕ್ಷಣ ಆಯಿತು ಸರದಾರ ಮಾಡಿ ಮುಗಿಸಿತು ನಿಮ್ಮ ಪಾಲಿನ ವ್ಯವಹಾರ.
18. ಕೀರ್ತಿ -‘ಪತಾಕೆ ‘ : ಬರೆಯಲಿಕೆ ಬರುವುದು ಸ್ಪೂರ್ತಿ ಇದ್ದಾಗ ದೇವರ ಮೇಲೆ ನಿಜವಾದ ಭಕ್ತಿ ಆಗಲೇ ಹರಡುವುದು ನರದಲ್ಲಿ ಶಕ್ತಿ. ಅಂಟಿಸಿಕೊಳ್ಳಬಾರದು ಮನದಲ್ಲಿ ಕೀರ್ತಿ ಆಗ ನೋಡು ತಾನಾಗಿ ಹಾರಡುವುದು ‘ಕೀರ್ತಿ ಪತಾಕೆ’.
19. ದಾನ : ‘ದೃಷ್ಟಿ’ ದಾನ, ‘ಮೂತ್ರಪಿಂಡ’ ದಾನ, ‘ಭೂ’ದಾನ, ‘ಧನ’ದಾನ, ‘ದಾನ್ಯ್’ದಾನ, ಮನದಾನ-ಅಂತ ನಾನಾ ದಾನಗಳ ವಿವರಗಳನ್ನೆಲ್ಲಾ ಕೇಳಿ ತಿಳಿದು ಉತ್ಸಾಹಗೊಂಡ ನಮ್ಮ ಗುಂಡ ತಾನೂ ಉತ್ಸಾಹಿಯಾಗಿ ‘ದಾನ’ ಮಾಡುತ್ತೇನೆಂದು ಹೋಗುತ್ತಾ ‘Accident’ ನಲ್ಲಿ ಸಿಕ್ಕಿ ಆಯಿತು ‘ದೇಹ ದಾನ.’
ದಿನಾಂಕ : 18.10.1992 ರಿಂದ ಪ್ರಾರಂಭ [ಭಾನುವಾರ]
36. ಈಗಿನ ನಾಗರೀಕತೆ : ಹೇಗೆ ಹೇಳಲಿ ? ಈಗಿನ ನಾಗರೀಕತೆ,
ಸಂಸ್ಕೃತಿ ಇಲ್ಲದೆ ಆಗಿದೆ ಈಗ ಅರಾಜಕತೆ,
ಹೇಳಲು ತಿಳಿಯಲು ಆಗಿದೆ ಹಿಂದಿನವರಿಗೆ ವ್ಯಥೆ,
ಈಗಿನವರಿಗೆ ಹಿಂದಿನವರ ಸ್ವಭಾವ ಒಂದು ಹರಿಕಥೆ,
ತಿದ್ದಿಸಲು ದೊಡ್ಡವರು ಹೋದರೆ ಹೇಳುವರವರಿಗೆ ಹಳೇಕಥೆ,
ಅವರಿಗೆಲ್ಲಾ ಬೇಕಾಗಿರುವುದು ಈಗ ಕಾಕ್ ಟೈಲ್ ಕಥೆ,
ಬಹುಪಾಲು ಜನರಿಗೆ ಬೇಕು ದೇಹಮಾರಿ ಜೀವಿಸುವ ಹೆಣ್ಣೆನ ಕಥೆ,
ಈಗ ನಡೆಯುತ್ತಿರುವುದೇ ಪಾಶ್ಚೀಮಾತ್ಯ ರೀತಿಯ ಇಂತಹ ಸತ್ಯಕಥೆ.
08.11.1992
39. ಶಾಲೆ : ಹಗಲಿನಲ್ಲಿ ಪಾಠಶಾಲೆ,
ರಾತ್ರಿಯಲ್ಲಿ ಪಾಕಶಾಲೆ,
ಲಂಪಟರಿಗೆ ಭೋಗಕ್ಕೆ ಶಾಲೆ,
ಕೆಲವರಿಗೆ/ಸರ್ಕಾರಕ್ಕೆ ಭೋಜನ ಶಾಲೆ,
ಕಲಾವಿದರಿಗೆ ಕಲಾಶಾಲೆ,
ಬಹುಅಪರೂಪ ನಿಜಶಾಲೆ.
40. ಈಗಿನ ಸಂಸ್ಕೃತಿ : ಈಗಿರುವುದು ಸೋಗಿನದು,
ಬಚ್ಚಿಟ್ಟಿರುವುದು ಪ್ರೇಮ, ಪ್ರೀತಿ,
ಅಡಿಗಿಸಿರುವುದು ವಿಶ್ವಾಸ, ಮಮತೆ,
ಮಾಡುವುದು ಹಣಕಾಗಿ,
ತೋರಿಸುವುದು ಇಲ್ಲದ ವೈಭವ,
ಮರೆತಿಹುದು, ಮರೆಸುವುದು ನೈಜ ಪ್ರೇಮ,
ದೂರವಿಡಿಸುವುದು ಬಂಧು ಬಳಗ, ಸ್ನೇಹಿತರ,
ಗೊತ್ತಿದ್ದು ಬಿಡರು ಐಷಾರಾಮ ಜೀವನಕೆ, ಇಂತಹುದು ಈಗಿನ ಸಂಸ್ಕೃತಿ.
9.11.1992
41. ಮದುವೆ : ಈಗಿನ ಮದುವೆಗಳು ಸಂಪ್ರದಾಯದವರಿಗೆ
ಒಂದು ರೀತಿ ಕಿರಿಕಿರಿ ಬಂಧು ಬಳಗ ಸ್ನೇಹಿತರಿಗೆ,
ಬೇಕಾಗಿಲ್ಲ ವಧು-ವರರಿಗೆ ಈ ಮದುವೆ ಗುಳಿಗೆ,
ಖರ್ಚಿನ ಹೊಡೆತ ವಧುವಿನ ಮಾತಾಪಿತರಿಗೆ,
ಸುಲಗೆಯಾ ದಿನಗಳು ಕಲ್ಯಾಣ ಮಂಟಪದ ’owner’ ಗೆ,
ಅನುಕೂಲಗಳು ಆಗಿವೆ ಪುರೋಹಿತರಿಗೆ,
ಸಾಕಷ್ಟು ಸಂಪಾದನೆ ನಳಪಾಕ ಪಂಡಿತರಿಗೆ,
ಬಂದಿವೆ ಮದುವೆಗಳು ಒಡವೆ-ಸಿಲ್ಕ್ ಸೀರೆ ಪ್ರದರ್ಶನಕ್ಕೆ,
ತಂದುವು ಮುಜುಗರ ಇತರರ ಪಾಲಿಗೆ,
ಆಡಂಬರ ಊಳಿಸಿದರೆ ಆಗಿತ್ತು ಆಸ್ತಿ ವಧುವರರಿಗೆ.
42. ಸಿರಿವಂತರ ಕಿರಿಯರ-ಮೋಜು : ನೋಡಬೇಕೆಂದಿದ್ದರೆ ಹೋಗಿ ಸಿಟಿಗಳಿಗೆ,
ಅನವಶ್ಯಕ ಖರ್ಚುಗಳು ತಂದೆ ತಾಯಿಯರ ಪಾಲಿಗೆ,
ಕೊಡಬೇಕು ಹಣವ ಇಂಧನದ ಖರ್ಚಿಗೆ,
ಕುಡಿದು ತಿನ್ನಲಿಕೆ ಕೊಡಬೇಕು ಬಾರ್ ಖರ್ಚಿಗೆ,
ಪ್ರೋತ್ಸಾಹಿಸುವರು ಕೆಲವು ತಂದೆ ತಾಯಿಯರು,
ಅನ್ಯರ ಪಾಲಿಗೆ ಇದು ಹಗ್ಗ ಕುತ್ತಿಗೆಗೆ,
ತಿದ್ದಿಸಲಿಲ್ಲ, ತಿಳುವಳಿಕೆ ಹೇಳಲಿಲ್ಲ ಕೆಲವು ಹಿರಿಯರು,
ಕಾರಣ ಈ ಹಿರಿಯರು ಇರುವರು ಕ್ಲಬ್ ಗಳಲ್ಲಿ,
ಬರುವರು ರಾತ್ರಿ ಗುಂಡಿನ ಮತ್ತಿನಲ್ಲಿ,
ಸಮಯವೆಲ್ಲಿಹುದು? ತಿದ್ದಲಿಕೆ ಕಿರಿಯರ,
ಹೀಗೆ ನಡೆಯುತ್ತಿದೆ ಸಿರಿವಂತರ ಕಿರಿಯರ ಮೋಜು.
46. ತರಂಗ : ಅತಿ ಬೇಗ ಬೆಳೆಯಿತು ’ತರಂಗ’
ಕಾರಣ ಎಲ್ಲರಿಗೂ ತಿಳಿಸಿದ್ದು ಜನರ ’ಅಂತರಂಗ’
ರಾಜಕೀಯ ವ್ಯವಹಾರ ಆಯಿತು ’ಬಹಿರಂಗ’
ಓದುಗರ ಮನದಲ್ಲಿ ಬೆಳೆಸಿತು ’ವಿಚಾರರಂಗ’
ವೈಚಾರೀಕತೆ ಬೆಳೆಸಿತು ‘ಮನಸ್ಸಿನ ಮಂಗ’
ಕಾರಣ ಗೊತ್ತಿಲ್ಲ ಸಿಕ್ಕಿತ್ತು ಮನಸ್ಸಿಗೆ ’ಒಳ್ಳಸಂಗ’
ಸುಮ್ಮನಿರಲಾರರು ಓದುಗರು ಏನಾದರು ಆದರೆ ಭಂಗ
ತೋರಿಸಿತು ಓದುಗರಿಗೆ ಕಲಾತರಂಗ
ಎಲ್ಲರಿಗೂ ಬೇಕು ಓದಲು ಈ ’ತರಂಗ.’
48. ಜಾತ್ರೆ : ಕೇಳಿರಿ! ಕೇಳಿರಿ! ಜಾತ್ರಯ ವಿವರ
ಬಡ ಭಕ್ತರು ಬಂದಿಹರು ಕಾಣಲು ದೇವರ,
ಸಿಗಲಿಲ್ಲ ಆವರಿಗೆ ಇರಲು ಕುಟೀರ,
ಕಾರಣ ಒಳಗೆ ನಡೆಸಿದ ಅವ್ಯವಹಾರ,
ಸುಂದರ ’ಬಟ್ಟೆ-ನಡೆ’ಯೆ ಕಾರಣ ವಿಶೇಷ ಉಪಚಾರ,
ಬಡ ಭಕ್ತನಿಗೆ ಇಲ್ಲದಿದ್ದುದಕ್ಕೆ ಆಯಿತು ಅಪಚಾರ,
ಏನೇ ಆದರೂ ಆ ದೇವರ ಮುಂದೆ ಈ ಬಡ ಭಕ್ತ ಕಿಂಕರ,
ಇರಿಸಿದನು ಉಳಿದವರ ದೇವರು ದೂರ, ಬಹುದೂರ.
10.11.1992
51. ಜಾತ್ರೆ-ಸಂಕಟ : ಹೇಗೆ! ಹೇಳಲಿ? ಜಾತ್ರೆಯ ಸಂಕಟ! ನೆರೆದಿದ್ದರು ಎಲ್ಲಕಡೆ ಭಕ್ತರ ಗುಂಪು, ಗುಂಪು, ಸಿಗಲಿಲ್ಲ, ಬಹಳಷ್ಟು ಭಕ್ತರಿಗೆ ಇರಲು ಕುಟೀರಗಳು ಕಾರಣ ಇದ್ದವು ಕೆಲವೇ ಕೆಲವು ಪಾಲಾದವು ಕೆಲವರಿಗೆ ಅವ್ಯವಹಾರದಿಂದ ಈ ಕುಟೀರಗಳು ಜೊತೆಗೆ, ಹರಡುತ್ತಿದೆ ಎಲ್ಲಕಡೆ ರಾಡಿಯಾಗಿ ನಾಥ ಕಾರಣ ಇರಲ್ಲಿಲ್ಲ, ತಾತ್ಕಾಲಿಕ ಶೌಚ-ವ್ಯವಸ್ಥೆ, ಜಾತ್ರೆಯಿಂದ ಬಂದ ಹಣಕ್ಕೆ ಆಗಿತ್ತು ಅವ್ಯವಸ್ಥೆ, ಬಡ-ಭಕ್ತರಿಗೆ ಸಿಗುವುದು ಯಾವಾಗಲೂ ಕಷ್ಟ-ಕಥೆ, ಸುಮ್ಮನೆ ಕೂತು ನೋಡುತ್ತಿದ್ದಾನೆ-ಏಕೆ? ದೇವ.
ಕಾರಣ-ಇರಬಹುದು ಕೊಡಲಿ ಜಾಗ ’ಹೃದಯದಲಿ’ ಎಂದು
ಸಿಗುವುದಿಲ್ಲ ಜಾತ್ರೆಯಲಿ ಕೂಡ ದಾಸೋಹ
ಕಾರಣ ಇರಬಹುದು ಸ್ವಾಹಕ್ಕೆ ಸಿಗುವುದು ಅಲ್ಪ
ಬಹುಕಷ್ಟ ಬಹುಕಷ್ಟ, ಸಿಗಲು ದರ್ಶನ
ಕಾರಣ ನಡೆಯುತ್ತಿರುವುದು ಆಡಂಬರದ ಪ್ರದರ್ಶನ
ಇದಕಾರಣ ನನಗೆ ದೇಹವೇ ದೇವಸ್ಥಾನ
ಇರುವನು ಹೃದಯದಲ್ಲಿ ದೇವರು
ಆಗಾಗ ಕಾಣಿಸುವನು ಕನಸಿನಲಿ ದರ್ಶನ
ಆ ದರ್ಶನವೇ ಎನಗೆ ಜಾತ್ರೆಯ ದರ್ಶನ
ನನ್ನ ಪ್ರಾರ್ಥನೆ ಇಷ್ಟೆ ಎಲ್ಲರ ಹೃದಯದಲಿ ಇರು ದೇವ
’ಅವ್ಯವಸ್ಥೆ ಹೋಗಿ ಸುವ್ಯವಸ್ಥೆ’ ಆಗುವ ತನಕ ಎಂದು.
52.ಭಾರತದ ಉದ್ಯಮಿ ದೇವರು : ಭಾರತದ ದೇವರು ಬಹು ಬುದ್ದಿವಂತ
ಉದ್ಯೋಗ ಕಲ್ಪಿಸಲು ತಾನೇ ನಿಂತ,
ಇಲ್ಲದಿದ್ದರೆ ಬಲು ಹೊರೆ ತನಗೆ ಅಂತ,
ಗೊತ್ತು ಅವನಿಗೆ ಭಾರತೀಯ ಅಲ್ಲ ಕಷ್ಟ ಜೀವಿ,
ಆದ ಕಾರಣ ನಿರ್ಮಿಸಿದ (ದೇವಸ್ಥಾನಗಳ) ಗುಡಿ ಗೋಪುರಗಳ,
ಪುರೋಹಿತರಾದರು ಲಕ್ಷ ಲಕ್ಷ,
ಅಂಗಡಿಯಾದವು ಲಕ್ಷ ಲಕ್ಷ,
ಹುಟ್ಟಿದವು ಹೋಟೆಲುಗಳು ಲಕ್ಷ ಲಕ್ಷ,
ಓಡಾಡುವ ವಾಹನಗಳು ಎಷ್ಟೋ,
ಬಂದುವು ಸರ್ಕಾರಿ ಕಛೇರಿಗಳು ಅನೇಕ,
ಆದವು ಖಾಸಗಿ ಕಛೇರಿಗಳು ಕೆಲವು,
ಇವ ನೋಡಿ ಬರಲಿಕೆ ಪ್ರಾರಂಭಿಸಿದರು ಭಕ್ತರು ಕೋಟಿ ಕೋಟಿ,
ಬಂದರು ನೈಜ ದರ್ಶನಕ್ಕೆ ಕೆಲವರು,
ಮೋಜು ಆಡಂಬರ ಪ್ರದರ್ಶನಕ್ಕೆ ಹಲವರು,
ಏನಾದರಾಗಲೀ ಖರ್ಚಾಯಿತು ಹಣ ಭಕ್ತರಲಿ,
ಬಂದು ಸೇರಿತು ಹಣ ಇತರೆ ಕಡೆಗಳಲಿ,
ಹೀಗೆ ಕಲ್ಪಿಸಿದನು ಉದ್ಯೋಗ ಭಾರತದ ದೇವರು,
ಕಡಿಮೆಯಾಗಿಯು ಸ್ವಲ್ಪ ಮಟ್ಟಿಗೆ [ಕೇಂದ್ರ ಸರ್ಕಾರಕ್ಕೆ] ಉದ್ಯೋಗ ಕಲ್ಪಿಸುವ ಚಿಂತೆ,
ಇದಕಲ್ಲವೇ ಭಾರತದ ದೇವರು ಭಾರತೀಯರಿಗೆ ಉದ್ಯಮಿ ದೇವರು.
2.11.1992-1.50 a.m.
61. ನಮ್ಮ ಮೈಸೂರು-ಬ್ಯಾಂಕ್ : ನಮ್ಮ ರಕ್ತದಲ್ಲಿರುವುದು ಮೈಸೂರ್ ಬ್ಯಾಂಕ್ ನ ಕಣಕಣ
ಕಾರಣ ನಾವಿಲ್ಲಿ ಉದ್ಯೋಗಿ, ಇರುವುದು ವಿಶೇಷಗಳು ಹಲವಿವೆ.
ಈ ಬ್ಯಾಂಕ್ ಹುಟ್ಟಿದುದು 1913 ಅಕ್ಟೋಬರ್ 2 ರಂದು
ರೂಪು ರೇಖೆ ಕೊಟ್ಟವರು ವಿಶ್ವೇಶ್ವರಯ್ಯ
ಪೋಷಿಸಿದರು ರಾಜ ಮನೆತನದವರು
ಬೆಳೆಸಿದರು ಅಂದಿನ ಮೈಸೂರು ರಾಜ್ಯದ ಗ್ರಾಹಕರು
ಇಲ್ಲಿರುವ ಉದ್ಯೋಗಿಗಳು ಭಾರತೀಯರು
ಕಾರಣ ಬಹಳ ಉದ್ಯೋಗಿಗಳಿಗೆ ಗೊತ್ತು ಹಲವು ಭಾಷೆ
ಬಹುಜನ ಕರ್ನಾಟಕದವರಾದರೂ
ಇರುವರು ಕೇರಳ ತಮಿಳುನಾಡಿನಿಂದ ಬಂದವರು
ಇತರರು ಆಂಧ್ರ-ಉತ್ತರ ಭಾರತದವರು
ಹರಡಿರುವುದು ಶಾಖೆ ಭಾರತದಾದ್ಯಂತ
ಗ್ರಾಮಗಳ ಕಂಡರೆ ಬಹು ಆಸೆ ಇದಕೆ
ಕಾರಣ ಇದಕೆ ಇಷ್ಟ ಗ್ರಾಹಕರ ಸೇವೆ
ಸಹಕಾರಿ ಸಂಘಗಳ ಮೂಲಕ ಕೊಟ್ಟ ಸಾಲ ಆಯಿತು ಮಾದರಿ
ಬಂದಿತು ರಿಸರ್ವ ಬ್ಯಾಂಕ್ ಸಲಹೆ ಪಡೆಯಲು ಉದ್ಯೋಗಿಗಳಲಿ ಜಾತಿ ಭೇದಗಳಿಲ್ಲ
ಇಟ್ಟಿರುವ ಲೆಕ್ಕ-ಪುಸ್ತಕಗಳ ವ್ಯವಸ್ಥೆ ಸುವ್ಯವಸ್ಥೆ
ಮಾಡಲು ಆಗುವುದಿಲ್ಲ ಯಾರಿಗೂ ಅವ್ಯವಸ್ಥೆ.
ಇರುವರು ಸಿಬ್ಬಂದಿ ಹತ್ತು ಸಾವಿರದ ಮೇಲೆ
ಗ್ರಾಹಕರ ಪೂರ್ತಿ ಸೇವೆಗೆ ಅಡ್ಡ ಸಿಬ್ಬಂದಿ ಕೊರತೆ
ನೀಗಿದರೆ ಆಗುವುದು ಕಳಂಕ ರಹಿತ ಸೇವೆ
ಇರುವುದು ಮುಖ್ಯ ಕಛೇರಿ ಬೆಂಗಳೂರಲಿ
ನೋಡಬೇಕು ಕಟ್ಟಡವ ದೀಪದ ಸೊಬಗಿನಲಿ
ಮುಳುಗಿರುವರು ಸಿಬ್ಬಂದಿಗಳು ಲೆಕ್ಕದ ಗುಂಗಿನಲಿ
ಇಳಿಯುವುದು ಲೆಕ್ಕದ ಮತ್ತು ಸಂಜೆ ಆರರ ಮೇಲೆ
ಅಧಿಕಾರಿಗಳಿಗೆ ಅಂಟಿಹುದು ಲೆಕ್ಕದ ಗಮ್ಮತ್ತು
ಆ ಗುಣದಿಂದ ಆಗುವುರು ಬೇಗ ಬಲು ಸುಸ್ತು
ಹಲವು ಗ್ರಾಹಕರಿಗೆ ಈ ಬ್ಯಾಂಕೇ ದೇವರು
ಕಾರಣ ಪೋಷಿಸಿ ಬೆಳೆಸಿದೆ ಈ ಬ್ಯಾಂಕ್
ನಿವೃತ್ತಿ ಉದ್ಯೋಗಿಗಳಿಗೆ ಚಿಮ್ಮುವುದು ರಕ್ತ ಈಗಲೂ ಕೂಡ
ಕಾರಣ ಸಂಘ ಸಂಸ್ಥೆಗಳ ಒಡನಾಟ
ಕೊಟ್ಟರು ಇಲ್ಲಿರುವ ರಕ್ತ ರಕ್ತ ಬ್ಯಾಂಕಿಗೆ
ಆದರು ಮಾದರಿ ಇತರೆ ಉದೋಗಿ ಸಂಸ್ಥೆಗಳಿಗೆ
ಪಡೆಯಿತು ಬಹುಮಾನಗಳ ಹದಿನೈದು ಬಾರಿ
ಕ್ರೀಡೆ-ಕಲಾ-ನಾಟಕ-ಸಾಹಿತ್ಯಗಳಲ್ಲು ನಮ್ಮ ಸಾಧನೆ
ಬಹುಮಾನಗಳು ಬಂದಿವೆ ಆಗಾಗ ಎಲ್ಲ ರಂಗದಲ್ಲಿ
ಇದೆ ಕನ್ನಡ ವಿಭಾಗ ಈ ಬ್ಯಾಂಕಿನಲ್ಲಿ
ಬೆಳೆಸಿದೆ, ಪೋಷಿಸಿದೆ ಕನ್ನಡವನ್ನು ನಾನಾ ರೀತಿಯಲಿ
ಸನ್ಮಾನಿಸಿದೆ ಕನ್ನಡ ನಾಡಿಗೆ ನುಡಿಗೆ ದುಡಿದ ವ್ಯಕ್ತಿಗಳಿಗೆ
ಇದಕಾಗಿ ಅಲ್ಲವೇ ಹೆಮ್ಮೆ ನಮಗೆ
ಇದಕಾಗಿ ಅಲ್ಲವೇ ಚಿಮ್ಮುವುದು ರಕ್ತ ಕಣ-ಕಣದಲಿ
13.11.1992
65. ಸಮಯ : ಉಪಯೋಗಿಸುವುದರಲ್ಲುಂಟು ಸಮಯ
ನಾಶವಾಗಬಹುದು ದುರುಪಯೋಗದಿಂದ
ಉದ್ದಾರವಾಗಬಹುದು ಸದುಪಯೋಗದಿಂದ
ಕಾಲಕಳೆಯಲಿಕೆ, ಪರರ ದೂಷಿಸಲಿಕೆ,
ನಿದ್ದೆ ಮಾಡಲಿಕೆ, ಮೋಜು ಮಾಡಲಿಕೆ,ಮನರಂಜನೆಗೆ,
ಹೀಗೆ ಇತ್ಯಾದಿಗಳಿಗೆ ಉಂಟು ಸಮಯ ಅಲ್ಲವೇ ?
ಇರುವುದಿಲ್ಲ ಸಮಯ ಚಿಂತನೆ ಕೇಳಲಿಕೆ, ಪೂಜೆ, ಧ್ಯಾನಗಳಿಗೆ
ವಿಚಾರ ಮಂಥನಕೆ, ಸತ್ ಸಂಗದ ಒಡನಾಟಕ್ಕೆ,
ಇದಕ್ಕೆ ಕಾರಣ ನೀನಲ್ಲ,
ನಿನ್ನ ಭವದ ಬಂಧನ, ಅರಿಷಡ್ವರ್ಗಗಳ ಆಟ ಹಾಗೆ ಮಾಡಿಹುದು.
ಇದಕಾಗಿ ಹೆದರದಿರು ಮೀಸಲಿಡು ಪ್ರತಿದಿನ ಅಲ್ಪ ಸಮಯ
ಚಿಂತನೆಗೆ, ಪೂಜೆ ದ್ಯಾನಗಳಿಗೆ, ವಿಚಾರ ಮಂಥನಕೆ, ಸತ್ ಸಂಗಗಳ ಒಡನಾಟಕ್ಕೆ
ನೋಡು ನೀ ನಂತರ, ಹೇಗೆ ದೂರವಾಗುವುವು
ಭವ ಬಂದನದಾಟ, ಅರಿಷಡ್ವರ್ಗಗಳ ಕಾಟ
ಆಗ ಉಪಯೋಗಿಸುವ ಸಮಯ
ನಿದ್ರೆ ಮಾಡಲಿಕ್ಕೆ ತನು ಪೂರ್ತಿ ದಣಿವಾದಾಗ
ಪರರ ದೂಷಿಸುವೆ ಆಗಾಗ್ಗೆ ಸಮಾಜದ ಹಿತದಿಂದ
ನಿಲ್ಲಿಸುವೆ ಕಾಲ ಕಳೆಯುವಿಕೆ
ಮನಸಿನ ಹಿತಕೆ ಹೋಗುವೆ ಮನರಂಜನೆಗೆ
ಈ ರೀತಿ ಆದರೆ ಆಗುವೆ ನೀ ದೇವ ಮಾನವ
ಇಲ್ಲದಿರೆ ವ್ಯತ್ಯಾಸವಿಲ್ಲ ನಿನಗೂ ಪ್ರಾಣಿಗೂ
ನಿಲ್ಲಿಸಲಾಗುವುದಿಲ್ಲ ಸಮಯ
ಹೋದರೆ ಬರುವುದಿಲ್ಲ ಸಮಯ
ಜೀವರಾಶಿಗಳೂ ಸಹ ಉಪಯೋಗಿಸುವುವು ಸಮಯ
ಇದ ತಿಳಿದು ತೆಗೆದುಕೊ ನಿರ್ಧಾರ
ಸಮಯ ಮಾನವನ ಪಾಲಿಗೆ ಅಮೂಲ್ಯ.
66. ಮನಸ್ಸು : ಹೇಳುವರು ಕೆಲವರು ಮನಸ್ಸು ಮರ್ಕಟ
ಇದು ಸಲ್ಲ, ನಿಜವಾಗಿ ಇರುವುದು ಜೀವರಾಶಿಗಳ
ಮನಸ್ಸಿನ ’ಕೀಲಿ’ ಆ ದೇವನ ಹತ್ತಿರ
ಕೊಡುವನು ’ಕೀಲಿ’ ಬೇರಾದಾಗ
ಭವಕ್ಕೆ, ಅರಿಷಡ್ವರ್ಗಗಳಿಗೆ ಹರಿದಾಗ ಮನಸು
ಆ ದೇವ ದೂರವಿಡುವನು ಈ ಕೀಲಿ,
ಅಂತರ್ಮುಖಿಯಾಗಿ ಮನಸು ವಿಚಾರಕೆ ಹರಿದಾಗ
ಆ ದೇವ ಹಿಡಿಯುವನು ಈ ಕೀಲಿ
’ಕೀಲಿ ಕೊಟ್ಟು, ವೈಭವವ ನೋಡುವನು
ಮನಕೆ ತೃಪ್ತಿ ಆದರೆ ಕೀಲಿ ದೇಹವ ಬಿಡಿಸಿ,
ಸೇರಿಸಿಕೊಳ್ಳುವನು ತನ್ನ’ಮೋಕ್ಷ’ದ ಜೋಳಿಗೆಗೆ ಆತ್ಮವ.
01 /11/2003 ಶನಿವಾರ-2.20 ಮದ್ಯಾಹ್ನ
1. ಖಾದಿ- ಕೈಮಗ್ಗ- ಗುಡಿ ಕೈಗಾರಿಕೆ :
ಮನೇಲಿ ಬಳಸಿ.
ದೇಶ ಉಳಿಸಿ.
ನಿರುದ್ಯೋಗ ಕಡಿಮೆ ಮಾಡಿ.
ಅವರೂ ಭಾರತೀಯರೇ.
ತರಂಗ ಪತ್ರಿಕೆ; ೪/೧೧/೨೦೦೩ ರಂದು
2.ಕನ್ನಡಿಗ
ನವಂಬರ್ ಒಂದರದು
ಮಾತ್ರ ಒಂದು ದಿನದ ಕನ್ನಡಿಗ
ಕರ್ಮವೀರ ಪತ್ರಿಕೆ; ೪/೧೧/೨೦೦೩ ರಂದು
3.ರಾಜ್ಯೋತ್ಸವ
ವರ್ಷಕ್ಕೊಮ್ಮೆ ಕೆಲವರು
ಕನ್ನಡ ಬಾರದಿದ್ದರೂ,
ವಿಷಯ-ಸಾರಂಶ ಗೊತ್ತಿಲ್ಲದಿದ್ದರೂ
ನಡೆಸಿದರು ರಜ್ಯೋತ್ಸವ
ಹಣಗಳ ಸುಲಿಗೆಯಿಂದ.
3B.ರಾಜ್ಯೋತ್ಸವ
ಹರಡಲಿ-ಬೆಳೆಯಲಿ,
ಹಳ್ಲಿ-ಹಳ್ಲಿಗಳಲಿ,
ಹೊಬಳಿ-ತಾಲ್ಲೋಕುಗಳಲಿ,
ಜಿಲ್ಲಾ ಕೇಂದ್ರಗಳಲಿ,
ವಾರ-ವಾರಗಳಲಿ,
ಪ್ರತಿ ತಿಂಗಳಿನಲ್ಲಿ,
ವರ್ಷವಿಡೀ ನಡೆಯಲಿ,
ಆಯಾ ಪ್ರದೇಶದ,
ಕನ್ನಡಿಗರ ಪ್ರತಿಭೆ
ಬೆಳಗಲಿ ಪೂರ್ತಿವರುಷವೂ
ಸರ್ಕಾರವೂ ಸ್ಪಂದಿಸಲಿ
ಹಣ ಕೊಟ್ಟು.
ಕರ್ಮವೀರ ಪತ್ರಿಕೆ; ೪/೧೧/೨೦೦೩ ರಂದು
೫. ಸಾಹಿತ್ಯ ಸಮ್ಮೇಳನದ್ಯಕ್ಷ
ಮೆರವಣಿಗೆಯಲ್ಲಿ ಬಂದು
ಬರೆದಿದ್ದು ಹೇಳಿದರು; ವಿಚಾರಗಳ ತಿಳಿಸಿದರು
ಸಮ್ಮೇಳನದಂದು.
ಸಾಕೆಂದು ಹೇಳಿ,
ಕಳುಹಿಸಿತು ಸರ್ಕಾರ, ಖಜಾನೆಗೆ ಖರ್ಚೆಂದು,
ಕೊನೆಗೆ ಮನೆಗೆ.
ಕರ್ಮವೀರ ಪತ್ರಿಕೆ; ೪/೧೧/೨೦೦೩ ರಂದು
6. ನೆರೆ-ಹೊರೆ : ಮಂಗಳವಾರ 12.30, ದಿ:04/11/2003 : ಮನೆ ಮನೆ ಹತ್ತಿರ, ಮನ ಮನ ದೂರ, ಈ ರೀತಿ ಇದೆ. ಕೆಲವು ಮನೆಗಳ ನೆರೆಹೊರೆಯವರ ಕಥೆ.
7. ಈಗಿನ ಚಿತ್ರಗಳು : ಮಡಕೆ ಮಾಡಲಿಕೆ ವರುಷ, ಒಡೆಯುವುದಕ್ಕೆ ನಿಮಿಷ. ನೋಡದೆ ತಿರಸ್ಕಾರ ಮಾಡಲಿಕೆ ನಿಮಿಷ.
೧೧. ಅಶಕ್ತ ಕಲಾವಿದ-ಸಹಕಲಾವಿದರು
ಚಿತ್ರರಂಗದವರೇ,
ಅನುಕೂಲವಂತರೇ,
ಅಭಿಮಾನಿವರ್ಗದವರೇ,
ಬೆಳಸಿ, ಪ್ರೊತ್ಸಾಹಿಸಿ, ಸಲಹಿ,
ಅಶಕ್ತ ಕಲಾವಿದ-ಸಹಕಲಾವಿದರ
ಏಕೆಂದರೆ, ಅವರ ಜೀವವೂ
ದೇಹ-ಮನಗಳ,
ನೋವುಗಳ ಗೂಡು.
9. ಭಸ್ಮಾಂಗಿ :
ದೇಹ-ಮನ-ಬುದ್ದಿಗಳ
ಶುಭ್ರತೆಯ
ಸಂಕೇತ.
ಕಸ್ತೂರಿ ಪತ್ರಿಕೆ; ೧೭/೧೧/೨೦೦೩ ರಂದು
೬. ಬೆಂಗಳೂರಿನ ಕೆಲವು ಖನ್ನಡಿಗರು
ಅನೇಕ ಬಾಷೆಗಳನ್ನು ಬೆರೆಸಿ
Mixi ಗೆ ಸೇರಿಸಿದ ಹಾಗೆ ಸೇರಿಸಿ ಮಾತನಾಡುತ್ತಾರೆ
Mixi ಖನ್ನಡ
ಬೆಂಗಳೂರಿನ ಕೆಲವು ಖ(ಕ)ನ್ನಡಿಗರು
ಕಸ್ತೂರಿ ಪತ್ರಿಕೆ; ೧೭/೧೧/೨೦೦೩ ರಂದು
11. V. R. S :
ಬಹುಪಾಲು ವರ್ಗಕ್ಕೆ ಸ್ವರ್ಗ,
ಕೆಲವರ ಪಾಲಿಗೆ Playwin.
ಲಂಚ ಕೊಟ್ಟ ಹಾಗೆ ಕೊಟ್ಟು,
ಹೊರ ಹಾಕಿದರು,
ಕೆಟ್ಟ ಹುಳಗಳ,
ಸಂಸ್ಥೆಯಿಂದ.
ಮಂಗಳ ಪತ್ರಿಕೆ; ೧೭/೧೧/೨೦೦೩ ರಂದು
೮. ಹಿಂದೆ- ಈಗ-ಮುಂದೆ
ಶನಿವಾರ ೧-೧೧-೨೦೦೩ ಮದ್ಯಾಹ್ನ ೩-೩೦
ಹಾಸಿಗೆ ಇದ್ದಷ್ಟು
ಕಾಲು ಚಾಚು
ಎನ್ನುತಿದ್ದರು
ಹಿಂದಿನವರು.
ಹಾಸಿಗೆ ದೊಡ್ಡದುಮಾಡಿ
ಕಾಲು ಚಾಚು
ಎನ್ನುತ್ತಾರೆ
ಬುದ್ದಿವಂತರು.
ಹಾಸಿಗೆ ಮೀರಿ
ಕಾಲು ಚಾಚ ಬೇಡ
ಎನ್ನುತ್ತಾರೆ
ಅನುಭವಿಸಿದವರು
ಯಾವಾಗಲೂ.
ತರಂಗ ಪತ್ರಿಕೆ; ೧೭/೧೧/೨೦೦೩ ರಂದು
13. ದೀಪಾವಳಿ :
ಬೆಳಕಿನ, ದೀಪದ-ಅಜ್ಞಾನದ
ಕತ್ತಲೆ ದೂರತಳ್ಳುವ,
ಜ್ಞಾನವ ಹೆಚ್ಚಿಸಿಕೊಳ್ಳುವ,
ಬುದ್ದಿ ಬೆಳೆಸುವ,
ದೀಪವೇ ಸಂಕೇತವಾಗಿ,
ಬೆಳಗುವ ದೀಪಾವಳಿಯಾಗಲಿ.
ಪರಿಸರ-ಶಬ್ದ-ವಾಯು,
ಮಾಲಿನ್ಯಗಳಾಗುವ,
ದೀಪಾವಳಿ ಆಗುವುದು ಬೇಡ.
ಎಲ್ಲರ ಮನ-ಮನ,
ಹ್ರದಯ-ಬುದ್ದಿ
ಬೆಳಗುವಂತಾಗಲಿ.
14. ಬರ-ಪರಿಹಾರ :
ಅ. ಭ್ರಷ್ಟರಾಜಕಾರಣಿಗಳಿಗೆ,
ಅದಿಕಾರಿಗಳಿಗೆ,
ಗುತ್ತಿಗೆದಾರರಿಗೆ,
ಚಮಚ ಹಿಂಬಾಲಿಕರಿಗೆ,
ಈ ಕೆಟ್ಟ ವಾಸನೆ
ಬಯಸುತ್ತಿರುವವರಿಗೆ,
ಯಾವಗಲೂ ಬೇಕು ಬರ ರಜ್ಯಕ್ಕೆ.
ಆ. ಯಾವಗಲೂ
ಇರಬೇಕು ಸರ್ಕಾರಕ್ಕೆ,
ಕಾರಣ, ಚುನಾವಣೆಗಳಿಗೆ,
ಹಣ-ಕೂಡಿಹಾಕಲಿಕ್ಕೆ.
16. ನಿವಾರಣೆ : ದುಂದು ವೆಚ್ಚಕ್ಕಾಗಿ, ಸರ್ಕಾರ ಕೆಲವು ಜನತೆ – ಅನುಕೂಲವಂತರು, ಸಾಹುಕಾರರು, ಮಾಡುವ ಹಣವನ್ನು ಕೂಡಿಹಾಕಿ – ಹಂಚಿದರೆ ಹೋಗುತ್ತದೆ, ಬಡತನ ನಿವಾರಣೆ ಬಹುಮಟ್ಟಿಗೆ.
17. ಬಡತನ :
ಸಮಾಜದಿಂದ
ನಿರ್ಮಿತವಾದ
ಒಂದು ಕೊಳಕು ವ್ಯವಸ್ಥೆ.
ಕೆಲಸ-ಹಣ
ಸಮನಾಗಿ
ಹಂಚಿಕೊಂಡರೆ
ಎಲ್ಲಿರುತ್ತದೆ?
ಸಮಬಾಳು
ಸಮಪಾಲು
ಇದಕ್ಕೆ ಪರಿಹಾರ.
ವಿ.ಕ; ೧೭/೧೧/೨೦೦೩ ರಂದು
18. ಸರ್ಕಾರದ ಸೂರು :
ತಳುಕು-ಬಳುಕು,
ಒದ್ದರೆ ಬೀಳುತ್ತದೆ.
ತೋರುತ್ತದೆ,
ಭ್ರಷ್ಟಾಚಾರದ
ಹಲವು ಮುಖಗಳು
ಇದಕ್ಕೆ ಬಲಿಪಶುಗಳು
ನತದೃಷ್ಟ
ಸೂರಿಲ್ಲದವರು.
೨೦. ಉದ್ಯೋಗ
ಪ್ರೌಡಶಾಲೆಯವರಿಗೆ,
ಕನ್ನಡ ಮಾದ್ಯಮ ತೆಗೆದುಕೊಂಡವರಿಗೆ,
ಕೆಲಸ ಎಂದು ಹೇಳಿತು ಸರ್ಕಾರ.
ಋಷಿಪಟ್ಟ ನಿರುದ್ಯೋಗಿಗಳಿಗೆ,
ನಂತರ ಆಯಿತು ಖಿನ್ನತೆ.
ಕಾರಣ ಸರ್ಕಾರ ಹೇಳಿತು,
ಸರ್ಕಾರಿ ಸಿಬ್ಬಂದಿ ಹೆಚ್ಚೆಂದು,
ಕಡಿಮೆಮಾಡುತ್ತಿದೆಯೆಂದು ಉದ್ಯೋಗ,
ಇಲ್ಲವೆಂದು ಹೊಸ ಉದ್ಯೋಗಳ ಸ್ರಷ್ಟಿ.
ನಡೆ ಒಂದು ಪರಿ-ನುಡಿ ಒಂದು ಪರಿ,
ನಿರುದ್ಯೋಗಿಗಳಿಗೆ ಕಿರಿ-ಕಿರಿ.
೨೧. ರಾಜಕಾರಣಿಗಳ ಏಕತೆ
ತೋರಿಸಿದರು ಜನತೆಗೆ,
ವ್ಯೆವಿದ್ಯತೆಯಲಿ ಏಕತೆ.
ತಮ್ಮ ಸಂಬಳ-ಸಾರಿಗೆ,
ಸವಲತ್ತುಗಳ ಏರಿಸಿಕೊಂಡು,
ಪ್ರತಿಭಟಿಸದೆ ಎನನ್ನೂ
ಒಕ್ಕೊರಿಲಿನಲಿ ತೋರಿಸಿತು ಏಕತೆ.
23. ಭಾಷೆಗಳು :
ಕಲಿಯಬೇಕು ಮಾತ್ರಭಾಷೆ,
ಬೇಗ ಕಲಿಯಲು, ತಿಳಿಯಲು,
ಮನೆ-ಮಂದಿ, ನೆಂಟರಿಷ್ಟರ,
ಬಂದು-ಬಳಗಗಳ, ಮನ-ಹ್ರದಯಗೆಲ್ಲಲು.
ಕಲಿಯಬೇಕು ಆಯಾ ರಾಜ್ಯದ ಭಾಷೆ,
ನೆರೆಹೊರೆಯವರ ಸಂಸ್ಕ್ರತಿ-ಸಹ ಬಾಳು ಬೆಳೆಸಲು.
ಕಲಿಯಬೇಕು ರಾಷ್ಟ್ರಭಾಷೆ,
ಸಮಯಸಮಯದಲಿ ಮಾತನಾಡಿ
ರಾಷ್ಟ್ರಾಭಿಮಾನ ತೋರಲು.
ಕಲಿಯಬೇಕು ಆಂಗ್ಲಭಾಷೆ
ಜೀವನದ ದಾರಿ ತೋರಲು.
ಮುಂದಿನ ಪೀಳಿಗೆಗೆ, ಆಂಗ್ಲಭಾಷೆಯೇ ಜೀವನದ ಭಾಷೆ.
ಈ ತರಹದ ಜೀವನದಿಂದ
ವ್ಯೆವಿದ್ಯತೆಯಲಿ ಎಕತೆ ಸಾದ್ಯ.
24. ದಳಗಳು : ಪಕ್ಷದ ಒಳಜಗಳಗಲ್ಲಿ, ವಿಭಜನೆಗಳು ಜಾಸ್ತಿ. ಎಲೆಗಳು ಉದುರಿದ ಹಾಗೆ. ವಿಲೇದೆಲೆ ಗುರುತಿದ್ದರೆ, ಆಗುವುದಿಲ್ಲ ವಿಭಜನೆ. ಕಾರಣ ಎಲ್ಲರೂ ಉಪಯೋಗಿಸುವರು ಜಗ್ಗಿ ಉಗಿಯಲಿಕ್ಕೆ.
25. ಮಿತ ಸಂತಾನ : ಅನ್ವಯಿಸುವುದಿಲ್ಲ. ಅಲ್ಪ ಸಂಖ್ಯಾತರಿಗೆ, ಶೋಷಿತ ವರ್ಗಾಕ್ಕೆ, ಕಾರಣ ಮುಂದೆ ಅವರೇ ಮತ- ಬ್ಯಾಂಕ್ ಗಳು.
26. ಖರ್ಚು-ವೆಚ್ಚ : ಅಭಿವೃಧಿಯ ಸಾಧನೆಗಳು; ಸುದ್ದಿ-ಪ್ರಚಾರಕ್ಕೆ 10 ಭಾಗ, ರಾಜಕಾರಣಿಗಳಿಗೆ 20 ಭಾಗ, ಗುತ್ತಿಗೆದಾರರಿಗೆ 10 ಭಾಗ, ಅಧಿಕಾರಿಗಳಿಗೆ 10 ಭಾಗ, ಹಿಂಬಾಲಕರಿಗೆ 5 ಭಾಗ, ಚಮಚಾಗಳಿಗೆ 5 ಭಾಗ, ಚೇಲಗಳಿಗೆ-ಉಧ್ಘಾಟನೆಗೆ 5 ಭಾಗ, ಉಳಿದಿದ್ದು ಅಭಿವೃಧ್ಧಿಯ ಕಾರ್ಯಕ್ಕೆ. ಆದರೆ ಅದರ ವಯಸ್ಸು ಬರೀ ಎರಡು ವರ್ಷ.
05/12/2003 -ಬುಧವಾರ-4.p.m.
27. ಸಮಸ್ಯೆ-ಪರಿಹಾರ-ಕಾರಣ : ಕಂಡು ಹಿಡಿಯಿತು ಪರಿಹಾರ, ಕಾನೂನುಗಳ ಪರಿಪೂರ್ಣ ತಿಳುವಳಿಕೆ ಇಲ್ಲದೆ, ನ್ಯಾಯಾಲಯದಿಂದ ಬಂದಿತು ಆದೇಶ, ಪರಿಹಾರ-ನೀತಿ-ನಿಯಮ ಸರಿಪಡಿಸಿ ಎಂದು. ಅದಕ್ಕೊಂದು ಸರ್ಕಾರ ರಚಿಸಿಬಿಟ್ಟಿತು ಸಮಿತಿ. ಕಾರಣ, ಪರಿಹಾರ ಸರಿಪಡಿಸದೆ ಕಾಲ ಕಳೆಯಲೆಂದು ಸರ್ಕಾರದ ಖರ್ಚಿನಲಿ.
34. ಪಕ್ಷದ ಗುರಿ : ನಡೆಸುವ ಪಕ್ಷಕ್ಕೆ, ತೊಡರುಗಾಲು ಹಾಕಿ, ಎಡವಿ ಬೀಳಿಸಿ, ತಮಾಷೆ ನೋಡುವುದು, ಕುಡಿಯುವ ನೀರನು ಗಲೀಜು ಮಾಡಿದ ಹಾಗೆ.
37. ಸರ್ಕಾರದ ಪ್ರಶ್ನೋತ್ತರ : ಸುದ್ದಿಗಾರರ ಪ್ರಶ್ನೆಗಳಿಗುತ್ತರ. ಬಡತನ ಮಾಡುತ್ತಿದ್ದೇವೆ, ದಾರಿದ್ರ್ಯ ಹೋಗುತ್ತೆ. (ನಮ್ಮದು) ನಿರುದ್ಯೋಗ ಯೋಜನೆಗಳಲ್ಲದೆ. ಹಸಿವು ನೀಗಿಸುತ್ತೆದ್ದೇವೆ (ನಮ್ಮದು). ಭ್ರಷ್ಟಾಚಾರ ಹೋಗುವುದಿಲ್ಲ. ಏಕೆ? ಅದು ನಮ್ಮಗಳ ರಕ್ತ.
39. ಇಲ್ಲವೇ ಇಲ್ಲ : ಪ್ರತಿಭಟನೆ, ಯಾವ ಶಾಸಕರಿಂದಲೂ ಇಲ್ಲ. ಕಾರಣ ಮಸೂದೆ ಒಪ್ಪಿಗೆ, ತಮ್ಮ ತಮ್ಮ ಸವಲತ್ತುಗಳದ್ದು. ಗುರುವಾರ 06/01/2003- 4.50 p.m.
40. ನಿರುದ್ಯೋಗ : ಶನಿವಾರ 6.30 p.m-08/01/2003 :ವಿದ್ಯಾವಂತರದು ಒಂದು ತರಹ, ಅವಿದ್ಯಾವಂತರದು ಮತ್ತೊಂದು ತರಹ. ಹತಾಷೆ, ಖಿನ್ನತೆ, ಬಡತನ, ಇತ್ಯಾದಿ ಎಲ್ಲಾ ಒಂದೇ. ರೋಷ, ಬಿಸಿ ರಕ್ತ, ಛಲ ಇವುಗಳಲ್ಲಿ ಒಂದೇ. ಅವಿದ್ಯಾವಂತರಿಗೆ, ಚಿಕ್ಕಪುಟ್ಟ ಹೇಯಕೃತ್ಯ ದಾರಿ. ವಿದ್ಯಾವಂತರಿಗೆ, ಅವರಿಗೆ ನಾನಾ ದಾರಿಗಳು, ಬಲು ಅಪಾಯಕಾರಿ ದಾರಿಗಳು ಸಮಜಕ್ಕೆ. ಹಂಚಿ-ಕೆಲಸಕೊದುವುದೊಂದೇ ಮಾರ್ಗ.
41. ಟೈಂ-ಬಾಂಬ್ :
ಮಾಡಬಾರದ್ದನ್ನು ಮಾಡಿದರೆ -ಬಾಂಬ್ ಇಡೋದು, ಆಗಬಾರದ್ದು ಆಗುತ್ತೆ- ಹಿಂಸೆ, ಬರಬರದ್ದು ಬರುತ್ತೆ-ಜೈಲು, ಹೊಗಬಾರದ್ದು ಹೋಗುತ್ತೆ-ಕೆಲಸ. ಇದು ಸತ್ತು ಹೇಳಿದವರ ಕಥೆ ಆದರೆ, ಮಾಡಬಾರದ್ದನೂ ಮಾಡಿದರೆ-ಭ್ರಷ್ಟಾಚಾರ, ಆಗಬಾರದ್ದು ಆಗಬಹುದು -ಸಂಸಾರಕ್ಕೆ ಹಿಂಸೆ, ಬರಬಾರದ್ದು ಬರಬಹುದು-ಆಪತ್ತು-ವಿಪತ್ತು, ಹೋಗಬಾರದ್ದು ಹೋಗಬಹುದು -ಜೀವ.
ಇದು ಭ್ರಷ್ಟಾಚಾರಿಗೆಳಿಗೆ ಅನ್ವಯಿಸುತ್ತೆ, ಇನ್ನು ಮುಂದೆ. ಇದು ಮುನ್ನೆಚ್ಚರಿಕೆಯ ಗಂಟೆ-ಎಲ್ಲರಿಗೂ, ಭ್ರಷ್ಟರಿಗೂ-ಸತ್ಯ ಹೇಳುವವರಿಗೂ, ಸತ್ಯವಂತರಿಗೆ ಕಾಲವಿದಲ್ಲ-ಕಲಿಯುಗ. ಭಾನುವಾರ 09/01/2003-12.23 p.m
42. ಹಳೇಪಕ್ಷ : ತತ್ವಕ್ಕೆ ತಿಲಾಂಜಲಿ ಇಟ್ಟು, ಚೇಲಾ-ಹಿಂಬಾಲಕರಿಗೆ ಜಾಗಕೊಟ್ಟು, ಹೊಗಳುಭಟ್ಟರಿಗೆ ಜವಾಬ್ದಾರಿ ಕೊಟ್ಟು, ಮತದಾರರಿಗ ಹಣ ಕುಡಿತ-ಬಟ್ಟೆ ಕೊಟ್ಟು, ಆಸೆ-ಆವಿಷ ತೋರಿಸಿ, ಮತಗಳಿಸಿ ಅಧಿಕಾರದಲ್ಲಿರುವ ಹಳೇಪಕ್ಷ. ಮರ ಮುಪ್ಪಾದರೂ, ಹುಳಿ ಮುಪ್ಪೇ. ಭ್ರಷ್ಟಾಚಾರವೇ ಪಕ್ಷದ ಹುಳಿ.
43. ಅಧಿವೇಶನ – ಸಂಸತ್ : ಕೂಗಾಟ-ಕಿರುಚಾಟಕ್ಕೆ ಕೆಲವು ದಿನಗಳು, ಸಭಾತ್ಯಾಗ ಮಾಡಿ ಕಾಲಕಳೆದದ್ದು ಹಲವು ದಿನಗಳು, ಕಾರ್ಯ-ಕಲಾಪ ಮಾಡಿ ನಡೆಸಿಕೊಟ್ಟದ್ದು ಎರಡೇ ದಿನ.
44. ಮಿತ್ರ-ಪಕ್ಷಗಳು : -NDA-Non Defined Allieance, ಯಾವಾಗ ಬೇಕಾದರೂ ಸೇರಬಹುದು, ಯಾವಾಗ ಬೇಕಾದರು ಬಿಡಬಹುದು. ರೀತಿ-ತತ್ವ-ನಿಯಮಗಳಿಲ್ಲ. ಒಂದು ಗುರಿ ಮಾತ್ರ ಇದೆ. ಐದು ವರ್ಷ ಕುರ್ಚಿ ಬಿಟ್ಟು ಏಳಬಾರದೆಂದು ಮತ್ತೊಂದು ಗುರಿ, ಸವಲತ್ತು ಅನುಭವಿಸುವುದು. 05/04/2003- 4 p.m.
45. ಸಂಸತ್-ಸಾಧನೆ : ತಮ್ಮ ಸವಲತ್ತುಗಳ ಏಕತೆಗೆ ಒಪ್ಪಿಗೆ, ಏಕದಿನದಲ್ಲಿ ಅನೇಕ ಮಸೂದೆಗಳಿಗೆ ಒಪ್ಪಿಗೆ, ಸ್ಮರಿಸಿ-ಮೌನ ಆಚರಿಸಿ ರಜಗಳಿಗೆ, ಪ್ರತಿಭಟನೆಗಳ ಸಂಖ್ಯೆಗಳ ಏರಿಕೆ ಮತ್ತು ಸಭಾತ್ಯಾಗದ ದಿನಗಳ ಏರಿಕೆ. 6/11/2003 -2.6 p.m.
46. ಹುಸಿ ಬೆದರಿಕೆ : ಮುನ್ನೆಚ್ಚರಿಕೆಯ ಸಂಕೇತ, ಭ್ರಷ್ಟರಿಗೆ, ರಾಜಕಾರಣಿಗಳಿಗೆ, ವಿದ್ಯಾವಂತ ಯುವಪೀಳಿಗೆಯ, ಬುದ್ದಿವಂತರ ಹಿತೋಕ್ತಿ. ಎಚ್ಚರದಿಂದ ಇದ್ದವ ಗೆದ್ದ. ಭಾನುವಾರ : 03/11/03- 12.44 p.m.
47. ಮಲಬದ್ದತೆ : ಅನುಭವಿಸಿದವರಿಗೆ ಗೊತ್ತು. ಹೋಗದಿದ್ದರೆ ವೇದನೆ, ಹೆಚ್ಚಾದರೆ ಹಿಂಸೆ, ಆಸಮಯ ಬಂದಾಗ ಕೋಟಿಕೊಟ್ಟರು ಮಣ್ಣಿಗೆ ಸಮಾನ. ಆ ದೇವರು ಬಂದರೂ ನೋಡಲಿಕ್ಕಾಗದ ಸಮಯ. -ಶನಿವಾರ : 15/11/03-4.20.p.m.
48. ಸಂಶಯ : ತನಗೆಯೇ ರಕ್ಷಣೆ ಇಲ್ಲದ ದೇವರು ಭಕ್ತರನ್ನು ರಕ್ಷಿಸಿಯಾನೆ? ಗುಡಿ ಬಾಗಿಲಿಗೆ ಬೀಗ ಏಕೆ? -ಮಂಗಳವಾರ : 18/11/03
49. ನನ್ನ ದೇವರು : ನನ್ನನ್ನು ರಕ್ಷಿಸುತ್ತಾನೆ, ಕಾರಣ ನನ್ನ ದೇವರು ಎನ್ನ ಹೃದಯದಲ್ಲಿದ್ದಾನೆ. ಕಳ್ಳ ಕಾಕರ ಭಯವಿಲ್ಲ. -ಮಂಗಳವಾರ : 18/11/03-3.00p.m.
50. ಗ್ರಹಗಳು : ಸರ್ಕಾರಿ ಅಭಿವೃದ್ಧಿ ಕಾರ್ಯದ ಹಣಗಳನ್ನು ತಿಂದು, ತೇಗಿ, ಮೋಸಮಾಡುವವರೇ.- ಮಂಗಳವಾರ : 18/11/03 : 3.30 p.m.
51. ಸರ್ಕಾರಿ ಗೃಹಗಳು : ಸರ್ಕಾರಿ ವಸತಿ ಗ್ರಹಗಳೆಂದು ಬರೆದಾಗಲೇ ಅರ್ಥವಾಯಿತ್ತು ಸರ್ಕಾರದ ಗ್ರಹಗಳಿಂದಾದ ಗೃಹಗಳೆಂದು.- ಶನಿವಾರ :22/11/03 -1.00p.m.
52. ಪತ್ರಿಕೆ : ಮಾನಸಿಕೆ, ದೈಹಿಕ, ಬೌದ್ಧಿಕ ಬೆಳವಣಿಗೆಗೆ ಪೂರಕವಾಗುವ ಸಿಹಿ ಸುದ್ದಿಗಳಿಗಿಂತ, ಕ್ರೌರ್ಯ, ಹಿಂಸೆ, ಅನಾಚಾರ ಇತ್ಯಾದಿ, ಇತ್ಯಾದಿ, ಕೆಟ್ಟಸುದ್ದಿಗಳಿರುವ ಸುದ್ದಿಗಳೇ ಜಾಸ್ತಿ. ಈಗಿರುವ ಪತ್ರಿಕೆಗಳಲ್ಲಿ. -ಶನಿವಾರ : 22/11/03 -1.50p.m
53. ಬೆಳವಣಿಗೆ: ದೇಹದ ಬೆಳವಣಿಗೆಗಿಂತ, ಮಾನಸಿಕ, ಬೌದ್ಧಿಕ, ಬೆಳವಣಿಗೆ ಹಿತಕಾರಿ, ಮಾನವನಿಗೆ ತನ್ನ ಏಳಿಗೆಗೆ, ಮುಕ್ತಿ ಸಾಧನೆಗೆ. -ಶನಿವಾರ : 22/11/03 – 3.00p.m.
54. ಸಹಾಯ: ಮಾನಸಿಕ, ಬೌದ್ಧಿಕ ಬೆಳವಣಿಗೆ ಇಲ್ಲದ ವ್ಯಕ್ತಿಗೆ ಕೊಟ್ಟ ಸಹಾಯ, ನೀರಿನಲ್ಲಿ ಹುಣಸೇಹಣ್ಣು ತೊಳೆದಂತೆ. -ಶನಿವಾರ : 22/11/03 – 3.40p.m
55. ಗುಣವಂತರು : 29/11/03 : 0.30 a.m. : ಮಣ್ಣು ಭೂಮಿಯಲ್ಲಡಗಿರುವ ಚಿನ್ನದಂತೆ, ಸಮಾಜದಲ್ಲಿರುವ ಬಹಳ ಜನಗಳ ಕೆಟ್ಟ ಹುಳಗಳ ನಡುವೆ ಇದ್ದಾರೆ. ಚಿನ್ನ ತೆಗೆಯಲು, ಮಣ್ಣೂ ಬೇರ್ಪಡಿಸುವ ಹಾಗೆ, ಸಮಾಜದ ಕೆಟ್ಟ ಹುಳುಗಳ ತೆಗೆದು ಹಾಕುವುದು ಸಾಧ್ಯವೇ? ಅಷ್ಟೇ ಬಲುಕಷ್ಟ, ಗುಣವಂತರ ಹುಡುಕುವುದು. : ಶನಿವಾರ.
56. ಗುಣವಂತರು : 29/11/03- 1.00a.m. : ಸಮಾಜದಿಂದ ದೂರವಾಗಿಹರು, ಏಕಾಂಗಿಯಾಗಿಹರು. ನೆಮ್ಮದಿ, ಶಾಂತಿಯಲ್ಲಿದ್ದು ಪ್ರಚಾರ ಪ್ರಿಯರಿಂದ ದೂರವಾಗಿ, ಏಕಾಂಗಿಯಾಗಿಹರು. -ಶನಿವಾರ.
57. ಏನಾಗುತ್ತೆ? :29/11/03 -ಶನಿವಾರ : 1.20. a.m.: ಮನಸ್ಸು, ಆರೋಗ್ಯ, ಬುದ್ದಿ, ಕಲ್ಮಷವಾಗಿರುತ್ತೆ ಸದಾ, ನೆಮ್ಮದಿಶಾಂತಿ ಇಲ್ಲವಾಗುತ್ತೆ. ರಾಜಕಾರಣಿಯಾದವನಿಗೆ.
ಏನು ಮಾಡಬೇಕು : ಆಯುರಾರೋಗ್ಯಕ್ಕೆ ವ್ಯಾಯಾಮ, ಯೋಗ, ಮಾನಸಿಕ ಬೆಳವಣಿಗೆಗೆ ಪ್ರಾರ್ಥನೆ, ಬುದ್ದಿ ಬೆಳವಣಿಗೆಗೆ ಸದ್ಗ್ರಂಥಗಳ ಓದು. -ಬೆ.ಜಾವ. 1.35 a.m.
58. ಮಾನಸಿಕ ಪೂಜೆ: 29/11/03- 1.50 a.m. ಬೆ.ಜಾವ : ಶನಿವಾರ : ಮಾನಸಿಕ ಗೊಂದಲವಿಲ್ಲಗೆ, ಏಕಾಂತವಾಗಿ, ವ್ರತ ನಿಯಮ, ಬಿಗಿಪಟ್ಟುಗಳಿಲ್ಲದೆ, ಏಕಾಗ್ರತೆಯಿಂದ, ಪರಿಶುದ್ಧ ಭಕ್ತಿಯಿಂದ, ತೃಪ್ತಿಯಿಂದ, ಆನಂದವಾಗಿ ಮಾಡಬಹುದಾದ ಪೂಜೆ.
59.ಅದೃಷ್ಟ : 29/11/03 -ಶನಿವಾರ : ಬೆ.ಜಾವ 2.30. a.m.. : ಬಹಳ -ಬಹಳ ಜನ, ಗೆದ್ದಿಹರು- ಗೆಲ್ಲುತ್ತಿಹರು, ಭಗವಂತನೆಂಬ ನಂಬಿಕೆಯ, ಅದೃಷ್ಟವ ನಂಬಿ-ನಂಬಿ. ಸೋತವರನೊಬ್ಬರನೂ ಕಾಣೆ. ಆ ದೇವನ, ನಂಬಿ-ಬಿಟ್ಟವರು ಕೆಟ್ಟದರಿಹರು. ಆದರೆ, ನಂಬಿ-ಬಿಗಿಹಿಡಿದವ ಕೆಟ್ಟವರಿಲ್ಲ. ಯಾವಾಗಲೂ ಗೆದ್ದವರೆ ಮಾನಸಿಕ-ಬುದ್ದಿ ಹಿಡಿತವ ಇಟ್ಟುಕೊಂಡವ, ನೆಮ್ಮದಿ ಶಾಂತಿ ಎಂಬ ಅದೃಷ್ಟವ ಗೆದ್ದ, ಇದುವೇ ಆ ದೇವನ ಅದೃಷ್ಟ.
60. ಪ್ರಚಾರಕ: 29/11/03 -ಶನಿವಾರ- 2.35.a.m. ಬೆ.ಜಾವ : ಆಗಿ ಗೆಲ್ಲಬೇಡ ಜೀವನವ. 6ನೇ ಇಂದ್ರಿಯನೆಂಬುದಾಗಿ ಬಂದು, ಎಚ್ಚರಿಕೆ ಕೊಟ್ಟಾಗ, ಅದನ್ನು ನಂಬಿ-ನಂಬಿ ಮುನ್ನಡೆ ಇಡು. ಅದೇ ನಿನ್ನ ಪಾಲಿನ ಪ್ರಚಾರಕ.
61. ಚಿತ್ರಾನ್ನ : 29/11/03-ಶನಿವಾರ-2.50 a.m. ಬೆ.ಜಾವ : ಆಗಿಹುದು ಎನ್ನಮನ ಚಿತ್ರಾನ್ನ ರೀತಿಯಲಿ. ನಾನಾ ವಿಚಾರಗಳು ಮನ ಹೊಕ್ಕು, ನಿರ್ಧಾರ ತೆಗೆದುಕೊಳ್ಳಲಾರದೆ, ಬಗ್ಗಡವಾಗಿರುವ ನೀರಿನಂತೆ, ಮನಸ್ಸು ಆಗಿಹುದು ಚಿತ್ರಾನ್ನ.
62. ಆಗು : 29/11/2003 -ಶನಿವಾರ- 3.00 a.m. ಬೆ.ಜಾವ : ಸದಾ ಅಂತರ್ಮುಖಿಯಾಗಿದ್ದಾರೆ ಏಕಾಂಗಿ ಆಗು. ಮನಕೆ ಹಿತ-ಬುದ್ದಿಗೆ ಚುರುಕು ಚಿಂತನಕ್ಕೆ ಗೌರವ.
63. ಆಗಬೇಡ : 29/11/2003 –ಶನಿವಾರ : 3.25. a.m -ಬೆ.ಜಾವ : ಏಕಾಂಗಿ, ಬಹಿರ್ಮುಖಿ ಆಗಿದ್ದಡೆ. ಮನಸು ಕಲುಷಿತ ಆಗುತ್ತಿರುವುದು, ಬುದ್ದಿ ವಿಕಲ್ಪಿತ ಆಗುತ್ತಿರುವುದು, ಏಕಾಗ್ರತೆ ಇಲ್ಲದೆ, ದೇಹ-ಮನಸ್ಸು-ಬುದ್ದಿ ಚಡಪಡಿಸುತ್ತಿರುವುದು ಯಾವಗಲೂ.
64.ವಿಶ್ವಸಂಸ್ಥೆ: 29/11/2003 -ಶನಿವಾರ- 4.00 a.m. ಬೆ.ಜಾವ : ಇದು ಹೆಸರಿಗೆ ಮಾತ್ರ, ಐದು ರಾಷ್ಟ್ರಗಳ ಹತೋಟಿಯ ಸಂಸ್ಥೆ. ಉಳಿದ ರಾಷ್ಟ್ರಗಳು ನಾಮಕಾವಸ್ಥೆ. ಎಲ್ಲ ರಾಷ್ಟ್ರಗಳೂ ಸದಸ್ಯರೇ, ಜೀವಗಳಿಲ್ಲದ ಬೊಂಬೆಗಳಂತೆ. ರಾಷ್ಟ್ರಪಿತಗಳು ಹುಟ್ಟಿದಹಾಗೆ, ವಿಶ್ವಪಿತ ಇನ್ನು ಹುಟ್ಟಿಲ್ಲ. ಹುಟ್ಟಿದ್ದರೂ ಈ ಗೊಂದಲಮಯ ಪ್ರಪಂಚದಲ್ಲಿ ಏಕಾಂಗಿಯಾಗಿಹರು ಯಾರ ಗೊಡವೆಯೂ ಬೇಡವೆಂದು. ಕಾಯಬೇಕು ವಿಶ್ವಪಿತನಿಗಾಗಿ, ಈ ವಿಶ್ವದ ಅಭಿವೃದ್ಧಿಗಾಗಿ. ಈಗಿರುವುದು ನಾಟಕೀಯ ಸಂಸ್ಥೆ.
65. C.B.I :- 29/11/2003 -ಶನಿವಾರ – ಬೆ.ಜಾವ.4.15. a.m. :ಜನತೆಗೆ ಹುಸಿಬಾಂಬ್ ರೀತಿ ಹೆದರಿಸಲಿಕೆ ಸರ್ಕಾರಕ್ಕೆ ಇರುವ ಏಕೈಕ ಬ್ರಹ್ಮಾಸ್ತ್ರ. ರಾಜ್ಯ ಸರ್ಕಾರದ ಕೈಲಿ ಬೀಗದ ಕೈ. ಕೇಂದ್ರ ಸರ್ಕಾರದ ಕೈಲಿ ಬೀಗ. ಇದುವೇ C.B.I. ನ ಕೈಲಿ ಮಾಡಿಸುವ ಕುತಂತ್ರ.
66. ಆಸೆಗಳು ಬೇಡ :29/11/03 – ಶನಿವಾರ – 12.35 p.m. : ಆಡಂಬರಕೆ, ವೈಭೋಗಕೆ, ಬಹಿರ್ಮುಖವಾಗಿ ತೋರಿಸಿದಡೆ, ಕುತ್ತಾಗಬಹುದು ಜೀವಕೆ.
67.ಗಣಪತಿ : 29/11/03 – ಶನಿವಾರ : 12.35 p.m. ಮದ್ಯಾಹ್ನ : ಗಣ ಎಂದರೆ ಸಮೂಹ, ಪತಿ ಎಂದರೆ ಒಡೆಯ. ಅಂದರೆ ಹಿರಿಯರ ಒಪ್ಪಿಗೆ-ಆದೇಶವೇ ಗಣಪತಿ ಪೂಜೆ : ಮೊದಲ ಪೂಜೆ ಆಗ ನಿಮ್ಮ ಎಲ್ಲ ಕೆಲಸಗಳು -ನಿರ್ವಿಘ್ನ.
68. ಆಸೆಗಳು ಬೇಕು : 29/11/03 – ಶನಿವಾರ 12.42. p.m. ಮದ್ಯಾಹ್ನ : ವಿಶ್ವದ ಅಭಿವೃದ್ಧಿಗೆ, ದೇಶದ ಏಳಿಗೆಗೆ, ರಾಜ್ಯದ ಅಭ್ಯುದಯತೆ, ಸಮೂಹದ ಹಿತ-ಬೆಳವಣಿಗೆಗೆ.
69. ದಾನ : 29/11/03 – ಶನಿವಾರ : ಅನುಕೂಲವಂತರಿಗೆ ದೇವರು ಕೊಟ್ಟವರ. ಸದುಪಯೋಗಪಡಿಸಿಕೊ. ನಾವು ದೇವನಿಗೆ ತೀರಿಸುವ ಹರಕೆಯಿದು. ಮನ ಹಗುರಗೊಳಿಸಲು, ಸುಬ್ಬುದ್ದಿ ಪ್ರಚುರ ಪಡಿಸಲು, ದೇವರು ಕೊಟ್ಟ ಕೊಡುಗೆ. ಕೂಡಿಟ್ಟು ಹಾಳು ಮಾಡಬೇಡ. ಈ ಕೊಡುಗೆ ಎಲ್ಲರಲೂ ಇಲ್ಲ. ಬಡವರ-ಅಶಕ್ತರ ಹೃದಯದ ಬಡಿತವ ಸ್ವಂದಿಸುವವನೇ ದಾನಿ.
ಸಮಾಜವು, ಇತರರೂ ಸಹ ಅನುಕರಿಸಲು ಸ್ವಂದಿಸಲುಬೇಕು ದಾನ ಪ್ರಚಾರ.
70. ದಾನ :29/11/03 – ಶನಿವಾರ 1.15. p.m. ಮದ್ಯಾಹ್ನ : ಒಳ್ಳೆಯ ಕಾರ್ಯಕ್ಕೆ ಮಾಡು. ಮನಸ್ಸು ಚಂಚಲತೆ ಆಗುವ ಮುನ್ನ, ಬುದ್ದಿ ವಿಕಲ್ಪವಾಗುವ ಮುನ್ನ, ಎಡಗೈಗೆ ಗೊತ್ತಾಗುವ ಮುನ್ನ, ಹೃದಯ ಸ್ಪಂದಿಸಿ ’ಕೊಡು’ ಎಂದಾಗ ಕೊಡು ದಾನ. ಪ್ರಚಾರಕೆ-ಆಡಂಬರಕ್ಕೆ-ಪ್ರತಿಷ್ಟತೆ ತೋರಿಸಲು ಬೇಡ.
71.ದಾನ: 29/11/03 – ಶನಿವಾರ 1.35.p.m. ಮದ್ಯಾಹ್ನ : ಮಾಡುವರು ಬಡವರು, ಅನುಕೂಲವಂತರಲ್ಲದವರು, ಅಶಕ್ತರು, ಕೆಲವು ಸಲ ಕೈಲಾದ ಮಟ್ಟಿಗೆ, ಕಾರಣ ಹೃದಯ ಸ್ಪಂದನ.
72. ಗಣಪತಿ-ಅರ್ಥ: 29/11/03 – ಶನಿವಾರ : ಸಮೂಹದ ಒಡೆಯನೇ ಗಣಪತಿ. ಮನೆಯಲಿ ಹಿರಿಯರು ಗಣಪತಿ, ಸಭೆಯಲಿ ಅಧ್ಯಕ್ಷರು ಗಣಪತಿ. ರಾಜ್ಯಕ್ಕೆ ರಾಜ್ಯಪಾಲರು ಗಣಪತಿ. ದೇಶಕ್ಕೆ ರಾಷ್ಟ್ರಪತಿ ಗಣಪತಿ. ಗುಂಪಿಗೆ ಒಡೆಯನೆ ಗಣಪತಿ. ಒಪ್ಪಿಗೆ-ಅಪ್ಪಣೆ-ಆದೇಶಗಳು-ಹಿತೋಕ್ತಿಗಳು, ಅನುಭವ ಮಾತುಗಳೇ ಸಂದೇಶಗಳು. ಅದರಂತೇ ನಡೆಯುವುದೇ ಗಣಪತಿ ಪೂಜೆ. ಆಗ ಎಲ್ಲ ಕೆಲಸಗಳೂ ನಿರ್ವಿಘ್ನ. ಕಾರಣ ಬರುವರು-ಹಿಂದಿರುವರು ಹಿರಿಯರು ನಮ್ಮ ಕೆಲಸ ಕಾರ್ಯಗಳಿಗೆ ಸಹಾಯ ಮಾಡಲು.
73. ಮುಜರಾಯಿ ಇಲಾಖೆ: 29/11/03 – ಶನಿವಾರ- 11.51.p.m. ರಾತ್ರಿ : ಹಿಂದೂ ದೇವಾಲಯಗಳಿಂದ ಬಂದ ಹಣ, ಹಿಂದೂ ದೇವಾಲಯದೇಗಳ ಅಭಿವೃದ್ಧಿಗಲ್ಲ. ಅಲ್ಪಸಂಖ್ಯಾತರ ಗುಡಿ-ದೇಗುಲಗಳಿಗೆ. ಯಾರದೊ ದುಡ್ಡು ಎಲ್ಲಮ್ಮನ ಜಾತ್ರೆ ರೀತಿ.
74. ಅಲ್ಪಸಂಖ್ಯಾತರು : 29/11/03 : 11.55 p.m.ರಾತ್ರಿ : ಸರ್ಕಾರದ ಹಣದಿಂದಲೇ ಬದುಕಬೇಕೆಂಬ, ನಿರ್ಧಾರ ತೆಗೆದುಕೊಂಡಿರುವ, ಮುಖ್ಯವಾಹಿನಿಗೆ ಸೇರಲು ಇಚ್ಚಿಸದಿರುವವರು.
75. ಉನ್ನತವರ್ಗದವರು : 29/11/03 : – ಶನಿವಾರ 12.00.p.m. ರಾತ್ರಿ : ಹೇಗಿದ್ದರೂ, ಎಲ್ಲಿದ್ದರೂ, ಬದುಕುವ ದಾರಿಯ ಕಂಡುಕೊಂಡವರು. ಸರ್ಕಾರದ ಸಹಾಯ ನಂಬದವರು.
76. ಗಣಕಯಂತ್ರ : 30/11/03 -ಭಾನುವಾರ -ಬೆಳಗಿನ ಜಾವ 6.00.a.m. : ಕಂಡುಹಿಡಿದ ಮೇಲೆ ಸಿಕ್ಕಿತು, ಕೆಲಸ ಅರ್ಹತೆ ಆಧಾರದ ಮೇಲೆ. ಜಾತಿ ಭೇದಗಳಿಲ್ಲ-ಮೀಸಲಾತಿ ಪದ್ದತಿಇಲ್ಲ. ಅರ್ಹತೆ ಇದ್ದವ ಗೆದ್ದ. ಸರ್ಕಾರ ನಂಬಿದವ ಸೋತ ಸುಣ್ಣಾದ. ಕೊನೆಗೂ ಆ ದೇವನೆ ಕೊಟ್ಟ ತೀರ್ಪು. `ಅರ್ಹತೆಯೇ ಆಧಾರ’ ಎಂದು.
77.ಬಡತನ : 01/12/03 : ಸೋಮವಾರ 4.00.p.m.: ಇರುವುದು ಉಳ್ಳವರಲ್ಲಿ, ಮಾನಸಿಕ ಬಡತನ, ಬುದ್ದಿಯ ಬಡತನ, ಹೃದಯ ಸ್ವಂದನದ ಬಡತನ, ಇದು ಹೋದರೆ, ಇಲ್ಲವಾದರೆ ಆರ್ಥಿಕವಾಗಿ ಇಲ್ಲದವರ ಬಡತನ ಹೋಗುತ್ತದೆ. ಕಾರಣ, ಉಳ್ಳವರು ಕೊಡುವರು ಧನ-ದಾನ-ಕಾಣಿಕೆ ಇಲ್ಲದವರಿಗೆ, ಹೃದಯ ಸ್ವಂದಿಸುವುದರಿಂದ, ಮಾನಸಿಕ ಬೆಳವಣಿಗೆಯಿಂದಾಗಿ, ಬುದ್ದಿ ವಿಸಾಲವಾಗುವುದರಿಂದ, ಈಗಲೂ ಇಲ್ಲದವರೂ ಕೆಲವುಸಲ ಕೊಡುವರು, ಮತ್ತೊಬ್ಬ ಇಲ್ಲದವರಿಗೆ ಕೈಲಾದಷ್ಟು ಮಟ್ಟಿಗೆ, ಕಾರಣ ಅವರ ವಿಶಾಲ ಹೃದಯದಿಂದಾಗಿ.
78. ಅಭಿವೃದ್ಧಿಗೆ ಹಣ: 30/11/03-ಭಾನುವಾರ : ಅನೇಕ ಆದಾಯ-ಸಾಲದಿಂದ ಬಂದ ಹಣವ, ಸರ್ಕಾರ ತಿಂದು ತೇಗಿ, ಭ್ರಷ್ಟಾಚಾರರು ಉಳಿಸಿಬಿಟ್ಟ ಹಣ ಅಭಿವೃದ್ಧಿಗೆ.
79. ಬಂಡಾಯಕೋರರು : 30/11/03 – ಭಾನುವಾರ : 0.29 a.m. : ಸರ್ಕಾರದ ಫಲ. ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದೇ, ಪೂರ್ವಾಪರ ಯೋಚನೆ ಇಲ್ಲದೇ, ಸೃಷ್ಟಿಸಿದ ನಿರುದೋಗ್ಯದ ಫಲ. ವಿದ್ಯಾವಂತ ನಿರುದ್ಯೋಗಿಗಳ ಕೈವಾಡದ ಫಲ. ’ಮಾಡಿದ್ದುಣ್ಣೋ ಮಹರಾಯ’ ಏ ಸರ್ಕಾರ|
80. ಎಚ್ಚೆತ್ತುಕೊಳ್ಳಿ- ಮೀಸಲಾತಿ ನಂಬಿರುವವರೆ! : 30/11/03 – ಭಾನುವಾರ : 9.05 a.m.: ಖಾಸಗಿ ಸಂಸ್ಥೆಗಳಲ್ಲಿ-ಮೀಸಲಾತಿ : ಅರ್ಹತೆಯೇ ಆಧಾರ ಖಾಸಗಿ ಸಂಸ್ಥೆಗಳಲ್ಲಿ, ಮೀಸಲಾತಿ ಕೊಟ್ಟರೆ ಕೆಲಸ ಮಾಡುವವರಾರು? ನಷ್ಟವಾದರೆ ತುಂಬಿ ಕೊಡುವವರಾರು? ಖಾಸಗಿಯಲ್ಲಿ ಅರ್ಹತೆಯವರಿಗೂ ತರಬೇತಿಗಳುಂಟು. ಗೆದ್ದವರು ಉಳಿಯುತ್ತಾರೆ. ಸೋತವರಿಗೆ ಬಟ್ಟೆ-ಸಂಬಳ- ಸವಲತ್ತು ಕಡಿಮೆ. ಮೀಸಲಾತಿಯವರಿಗೆ ಅರ್ಹತೆ ಇದೆಯೇ? ಖಾಸಗಿಯಲ್ಲಿ ಮೀಸಲಾತಿ-ಜಾತಿಗಳಿಗೆ ಜಾಗಗಳಿಲ್ಲ. ಸರ್ಕಾರದ ಅನುದಾನದಿಂದ ನಡೆಯುವ ಸಂಸ್ಥೆಯಲ್ಲ. ಎಲ್ಲೂ ಮೀಸಲಾತಿ-ಜಾತಿಗಳಿಗೆ ಪರಿಗಣನೆಯಿಲ್ಲ. ಸರ್ಕಾರದವರಿಗೆ ಈ ವಿಷಯ ಗೊತ್ತಿದ್ದು ಜಾಣ-ಕಿವುಡರೆ? ಎಲ್ಲಾ ವಿಷಯಗಳಲ್ಲು ಮೂಗು ತೊರಿಸಿದರೆ, ಗಾಯ ಮೂಗಿಗೆ. ಮೀಸಲಾತಿ ಜನಗಳನ್ನು ಕೈಗೊಂಬೆ ಮಾಡಿ
ಬಿಸ್ಕತ್ ಹಾಕಿದ ನಾಯಿಯಂತೆ ಮಾಡಿದೆ ಸರ್ಕಾರ. ಸರ್ಕಾರವನ್ನು ನಂಬಿರುವ ಮೀಸಲಾತಿ ಜನತೆಗೆ, ಆ ದೇವರೇ ದಿಕ್ಕು|| ಶ್ರಮವಿಲ್ಲದೇ ಫಲ ಸಾಧ್ಯವೇ? ಇದ್ದರೂ ಅದೆಷ್ಟು ದಿನಗಳು ಮಾತ್ರ? ಅರ್ಹತೆ ಇರುವವರೇ ಎಡವುತ್ತಿರುವಾಗ, ಮೀಸಲಾತಿ ಜನ ಬಿದ್ದರೆ ಎದ್ದೇಳುವುದಿಲ್ಲ. ಸರ್ಕಾರದಲ್ಲಿ ಮೀಸಲಾತಿ ಪುಡಾರಿಗಳು ಗೆದ್ದಿರಬಹುದು. ಆದರೆ ಖಾಸಗಿಯಲ್ಲಿ ಅರ್ಹತೆ ಇರುವವರೇ ಗೆಲ್ಲುವವರು. ರಾಜಕೀಯ ನಾಟಕ ತಂತ್ರ ನಡೆಯುವುದಿಲ್ಲ. ಸ್ವಸಾಮರ್ಥ್ಯಕ್ಕೆ ಬೆಲೆಯುಂಟು ಖಾಸಗಿಯಲ್ಲ. ಜಾಗತೀಕರಣವಾದ ಮೇಲೆ ಮೀಸಲಾತಿಗೆ ಜಾಗ ಇಲ್ಲ. ಇದು ಎಲ್ಲಾ ದೇಶಗಳ ಹಣೇಬರಹ.
ಏಕಾಗ್ರತೆ-ಶ್ರದ್ದೆ-ಶ್ರಮ ಇದ್ದವ ಮುಂದೆ ಬರುವ. ಈಗಲಾದರೂ ಎಚ್ಚೆತ್ತುಕೊಳ್ಳಿ, ಮೀಸಲಾತಿ ನಂಬಿರುವ ಜನತೆಯವರೇ||
81.ಹೋಗಲಾಡಿಸು : 01/12/03 – ಸೋಮವಾರ – 4.45.p.m. : ಮಾನಸಿಕ ಬಡತನ, ಬುದ್ದಿಯ ಬಡತನ, ಹೃದಯವಿಲ್ಲದ ಬಡತನ. ಆರ್ಥಿಕ ಬಡತನ ಇದ್ದರೂ ಪರವಾಗಿಲ್ಲ ನಿನ್ನಲ್ಲಿ, ಆಗ ನೋಡು ನಿನ್ನಲ್ಲಿಯೇ, ಮಾನಸಿಕ ಪರಿವರ್ತನೆ, ಬುದ್ದಿಯ ಬೆಳವಣೆಗೆ, ಹೃದಯ ವೈಸಾಲತೆ, ಇದು ಎಲ್ಲರಲ್ಲೂ ಇದ್ದರೆ ಬೆಳೆಯುತ್ತದೆ, ದೇಶದ ಅಭಿವೃದ್ದಿ, ರಾಜ್ಯ-ರಾಷ್ಟ್ರ-ವಿಶ್ವದ ಅಭಿವೃದ್ಧಿ. ಸಮಾಜದ ಏಳಿಗೆಗೆ, ಸಂಸಾರದ ನೈತಿಕ ಬೆಳವಣಿಗೆ.
82. ನೈತಿಕಮಟ್ಟ : 08/12/03 – ಸೋಮವಾರ : 8.10.p.m.: ಕಡಿಮೆಯಾದುದರಿಂದ, ಮಾನಸಿಕ ಬೆಳವಣಿಗೆ ಕುಂಠಿತಗೊಂಡಿದೆ, ಬುದ್ದಿ, ವಿಕಲ್ಪ ಜಾಸ್ತಿ ಆಗುತ್ತಿದೆ, ಆಸೆ ಅತಿ ಆಸೆ ಕಡೆಗೆ ತಿರುಗುತ್ತಿದೆ, ವೈಚಾರಿಕತೆ ಇಲ್ಲವಾಗಿದೆ, ಮಾಡುತ್ತಿರುವುದೆಲ್ಲ ಸರಿ ಎನಿಸುತ್ತಿದೆ, ಅಹಂ ಜಾಸ್ತಿ ಆಗಿ ಆಡಂಬರ ಜಾಸ್ತಿ ಆಗುತ್ತಿದೆ. ವೈಭವೋಪೆತ ಜೀವನ ಜಾಸ್ತಿ ಆಗುತ್ತಿದೆ. ಕಳ್ಳತನ-ಕೊಲೆ-ಅನಾಚಾರ ಜಾಸ್ತಿ ಆಗುತ್ತಿದೆ. ವ್ಯಭಿಚಾರ-ಅತ್ಯಾಚಾರ ಹೆಚ್ಚುತ್ತಿದೆ. ಭ್ರಷ್ಟಾಚಾರಕ್ಕೆ ಇತಿ ಮಿತಿ ಇಲ್ಲವಾಗಿದೆ. ರಾಷ್ಟ್ರೀಯ ಭಾವನೆ ಇಲ್ಲವಾಗಿದೆ, ಕೊನೆಗೆ ಮನುಷ್ಯತ್ವವೇ ಇಲ್ಲದಂತಾಗಿದೆ. ಮತ ಓಲೈಸುವ ಹೆಸರಿನಲ್ಲಿ. ರಾಜಕಾರಣಿಗಳು ಹೇಳಿದ್ದೇ ಸರಿ. ಅಧಿಕಾರ ದುರುಪಯೋಗತನ, ನಾಗರಿಕ ಸಮಾನತೆಯ ಸಂಹಿತೆ ಬೇಕಿಲ್ಲ. ಅದು ಅಲ್ಪ ಸಂಖ್ಯಾತರ ಧರ್ಮದಲ್ಲಿಲ್ಲ. ಸಂಸಾರದಲ್ಲಿ ಸಂಖ್ಯೆ ಹೆಚ್ಚಾದರೂ, ದೇಶದ ಹಿತರಕ್ಷಣೆ ಬೇಕಿಲ್ಲ.ದೇಶದ ಬೆಳವಣಿಗೆ ಬೇಕಿಲ್ಲ. ದೇಶದ ಅಭಿವೃದ್ಧಿ ಬೇಕಿಲ್ಲ. ಹಿಂದೂತ್ವದಲ್ಲಿ ಅನೇಕ ಸದ್ಗುಣಾಂಶಗಳಿವೆ. ವೈವಿಧ್ಯತೆಯಲ್ಲಿ ಏಕತೆ ಇದೆ. ನಾನಾ ಭಾಷೆ, ವಿಚಾರ, ಸಂಸ್ಕೃತಿಗಳು, ಏಕತೆಯಲ್ಲಿರುವುದೇ ಹಿಂದೂತ್ವದ ಮೆಚ್ಚಬೇಕಾದ ಗುಣ.
83. ಸಾಹಿತ್ಯ ಸಮ್ಮೇಳನ : 23/12/2003 – ಸೋಮವಾರ – 10.15.p.m. : ತಿಂದು-ಉಂಡು-ನೋಡಲಿಕ್ಕೆ ಬಂದವರು ಲಕ್ಷ-ಸಾವಿರಾರು, ಸಮ್ಮೇಳನಕ್ಕೆ ಭಾಗವಹಿಸಿದವರು ಕೇವಲ ಕೆಲವು ಸಾವಿರ. ಪುಸ್ತಕಗಳನ್ನು ಕೊಂಡವರು ಕೆಲವರು, ಪುಸ್ತಕಗಳನ್ನು ಓದಿದವರು ಕೇವಲ ಕೆಲವರು, ಪುಸ್ತಕಗಳನ್ನು ಕೇಳಿ ತೆಗೆದುಕೊಂಡು ಓದಿದವರು ಮತ್ತೆ ಕೆಲವರು, ಆದರೆ ಪುಸ್ತಕಗಳನ್ನು ನೋಡಿ ತಿರುವಿಹಾಕಿದವರು ಬಹು ಮಂದಿ. ಸಾಹಿತ್ಯ ಸಮ್ಮೇಳನ ಕೇಳಿ ಅರಗಿಸಿಕೊಂಡವರು ಬೆರಳೆಣಿಕೆಯಷ್ಟು. ಪ್ರರ್ದಶನಕ್ಕೆ ಭಾಗವಹಿಸಿದವರು ಬಹಳ ಜನರು. ಹೊಗಳಿಕೇ ಮಾತ್ರ ಬಹುಮಂದಿಯದು, ಊಟ-ಉಪಚಾರ-ವ್ಯವಸ್ಥೆಗೆ ಮಾತ್ರ. ಆಡಂಬರ ಜಾಸ್ತಿ, ತೋರಿಕೆ ಜಾಸ್ತಿ. ವಿಷಯ ತಿಳಿದುಕೊಂಡವರು ಚರ್ಚಿಸಿದವರು ವಿರಳ. ಸುತ್ತ ಮುತ್ತಲ ಜಾಗದ ಜನರಿಂದ ಹಣ ವಸೂಲಿ. ಸಮ್ಮೇಳನದ ವ್ಯವಸ್ಥೆಗೆಂದು ಖರ್ಚು ಮಾಡಿ ಹಣವ್ಯಯ ಮಾಡಿ ತಿಂದು ತೇಗಿದವರು ಕೆಲವರು. ಸರ್ಕಾರದ ಹಣದ ಪೋಲು ಬೇರೆ. ಮಂತ್ರಕ್ಕಿಂತ ಉಗಳು ಜಾಸ್ತಿ. ಸಭೆಯಲ್ಲಿ ನಿದ್ದೆ ಮಾಡಿದವರು ಕೆಲವರು, ಹರಟೆ ಹೊಡೆಯುತ್ತಿದ್ದವರು ಇನ್ನು ಕೆಲವರು ಸುತ್ತ ಮುತ್ತಲ ವೀಕ್ಷಣೆಗೆ ಹೋದವರು ಹಲವಾರು ತಿಂಡಿ ಊಟದ ಸಮಯಕ್ಕೆ ಹಾಜರಾದವರು ಬಹಳಮಂದಿ, ಸಾಹಿತ್ಯ ಸಮ್ಮೇಳನದ ಸಾರಂಶ ತಿಳಿದುಕೊಂಡವರು ಬೆರಳೆಣಿಕೆಯಷ್ಟು. ಇಷ್ಟಾದರೂ ಸಮ್ಮೇಳನದ ಬಹು ನಿರ್ಧಾರಗಳನ್ನು ಕೈ ಬಿಟ್ಟಿತು ಸರ್ಕಾರ ಆಲಸ್ಯತನ-ಬೇಜವಾಬ್ದಾರಿಯಿಂದ ಕಾರಣ ಕೊಟ್ಟಿತು ಹಣದ ಕೊರತೆ. ಅಂತೂ ನಡೆಯಿತು ವರ್ಷ ಅಂತೂ ನಡೆಯಿತು ವರ್ಷದ ಸಮ್ಮೇಳನ, ಆಗದಿದ್ದು ಬಹಳ -ಸಿಕ್ಕಿದ್ದು ಶೂನ್ಯ.
84. ಸಹಾಯ : 28/12/2003 : ಭಾನುವಾರ 2.30.p.m. : ಮಾಡು, ಹಣವಿದ್ದಾಗ, ಅಶಕ್ತರಿಗೆ, ವಯಸ್ಸ್ಕರಿಗೆ, ಅನಾನುಕೂಲವಂತರಿಗೆ, ಆದರೆ ಎಚ್ಚರಿಕೆ ಇರಲಿ; ಯುವಕ ಅಶಕ್ತರಿಗೆ ಕೊಡುವ ಮುಂದೆ, ಯೋಚಿಸಿ, ವಿಚಾರಿಸಿ, ಆಲೋಚಿಸಿ ಕೊಡು. ಕಾರಣ, ಸೋಮಾರಿಗಳಾಗಬಾರದು. ಸಹಾಯದಿಂದ ಏನಾದರೂ ಉದ್ಯೋಗಮಾಡಿ ಹಣಗಳಿಸುವಂತಿರಬೇಕು. ತನ್ನ ಕಾಲ ಮೇಲೆ ತಾನು ನಿಲ್ಲುವಂತಿರಬೇಕು. ಅತತ್ರರಿಗೆ ಮಾಡುವ ಸಹಾಯ ನೀರಿನಲ್ಲಿ ಹುಳಿ ತೊಳೆದಂತೆ, ಪ್ರಚಾರಕ್ಕಾಗಿ ಮಾಡಿದ ಸಹಾಯ ಆಡಂಬರಿಕೆ-ತೋರಿಕೆಗೆ ಮಾಡಿದ ಸಹಾಯ. ಸಹಾಯ ಆ ದೇವನೂ ಸಹ ಮೆಚ್ಚುವಂತಿರಬೇಕು.
85. ಕ್ಯಾನ್ಸರ್ : 28/12/03 – ಭಾನುವಾರ 10.50.p.m. : ಮುಖ್ಯ ಚುನಾವಣಾಧಿಕಾರಿ ಎಂದರು, ಬಹು ಮಂದಿ ರಾಜಕಾರಣಿಗಳೆಲ್ಲ ಕ್ಯಾನ್ಸರ್ ಇದ್ದ ಹಾಗೆ; ಕೇವಲ ಕೆಲವು ರಾಜಕಾರಣಿಗಳನ್ನು ಬಿಟ್ಟು, ಬಹಳ ರಾಜಕಾರಣಿಗಳಿಗೆ ಕೋಪ ಬಂದು ಚುನಾವಣಾಧಿಕಾರಿಗಳನ್ನು ತೆಗಳಿದರು. ಕುಂಬಕಾಯಿ ಕಳ್ಲ ಎಂದರೆ ಮುಟ್ಟಿ ನೋಡಿಕೊಳ್ಳುವುದಾದರೂ ಏತಕ್ಕೆ? ಸತ್ಯ ಹೇಳಿದ್ದಕ್ಕೆ ಅವಹೇಳನಕಾರಿ ಪದಗಳು ರಾಜಕಾರಣಿಗಳಿಂದ ಮುಖ್ಯ ಚುನಾವಣಾಧಿಕಾರಿಗೆ. AIDS ಇದ್ದ ಹಾಗೆ ಎಂದು ಹೇಳಿದರೂ ತಪ್ಪೇನಿಲ್ಲ. ರಾಜಕಾರಣಿಗಳಿಗೆ ಕಾರಣ ಸತ್ಯಕ್ಕೆ ಸಾವಿಲ್ಲ-ಸುಳ್ಳಿಗೆ ಮುಕ್ತಿಯಿಲ್ಲ.
86. ಛಾಪಾ ಕಾಗದ : 28/12/03- ಭಾನುವಾರ 4.30.p.m.. : ಹಗರಣ ಗೊತ್ತಾಗಿದ್ದಕ್ಕೆ COD ಗೆ ವಹಿಸಿತು ರಾಜ್ಯ ಸರ್ಕಾರ. ಅಧಿಕಾರಿಗಳು, ರಾಜಕಾರಣಿಗಳೂ ಇದ್ದರೆಂದು ತಿಳಿದನಂತರ ನಿಧಾನ ಮಾಡಿಸಿತು. ಸರ್ಕಾರ ತನಿಖೆಯನ್ನು ಎರಡು ವರ್ಷಗಳಾದರೂ ಸಿಗಲಿಲ್ಲ. ಫಲಿತಾಂಶ ದೊರಕಲಿಲ್ಲ. C.B.I. ಗೆ ವಹಿಸುವುದಿಲ್ಲವೆಂದು ಕೂಗಾಡುತ್ತಿದ್ದು ಸರ್ಕಾರ, ಕೊನೆಗೂ ವಹಿಸಿತು C.B.I.ಗೆ. ಕಾರಣ ಕೇಂದ್ರ ಸರ್ಕಾರದ ಒತ್ತಡ. ಆದರೆ ಕೊಡುವುದಕ್ಕೆ ಮುಂದೆ ದಾಖಲೆ-ಮಾಹಿತಿಗಳನ್ನು ಸುಟ್ಟಿತು. ಇಲ್ಲದ ಹಾಗೆ ಮಾಡಿ ಮುಗಿಸಿತು. ಈಗ ಪರದಾಟ C.B.I.ಗೆ -ನೆಮ್ಮದಿ ಸರ್ಕಾರಕ್ಕೆ.
87. ಹಜ್ ಯಾತ್ರೆ : 28/12/03 – ಭಾನುವಾರ 10.10.p.m. :ಸಬ್ಸಿಡಿ ರೂಪದಲ್ಲಿ ಕೊಟ್ಟಿತು ಯಾತ್ರೆಗೆ, 15 ಕೋಟಿ ಮುಸ್ಲಿಮ್ ಜನತೆಗೆ, ಸರ್ಕಾರ. ಕಾರಣ ಅಲ್ಪ ಸಂಖ್ಯಾತರು. ಆದರೆ ತೊಂಬತ್ತು ಹಿಂದೂಗಳ ಯಾತ್ರೆಗೆ ಕೊಡಲಿಲ್ಲ. ಕಾರಣ ಹಣವಿಲ್ಲ ಸರ್ಕಾರದಲ್ಲಿ. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ. ಮತ ಬ್ಯಾಂಕ್ ಮಾಡಿ ಜಯಗಳಿಸಲಿಕೆ. ನಾನ ರೀತಿಯ ನಾಟಕ-ಸವಲತ್ತುಗಳು, ಆದರೂ ಮುಂದುವರಿಯಲಿಲ್ಲ ಕಾರಣ ನಂಬಿ ಸೋತರು ಸರ್ಕಾರವನ್ನು ಮುಸ್ಲಿಮರು. ಸಬ್ಸಿಡಿ ತಿಂದು ತೇಗಿದವರು ಕೆಲವರು ಮುಸ್ಲಿಮರು. ಆ ದೇವನೆ ಬಂದು ಕಾಪಡಬೇಕು, ನಂಬಿ ಮೋಸಹೋದ ಉಳಿದ ಅಲ್ಪ ಸಂಖ್ಯಾತರನ್ನು.
0.01.2004 - 6.30 p.m.
ಮನೆ ಮನೆ : ಕಟ್ಟಬೇಕು ಮನೆ : ಅಕ್ಕ, ಪಕ್ಕ, ಮುಂದೆ ಜಾಗಬಿಟ್ಟು, ಮುಂದೆ ಗಿಡಗಳನ್ನು ಬೆಳೆಸುವಂತಿರಬೇಕು. ಮಲಗುವ ಕೋಣೆ ಪಕ್ಕ ಸಸ್ಯಗಳನ್ನು ನೆಟ್ಟಿರಬೇಕು.
ಇನ್ನೊಂದು ಪಕ್ಕ ವಾಹನ ನಿಲ್ಲಿಸಲು ಜಾಗವಿರಬೇಕು. ವಾಹನನಿಲ್ಲಿಸುವ ಜಾಗದಲ್ಲಿ, ಪೂರ್ತಿ ಭಾಗ ನೀರು ಕೂಡಿಹಾಕಲು Sump ಇರಬೇಕು. ಮಳೆಬಂದ ನೀರು ಅದಕ್ಕೆ ಹೋಗುವಂತಿರಬೇಕು. Rain Water System-Harvest System ಮನೆಯಲ್ಲಿ ಜಾರಿಗೆ ತರಬೇಕು. ಮಳೆ ಬರುವ ನೀರು ಸಸ್ಯ-ಗಿಡಗಳಿಗೆ ಹೋಗುವಂತಿರಬೇಕು. ಪರಿಸರಕ್ಕೆ ಪೂರಕವಾಗಿ ಕಟ್ಟಡ ಇರಬೇಕು. ಮನೆ ಚಿಕ್ಕದಾದರೂ ಪರವಾಗಿಲ್ಲ. ಗಾಳಿ ಬೆಳಕು ಸರಾಗವಾಗಿ ಬರುವಂತಿರಬೇಕು. ಹೊಂಗೆ ಮರಗಳನ್ನು ಮಲಗುವ ಕೊಠಡಿಗಳ ಪಕ್ಕದಲ್ಲಿ ಬೆಳೆಸುವಂತಿರಬೇಕು. ಕಾರಣ -ಬೇಸಿಕೆ ಕಾಲದಲ್ಲಿ ತಂಪಾದ ಗಾಳಿ ಇದರಿಂದ ಆರೋಗ್ಯಕ್ಕೂ ಪೂರಕ ಮನಕ್ಕೂ ಹಿತ-ಪರಿಸರ ಪೂರಕ ಸಮಾಜಕ್ಕೆ ಮಾದರಿಯಾಗಿರಬೇಕು. ಸರ್ಕಾರವೂ ಸಹ ಅನುಸರಿಸುವಂತಿರಬೇಕು. ಸಸ್ಯ ಗಿಡ, ಗಾಳಿ, ಬೆಳಕು ಇಲ್ಲದ ಮನೆ ಇದ್ದರೆಷ್ಟು-ಬಿಟ್ಟರೆಷ್ಟು. ಇವುಗಳಿಲ್ಲದ ಮನೆ ಖಾಯಿಲೆಗಳಿಗೆ ಆಹ್ವಾನ. ಪರಿಸರಕ್ಕೆ ಮಾರಕ.
11.01.2004 - 2.30.am.
ಸುಲಿಗೆಗಳು -ಪರಿಹಾರ : ಸುಲಿಗೆಗಳು ನಾನ ರೀತಿ ಸಮಾಜದಲ್ಲಿ, ಕೆಲವು ದೇವಸ್ಥಾನಗಳಲ್ಲಿ ವ್ರತ-ನಿಯಮಗಳಿಗೆಂದು, ಪೂಜೆ-ಪುನಸ್ಕಾರಗಳಿಗೆಂದು ವಸೂಲಿ ಭಕ್ತರಿಂದ. ಟ್ರಸ್ಟ್ ಮಾಡಿ, ಭಕ್ತರಿಂದ ವಸೂಲಿ, ಅಭಿವೃದ್ಧಿಗಳಿಗೆಂದು ಮನ ಒಂದು ಕಡೆ, ಮಂತ್ರ ಒಂದು ಕಡೆ, ಪೂಜಾರಿಗಳ ಮೂಲಕ ಭಕ್ತರಿಗೆ ದೇವನೊಲಿವನೆಂತು? ಮಾನಸಿಕ ಪೂಜೆ, ಪ್ರಾರ್ಥನೆ ಇದಕ್ಕೆ ಉತ್ತಮ ಪರಿಹಾರ. ದಾನ, ಧರ್ಮಗಳಿಗೆಂದು ವಸೂಲಿ ಕೆಲವು ಸಂಸ್ಥೆಗಳಿಂದ ಖೋಟಾ ರಶೀತಿ ನೀಡಿ ದಾನಿಗಳಿಂದ ವಸೂಲಿ. ಬಡವೃದ್ದರಿಗೆ, ಅಂಗವಿಕಲರಿಗೆಂದು ಸಹಾಯ ಎಂದು ವಸೂಲಿ. ಅಶಕ್ತರ ವೈದ್ಯಕೀಯ ಖರ್ಚಿಗಳಿಗೆಂದು ವಸೂಲಿ. ಆದರೆ ಎಲ್ಲ ವ್ಯಕ್ತಿ, ಸಂಸ್ಠೆಗಳಿಂದ ಅಲ್ಲ. ನೈಜ ಸಂಸ್ಥೆ, ವ್ಯಕ್ತಿಗಳು ಇದಕ್ಕೆ ಹೊರತು ನಾಟಕೀಯ ಆಟ ಆಡಿ, ವಸೂಲಿ, ಸುಲಿಗೆ ವ್ಯವಸ್ಠೆ. ಇದಕ್ಕೆ ಪರಿಹಾರ, ನೇರ ಪರೀಕ್ಷೆ ಮಾಡಿ ಧನ ಸಹಾಯ. ಅಪಾತ್ರಕ್ಕೆ ಮಾಡಿದ ಸಹಾಯ ದಾನ ಎನಿಸುವುದಿಲ್ಲ. ವಿಚಾರಿಸಿ, ಯೋಚಿಸಿ, ಆಲೋಚಿಸಿಕೊಡುವುದು ಉತ್ತಮ. ನೇರ ವ್ಯಕ್ತಿಗೆ ಕೊಟ್ಟರೆ ಮನಕ್ಕೆ ಹಿತ, ನೆಮ್ಮದಿ. ಅವರ ಹಾರೈಕೆ, ಆಶೀರ್ವಾದದ ಫಲಗಳು ನಮಗೆ ಸಿಗಬಹುದು. ಹಳೇ ಬಟ್ಟೆ, ಉಡುಪುಗಳು, ಹೊದಿಕೆಗಳು, ರಗ್ಗುಗಳು ಬೆಚ್ಚನೆಯ ಉಡುಪುಗಳು, ಇತ್ಯಾದಿ, ಉಪಯೋಗಿಸದ ವಸ್ತುಗಳು, ಅಗತ್ಯವಸ್ತುಗಳು -ನೇರ ದಾನ ಉತ್ತಮ. ಒಬ್ಬ ಬಡ-ಬಗ್ಗರ ಮಗುವನ್ನು ಸಾಕಿ ಸಲುಹಿ, ವಿದ್ಯಾಭ್ಯಾಸಕೊಟ್ಟು, ಅವನು ತನ್ನ ಕಾಲ ಮೇಲೆ ತಾನು ನಿಲ್ಲುವಂತೆ ಮಾಡುವುದು ಅತ್ಯುತ್ತಮ. ನಮ್ಮ ದಾನ ಧರ್ಮ, ಸೊಂಬೇರಿಗಳಾಗಲು ಅವಕಾಶವಿರಬಾರದು. ಆಡಂಬರ, ಪ್ರಚಾರಕ್ಕೆ, ಹೋಗಬಾರದು.
22.10.2003 -3.30 p.m.
ಶಾಸಕರ ಸವಲತ್ತು ಇವರ ನಿಯತ್ತು- ಶಿಸ್ತು [ವಿಡಂಬನೆ] : ನಮ್ಮಲ್ಲೂ ಇಲ್ಲ -ನಿಮ್ಮಲ್ಲೂ ಇಲ್ಲ, ಆದರೆ ಉಂಟು ಚುನಾಯಿತ ಸದಸ್ಯರಲ್ಲಿ MLA -MLC-MP ಆದವರಲ್ಲಿ ಉಂಟು ನಿಯತ್ತು, ತಮ್ಮ ಸಂಬಳ -ಸಾರಿಗೆ-ಸವಲತ್ತು ಹೆಚ್ಚಿಸುವುದರಲ್ಲಿ, ಎಲ್ಲೂ ವಿರೋಧಿಸದಿರುವುದೇ ಇವರ ಶಿಸ್ತು. ವಿರೋಧಿಸಿದವರಿಗೆ ಕಾದಿದೆ ಮುಂದೆ ವಿಪತ್ತು. ಸಿಗುವುದಿಲ್ಲ ಇವರಿಗೆ ಚುನಾವಣೆಯಲ್ಲಿ ಸೀಟು. ಜನತೆ ವಿರೋಧಿಸಿದರೆ ಅಂತಾರೆ ಅಶಿಸ್ತು. ಕಾನೂನು ಸಹ ಕೇಳಬೇಕಾಗಿಲ್ಲ ಇವರ ಸವಲತ್ತು. ಬರ-ಅತಿವೃಷ್ಟಿ- ಅನಾವೃಷ್ಟಿ ಇವೆಲ್ಲ ಇತ್ತು ಇವರಿಗೆ, ಇವರು ಚುನಾಯಿತರಾಗದೇ ಇದ್ದಾಗ. ಆಡಳಿತ ಪಕ್ಷ ವಿರೋಧಪಕ್ಷಗಳಿಗೆಲ್ಲ ಇಲ್ಲ ವಿರೋಧ ತಮ್ಮ ಸ್ವಾರ್ಥ ಹಿತರಕ್ಷಣೆ ಕಾಯುವುದೇ ಇವರ ಶಿಸ್ತು. ಮತದಾರರ ಮುಂದೆ ಇವರು ಹೋದರೆ ಶಿಸ್ತು. ಅದೇ ಮತದಾರ ಇವನ ಮುಂದೆ ಹೋಗಿ ಕೇಳಿದರೆ ಅಶಿಸ್ತು. ವಿರೋಧಿಸಿ, ಕೂಗಾಡಿ, ಕಿರುಚಾಟ ಮಾಡಿದ್ದೆಲ್ಲ ಅಶಿಸ್ತು. ನೈಜ ಜನತೆಯಲ್ಲಿಲ್ಲದಿರುವ ಅಶಿಸ್ತು. ಇವರ ಶಿಸ್ತು -ಸಂಪತ್ತು ದೇಹ- ಮನಸ್ಸು-ಬುದ್ದಿ ಒರಟಾಗಿರುವುದೇ ಇವರ ಶಿಸ್ತು. ಅಲ್ಪ ಸಂಖ್ಯಾತರುಗಳು ಮಾಡಿದ್ದೆಲ್ಲಾ ಶಿಸ್ತು. ಉಳಿದವರು ಮಾಡಿದ್ದೆಲ್ಲಾ ಅಶಿಸ್ತು-ಅನಿಯತ್ತು. ಇವರು ಅಭಿವೃಧ್ಧಿ ಹೆಸರುಗಳಲ್ಲಿ ನುಂಗಿದ್ದು ಶಿಸ್ತು. ಉಳಿದವರು ಅಲ್ಪ ಸ್ವಲ್ಪ ಮಾಡಿ ನುಂಗಿದ್ದು ಅಶಿಸ್ತು. ತಮ್ಮ ಸಂಸಾರ ಬಂಧು ಬಳಗ ಗಳಿಸಿದ್ದೆಲ್ಲಾ ನಿಯತ್ತು. ಇವರಿಗೆ ಆಗದವರು ಮಾಡಿ ಗಳಿಸಿದ್ದೆಲ್ಲಾ ಅನಿಯತ್ತು. ಜೀವನದಲ್ಲಿ ಕಲಿಯಲ್ಲಿಲ್ಲ. ತೋರಿಸಲಿಲ್ಲ. ನೈಜ ಕಸರತ್ತು ಆಡಂಬರದಲ್ಲಿ ತೋರಿಸಿದರು ಇವರ ಖೋಟಾ ಕಸರತ್ತು ಬಂದಿರುವ ಸವಲತ್ತುಗಳೇ ಇವರ ಶಿಸ್ತು-ನಿಯತ್ತು. ಆದೇವನೂ ಸಹ ಇವರನ್ನು ನೋಡಿ ಆದ ಸುಸ್ತು.
03.02.2000 -1.50 a.m.
ಬಡತನ : ಇದು ದೈವಕೊಟ್ಟ ಕೊಡುಗೆಯಲ್ಲ,
ಸಮಾಜ ಸೃಷ್ಟಿಸಿದ ಸ್ಥಿತಿ,
ಕುಡುಕ ತಾನಾಗಿ ಮಾಡಿದ ಸ್ಥಿತಿ,
ಸಾಲಗಾರ ತಾನಾಗಿ ತರಿಸಿದ ಸ್ಥಿತಿ,
ಸಮಾಜದ ವ್ಯವಸ್ಥಿ ಮಾಡಿದ ಸ್ಥಿತಿ,
ಅರಿಷಡ್ವರ್ಗ ಗುಣಗಳು ತಂದಿರಿಸಿದ ಸ್ಥಿತಿ,
ಅವಿಚಾರಕತೆ, ಮೂಢತನ ಮಾಡಿದ ಸ್ಥಿತಿ.
ದುಡಿದೇ ತಿನ್ನಬೇಕೆಂಬ ಛಲ,
ಹೆಚ್ಚಿನ ಹಣ ಕೂಡಿಸಬಾರದೆಂಬ ಛಲ,
ಅವಶ್ಯಕತೆಗಿಂತ ಹೆಚ್ಚಿನ ಹಣ, ತಿರುಗಿ
ಸಮಾಜಕ್ಕೆ ಕೊಡಬೇಕೆಂಬ ಮನಸ್ಸು,
ಸಮಾಜವೇ ದೇವರು ಎಂಬ ತಿಳುವಳಿಕೆ,
ಹೆಜ್ಜೆ-ಹೆಜ್ಜೆಯಲ್ಲೂ ಸಮಾಜವನ್ನು ತಿದ್ದಿಸಬೇಕೆಂಬ ಛಲ,
ವೈಜ್ಞಾನಿಕ ತಿಳುವಳಿಕೆ, ಮೂಢತನ ನಿವಾರಣೆ,
ಇವೆಲ್ಲ ಕಾರ್ಯರೂಪಕೆ ಬಂದಾಗ
ಈ ಲೋಕವೇ ದೈವಲೋಕ.
ಆಗ ಬಡತನವಿಲ್ಲ, ಕಳ್ಳಕಾಕರ ಭಯವಿಲ್ಲ, ನಿರುದೋಗ್ಯವಿಲ್ಲ, ನೆಮ್ಮದಿ ಶಾಂತಿ ಎಲ್ಲೆಲ್ಲೂ,
ಮುಕ್ತಿ-ಮೋಕ್ಷ ಈ ಲೋಕದಲ್ಲೆ!!.
27.11.1992
80. ಉಳಿತಾಯ : ಸುವ್ಯವಸ್ಥೆಯ ಅಗತ್ಯದ ಖರ್ಚೇ ಉಳಿತಾಯ
WISE SPENDING IS A GOOD SAVING-
ಅದಕೆ ಬೇಕಿಲ್ಲ ಹಣದ ಉಳಿತಾಯ
ಮನಸಿಗೆ ಹಗುರ ಜೀವಕ್ಕೆ ತಂಪು ಈ ತರಹದ ಉಳಿತಾಯ
ಮಾಡುವುದಿಲ್ಲ ಯಾವ ತರಹದ ಅಪಾಯ
81. ನಗರದ ಮದುವೆಗಳು : ಹೀಗೆವೆ? ನಮ್ಮಲ್ಲಿನ ನಗರದ ಮದುವೆಗಳು,
ನಡೆದಿವೆ ಅಲ್ಲಿ ಆಗಾಗ್ಗೆ ಅವ್ಯವಹಾರಗಳು,
ತೋರಿಸಲಿಕೆ ಕಾದು ಕುಳಿತಿವೆ ಸಂಭ್ರಮಗಳು,
ಕೆಲವು ಜನ ಬರುವರು ತೋರಿಸಲಿಕೆ ಷೋಕಿಗಳು,
ತುಂಬಿತುಳುಕುತ್ತಿದೆ ಹಲವರಲ್ಲಿ ಆಡಂಬರಗಳು,
ಅರೆತಿಂದು ಹಾಳು ಮಾಡುವರು ತಿಂಡಿ ತಿನಸುಗಳು,
ಇಲ್ಲಿಗೆ ಬರುವ ಬಹಳ ಬಂಧು-ಮಿತ್ರರು ಆಷಾಡಭೂತಿಗಳು,
ಬಿಟ್ಟು ಹೋಗುವರು ಮನದಲಿ ನಾನಾ ಸಂಶಯಗಳು,
ಹುಡುಕಿದರೂ ಸಿಗುವುದಿಲ್ಲ ಇವರಲ್ಲಿ ವಿಚಾರ ತಂತಿಗಳು,
ಸಮಾಜ ಹಾಳು ಮಾಡಲಿಕೆ ಇವರೇ ಸರಿಯಾದ ವ್ಯಕ್ತಿಗಳು.
82.ಸ್ವಚ್ಛತೆ : ಗಾಜಿನ ನೀರಿನಲ್ಲಿರುವ ರೀತಿ ಇರಬೇಕು ಮನಸಿನಲಿ ಸ್ವಚ್ಛತೆ
ಒಳಗೂ ಶುಭ್ರ ಹೊರಗೂ ಶುಭ್ರ ಈ ಸ್ವಚ್ಛತೆ
ಒಳಗೆ ಅಶುಭ್ರವಾದರೆ ಮನಸಿಗೆ ಖಿನ್ನತೆ
ಹೊರಗೆ ಅಶುಭ್ರವಾದರೆ ಸಮಾಜದಲಿ ಭಿನ್ನತೆ
ಒಳಗೂ ಹೊರಗೂ ಅಶುಭ್ರವಾದರೆ ಬೆಳೆಯುವುದು ಅವೈಚಾರಿಕತೆ
ಆದರೆ ಒಳಗೂ ಹೊರಗೂ ಶುಭ್ರವಾದರೆ ಮೆಚ್ಚುವನು ದೇವ ಸಹ ಸ್ವಚ್ಛತೆ.
23.2.1993
84.ಹೃದಯದ-ಭಾಷೆ : ಸಕಲ ಜೀವರಾಶಿಗಳಲ್ಲಿರುವ ಭಾಷೆ,
ಸಂಪತ್ ಭರಿತವಾದ ಭಾಷೆ,
ಸೂರ್ಯ-ಚಂದ್ರರಿರುವವರೆಗೂ ಇರುವ ಜೀವಂತ ಭಾಷೆ,
ಪ್ರೇಮ ಪ್ರೀತಿಗಳ ಬೆಸುಗೆಯ ಭಾಷೆ,
ದೇವ ಕೊಟ್ಟಂತಹ ಅಂತರಂಗದ ಭಾಷೆ,
ಮಾನವನನ್ನು ದೇವ ಮಾನವನನ್ನಾಗಿಸುವ ಭಾಷೆ,
ಮಾತಾ ಪಿತೃಗಳಲ್ಲಿರುವ ಮಕ್ಕಳ ಮೇಲಿನ ಭಾಷೆ,
ಭಕ್ತರಿಗೆ ಮೋಕ್ಷ ತೋರಿಸಿದ ಭಾಷೆ,
ಪ್ರೀತಿ ವಿಶ್ವಾಸಗಳ ಸಾಗರದ ಭಾಷೆ,
ನೆಮ್ಮದಿ ಮತ್ತು ಶಾಂತಿ ಸದಾ ಸಿಗುವ ಭಾಷೆ,
ಅರಿಷಡ್ವರ್ಗಗಳ ಲೇಪನ ಇಲ್ಲದ ಭಾಷೆ,
ಭವ ಬಂಧನಗಳ ದೂರ ತಳುವ ಭಾಷೆ,
ಜಾತಿ ಮತ ಭೇದಗಳ ದೂರವಿರಿಸುವ ಭಾಷೆ,
ವಿಶ್ವ ಮಾನವರೆಲ್ಲರ ಒಂದುಗೂಡಿಸುವ ಭಾಷೆ,
ಮೌನವಾಗಿದ್ದು ಭಿನ್ನದಂತಿರುವ ಭಾಷೆ,
ಅಂತಃಕಲಹ ದೂರವಿಡಿಸುವ ಭಾಷೆ,
ಜೀವರಾಶಿಗಳಲ್ಲಿ ಕಾಣಬಹುದಾದ ದೇವ ಭಾಷೆ,
ಪರರ ಕಷ್ಟ ಸುಖಗಳಿಗೆ ಸ್ಪಂದಿಸುವ ಭಾಷೆ,
ಮನುಷ್ಯ ಅರಿತು ವಿವೇಕದಿಂದ ನಡೆದಲ್ಲಿ
ವಿಶ್ವವ ಕೈಲಾಸ-ವೈಕುಂಠ ಮಾಡಬಹುದಾದ ಭಾಷೆ,
ಜಾತ್ರೆ, ಸಮಾವೇಷ, ಸಮಾರಂಭಗಳಲ್ಲಿ ನೋಡಬಹುದಾದ ಭಾಷೆ,
ಅಂತರಂಗದಲಿ ಕಾಣಬಹುದಾದ ದೇವ ಭಾಷೆ,
ಸಕಲ ಜೀವರಾಶಿಗಳನು ಒಂದುಗೂಡಿಸಲು ಬಂದ ಭಾಷೆ,
ನಿಸರ್ಗದಲ್ಲೂ ಕಾಣಬಹುದಾದ ಜೀವಂತ ಭಾಷೆ,
ಎಷ್ಟೇ ರೀತಿಯಲ್ಲಿ, ಯಾವ ರೀತಿಯಲ್ಲಿ ಹೇಳಿದರೂ
ಮುಗಿಯದ ಯಾವಾಗಲೂ ಸದಾ ಇರುವ, ಚಿಮ್ಮುವ ಅನಂತವಾಗಿರುವ,
ಜೀವಂತವಾಗಿರುವ ಭಾಷೆಯೇ ಈ ಹೃದಯದ ಭಾಷೆ.
7.02.1994 -1.30.p.m.
100. ನನ್ನ ಅಂತರ್ಮುಖ-ಬಹಿರ್ಮುಖ : ಗೋಮುಖ ವ್ಯಾಘ್ರನಂತಿರುಹುದು ನನ್ನ ಮುಖ
ಕಾರಣ ಸತ್ಯದ ಕಡೆಗೆ ವಾಲುತ್ತಿದೆ ಅಂತರ್ಮುಖ ||ಪ||
ಸರಳ ಜೀವನ ಬೇಕೆನಿಸುತಿದೆ ಅಂತರ್ಮುಖ
ಆಡಂಬರ ಜೀವನ ಕೇಳುತಿದೆ ಬಹಿರ್ಮುಖ
ನ್ಯಾಯ-ನೀತಿಗೆ ಹೆದರುತಿದೆ ಅಂತರ್ಮುಖ
ಅನ್ಯಾಯ-ಹಿಂಸೆಗೆ ಬಗ್ಗುತಿದೆ ಬಹಿರ್ಮುಖ ||೧||
ಅಸತ್ಯ-ಅನ್ಯಾಯಕೆ ಒಗ್ಗದು ಬಗ್ಗದು ಅಂತರ್ಮುಖ
ಕೀಳು ಮಟ್ಟದ ಜೀವನವ ಕೇಳುತಿದೆ ಬಹಿರ್ಮುಖ
ಅಸಹಾಯಕಿಗಳ ಜೀವ ನೋಡಿ ಕರಗುತಿದೆ ಅಂತರ್ಮುಖ
ಆಡಂಬರ ಜೀವನ ರೀತಿ ನೋಡಿ ಬೇಕೆನಿಸುತಿದೆ ಬಹಿರ್ಮುಖ ||೨||
ಸರಳ ಜೀವಿಗಳ ರೀತಿಗಳ ನೆನಪಿಸುತಿದೆ ಅಂತರ್ಮುಖ
ಷೋಕಿ ಜನಗಳ ರೀತಿಗಳ ಮೆಲಕು ಹಾಕುತಿದೆ ಬಹಿರ್ಮುಖ
ಬೇಡ, ಬೇಡ, ಬೇಡ ಎಂದು ಹೇಳುವುದಾದರೆ ಅಂತರ್ಮುಖ
ಬೇಕು, ಬೇಕು, ಬೇಕು ಎಂದು ಕಿರುಚುತದೆ ಬಹಿರ್ಮುಖ ||೩||
ಯಾರಿಗೂ ಹೇಳದಾಗಿದೆ, ತಿಳಿಸದಾಗಿದೆ ಅಂತರ್ಮುಖ
ಸಮಾಜಕೆ ಅಹಂ ತೋರಿಸುತಿದೆ ಬಹಿರ್ಮುಖ
ಜೀವನವೇ ವಾಕರಿಕೆ ತಂದಿದೆ ಅಂತರ್ಮುಖ
ಆಡಂಬರ ಜೀವನವೇ ಜೋತು ಬಿದ್ದಿದೆ ಬಹಿರ್ಮುಖ ||೪||
ಅಸಹ್ಯ ಜೀವನಕೆ ಛೀಮಾರಿ ಹಾಕಿದರೆ ಅಂತರ್ಮುಖ
ಅರಿಷಡ್ವರ್ಗಗಳೊಡನೆ ತಿರುಗುತಿದೆ ಬಹಿರ್ಮುಖ
ಜೀವನ ಸಾಕು ಸಾಕು ಎಂದು ಹೇಳುತಿದೆ ಅಂತರ್ಮುಖ
ಕೊಳಕು ಜೀವನ ಬೇಕು ಬೇಕು ಎಂದು ಹೇಳುತಿದೆ ಬಹಿರ್ಮುಖ ||೫||
ವೈಚಾರಿಕತೆಗೆ ಮನ ವಾಲಿ ಸಂತಸ ತಂದಿದೆ ಅಂತರ್ಮುಖ
ಅವೈಚಾರಿಕತೆಗೆ ಬೇಸ್ತು ಬಿದ್ದು ಕಳವಳಗೊಂಡಿದೆ ಬಹಿರ್ಮುಖ
ಬಡ ನಾರಾಯಣನಲಿ ದೇವರ ನೋಡಲಿ ಎಂದರೆ ಅಂತರ್ಮುಖ
ಅಪ್ರಕೃತಿ ರೀತಿಯಲಿ ದೇವರ ನೋಡಲು ಬಯಸುತಿದೆ ಬಹಿರ್ಮುಖ ||೬||
ಸಮಾಜದಿಂದ ದೂರ ಇರಬೇಕೆಂದಿದೆ ಅಂತರ್ಮುಖ,
ಸಮಾಜಕ್ಕೆ ಮೋಸಮಾಡಿ ಜೀವಿಸುತಿದೆ ಬಹಿರ್ಮುಖ,
ಪ್ರಯತ್ನಗಳಲಿ ಸೋತು ಕಳೆಗುಂದಿದೆ ಅಂತರ್ಮುಖ,
ಜೀವನದಲಿ ಸೋತರೂ ಖುಷಿಪಡುತಿದೆ ಬಹಿರ್ಮುಖ ||೭||
8.12.1993-3.00 p.m.
101. ಹೇ ಮಾನವ ಆಗು ದೇವ ಮಾನವ ಆಗು ವಿಶ್ವ ಮಾನವ ಆಗು :
ಹೇ ಮಾನವ ಆಗು, ಬಹು ಬೇಗ ಆಗು ; ದೇವ ಮಾನವ ಆಗು, ವಿಶ್ವ ಮಾನವ ಆಗು ||ಪ||
ಜೀವರಾಶಿಗಳಲ್ಲಿ ಶ್ರೇಷ್ಟ ಈ ಮಾನವ ಜೀವರಾಶಿ,
ಸೃಷ್ಟಿಕರ್ತ ಕೊಟ್ಟಿಹನು ವಿಚಾರ ಮಾಲೆಗಳ ಕಂತೆ ರಾಶಿ,
ಸದುಪಯೋಗ ಪಡಿಸಿಕೋ ’ಪ್ರತಿಭೆ’ ಯೆಂಬ ಗುಣರಾಶಿ,
ಸಮಾಜದ ಏಳಿಗೆಗೆ ಸವೆಸು ನಮ್ಮ ಈ ದೇಹಕಾಶಿ ಅದಕಾಗಿ ||೧||
ಅರಿಷಡ್ವರ್ಗ ಗುಣಗಳ ತಿರಸ್ಕರಿಸಿ ಆಗು,
ಕಾಲ-ವ್ಯಯ ಮಾಡದೆ ವಿಚಾರಿಸಿ, ನುಗ್ಗಿ ಆಗು,
ಚಿಂತನೆಗಳ ರಾಶಿ ಕದಡಿಸಿ ಓದಿ ತಿಳಿದು ಆಗು,
ಸಾಧು-ಸಂತರ ಜೀವನ ರೀತಿ ನೋಡಿ ಆಗು ಅದಕಾಗಿ ||೨||
ತಿಳುವಳಿಕೆ ಎಂಬ ಗುಣವ ಆ ದೇವ ಕೊಟ್ಟಿಹನು
ವಿಶ್ವಸೃಷ್ಟಿ ಅರಿಯಲು ಇವೆ ಸಾಕಷ್ಟು ಗ್ರಂಥಗಳು,
ಸಂಶಯವ ಬಗೆ ಹರಿಸಲು ಇವೆ ಚಿಂತನೆಗಳ ಗ್ರಂಥರಾಶಿ,
ಚರ್ಚಿಸಲು, ತಿಳಿಸಿ ಹೇಳಲು ಇರುವ ಬುದ್ಧಿ ಜೀವಿಗಳ ಕೂಟ ಅದಕಾಗಿ ||೩||
ಈ ವಿಶ್ವಕೆ ಮಾನವನು ಆಗಿಹನು ಶಿಲ್ಪಿ,
ಪರಿಸರಗಳು, ಜೀವರಾಶಿಗಳು ವಸ್ತುಗಳಾಗಿ ನಿಂತಿಹವು,
ಸದುಪಯೋಗ ಮಾಡಲು ಕೊಟ್ಟಿಹನು ಆ ದೇವ ಪ್ರತಿಭೆ,
ಮನಸು ವಿಕಸಿತವಾಗಲು ಅವಕಾಶಗಳಿವೆ ಬಹಳ ಅದಕಾಗಿ ||೪||
ಸಕಲ ಜೀವರಾಶಿಗಳಲಿಡಗಿಹುದು ದೈವಾಂಶ,
ಸಕಲ ಪರಿಸರಗಳಲುಂಟು ದೈವಾಂಶ ಪ್ರತಿಭೆ,
ಮಾನವನ ದೇಹದಲೂ ಕುಳಿತಿಹುದು ದೈವಾಂಶ,
ಒಂದು ರೀತಿಯಲಿ ಈ ವಿಶ್ವವೇ ದೇವರು ಅದಕಾಗಿ ||೫||
ಬೆಂಕಿ ಮರದಲ್ಲಡಗಿರುವಂತೆ,
ತುಪ್ಪ ಹಾಲಿನಲ್ಲಡಗಿರುವಂತೆ,
ರುಚಿ ವಸ್ತುವಿನಲ್ಲಡಗಿರುವಂತೆ,
ಅಡಗಿದೆ ದೈವಾಂಶ ಮಾನವನಲ್ಲಿ ಅದಕಾಗಿ ||೬||
05.01.1995-1.30 a.m.
102. ಬನ್ನಿ ನೋಡಿ ಭಕ್ತರೇ, ದೇವರಿರುವಿಕೆಯ :
ಬನ್ನಿರಿ ಭಕ್ತರೇ, ಬನ್ನಿರಿ|
ದೇವರಿರುವಿಕೆಯ ನೋಡಲು ಬನ್ನಿರಿ||ಪ||
ಮನವ ಅಂತರ್ಮುಖಿಯಾಗಿ ತಿರುಗಿಸಿ ಬನ್ನಿ,
ಅರಿಷಡ್ವರ್ಗ ಗುಣಗಳ ಬಿಟ್ಟು ನೋಡಲು ಬನ್ನಿ,
ಮನಸನು ಶುದ್ಧಗೊಳಿಸಲು ಬೇಗನೆ ಬನ್ನಿ,
ಮನಸನು ವಿಕಸಿಸಗೊಳಿಸಲು ಬನ್ನಿ ||೧||
ಸಕಲ ಜೀವರಾಶಿಗಳ ಚೈತನ್ಯದಲಿ ನೋಡಿ,
ದೀನದಲಿತರ ಬಡಹೃದಯದಲಿ ನೋಡಿ,
ಸಾಕು-ಸಾದು ಪ್ರಾಣಿಗಳ ಒಡನಾಟದಲಿ ನೋಡಿ,
ಪ್ರಾಣಿ, ಪಕ್ಷಿಗಳ ಧ್ವನಿಗಳ ಕಂಪಿನಲಿ ನೋಡಿ, ದೇವರಿರುವಿಕೆಯ ||೨||
ನೈಜ ಸಾಧು ಸಂತರ ಆಚಾರ ವಿಚಾರಗಳಲಿ ನೋಡಿ,
ನೈಜ ಕಲೆಗಾರರ ಪ್ರತಿಭೆಗಳಲಿ ನೋಡಿ,
ನೈಜ ಸಾಹಿತ್ಯಕಾರರ ವಿಚಾರ ಶೈಲಿಗಳಲಿ ನೋಡಿ,
ನೈಜ ವಿಜ್ಞಾನಿಗಳ ಶ್ರದ್ಧೆ-ಕೆಲಸಗಳಲಿ ನೋಡಿ ದೇವರಿರುವಿಕೆಯ ||೩||
ನೈಜ ಶಿಲ್ಪಿಕಾರರ ಕಾರ್ಯ ನೈಪುಣ್ಯತೆಗಳಲಿ ನೋಡಿ,
ಜಾನಪದ ಹಾಡುಗಳಲಿರುವ ಸಂಸ್ಕೃತಿಗಳಲಿ ನೋಡಿ,
ನೈಜ ಕೆಲಸಗಾರರ ಕಾರ್ಯಗಳಲಿ ನೋಡಿ,
ನೈಜ ಕಾರ್ಮಿಕರ ಕಾರ್ಯ ಕೌಶಲ್ಯತೆಯಲಿ ನೋಡಿ ದೇವರಿರುವಿಕೆಯ ||೪||
ಬೆನ್ನೆಲುಬು ರೈತನ ಅಭಿವೃದ್ದಿಯಲಿ ನೋಡಿ,
ನೈಜಯೋಧನ ಗಾಂಭೀರ್ಯ ಮತ್ತು ಶಿಸ್ತಿನಲಿ ನೋಡಿ,
ನೈಜ ಆಟಗಾರರ ಪ್ರತಿಭೆಯಲಿ ಅಡಗಿರುವುದ ನೋಡಿ,
ನೈಜ ರಕ್ಷಕರು ಸಹಿಸಿರುವ ವೇದನೆ, ನೋವಿನಲಿ ನೋಡಿ ದೇವರಿರುವಿಕೆಯ ||೫||
ನೈಜ ದೇಶ ಭಕ್ತನ ತ್ಯಾಗದಲಿ ನೋಡಿ,
ನೈಜ ದಾನಿಗಳ ಮನಸು-ಹೃದಯದಲಿ ನೋಡಿ,
ನೈಜ ಅಧಿಕಾರಿಗಳ ಕಾರ್ಯ ದಕ್ಷತೆಯಲಿ ನೋಡಿ,
ನೈಜ ಶಿಕ್ಷಕರ ಪಾಠ-ಪ್ರವಚನಗಳಲಿ ನೋಡಿ ದೇವರಿರುವಿಕೆಯ ||೬||
ನಳಪಾಕ ಪಂಡಿತರ ಅಡಿಗೆ ರುಚಿಗಳಲಿ ನೋಡಿ,
ನೈಜ ವಿದ್ವಾಂಸರುಗಳ ಪ್ರತಿಭೆಗಳಲಿ ನೋಡಿ,
ನೈಜ ಹಾಡುಗಾರರ ಧ್ವನಿಗಳಲಿ ನೋಡಿ,
ನೈಜ ನಗೆಗಾರರ ಹಾಸ್ಯ-ಸುಭಾಷಣೆಗಳಲಿ ನೋಡಿ ದೇವರಿರುವಿಕೆಯ ||೭||
ನೈಜ ಕವಿಗಳ ವಿಚಾರಧಾರೆಗಳಲಿ ಅಡಗಿರುವುದ ನೋಡಿ,
ನೈಜ ಭಾಷಣಕಾರರ ಮಾತಿನ ಶೈಲಿಯಲಿ ಅಡಗಿರುವುದ ನೋಡಿ,
ವಾದ್ಯಗೋಷ್ಟಿಯ ಕಲೆಗಾರರ ನೈಪುಣ್ಯತೆಯಲಿ ನೋಡಿ,
ಮಗುವಿನ ನಲಿವು ಸಂತಸದಲಿ ಅಡಗಿರುವುದ ನೋಡಿ ದೇವರಿರುವಿಕೆಯ ||೮||
ನೈಜ ಸಮಾಜ ಸೇವಕರ ಭಾವನೆಗಳ ಅಂತರಂಗಗಳಲಿ ನೋಡಿ,
ನೈಜ ಭಕ್ತನ ಅಂತರಂಗದಲಿ ಮಿಡಿಯುವ ಭಕ್ತಿಯಲಿ ನೋಡಿ,
ದೇಶ ರಕ್ಷಣೆಗಾಗಿ ನಿಂತಿರುವ ಯೋಧರ ನೋವಿನಲಿ ನೋಡಿ,
ಸಾಹಸಿಗಳ ಧೈರ್ಯ-ಕಾರ್ಯಗಳಲಿ ನೋಡಿ ದೇವರಿರುವಿಕೆಯ ||೯||
ಪ್ರಾಣಿ-ಪಕ್ಷಿಗಳ ಆಟಪಾಟಗಳಲಿ ನೋಡಿ,
ಹಣ್ಣು ಹಂಪಲುಗಳಲಿ ಅಡಗಿರುವ ರುಚಿಯಲಿ ನೋಡಿ,
ಸಾಲಾಗಿ ಆಹಾರಕ್ಕಾಗಿ ಹೋಗುವ ಇರುವೆಯ ಶಿಸ್ತಿನಲಿ ನೋಡಿ,
ಕಾಯಕವಾಗಿ ಆಹಾರಕಾಗಿ ಹುಡುಕುವ ಪ್ರಾಣಿಗಳ ಕರ್ತವ್ಯಗಳಲಿ ನೋಡಿ
ದೇವರಿರುವಿಕೆಯ ||೧೦||
ಚಿಂತಕರ ಮನದಲಿರುವ ಚಿಂತನೆಯಲಿ ನೋಡಿ,
ತಾಯಿಯಲಿರುವ ಮಮತೆಯ ಪ್ರೀತಿಯಲಿ ನೋಡಿ,
ಪ್ರೀತಿ ಉಕ್ಕಿ ಹರಿಯುವಾಗ ಬರುವ ಆನಂದಭಾಷ್ವದಲಿ ನೋಡಿ,
ನೈಜ ಹಿತ ಚಿಂತಕರ ಮುಖದ ಭಾವನೆಯಲಿ ನೋಡಿ ||೧೧||
09.01.1995-2.50 p.m
103. ಶೂನ್ಯ ಸಂಪಾದನೆ ಮಾಡಿ ಮೋಕ್ಷ ಪಡೆಯಿರೋ :
ಹೇ| ಮಾನವ| ಶೂನ್ಯ ಸಂಪಾದನೆ
ಮಾಡಿ ಮೋಕ್ಷವ ಪಡೆಯಿರೋ ||
ತಾತ್ಸರ ಬೇಡ ಶೂನ್ಯ ಎಂಬ ಪದಕೆ,
ಕಾರಣ ಅದಕುಂತು ದೈವತ್ವದ ಗುಣ ಅದಕಾಗಿ ||ಪ||
ಮನದಲಿರುವ ಆಸೆ-ಆಕಾಂಕ್ಷೆ ತುಳಿದು ಹಾಕಿ,
ಅರಿಷಡ್ವರ್ಗಗಳ ವಾಸನೆಯ ಬಿಸುಟು ಹಾಕಿ,
ಸ್ಥಿತ ಪ್ರಜ್ಞನಾಗಿ ಮನವ ಇಡುವುದಾದರೆ,
ಅಂತರ್ಮುಖಿಯಾಗಿ ಚಿಂತನದ ಕಡೆಗೆ ತಿರುಗಿಸಿದರೆ,
ಆಗುವುದು ಮನಸು ಶೂನ್ಯ,
ಬಂದು ನೆಲೆಸುವನು ಆ ದೇವ,
ಕೊಡುವನು ಆ ದೇವ ದೀಕ್ಷೆ,
ಸಿಗುವುದಾಗ ಮಾನವಗೆ ಮೋಕ್ಷ ಅದಕಾಗಿ ||೧||
ಅಂಕೆ ೧ ದೇವನೊಬ್ಬನೆ ಎಂಬ ಸಂಕೇತ,
ಶೂನ್ಯ ’೦’ ಜಗತ್ತಿನ ಸಂಕೇತ,
೧ ರ ಮುಂದಿನ ೦ ಮುನ್ನೇಡೆಯ ಸಂಕೇತ,
ಹಿಂದಿನ ೧, ರಕ್ಷಕನಾಗಿರುವ ದೈವ ಸಂಕೇತ,
೧೦೦೦೦೦೦ ವಿಶ್ವ ಮುನ್ನುಗ್ಗುತ್ತಿರುವ ಸಂಕೇತ,
೦೦೦೦೦೦೧ ವಿಶ್ವ ಹಿನ್ನುಗ್ಗುತ್ತಿರುವ ಸಂಕೇತ,
ಇದರ ಮರ್ಮವ ತಿಳಿದು ಮುನ್ನುಗು ಅದಕ್ಕಾಗಿ ||೨||
’೦’ ಎಂಬ ಮನಸಿನ ಶೂನ್ಯಕೆ,
ಆಸೆ ಆಕಾಂಕ್ಷೆಗಳ ತುರುಕಬೇಡ,
ಅರಿಷಡ್ವರ್ಗಗಳಿಂದ ತಿವಿಯಬೇಡ,
ಬರಿದು ಮಾಡು ಮನದಲಿಹ ಆಸೆಯ,
ತೊಡೆದು ಹಾಕು ಅರಿಷಡ್ವರ್ಗಗಳ,
ಭಜನೆಯಿಂದ ಶುದ್ಧಮಾಡು ಮನವ,
ಮನವೆಂಬ ಮನೆಗೆ ಕರೆ ದೈವವ ಭಕ್ತಿಯಿಂದ,
ದೇವ ಬರುವನಾಗ ಆ ಮನಕೆ,
ನೆಲೆಗೊಳ್ಳುವ ಹೃದಯದಲಿ,
ಕೊಡುವನಾಗ ದೇವ ನೀ ಕೇಳಿದುದ,
ಆಗ ಕೇಳು ಮೋಕ್ಷವ,
ಸೇರಿಸಿಕೊಳ್ಳುವನಾಗ ನಿನ್ನ ಆತ್ಮವ,
ಆ ಪರಮಾತ್ಮ ತನ್ನ ಆತ್ಮದೊಳಗೆ,
ಆಗ ಆಗುವುದು ಜೀವಾತ್ಮ ಪರಮಾತ್ಮ ಒಂದೇ ಅದಕಾಗಿ ||೩||
19.11.1994-4.25 p.m. kunigal
ಬೇಕೇ ಬೇಕು : ಭಾಷೆಗಳು- ಬೇಕು :
ಬೇಕೇ ಬೇಕು ನಮಗೆ ಭಾಷೆಗಳು,
ಸಹ ಬಾಳ್ವೆಗಾಗಿ ಜೀವಿಸಲು ಬೇಕು,
ಸಮಾಜದ ಒಳಿತಿಗಾಗಿ ಬೇಕು,
ಪರಸ್ವರ ಅರಿಯಲಿಕೆ ಬೇಕು,
ವಿಶ್ವ ಮಾನವರಾಗಲು ಬೇಕು,
ಸಂಕುಚಿತ ಭಾವನೆಯ ಬಿಡಿಸಲು ಬೇಕು,
ವಿಶಾಲ ದೃಷ್ಟಿಯ ಬೆಳೆಸಲು ಬೇಕು,
ದಾನವರಿಂದ ಮಾನವರಾಗಲು ಬೇಕು,
ಮಾನವರಿಂದ ದೇವನಾಗಲಿಕೆ ಬೇಕು,
ಅರಿಷಡ್ವರ್ಗಗಳ ತೊಲಗಿಸಲು ಬೇಕು,
ಪ್ರೀತಿ-ಪ್ರೇಮಗಳ ಬೆಳೆಸಲು ಬೇಕು,
ಸೌಹಾರ್ದತೆಯ ಬೆಸುಗೆಗೆ ಬೇಕು,
ನೀತಿ-ರೀತಿಗಳ ತಿಳಿಸಲು ಬೇಕು,
ಅನೀತಿ ಕೃತ್ಯಗಳ ತಿದ್ದಿಕೊಳ್ಳಲು ಬೇಕು,
ಭಾವನೆಗಳ ಅನುವಾದಕೆ ಬೇಕು,
ಪ್ರತಿಭೆಯ ವಿಕಾಸಕೆ ಬೇಕೇ ಬೇಕು,
ಸಾಹಿತ್ಯ -ಸಂಸ್ಕೃತಿಗಳ ಬೆಳೆಸಲು ಬೇಕು,
ಸುಸಂಸ್ಕೃತಿಗಳ ತೋರಿಸಲಿಕೆ ಬೇಕು,
ಈ ಜಗತ್ತಿನ ಸೂಕ್ಷವ ಅರಿಯಲು
ಎಲ್ಲಾ ಭಾಷೆಗಳು ಇರಲೇ ಬೇಕು.
ಸಾಧ್ಯವಾದಷ್ಟು ಎಲ್ಲರೂ ತಿಳಿದುಕೊಳ್ಳಲೇಬೇಕು.
19.11.1994 -2.45 a.m.kunigal
: ಕಾಯಕ : ಪರಿಶ್ರಮದಿಂದ ಮಾಡುವ ಕೆಲಸ,
ಪ್ರತಿಫಲಾಪೇಕ್ಷೆ ನಿರೀಕ್ಷಿಸದೇ ಮಾಡುವ ಕೆಲಸ,
ಅರಿಷಡ್ವರ್ಗ ರಹಿತದಿಂದ ಇರುವ ಕೆಲಸ,
ಸಮಾಜದ ಒಳಿತಿಗಾಗಿ ಮಾಡುವ ಕೆಲಸ,
ಆಸೆ ಆಕಾಂಕ್ಷೆಗಳ ಲೇಪನ ಇಲ್ಲದ ಕೆಲಸ,
ಸತ್ಯ ಶುದ್ಧವಾಗಿ ಏಕನಿಷ್ಠೆಯಿಂದ ಮಾಡುವ ಕೆಲಸ,
ಸಮಾಜದ ಉದ್ದಾರಕೆ ಬೆವರು ಸುರಿಸಿ ಮಾಡುವ ಕೆಲಸ,
ಆ ದೇವನೂ ಸಹ ತಲೆದೂಗುವಂತಹ ಕೆಲಸವೇ ಕಾಯಕ.
09.03.1994- 4.00 a.m.
ಪ್ರತಿಭೆ : ಸಮಾಜದ ಏಳಿಗೆಗೆ, ಅಭಿವೃದ್ಧಿ
ಮತ್ತು ಮನಸಿನ ವಿಕಾಸಕೆ ದೇವರು ಕೊಟ್ಟ ವರವೇ ’ಪ್ರತಿಭೆ’
10.03.1994- 4.30 a.m.
ಅಧಿಕಾರ : ಮನೆಯಲ್ಲಿ ನಡೆಯುವುದಿಲ್ಲ ಅಧಿಕಾರ,
ಕಛೇರಿಯಲ್ಲಿ ತೋರಿಸುವುದು ರಾಯಭಾರ,
ಆದರೂ ಅಂತರ್ಮುಖಿಗೆ ಆಗಿದೆ ಖಾರ,
ತೋರಿಸಲಿಕೆ ಆಗುವುದಿಲ್ಲ ಭಾರ,
ಜೀವನವಿಡೀ ಆಗಲಿಲ್ಲ ಮನ ಹಗುರ.
31.12.1993 -2.30 a.m.
ಶುಭಾಶಯ : ಬರಲಿರುವ ಹೊಸ ವರ್ಷ,
ಮನೆ ಮನೆಗೆ ತರಲಿ ಹರ್ಷ,
ಇದ್ದರೆ ನಿಲ್ಲಲಿ ರೋಷ,
ಗುಣದಲ್ಲಿ ಮರೆಯಲಿ ಪೌರುಷ,
ಮನದಲ್ಲಿ ಕುಣಿಯಲಿ ಸಂತಸ,
ಬಾಯಲ್ಲಿ ಬರದಿರಲಿ ಕರ್ಕಷ,
ಎಲ್ಲೂ ಹುಟ್ಟದಿರಲಿ ಸಂಘರ್ಷ,
ನ್ಯಾಯಕ್ಕಾಗಿ ಇರಲಿ ನಿಷ್ಕರ್ಷ,
ಸಮಾಜಕ್ಕೆ ಸಿಗಲಿ ನಿಮ್ಮ ಆದರ್ಶ,
ಇದುವೆ ನನ್ನ ಹೊಸ ವರ್ಷದ ಶುಭಾಶಯ.
18.11.1993 -2.00 a.m.
ಯುವವಾಣಿ : ವಿವೇಕನಂದರ ರೀತಿಯಲ್ಲಿ ಏರಲಿಲ್ಲ. ಧ್ವನಿ.
ಬಹುಪಾಲು ಯುವಕರಿಗೆ ’ಬಾರ್’ ಆಗಿದೆ Honey,
ಸಿರಿವಂತ ಯುವಕರಲ್ಲಿ ಬೇಕಾದಷ್ಟಿದೆ Money,
ಬಹುಪಾಲು ಯುವಕರಲ್ಲಿ ಏರಿಸಲಿಕೆ ಇಲ್ಲ ನೈಜ ದನಿ,
ಹುಡುಕಿದರೂ ಸಿಗುವುದಿಲ್ಲ ಮನದಲ್ಲಿ ಚಿಂತನೆಯ ಗಣಿ,
ಅಧಿಕಾರ ದಾಹಕ್ಕೆ ಮಾಡುವರು ಹಣಾಹಣಿ,
ಅಶಿಸ್ತು, ಅನ್ಯಾಯ ಪ್ರತಿಭಟಿಸಲು ಇವರಲಿಲ್ಲ ವಾಣಿ,
ಕೆಲವರು ಅದೃಷ್ಟ ಅರಸುತ್ತ ಕೇಳುವರು ಕಣಿ,
ಸುಪ್ತ-ಪ್ರತಿಭೆ ವಿಕಸಿಸಲು ಬಹಳರಲ್ಲಿಲ್ಲ ಹಣದ ಏಣಿ,
ಈ ರೀತಿ ಆಗಿ ಕುಗ್ಗುತ್ತಲ್ಲಿದೆ ಇವರ ನೈಜ ಯುವವಾಣಿ.
07.12.1993 - 11.30 p.m.
ಮುದುಕ : ಬಾಯಿಯಲ್ಲಿ ಆಡುವುದು ದೇವನ ನಾಮ,
ಮನಸಿನಲಿ ಸದಾ ಹೆಂಗಸರ ನಾಮ,
ತೋರ್ಪಡಿಸುವನು ಹೊರಗೆ ನಿತ್ಯ ನಿಷ್ಟೆ ನಿಯಮ,
ಚಪಲದಲಿ ಎಲ್ಲರನೂ ಮೀರಿಸುವ ತನ್ನ ಕಾಮ.
07.12.1993 - 12.30.p.m.
ಕಾಮ : ಸಕಲ ಜೀವರಾಶಿಗಳಲ್ಲಿ ಅಡಗಿರುವ,
ಅಗತ್ಯವಾಗಿ ಉಪಯೋಗಿಸಲೇ ಬೇಕಾಗಿರುವ,
ದೇವರು ಕೊಟ್ಟ ವರ.
17.11.1993
ಲಾಟರಿಯ ಕೋಟಿ ರೂಪಾಯಿ :
೧. ಬರುವುದಾದರೆ ಲಾಟರಿಯಲ್ಲಿ ಕೋಟಿ ರೂಪಾಯಿ,
ಹಿಡಿಯುವುದು ಸರ್ಕಾರ ತೆರಿಗೆಯಾಗಿ ನಲವತ್ತು ಲಕ್ಷ,
ದಾನ ಧರ್ಮದ ಲೆಕ್ಕಕ್ಕೆ ಕಸಿಯುವರು ಲಕ್ಷ-ಲಕ್ಷ,
ಸಾಲಗಳ ತೀರಿಸಲಿಕೆ ಬೇಕು ಲಕ್ಷ-ಲಕ್ಷ,
ಬಂಧು-ಬಳಗ ಕೇಳುವರು-ಕೀಳುವರು ಲಕ್ಷ-ಲಕ್ಷ,
ಸ್ನೇಹಿತರು ಸಾಲವಾಗಿ ಕೀಳುವರು ಲಕ್ಷ-ಲಕ್ಷ,
ಬುದ್ದಿ ಕೆಟ್ಟು ಮುಂದೆ ನಿಂತು ಖರ್ಚು ಮಾಡಿತು ಲಕ್ಷ-ಲಕ್ಷ,
ದುರುಪಯೋಗವಾಯಿತು ಕೆಟ್ಟ ಯೋಜನೆಯಲ್ಲಿ ಲಕ್ಷ-ಲಕ್ಷ,
ಮೈ-ಮೇಲೆ ಹೊರೆ ಪುನಃ ಸಾಲವಾಗಿ ಬಂತು ಲಕ್ಷ-ಲಕ್ಷ,
ಪುನಃ ಕಾಯಬೇಕಾಯಿತು ಲಾಟರಿಯ ಕೋಟಿ ರೂಪಾಯಿ.
೨. ಬಂದಿತಾದರೆ ಲಾಟರಿಯಲ್ಲಿ ಕೋಟಿ ರೂಪಾಯಿ,
ಕೊಡುವೆ ಸರ್ಕಾರಕ್ಕೆ ತೆರಿಗೆಯಾಗಿ ನಲವತ್ತು ಲಕ್ಷ,
"ವಿಕಾಸ"ಗಳಲ್ಲಿ ತೊಡಗಿಸುವೆ ಇಪ್ಪತ್ತು ಲಕ್ಷ,
ಮಕ್ಕಳಿಬ್ಬರ ಮನೆ ನಿರ್ಮಾಣಕ್ಕೆ ಖರ್ಚು ಇಪ್ಪತ್ತು ಲಕ್ಷ,
ಪಿಂಚಣಿಯಾಗಿ ಇಡುವೆ ಹತ್ತು ಲಕ್ಷ,
ಮಡದಿಗೆ ಕೊಡುವೆ ಖರ್ಚಿಗೆ ಐದು ಲಕ್ಷ,
ದಾನ ಧರ್ಮಕ್ಕೆಂದು ತೆಗೆದಿಡುವೆ ಮೂರು ಲಕ್ಷ,
ಮನಸಿನ ಮೋಜಿನ ಖರ್ಚಿಗೆ ಉಳಿದಿದ್ದು ಎರಡು ಲಕ್ಷ.
೩. ಲಾಟರಿಯಲ್ಲಿ ಬರುವುದಾದರೆ ಕೋಟಿ ರೂಪಾಯಿ,
ಸರ್ಕಾರ ತೆಗೆದುಕೊಳ್ಳುವುದು ತೆರಿಗೆಯಾಗಿ ಸ್ವಲ್ಪಹಣ,
ಸಾಲ ತೀರಿಸಲಿಕ್ಕೆ ಉಪಯೋಗಿಸುವೆ ಅಲ್ಪ ಹಣ,
’ವಿಕಾಸ’ಗಳ ಯೋಜನೆಯಲ್ಲಿ ವಿನಿಯೋಗಿಸುವೆ ಉಳಿದ ಹಣ.
20.04.1993
17. ಕಾಮ : ಇದು ದೈವ ಸೃಷ್ಟಿಯ ನಿಯಮ,
ಸಕಲ ಜೀವರಾಶಿಗಳಿಗೂ ಅನ್ವಯಿಸುವ ನಿಯಮ,
ಅತಿಕಾಮಿಯಿಂದ ಮಾನಕ್ಕೆ ಕುತ್ತು, ಸಮಜಕ್ಕೆ ಕೆಡುಕು,
ಮಿತಕಾಮಿಯಿಂದ ದೇಶಕ್ಕೆ ಹಿತ, ಸಮಜಕ್ಕೆ ಒಳಿತು,
ಮಿತಕಾಮಿಯಿಂದ ಸಂಸಾರ ಸುಖಸಾಗರ,
ಇದರಿಂದಲೇ ಆಗಿದೆ ಚರಿತ್ರೆಗಳ ಒಳಿತು-ಕೆಡುಕುಗಳು.
25.05.1993
ಸಂಸಾರದ - ಸಾರ:
ಮನೆಯಲ್ಲಿ ಮಕ್ಕಳು,
ಒಬ್ಬನೇ ಮಗ/ಮಗಳಿದ್ದರೆ ಸಂಸಾರದಲ್ಲಿ ಶಿಸ್ತು,
ಇಬ್ಬರಾದರೆ ಜೀವನದಲ್ಲಿ ಕಸರತ್ತು,
ಮೂವರಾದರೆ ಸಮಾಜಕ್ಕೆ ಸುಸ್ತು,
ನಾಲ್ಕು ಆದರೆ ಸರ್ಕಾರಕ್ಕೆ ಕುತ್ತು,
ಐದು ಆದರೆ ದೇಶಕ್ಕೆ ಆಪತ್ತು,
ಬಹಳ ಜಾಸ್ತಿ ಆದರೆ ಎಲ್ಲರಿಗೂ ವಿಪತ್ತು,
ಇದರ ಬಗ್ಗೆ ಯೋಚಿಸು ಕಿಂಚಿತ್ತು.
10.08.1999 – 1.55 a.m.
ಕಾಮ-ಕಾಮ-ಕಾಮ : ಇದು ಒಂದು ರೀತಿಯ ಮಾನಸಿಕ ನೋವು ಕೀವು ತೆಗೆದರೆ ಮನಸಿಗೆ ಹಿತ, ಇಲ್ಲದಿದ್ದರೆ ಮನಕೆ ಹಿತ ನೋವು, ಬಾಯಲ್ಲಿರುವ ಬಿಸಿ ತುಪ್ಪದಂತೆ ನಿಗ್ರಹಿಸಲು ಕಷ್ಟ, ಉಪಯೋಗಿಸಲು ಹೆದರಿಕೆ, ಒಂದು ರೀತಿಯ ತೊಳಲಾಟ, ಹಿತಮಿತ ಉಪಯೋಗ ಸಮಾಜಕೆ ಒಳಿತು.
ಹುಲಿಯೂರು ದುರ್ಗ ದಲ್ಲಿ ಬರೆದದ್ದು ೧೮.೮.೧೯೯೫-೧೧.೦೦ p.m.
ಮಾನವ ನರಭಕ್ಷಕನಾದರೆ !!!
೧] ಇಳಿಯುವುವು : - ಜನಸಂಖ್ಯೆ, ಆಸ್ತಿಪಾಸ್ತಿಗಳ ದರ, ಷೇರು ವ್ಯವಹಾರಗಳ ದರ, ಪಿಂಚಣಿದಾರರ ಖರ್ಚು, ಹಿರಿಯರುಗಳ ಖರ್ಚು- ವೆಚ್ಚ, ಸೋಮಾರಿಗಳ ಸಂಖ್ಯೆ, ಆಲಸಿಗಳ ಸಂಖ್ಯೆ, ಚಿನ್ನ ಬೆಳ್ಳಿಗಳ ದರ, ದವಸ ಧಾನ್ಯಗಳ ದರ, ತರಕಾರಿಗಳ ದರ, ಒಡವೆ ವಸ್ತ್ರಗಳ ದರ, ಸಂಬಳ-ಸಾರಿಗೆ ಭತ್ಯ, ಮನೆ ಬಾಡಿಗೆಗಳ ದರ, ನೀರು ವಿದ್ಯುತ್ ಗಳ ದರ, ಮದುವೆಗಳ ಖರ್ಚು, ವೈಭೋಗ ವೆಚ್ಚದ ಖರ್ಚು, ಅಲಂಕಾರಿಕ ಸಾಮಗ್ರಿಗಳ ಖರ್ಚು, ವಾಹನ-ರೈಲುಗಳ ದರ, ಕುಡಿತದ ವೆಚ್ಚಗಳ ದರ, ಹೋಟೆಲುಗಳ ದರ, ಕೊನೆಗೆ ಕಲೆ-ಸಾಹಿತ್ಯ-ಸಂಸ್ಕೃತಿ.
೨] ಇರುವುದಿಲ್ಲ :- ಜನಸ್ಫೋಟ, ನಿರುದ್ಯೋಗ, ಸೂರಿನ ಕೊರತೆ, ಪರಿಸರ ಮಾಲಿನ್ಯ, ಶಬ್ಧ ಮಾಲಿನ್ಯ, ನಾನಾ ಮಾಲಿನ್ಯಗಳು, ಸೋಮಾರಿಗಳ ಕೂಟ, ಜಾತಿ-ಭೇದಗಳು, ಆಸ್ತಿಗಾಗಿ ಕಾದಾಟ, ಅಧಿಕಾರಕಾಗಿ ಕಾದಾಟ, ಅಂತಸ್ತಿಗಾಗಿ ಕಾದಾಟ, ರಾಜಕಾರಣಿಗಳ ಕಾಟ, ಅಧಿಕಾರಿಗಳ ಲಂಚ, ಮಿಸಲಾತಿ ಪದ್ದತಿ, ರಾಜಕಾರಣಿಗಳಿಗೆ ಕೆಲಸ, ಕೈಗಾರಿಕಾ ಉತ್ಪಾದನೆ, ಆಹಾರ-ಧಾನ್ಯಗಳ ಉತ್ಪಾದನೆ, ಸರ್ಕಾರದ ಖೋತಾ ಬಜೆಟ್, ಹೊನ್ನು-ಹೆಣ್ಣು-ಮಣ್ಣಿಗಾಗಿ ಹೋರಾಟ, ಕೊನೆಗೆ ಜೀವನದಲ್ಲಿ ಆಸೆ.
೩] ಹೆಚ್ಚುವುವು :- ಕೆಲಸಗಳು, ಉದ್ಯೋಗಗಳು, ಸಂಬಳ-ಸಾರಿಗೆ ಭತ್ಯಗಳು, ಬಲಿಷ್ಟ-ಕುಯುಕ್ತಿ ವ್ಯಕ್ತಿಗಳು, ಉಳಿಯುವಿಕೆಗಾಗಿ ಕಾದಾಟಗಳು, ಸಾಧು ಪ್ರಾಣಿಗಳ ಸಂಖ್ಯೆ, ಪರಿಸರ ನೈರ್ಮಲ್ಯ, ಅರಿಷಡ್ವರ್ಗಗಳ ಕಾದಾಟ, ಜೀವನಕ್ಕಾಗಿ ಹೋರಾಟ, ಕಳ್ಳತನ, ಹಾದರ, ದುರ್ವವ್ಯಹಾರ, ಅನೈತಿಕತೆ, ಕೊನೆಗೆ ಮಾನವನ ಚೀರಾಟ.
೪] ಕೊನೆಗೆ ಉಳಿಯುವುವು : ಮಾನವನ ದೇಹ ಪಂಜರ ಮತ್ತು ಪಳಿಯುಕೆಗಳು.
04.11.03-3.30 p.m. -ಮಂಗಳವಾರ -ಕವನ
ಹಿಂದಿನ ಉನ್ನತ ವರ್ಗದವರು :
ಜೀವನೋಪಾಯಕ್ಕಾಗಿ,
ಕಲಿತ ವಿದ್ಯೆಯನ್ನು-ಜ್ಞಾನವನ್ನು,
ಸ್ವಾರ್ಥಿಯಾಗಿಸಿಕೊಂಡು,
ಸಾಮಜಕ್ಕೆ, ಅನ್ಯರಿಗೆ ತಿಳಿಸದೆ-ಹಂಚದೆ,
ರಾಜ, ಕ್ಷತ್ರಿಯವರನ್ನು ಹೊಗಳುತ,
ಕೊಡುವ ಬಹುಮಾನಗಳನ್ನು,
ಸ್ಪೀಕರಿಸಿ ಜೀವನ ನಡೆಸುತ,
ದೇವರುಗಳು ದೇವತೆಗಳನ್ನು
ಸೃಷ್ಟಿ ಮಾಡಿ, ಅವಿದ್ಯಾವಂತರಿಗೆ
’ಜೋತಿಷ್ಯ’ ಹೇಳಿ, ನಂಬಿಸಿ,
ಭಯ ಪಡಿಸಿ, ಪರಿಹಾರಕ್ಕೆಂದು
ದ್ರವ್ಯ ಕೇಳಿ ಪಡೆದುಕೊಂಡು,
ಕೆಲವು ಜನತೆಯನ್ನು
ವೈಶ್ಯ-ಶೂದ್ರರೆಂದು ವಿಭಾಗಿಸಿ,
ಅವರನ್ನು ಅಧೀನರನ್ನಾಗಿಸಿಕೊಂಡು,
ಬದುಕಿದ್ದ ಕೆಟ್ಟ ಜೀವಿಗಳು, [ತಮ್ಮ ಹಿಂದಿನ ಪೀಳಿಗೆಯವರು]
ಎಂದು ಹೇಳುತ್ತಿದ್ದಾರೆ, ಈಗಿನ ಕೆಲವು ಉನ್ನತ ವರ್ಗದ ಗುಂಪಿನವರೇ.
ಮಂಗಳವಾರ- 04.11.03 -3.50 p.m.
ಕವನ
ಇಂದಿನ ಉನ್ನತ ವರ್ಗದವರು :
ಆಧುನೀಕತೆಗೆ ತಕ್ಕಂತೆ,
ಮೊದಲಿದ್ದ ಆಚಾರ, ವಿಚಾರ,
ವ್ಯವಹಾರ ಬದಿಗೊತ್ತಿ,
ಪರರ ಮೇಲೆ ಹೇರುತ್ತಾ, ತಮಗೆ ಅನ್ವಯಿಸಿಕೊಳ್ಳದೆ,
ಈಗಿರುವರು ಕೆಲವು-ಅನೇಕ ಉನ್ನತ ವರ್ಗದವರು.
ದೇವರುಗಳು-ದೇವತೆಗಳನ್ನು ಪ್ರತಿಷ್ಠಾಪಿಸಿ,
ಜೋತಿಷ್ಯ-ಪೂಜೆ-ಯಜ್ಞ, ಇತ್ಯಾದಿ,
ರೀತಿಯಲ್ಲಿ ಕೆಲಸಗಳನ್ನು ಸೃಷ್ಟಿಸಿ ಹಂಚಿಕೊಂಡು,
ಅನ್ಯಜಾತೀಯವರಿಗೆ, ಭವಿಷ್ಯ ಹೇಳಿ, ಭಯ ಹುಟ್ಟಿಸಿ,
ದೇಹ-ಮನವ ನೋಯಿಸಿ,
ಪರಿಹಾರಕ್ಕೆಂದು ಹಣವ ವಸೂಲಿ ಮಾಡಿ,
ಜೀವನೋಪಾಯಕ್ಕೆ, ದಾರಿ ಮಾಡಿಕೊಳ್ಳುತ್ತಾರೆ. ಈಗಿನ ಇನ್ನೂ ಕೆಲವು
’ಉನ್ನತವರ್ಗ’ ಎಂದೆನಿಸುವ ಗುಂಪುಗಳು.
ಸೋಮವಾರ - 15.10.2001 – 2.35 a.m.
ವಿಶ್ವದ ಹುಚ್ಚರು !!!
ಸೃಷ್ಟಿಕರ್ತ ದೇವನನ್ನು ನಂಬದವರು.
ಸಕಲ ಜೀವರಾಶಿಗಳಲ್ಲಿ ಲೇಸನ್ನು ಬಯಸದವರು.
ಪರಿಸರ ಮಾಲಿನ್ಯ ಮಾಡುವವರು.
ವಿಶ್ವ ಬಂಧುತ್ವ ಬಯಸದವರು.
ದೇವನೊಬ್ಬನೆ ಎಂದು ಏಕದೇವೋಪಾಸನೆ ಮಾಡದವರು.
ಸರಳ ಜೀವನ ನಡೆಸದವರು.
ನಡೆ ಒಂದು ಪರಿ ನುಡಿ ಒಂದು ಪರಿ ಇರುವವರು
ಇತಿಮಿತಿ ಇಲ್ಲದೆ ಹಣ ವ್ಯಯ ಮಾಡುವವರು.
ಕಾಯಕ ಇಲ್ಲದೆ ಜೀವಿಸುವವರು.
ಪರಾವಲಂಬಿಗಳು.
ಸಮಾಜದ ಹಣ ಪೋಲು ಮಾಡುವವರು.
ಭ್ರಷ್ಟಾಚಾರಿಗಳು -ಲಂಚಕೋರರು.
ಮಾರ್ಗದರ್ಶನ ಇಲ್ಲದೆ ಜೀವಿಸುವವರು
ವಿಚಾರ ಇಲ್ಲದ ಮಾನವರು.
ಅರಿಷಡ್ವರ್ಗಗಳ ಗುಣಗಳಲ್ಲಿ ಮುಳುಗಿದವರು.
ಆಡಂಬರ ಜೀವನ ನಡೆಸುವವರು.
ಏಕಾಗ್ರತೆ ಇಲ್ಲದೆ ಪೂಜಿಸುವವರು.
ಸಮಾಜಕ್ಕೆ ದ್ರೋಹ ಮಾಡುವವರು.
ಹೃದಯದಲ್ಲಿರುವ ದೇವನ ಇರುವಿಕೆಯನ್ನು ತಿಳಿಯದವರು.
ಮೂಡನಂಬಿಕೆಯಲ್ಲಿ ಜೀವನ ನಡೆಸುತ್ತಿರುವವರು.
ಪಾರಮಾರ್ಥಿಕ ವಿಷಯ ತಿಳಿಯದವರು.
ಅರಿಷಡ್ವರ್ಗಗಳಿಗೆ ದಾಸರಾಗಿರುವವರು.
ಶರಣರ -ದಾಸರ -ಸಾಧು ಸಂತರ ಜೀವನಶೈಲಿಯನ್ನು
ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳದವರು.
ಜೀವನ ಕ್ರಮ ತಿಳಿಯದವರು.
ಹಣದ ಆಯ-ವ್ಯಯದ ಲೆಕ್ಕ ಇಡದವರು.
ಜೀವನ ಮೌಲ್ಯದ ಗುಣಗಳನ್ನು ತಿಳಿಯದವರು.
15.06.1998 -. 2.30 a.m.
ಬಡತನಕ್ಕೆ ಕಾರಣ-ನಿವಾರಣೆ :
-:ಕಾರಣ :-
೧] ಸಮಾಜ ರೂಪಿಸಿರುವ ಅರ್ಥ ಅವ್ಯವಸ್ಠೆ.
೨] ಮೂಢನಂಬಿಕೆಯಿಂದ ಮಾಡುವ ವೆಚ್ಚ
೩] ಕುಡುಕರಿಂದ ಆಗುವ ಅನಾಹುತ.
೪] ಉಳ್ಳವರು ಮಾಡುವ ಅರ್ಧವೆಚ್ಚ.
-:ನಿವಾರಣೆ :-
೧] ಬಸವಣ್ಣನವರ - ಶಿವಶರಣರ ಜೀವನ ಕ್ರಮ.
೨] ಕಾಯಕದಿಂದಲೇ ಜೀವನ ನಡೆಸುವುದು.
೩] ದಿನದ ಅವಶ್ಯಕತೆಗಿಂತ ಹೆಚ್ಚಾದುದನ್ನು ತಿರುಗಿಸಿ ಸಮಾಜಕ್ಕೆ ಕೊಡುವುದು.
**********
17.06.1999 – 2.30 a.m.
ಹುಟ್ಟು ಹಬ್ಬ- ಇದಕ್ಕಾಗಿಯೇ? ಏಕೆ ಬೇಕು? ಹುಟ್ಟು ಹಬ್ಬ! ಯಾವ ಸಾಧನೆಗಾಗಿ ?
ಪ್ರಪಂಚದ ಆಗು -ಹೋಗುಗಳ ಬಗ್ಗೆ ಯೋಚನೆಇಲ್ಲ,
ದೇಶದ ಅರಿವಿನ ಬಗ್ಗೆ ಚಿಂತಿಸಲಿಲ್ಲ,
ರಾಜ್ಯದ ಪ್ರಗತಿ-ಕುಂಠಿತದ ಬಗ್ಗೆ ಅರಿವಿಲ್ಲ,
ಸಂಸ್ಥೆ-ಕಛೇರಿ ಕೆಲಸದ ಬಗ್ಗೆ ಕಾಳಜಿಯಿಲ್ಲ,
ಮಕ್ಕಳ ಅಭಿವೃದ್ದಿಯ ಬಗ್ಗೆ ಚಿಂತೆ ಇಲ್ಲ,
ಸಮಾಜದ ಒಳಿತು-ಕೆಡಕುಗಳ ಬಗ್ಗೆ ಸಲಹೆಗಳಿಲ್ಲ,
ಪರಿಸರದ ಸಮತೋಲನದ ಬಗ್ಗೆ ಸಹಕರಿಸಲಿಲ್ಲ,
ಇದಕ್ಕಾಗಿ ಬೇಕೆ? ಹುಟ್ಟು ಹಬ್ಬ?
ಟಿ.ವಿ.ನೋಡಲಿಕ್ಕೆ ಉಂಟು ಕಾಲ,
ಕಾಡ -ಹರಟೆ ಹೊಡೆಯಲಿಕ್ಕೆ ಉಂಟು ಕಾಲ,
ಕಛೇರಿ ಕೆಲಸ ಮಾಡಲಿಕ್ಕೆ ಇಲ್ಲ ಕಾಲ,
ಸ್ವಂತ ಕೆಲಸ ಮಾಡಲಿಕ್ಕೆ ಉಂಟು ಕಾಲ,
ಸಮಾಜ ಸೇವೆ ಮಾಡಲಿಕೆ ಇಲ್ಲ ಕಾಲ,
ಸಿನಿಮಾ ನೋಡಲಿಕೆ, ಮೋಜು ಮಾಡಲಿಕೆ ಉಂಟು ಕಾಲ,
ಮನಸಿನಲ್ಲಿ ಚಿಂತನೆಗೆ ಇಲ್ಲ ಕಾಲ,
ಆದರೆ ಹಣ ಪೋಲು ಮಾಡಲಿಕೆ ಉಂಟು ಕಾಲ,
ಈ ಎಲ್ಲ ಸಾಧನೆಗಾಗಿ ಮಾಡಬೇಕು ಅಲ್ಲವೆ !
ಹುಟ್ಟು ಹಬ್ಬ.
17.06.1999 – 3.30 a.m.
ಹುಟ್ಟು ಹಬ್ಬ ಹೀಗಿದ್ದರೆ?? ಹೇಗೆ!!
ಹುಟ್ಟು ಹಬ್ಬದ ನೆನಪಿಗಾಗಿ,
ಗಣರಾಜ್ಯೋತ್ಸವ ದಿನದಂದು,
ಸ್ವಾತಂತ್ರ್ಯ ದಿನಾಚರಣೆಯ ದಿನದಂದು,
ಕನ್ನಡ ರಾಜ್ಯೋತ್ಸವ ದಿನದಂದು,
ಮಹಾತ್ಮ ಗಾಂಧಿಯ ಜನ್ಮೋತ್ಸದ ದಿನದಂದು,
ಮತ್ತು ಹುಟ್ಟು ಹಬ್ಬದ ದಿನದಂದು,
ಸರ್ಕಾರಿ ಆಸ್ವತ್ರೆಗಳಲ್ಲಿರುವ ಬಡರೋಗಿಗಳಿಗೆ,
ವೃದ್ಧಾಶ್ರಮದಲ್ಲಿರುವ ವಯೋ -ವೃದ್ಧರಿಗೆ,
ಅಂಗವಿಕಲರಿಗೆ, ದೀನ ದಲಿತರಿಗೆ,
ಬಡ ಬಗ್ಗರಿಗೆ, ಸಾಧು ಪ್ರಾಣಿಗಳಿಗೆ,
ಮನಃ ಪೂರ್ವಕವಾಗಿ, ಕೈಲಾದಷ್ಟು ಮಟ್ಟಿಗೆ,
ಧನ ಸಹಾಯ ಮಾಡುವುದಾದರೆ,
ಹಣ್ಣು ಹಂಪಲು ಹಂಚುವುದಾದರೆ,
ರಕ್ತದಾನ ಮಾಡುವುದಾದರೆ, ಅದೇ ನೈಜ ಹುಟ್ಟು ಹಬ್ಬ.
ಇದರಲ್ಲಿ ಇಲ್ಲ ಹಣ ಪೋಲು ಆಗುವಿಕೆ,
ಇದರಲ್ಲಿ ಸಿಗುವುದು ಹಿರಿಯರ ಆಶೀರ್ವಾದ,
ಇದರಿಂದ ಉಂಟು ಮನಸಿನಲಿ ಆನಂದ,
ಇದರಿಂದ ಆಗುವುದು ಸಮಾಜಕೆ ಮಾರ್ಗದರ್ಶನ,
ಇದರಿಂದ ಆಗುವುದು ಸಮಾಜಕೆ ಒಳಿತು, ಕಿಂಚು ಸೇವೆ,
ದೇಶಕ್ಕೆ ನಮನ.
ಕೊನೆಗೆ ಆಯಿತು -ಹುಟ್ಟು ಹಬ್ಬದ ಸಾರ್ಥಕ.
************
0.10..2003- ಗುರುವಾರ -5.50 p.m.
ಜಿಜ್ಞಾಸೆ - ಪರಿಹಾರ- ’ಹಾಸಿಗೆ ಇದಷ್ಟು ಕಾಲು ಚಾಚು’- ಗಾದೆ. : ಆ ಕಾಲದಲ್ಲಿ ಅಭಿವೃಧ್ಧಿ ನಿದಾನಗತಿ ಇದ್ದಾಗ ಹಾಸಿಗೆ ಇದ್ದಷ್ಟು ಕಾಲು ಚಾಚು ಸರಿಯೆನಿಸುತ್ತಿತ್ತು. ಈಗ ವೈಜ್ಞಾನಿಕವಾಗಿ ಮುಂದುವರಿದ ಕಾಲದಲ್ಲಿ ಹಾಸಿಗೆ ದೊಡ್ಡದು ಮಾಡಿ ಕಾಲು ಚಾಚು ಸರಿಯೆನಿಸುತ್ತದೆ. ಆದರೆ ಹಾಸಿಗೆ ದೊಡ್ಡದು ಮಾಡದೇ ಕಾಲು ಚಾಚುವುದು ದಡ್ಡತನ. ಅನಾಹುತಕ್ಕೆ ಹಾದಿ. ಇದು ಅಕ್ರಮವಾಗಿ, ಅನ್ಯಾಯದಿಂದ ಸಂಪಾದನೆ ಮಾಡುವವರಿಗೆ ಅನ್ವಯಿಸುವುದಿಲ್ಲ. ಏಕೆಂದರೆ ಇವರು ಮನುಷ್ಯರಲ್ಲ. ಇವರಿಗೆ ನೀತಿಯಿಲ್ಲ, ನ್ಯಾಯ ಸಂಹಿತೆ ಇಲ್ಲ, ಆಚಾರವಿಲ್ಲ, ವಿಚಾರಗೊತ್ತಿಲ್ಲ, ಇತಿ-ಮಿತಿ ಏನೂ ಎಂಬುದು ಗೊತ್ತಿಲ್ಲ. ಇವರು ಗೋಮುಖ ವ್ಯಾಘ್ರಗಳು. ಇವರಿಗೆ ಆಕಾಶವೇ ಇತಿ-ಮಿತಿಗಳು. ಆಸೆ ತೀರುವುದಾದರೆ ಹೆಂಡತಿ-ಹೆಣ್ಣು ಮಕ್ಕಳನ್ನೇ ಮಾರಬಹುದು. ಈ ಮೇಲಿನ ಗಾದೆ ನೈಜ ಸಂಪಾದನೆ ಮಾಡುವವರಿಗೆ. ಹೆಂಡತಿ, ಮಕ್ಕಳು ಸಂಪಾದಿಸುವ ನೈಜ ಆದಾಯ, ಬಾಡಿಗೆ, ಇತರೆ ನ್ಯಾಯ ಸಂಪಾದನೆಯ ಮೂಲ ಜಾಸ್ತಿ ಆದ ಹಾಗೆ, ಸರ್ಕಾರಕ್ಕೆ, ಸಮಾಜಕ್ಕೆ ಸಲ್ಲಿಸಬೇಕಾದ ತೆರಿಗೆ ಸಲ್ಲಿಸಿ, ಉಳಿದ ಹಣದಲ್ಲಿ ಹಾಸಿಗೆ ದೊಡ್ಡದು ಮಾಡಿಕೊಂಡು, ಆಸೆಯೆಂಬ ಕಾಲನ್ನು ಚಾಚುವುದು ಉತ್ತಮ. ಆಸೆಗೂ ಮಿತಿ ಇದೆ. ಆ ಮಿತಿಗೆರೆಯೇ ಹಾಸಿಗೆ. ರಾಷ್ಟ್ರಪತಿ ಕಲಾಂರವರ ಪ್ರಕಾರ ವಿದ್ಯಾರ್ಥಿಗಳಿಗೆ Very Very High Dreams ಇರಬೇಕು. ಆದರೆ ಆಸೆ ಅಲ್ಲ. ಇದು ದೇಶದ ಅಭಿವೃಧ್ಧಿಗೆ ನಾವು ಸಹಕರಿಸುವಾಗ, ಸಮಾಜಕ್ಕೆ ಒಳಿತು ಮಾಡುವಾಗ, ನಮ್ಮ ಗುರಿ (High Dreams) ಅತಿ ದೊಡ್ಡ ಕನಸು ಆಗಿರಬೇಕು. ಸಮಾಜದ ಸೇವೆಗೆ, ದೇಶದ, ರಾಜ್ಯದ ಅಭಿವೃಧ್ಧಿಗೆ ನಾವು ಕೊಡುಗೆಯಾಗಿ ಮಾಡಬಹುದಾದ, ಕೊಡಬಹುದಾದ ಕರ್ತವ್ಯದ ಗುರಿಯಾಗಿರಬೇಕು. ಸರಳ ಜೀವನ ಮಾಡಿ, ದೊಡ್ಡದೊಡ್ದ ಕನಸುಗಳನ್ನು ಕಂಡು, ಮಾರ್ಗದರ್ಶಿಯಾಗಿ ನಡೆದು ತೋರಿಸಿಕೊಟ್ಟವರು, ಅಹಿಂಸಾವಾದಿಗಳು, ಸ್ವಾತಂತ್ರ್ಯ ಹೋರಾಟಗಾರರು, ಸಾಧು-ಸಂತರು, ದಾಸರು, ಶರಣರುಗಳು ಇತ್ಯಾದಿ, ಇತ್ಯಾದಿ. 'SMALL DRIMES ARE CRIMES' ಎಂದರು ಅಬ್ದುಲ್ ಕಲಾಂ ರಾಷ್ಟ್ರಪತಿಗಳು. ಇದೂ ಸಹ ಅಷ್ಟೇ ಸತ್ಯ. ಚಿಕ್ಕ ಚಿಕ್ಕ ಕನಸುಗಳು ದಾರಿ ತೋರಿಸಲಾರವು. ವಿಜಯ ಸಂಕೇಶ್ವರರು, ಕನ್ನಡ ನಾಡು ಪಕ್ಷ ಕಟ್ಟಿ, ರಾಜ್ಯದ ಪ್ರಗತಿಯನ್ನು ಭ್ರಷ್ಟಾಚಾರ-ನಾಟಕೀಯ ರಾಜಕೀಯದಿಂದ ದೂರಮಾಡಿ, ಕಾಣಬೇಕೆಂಬ ಕನಸು, BIG, HIGH DREAMS ದೊಡ್ಡ ಕನಸು. ಇದಕ್ಕೆ, ಸಾಹಿತಿಗಳು, ಬುದ್ದಿಜೀವಿಗಳು ವಿಚಾರವಂತರು, ನಾಗರಿಕ ಸಮಸ್ಯೆ ಹೊಂದಿದವರು, ಕನ್ನಡ ಅಭಿಮಾನ ಹೊಂದಿದವರು, ಕನ್ನಡ - ಪ್ರಜ್ಞೆ ಇರುವವರು, ಸ್ವಾಮಿಗಳವರು, ಮಠ-ಮಾನ್ಯರು, ಎಲ್ಲಾ ಹೊಣೆಯಿರುವ ನಾಗರಿಕರು, [ಈಗಿರುವ ರಾಜಕಾರಣಿಗಳು-ಹಿಂಬಾಲಿಕರು-ಚಮಚಾಗಳನ್ನು ಬಿಟ್ಟು] ಸ್ವಂದಿಸುತ್ತಿರುವುದು. ಇದು ದೊಡ್ಡ ದೊಡ್ಡ ಕನಸು, ಅದರ ಇತಿ ಮಿತಿ ಗೊತ್ತಿದೆ. ದೊಡ್ಡ ಕನಸ್ಸೆಂಬ ಹಾಸಿಗೆ ದೊಡ್ಡದು ಮಾಡುತ್ತಿದ್ದಾರೆ. ಚುನಾವಣೆಗೆ ಭಾಗವಹಿಸಿ, ಕಾಲು ದೊಡ್ಡದು ಮಾಡುತ್ತಿದ್ದಾರೆ. ಹಾಸಿಗೆ ದೊಡ್ಡದಾದರೆ, ಕಾಲು ಚಾಚುತ್ತಾರೆ. ಈ ಉದಾಹರಣೆ ಸಕಾಲಿಕ ಅಲ್ಲವೇ? ಆಸೆಗೆ ಮಿತಿ ಇಲ್ಲದೇ, ಲಾಟರಿ-ಜೂಜು-ಕುಡಿತ-ರೇಸು-Playwin- ಇಂತಹವುಗಳಿಗೆ, ಬಡ-ಅತಿಆಸೆ ಜನರು ಬಲಿಯಾಗಿ, ಶರಣಾಗಿ, ಹಣ-ಪ್ರಾಣ ಕಳೆದುಕೊಂಡವರು ಹಲವಾರು ಮಂದಿ. ಕೇವಲ ಕೆಲವೇ ವ್ಯಕ್ತಿಗಳು ಗೆದ್ದವರು, ಪತ್ರಿಕೆಯಲ್ಲಿ ಬಂದು ನೋಡಿ, ಆಸೆಯನ್ನು ದುರಾಸೆ ಮಾಡಿಕೊಂಡು ಸೋತವರು ಲಕ್ಷ-ಲಕ್ಷ-ಕೋಟಿ-ಕೋಟಿ ಜನಗಳು. ಇದನ್ನೆಲ್ಲ ನೋಡಿದರೆ, ಯಾವಗಲೂ ಜ್ಞಾಪಿಸಿಕೊಳ್ಳೂತ್ತಿದ್ದರೆ ಹಾಸಿಗೆ ನೋಡಿಕೊಂಡು ಕಾಲು ಚಾಚಬೇಕು, ಎನಿಸುತ್ತದೆ. ಅಲ್ಲವೆ? ಆಸೆ ಇಟ್ತುಕೊಳ್ಳಬಾರದೆಂದಲ್ಲ. ಆಸೆಗೆ ಮಿತಿಇರಬೇಕು. ದುರಾಸೆ ಇರಬಾರದು. ಆಸೆ ಇಲ್ಲದೇ ಇದ್ದರೆ ವ್ಯಕ್ತಿ, ಸಮಾಜ, ರಾಜ್ಯ, ದೇಶ, ಪ್ರಪಂಚ ಬೆಳೆಯುತ್ತಲೇ ಇರಲಿಲ್ಲ. ದೈವದ ದೃಷ್ಟಿಯಲ್ಲಿ, ಪ್ರಕೃತಿಯ ಸೃಷ್ಟಿಯಲ್ಲೂ ಸಹ ಬೆಳವಣಿಗೆಗೆ ಮಿತಿ ಇದೆ. ದೇಹದ ಬೆಳವಣಿಗೆಯಲ್ಲಿ, ಊಟದಲ್ಲಿ, ನಿದ್ರೆಯಲ್ಲಿ, ಕೆಲಸದಲ್ಲಿ, ಆಟ-ಪಾಠಗಳಲ್ಲಿ, ದುಡಿತದಲ್ಲಿ, ಇತ್ಯಾದಿ, ಎಲ್ಲದರಲ್ಲು ಮಿತಿ ಇದೆ. ಮನಕ್ಕೆ ಹಿತವಿದೆ. ಬುದ್ದಿ ಹಿಡಿತದಲ್ಲಿರುತ್ತೆ. ಜೇನ್ನೊಣದ ಹಾಗೆ ಒಂದು ಹೂವಿನಿಂದ ಇನ್ನೋಂದು ಹೂವಿಗೆ ಹಾರಿ, ಮಕರಂದ ಹೀರಿ, ಹನಿ ಸಂಗ್ರಹಿಸುತ್ತದೆ. ಗುರಿ ತಲುಪುತ್ತದೆ. ಆದರೆ ಅದೇ ನೊಣ ಎಲ್ಲೆಂದರಲ್ಲಿ ಹಾರಿ, ಪರಿಸರ ಮಾಲಿನ್ಯ ಆರೋಗ್ಯಕ್ಕೆ ಹಾನಿಮಾಡಿಕೊಂಡು, ತನ್ನ ಸಾವು ತಾನೇ ಮಾಡಿಕೊಳ್ಳುತ್ತದೆ. ಇತರರಿಗೂ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ನಮ್ಮ ಆದಾಯ ಗಳಿಕೆಯ ಇತಿ-ಮಿತಿ ನೋಡಿಕೊಂಡು, ಆಸೆಗೆ ಆದಾಯಕ್ಕೆ ತಕ್ಕ ಹಾಗೆ ಇತಿ-ಮಿತಿ ಹಾಕಿ, ಹಾಸಿಗೆ ದೊಡ್ಡದು ಮಾಡಿ ಕಾಲು ಚಾಚೋಣ. ಇದು ಕ್ಷೇಮ. ನವಿಲು ಕುಣಿಯುವುದ ನೋಡಿಕೊಂಡು ಸಂತೋಷಪಡೋಣ.
ಆದರೆ ಕುಣಿಯುವುದಕ್ಕೆ ಹೋಗಿ ರಕ್ಕೆ ಪುಕ್ಕಗಳ ಕಳೆದುಕೊಳ್ಳುವಂತೆ, ನಾವು ಆಗುವುದು ಬೇಡ, ಇತಿ ಮಿತಿಯಲ್ಲಿ ಜೀವನ ನಡೆಸಿ, ಹಾಸಿಗೆ ನೋಡಿ ಕಾಲು ಚಾಚಿ, ಸಮಾಜಕ್ಕೆ, ಸಂಸಾರಕ್ಕೆ ಮಾದರಿ, ದಾರಿ ದೀಪ ಆಗೋಣ. ಹಾಸಿಗೆ ಮೀರಿ ಕಾಲು ಚಾಚಿದ್ದಕ್ಕೆ ಈಗಿನ ಯುವಕರು, ಕೆಲವು ವಿದ್ಯಾರ್ಥಿವೃಂದದವರು, ದಾರಿ ದೀಪ ಕಾಣದೇ ಕಗ್ಗತ್ತಿನಲ್ಲಿ ಎಡವಿದ ಹಾಗೆ, ಆಸೆಗೆ ಕಡಿವಾಣ ಹಾಕದೆ, ದುರಾಶೆಯ ದಾರಿ ಹಿಡಿದು, ಕೊಲೆ-ಸುಲಿಗೆ-ಅತ್ಯಾಚಾರ-ಲಾಟರಿ-ಜೂಜು, ಇತ್ಯಾದಿ ಹೇಯ ಕೃತ್ಯಗಳಲ್ಲಿ ತೊಡಗಿ, ಮನೆಗೆ, ಸಮಾಜಕ್ಕೆ, ದೇಶಕ್ಕೆ ಕಂಟಕ ಪ್ರಿಯರಾಗಿರುತ್ತಾರೆ. ಇದು ಸರಿಯೇ? ಯೋಚಿಸಿ, ವಿಚಾರಿಸಿ, ನಿರ್ಧರಿಸಿ, ಸರ್ಕಾರದ ರೀತಿಯಲ್ಲಿ ಜನತೆಯನ್ನು ಸಾಲುಗಾರರನ್ನಾಗಿ ಮಾಡುವುದು ಬೇಡ. ಮಡದಿ-ಮಕ್ಕಳು ಮತ್ತು ಜೊತೆಗೆ ಸಾಲಗಾರರಾಗಿಯೇ ಉಳಿಯುವುದು ಬೇಡ. "Once a borrower is always a borower" ಎಂಬ ಆಂಗ್ಲ ಭಾಷೆಯ ನಾಣ್ನುಡಿ ಆಗುವುದು ಬೇಡ. ತೀರಿಸುವ ದಾರಿಯಿದ್ದರೆ ಸಾಲ ಮಾಡೋದು, ಹಾಸಿಗೆ ದೊಡ್ಡದು ಮಾಡುವುದು ಉತ್ತಮ. ಇಲ್ಲದಿದ್ದಲ್ಲಿ ಕಾಲು ಚಾಚಿ ಮಲಗುವುದ ಕ್ಕಿಂತ, ಮಡಚಿ ಮಲಗುವುದು ಉತ್ತಮ. ನಾವುಗಳು ಹಾಸಿಗೆ ದೊಡ್ಡದು ಮಾಡುತ್ತಾ ಮಾಡುತ್ತಾ ಕಾಲು ಚಾಚುತ್ತಾ, ಮಲಗೋಣ. ನೀವೇನಂತೀರಿ?? ಕಾಲೆಂಬ ಆಸೆಗೆ ಹಾಸಿಗೆಯೇ ಮಿತಿ. ಒಂದಕ್ಕೊಂದು ಪೂರಕ.
ಇಂತಿ.
ಅನಾಮಿಕ-ಬನಶಂಕರಿ, ಬೆಂಗಳೂರು.
*************
ಸುಧಾ ವಾರಪತ್ರಿಕೆಯಲ್ಲಿ ಬರುವ ’ಉತ್ತರಮುಖಿ’ ಪ್ರಶ್ನೆಗಳಿಗೆ ನನ್ನ ಉತ್ತರ ಅಭಿಪ್ರಾಯ
೧. ನಿಮ್ಮ ಕಲ್ಪನೆಯಲ್ಲಿ ’ಪರಮ ಸುಖ’ ಎಂದರೆ ಯಾವುದು?
ಹಾಸಿಗೆ ಇದ್ದಷ್ಟು ಕಾಲು ಚಾಚಿ ಎನ್ನುವ ಹಾಗೆ, ಇದ್ದುದರಲ್ಲಿಯೇ ತೃಪ್ತಿ ಪಡೆಯುವುದು.
೨. ನಿಮಗೆ ಅತ್ಯಂತ ಆತಂಕ ತರುವ ಸಂಗತಿ ಯಾವುದು?
ಮನಸ್ಸನ್ನು ಆಸೆ ಆಕಾಂಕ್ಷೆಗಳಿಗೆ ತಿರುಗಿಸಿ, ಅದರಿಂದ ಆಗುವ ನಷ್ಟ, ಅನಾಹುತ, ಮೋಸಗಳಿಂದ ಆಗುವ ಪರಣಾಮಗಳು.
೩. ನಿಮ್ಮ ಮೇಲೆ ಅತ್ಯಂತ ಗಾಢ ಪ್ರಭಾವ ಬೀರಿದ್ದು ಯಾರು?
ಶಿವಶರಣ ವಚನಗಳು ಅವರ ಜೀವನ ಕ್ರಮ, ದಾಸರ ಪದಗಳು ಮತ್ತು ಆಕಾಶವಾಣಿಯಲ್ಲಿ ಬರುತ್ತಿದ್ದ ಚಿಂತನಗಳು ಹಾಗೂ ಭಗವದ್ಗೀತೆಯ ಕೆಲವು ಶ್ಲೋಕದ ಅನುವಾದಗಳು.
೪. ಇತರರ ಯಾವ ಗುಣ ನಿಮಗೆ ಹಿಡಿಸುವುದಿಲ್ಲ ?
ಅಂತರ್ಮುಖ ಮತ್ತು ಬಹಿರ್ಮುಖ ವಿವಿಧ ರೀತಿಯಲ್ಲಿದ್ದು ಜೀವನ ನಡೆಸುತ್ತಿರುವವರನ್ನು ಕಂಡಾಗ.
೫. ನಿಮ್ಮ ಯಾವ ಗುಣ ನಿಮಗೇ ಬೇಸರ ತರಿಸುತ್ತದೆ?
ಸಿಟ್ಟುತನ, ಬೇಗ ಮೋಸಹೋಗುವುದು ಮತ್ತು ಆತುರಾತುರ ನಿರ್ಧಾರಗಳು.
೬. ನಿಮ್ಮ ಅಮೂಲ್ಯ ಆಸ್ತಿ ಯಾವುದು ?
ನನ್ನ ಬರಹದ ಕವಿತೆಗಳು/ಕವನಗಳು ಮತ್ತು ದೇವರನ್ನು ಸದಾ ಸ್ಮರಿಸುವ ಆ ದೇವರ ನಾಮಗಳು.
೭. ನೀವು ಸದಾ ನಿಮ್ಮೊಡನೆ ಒಯ್ಯುವ ವಸ್ತು ಯಾವುದು ?
ಈ ಜಗತ್ತಿನ ಸೃಷ್ಟಿಕರ್ತ ದೇವರ ಸಂಕೇತ/ ಸಾಕಾರ ರೂಪವಾದ ಈ ಲಿಂಗ ಮತ್ತು ಕರಡಿಗೆ.
೮] ನೀವು ಎಂದೂ ಮರಯಲಾಗದ ಮಾತು ಯಾವುದು?
"please be wise in spending and always remember wise spending is a good saving"
೯] ನಿಮ್ಮ ಮನಸ್ಸನ್ನು ಬಹುವಾಗಿ ಕುಗ್ಗಿಸುವ ಸಂಗತಿ ಯಾವುದು?
ಕಾಲ ವ್ಯಯ [ಹರಣ] ಮಾಡುತ್ತಿರುವ ಕೆಲಸಗಾರರನ್ನು ಕಂಡಾಗ.
೧೦] ನಿಮ್ಮ ಅತ್ಯಂತ ಪ್ರೀತಿಯ ಓಡಾಟದ ತಾಣ ಯಾವುದು?
ನನ್ನ ದೇವರ ಮನೆ ಮತ್ತು ಓದುವ ಕೋಣೆ.
೧೧] ನಿಮ್ಮ ಜೀವನದ ಅತ್ಯಂತ ಮಹತ್ವದ ನಿರ್ಣಯ ಯಾವುದಾಗಿತ್ತು?
ನನ್ನ ಆಸೆ ಆಕಾಂಕ್ಷೆಗಳನ್ನು ಆದಷ್ಟು ಮಟ್ಟಿಗೆ ಹಿಡಿತದಲ್ಲಿಟ್ಟುಕೊಳ್ಳಬೇಕು ಎಂಬ ನಿರ್ಧಾರ.
೧೨] ನಿಮ್ಮ ಜೀವನದ ಅತ್ಯಂತ ಸಂತಸದ ಕ್ಷಣ ಯಾವುದಾಗಿತ್ತು?
1973 ಡಿಸೆಂಬರ್ ನಲ್ಲಿ ವಿಜಯನಗರದ ಹೊಸಹಳ್ಳಿ ಬಡಾವಣೆಯ ಹತ್ತಿರ ನಡೆದ ಲಿಂಗಾನಂದ ಸ್ವಾಮಿಗಳ ಪ್ರವಚನಗಳು ಮತ್ತು ಜಯದೇವ ನಿಲಯದಲ್ಲಿ ನಡೆದ ಪ್ರವಚನಗಳು ಬೀರಿದ ಪ್ರಭಾವಗಳು.
೧೩] ನೀವು ಮರೆಯಬೇಕೆಂದು ಬಯಸುವ ಕಹಿಕ್ಷಣ?
ನಾನೇ ಕೆಲವು ಸಲ ಮಾಡವ ತಪ್ಪುಗಳು.
೧೪] ಎಂಥಹ ಸಂದರ್ಭಗಳಲ್ಲಿ ನೀವು ಸುಳ್ಳು ಹೇಳುತ್ತೀರಿ?
ಅನೇಕ ಸಂದರ್ಭಗಳಲ್ಲಿ ಧೈರ್ಯವಾಗಿ ಜೀವನ ಎದುರಿಸಲು ಸಾಧ್ಯವಾಗದೇ ಇದ್ದಾಗ.
೧೫] ನಿಮಗೆ ಕಣ್ಣೀರು ಬರಿಸುವ ಸಂಗತಿ ಯಾವುದು?
ಜೀವನಕ್ಕಾಗಿ ದುಡಿಯುತ್ತಿರುವ, ಕಡಿಮೆ ಸಂಬಳ ತೆಗೆದುಕೊಳ್ಳುತ್ತಿರುವ ಹೆಣ್ಣು ಮಕ್ಕಳು ಮತ್ತು 'unorganised labour class'
೧೬] ನಿಮ್ಮ ವಿರಾಮದ ಕ್ಷಣಗಳನ್ನು ನೀವು ಹೇಗೆ ಕಳೆಯುತ್ತೀರ?
ಶಿವನ ನಾಮ ಸ್ಮರಣೆ ಮಾಡುತ್ತ ನಿದ್ರೆ, ವಚನಗಳ ಪಠಣ, ಭಗವದ್ಗೀತೆಯ ಕೆಲವು ಕೆಲವು ಶ್ಲೋಕಗಳ ಅರ್ಥಗಳನ್ನು ತಿರುವು ಹಾಕುತ್ತ ಮತ್ತು ಚಿಂತನಗಳನ್ನು ಓದುತ್ತ ಇರುತ್ತೇನೆ.
೧೭] ನಿಮ್ಮನ್ನು ಜನರು ಹೇಗೆ ನೆನಪಿಸಿಕೊಳ್ಳುತ್ತಿರಬೇಕು?
ಅಂತಹ ವ್ಯಕ್ತಿ ನಾನಲ್ಲ.
೧೮] ನೀವು ಎಂತಹ ಸಾವನ್ನು ಬಯಸುತ್ತೀರಿ?
ಶಿವಪೂಜೆ ಮಾಡುತ್ತಿದ್ದಾಗ ಹಠಾತ್ ಮರಣ.
೧೯] ದೇವರು ನಿಮಗೆ ಮೂರು ವರ ಕೊಟ್ಟರೆ, ಮೂರನೆಯ ವರದಲ್ಲಿ ಏನನ್ನು ಕೇಳುತ್ತೀರಿ?
ಮನೆಗಳಲ್ಲಿ/ಆಸ್ಪತ್ರೆಗಳಲ್ಲಿ ನರಳುತ್ತಿರುವ ರೋಗಿಗಳಿಗೆ ’ಇಚ್ಛಾಮರಣ ಶಕ್ತಿ’ ಕೊಡು ಎಂದು.
೨೦] ನಿಮಗೆ ಅತಿ ಕೋಪ ಬಂದಾಗ ಏನು ಮಾಡುತ್ತೀರಿ?
ಹೆಂಡತಿ ಮಕ್ಕಳ ಮೇಲೆ ಕಿರುಚಾಟ (ಮನೆಯಲ್ಲಿದ್ದಾಗ) ಮತ್ತು ನುಂಗಿಕೊಳ್ಳುತ್ತೇನೆ [ಹೊರಗಡೆ ಇದ್ದಾಗ).
೨೧] ನಿಮ್ಮ ಜೀವನದ ದೊಡ್ಡ ಸೋಲು ಯಾವುದು?
ಹೇಡಿತನದಿಂದ ಜೀವನ ನಡೆಸುತ್ತಿರುವುದು.
೨೨] ನೀವು ಕಂಡ ಅತ್ಯಂತ ಮೋಜಿನ ಸಂಗತಿ ಯಾವುದು?
ಆಡಂಬರಕ್ಕೆ ಸೋತು ಬಿದ್ದಿರುವ ಸಮಾಜ.
೨೩] ಯಾವ ಮೌಲ್ಯಕ್ಕಾಗಿ ನೀವು ನಿಮ್ಮ ಸರ್ವಸ್ವವನ್ನು ತ್ಯಾಗ ಮಾಡಲು ಸಿದ್ದರಿದ್ದೀರಿ?
ಅರಿಷಡ್ವರ್ಗ ರಹಿತ ಗುಣ ಇರುವಂತಹ ವ್ಯಕ್ತಿಯನ್ನು ಕಂಡಾಗ-ಪರೋಪಕಾರಿ.
**********
28.10.1999 – 3.30. a.m. ದೈವ ಸ್ಪೂರ್ತಿ ಪಡೆದ ದಿನ.
ಮಾನವನಲ್ಲಿಯೇ ಇರುವ ಚಾತುರ್ವರ್ಣ ಗುಣ.
ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ
ಇವು ಪ್ರತಿ ಮಾನವನಲ್ಲಿರುವ ಚಾತುರ್ವರ್ಣ ಗುಣ
ಮನದಲ್ಲಿರುವ ಸತ್ ಜ್ಞಾನವೇ ಬ್ರಾಹ್ಮಣ.
ಸತ್ಕಾರ್ಯಕ್ಕೆ ಮನಸ್ಸು ಆದೇಶ ಮಾಡುವುದೇ ಬ್ರಾಹ್ಮಣ ಕರ್ತವ್ಯ.
ಅರಿಷಡ್ವರ್ಗಗಳ ವಾಸನೆಯಿಂದ ಕೂಡಿದ ಜ್ಞಾನ ಬ್ರಾಹ್ಮಣವಲ್ಲ.
ಅದಕ್ಕಾಗಿ ಮಾಡುವ ಆದೇಶ ಕೂಡ ಬ್ರಾಹ್ಮಣ್ಯವಲ್ಲ.
||೧||
ದೇಹ ರಕ್ಷಣೆಗಾಗಿ ಮಾಡುವ ಕಾರ್ಯ ಕ್ಷತ್ರಿಯ ಗುಣ
ಕೆಟ್ಟದ್ದನ್ನು ನೋಡದಿರುವುದು-ಕೇಳದಿರುವುದು,
ಮಾತನಾಡದಿರುವುದು, ತಿನ್ನದಿರುವುದು ಮತ್ತು ಆರೋಗ್ಯ ರಕ್ಷಣೆಗಾಗಿ
ಮಾಡುವ ಕಾರ್ಯಗಳೆಲ್ಲ- ಕ್ಷತ್ರಿಯ ಗುಣ.
||೨||
ಜೀವಿಸುವುದಕ್ಕಾಗಿ ಕಾಯಕಮಾಡುವುದು
ಪರರ ಹಿಂಸಿಸದೆ, ನೋಯಿಸದೆ,
'Live and Let others Live'
ದೋರಣೆಯಿಂದ ಜೀವಿಸುವುದು.- ವೈಶ್ಯಗುಣ
||೩||
ದೇಹ ಸ್ವಚ್ಛತೆಗಾಗಿ ಪ್ರತಿದಿನ ನಾವು ಮಾಡುವ ಶೌಚಾದಿ ಕಾರ್ಯಗಳು,
ಪರಿಸರ ನೈರ್ಮಲ್ಯತೆಗಾಗಿ ಮತ್ತು ಸಮಾಜದ ಕೊಳಕುಗಳನ್ನು ತೆಗೆಯುವ
ಕಾರ್ಯಗಳೆಲ್ಲವು ಮತ್ತು ಮನದಲ್ಲಡಗಿರುವ
ಅರಿಷಡ್ವರ್ಗಗಳನ್ನು ದೂರ ಮಾಡಲು
ತೆಗೆದುಕೊಂಡ ಕಾಯಕಗಳೆಲ್ಲವು - ಶೂದ್ರಗುಣಗಳು.
||೪||
ಈ ಮೇಲಿನ ಚಾತುರ್ವರ್ಣ ಗುಣಗಳ
ಹೊಂದದ ಮಾನವ ದಾನವ ಮತ್ತು ಸಮಾಜಕ್ಕೆ ಕಂಟಕ.
ಚಾತುರ್ವರ್ಣ ಗುಣಗಳನ್ನು ಜೀವನದಲ್ಲಿ ಅಳವಡಿಸಿ
ಪರರ ಅವಲಂಬಿಸದೇ ನಡೆದವನೇ ದೇವ ಮಾನವ
ಈತನೇ ಸಮಾಜಕ್ಕೆ ಮಾರ್ಗದರ್ಶಿ, ಸ್ನೇಹಿತ ಮತ್ತು ತತ್ವಜ್ಞಾನಿ,
ಇದುವೇ ಮಾನವನಲ್ಲಿರುವ ಚಾತುರ್ವರ್ಣದ ಗುಟ್ಟು.
15.06.2000 -7.00 p.m. ದೈವ ಸ್ಪೂರ್ತಿ ಪಡೆದ ದಿನ [ಗುರುವಾರ]
ಚಾತುರ್ವರ್ಣ-ಗುಣಗಳ ವಿಶೇಷತೆ
ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರ ವೆಂಬ [Education- defense-earning-dig lance] ಚಾತುರ್ವರ್ಣ ಗುಣಗಳು ಮನುಷ್ಯನ/ಮಾನವನ ದೇಹ ಮತ್ತು ಮನಸ್ಸಿಗೆ ಸಂಬಂಧಪಟ್ಟವಂತಹುದು. ಅದು ಮಾನವನನ್ನು ಜಾತಿ ಆಧಾರದ ಮೇಲೆ ವಿಂಗಡಿಸುವುದಕ್ಕಲ್ಲ. ಅದು ಹೇಗೆಂದರೆ ಮಾನವ ಈ ಗುಣಗಳನ್ನು ತನ್ನ ಮೇಲೆ ಪ್ರಯೋಗಿಸಿ, ಮುಕ್ತಿ ಮಾರ್ಗಕ್ಕೆ, ಮೋಕ್ಷ ಸಂಪಾದನೆಗೆ ಉಪಯೋಗಿಸಬೇಕು. ಈ ಕೆಳಗಿನ ರೀತಿಯಲ್ಲಿ ಮಾನವ ಚಾತುರ್ವರ್ಣ ಗುಣಗಳನ್ನು ಉಪಯೋಗಿಸಿದರೆ ದೇವರ ಸಾಮೀಪ್ಯ ಸಾಧ್ಯ-ಮುಕ್ತಿ ಮಾರ್ಗ ಸಮೀಪ, ಮೋಕ್ಷ ಸಂಪಾದನೆ ನಿಖರ ಮತ್ತು ಸ್ವಯಂವೇದ್ಯ.
ಅ] ಮಾನವನ ಮನಸ್ಸಿನ ಮೇಲೆ ಚಾತುರ್ವಣದ ಪ್ರಭಾವ- ಮನಸ್ಸನ್ನು ಒಳ್ಳೆಯ ಜ್ಞಾನದಿಂದ ತುಂಬುವುದೇ [ಸುಜ್ಞಾನ ಸಂಪಾದನೆ] ಬ್ರಾಹ್ಮಣತ್ವ.
ಮನಸ್ಸಿಗೆ ಕೆಟ್ಟ ಜ್ಞಾನ ತುಂಬದ ಹಾಗೆ ಸದಾ ಎಚ್ಚರದಿಂದಿರುವುದೇ, [ಅಂದರೆ ದೈವ ಸ್ಮರಣೆ ಸದಾ ಮಾಡುತ್ತಿರುವುದು] ಕ್ಷತ್ರಿಯ ಗುಣ. ಸದಾ ದೈವ ಸ್ಮರಣೇ ಮಾಡುತ್ತ, ಭಕ್ತಿಯಿಂದ ಕಾಯಕದಲ್ಲಿ ತೊಡಗುವುದೇ ಮತ್ತು ಆನಂದ ಪಡುವುದೇ ವೈಶ್ಯಗುಣ. ನೈಜ ಭಕ್ತಿಯೇ ಮನಸ್ಸಿಗೂ ಆಹಾರ ಮತ್ತು ದೇವನಿಗೂ ಆಹಾರ.
ಬೆಳಗಿನ ಜಾವದಿಂದ ಮಲಗುವವರೆಗೆ ಮಾಡಿದ ಕಾಯಕದಲ್ಲಿ ಮತ್ತು ಮನಸ್ಸಿನಲ್ಲಿ ನಡೆದಿರುವಂತಹ ಕಹಿ ಪ್ರಸಂಗಗಳನ್ನು ಜ್ಞಾಪಿಸಿಕೊಂಡು, ಅದು ಪುನಃ ಆಗದ ಹಾಗೆ ಎಚ್ಚರಿಕೆವಹಿಸುವುದೇ ಶೂದ್ರ ಗುಣ. ಚಂಚಲತೆಯಿಂದ ಕೂಡಿರುವ ಮನಸ್ಸನ್ನು ಹತೋಟಿಯಲ್ಲಿಡುವುದಕ್ಕೆ, ಪ್ರಯತ್ನ ಮಾಡುವುದೇ ಶೂದ್ರ ಗುಣದ ವೈಶಿಷ್ಟತೆ. ಅಜ್ಞಾನವನ್ನು ತೊಡಗಿಸಿ ಹಾಕುವುದೇ ಶೂದ್ರಗುಣ.
ಆ] ಮಾನವನ ದೇಹದ ಮೇಲೆ ಚಾತುರ್ವರ್ಣದ ಪ್ರಭಾವ :- ದೇಹದ ಆರೋಗ್ಯವನ್ನು ಸದಾಜೀವನವಿಡೀ ಕಾಪಾಡಿಕೊಂಡು ಬರಲು ಮತ್ತು ಕರ್ಮಕ್ಕೆ ಕಾಯಕಕ್ಕೆ ದೇಹ ತೊಡಗಿಸಲು ಸಂಪಾದಿಸುವ ಸುಜ್ಞಾನವೇ ಬ್ರಾಹ್ಮಣತ್ವ. ಯೋಗಜ್ಞಾನವೂ ಸಹ ಬ್ರಾಹ್ಮಣತ್ವದ ಒಂದು ಅಂಶವೆಂದು ನಾವು ತಿಳಿದಿರಬೇಕು. ದೇಹದ ಆರೋಗ್ಯಕ್ಕೆ ಮತ್ತು ದಿನ ನಿತ್ಯದ ಕಾಯಕಕ್ಕೆ ಕುಂದು ಬರದ ರೀತಿಯಲ್ಲಿ ಎಚ್ಚರಿಕೆ ವಹಿಸುವುದೇ ಕ್ಷತ್ರಿಯಗುಣ. ಯೋಗಾಭ್ಯಾಸ ಮತ್ತು ಆಯುರ್ವೇದ ಚಿಕಿತ್ಸೆಗಳು ಕ್ಷತ್ರಿಯ ಗುಣಗಳ ಅಂಶಗಳು. ಸತ್ಕಾರ್ಯಗಳಿಂದ ಕಾಯಕ ಮತ್ತು ದೇಹದ ಆರೋಗ್ಯ ಸದಾ ಕಾಪಾಡಿಕೊಂದು ಬರಲು ಮಾನವ ತೆಗೆದುಕೊಳ್ಳುವ ಹಿತಮಿತ ಆರೋಗ್ಯ ಆಹಾರವೇ ವೈಶ್ಯ ಗುಣದ ಅಂಶ. ಇನ್ನು ಆರೋಗ್ಯಕ್ಕೆ ಹಿತವಾಗುವಂತೆ, ಪರಿಸರದ ನೈರ್ಮಲ್ಯತೆಗಾಗಿ ಮಾಡುವ ಕೆಲಸಗಳೆಲ್ಲವೂ ಶೂದ್ರಗುಣ.
ಒಳ್ಳೆಯ ಕಾರ್ಯಗಳನ್ನು ಮಾಡಿಕೊಂಡು, ಕೆಲಸ /ಕಾಯಕದಲ್ಲಿ ಭಿನ್ನ-ಭೇದ ಮಾಡದೇ ಸಮಾಜದ ಹಿತವನ್ನೆ ಬಯಸುತ್ತ, ಸಮಾಜದಿಂದ, ಸಮಾಜಕ್ಕಾಗಿ ಮತ್ತು ಸಮಾಜಕ್ಕೋಸ್ಕರ ಕಾಯಕವನ್ನು ಮಾಡುವುದೇ ಶೂದ್ರಗುಣದ ಮುಖ್ಯ ಅಂಶ.
ಈ ರೀತಿ ಆಗಿ ಮೇಲಿನರೀತಿಯಲ್ಲಿ ಪ್ರತಿ ಮಾನವ ವಿಶ್ವ ಮಾನವರು ನಡೆಯುವುದೇ ಆದರೆ, ಈ ಭೂಮಿಯೇ ದೇವ ಲೋಕ. ಆಗ ಮಾನವನಿಗೆ/ವಿಶ್ವ ಮಾನವರಿಗೆ ಪುನರ್ಜನ್ಮ ಇರುವುದಿಲ್ಲ. ಹಿಂದಿನ ಕರ್ಮಗಳು ಅಂಟಿದೇ ತೊಲಗಿ ಹೋಗುವುದರಲ್ಲಿ ಸಂಶಯವಿಲ್ಲ.
ಆದ ಕಾರಣ ಮಾನವ ಈ ಚಾತುರ್ವರ್ಣಗುಣಗಳ, ಬೇರೆ ರೀತಿಯಲ್ಲಿ ಮಾನವನಲ್ಲಿ ಜಾತಿ ವಿಂಗಡಣೆ ಮಾಡದೇ, ತನ್ನಲ್ಲಿಯೇ ಅಳವಡಿಸಿಕೊಂದು ಸಮಾಜಕ್ಕೆ ಮಾದರಿ ಆಗಬಹುದು. ದೇವನನ್ನು ಸಾಕಾರ ರೂಪವಾಗಿ ಕರೆತರಲು ಪ್ರಯತ್ನಿಸಬಹುದು. ಮಾನವ ತಾನೇ ದೈವ ಮಾನವನಾಗಬಹುದು. ಜೀವಾತ್ಮ ಪರಮಾತ್ಮನ ಅಂಶ ಎಂಬ ಭಾವನೆ ಇರುವುದರಿಂದ, ಮಾನವ ಕೆಂಡದ ಕಿಡಿಯಂತೆ ಇರುವ ಜೀವಾತ್ಮಕ್ಕೆ ಚಿಂತನವೆಂಬ ಆಹಾರಕೊಟ್ಟು, ದೈವ ಮಾನವನಾಗಿ ಇದ್ದು, ಸಕಲ ಜೀವರಾಶಿಗಳಿಗೆ, ಚರಾಚರ ವಸ್ತುಗಳಿಗೆ ಮಾದರಿ ಆಗಿ ಜೀವನ ಸಾರ್ಥಕ ಪಡಿಸಿಕೊಳ್ಳಬಹುದು.
ಈ ರೀತಿಯಾಗಿ ಸಮಾಜವು ಸರ್ಕಾರವೂ, ದೇಶವೂ ಮತ್ತು ವಿಶ್ವವೂ ಅನುಸರಿಸುವುದೇ ಆದರೆ, ಆಗ ವಿಶ್ವಶಾಂತಿ ಸಾಧ್ಯ ಮತ್ತು ಈ ದೈವ ಸೃಷ್ಟಿ ಸಾರ್ಥಕ.
***********
25.12.2000 – 2.30 a.m.
ಗಜಕೇಸರಿ ಯೋಗ :- ನನ್ನ ಅರ್ಧಾಂಗಿ ಹೇಳಿದಳು, ’ಗಜಕೇಸರಿ ಯೋಗ’, ಅವಳಿಗೆದೆಯೆಂದು.
ನನಗೆ ತಿಳಿಯಲ್ಲಿಲ್ಲ ಅದು ಎಲ್ಲಿದೆಯೆಂದು?? ಕಾರಣ ಮಧ್ಯಮವರ್ಗದ ಜನ ನಾವೆಂದು,
ಸಂಬಳ ಬಿಟ್ಟರೆ, ಬೇರಿಲ್ಲ,
ಹಣ ಸಿಗುವ ದಾರಿ. ಆಯ-ವ್ಯಯ ಪಟ್ಟಿಯಲ್ಲಿ ವ್ಯಯ ಪಾಲು ಅಧಿಕ.
ಅಂತೂ ಕೊನೆಗೂ ಗೊತ್ತಾಯಿತು ಗಜಕೇಸರಿ ಏನು ಎಂದು?
ಅದುವೇ ನನ್ನ ಕವನಗಳಲ್ಲಿರುವ ’ಚಿಂತನ’ಗಳ ರಾಶಿ-ರಾಶಿ, [ಅಲ್ಲ -ಅಲ್ಲ-ಅಲ್ಲ- ಹಣ-ಹಣ-ಹಣ].
*******
೮.೧೧.೨೦೦೧-೩.೩೦. ಬೆಳ್ಳಿಗೆ.
ನುಡಿಮುತ್ತು : ಬೇರೆಯವರಿಂದ ನಮಗೆ ನಾವು ಏನನ್ನು ಅಪೇಕ್ಷಿಸುತ್ತೇವೋ, ನಾವು ಅದನ್ನೆ ಮಾಡೋಣ.
We shall do only those things what we expect from others.
******
7.11.2001-10.30 p.m.
ಜೀವನದ ಕನಸು ಶೂನ್ಯ ಸಂಪಾದನೆ :- ನೆಮ್ಮದಿ ಮತ್ತು ಶಾಂತಿ ಮನಸ್ಸಿನಲ್ಲಿ ಸದಾ ಇರುವ ಹಾಗೆ ಜೀವನ ನಡೆಸುವುದು. ಅದು ಹೇಗೆಂದರೆ, ಕನಿಷ್ಟ ಆಸೆ ಪಡೆವುದು. ದೇವರ ಮೇಲೆ ನಂಬಿಕೆ, ವಿಶ್ವಾಸ ಪೂರ್ತಿ ಸದಾ ಇಡುವುದು. ಸದಾ ಒಳ್ಳೆಯದರ ಬಗ್ಗೆ ಯೋಚನೆ ಮಾಡುವುದು, ಕೆಟ್ಟ ಯೋಚನೆ ಮನಸ್ಸಿನಲ್ಲಿರಲು ಬಿಡದೇ ಇರುವುದು. ಯಾವ ಪ್ರತಿಫಲ ನಿರೀಕ್ಷಿಸದೇ ಕಾಯಕ ಮಾಡುವುದು ಮತ್ತು ಮನಸ್ಸನ್ನು ಸದಾ ಶೂನ್ಯ ಸ್ಠಿತಿಯಲ್ಲಿಡುವುದು. ಅಂದರೇ ಶೂನ್ಯ ಸಂಪಾದನೆಯೇ ಜೀವನದ ಗುರಿ.
ನುಡಿಮುತ್ತು : ದೇವರ ಆಹಾರ ಭಕ್ತಿ, ಇರುವುದು ಭಕ್ತನಲ್ಲಿ, ಅದಕಾಗಿ ದೇವರ -ಭಕ್ತನ ಒಡನಾಟ-ಸರಳ ಜೀವನ ಸುಖಕ್ಕೆ ಸಾಧನ.
******
4.11.2003 - 5.00. p.m.
ಇವರುಗಳು ಬೇಕು - ಅವರು ಬೇಡ -ವಿಪರ್ಯಾಸ?? ಏಕೆ??? ಮಾದರಿ ಆಗಿ!!
ಅನ್ಯ ಜಾತಿಯವರಿಗೆ ಉನ್ನತವರ್ಗದವರುಗಳ ಆಚಾರ-ವಿಚಾರ-ವ್ಯವಹಾರಗಳು ಬೇಡ.
ಆದರೆ ಅವರು ಪ್ರತಿಷ್ಟಾಪಿಸಿ-ಪೂಜಿಸುವ, ಸೃಷ್ಟಿಸಿದ ದೇವರುಗಳು -ದೇವತೆಗಳು ಬೇಕು.
ಪೂಜಿಸಲಿಕೆ, ಪೂಜೆ ಮಾಡುವುದಕೆ, ತಾವೇ ಹೊಸರೀತಿಯಲಿ ದೇವರುಗಳು, ದೇವತೆಗಳನ್ನು ಪ್ರತಿಷ್ಟಾಪಿಸಿ,
ಮಂತ್ರ ರಚಿಸಿ, ಗುಡಿ-ಗೋಪುರ ಕಟ್ಟಿಸಿ, ಪೂಜೆ ಮಾಡಿಕೊಳ್ಳಬಾರದೇಕೆ?
ಆಚಾರ-ವಿಚಾರ-ವ್ಯವಹಾರಗಳಲಿ, ಕೆಲವು ಮೂಡನಂಬಿಕೆಯಿಂದಿದ್ದರೂ, ಬಹುಪಾಲುಗಳು ಅರ್ಥಗರ್ಬಿತ,
ವಿಚಾರ ಪ್ರಚೋದಕಗಳು ಮತ್ತು ಸದಾ ಕಾಲಕ್ಕೂ ಅನ್ವಯಿಸುವಂತಹವು. ಮೂಢನಂಬಿಕೆಯ ಕಳೆ ತೆಗೆಯೋಣ,
ವಿಚಾರವೆಂಬ ಗೊಬ್ಬರ ಹಾಕಿ, ಆಚಾರವೆಂಬ ಎಚ್ಚರಿಕೆ ವಹಿಸಿ, ವ್ಯವಹಾರಗಳೆಂಬ ಸದ್ವಿಚಾರಗಳನ್ನು ಬೆಳೆದು,
ಮನಕ್ಕೆ-ಬುದ್ದಿಗೆ ಕಸರತ್ತು ಕೊಟ್ಟು ಜೀವನ ನಡೆಸೋಣ.
ಮುಂದಿನ ಪೀಳಿಗೆಯವರಿಗೆ ಮಾದರಿ ಆಗೋಣ.
15.11.2003 - 11.23 a.m.
ಮುಪ್ಪು :- ಬಂದ ಹಾಗೆಲ್ಲ, ದೇಹ ’ಮುಟ್ಟಿದರೆ ಮುನಿ’ -ಗಿಡ ಇದ್ದ ಹಾಗೆ.
ಆಹಾರಗಳು ಒಗ್ಗವು, ಹೆಚ್ಚಾದರೆ ಒಂದು ರೀತಿ ವೇದನೆ.
ಕಡಿಮೆ ಆದರೆ ಮತ್ತೊಂದು ರೀತಿ,
ನೋವುಗಳು ನಾನಾ ರೀತಿ -ಅಪಾರ.
ಖಾಯಿಲೆಗಳ ಮುಂದೆ ಹಣ ನಶ್ವರ.
ಕೊನೆಗಳಿಗೆಯಲ್ಲಿ ಬರಬೇಕೆ, ಈ ಎಲ್ಲ ನೋವುಗಳು, ಬಿಡಿಸಿ ಹೇಳಲಿಕ್ಕಾಗದು.
ಆಲೋಪತಿಗೆ ಹೋದರೆ ಬರುವುವು ಬದಲಿ ಖಾಯಿಲೆಗಳು.
ಉಳಿದ ಔಷದಿಗಳು ನಿಧಾನ.
ಈ ದೇಹ-ಜೀವನ ಎಲ್ಲರಿಗೆ ನಗೆ -ಪಾಟಲಿನ ಸ್ಠಳ.
ಬಡ-ಮಧ್ಯಮವರ್ಗದವರ ಮುಪ್ಪಿನ ಪಾಡು,
ಸಂಸಾರಕ್ಕೆ ತಡೆಯಲಾರದ ಹೊಡೆತ.
ಸಿರಿವಂತರಲ್ಲಿ ರೋಗಿಯೇ ಏಕಾಂಗಿ.
ಸರಕಾರ ತರಬಾರದೇಕೆ ಕಾನೂನಿನಲ್ಲಿ ಇಚ್ಛಾಮರಣ ಉಯಿಲು.
ಕೊನೆಗಳಿಗೆಯಲ್ಲಾದರೂ ಬಿಡುವ ನಿರಾಯಾಸವಾಗಿ ಜೀವನ.
06.11.2003 - 1.30 p.m.
ನಂಬಿದರೆ ನಂಬಿ- ಬಿಟ್ಟರೆ ಬಿಡಿ ನಮ್ಮ ಹಳೆಯ ಸ್ನೇಹಿತನ ಸತ್ಯ ಕಥೆ.
ಮೌನಿಯ-ತ್ಯಾಗ : ಸ್ನೇಹಿತನ ಸತ್ಯದ ಕಥೆ.
ಹೆಸರು ಯೋಗಿ ಮುಖ ನೋಡಿದರೆ ಬೆಪ್ಪ, ಅಂತರ್ಮುಖಿಯಾಗಿ ಯೋಗಿ, ಕಾರಣ ಬಂದ ಸಂಸ್ಕಾರ, ಮನೆಯವರ ಆಧ್ಯಾತ್ಮಿಕ ಆಚರಣೆ, ಸತ್ಯ-ಶುದ್ದ ಕಾಯಕ ಜೀವನ. ಇವನ ತಂದೆ ಶಾಲಾ ಮಸ್ತರು, ಸಿಕ್ಕಿತು ಸರ್ಕಾರಿ ಕೆಲಸ, ನ್ಯಾಯರೀತಿಯಲಿ ಮೆರಿಟ್ ಮೇಲೆ. ಕಛೇರಿ ಭ್ರಷ್ಟಾಚಾರಿಗಳ ಕೂಪ ಇವನ ಮನ ಈ ಕೆಲಸ ಬೇಡ ಎನಿಸುತ್ತಿತ್ತು. ಬುದ್ದಿ ಹಿಡಿತದಲ್ಲಿತ್ತು. ನ್ಯಾಯ ಸಂಪಾದನೆ ಸಾಕೆಂದು ಅಂತರ್ಮುಖ ಹೇಳುತ್ತಿತ್ತು. ಬಿಟ್ಟರೆ ಬೇರೆ ಕೆಲಸ ಸಿಗದು. ಬಿಡದಿದ್ದರೆ ಜೀವನೋಪಾಯ ಕಷ್ಟ. ನಡೆಯಿತು ಘರ್ಷಣೆ ಮನದಲ್ಲಿ. ಅಂತರ್ಮುಖಿ-ಬಹಿರ್ಮುಖಿಗಳ ನಡುವೆ. ಇವುಗಳ ಮಧ್ಯೆ ಕೆಲಸಕ್ಕೆ ಹೋಗಿ ಬರುತ್ತಿದ್ದ ಯೋಗಿ. ಕೊನೆಗೆ ತಲೆಬಾಗಿದ ಅಂತರ್ಮುಖದ ಕಡೆಗೆ, ತಿರುಗಿತು ಮನವ ಸದಾ ಆಧ್ಯಾತ್ಮಿಕ ಕಡೆಗೆ. ವರ್ಷಗಳು ಕಳೆದವು, ತಂದೆ ಇಲ್ಲವಾದರು. ತಾಯಿ ಹಳೇ ತಲೆಮಾರು. ಸಮಾಜದ ವಿಷಯ ಅಷ್ಟಕಷ್ಟೆ, ಹೆಂಡತಿ-ಮಕ್ಕಳು ಅಡ್ಡ ಸಂಪಾದನೆ ಬೇಕೆನ್ನುತ್ತಾರೆಂದು ಮದುವೆ ಆಗದೆ, ಬ್ರಹ್ಮಚಾರಿ ಆದ-ಒಳ ಮೌನಿ ಆದ. ಅಪ್ಪ ಮಾಡಿದ ಮನೆಯೇ ಸಾಕೆಂದ. ಮನಸ್ಸಿಲ್ಲದೆ ಕೂದಿ ಹಾಕಿದ ಲಂಚದ ಹಣವ. ಪ್ರತಿಭಟಿಸಲು ಶಕ್ತಿಯಿಲ್ಲ-ಉಪಯೋಗಿಸಲಿಲ್ಲ ಸ್ವಂತಕ್ಕೆ. ಪಾಪದ ಕೂಪವರು. ಲಂಛದ ಹಣವ ದಾನ, ಧರ್ಮಕ್ಕೆ, ಬಡ-ಬಗ್ಗರಿಗೆ, ನ್ಯಾಯ ರೀತಿಯಲ್ಲಿ ನೇರವಾಗಿ ಉಪಯೋಗಿಸಿದ ಮನವ ಹಗುರ ಮಾಡಿಕೊಂಡ. ಯಾರಿಗೂ ತಿಳಿಸಲಿಲ್ಲ. ಪ್ರಚಾರ ಮಾಡಲಿಲ್ಲ. ಏಕಾಂಗಿಯಾಗಿಯೇ ಜೀವನದಲ್ಲಿ ಗೆದ್ದ. ಆದರೆ ಮನ ಕೊರೆಯುತ್ತಿತ್ತು. ಅಂತರ್ಮುಖ ಹೇಳುತ್ತಿತ್ತು. ಲಂಚದ ಹಣ ತಾನಾಗಿ ಬಂದಿದ್ದು, ಕೇಳಿ ಕಿತ್ತುಕೊಂಡ ಹಣವಲ್ಲ. ಇದರ ಮಧ್ಯೆ ತಾಯಿ ಇಲ್ಲವಾದರು ಕಾರಣ ವಯಸ್ಸು ಮತ್ತು ಖಾಯಿಲೆಗಳು. ವೈದ್ಯೋಪಚಾರಕ್ಕೂ ಬಗ್ಗಲಿಲ್ಲ. ಬಡ ಸ್ನೇಹಿತನ ಮನೆ ಸೇರಿದ ಹಿರಿಯರನ್ನು ತಂದೆ ತಾಯಿ ಹಾಗೆ ನೋಡಿದ. ಆ ಮನೆಯವರನ್ನು ತನ್ನ ಮನೆಯವರೆಂದು ತಿಳಿದು, ಮೌನಿಯಾಗಿಯೇ ಕಾಲ ಕಳೆದ. ಭ್ರಷ್ಟಾಚಾರ ವ್ಯವಸ್ಠೆಯ ಕೂಪವೆಂದು ತಿಳಿದ. ಆದರೂ ಜೀವನದಲ್ಲಿ ಗೆದ್ದ ಜಾಣ, ತ್ಯಾಗ ಮಾಡಿ ಸಾಧಿಸಿದ. ತನ್ನ ಮನೆಯನ್ನು -ಬಡ ಸ್ನೇಹಿತನಿಗೆ ಕೊಟ್ಟು.
28.11.2003 - 3.35. p.m.
ದಾಸೋಹ -ಕಾಯಕ -ನನ್ನ ಅನಿಸಿಕೆ : ಇವು ಹನ್ನೆರಡನೆಯ ಶತಮಾನದಿಂದ ಬಂದ ಪರಂಪರೆ. ಶಿವಶರಣರು ಹಾಕಿಕೊಟ್ಟ ಪರಂಪರೆ. ಇದಕ್ಕೆ ಮೂಲ ಕಾರಣ ಬಸವಣ್ಣನವರು. ಕಾಯಕ -ದಾಸೋಹ ಒಂದೇ ಶರಣನೆಂಬ ನಾಣ್ಯದ ಎರಡು ಮುಖಗಳು. ಒಂದು ಬಿಟ್ಟರೆ ಮತ್ತೊಂದಿಲ್ಲ. ಕಾಯಕ ಕೆಲಸಕ್ಕೆ ಮಹತ್ವ ಕೊಟ್ಟರೆ, ದಾಸೋಹ ದೇವನನ್ನು ನಂಬಿದ ಭಕ್ತರಿಗೆ ಊರುಗೋಲು. ಶರಣ ಮತ್ತು ಸಮಾಜ ಹೇಗೆ ಒಂದಕ್ಕೊಂದು ಪೂರಕವೋ, ಅದೇ ರೀತಿ ಕಾಯಕಕ್ಕೆ ದಾಸೋಹ ಪೂರಕ. ದೇಹದ ಬೆಳವಣಿಗೆಗೆ ದಾಸೋಹ ಪೂರಕ. ಕಾಯಕ ಸಮಾಜದ ಅಭಿವೃದ್ಧಿಗೆ ಪೂರಕ. ಅಕ್ರಮ ಸಂಪಾದನೆಯ ಹಣ ಕಾಯಕ ಅಲ್ಲ. ಸತ್ಯ-ಶುದ್ದ ಶ್ರಮದ ಫಲ ಕಾಯಕ. ಕಾಯಕ ಕೆಲಸದ ಜವಾಬ್ದಾರಿ ಹೊರಿಸಿದರೆ ದಾಸೋಹ ಸಮಾಜಕ್ಕೆ ನೆರವು ಕೊಡುತ್ತದೆ. ಮಠಗಳಲ್ಲಿ ದಾಸೋಹವು ಒಂದು ಕಾಯ. ಜ್ಞಾನ ದಾಸೋಹ - ಅನ್ನ ದಾಸೋಹ ಇರಲೇ ಬೇಕು. ಹಸಿವನ್ನು ಅನ್ನ ದಾಸೋಹ ನೀಗಿದರೆ, ಜ್ಞಾನ ದಾಸೋಹದ ಬೆಳವಣಿಗೆಗೂ ಅನ್ನ ದಾಸೋಹ ಸಹಾಯಕಾರಿ. ನಿರಕ್ಷಕರು ಅಕ್ಷರಸ್ಠರಾಗಲು ದಾಸೋಹ ಅತಿ ಅಗತ್ಯ. ಸಮಾಜದ ಬೆಳವಣಿಗೆಗೆ ಅಕ್ಷರಸ್ಠರರು ಅತಿ ಮುಖ್ಯ. ಮೂಢನಂಬಿಕೆ ಹೋಗಲಾಡಿಸಲು, ಮಾನಸಿಕ ಬೆಳವಣಿಗೆಗೆ ಬುದ್ದಿ ವಿಕಾಸಕ್ಕೆ, ವಿದ್ಯೆ ಅತಿ ಮುಖ್ಯ. ಹಸಿದವನಿಗೆ ವಿದ್ಯೆ ಹತ್ತುವುದಿಲ್ಲ. ಅದೇ ಕಾರಣಕ್ಕೆ ಹಸಿದವನಿಗೆ ದಾಸೋಹ ಕೊಟ್ಟು, ಜ್ಞಾನ ದಾಸೋಹ ನೀಡಿ, ವಿದ್ಯಾವಂತರನ್ನಾಗಿ ಮಾಡಿದವರು ಶಿವಶರಣರು. ಜ್ಞಾನ ದಾಸೋಹಕ್ಕೆ ಅನ್ನ ದಾಸೋಹ ತಳಪಾಯ, ಅವಿದ್ಯಾವಂತರು ವಿದ್ಯಾವಂತರಾದರು. ಆನಂತರ ಈ ಪರಂಪರೆ ಮುಂದುವರೆಯುವ ಹಾಗೆ ಮಾಡಿದವರು ಶಿವಶರಣ ಸಮೂಹ. ಇದ್ದವರು ಇಲ್ಲದವರಿಗೆ ನೀಡುವ ಕೊಡುಗೆಯೂ ದಾಸೋಹವೇ. ಶಿವಶರಣರ ಮಠಗಳಲ್ಲಿ ದಾಸೋಹ ಒಂದು ಅಂಗ. ಈಗ ಎಲ್ಲ ಗುಡಿ-ಗೋಪುರಗಳಲ್ಲಿ ವಿಸ್ತಾರವಾಗಿ ಅದರ ಮಹತ್ವ ಪ್ರಚಾರವಾಗುತ್ತಿದೆ. ಹೆಸರು ಬೇರೆ ಬೇರೆ ಆದರೂ ರೀತಿ-ನೀತಿ ಒಂದೇ. ಸರ್ಕಾರವೂ ಸಹ ಅಕ್ಷರ -ದಾಸೋಹ ಮದ್ಯಾಹ್ನದ ಸಮಯದಲ್ಲಿ ಶಾಲ ಮಕ್ಕಳಿಗೆ ಅನ್ನ ದಾಸೋಹದ ನೆಪದ ಹೆಸರಿನಲ್ಲಿ ಆರಂಬಿಸಿದ್ದಾರೆ. ಶಿವಶರಣರು ಹಾಕಿಕೊಟ್ಟ ಒಂದು ಪರಂಪರೆ. ಕೆಲವು ಬೇರೆ ಬೇರೆ ರಾಜ್ಯ ಸರ್ಕಾರಗಳೂ ಕೈಗೂದಿಸಿವೆ ಈ ಕಾಯಕಕ್ಕೆ. ಶಾಲೆಗಳಲ್ಲಿ ಅನ್ನ ದಾಸೋಹ ಇದ್ದರೆ, ಜ್ಞಾನದ ಬೆಳವಣಿಗೆಗೆ ಪೂರಕ. ಅವಿದ್ಯಾವಂತ ಹುಡುಗರು ಈಗ ವಿದ್ಯಾವಂತರಾಗುತ್ತಿದ್ದಾರೆ. ದಾಸೋಹಕ್ಕೆ ಪ್ರಾಮುಖ್ಯತೆ ನೀಡಿದರೆ ಕೆಲಮಟ್ಟಿಗೆ ಬಡತನ ನೀಗಿಸಬಹುದು. ದಾಸೋಹ ಪ್ರಚಾರಕ್ಕೆ ಅವಕಾಶ ಕೊಡದೆ ಮಾಡಿ, ತೋರಿಸಿದರು ಶಿವಶರಣರು, ಸಮಬಾಳು -ಸಮಪಾಲು, ಇದರ ಕೆಲವು ಅಂಶಗಳು ದಾಸೋಹದಲ್ಲಿದೆ, ದಾಸೋಹ ಕಾರ್ಯದಲ್ಲಿ ಕೆಲವರಿಗೆ ಕಾಯಕ ಸಿಗುತ್ತದೆ. ಧನ -ಧಾನ್ಯ- ಕಾಣಿಕೆ ಕೊಡಬೇಕೆಂಬ ಉತ್ಸಾಹ ಭಕ್ತರ ಬಳಗಗಳಲ್ಲಿ ಮೂಡಿ ಬರುತ್ತದೆ. ಪೂಜೆಗಾಗಿ -ವಿಹಾರಕ್ಕಾಗಿ ಹೋಗುವ ಪ್ರವಾಸಿಗರಿಗೆ ದಾಸೋಹ ಸಿಕ್ಕಿದರೆ, ಕಾಣಿಕೆಗಳು ಕೊಡುಗೆಯಾಗಿ ಬರುತ್ತದೆ. ಈಗ ಕೆಲವು ದೊಡ್ಡ ದೊಡ್ಡ ದೇವಸ್ಠಾನಗಳಲ್ಲಿ ದಾಸೋಹ, ಅನ್ನಸಂತರ್ಪಣೆ ಹೆಸರಿನಲ್ಲಿ ಜಾತಿ-ಭೇದವಿಲ್ಲದೆ ನಡೆಯುತ್ತಿದೆ. ಪ್ರವಾಸಿಗರಿಗೆ ಒಂದು ರೀತಿ ಖುಷಿ-ಸಂತೋಷ -ಆನಂದ. ವಸತಿ -ದಾಸೋಹ ವ್ಯವಸ್ಠೆ ಇದ್ದರೆ ಪ್ರವಾಸಿಗರೆ ಸಂಖ್ಯೆ ಜಾಸ್ತಿ ಆಗಿ ಮಠ-ದೇವಸ್ಠಾನಗಳಿಗೆ ಆದಾಯ ಜಾಸ್ತಿ ಆಗಿ, ಕಾಯಕ-ಕೆಲಸವು ಕೆಲವರಿಗೆ ಸಿಗುತ್ತದೆ. ಸ್ವಲ್ಪ ಮಟ್ಟಿಗೆ ಬಡತನ ನೀಗುತ್ತದೆ. ಪ್ರವಾಸಿಗರ ಸಂಖ್ಯೆ ಜಾಸ್ತಿ ಆದಾಗಲೆಲ್ಲ ಭಕ್ತಿ-ಭಾವನೆ, ಕಾಣಿಕೆ ಕೊಡಬೇಕೆಂಬ ಭಾವನೆ ಇಮ್ಮಡಿಗೊಳ್ಳುತ್ತದೆ. ಹೀಗಿದೆ ಶಿವಶರಣರು ಆರಂಬಿಸಿದ ದಾಸೋಹ-ಕಾಯಕದ ಮಹತ್ವ.
07.11.2003 - 6.20 p.m.
ನನ್ನ ಹೊಟ್ಟೆಯ ಬಗ್ಗೆ "ಮುಟ್ಟಿದರೆ ಮುನಿ" :- ಹೊಟ್ಟೆ ಆಗಿಹುದು ಚಿಕಿತ್ಸೆ ಆದ ಮೇಲೆ, ಕೆಲವು ಆಹಾರ ಸೇರದು, ಕೆಲವು ಪಥ್ಯ. ಹೆಚ್ಚಿಗೆ ತಿನ್ನೋಕೆ ಆಗಲ್ಲ, ತಿಂದರೆ ಒತ್ತಿದ ಹಾಗೆ ಆಗುತ್ತೆ. ಖಾರ, ಉಪ್ಪು, ಉಳಿ ಬಹಳ ಕಡಿಮೆ. ಅನ್ನ ಅಷ್ಟಕಷ್ಟೇ. ರೊಟ್ಟಿ ಮಾತ್ರ ಒಂದೇ, ದೋಸೆ ಮಾತ್ರ ಒಂದು-ಅರ್ಧ, ಅದು ಆಗಾಗ್ಗೆ ದಿನಾ ಅಲ್ಲ. ಚಪಾತಿ ದೂರ ದೂರವೇ, ತರಕಾರಿ ಉಪ್ಪಿಟ್ಟು ಇದರ ತಮ್ಮ. ಬರೀ ರೊಟ್ಟಿಯಲ್ಲೇ ಜೀವನ, ರಾಗಿ - ಜೋಳ ಜಾಸ್ತಿ. ಆಗಾಗ್ಗೆ ಸ್ವಲ್ಪ ಹಣ್ಣಿನ ರಸ. ದಿನಕ್ಕೆ ಏಳೆಂಟು ಸಲ ಆಹಾರ. ತೂಕ ಹಾಕಿ ತಿನ್ನಬೇಕು. ಹೆಚ್ಚಾದರೆ ಹಿಂಸೆ ತಪ್ಪಿದ್ದಲ್ಲ. ಬೇರೆ ಬೇರೆ ಅಡಿಗೆ ಮನೆಯಲ್ಲಿ ಹೆಂಡತಿ ಅನಸೂಯ ಚಿನ್ನ, ಸೇವೆಯೇ ಈಗ ಅವಳ ಪಾಲಿನ ಚಿನ್ನ. ಮಕ್ಕಳೂ ಹಾಗೆಯೇ, ವೈದ್ಯರು ಹೊಗಳಿದರು ಅವರನ್ನು. ಇಷ್ಟೆಲ್ಲಾ ಇದ್ದರು ನನಗೆ ನಾನೇ ಶತ್ರು, ಕಾರಣ ನನ್ನ ಹೊಟ್ಟೆಯ ಕಿಮ್ಮತ್ತು. ಬಹಳ ಬೇಸರ ತಂದಿದೆ ನನ್ನ ಜೀವನವ.
27.12.2003 -1.23 am.
ಹಿಂದುತ್ವ :- ವೈವಿದ್ಯತೆಯಲ್ಲಿ ಏಕತೆ ಇದರ ಮೂಲ ಮಂತ್ರ. ನಾನಾ ಭಾಷೆ, ನಾನಾ ಸಂಸ್ಕೃತಿ, ನಾನಾ ರಾಜ್ಯಗಳಲ್ಲಿನ ಹಿಂದೂ ಜನರ ನಡೆ-ನುಡಿಗಳು, ನಾನಾ ರೀತಿಯ ಜೀವನ ಕ್ರಮ, ಇತ್ಯಾದಿ, ಇತ್ಯಾದಿ ಇದ್ದರೂ, ಅದನ್ನು ತೋರ್ಪಡಿಸದೆ ೯೦ ಕೋಟಿ ಜನ ಹಿಂದೂಗಳು ಸಹ ಬಾಳ್ವೆ ತೋರಿಸಿ, ಇಡೀ ವಿಶ್ವಕ್ಕೆ ಮಾದರಿಯಾಗಿ ನಿಂತಿರುವ ಹಿಂದುಗಳು, ಮಾನವ ಜನಾಂಗಕ್ಕೆ ಮಾದರಿ. ರಾಜಕಾರಣಿಗಳು, ಹೊಗಳು ಭಟ್ಟರ, ಕಪಟತನದಿಂದಾಗಿ, ಅವರನ್ನು ಹಿಂಬಾಲಿಸುವ ಚೇಲಾಗಳಿಂದಾಗಿ, ಹಿಂದುಳಿದ ಜನಾಂಗ, ಅಲ್ಪ ಸಂಖ್ಯಾತರುಗಳು, ಇತ್ಯಾದಿಯಾಗಿ, ಹಿಂದೂಗಳನ್ನು ಪುನಃ ಪುನಃ ಒಡೆಯಲು ಪ್ರಯತ್ನಿಸಿದ್ದರೂ ಇದಾವುದನ್ನು ಲೆಕ್ಕಿಸದೇ, ಈಗಲೂ ಸಹ, ಸಹ-ಬಾಳ್ವೆಯಿಂದ ಜೀವನ ನಡೆಸುತ್ತಿರುವುದು ಮಾದರಿಯೇ ಸರಿ. ಆರ್ಥಿಕವಾಗಿ ಬಡತನವಿದ್ದರೂ, ಮನಸ್ಸು -ಹೃಧಯ ಬುದ್ದಿಗೆ ಇನ್ನೂ ಬಡತನ ಬಂದಿಲ್ಲವಾದುದರಿಂದ, ಎಷ್ಟೆ ಕುತಂತ್ರ ಜನ ಬಂದು, ಹಿಂದೂಗಳನ್ನು ಒಡೆಯಲು ಪ್ರಯತ್ನ ಮಾಡಿದರೂ ಅದು ಅಸಾಧ್ಯದ ಕೆಲಸವಾಗಿದೆ. ಹಿಂದೂ ದೇಶ, ಪ್ರಕೃತಿ, ಸಂಪತ್ತು ಇತರೆ ಸವಲತ್ತುಗಳು. ಅದು ದೇವರು ಕೊಟ್ಟ ಕೊಡುಗೆ, ಇದನ್ನು ಅರಿತವನೇ ಬುದ್ದಿವಂತ. ಮನೆ ಬಡತನವಾದರೂ, ಮನ ಬಡವಾಗದೇ ಇರುವುದರಿಂದ, ಬಹಳ ಘನವಾಗಿರುವುದರಿಂದ, ಕೆಲವು ಅಲ್ಪ ದೋಷಗಳು ಅಲ್ಲಲ್ಲಿ ಇದ್ದರೂ, ಹಿಂದೂಗಳು ಹಿಂದುಗಳೇ. ಹಿಂದುತ್ವವೇ ದೇಶಕ್ಕೆ, ವಿಶ್ವಕ್ಕೆ, ಮಾದರಿಯಾಗಿ ನಿಲ್ಲಬಲ್ಲ ದೇವ-ಜನಾಂಗ, ಜಯವಾಗಲಿ ಹಿಂದುತ್ವಕ್ಕೆ.
28.12.2003 -1.00 am.
ಅರ್ಚಕರುಗಳ ಉಪಟಳ : ಹೇಳಲಾಗದು, ವಿವರಿಸಲಾಗದು ನಾನಾ ರೀತಿಯ ಕಿರುಕುಳ. ಬಾಯಿಂದ ಮಾತ್ರ ಮಂತ್ರಗಳು ಉದುರುತ್ತಿರುತ್ತದೆ. ಮನಸ್ಸು ಮಾತ್ರ ದಕ್ಷಿಣಿಯ ಮೇಲಿರುತ್ತದೆ. ಭಕ್ತರ ಪರಿಚಯವಿದ್ದರೆ ಅತಿ ವಿಶೇಷ ಉಪಚಾರ. ದಕ್ಷಿಣೆ ಕೊಡದಿದ್ದವರಿಗೆ ಶಾಪೋಪಚಾರ. ಗುಡಿಯಲ್ಲಿ ದೇವರಿದ್ದಾನೋ ಇಲ್ಲವೋ ಎಂಬ ಶಂಕೆ, ದೇವಸ್ಥಾನಗಳಿಗೆ ಹೋಗಬೇಕೋ, ಬೇಡವೋ ಎಂಬ ಅನುಮಾನ. ಹೃದಯದಲ್ಲಿ ನೆಲೆಸಿರುವ ದೇವನಿಗೆ ಮಾನಸಿಕ ಭಕ್ತಿಯ ಪೂಜೆ ಸಾಲದೆ? ಹೃದಯ ದೇವನಿಗೆ ವ್ರತ ನಿಯಮಗಳಿಲ್ಲ. ಕಟ್ಟು ನಿಟ್ಟಲೆಗಳಿಲ್ಲ, ಸತ್ಯ ಶುದ್ಧ ಭಕ್ತಿಯೇ ಅವನ ಆಹಾರ. ಭಕ್ತರು ಕೊಟ್ಟು ತೆಗೆದುಕೊಳ್ಳಬಾರದೇಕೆ? ದೇವನ ಅನುಗ್ರಹ ಮಾನಸಿಕ ಪೂಜೆಯಿಂದ ಮನೆಯಲ್ಲೇ ಏಕಾಗ್ರತೆಯಿಂದ ಪೂಜೆ ಮಾಡಬಾರದೇಕೆ? ಅರ್ಚಕರೇನಾದರೂ ದೇವನ ಪ್ರತಿನಿಧಿಯೇ? ಅನುಗ್ರಹ ಸಿಗುವ ಖಾತರಿಯಾದರೂ ಏನು? ಅರ್ಚಕರ ಜೀವನೋಪಾಯಕ್ಕೆ ದೇವಸ್ಠಾನವೇ? ಭಕ್ತರು ಅರ್ಚಕರಿಗೆ ಗ್ರಾಹಕರಲ್ಲವೇ? ನಿಷ್ಟೆ ಸೇವೆ ಭಕ್ತರಿಗೆ ಸಿಗಲಾರದೆ? ನಮ್ಮ ಪೂಜೆ-ಭಕ್ತಿ ಆಡಂಬರವೇ? ನಾನಾ ಸಂಶಯಗಳು ಮನದ ಸುಳಿಯಲ್ಲಿ. ಹೇ ದೇವಾ! ಈಗಲಾದರೂ ಬಿಡಿಸು ಮನದಲ್ಲಿ ನಿಂತಿರುವ ಸಂಶಯ ಸಮಸ್ಯೆಗಳ.
10.01.2004 - 6.30 p.m.
ಮನೆ ಮನೆ : ಕಟ್ಟಬೇಕು ಮನೆ : ಅಕ್ಕ, ಪಕ್ಕ, ಮುಂದೆ ಜಾಗಬಿಟ್ಟು, ಮುಂದೆ ಗಿಡಗಳನ್ನು ಬೆಳೆಸುವಂತಿರಬೇಕು. ಮಲಗುವ ಕೋಣೆ ಪಕ್ಕ ಸಸ್ಯಗಳನ್ನು ನೆಟ್ಟಿರಬೇಕು.
ಇನ್ನೊಂದು ಪಕ್ಕ ವಾಹನ ನಿಲ್ಲಿಸಲು ಜಾಗವಿರಬೇಕು. ವಾಹನನಿಲ್ಲಿಸುವ ಜಾಗದಲ್ಲಿ, ಪೂರ್ತಿ ಭಾಗ ನೀರು ಕೂಡಿಹಾಕಲು Sump ಇರಬೇಕು. ಮಳೆಬಂದ ನೀರು ಅದಕ್ಕೆ ಹೋಗುವಂತಿರಬೇಕು. Rain Water System-Harvest System ಮನೆಯಲ್ಲಿ ಜಾರಿಗೆ ತರಬೇಕು. ಮಳೆ ಬರುವ ನೀರು ಸಸ್ಯ-ಗಿಡಗಳಿಗೆ ಹೋಗುವಂತಿರಬೇಕು. ಪರಿಸರಕ್ಕೆ ಪೂರಕವಾಗಿ ಕಟ್ಟಡ ಇರಬೇಕು. ಮನೆ ಚಿಕ್ಕದಾದರೂ ಪರವಾಗಿಲ್ಲ. ಗಾಳಿ ಬೆಳಕು ಸರಾಗವಾಗಿ ಬರುವಂತಿರಬೇಕು. ಹೊಂಗೆ ಮರಗಳನ್ನು ಮಲಗುವ ಕೊಠಡಿಗಳ ಪಕ್ಕದಲ್ಲಿ ಬೆಳೆಸುವಂತಿರಬೇಕು. ಕಾರಣ -ಬೇಸಿಕೆ ಕಾಲದಲ್ಲಿ ತಂಪಾದ ಗಾಳಿ ಇದರಿಂದ ಆರೋಗ್ಯಕ್ಕೂ ಪೂರಕ ಮನಕ್ಕೂ ಹಿತ-ಪರಿಸರ ಪೂರಕ ಸಮಾಜಕ್ಕೆ ಮಾದರಿಯಾಗಿರಬೇಕು. ಸರ್ಕಾರವೂ ಸಹ ಅನುಸರಿಸುವಂತಿರಬೇಕು. ಸಸ್ಯ ಗಿಡ, ಗಾಳಿ, ಬೆಳಕು ಇಲ್ಲದ ಮನೆ ಇದ್ದರೆಷ್ಟು-ಬಿಟ್ಟರೆಷ್ಟು. ಇವುಗಳಿಲ್ಲದ ಮನೆ ಖಾಯಿಲೆಗಳಿಗೆ ಆಹ್ವಾನ. ಪರಿಸರಕ್ಕೆ ಮಾರಕ.
03.02.2000 -1.50 a.m.
ಬಡತನ : ಇದು ದೈವಕೊಟ್ಟ ಕೊಡುಗೆಯಲ್ಲ,
ಸಮಾಜ ಸೃಷ್ಟಿಸಿದ ಸ್ಥಿತಿ,
ಕುಡುಕ ತಾನಾಗಿ ಮಾಡಿದ ಸ್ಥಿತಿ,
ಸಾಲಗಾರ ತಾನಾಗಿ ತರಿಸಿದ ಸ್ಥಿತಿ,
ಸಮಾಜದ ವ್ಯವಸ್ಥಿ ಮಾಡಿದ ಸ್ಥಿತಿ,
ಅರಿಷಡ್ವರ್ಗ ಗುಣಗಳು ತಂದಿರಿಸಿದ ಸ್ಥಿತಿ,
ಅವಿಚಾರಕತೆ, ಮೂಢತನ ಮಾಡಿದ ಸ್ಥಿತಿ.
ದುಡಿದೇ ತಿನ್ನಬೇಕೆಂಬ ಛಲ,
ಹೆಚ್ಚಿನ ಹಣ ಕೂಡಿಸಬಾರದೆಂಬ ಛಲ,
ಅವಶ್ಯಕತೆಗಿಂತ ಹೆಚ್ಚಿನ ಹಣ, ತಿರುಗಿ
ಸಮಾಜಕ್ಕೆ ಕೊಡಬೇಕೆಂಬ ಮನಸ್ಸು,
ಸಮಾಜವೇ ದೇವರು ಎಂಬ ತಿಳುವಳಿಕೆ,
ಹೆಜ್ಜೆ-ಹೆಜ್ಜೆಯಲ್ಲೂ ಸಮಾಜವನ್ನು ತಿದ್ದಿಸಬೇಕೆಂಬ ಛಲ,
ವೈಜ್ಞಾನಿಕ ತಿಳುವಳಿಕೆ, ಮೂಢತನ ನಿವಾರಣೆ,
ಇವೆಲ್ಲ ಕಾರ್ಯರೂಪಕೆ ಬಂದಾಗ
ಈ ಲೋಕವೇ ದೈವಲೋಕ.
ಆಗ ಬಡತನವಿಲ್ಲ, ಕಳ್ಳಕಾಕರ ಭಯವಿಲ್ಲ, ನಿರುದೋಗ್ಯವಿಲ್ಲ, ನೆಮ್ಮದಿ ಶಾಂತಿ ಎಲ್ಲೆಲ್ಲೂ,
ಮುಕ್ತಿ-ಮೋಕ್ಷ ಈ ಲೋಕದಲ್ಲೆ!!.
ಉದ್ಯೋಗ
ಪ್ರೌಡಶಾಲೆಯವರಿಗೆ,
ಕನ್ನಡ ಮಾದ್ಯಮ ತೆಗೆದುಕೊಂಡವರಿಗೆ,
ಕೆಲಸ ಎಂದು ಹೇಳಿತು ಸರ್ಕಾರ.
ಋಷಿಪಟ್ಟ ನಿರುದ್ಯೋಗಿಗಳಿಗೆ,
ನಂತರ ಆಯಿತು ಖಿನ್ನತೆ.
ಕಾರಣ ಸರ್ಕಾರ ಹೇಳಿತು,
ಸರ್ಕಾರಿ ಸಿಬ್ಬಂದಿ ಹೆಚ್ಚೆಂದು,
ಕಡಿಮೆಮಾಡುತ್ತಿದೆಯೆಂದು ಉದ್ಯೋಗ,
ಇಲ್ಲವೆಂದು ಹೊಸ ಉದ್ಯೋಗಳ ಸ್ರಷ್ಟಿ.
ನಡೆ ಒಂದು ಪರಿ-ನುಡಿ ಒಂದು ಪರಿ,
ನಿರುದ್ಯೋಗಿಗಳಿಗೆ ಕಿರಿ-ಕಿರಿ.
೯. ನೆರೆ ಹೊರೆ
ಮನೆ ಮನೆ ಹತ್ತಿರ
ಮನ ಮನ ದೂರ,
ಈ ರೀತಿ ಇದೆ.
ಕೆಲವು ಮನೆಗಳ
ನೆರೆ ಹೊರೆಯವರ ಕಥೆ.
ಕಸ್ತೂರಿ ಪತ್ರಿಕೆ; ೧೭/೧೧/೨೦೦೩ ರಂದು
೧೦. ಈಗಿನ ಚಿತ್ರಗಳು
ಮಡಕೆ ಮಾಡಲಿಕ್ಕೆ ವರುಷ,
ಒಡಯುವುದಕ್ಕೆ ನಿಮಿಷ.
ನಿರ್ಮಾಣ ಮಾಡಲಿಕೆ ತಿಂಗಳು-ವರುಷ,
ನೋಡದೆ ತಿರಸ್ಕಾರ ಮಾಡಲಿಕೆ ನಿಮಿಷ.
ಮಂಗಳ ಪತ್ರಿಕೆ; ೧೭/೧೧/೨೦೦೩ ರಂದು
ಚತುರ್ವರ್ಣಗಳು
ಜ್ಞಾನಗಳಿಸಿದ ಬ್ರಾಹ್ಮಣ,
ದೇಹ ರಕ್ಷಿಸಿಕೊಳ್ಳುವ ಕ್ಷತ್ರಿಯ,
ಕಾಯಕದಲ್ಲಿದ್ದವ ವ್ಯೆಶ್ಯ,
ದೇಹ-ಮನ-ಬುದ್ದಿ ಶುಭ್ರಗೊಳಿಸುವವ ಶೊದ್ರ.
ಇದು ವ್ಯಕ್ತಿಗೆ ಸಂಬಂದಿಸಿದ ಸೂತ್ರ.
ಸಮಸ್ಯ-ಪರಿಹಾರ-ಕಾರಣ
ಕಂಡು ಹಿಡಿಯಿತು ಪರಿಹಾರ,
ಕಾನೂನುಗಳ ಪರಿಪೂರ್ಣ ತಿಳಿವಳಿಕೆ ಇಲ್ಲದೆ.
ನ್ಯಾಯಾಲಯದಿಂದ ಬಂದಿತು ಆದೇಶ,
ಪರಿಹರ-ನೀತಿ-ನಿಯಮ ಸರಿಪಡಿಸಿ ಎಂದು.
ಅದಕ್ಕೊಂದು ಸರ್ಕಾರ ರಚಿಸುಬಿಟ್ಟಿತು ಸಮಿತಿ,
ಕಾರಣ, ಪರಿಹಾರ ಸರಿಪಡಿಸದೆ
ಕಾಲಕಳೆಯಲೆಂದು, ಸರ್ಕಾರದ ಖರ್ಚಿನಲಿ.
ನುಂಗಲಾರದ ತುಪ್ಪ
VHP -RSS
ಪಕ್ಷಕ್ಕೆ ನುಂಗಲಾರದ್ದು
ಬಿಸಿತುಪ್ಪ,
ನುಂಗಿದರೆ ಜೀವಕ್ಕೆ ಅಪಾಯ
ಉಗುಳಿದರೆ ಜೀವನಕ್ಕೆ ಅಪಾಯ.
ಟೈಂ-ಬಾಂಬ್
ಹುಸಿಬಾಂಬು ಇಟ್ಟು,
ದೂರವಾಣಿ ಮೂಲಕ ತಿಳಿಸಿ,
ಸಿಕ್ಕಿಹಾಕಿಕೊಂಡ ಒಬ್ಬ.
ನಿಜ ಬಾಂಬ್ ಇಟ್ಟು,
ಸುದ್ದಿ ತಿಳಿಸದೇ, ಬಾಂಬ್ ಸಿಡಿಸಿ,
ತಿರುಗಾಡುತಿದ್ದಾನೆ ಮತ್ತೂಬ್ಬ.
ಸಿರಿಗನ್ನಡಂಗೇಳ್ಗೆ
ಶನಿವಾರ ೧-೧೧-೨೦೦೩
ಕನ್ನಡ ರಜ್ಯೋತ್ಸವ ವರ್ಷಪೂರ್ತಿ ಪ್ರತಿ ವಾರಗಳಲ್ಲಿ ರಾಜ್ಯದ ಎಲ್ಲ್ ಡೆ ನಡೆಯಲಿ
One Nation
23-01-1993
If world has the One nation
uniform civil code,
uniform criminal code,
one constitution,
uniform education policy,
population control policy,
health care code,
uniform code of ethics,
uniform labour laws,
one political ethical code,
one land ceiling code,
uniform wealth code,
uniform agro policy,
uniform shelter policy,
uniform employment policy,
uniform religion code,
uniform economic policy,
uniform commentary rules.
no more, defense expenditure,
defense personal, will be for maintaining law and order of the respective region of the world.
uniform taxes,
good employment to all,
health for all,
control over population,
good educational to all,
democratic system of government.
less labor disputes,
respective wealth to all,
and to all,
good food to all,
shelter to all,
no more religion certificates.
no more control over countries economic activity,
no foreign exchange business.
ವ್ಯತ್ಯಾಸ
02.06.1995
ದುಡಿದು ತಿನ್ನೋದು
ಬಿಸಿಊಟ
ಸಮಾಜಕ್ಕೆ ಹಗುರ
ಮೋಕ್ಷಕ್ಕೆ ದಾರಿ
ಕಾಯಕ
ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿ
ಸರಕಾರಕ್ಕೆ ಹಗುರ
ಸಮಾಜಕ್ಕೆ ಮಾದರಿ
ಸಮಾಜ ನಿರ್ಮಾಣ ಸುಗಮ
ವಿಶ್ವ ಅವಿನಾಶ
ಈಜಬೇಕು -ಇದ್ದು ಜೈಸಬೇಕು
ಮಾಡು ಇಲ್ಲವೇ ಮಡಿ
ಅಮೃತ
ಪರಿಸರಕ್ಕೆ ಪೂರಕ
ಪ್ರತಿಭೆಗೆ ಪುರಸ್ಕಾರ
ದೇವರು ಕೊಟ್ಟ ವರ
ಸತ್ತು ಬದುಕಿದವ
ಸಮಾಜ ನೋಡಿ ಕಲಿಯುತ್ತದೆ
ಸಮಾಜದ ಅಭಿವೃದ್ಧಿ
ಹಿಂದಿನ ಸಮಾಜ ಇಂತಹವರಿಂದ
ನೋಡಿ ಕಲಿತಿಕೋ
ಕೈ ಕೆಸರಾದರೆ ಬಾಯಿ ಮೊಸರು
ವಿಶ್ವಕ್ಕೆ ಮಾದರಿ
ಸಮಾಜ ಹೊಗಳುತ್ತದೆ
ಕುಡಿಕೆ ಹಣ ಬೇಡದು
ಮನಸ್ಸಿದ್ದರೆ ಮಾರ್ಗ
ಮಾಡಬೇಕಾದದ್ದು ಬೇಕಾದಷ್ಟಿದೆ
ಪ್ರಗತಿಯ ಸಂಕೇತ
ದೇವರ ಹತ್ತಿರ ಬಂದೆ ಬಂದೆ
ಬಿದ್ದರೂ ಸಹ ಬರುವರು ಎಲ್ಲಾ ಎಲ್ಲಾ
ಸ್ವಾವಲಂಬಿ
ಸ್ವಾಭಿಮಾನಿ
ಬದುಕುವ ದಾರಿ
ಸೃಷ್ಟಿಯ ಚೈತನ್ಯವೇ ದುಡಿತ
ಕಾಂಕ್ರೀಟ್ ಗೋಡೆ
ಏನೇ ಆಗಲಿ ಏನೇ ಬರಲಿ ಉರುಳಿ ಹೋಗದು
ರಕ್ತಕ್ಕೆ ಜೀವವಾಹಿನಿ ಇದ್ದ ಹಾಗೆ
ಸಮಾಜಕ್ಕೆ ಪಾಠ ಹೇಳುತ್ತದೆ
ಕುಳಿತು ತಿನ್ನೋದು
ತಂಗಳೂಟ
ಸಮಾಜಕ್ಕೆ ಭಾರ
ಪುನರ್ಜನ್ಮಕ್ಕೆ ದಾರಿ
ನರಕ
ಆರೋಗ್ಯಕ್ಕೆ ಚಿತೆ
ಸರಕಾರಕ್ಕೆ ಭಾರ
ಸಮಾಜಕ್ಕೆ ಕಿರಿಕಿರಿ
ಸಮಾಜ ನಿರ್ನಾಮ ಸುಗಮ
ವಿಶ್ವ ವಿನಾಶ
ಕುಳಿತುಕೋ ಬೇಕು -ಇದ್ದು ಸಾಯಬೇಕು
ಜಾರು ಇಲ್ಲವೇ ನುಸುಳಿಕೋ
ವಿಷ
ಪರಿಸರಕ್ಕೆ ಮಾರಕ
ಮುಖಕ್ಕೆ ತಿರಸ್ಕಾರ
ದೇವರು ಕೊಟ್ಟ ಶಾಪ
ಬದುಕಿ ಸತ್ತವ
ಸಮಾಜ ನೋಡಿ ಕಲಿತು ಮುಳುಗುತ್ತದೆ
ಸಮಾಜದ ವಿನಾಶ
ಇಂದಿನ ಸಮಾಜ ಇಂತಹವರಿಂದ
ನೋಡಿ ಮುಚ್ಚಿಕೋ
ಕೈ ಕೊಸರಿದರೆ ಬಾಯಿಗೆ ಮಣ್ಣು
ವಿಶ್ವಕ್ಕೆ ಮಾರಿ
ಸಮಾಜ ಬೊಗಳುತ್ತದೆ
ಕುಡಿಕೆ ಹಣ ಸಾಲದು
ಮನಸ್ಸಿಲ್ಲದಿದ್ದರೆ ನರಕ
ಮಾಡಬಾರದದ್ದು ಬೇಕಾದಷ್ಟಿದೆ
ವಿನಾಶದ ಸಂಕೇತ
ದೇವರಿಂದ ದೂರ ಹೋದ ಹೋದ
ಸತ್ತರೂ ಸಹ ಮೂಸು ನೋಡುವುದಿಲ್ಲ
ಪರಾವಲಂಬಿ
ದುರಾಭಿಮಾನಿ
ಸಾಯಲು ದಾರಿ
ಸೃಷ್ಟಿಯ ವಿಕಾರವೇ ಈ ದುರ್ನಾತ
ಮಣ್ಣಿನ ಗೋಡೆ
ಹೇಗೆ ಇರಲಿ ನಿಂತಿರಲಿ ಬೇಗ ಬೀಳುವುದು
ರಕ್ತಕ್ಕೆ 'AIDS' ಇದ್ದ ಹಾಗೆ
ಸಮಾಜವೇ ಪಾಠ ಕಲಿಯುತ್ತದೆ
ಮಾನವ ಗುಣಗಳ ವ್ಯತ್ಯಾಸ
02.10.1999 – 4.00 a.m.
ಸದ್ಗುಣ
ದೇವರು ಕೊಟ್ಟ ವರ
ಅರಿಷಡ್ವರ್ಗಗಳ ಶತ್ರು
ಸಮಾಜದ ಬೆಳವಣಿಗೆ
ಸಮಾಜಕ್ಕೆ ಹಿತ
ಮೋಕ್ಷಕ್ಕೆ ದಾರಿ
ಮನಕೆ ಶಾಂತಿ
ಮನದ ನೆಮ್ಮದಿ ಶಾಶ್ವತ
ದೇವನಿರುವನು ಇವರಲ್ಲಿ
ಮರಣವೇ ಮಹಾನವಮಿ
ಮನಸು ಸದಾ ಹಗುರ
ಮನಸು ಸದಾ ನಿರಾತಂಕ
ದೈವಾಂಶ ಗುಣ
ತಾನೇ ನಿರ್ಮಿಸಿದ ದಾರಿ
ಮೋಕ್ಷಕ್ಕೆ ಮನಸು ಸದಾ ಸಂತೃಪ್ತಿ
ಸಮಾಜಕ್ಕೆ ಸದಾ ಕಿರಿಯ
ದೇವರ ರಕ್ಷಣೆ ಸದಾ
ದುರ್ಗುಣ
ಮಾನವ ಆಹ್ವಾನಿಸಿದ ಶಾಪ
ಅರಿಷಡ್ವರ್ಗಗಳಿಗೆ ತೌರೂರು
ಸಮಾಜದ ಕುಂಠಿತ
ಸಮಾಜಕ್ಕೆ ಅಹಿತ
ಪಾಪದ ದಾರಿ
ಮನಕೆ ಅಶಾಂತಿ
ಮನದ ನೆಮ್ಮದಿ ತಾತ್ಕಾಲಿಕ
ದೇವನಿರುವನು ದೂರದಲ್ಲಿ
ಮರಣಕ್ಕೆ ಸದಾ ಭಯ
ಮನಸು ಸದಾ ಭಾರ
ಮನದಲಿ ಸದಾ ಆತಂಕ
ಭೂತಾಂಶ ಗುಣ
ತಾನೇ ಮಾಡಿಕೊಂಡ ಗೋರಿ
ಮರಣಕ್ಕೆ ಮನಸು ಸದಾ ಅತೃಪ್ತಿ
ಸದಾ ಅಹಂಭಾವಿ
ಭೂತದ ಕಾಟ ಸದಾ