top of page

ಆಧ್ಯಾತ್ಮಿಕ

ಚನ್ನ ಬಸವ ದೇವರ ವಚನಗಳು ದೈವಿಕ, ಆತ್ಮಶೋಧನೆ, ಸಮಾಜಸೇವೆಯ ಸಾರದ ಬಗ್ಗೆ ವಿಶಿಷ್ಟವಾದ ದೃಷ್ಟಿಕೋನವನ್ನು ನೀಡುತ್ತವೆ. ಅವರ ವಚನವು ಓದುಗರನ್ನು ತಮ್ಮ ಆಂತರಿಕ ಮಹತ್ವಾಕಾಂಕ್ಷೆಗಳನ್ನು ಜಯಿಸಲು ಮತ್ತು ಸ್ವಯಂ ಅನ್ವೇಷಣೆಯ ಪ್ರಯಾಣವನ್ನು ಪ್ರಾರಂಭಿಸಲು ಆಹ್ವಾನಿಸುತ್ತದೆ. ಅವರ ಆಧ್ಯಾತ್ಮಿಕತೆಯನ್ನು ಅವರ ವಚನಗಲ್ಲಿ ನೋಡಿ.

Spiritual

Channa Basava Devaru's vachanas are a profound exploration of spiritualism, offering a unique perspective on the divine, self-discovery, and the essence of true service. Through his eloquent verses, he delves into the nature of God, the importance of aiding those in need, and the virtues of sharing wealth. His poetry invites readers to conquer their inner ambitions and embark on a journey of self-exploration. Rediscover the timeless wisdom of Channa Basava Devaru through his transformative and spiritually enriching poems.

img160_edited_edited.jpg

ಮಂಗಳವಾರ 28.10.03 -2.30 p.m.

ಆ ದೇವನ ಸ್ಪೂರ್ತಿ : ನಾನು ಕವನಗಳ ಲೇಖನಗಳ ಬರೆಯಲು ಆ ದೇವನೇ ಸ್ಪೂರ್ತಿ 73 ರ ಅಫಘಾತದಲ್ಲಿ ಮಿದುಳಿಗೆ ಬಿದ್ದ ಹೊಡೆತ ನನ್ನನು ಮಾಡಿತು ಅರೆ ನಿದ್ರೆ. ದಿನ ರಾತ್ರಿ ಕೇವಲ 2-3 ಗಂಟೆ ಮಾತ್ರ, ಅದೂ ಬಿಟ್ಟು ಬಿಟ್ಟು ಬರುತ್ತಿತ್ತು ಆದರೂ ಬಿಡಲಿಲ್ಲ ಆ ದೇವನ ಧ್ಯಾನ. 93 ರಲ್ಲಿ sixthsense ಆಗಿ ಬಂದ ಆ ದೇವ ಸ್ಪೂರ್ತಿ ನೀಡಲು-ಕವನ-ಲೇಖನ ಬರೆಯಲು ಚಿಂತನದಲಿ ತಿಳಿಸಿದ, ವಚನದಲಿ ಹೇಳಿದ, ಹಿರಿಯರ ಮಾತುಗಳಲ್ಲಿ ನೀಡಿದ, ದಾಸರ ಪದಗಳಲಿ ನುಡಿಸಿದ, ಇವು ತಳಪಾಯ ಹಾಕಿ ನಿಂತವು ನನ್ನ ಮನದಲಿ ಮೂಡಿತು ವಿಚಾರಗಳು ಕವನ ಬರೆಯಲಿಕೆ ಬಂದಿತು ಸ್ಪೂರ್ತಿ.
ಮೊದಲು ಬರೆದದ್ದು ಕಾಲ ಕಳೆಯಲು ಆ ಮೇಲೆ ಬರೆದೆ ವಿಡಂಬನೆಗಳ ಕವನಗಳ ಕೊನೆಗೆ ಮನ ತಿರುಗಿತು ದೈವದ ಕಡೆಗೆ ಆಧ್ಯಾತ್ಮಿಕ ವಿಷಯದ ಕಡೆಗೆ ವೈಚಾರಿಕತೆಯ ಕಡೆಗೆ. ಕಾರಣ ತಿಳಿಯಿತು-ಅರಿಷಡ್ವರ್ಗಗಳ ಕಾಟ, ಹಿಡಿತಕ್ಕೆ ಸಿಕ್ಕಿತು ಅವುಗಳ ಕಾಟ, ಹತೋಟಿಗೆ ಬಂದಿತು ಅವುಗಳ ಆಟ.

01 /11/2003 ಶನಿವಾರ-2.20 ಮದ್ಯಾಹ್ನ

 

ಎಲ್ಲಾ ಧರ್ಮಗಳ ಸಾರಂಶ :

 

ಅ. ಒಳ್ಳೆಯವನಾಗಿರು,

ಒಳ್ಳೆಯದನ್ನು ಮಾಡು,

ಒಳ್ಳೆಯದನ್ನು ಮಾತನಾಡು,

ಒಳ್ಳೆಯದನ್ನು ಯೋಚಿಸು,

ಒಳ್ಳೆಯದನ್ನು ಪ್ರಾರ್ಥಿಸು.

ಆ, ವ್ಯೆವಿದ್ಯತೆಯಲ್ಲಿ 

   ಏಕತೆ

   ನೋಡುವುದೇ

   ಧರ್ಮ. 

ಇ. ಸ್ವಧರ್ಮದಲ್ಲಿ ನಂಬಿಕೆ, ವಿಶ್ವಾಸ

   ಇಟ್ಟು, ಬೆಳಸಿ, ಪ್ರೋತ್ಶಾಹಿಸಿ,

   ಅನ್ಯ ಧರ್ಮಗಳ ಸಾರಂಶ ತಿಳಿದು

   ಸಹಿಷ್ಣುತೆಯಲ್ಲಿ ಬಾಳುವುದೆ ಧರ್ಮ. 

 

9.11.1992

 

49. ಶ್ರೀ ಗುರು ಸದಾನಂದರು : ಮೌನ ಗುರುಗಳಾಗಿಹರು

ಭಕ್ತರ ಮನದಲ್ಲಿ ನೆಲೆಸಿಹರು,

ನಂಬಿದ ಭಕ್ತರಿಗೆ ಮಾರ್ಗದರ್ಶಿಯಾಗಿಹರು,

ಪವಾಡಗಳ ತೋರಿಸಿ ಕರೆಸಿಕೊಳ್ಳುವರು,

ಅರಿಷಡ್ವರ್ಗಗಳಿದ್ದಲ್ಲಿ ದೂರ ಸರಿಯುವರು,

ಭಕ್ತಿ ತುಂಬಿದಲ್ಲಿ ಮನದಲ್ಲಿ ಕುಣಿದು ಕುಪ್ಪಳಿಸುವರು,

ಭಕ್ತರ ಕಷ್ಟ ಕಾರ್ಪಣ್ಯಗಳ ಹೆಗಲಲ್ಲಿ ಹೊತ್ತಿಹರು,

ಭಕ್ತರ ಖಾಯಿಲೆಗಳ ನುಂಗಿ ವಿಷಕಂಠರಾಗಿಹರು,

ಸಮಯಕ್ಕೆ ಬಂದು ಮನಸ್ಸು ಹಗುರ ಮಾಡುವರು,

ಗೊತ್ತಿದ್ದು ಗೊತ್ತಿಲ್ಲದ ಹಾಗೆ ಕುಳಿತಿಹರು.

ಗುರು ಮಾತೆ ’ಗಿರಿಜಾ’ಗೆ ಸ್ಥಳವ ನೀಡಿದವರಿವರು,

ಭಕ್ತರ ಮನೆಯಲ್ಲಿ ಹೂನಲ್ಲಿ ಬಂದು ಕುಣಿಯವರು,

ಕೆಲವರ ಮನೆಯಲ್ಲಿ ಸುವಾಸನೆಯಾಗಿ ಬಂದು ಹೋಗಿಹರು,

ಲಿಂಗ, ಶ್ರೀನಿವಾಸ, ಗಣೇಶ ವಿಗ್ರಹ ಸೃಷ್ಟಿಸಿಕೊಟ್ಟವರು,

ಬಹುಜನ ಭಕ್ತರಿಗೆ ರುದ್ರಾಕ್ಷಿ ಸೃಷ್ಟಿಸಿ ಕೊಟ್ಟಿಹರು.

ಈ ಕವನ ಬರೆದ ಅಲ್ಪನಿಗೆ ಅನೇಕ ಸಲ ಕನಸಿನಲ್ಲಿ ಬಂದಿಹರು,

ಕೆಲವು ಭಕ್ತರಿಗೆ ಪುರ್ನಜನ್ಮ ನೀಡಿದಹರಿವರು.

ಭಕ್ತರ ಮನಸ್ಸಿನಲ್ಲಿ ಶಾಂತಿ ನೆಮ್ಮದಿ ನೆಲೆಸಿದಹರಿವರು,

ಕೆಲವು ಭಕ್ತರಿಗೆ ಸಂತಾನಗೈದು ಕಂದನಾಗಿ ಬಂದಿಹರು,

ಬರೆಯುವ ಭಕ್ತರಿಗೆ ಸ್ಪೂರ್ತಿಯಾಗಿ ಬಂದಿಹರು,

ಬರೆಯುವ ಭಕ್ತರಿಗೆ ಶಕ್ತಿ-ಚೈತನ್ಯವಾಗಿ ಬಂದಿಹರು,

ಹಾಡುವ ಭಕ್ತರಿಗೆ ಶಾರದೆಯಾಗಿ ಬಂದಿಹರು,

ಮಾತಾಡುವ ಭಕ್ತರಿಗೆ ವಾಗ್ದೇವಿಯಾಗಿ ಬಂದಿಹರು,

ಧನ, ಮನಸ್ಸು, ಆರೋಗ್ಯದಲ್ಲಿ ಪರೀಕ್ಷಿಸುವರು,

ಜಾತಿ ಮತಗಳ ಭೇದವಿದ್ದಲ್ಲಿ ದೂರ ಸರಿಯುವರು,

ನಾನಾ ರೂಪದಲ್ಲಿ ಬಂದು ಕೆಲವರಿಗೆ ಸೃಷ್ಟಿಯ ಚೈತನ್ಯವ ತೋರಿಹರು,

ಭಾವನೆಗೆ ತಕ್ಕ ಹಾಗೆ ಆ ದೇವರಾಗಿ ಕನಸಿನಲ್ಲಿ ಬಂದು ಹೋಗಿಹರು,

ದತ್ತಾತ್ರೇಯ ಸ್ವರೂಪವೇ ಇವರಾಗಿರುವರು,

ಬೀಜಾಪುರ, ಬೊಂಬಾಯಿ, ಬೆಂಗಳೂರಲ್ಲಿ ಆಶ್ರಮವ ಸ್ಥಾಪಿಸಿದವರಿವರು.

ಭಜನೆ, ಆರತಿಗೆ ಬಂದ ಭಕ್ತರಿಗೆ ವಿಶೇಷ ಆರ್ಶ್ರೀವಾದ ಮಾಡುವರು,

ಪವಾಡಗಳ ಸಂಖ್ಯೆ ಲಕ್ಷ ಮೀರಿರಬಹುದು,

ಭಕ್ತರ ಬಾಯಲ್ಲೇ ತಿಳಿಸಿ ಹೇಳುವರು,

ವಿವರಗಳು ತಿಳಿಸಲಿಕ್ಕೆ ಈ ಜನ್ಮ ಸಾಲದು.

ಈ ಕಿಂಕರ ಹೋಗಿ ಬರುವೆ ಎಲ್ಲ ಭಕ್ತರಿಗೆ ಶರಣು ಶರಣು.

ಶ್ರೀ ಗುರು ಸದಾನಂದರು ಕರೆದಿಹರು

ಬರುವೆ ಇನ್ನೊಮ್ಮೆ, ತೊಡಿಸುವೆ ಎಲ್ಲರ ಮನದಲ್ಲಿ

ಶ್ರೀ ಗುರು ಸದಾನಂದರ ’ಪವಾಡಗಳ ಮಾಲೆ’ ಯ.

 

10.11.1992

50. ಸದ್ಗುರು-ಸದಾನಂದ : ನಮ್ಮೆಲ್ಲರ ಪಾಲಿಗೆ ದೇವರು ಶ್ರೀ ಗುರು ಸದಾನಂದ,

ಗುರು ಮಾತೆ ’ಗಿರಿಜಾ’ತೆ ಇರುವುದು ಎಲ್ಲರಿಗೂ ಆನಂದ,

ಭಕ್ತರ ಮನಸ್ಸು ಹಗುರ ಮಾಡಿಕೊಟ್ಟ ಆನಂದ ಮಹದಾನಂದ,

ಕೆಲವು ಭಕ್ತರಿಗೆ ಸಿಕ್ಕಿದೆ ಗಾಢಾನಂದ,

ಇನ್ನು ಕೆಲವು ಭಕ್ತರಿಗೆ ಆಗಿದೆ ಭವ್ಯಾನಂದ,

ದತ್ತಾತ್ರೇಯ ಸ್ವರೂಪಿಯಾಗಿ ಈಗ ಇರುವರು ಸಚ್ಚಿದಾನಂದ,

ಬಾಲಕನಾಗಿದ್ದಾಗ ಕಷ್ಟ ಕಾರ್ಪಣ್ಯಗಳಿಂದ ಬೆಂದ,

ಬರುವ ಭಕ್ತರಿಗೆ ’ಭಕ್ತಿ, ವಿಶ್ವಾಸ, ತಾಳ್ಮೆ, ಶ್ರದ್ಧೆ’ ಇರಲಿ ಅಂದ,

ಪರಿಹಾರ ಕೇಳಲಿಕ್ಕೆ ಹೋದಾಗ ಭಕ್ತರ ಖಾಯಿಲೆ ತನಗೆ ಇರಲೆಂದ,

ಭಕ್ತರು ಕೊಟ್ಟ ಭೋಗಾದಿ ವಸ್ತುಗಳ ಬೇಡವೆಂದ,

ಭಜನೆ, ಆರತಿಗೆ ಬರುವಾಗ ’ಅರಿಷಡ್ವರ್ಗ’ ಬಿಟ್ಟು ಬಾ ಎಂದ,

ಈಗಲೂ ಸಹ ಮುಗ್ದತೆಯ ಮನಸಿನಲಿ ಕುಳಿತಿಹನು ಕಂದ,

ಭಕ್ತರ ಕರೆಗೆ ’ಓ’ ಗೊಟ್ಟು ಸಹಾಯ ಮಾಡುವುದು ಅವನಿಗಾನಂದ,

ಭಜನೆ-ಆರತಿಗೆ ಕುಳಿತಾಗ ತನ್ನ ತಾ ಮರೆಯುವುದು ಅವನಿಗೆ ಮಹದಾನಂದ,

ಭಕ್ತರನು ಆರ್ಶ್ರೀವದಿಸಿ, ಅನುಗ್ರಹಿಸಿ, ಉದ್ದರಿಸುವುದು ಅವನಿಗೆ ದಿವ್ಯಾನಂದ,

ತನ್ನ ಇರುವಿಕೆ ಮತ್ತು ಪವಾಡಗಳ ಪ್ರಚಾರಕ್ಕೆ ಅವಕಾಶ ಇಲ್ಲೆಂದ ಈ ಶಿವಾನಂದ,

ನಮ್ಮ ಶ್ರೀ ಗುರು ಸದಾನಂದ.

 

53.ದಿನ-ಪ್ರಾರ್ಥನೆ : ಆ ದೇವನಲಿ ನಮ್ಮ ಪ್ರಾರ್ಥನೆ ಹೀಗಿರಲಿ,

ಕೊಂಡು-ಕೊಡುವ ರೀತಿಯಲ್ಲಿರಲಿ:- ಆರ್ಶೀವಾದ, ಅನುಗ್ರಹ ಮತ್ತು ಉದ್ದರಿಸುವುದು ನಿನ್ನ ಕರ್ತವ್ಯ ಆರೋಗ್ಯ ಭಾಗ್ಯ ವಿದ್ಯೆ ಬುದ್ದಿ ಮತ್ತು ಐಶ್ವರ್ಯ ಸದಾಕೊಡುತ್ತಿರು.

ನೆಮ್ಮದಿ ಮತ್ತು ಶಾಂತಿ ಸದಾ ಕೊಡು,

ಮಾಡುವ ಕಾಯಕ ಸಫಲವಾಗಿರಿಸು,

ಕಾಯಕದಿಂದ ಮನಸ್ಸಿಗೆ ತೃಪ್ತಿ ಕೊಡು,

ನಿನ್ನ ಪ್ರತಿರೂಪ ಸಮಾಜವಾಗಿರಿಸು.

ಆಗ ನಾನು ಇದಕ್ಕೆ ಪ್ರತಿಯಾಗಿ ಸಮಜಕ್ಕೆ ಕಳಂಕರಹಿತ ಸೇವೆ ಮಾಡುವೆ,

ಕಿರಿಕಿರಿ ಮಾಡದೇ ಇರುವ,

ಹೆಸರು ಬರುವ ಹಾಗೆ ಕಾಯಕ ಮಾಡುವೆ,

ಕಾಯಕ ಮಾದರಿ ಇರುವ ಹಾಗೆ ಮಾಡುವೆ,

ಕಾಯಕ ಅರಿಷಡ್ವರ್ಗರಹಿತ ಇರುವ ಹಾಗೆ ನೋಡುವೆ,

ಕಾಯಕದಿಂದ ಬಂದ ಹಣವ ಸಮಾಜಕ್ಕೆ ತೊಡಗಿಸುವೆ,

ಸಮಾಜದ ಋಣವ ತೀರಿಸುವೆ ಸಕಲ ಜೀವರಾಶಿಗಳಿಗೂ ಲೇಸನ್ನೆ ಬಯಸುವೆ,

ಕೊನೆಗೆ, ಹೇ ಪರಮಾತ್ಮ ಅರಿಯದೇ ಮಾಡಿದ ತಪ್ಪನು ಕ್ಷಮಿಸು.

 

2.11.1992-1.50 a.m.

59.ನನ್ನ ಪಾಲಿಗೆ ದೇವರು-ವಿಶ್ವ : ದೇವರು ಆ ಪರಮಾತ್ಮ ಬಲು ಹತ್ತಿರ,

ನನ್ನ ಹೃದಯವೇ ಅವನ ವಾಸಸ್ಥಾನ-ದೇವಸ್ಥಾನ,

ಇಟ್ಟಿರುವೆನು ಗುರುತಿಗಾಗಿ ಲಿಂಗವ ಬೆಳ್ಳಿಯ ಕರಡಿಗೆಯಲ್ಲಿ,

ಈ ವಿಶ್ವ ಒಂದು ಸುಂದರ ದೇವರು ಕೊಟ್ಟ ವರ.

ಸಕಲ ಜೀವರಾಶಿಗಳು ಪರಿಸರಗಳು ದೇವರು ಕೊಟ್ಟ ಕಚ್ಚಾ ಸಾಮಗ್ರಿಗಳು

ಮಾನವನೇ ಶಿಲ್ಪಿ ಇದಕ್ಕೆ.

ಮಾಡಬೇಕು ವಿಶ್ವವ ಒಂದು ಸುಂದರ ತಾಣ -’ದೇವ’ಗೆ,

ಬಿಟ್ಟು ಬರಬೇಕು ಶಿಲ್ಪಿ ಅರಿಷಡ್ವರ್ಗಗಳ ವಾಸನೆ,

ಉಪಯೋಗಿಸಬೇಕು ಶಿಲ್ಪಿ ದೇವರು ಕೊಟ್ಟ ಪ್ರತಿಭೆ,

ಸಕಲ ಜೀವರಾಶಿಗಳು ಪರಿಸರಗಳು ಬೇಕು ಸಹಾಯಕೆ,

ಶಿಲ್ಪಿಗೆ ಬೇಕಾದುದು ಒಂದೇ, ಸುಂದರ ಏಕಾಗ್ರತೆಯ ಮನಸು,

ಶಿಲ್ಪಿಗಳಾಗಿ ಹೋದರು ಹಲವರು,

ಕ್ರಿಸ್ತ-ಬುದ್ದ-ಬಸವ-ಗಾಂಧಿ ಹೀಗೇ ಹಲವರು ಆಗಿ ಹೋದರು,

ಇನ್ನು ಪೂರ್ತಿ ಆಗಿಲ್ಲ, ದೇವರ ಸುಂದರ ತಾಣ

ಉಪಯೋಗಿಸಿದರೆ ಪ್ರತಿಭೆ ಮಾನವ ಸಂಪೂರ್ಣ

ಆಗುವುದು ಈ ವಿಶ್ವ ದೇವರ ತಂಗುದಾಣ

ಅರಿಷಡ್ವರ್ಗ ಲೇಪಿಸಿದರೆ ಪ್ರತಿಭೆಗೆ

ಆಗ ಈ ತಾಣವಾಗುವುದು ಕುರುಕ್ಷೇತ್ರಗಳ ತಾಣ

ಮಾನವನಿಗಿರುವ ಹಕ್ಕು ಉಳಿಸಲಿಕೆ ಹೊರತು ಅಳಿಸಲಿಕ್ಕಲ್ಲ.

ಸುಂದರ ತಾಣವಾದಾಗ ಇರುವನು ದೇವ ಎಲ್ಲರ ಹೃದಯದಲಿ

ನನ್ನ ಪಾಲಿಗೆ ದೇವರೇ ಈ ವಿಶ್ವ.

 

60. ಭವ-ರೋಗ ವೈದ್ಯ ಶ್ರೀ ಗುರು ಮಲೈ ಮಹದೇಶ್ವರ :

ನೆಲೆಸಿರುವನು ಏಳು ಮಲೈಗಳ ನಡುವೆ ಮಹದೇಶ್ವರ

ಇವರ ವಾಹನ ಹುಲಿ ಯಾವಗಲೂ ಕಿಂಕರ

ಬಹುಮಂದಿ ಭಕ್ತರಿಗೆ ಇವರು ಬಂಗಾರ

ನಾಮ ನೆನೆದರೆ ಸಾಕು ಮನಸು ಹಗುರ

ಇವರ ಚಿತ್ರಪಟ ನೋಡಲಿಕೆ ಬಹು ಸುಂದರ

ದರ್ಶನ ಪಡೆಯಲು ಬರುವ ಭಕ್ತ ಸಮೂಹ ಅಪಾರ

ನಂಬಿದ ಭಕ್ತರಿಗೆಲ್ಲ ಸಿಗುವುದು ಜೀವನದಲ್ಲಿ ಆಹಾರ

ಇವರು ನಡೆಸಿರುವ ಪವಾಡಗಳು ತರ-ತರ

ಇವರ ಇನ್ನೊಂದು ರೂಪವೇ ಪರಮೇಶ್ವರ

ಇವರ ಇನ್ನೊಂದು ನಿವಾಸವೇ ಗೌರಿಶಂಕರ

ಅರಿಷಡ್ವರ್ಗ ದೂರವಿಟ್ಟು ಬಂದಲ್ಲಿ ಸಿಗುವುದು ಪರಿಹಾರ

ಜಾತ್ರೆ ಕಾಲದಲ್ಲಿ ನೋಡಬೇಕು ಭಕ್ತರ ಸರೋವರ

ಬಹುಮಂದಿ ಭಕ್ತರಿಗೆ ಆಗಿದೆ ಉಪಚಾರ

ಅವ್ಯವಹಾರ ಮಾಡಿದವರಿಗಾಗುವುದು ಅವಾಂತರ

ನೆಮ್ಮದಿ ಶಾಂತಿ ಬೇಕಾದರೆ ಬರಬೇಕು ಇವರ ಹತ್ತಿರ

ಗುರುಗಳಿಗೇ ಆಗಾಗ್ಗೆ ತೋರಿಸಿದರು ಚಮತ್ಕಾರ

ಭವರೋಗಿಗಳಾಗಿ ಬಂದ ಭಕ್ತರಿಗೆ ಸಿಗುವುದು ಉತ್ತರ

ಸೂರ್ಯ ಚಂದ್ರ ಇರುವವರೆಗೂ ಇವರ ಹೆಸರು ಅಮರ

ನಂಬಿಕೆ-ತಾಳ್ಮೆ-ಶ್ರದ್ದೆ-ವಿಶ್ವಾಸ-ಭಕ್ತಿ ತಂದು ಮಾಡಬೇಕು ಇವರಲ್ಲಿ ವ್ಯವಹಾರ

ಈ ರೀತಿ ಬಂದಲ್ಲಿ ಸಿಗುವುದು ಮೋಕ್ಷ ನೇರ

ಇಲ್ಲದಿದ್ದಲ್ಲಿ ಭಕ್ತರಿರುವರು ದೂರ

ಭಕ್ತರಿಗಳಿಗಾದ ಅನುಕೂಲಗಳೇ ಇವರ ಪ್ರಚಾರ

ಕೆಲವು ಪರಮ ಭಕ್ತರಿಗೆ ಸಿಕ್ಕಿತು ಸಾಕ್ಷಾತ್ಕಾರ

ಜಾನಪದ ಗೀತೆಗಳು ಹಾಡುವುವು ಇವರ ವಿಚಾರ

ಇಲ್ಲಿರುವ ತಂಬಾಡಿಗಳಿಗೆ ಮಾಡಿದರು ಸಂಸ್ಕಾರ

ಬಂದ ಭಕ್ತರಿಗೆ ಸಿಗುವುದು ನೆಮ್ಮದಿಯ ಸ್ವರ್ಣ ಕುಟೀರ

ಈ ಸುತ್ತಮುತ್ತ ಇಲ್ಲ ಪರಿಸರದ ವ್ಯಭಿಚಾರ

ಕಾರಣ ಗೊತ್ತು ಆಗುವುದು ಅವರಿಗೆ ಅಪಚಾರ

ನಾಮದ ಬಲದಿಂದ ಆದನು ಭಕ್ತ ಸದಾ ವೀರ

ಇಲ್ಲಿಗೆ ಬಂದಾಗ ನೋಡುವುದಿಲ್ಲ ಭಕ್ತರು ಗಡಿಯಾರ

ಕಾರಣ-ಸಿಗುವುದು ಅವರಿಗೆ ದಾಸೋಹದಲ್ಲಿ ಆಹಾರ

ಅನುಗ್ರಹ ಪಡೆಯಲು ಬಂದು ಹೋಗುವುದು ಸರ್ಕಾರ

ಭಜನೆ ಪ್ರಾರಂಭಿಸಿದರೆ ಆಗದು ಅಪಸ್ವರ

ಇಲ್ಲಿಯ ವಾತಾವರಣ ಯಾವಗಲೂ ಆಹ್ಲಾದಕರ

ಇಲ್ಲಿಗೆ ಬಂದ ಕೂಡಲೇ ದೂರ ಹೋಗುವುದು ಆದ ಭಾರ

ಇವರ ನೈವೇದ್ಯಕ್ಕೆ ಕೊಡುವರು ಭಕ್ತರು ಕಟ್ಟುನಿಟ್ಟು ಆಹಾರ

ಇದುವೆ ಮಹಾದೇಶ್ವರರ ಬಗ್ಗೆ ಇರುವ ಸಮಾಚಾರ

ಇದನ್ನು ಓದಿ ತಿಳಿದ ನಿಮಗೆಲ್ಲರಿಗೂ ನನ್ನ ನಮಸ್ಕಾರ

ಎಲ್ಲ ಭಕ್ತರಿಗೆ ಸಿಗಲಿ ಮಹದೇಶ್ವರರ ಆರ್ಶೀವಾದ.

 

3.11.1992

62. ಹೇ ದೇವ ಬೇಗ ಬಾ : ತಾಳಲಾರೆನು ದೇವ ನಿನ್ನ ಪರೀಕ್ಷೆಯನು

ನೀ ಒಬ್ಬಂಟಿಗನಾದೆ

ಇಟ್ಟುಕೊಂಡೆ ಹಲವು ನಾಮ

ಮಾಡಿದೆ ಮನವ ಸಂಶಯಗಳ ಕೂಟ

ಹಿಡಿತದಲ್ಲಿಲ್ಲ ನನ್ನ ಮನಸು

ದೂರ ಇದೆ ನೆಮ್ಮದಿ-ಶಾಂತಿ

ಕಾರಣ-ಭವ ಬಂಧನಗಳ ಮೋಹದ ಬ್ರಾಂತಿ

ಬಿಡಿಸಲಾರೆಯೆ ದೇವ ? ಈ ಪಾಶವ

 

ಅಂಟಿಹುದು ಅರಿಷಡ್ವರ್ಗ ಎಲ್ಲ ಭಾಗದಲಿ

ಕೊಡು ಬಾ ಬೇಗ ಭಕ್ತಿಯ ಲೇಪನ

ಇರಲಿ ಕೆಲಕಾಲ ದೂರ ಅರಿಷಡ್ವರ್ಗದ ವಾಸನೆ

 

ಹೇ ದೇವ ! ನೀನು ಭವರೋಗ ವೈದ್ಯ.

ಬಂದು ಗುಣಪಡಿಸು ವಿಶ್ವದ ಅನಾರೋಗ್ಯ

ಕೊಡು ಸಕಲ ಜೀವರಾಶಿಗಳಿಗೆ ಆರೋಗ್ಯ

ನೈಜ ಭಕ್ತಿಯೇ ಅಲ್ಲವೇ ನಿನ್ನ ಆಹಾರ

ಅದಕ್ಕಾಗಿ ಅಲ್ಲವೇ ಈ ವಿಶ್ವದಲಿ ವ್ಯಾಪಾರ

ಕೊಡುವೆಯಾದರೆ ನಮಗೆ ನೆಮ್ಮದಿ ಶಾಂತಿ

ಸಿಗುವುದು ನಿನಗೆ ಭಕ್ತಿ ನಿರಂತರ

ಗೊತ್ತು ಇರುವುದು ಭಕ್ತಿ ಭಕ್ತರ ಮನದಲ್ಲಿ

ಮನವ ಮಂಥನ ಮಾಡಿದಾಗ ಸಿಗುವುದು ಈ ಭಕ್ತಿ

ಅದಕ್ಕಾಗಿ ಬೇಕು ನಿನ್ನ ಅನುಗ್ರಹದ ಶಕ್ತಿ

ಹೇ! ದೇವ! ಬರುವೆಯ ಬೇಗ

ಕೊಡುವೆಯಾ ನಿನ್ನ ಪಾದದ ಧೂಳ

 

63. ಭಕ್ತಿ : ಎಲ್ಲರಲಿ ಇಲ್ಲ ಭಕ್ತಿ

ಅದಕೆ ಬೇಕು ದೈವಾಂಶ ಶಕ್ತಿ

ನಡೆಯುವುದು ಇಲ್ಲ ಕುಯುಕ್ತಿ

ಉಪಯೋಗಿಸಿದರೂ ಇಲ್ಲ ಯುಕ್ತಿ

ಇವುಗಳೆಲ್ಲ ಕೇವಲ ಭ್ರಾಂತಿ

ಕೊಡಬೇಕು ಆ ದೇವ ಸ್ಪೂರ್ತಿ

ಬೆಳಗುವುದು ಎಲ್ಲ ಕಡೆ ಭಕ್ತಿಯ ಕೀರ್ತಿ

 

64.ಒಡನಾಟ : ಆ ದೇವನಲಿ ನಡೆಸಬೇಕು ಒಡನಾಟ

ಅದಕಾಗಿ ಬೇಕು ವಿಶೇಷ ಹೋರಾಟ

ಆ ದೇವ ಎಷ್ಟು ದೂರನೋ ಅಷ್ಟೇ ಹತ್ತಿರ ಮನಸಿನಲಿ

ಮನವು ಅಂತರ್ಮುಖಿಯಾದರೆ ದೇವನಾಡುವನು ವಿಚಾರದಲಿ ಒಡನಾಟ

ಬಹಿರ್ಮುಖಿಯಾದರೆ ನಡೆಯುವುವು ಭವದ ಜೊತೆಗೆ ಜೀವನದಾಟ

ಮನಸು ಚಿಂತನಕೆ ಬಿಟ್ಟು ನಡೆಸಬೇಕು ಮಂಥನದ ಹೋರಾಟ

ಮಾಡಬಾರದು ತಮಾಷೆಗೂ ಕೂಡ ಹುಡುಗಾಟ

ಇಲ್ಲವಾದರೆ ಏಕಾಗ್ರತೆ ತಪ್ಪಿ ಆಗುವುದು ಪರದಾಟ

 

ಭವರೋಗ ವೈದ್ಯನೊಂದಿಗೆ ಆಡಬೇಕು ಹೋರಾಟ

ಅರಿಷಡ್ವರ್ಗಗಳು ಮಾಡುವುವು ಭಂಡಾಟ

ಕ್ರಮೇಣ ಕಡಿಮೆ ಮಾಡಬೇಕು ಭವದ ಆಟ

ಕೊನೆಗೆ ನಿಲ್ಲಿಸುವುವು ಭವ-ಅರಿಷಡ್ವರ್ಗಗಳ ಆಟ

ಒಡನಾಟದಲ್ಲಿ ಸಿಗುವುದು ಭಕ್ತಿಯ ಸಾಧನೆ

ಹುಟ್ಟಿದಕ್ಕೂ ಆಯಿತು ಜೀವನದಲ್ಲಿ ಸಾಧನೆ

ಇದಕ್ಕಾಗಿ ಒಳಿತು ಸಿಕ್ಕರೆ ಭಕ್ತರಲಿ ಒಡನಾಟ

ಸಿಕ್ಕಿದಾಗ ನಿಲ್ಲುವುದು ಮನದಲಿ ಪರದಾಟ

ಅಂತರಂಗದಲ್ಲಿ ನಡೆಸಬೇಕು ಸದಾ ಆಟ

ಆಗ ನೋಡಿ ದೇವನದೆ ಒಡನಾಟ

 

16.11.1992

67. ದೇವ- ಮಾನವ : ಅಂದು ಇಂದು :- ನಾನೇನ ಮಾಡಲಿ ದೇವ,

ಕೊಡಲು ನಿನಗೆ ಎನ್ನಲೇನುಂಟು

ಇದೆಲ್ಲವನು ನೀನೆ ತಿಳಿದು ಎಂದ ಮಾನವ ಅಂದು,

ನೀನೇನ ಮಾಡುವೆ ದೇವ

ಕೊಡಲೆನಗೆ ನಿನ್ನಲೇನುಂಟು

ಇದೆಲ್ಲವನು ನಾನೇ ತಿಳಿದು-ಎಂದು ಮಾನವ ಇಂದು,

ನಂತರ ಅದಕ್ಕಾಗಿ,

ವಿಜ್ಞಾನದ ಪರಿಸರಕ್ಕೆ ಜೋತುಬಿದ್ದು

ಭವ ಬಂದನಕ್ಕೆ ಒಳಗಾಗಿ,

ಅರಿಷಡ್ವರ್ಗಗಳ ಬೇಕಾ ಬಿಟ್ಟಿ ಬೆಳಸಿ,

ಅನಾರೋಗ್ಯಗಳ ಕೊಟ ಸೇರಿಸಿ,

ನೆಮ್ಮದಿ ಶಾಂತಿ ದೂರ ಹೋಗಿಸಿ

ಸರಿಸಿ ಬಂಧು ಬಳಗ ಸ್ನೇಹಿತರ ದೂರವಿರಿಸಿ

ಹುಡುಕಾಡಿದನು ದೇವನ ಗುಡಿ ಗೋಪುರಗಳಲಿ

ಮರೆತನು ಇದ್ದುದ್ದ ತನ್ನ ಹೃದಯದಲ್ಲಿ.

 

 

13.12.2003- 2.40 a.m.

 

ಯುಗ ಪುರುಷ ಶ್ರೀ ಮಹದೇಶ್ವರರು :- ಸಾಕಾರ ರೂಪವಾಗಿ ಕಳಿಸಿಹನು ಸೃಷ್ಟಿಕರ್ತ ಆ ದೇವನು. ದೈವಾಂಶಸಂಭೂತನಾಗಿ ಬಂದಿಹನು ಈ ಮಹದೇಶ್ವರನು ಜಾತಿ-ವರ್ಗ ರಹಿತನು ನಂಬಿದವನ ಕೈಬಿಡನು ಇದಕಾಗಿ ಇರುವುದು ಲಕ್ಷೋಪಲಕ್ಷ ಭಕ್ತವಂತರ ಉದಾಹರಣೆಗಳು ಶ್ರೀಕ್ಷೇತ್ರ ಸೇರುತ್ತಲೇ ಸಿಗುವುದು ಮನಸಿಗೆ ನೆಮ್ಮದಿ ಕ್ಷೇತ್ರದಲ್ಲಿದ್ದಾಗ ಮರೆತು ಹೋಗುವುದು ಭವಬಂಧನದ ಜಂಜಾಟ ಈ ಕ್ಷೇತ್ರದಲ್ಲಿದ್ದಾಗ ಇಲ್ಲವಾಗುವುದು ಅರಿಷಡ್ವರ್ಗಗಳ ಕಾಟ ಕ್ಷೇತ್ರ ಸುತ್ತಮುತ್ತಗಳ ಪರಿಸರವೇ ದೈವಾಂಶದ ಪರಿಸರ ಇದ್ದು ಅನುಭವಿಸಿದವರಿಗೇ ಗೊತ್ತು ಆ ಮಹದೇಶ್ವರನ ಆಟ, ಹರಕೆ ಹೊತ್ತು ತೀರಿಸಿದ ಋಣ ವಿಮುಕ್ತಿ ಭಕ್ತರು ಲಕ್ಷ-ಲಕ್ಷ, ಕಾರಣ ಅದಕೆ ಮಹದೇಶ್ವರರು ತೀರಿಸಿದ ಹರಕೆಯ ಫಲಗಳು. ಪ್ರತಿವರುಷ ಏರುತಿಹುದು ಭಕ್ತರ ಕಾಣಿಕೆಗಳು-ಹರಕೆಗಳು. ನಂಬಿದ ಭಕ್ತರಲಿ ಸದಾ ನೆಲೆಸಿಹನು ಹೃಧಯದಲಿ ಆ ಮಹದೇಶನು ವ್ರತ-ನಿಯಮಗಳನು ಆ ಭಕ್ತರಿಗೆ ಬಿಟ್ಟಿಹನು ಅವರವರ ಭಾವಕ್ಕೆ -ಮನಸಿಗೆ ಬಿಟ್ಟು ಗಮನಿಸಿಹನು. ಸತ್ಯ-ನಿಷ್ಟೆ-ಭಾವನೆ-ನಂಬಿಕೆಗಳೇ ಆ ಮಹದೇವನ ಬೇಡಿಕೆ ಇವನ ನಂಬಿ ಕೆಟ್ಟವರಿಲ್ಲ- ನಂಬಿ ಬೆಳೆದರು ಎಲ್ಲ. ಈ ಕ್ಷೇತ್ರಧ ವಾಯುವಿನೆಲ್ಲೆಲ್ಲ ಪಸರಿಸಿ ಸುತ್ತಿ ಸುಳಿದಾಡುತಿಹನು. ಆ ಮಹದೇಶ್ವರನ ಪವಾಡ-ಮಹಿಮೆಗಳು ಅಪಾರ. ನೆಪ ಮಾತ್ರಕೆ ಮಾತ್ರ ಮಾನವನ ರೂಪ ಆದರೆ ಮನ-ಭಾವ-ದೇಹ ಪೂರ್ತಿ ದೈವಾಂಶ ರೂಪ ಇವನ ಭಕ್ತರು ಹರಡಿಹರು ದೇಶ-ವಿದೇಶಗಳಲ್ಲಿ ಆದರೂ ಕ್ಷೇತ್ರಕ್ಕೆ ಬಂದು ಹೋಗುವರು ವರುಷ -ವರುಷಕ್ಕೆ ಆಗಾಗ್ಗೆ. ಕಾರಣ ಹರಕೆ ತೀರಿಸಲಿಕೆ-ಕಾರ್ಯ ನೆರವೇರಿಸಿದ್ದಕ್ಕೆ ಇವನಲ್ಲಿಲ್ಲ ಯಾವ ಭೇದ-ಜಾತಿ, ವರ್ಗ, ವರ್ಣರಹಿತನು. ಜಾನಪದ ಗೀತೆಗಳಲ್ಲಿ ಕೇಳಬೇಕು ಇವರ ಪವಾಡಗಳ, ಪ್ರತಿಯೊಬ್ಬ ಭಕ್ತರಿಗೂ ಅನುಭವಗಳು ಅನೇಕ ರೀತಿ. ಎಲ್ಲರಲ್ಲಿಲ್ಲ ಏಕ ರೀತಿಯ ಪವಾಡದ ಅನುಭವಗಳು ಮನನೊಂದಿ ಬಂದ ಭಕ್ತರು ಹೋಗಿಹರು ಮನ ಹಗುರವಾಗಿ ಕ್ಷೇತ್ರದಲ್ಲಿದ್ದಾಗ ಭಕ್ತರು ಮರೆತಿಹರು ಮನೆ ತಾಪತ್ರಯಾದಿ ವಿಷಯಗಳ.  ಶ್ರೀ ಮಹದೇಶ್ವರ ಸ್ವಾಮಿಯಲ್ಲಿರುವುದು ಒಂದೇ ನೀತಿ, ಭಕ್ತಿಯಿದ್ದವನನ್ನು ಆಶೀರ್ವದಿಸಿದ, ಅರಿಷಡ್ವರ್ಗವಿದ್ದವರನ್ನು ದೂರವಿರಿಸಿದ. ನಂಬಿಕೆ-ವಿಶ್ವಾಸ-ಭಕ್ತಿ ಇದ್ದವರನ್ನು ಕ್ಷೇತ್ರಕ್ಕೆ ಕರಿಸಿದ. ಸಂಪೂರ್ಣ ಶರಣಾಗತರಾದವರಿಗೆ ಅಭಯ ನೀಡಿದ, ಸದಾ ನೆರಳು ನೀಡಿ, ಸಹಕರಿಸಿ, ಸ್ನೇಹಿತನಾದ, ಮಾರ್ಗದರ್ಶಿಯೂ ಆಗಿಹನು, ತತ್ವಜ್ಞಾನಿಯೂ ಆಗಿಹನು. ಮಕ್ಕಳಿಲ್ಲದ ಸಂಸಾರ ಮಕ್ಕಳನ್ನು ಪಡೆದರು ಹಲವರು. ನಿರುದ್ಯೋಗಿಗಳಾಗಿದವರಲ್ಲಿ ಉದ್ಯೋಗಿಗಳಾದವರು ನಂಬಿದ ಭಕ್ತರು. ನಷ್ಟ ಹೊಂದಿದ ವ್ಯಾಪಾರಸ್ಥರು ಲಾಭ ಹೊಂದಿದರು ಇನ್ನು ಹಲವು ಭಕ್ತರು ಬರಿಗೈಲಿ ಹೋದವರಿಲ್ಲ ಕ್ಷೇತ್ರಕ್ಕೆ ಬಂದ ನಂಬಿದ ಭಕ್ತರು. ಮಾನಸಿಕವಾಗಿ ನೆಮ್ಮದಿ ಹೊಂದಿ ಹೋದವರು ಅನೇಕರು ಬುದ್ದಿ ವಿಕಲ್ಪ ಹೋಗಿ ಹೃದಯ ವೈಶಾಲತೆ ಹೊಂದಿದವರು ಅನೇಕರು. ಅನಾರೋಗ್ಯದಿಂದ ಬಳಲಿದವರು ಆರೋಗ್ಯವಂತರಾದರು ಇನ್ನು ಕೆಲವರು ಕ್ಷೇತ್ರದಲ್ಲಿದ್ದು ಅನುಭವಿಸಬೇಕು, ಮಹದೇಶ್ವರನ ಮಹಿಮೆಯ. ನಂಬಿಕೆ ಇಟ್ಟು ವೇದನೆ ತಿಳಿಸಿದ ಭಕ್ತರಿಗೆ ಪರಿಹಾರ ಸಿಕ್ಕಿ ಶರಣಾಗತರಾದರು. ನಾನಾ ಪರಿಯಲಿ ಈ ರೀತಿ ಅನುಗ್ರಹಿಸುತಲಿಹನು ಸದಾ, ಶ್ರೀ ಶ್ರೀ ಶ್ರೀ ಸ್ವಾಮಿ ಮಹದೇಶ್ವರರು ಅನೇಕರ ನಂಬಿದ ಭಕ್ತರಿಗೆ.

 

27.12.2003 -1.23 am.

 

ಹಿಂದುತ್ವ :- ವೈವಿದ್ಯತೆಯಲ್ಲಿ ಏಕತೆ ಇದರ ಮೂಲ ಮಂತ್ರ. ನಾನಾ ಭಾಷೆ, ನಾನಾ ಸಂಸ್ಕೃತಿ, ನಾನಾ ರಾಜ್ಯಗಳಲ್ಲಿನ ಹಿಂದೂ ಜನರ ನಡೆ-ನುಡಿಗಳು, ನಾನಾ ರೀತಿಯ ಜೀವನ ಕ್ರಮ, ಇತ್ಯಾದಿ, ಇತ್ಯಾದಿ ಇದ್ದರೂ, ಅದನ್ನು ತೋರ್ಪಡಿಸದೆ ೯೦ ಕೋಟಿ ಜನ ಹಿಂದೂಗಳು ಸಹ ಬಾಳ್ವೆ ತೋರಿಸಿ, ಇಡೀ ವಿಶ್ವಕ್ಕೆ ಮಾದರಿಯಾಗಿ ನಿಂತಿರುವ ಹಿಂದುಗಳು, ಮಾನವ ಜನಾಂಗಕ್ಕೆ ಮಾದರಿ. ರಾಜಕಾರಣಿಗಳು, ಹೊಗಳು ಭಟ್ಟರ, ಕಪಟತನದಿಂದಾಗಿ, ಅವರನ್ನು ಹಿಂಬಾಲಿಸುವ ಚೇಲಾಗಳಿಂದಾಗಿ, ಹಿಂದುಳಿದ ಜನಾಂಗ, ಅಲ್ಪ ಸಂಖ್ಯಾತರುಗಳು, ಇತ್ಯಾದಿಯಾಗಿ, ಹಿಂದೂಗಳನ್ನು ಪುನಃ ಪುನಃ ಒಡೆಯಲು ಪ್ರಯತ್ನಿಸಿದ್ದರೂ ಇದಾವುದನ್ನು ಲೆಕ್ಕಿಸದೇ, ಈಗಲೂ ಸಹ, ಸಹ-ಬಾಳ್ವೆಯಿಂದ ಜೀವನ ನಡೆಸುತ್ತಿರುವುದು ಮಾದರಿಯೇ ಸರಿ. ಆರ್ಥಿಕವಾಗಿ ಬಡತನವಿದ್ದರೂ, ಮನಸ್ಸು -ಹೃಧಯ ಬುದ್ದಿಗೆ ಇನ್ನೂ ಬಡತನ ಬಂದಿಲ್ಲವಾದುದರಿಂದ, ಎಷ್ಟೆ ಕುತಂತ್ರ ಜನ ಬಂದು, ಹಿಂದೂಗಳನ್ನು ಒಡೆಯಲು ಪ್ರಯತ್ನ ಮಾಡಿದರೂ ಅದು ಅಸಾಧ್ಯದ ಕೆಲಸವಾಗಿದೆ. ಹಿಂದೂ ದೇಶ, ಪ್ರಕೃತಿ, ಸಂಪತ್ತು ಇತರೆ ಸವಲತ್ತುಗಳು. ಅದು ದೇವರು ಕೊಟ್ಟ ಕೊಡುಗೆ, ಇದನ್ನು ಅರಿತವನೇ ಬುದ್ದಿವಂತ. ಮನೆ ಬಡತನವಾದರೂ, ಮನ ಬಡವಾಗದೇ ಇರುವುದರಿಂದ, ಬಹಳ ಘನವಾಗಿರುವುದರಿಂದ, ಕೆಲವು ಅಲ್ಪ ದೋಷಗಳು ಅಲ್ಲಲ್ಲಿ ಇದ್ದರೂ, ಹಿಂದೂಗಳು ಹಿಂದುಗಳೇ. ಹಿಂದುತ್ವವೇ ದೇಶಕ್ಕೆ, ವಿಶ್ವಕ್ಕೆ, ಮಾದರಿಯಾಗಿ ನಿಲ್ಲಬಲ್ಲ ದೇವ-ಜನಾಂಗ, ಜಯವಾಗಲಿ ಹಿಂದುತ್ವಕ್ಕೆ.

 

28.12.2003 -1.00 am.

ಅರ್ಚಕರುಗಳ ಉಪಟಳ : ಹೇಳಲಾಗದು, ವಿವರಿಸಲಾಗದು ನಾನಾ ರೀತಿಯ ಕಿರುಕುಳ. ಬಾಯಿಂದ ಮಾತ್ರ ಮಂತ್ರಗಳು ಉದುರುತ್ತಿರುತ್ತದೆ. ಮನಸ್ಸು ಮಾತ್ರ ದಕ್ಷಿಣಿಯ ಮೇಲಿರುತ್ತದೆ. ಭಕ್ತರ ಪರಿಚಯವಿದ್ದರೆ ಅತಿ ವಿಶೇಷ ಉಪಚಾರ. ದಕ್ಷಿಣೆ ಕೊಡದಿದ್ದವರಿಗೆ ಶಾಪೋಪಚಾರ. ಗುಡಿಯಲ್ಲಿ ದೇವರಿದ್ದಾನೋ ಇಲ್ಲವೋ ಎಂಬ ಶಂಕೆ, ದೇವಸ್ಥಾನಗಳಿಗೆ ಹೋಗಬೇಕೋ, ಬೇಡವೋ ಎಂಬ ಅನುಮಾನ. ಹೃದಯದಲ್ಲಿ ನೆಲೆಸಿರುವ ದೇವನಿಗೆ ಮಾನಸಿಕ ಭಕ್ತಿಯ ಪೂಜೆ ಸಾಲದೆ? ಹೃದಯ ದೇವನಿಗೆ ವ್ರತ ನಿಯಮಗಳಿಲ್ಲ. ಕಟ್ಟು ನಿಟ್ಟಲೆಗಳಿಲ್ಲ, ಸತ್ಯ ಶುದ್ಧ ಭಕ್ತಿಯೇ ಅವನ ಆಹಾರ. ಭಕ್ತರು ಕೊಟ್ಟು ತೆಗೆದುಕೊಳ್ಳಬಾರದೇಕೆ? ದೇವನ ಅನುಗ್ರಹ ಮಾನಸಿಕ ಪೂಜೆಯಿಂದ ಮನೆಯಲ್ಲೇ ಏಕಾಗ್ರತೆಯಿಂದ ಪೂಜೆ ಮಾಡಬಾರದೇಕೆ? ಅರ್ಚಕರೇನಾದರೂ ದೇವನ ಪ್ರತಿನಿಧಿಯೇ? ಅನುಗ್ರಹ ಸಿಗುವ ಖಾತರಿಯಾದರೂ ಏನು? ಅರ್ಚಕರ ಜೀವನೋಪಾಯಕ್ಕೆ ದೇವಸ್ಠಾನವೇ? ಭಕ್ತರು ಅರ್ಚಕರಿಗೆ ಗ್ರಾಹಕರಲ್ಲವೇ? ನಿಷ್ಟೆ ಸೇವೆ ಭಕ್ತರಿಗೆ ಸಿಗಲಾರದೆ? ನಮ್ಮ ಪೂಜೆ-ಭಕ್ತಿ ಆಡಂಬರವೇ? ನಾನಾ ಸಂಶಯಗಳು ಮನದ ಸುಳಿಯಲ್ಲಿ. ಹೇ ದೇವಾ! ಈಗಲಾದರೂ ಬಿಡಿಸು ಮನದಲ್ಲಿ ನಿಂತಿರುವ ಸಂಶಯ ಸಮಸ್ಯೆಗಳ.

 

ದೇವಸ್ಠಾನಗಳು : ಇರಬೇಕು ನಾನಾ ಕಡೆಗಳಲ್ಲಿ. ಮಾನಸಿಕ ಪೂಜೆ-ಪ್ರಾರ್ಥನೆಗಳು ಸಾಕು. ದೇವರ ಅನುಗ್ರಹ -ಭಕ್ತರುಗಳು [ಇದ್ದರೆ] ಮೂಲಕ ಪಡೆಯಲು ಹೋಗಬೇಕು. ಅರ್ಥವಾಗುವಂತಹ ಚಿಂತನಗಳು, ದೇವರ ನಾಮಗಳು, ಮಂತ್ರದ ಅರ್ಥಗಳು ಇದ್ದರೆ ಕೇಳಲಿಕೆ, ಮನಃಶಾಂತಿಗೆ ಹೋಗಬೇಕು. ಅಭಿವೃಧ್ಧಿಗಾಗಿ ಹುಂಡಿಗೆ ಹಣ ಜಾಸ್ತಿ ಹಾಕಿ, ಜೀವನೋಪಾಯಕ್ಕೆ ಅರ್ಚಕರಿಗೆ ಸ್ವಲ್ಪ ದಕ್ಷಿಣೆ ಉದಾರ ಮನಸ್ಸಿನಿಂದ ಹಾಕಿದರೆ ಸಾಕು. ನೈಜ ಭಕ್ತರುಗಳ ಮೂಲಕ ದೇವನನ್ನು ನೋಡಬೇಕು. ಸದ್ದು-ಗದ್ದಲವಿರುವ ದೇವಸ್ಠಾನಗಳು ಮನಕೆ ಶಾಂತಿ ಕೊಡುವುದರ ಬದಲು, ವಿಕಲ್ಪಗೊಂಡು ಏಕಾಗ್ರತೆಗೆ ಧಕ್ಕೆಯಾಗುತ್ತದೆ. ಚಿಂತನಗಳು ಮನಕೆ ನೆಮ್ಮದಿ ಕೊಟ್ಟರೆ, ದೇವರನಾಮಗಳು ಆ ದೇವನ ಮಹಿಮೆ ತಿಳಿಸುತ್ತವೆ. ಅರ್ಥವಾಗುವ ಮಂತ್ರಗಳು ಆ ದೇವನ ಆಚಾರ ವಿಚಾರಗಳನ್ನು ತಿಳಿಸುತ್ತವೆ. ಪೂಜೆಗೆ ಉಪಯೋಗಿಸುವ ಸಾಮಗ್ರಿಗಳ ವಿವರಗಳಿದ್ದರೆ-ಕಾರಣಗಳಿದ್ದರೆ, ಮನದಲ್ಲಿ ಭಕ್ತಿ ಇಮ್ಮಡಿಯಾಗಿ ದೇವನ ಬಗ್ಗೆ ನಂಬಿಕೆ -ವಿಶ್ವಾಸ-ಶ್ರದ್ದೆ ಹೆಚ್ಚಿಸುತ್ತದೆ. ಇಂತಹ ಅನುಕೂಲಗಳಿರುವ ದೇವಸ್ಠಾನಗಳಿಗೆ ಹೋಗಿ ಬಂದು ಹೆಚ್ಚಿಸುವ ಮನದಲ್ಲಿ ಭಕ್ತಿಯನ್ನು. ಈ ಬಗ್ಗೆ ದೇವರು ನಮ್ಮನ್ನು ಅನುಗ್ರಹಿಸಲಿ.

 

29.12.2003-12.00 a.m.

 

ನನ್ನ ಪೂಜೆ- ಕೆಲವು ಸಲ ಆಡಂಬರ : ಹೇ ದೇವಾ, ವಿಶ್ವ ಸೃಷ್ಟಿಕರ್ತ, ಎನ್ನ ಪೂಜೆಯಲ್ಲಿ ಏಕಾಗ್ರತೆ ಇಲ್ಲವಾಗುತ್ತಿದೆ, ಮನ ಅತ್ತ-ಇತ್ತ ಹರಿದಾಡುತ್ತಿದೆ, ದೇಹ ಅನಾರೋಗ್ಯ ಆದಾಗ ಮಾನಸಿಕ ಪೂಜೆ ಆಗುತ್ತಿದೆ, ಬುದ್ದಿ ವಿಕಲ್ಪಗೊಂಡು ಮನದಲ್ಲಿ, ಕೆಲವು ಅರಿಷಡ್ವರ್ಗ ಗುಣಗಳು ಕುಣಿಯುತ್ತವೆ, ಬುದ್ದಿ ಹತೋಟಿಯಲ್ಲಿಡಲು ಸಾಧ್ಯವಾಗುವುದಿಲ್ಲ, ಮನ ಬುದ್ದಿಯ ಹತೋಟಿಗೆ ಬರುವುದಿಲ್ಲ, ದೇಹ ವಿಚಿತ್ರ ಆಟ ಆಡುತ್ತಿದೆ. ಮಾನಸಿಕ ಪೂಜೆಯೇ ನನ್ನ ದೈವ ಪೂಜೆ ಬಾಹ್ಯ ಪೂಜೆ-ಸಾಂಕೇತಿಕವಾಗಿ, ಮನೆಗೆ ಮಾರ್ಗದಶನವಾಗಲಿಕೆ, ಭಾವಲಿಂಗಪೂಜೆ -ಪ್ರಾಣಲಿಂಗಪೂಜೆ ಇಷ್ಟಲಿಂಗ ಪೂಜೆ- ಇದು ನನ್ನ ನಿತ್ಯ ಪೂಜೆ. ದಿನಕ್ಕೆ ಎರಡು ಬಾರಿ ಪೂಜೆ. ಮಾನಸಿಕ ಪೂಜೆ ೩ ಸಲ ಏಳುವುದಕ್ಕೆ ಮುಂಚೆ, ಮುಖತೊಳೆದು ವಿಭೂತಿ ಧಾರಣೆ ನಂತರ, ರಾತ್ರಿ ೮ರ ಹೊತ್ತಿಗೆ ೩ನೇ ಸಲ ಬಾಹ್ಯ ಮತ್ತು ಮಾನಸಿಕ ಪೂಜೆ ಬೆಳಿಗ್ಗೆ ಸ್ನಾನದ ನಂತರ. ನಾನು ಮನಸ್ಸಿನ ಹತೋಟಿಯಲ್ಲಿ, ಮನ ನಿನ್ನ ಹತೋಟಿಯಲ್ಲಿದೆ ಎಂದು ನಂಬಿ ಪೂಜಿಸುತ್ತಿರುವೆ. ಇವು ನನ್ನ ಪೂಜೆಯ ವಿವರ. ದಿನ ನಿನ್ನ ಬೇಡುವುದು, ಪ್ರಾರ್ಥಿಸುವುದು ನನ್ನ ಕಾಯಕ. ಅನುಗ್ರಹ- ಆಶೀರ್ವಾದ ನಿನಗೆ ಬಿಟ್ಟಿದ್ದು. ನಿನ್ನ ಪಾದಕ್ಕೆ ನನ್ನ ಸೇರಿಸುವವರೆಗೆ ಆರೋಗ್ಯ ಕೊಟ್ಟು ಕಾಪಾಡು ಮಹದೇವ. 

 

ನನ್ನ ಪೂಜೆ -ಅದರರ್ಥ : ಪ್ರಾರಂಭದಲ್ಲಿ ಧರ್ಮಪಿತ ಬಸವಣ್ಣನ ಪೂಜೆಮಾಡಲಿಕ್ಕೆ ಒಪ್ಪಿಗೆಯ ಪೂಜೆ. 

೨೦-೨೫ ನಿಮಿಷಗಳ ನನ್ನ ಪೂಜೆ. 

ಈ ವಿಶ್ವದ ಸೃಷ್ಟಿಕರ್ತನ ದೇವನ ಪೂಜೆ. 

ಸಾಕಾರ ರೂಪವಾಗಿ ಇಷ್ಟಲಿಂಗದ ಪೂಜೆ. 

ಭಾವನೆಯಲ್ಲಿ ಭಾವಲಿಂಗದ ಪೂಜೆ. 

ಹೃದಯದಲ್ಲಿರುವ ಪ್ರಾಣಲಿಂಗದ ಪೂಜೆ. 

ಪ್ರತಿನಿಧಿಗಳಾಗಿರುವ ಸಾಧು ಸಂತರ ಪೂಜೆ. 

ವಚನಕಾರರ ಶಿವಶರಣೆಯರ ಪೂಜೆ. 

ಹಿಂದಿನ ಯುಗಗಳಲ್ಲಿ ಆಗಿ ಹೋಗಿರುವ, ಎಂದು ನಂಬಿದ ದೇವಾದಿದೇವತೆಗಳ, ದೇವನ ಪ್ರತಿನಿಧಿಗಳ ಪೂಜೆ. 

ದೇಶಗಳನ್ನು ರಕ್ಷಿಸುತ್ತಿರುವ ವೀರಯೋಧರುಗಳ ಪೂಜೆ. 

ವಿಜ್ಞಾನ ಮತ್ತು ತಾಂತ್ರಿಕತೆಗೆ ಕಾರಣರಾದ ವಿಜ್ಞಾನಿಗಳ ಪೂಜೆ. 

ಪ್ರತಿ ದಿನ ರಕ್ಷಿಸುತ್ತಿರುವ ನೈಜ ವೀರ ಆರಕ್ಷಕರ ಪೂಜೆ. 

ಇಡೀ ವಿಶ್ವಕ್ಕೆ ಬೆನ್ನೆಲುಬು ಆಗಿರುವ ರೈತರ ಪೂಜೆ. 

ಹಿಂದೆ ರಾಷ್ಟ್ರಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಪೂಜೆ.

ಹೀಗೆ ನಾನಾ ವಿಧ ರೀತಿಯ ಪೂಜೆ. ಎಲ್ಲವೂ ಭಾವನೆಯಿಂದ ಹೊರಬಂದ ಮಾನಸಿಕ ಪೂಜೆ. 

ನನ್ನ ಇಷ್ಟ ಲಿಂಗದ ಪೂಜೆ ವಿಶ್ವದ ಜೀವರಾಶಿಗಳ ಪೂಜೆ. 

ಸಕಲ ಜಿವರಾಶಿಗಳಿಗೆ ಲೇಸನ್ನೆ ಬಯಸುವ ಪೂಜೆ.

ಎಲ್ಲ ಜೀವರಾಶಿಗಳು ಆರೋಗ್ಯ -ಸುಖ- ಸಂತೋಷದಿಂದಿರಲಿ ಎಂದು ಪ್ರಾರ್ಥಿಸುವ ಪೂಜೆ.

ವಿಶ್ವದಲ್ಲೆಲ್ಲ ಮಳೆ-ಬೆಳೆ ಚೆನ್ನಾಗಿ ಆಗಲಿ ಸದಾ ಎಂದು ಬಯಸುವ ಪೂಜೆ.

ಗೊತ್ತಿಲ್ಲದೆ ಮಾಡಿರುವ ತಪ್ಪನ್ನು ಕ್ಷಮಿಸು ಎಂದು ಕೇಳುವ ಪೂಜೆ.

ಮಾನವ ಜೀವರಾಶಿಗಳಿಗೆ ವಿವೇಕ-ಬುದ್ದಿಕೊಟ್ಟು, ಎಲ್ಲ ಜೀವರಾಶಿಗಳನ್ನು ಬದುಕಿ-ಬಾಳಲು ಬಿಟ್ಟು ಬಿಡಲು ಅವಕಾಶಕೊಡು ಎಂದು ಕೇಳುವ ಪೂಜೆ.

ಎನ್ನ ಜೀವಕ್ಕೆ ಮುಕ್ತಿಕೊಟ್ಟು ನಿನ್ನ ಪಾದ ಸೇರಿಸಿಕೋ ಎಂದು ಕೇಳುವ ಪೂಜೆ.

ಜೀವವಿರುವವರೆಗೂ ಆರೋಗ್ಯ ಕಾಪಾಡು ಎಂದು ಕೇಳುವ ಪೂಜೆ.

ವೈವಿಧ್ಯತೆಯಲ್ಲಿ ಏಕತೆಯಿದೆ ಎಂದು ನಂಬಿ ಮಾಡುತ್ತಿರುವ ನೈಜ ಪೂಜೆ.

ಅನ್ಯ ಧರ್ಮಗಳಲ್ಲಿ ಸಹಿಷ್ಣುತೆ ಮತ್ತು ಸ್ವಧರ್ಮದಲ್ಲಿ ನಂಬಿಕೆ-ಏಕಾಗ್ರತೆ ಇಟ್ಟಿರುವ ಪೂಜೆ.

ಅರಿಷಡ್ವರ್ಗ ಗುಣ ಆಸ್ವದ ಕೊಡದೆ ಮಾಡುತ್ತಿರುವ ಪೂಜೆ.

ಆಡಂಬರಕೆ ಅವಕಾಶಕೊಡದೆ, ನಿರಾಡಂಬರದ ಪೂಜೆ.

ಮಾನಸಿಕ ಪೂಜೆಯಲ್ಲಿ ನಂಬಿಕೆ ಇಟ್ಟಿರುವ ಪೂಜೆ.

ವಿಭೂತಿ, ದೇಹ-ಮನ-ಭಾವಗಳಲ್ಲಿರುವ ಕೆಟ್ಟ ಗುಣಗಳನ್ನು ಸುಟ್ಟು, ಶುದ್ದತೆಯ ಸಂಕೇತ ಎಂದು ಧರಿಸುವ ಪೂಜೆ.

ಹರಿಶಿನ-ದೇವನು ಬೆಂಕಿಯೂ ಹೌದು ಎಂದು ನಂಬಿರುವ, ಕುಂಕುಮ -ದೇವನು ಶಕ್ತಿಯೂ ಹೌದು ಎಂದು ನಂಬಿರುವ, ಅಕ್ಷತೆ-ದೇವನ ಆಶೀರ್ವಾದದ ಸಂಕೇತ ಎಂದು ನಂಬಿರುವ, ಹೂ-ಪತ್ರೆ, ಅಲ್ಪ ಜೀವಿಗಳು ದೇವನಿಗೆ ಪ್ರಿಯ ಎಂದು ನಂಬಿರುವ ಪಾದೋದಕೆ-ಪ್ರಾಣಲಿಂಗಕ್ಕೆ ಕಾರಣ ಎಂದು ನಂಬಿರುವ ಪ್ರಸಾದ-ಸೃಷ್ಟಿಕರ್ತನ ಸದಾ ಕೊಡುಗೆ ಎಂದು ನಂಬಿರುವ ಕರ್ಪೂರ ಕಳಂಕರಹಿತ ಸೇವೆಯ ಸಂಕೇತ ಎಂದು ನಂಬಿರುವ ಆ ಭಾವನೆ-ನಂಬಿಕೆ -ವಿಶ್ವಾಸಗಳಿಂದ ಉಪಯೋಗಿಸುವ ಪೂಜೆ. 

ಹೀಗೆ ನಾನಾ ಪರಿಯಲಿ, ಭಾವನೆಯ ಮಾನಸಿಕ ಪೂಜೆಯಲ್ಲಿ ೨೦-೨೫ ನಿಮಿಷಗಳಲ್ಲೆ ಬಾಹ್ಯ-ಮಾನಸಿಕ ಪೂಜೆಯೇ ನನ್ನ ಪೂಜೆ.

ವಿಶ್ವದಲ್ಲೆಲ್ಲ ಮಳೆ-ಬೆಳೆ ಚೆನ್ನಾಗಿ ಆಗಲಿ ಸದಾ, ಎಂದು ಬಯಸುವ ಪೂಜೆ. ಗೊತ್ತಿಲ್ಲದೆ ಮಾಡಿರುವ ತಪ್ಪನ್ನು ಕ್ಷಮಿಸು ಎಂದು ಕೇಳುವ ಪೂಜೆ.

 

02.01.2004 - 6.10. pm.

 

ಆಧ್ಯಾತ್ಮಿಕ ಕಡೆಗೆ ತಿರುಗಿಸಲು ಕಾರಣರಿವರು : ನನ್ನ ಮನದಲ್ಲಿ ಏನಾದರೂ ಕಿಂಚಿತ್ತು, ಸ್ವಲ್ಪ ಆಧ್ಯಾತ್ಮಿಕ ಭಾವನೆ ಇದ್ದರೆ, ಅದಕ್ಕೆ ಕಾರಣರಿವರು. 

೧. ಮೊಟ್ಟ ಮೊದಲು ತಂದೆ-ಭಯದಿಂದ ಪೂಜೆ. ಪ್ರತಿದಿನ ೨ ಬಾರಿ. ದೇವರೆಂಬ ಭಾವನೆ ಮನದಲ್ಲಿ ಮೂಡದಿದ್ದರೂ ಆಕಾಶದಲ್ಲಿ ದೇವರೆಂಬುವನು ಇದ್ದಾನೆ, 

ನೋಡುತ್ತಿದ್ದಾನೆ ಎಂಬ ಭಯದ ಪೂಜೆ.

 

೨. ಆನಂತರ ಲಿಂಗದೀಕ್ಷೆಯ ನಂತರ ೧೯೫೪ ರಲ್ಲಿ ತರೀಕೆರೆ ತಾಲ್ಲೋಕು, ಅಜ್ಜಂಪುರದ ಹತ್ತಿರ ಇರುವ ಗಿರಿಯಾಪುರದ ಮಠದಲ್ಲಿ ನಮ್ಮ ಮಲತಾಯಿ-ಚಿಕ್ಕಮನೊಂದಿಗೆ. ಶ್ರೀ ರೇಣುಕಪೀಠದ ಸ್ವಾಮಿಗಳಿಂದ. ಶ್ರೀ ರೇಣುಕಾಚಾರ್ಯರು ನಮ್ಮ ಪೀಠದ ಗುರುಗಳೆಂಭ, ನನ್ನ ೮ನೇ ವಯಸ್ಸಿನಲ್ಲಿ; ಸ್ವಾಮಿಗಳು ದೇವರು ಕಳಿಸಿದ ಪ್ರತಿನಿಧಿ, ಭಕ್ತರನ್ನು ತಿದ್ದಲು, ದೀಕ್ಷೆ ಮಾಡಲು, ಕಳಿಸಿದ ಜಂಗಮರು ಎಂಬ ನಂಬಿಕೆ. ಪೂಜೆ ಮಾಡದಿದ್ದರೆ ದೇವರ ಶಿಕ್ಷೆ ಎಂಬ ಭಯದ ಪೂಜೆ.

 

೩. ಮೂರನೆಯದಾಗಿ, ೧೯೬೪ ರಿಂದ ಶ್ರೀ ಎಡೆಯೂರು ಸಿದ್ದಲಿಂಗೇಶ್ವರರು, ಭಕ್ತಿಯಿಂದ ಪೂಜೆ, PUC ಯಲ್ಲಿ ಓದುತ್ತಿದ್ದಾಗ, 1 Subject ನಲ್ಲಿ Physics ನಲ್ಲಿ 7 ಕಡಿಮೆ ಅಂಕೆಯಲ್ಲಿ ನಪಾಸು- Fail. Fail ಆಗಿದ್ದಕ್ಕೆ, ದೇವಸ್ಥಾನಕ್ಕೆ ಹೋಗಿ ಬಂದ ಮೇಲೆ ತೇರ್ಗಡೆ. ಕ್ರಿಕೆಟ್ ಆಟದ ಕಡೆಗೆ ಗಮನ ಕಡಿಮೆ. B.sc, B.Ed, ಡಿಗ್ರಿಗಳು ಒಂದೇ ಸಲ ಪಾಸು ತೇರ್ಗಡೆ ನಪಾಸು ಇಲ್ಲ. ಆಗ ಭಕ್ತಿ ಇಮ್ಮಡಿ ಆಗಿ ಪ್ರತಿ ವರ್ಷಕೊಮ್ಮೆ ಯಡೆಯೂರಿಗೆ ಹೋಗಿ ಶ್ರೀ ಸಿದ್ದಲಿಂಗೇಶ್ವರರಿಗೆ ಪೂಜೆ ಮಾಡಿ ಬರುವ ಪರಿಪಾಠ. ಭಯ ಭಕ್ತಿಯ ಪೂಜೆ, ಶ್ರೀ ಸಿದ್ದಲಿಂಗೇಶ್ವರರು ಮನೆ ದೇವರು ಎಂಬುದು ಕೂಡ. 

 

೪. ನಾಲ್ಕನೆಯದಾಗಿ, ೧೯೭೩ ರ ಡಿಸೆಂಬರ್ ನಿಂದ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳವರು. ಇವರ ಮೂಲಕ ಶ್ರೀ ಬಸವಣ್ನನವರು ನನ್ನ ನೆಚ್ಚಿನ ಧರ್ಮಪಿತ ಗುರುಗಳಾದರು. ನನಗೆ ಜ್ವರ ಬಂದ ಕಾರಣಕ್ಕೆ, ೧೯೭೩ -ಡಿಸೆಂಬರ್ನಲ್ಲಿ, ವಿಜಯನಗರದ ನಮ್ಮ ತಂದೆಯವರ ಮನೆಯಲ್ಲಿದ್ದಾಗ, ಔಷಧಿ ತರಲಿಕ್ಕೆಂದು ಡಾಕ್ಟರ್ ಹತ್ತಿರ ಹೋದಾಗ, ಅಲ್ಲಿ ಬಸವೇಶ್ವರ ಶಾಲೆಯ ಮೈದಾನದಲ್ಲಿ ನಡೆಯುತ್ತಿದ್ದ, ಶ್ರೀ ಲಿಂಗಾನಂದರ ಪ್ರವಚನದಿಂದ ಮೈಪುಳಕಿತ. ನಂತರ ಸತತವಾಗಿ ೪೦-೫೦ ದಿನಗಳ ಚಾಮರಾಜಪೇಟೆ ಮಸೀದಿ ಮೈದಾನದ ಹತ್ತಿರ ಪ್ರವಚನಗಳಿಗೆ ಹಾಜರಾಗಿ, ನನ್ನ ಮನಸ್ಸಿನಲ್ಲಿ ದೇವರೆಂಬ ಕಲ್ಪನೆ ಅಚ್ಛೊತ್ತಿದ್ದವರು ಶ್ರೀಪೂಜ್ಯ ಶ್ರೀಲಿಂಗಾನಂದ ಸ್ವಾಮಿಗಳವರು. ನನ್ನ ಪಾಲಿಗೆ ನನ್ನ ಭಕ್ತಿಯೆಂಬ ನಾಣ್ಯಕ್ಕೆ ಎರಡು ಮುಖ. ಒಂದರ ಕಡೆ ಶ್ರೀ ಬಸವಣ್ಣನವರು, ಮತ್ತೊಂದೆಡೆ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು. ದೇವರ ರೂಪದ ವಿವರ ಇವರಿಂದ ತಿಳಿದು ಬಂದು ನನ್ನ ಆಧ್ಯಾತ್ಮಿಕ ಒಲವು ಜಾಸ್ತಿ ಆಗಿ ಬಂದು, ಭಕ್ತಿಯ ಹುಚ್ಚು ಜಾಸ್ತಿ ಆಗಿ, ಪೂಜೆ ಏಕಾಗ್ರತೆಗೆ ಕಾರಣವಾಯಿತು. ಭಯದ ಪೂಜೆ ಕಡಿಮೆ ಆಗುತ್ತ ಬಂತು. ಮಾನಸಿಕ ಪೂಜೆ ಪ್ರಾರಂಭ ಆಯಿತು. ಪ್ರವಚನಗಳನ್ನು ಕೇಳಿ, ಸಾಕಷ್ಟು ಮನ ತುಂಬಿ, ಪೂಜ್ಯ ಶ್ರೀ ಲಿಂಗಾನದರು ನನ್ನ ಪಾಲಿಗೆ ಆಧ್ಯಾತ್ಮಿಕ ಗುರು. ಆನಂತರ ಅವರ ಶಿಷ್ಯೆ ಪೂಜ್ಯ ಶ್ರೀಮಾತೆ ಮಹಾದೇವಿ ಅವರುಗಳ ವಾಕ್ ಚಾತುರ್ಯ ನನ್ನನ್ನು ಬಹಳ ಹಿಡಿಸಿತು. ಬುದ್ದಿ ಸ್ವಲ್ಪ ವಿಚಾರವಾಗತೊಡಗಿತು. ಮನದಲ್ಲಿ ಕೆಲವು ವಿಷಯಗಳಲ್ಲಿ, ನನ್ನ ವಿಚಾರಗಳಿಗೂ ಅವರ ವಿಚಾರಗಳಿಗೂ ಭಿನ್ನಾಭಿಪ್ರಾಯಗಳಿದ್ದರೂ ಈಗಲೂ ಇವರುಗಳೇ ಆಧ್ಯಾತ್ಮ ಗುರುಗಳು.

 

೫.ಐದನೆಯದಾಗಿ, 1990ರ ಸೆಪ್ಟೆಂಬರ್ ಮಾಹೆಯಿಂದ ಶ್ರೀ ಮಹದೇಶ್ವರ ಬೆಟ್ಟದ ಶ್ರೀಮಲೈ ಮಹದೇಶ್ವರರು. SBM-Manager ಆಗಿ ಹೋದಾಗಿನಿಂದ, 1993 ರಿಂದ ನನ್ನ ಕವನ-ಲೇಖನ-ದೇವರ ನಾಮ ರಚನೆಗೆ ಸ್ಪೂರ್ತಿ ಶ್ರೀಮಹದೇಶ್ವರರು 1979 ರಲ್ಲಿ ಬಳ್ಳಾರಿಯಲ್ಲಿದ್ದಾಗ, ಕಛೇರಿ ಕೆಲಸದಲ್ಲಿದ್ದಾಗ,  Field officer ಆಗಿದ್ದಾಗ, Motor Cycle Accident ಆದಾಗಿನಿಂದ, ಮೆದುಳಿಗೆ ಪೆಟ್ಟಾಗಿ, ಆದಾಗಿನಿಂದ ಇಲ್ಲಿಯವರೆವಿಗೆ ಅರೆನಿದ್ರೆಯಿಂದ ಬಳಲುತ್ತಿದ್ದೇನೆ. ಆದಾಗ್ಯೂ ಸಹ ಅದರ ಕಡೆ ಗಮನ ಕೊಡದೆ, 1993 ರಿಂದ ಕವನ -ಲೇಖನ-ದೇವರ ನಾಮಕ್ಕೆ ಸ್ಪೂರ್ತಿ ಶ್ರೀ ಮಹದೇಶ್ವರರು. ಸಂಸಾರ ಬೆಂಗಳೂರಿನಲ್ಲಿದ್ದರೂ, ನಾನೊಬ್ಬನೇ ಶ್ರೀ ಮಹದೇಶ್ವರ ಬೆಟ್ಟದಲ್ಲಿದ್ದರೂ, ನನ್ನ ಮನಸ್ಸಿನಲ್ಲಿ Home Sick 1990 Sept  1993 July ತನಕ ಇರಲಿಲ್ಲ. ಬೆಂಗಳೂರಿನಲ್ಲಿದ್ದಾಗ ಶ್ರೀ ಬೆಟ್ಟವನ್ನು ಮರೆತುಬಿಡುತ್ತಿದ್ದೆ. ಬೆಟ್ಟದಲ್ಲಿದ್ದಾಗ ಬೆಂಗಳೂರನ್ನು ಮರೆತುಬಿಡುತ್ತಿದ್ದೆ. ಶ್ರೀ ಬೆಟ್ಟದ ಪ್ರಶಾಂತ ವಾತಾವರಣ, ದೈವಾಂಶ ಸೇರಿದ ಜಾಗ, ಶ್ರೀ ಮಹದೇಶ್ವರರ ಕೃಪೆ ಎಂಥೆಂತಹ ಭಕ್ತರನ್ನು ಆಕರ್ಷಿಸಿದೆ. ಪ್ರತಿಯೋಬ್ಬ ಭಕ್ತರಿಗೆ ಆಗಿರುವ ಪವಾಡಗಳು ನೂರಾರು-ಸಾವಿರಾರು ಲಕ್ಷಾಂತರ ಭಕ್ತರು. ಅವರ ಅನುಭವಗಳು, ಲಾಭಗಳು, ಮಾನಸಿಕನೆಮ್ಮದಿ, ಆರ್ಥಿಕ ನಿವಾರಣೆಗಳು, ಹರಕೆಗಳು ನಡೆಸಿಕೊಟ್ಟಿರುವುದು, ವಿವಾಹಗಳು ಆರೋಗ್ಯ, ಸುಧಾರಣೆ, [ಅನಾರೋಗ್ಯ-ನಿವಾರಣೆ], ವಿದ್ಯಾಭ್ಯಾಸದಲ್ಲಿ ಪ್ರಗತಿ, ಉದ್ಯೋಗ ನಿವಾರಣೆ, ಇತ್ಯಾದಿ ಇತ್ಯಾದಿ ಎಷ್ಟು? ಈಗ ಪ್ರತಿ ನಿತ್ಯದ ಪೂಜೆಯ ಸಮಯದಲ್ಲಿ ಇವರುಗಳ ಸ್ಮರಣೆಯಿಲ್ಲದೆ ಪೂಜೆ ಇಲ್ಲ.

 

ಗೀತ ಸಾರಾಂಶ [ಮುಖ್ಯ]

೨-೧೧ : ಪಂಡಿತರು ಸತ್ತವರಿಗಾಗಿ ಆಗಲಿ ಬದುಕಿದವರಿಗಾಗಲಿ ದುಃಖಪಡುವುದಿಲ್ಲ.

 

೨-೧೩ : ದೇಹಸ್ಥ ಆತ್ಮವು ಈ ದೇಹದಲ್ಲಿ ಬಾಲ್ಯದಿಂದ ಯೌವನಕ್ಕೆ, ಮುಪ್ಪಿಗೆ ಒಂದೇ ಸಮನೆ ಸಾಗುವ ರೀತಿಯಲ್ಲೆ ಆತ್ಮನು ಸಾವಿನನಂತರ ಮತ್ತೊಂದು ದೇಹಕ್ಕೆ ಸಾಗುತ್ತದೆ. ಧೀರನಾದವನು ಇದರಿಂದ ಗೊಂದಲಕ್ಕೆ ಒಳಗಾಗುವುದಿಲ್ಲ.

 

೨-೧೪ : ಸುಖ ದುಃಖಗಳು ಸ್ವಲ್ಪ ಕಾಲ ಕಾಣಿಸಿಕೊಳ್ಳುವುವು, ಕ್ರಮೇಣ ಮಾಯವಾಗುವುವು. ಚಳಿಗಾಲ ಮತ್ತು ಬೇಸಿಗೆಗಳು ಕಾಣಿಸಿಕೊಂಡು ಮಾಯವಾಗುವಂತೆ, ಅವು ಇಂದ್ರಿಯಗಳ ಗ್ರಹಣಶಕ್ತಿಯಿಂದ ಉದ್ಭವವಾಗುತ್ತವೆ. ಅವುಗಳಿಂದ ಕ್ಷೋಬೆಗೊಳಗಾಗದೆ ಸಹಿಸುವುದನ್ನು ಕಲಿಯಬೇಕು. 

 

೨-೧೫ : ಸುಖ ದುಃಖಗಳಿಂದ ವಿಚಲಿತನಾಗದೆ ಉಭಯ ಸ್ಥಿತಿಗಳಲ್ಲಿಯೂ ದೃಡನಾಗಿರುವ ಮನುಷ್ಯನು ಮೋಕ್ಷಕ್ಕೆ ಅರ್ಹನಾದವನು.

 

೨-೧೬ : ಐಹಿಕ ದೇಹ ಉಳಿಯುವುದಿಲ್ಲ ಮತ್ತು ಆತ್ಮ ಬದಲಾವಣೆ ಹೊಂದುವುದಿಲ್ಲ.

 

೨-೧೭ : ದೇಹವನ್ನು ಯಾವುದು ವ್ಯಾಪಿಸಿದೆಯೋ ಅದು ಅವಿನಾಶಿ. ನಾಶವಿಲ್ಲದ ಆತ್ಮವನ್ನು ಯಾರೂ ನಾಶಮಾಡಲಾರರು.

 

೨-೧೯ : ಜೀವಿಯು ಕೊಲ್ಲುತ್ತಾನೆ ಎಂದು ಭಾವಿಸುವವನಿಗೂ ಅದು ಕೊಲ್ಲಲ್ಪಟ್ಟಿತು ಎಂದು ಭಾವಿಸುವವನಿಗೂ ತಿಳಿವಳಿಕೆ ಇಲ್ಲ. ಏಕೆಂದರೆ ಆತ್ಮನು ಕೊಲ್ಲುವುದೂ ಇಲ್ಲ. ಕೊಲ್ಲಲ್ಪಡುವುದು ಇಲ್ಲ.

 

೨-೨೦ : ಆತ್ಮಕ್ಕೆ ಯಾವಗಲೂ ಹುಟ್ಟು ಎನ್ನುವುದಿಲ್ಲ. ಸಾವು ಎನ್ನುವುದಿಲ್ಲ- ಅದು ಹಿಂದೆ ಹುಟ್ಟಿದ್ದಿಲ್ಲ - ಈಗ ಹುಟ್ಟಿ ಬರುವುದಿಲ್ಲ. ಮುಂದೆ ಹುಟ್ಟುವುದೂ ಇಲ್ಲ. ಅದು ಜನ್ಮ ರಹಿತವಾದದ್ದು- ನಿತ್ಯವಾದದ್ದು. ಶಾಶ್ವತವಾದದ್ದು- ಪುರಾತನವಾದದ್ದು -ದೇಹವನ್ನು ಕೊಂದಾಗ ಅದು ಸಾಯುವುದಿಲ್ಲ.

 

೨-೨೧ : ಆತ್ಮವು ಅವಿನಾಶಿ ; ನಿತ್ಯ -ಅದಕ್ಕೆ ಹುಟ್ಟಿಲ್ಲ, ಕ್ಷಯವಿಲ್ಲ -ಆದ ಕಾರಣ ಯಾರನ್ನಾದರೂ ಕೊಲ್ಲುವನಾಗಲೀ, ಕೊಲ್ಲಿಸುವವನಾಗಲೀ ಇಲ್ಲ.

 

೨-೨೨ : ಆತ್ಮವು ಜೀರ್ಣವಾದ ದೇಹವನ್ನು ಬಿಟ್ಟು ಹೊಸ ದೇಹವನ್ನು ಸ್ವೀಕರಿಸುತ್ತದೆ.

 

೨-೨೩ : ಆತ್ಮವನ್ನು ಶಸ್ತ್ರಗಳು ಕತ್ತರಿಸಲಾರವು - ಅಗ್ನಿಯು ಸುಡಲಾರದು - ನೀರು ನೆನೆಯಿಸಲಾರದು ಮತ್ತು ಗಾಳಿಯು ಒಣಗಿಸಲಾರದು.

 

೨-೨೪ : ಜೀವಾತ್ಮನನ್ನು ಮುರಿಯಲಾಗುವುದಿಲ್ಲ. ನೀರಿನಲ್ಲಿ ಕರಗಿಸಲು ಸಾಧ್ಯವಿಲ್ಲ-ಸುಡಲು ಸಾಧ್ಯವಿಲ್ಲ- ಈತನು ನಿತ್ಯನು, ಎಲ್ಲೆಡೆ ಇರುವವನು, ಬದಲಾವಣೆಯಿಲ್ಲದವನು, ಅಚಲನಾದವನು ಮತ್ತು ಸನಾತನವಾಗಿಯೂ ಒಂದೇ ಆಗಿರುತ್ತಾನೆ.

 

೨-೨೫ : ಆತ್ಮನು ಕಣ್ಣಿಗೆ ಕಾಣುವುದಿಲ್ಲ-ಅದನ್ನು ಗ್ರಹಿಸಲು ಸಾಧ್ಯವಿಲ್ಲ- ಅದು ವಿಕಾರ ಹೊಂದುವುದಿಲ್ಲ-ಅದಕ್ಕಾಗಿ ದೇಹಕ್ಕಾಗಿ ದುಃಖಿಸಬಾರದು.

 

೨-೪೧ : ದೃಢಸಂಕಲ್ಪ ಹೊಂದಿರುವವರಿಗೆ ಒಂದೇ ಗುರಿ-ನಿಶ್ಚಯ ಸ್ವಭಾವವಿಲ್ಲದವರಿಗೆ, ಅವರ ಬುದ್ದಿಗೆ ಅನೇಕ ಶಾಖೆಗಳಿರುತ್ತವೆ.

 

೨-೪೨/೪೩ : ಅಲ್ಪ ಜ್ಞಾನಿಗಳಾದವರು ವೇದಗಳಲ್ಲಿನ ಅಲಂಕಾರದ ಮಾತುಗಳಿಗೆ ಮೋಹಗೊಳ್ಳುತ್ತಾರೆ. ಈ ಮಾತುಗಳು ಸ್ವರ್ಗಲೋಕಗಳ ಪ್ರಾಪ್ತಿ, ಒಳ್ಳೆಯ ಜನ್ಮ ಅಧಿಕಾರ ಮೊದಲಾದವುಗಳಿಗಾಗಿ ಹಲವಾರು ಕಾಮ್ಯ ಕರ್ಮಗಳನ್ನು ಪ್ರಶಂಸಿಸಿ ಹೇಳುತ್ತವೆ. ಇಂದ್ರಿಯ ತೃಪ್ತಿ ಮತ್ತು ಭೋಗಜೀವನಗಳನ್ನು ಬಯಸಿ ಇವಕ್ಕಿಂತ ಉತ್ತಮವಾದದ್ದು ಏನೂ ಇಲ್ಲ ಎಂದು ಅವರು ಹೇಳುತ್ತಾರೆ.

 

೨-೪೪ : ಭೋಗ ಮತ್ತು ಪ್ರಾಪಂಚಿಕ ಸಂಪತ್ತಿಗೆ ಅತಿಯಾಗಿ ಅಂಟಿಕೊಂಡವರಲ್ಲಿ ಮತ್ತು ಇಂತಹ ವಿಷಯಗಳಿಂದ ಚಿತ್ತಭ್ರಮಣೆಯಾದವರಲ್ಲಿ, ಭಗವಂತನ ಭಕ್ತಿ ಸೇವೆಗಾಗಿ ದೃಢಸಂಕಲ್ಪವು ಇರುವುದಿಲ್ಲ.

 

೨-೪೭ : ನಿಯೋಜಿತ ಕರ್ತವ್ಯವನ್ನು ಮಾಡುವುದಕ್ಕಷ್ಟೇ ಅಧಿಕಾರ. ಕರ್ಮಫಲಕ್ಕೆ ಅಧಿಕಾರವಿಲ್ಲ. ಕರ್ಮಫಲಕ್ಕೆ ಕಾರಣ ಎಂದು ಭಾವಿಸಬಾರದು.

 

೨-೪೮ : ಗೆಲವು ಸೋಲುಗಳಲ್ಲಿ ಯಾವುದೇ ಆಸಕ್ತಿಯನ್ನು ಇಟ್ಟುಕೊಳ್ಳದೆ ಸಮಚಿತ್ತದಿಂದ ಕರ್ತವ್ಯವನ್ನು ಮಾಡು.

 

೨-೪೯ : ಭಕ್ತಿಪೂರ್ವಕ ಸೇವೆಯಿಂದ ಎಲ್ಲ ಹೇಯ ಕಾರ್ಯಗಳನ್ನು ದೂರಮಾಡು. ಇಂತಹ ಪ್ರಜ್ಞೆಯಲ್ಲಿ ಭಗವಂತನಿಗೆ ಶರಣಾಗತನಾಗು. ತಮ್ಮ ಕರ್ಮಗಳ ಫಲಕ್ಕಾಗಿ ಆಸೆ ಪಡುವವರು ಕೃಪಣರು.

 

೨-೫೦ : ಭಕ್ತಿ ಸೇವೆಯಲ್ಲಿ ನಿರತನಾದವನು ಈ ಜನ್ಮದಲ್ಲಿಯೇ ಸುಕೃತ್ಯ ದುಷ್ಕೃತ್ಯಗಳನ್ನು ದೂರಮಾಡುತ್ತಾನೆ. ಆದುದರಿಂದ ಯೋಗವನ್ನು ಪಡೆಯಲು ಶ್ರಮಿಸು. ಅದೇ ಕರ್ಮ ಕೌಶಲ.

 

೨-೫೧ : ಭಕ್ತಿ ಸೇವೆಯಲ್ಲಿ ನಿರತರಾಗಿ ಮಹರ್ಷಿಗಳು ಅಥವಾ ಭಕ್ತರು ಐಹಿಕ ಜಗತ್ತಿನಲ್ಲಿ ಕರ್ಮಫಲದಿಂದ ಮುಕ್ತರಾಗುತ್ತಾರೆ. ಹೀಗೆ ಅವರು ಹುಟ್ಟು ಸಾವುಗಳ ಚಕ್ರದಿಂದ ಬಿಡುಗಡೆ ಹೊಂದುತ್ತಾರೆ ಮತ್ತು [ಭಗವದ್ದಾಮಕ್ಕೆ ಮರಳಿ] ಎಲ್ಲ ದುಃಖಗಳನ್ನು ಮೀರಿದ ಸ್ಠಿತಿಯನ್ನು ಪಡೆಯುತ್ತಾರೆ.

 

೨-೫೨ : ನಿನ್ನ ಬುದ್ದಿಯು ಬ್ರಾಂತಿಯ ದಟ್ಟವಾದ ಕಾಡಿನಿಂದ ಹೊರಕ್ಕೆ ಬಂದನಂತರ ನೀನು ಹಿಂದೆ ಕೇಳಿರುವುದೆಲ್ಲಕ್ಕೆ ಮತ್ತು ಮುಂದೆ ನಿರ್ಲಕ್ಷವನ್ನು ತೋರಬೇಕು.

 

೨-೫೩ : ವೇದಗಳ ಅಲಂಕಾರಿಕ ಭಾಷೆಯು ನಿನ್ನ ಮನಸ್ಸನ್ನು ಕಲಕದೇ ಇರುವಾಗ, ಮನಸ್ಸು ಸಮಾಧಿಯಲ್ಲಿ ನಿಶ್ಚಲವಾಗಿರುವಾಗ ನೀನು ದಿವ್ಯ ಪ್ರಜ್ಞೆ ಪಡೆಯುತ್ತೀಯೆ.

 

೨-೫೫ : ಮನಸ್ಸಿನ ಕಲ್ಪನೆಗಳಿಂದ ಇಂದ್ರಿಯ ಸುಖದ ವಿವಿಧ ಬಯಕೆಗಳು ಉಂಟಾಗುತ್ತವೆ - ಒಬ್ಬ ಮನುಷ್ಯನು ಇಂದ್ರಿಯಸುಖದ ಎಲ್ಲ ಬಗೆಯ ಆಸೆಗಳನ್ನು ತ್ಯಜಿಸಿ, ಅವನ ಮನಸ್ಸು ಪರಿಶುದ್ಧವಾಗಿ ಆತ್ಮದಲ್ಲೇ ಸಂತುಷ್ಟನಾದಾಗ ಆತನನ್ನು ಶುದ್ಧ ದಿವ್ಯ ಪ್ರಜ್ಞೆಯಲ್ಲಿ ಇರುವವನೆಂದು ಕರೆಯುವರು.

 

೨-೫೬ : ತ್ರಿವಿಧವಾದ ದುಃಖಗಳಿಂದ ಮನಸ್ಸಿನಲ್ಲಿ ಉದ್ವಿಗ್ನನಾಗದವನು, ಸುಖದಿಂದ ಉಬ್ಬಿದವನು, ರಾಗ, ಭಯ, ಕ್ರೋಧಗಳಿಲ್ಲದವನು ಸ್ಥಿರ ಮನಸ್ಸಿನ ಋಷಿ ಎನಿಸಿಕೊಳ್ಳುತ್ತಾನೆ.

 

೨-೫೭ : ಐಹಿಕ ಜಗತ್ತಿನಲ್ಲಿ ಒಳ್ಳೆಯದಾಗಲಿ ಕೆಟ್ಟದಾಗಲಿ ಯಾರ ಮನಸ್ಸನ್ನು ತಾಗುವುದಿಲ್ಲವೋ, ಯಾರು ಅದನ್ನು ಹೊಗಳುವುದೂ ಇಲ್ಲವೋ ತೆಗಳುವುದೂ ಇಲ್ಲವೋ, ಅಂತಹವರು ಪರಿಪೂರ್ಣ ಜ್ಞಾನದಲ್ಲಿ ಸ್ಠಿರವಾಗಿರುತ್ತಾರೆ.

 

೨-೫೮ : ಆಮೆಯು ತನ್ನ ಅಂಗಗಳನ್ನು ಚಿಪ್ಪಿನೊಳಕ್ಕೆ ಎಳೆದುಕೊಳ್ಳುವಂತೆ ಯಾರು ತನ್ನ ಇಂದ್ರಿಯಗಳನ್ನು ಇಂದ್ರಿಯ ವಿಷಯಗಳಿಂದ ಹಿಂದಕ್ಕೆ ಎಳೆದುಕೊಳ್ಳಬಲ್ಲರೋ ಅವರು ಪರಿಪೂರ್ಣ ಪ್ರಜ್ಞೆಯಲ್ಲಿ ಸ್ಠಿರವಾಗಿರುತ್ತಾರೆ.

 

೨-೫೯ : ದೇಹಸ್ಥ ಆತ್ಮವನ್ನು ಇಂದ್ರಿಯ ಸುಖದಿಂದ ದೂರವಿಡಬಹುದು. ಆದರೆ ಇಂದ್ರಿಯಸುಖದ ವಸ್ತುಗಳ ರುಚಿಯು ಉಳಿಯುತ್ತದೆ. ಆದರೆ ಇನ್ನು ಉತ್ತಮವಾದ ರುಚಿಯ ಅನುಭವದಿಂದ ಈ ಆಸಕ್ತಿಗಳನ್ನು ಕೊನೆಗಾಣಿಸಿದರೆ ಆತನ ಪ್ರಜ್ಞೆಯು ಸ್ಠಿರವಾಗಿರುತ್ತದೆ.

 

೨-೬೦ : ಇಂದ್ರಿಯಗಳು ಎಷ್ಟು ಬಲಶಾಲಿ ಮತ್ತು ಆವೇಶದಿಂದ ಕೆಲಸ ಮಾಡುತ್ತವೆ ಎಂದರೆ ಅವುಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ವಿವೇಚನಾವಂತನ ಮನಸ್ಸನ್ನು ಸೆಳೆದುಕೊಂಡು ಹೋಗಿಬಿಡುತ್ತವೆ.

 

೨-೬೧ : ಯಾರು ತನ್ನ ಇಂದ್ರಿಯಗಳನ್ನು ಸಂಪೂರ್ಣವಾಗಿ ನಿಯಂತ್ರಿಸಿ ಅಂಕೆಯಲ್ಲಿಡುತ್ತಾನೋ ಮತ್ತು ತನ್ನ ಪ್ರಜ್ಞೆಯನ್ನು ನನ್ನಲ್ಲಿ ಕೆಂದ್ರೀಕರಿಸುತ್ತಾನೋ ಅವನನ್ನು ಸ್ಠಿರಬುದ್ದಿಯವನು ಎಂದು ಕರೆಯುತ್ತಾರೆ.

 

೨-೬೨ : ಇಂದ್ರಿಯ ವಸ್ತುಗಳನ್ನು ಕುರಿತು ಚಿಂತಿಸುವ ಮನುಷ್ಯನಿಗೆ ಅವುಗಳಲ್ಲಿ ಆಸಕ್ತಿ ಹುಟ್ಟುತ್ತದೆ. ಇಂತಹ ಆಸಕ್ತಿಯಿಂದ ಕಾಮವು ಹುಟ್ಟುತ್ತದೆ. ಕಾಮದಿಂದ ಕ್ರೋಧವು ಉದ್ಭವವಾಗುತ್ತದೆ.

 

೨-೬೩ : ಕ್ರೋಧದಿಂದ ಸಂಮೋಹವು ಉಂಟಾಗುತ್ತದೆ; ಸಂಮೋಹದಿಂದ ಸ್ಪೂರ್ತಿಯ ಭ್ರಮೆಯುಂಟಾಗುತ್ತದೆ. ಸ್ಮೃತಿ ಭ್ರಮೆಯಿಂದ ಬುದ್ದಿ ನಾಶವಾಗುತ್ತದೆ; ಬುದ್ದಿನಾಶವಾದಾಗ ಮನುಶ್ಯನು ಮತ್ತೆ ಐಹಿಕ ಪ್ರಪಂಚದಲ್ಲಿ ಮುಳುಗುತ್ತಾನೆ.

 

೨-೬೪ : ಆದರೆ ರಾಗದ್ವೇಷಗಳಿಂದ ಬಿಡುಗಡೆಯಾಗಿ ಸ್ವಾತಂತ್ರ್ಯವನ್ನು ಕ್ರಮಗೊಳಿಸುವ ತತ್ವಗಳ ಮೂಲಕ ತನ್ನ ಇಂದ್ರಿಯಗಳನ್ನು ನಿಯಂತ್ರಿಸಬಲ್ಲವನು ಭಗವಂತನ ಪೂರ್ಣ ದಯೆಯನ್ನು ಪಡೆಯಬಲ್ಲ.

೩-೧೮ - ಆತ್ಮಸಾಕ್ಷಾತ್ಕಾರವನ್ನು ಸಾಧಿಸಿದವನಿಗೆ ನಿಯಮಿತ ಕರ್ಮಗಳ ಅನುಷ್ಟಾನದಲ್ಲಿ ಯಾವ ಉದ್ದೇಶವೂ ಇರುವುದಿಲ್ಲ. ಅಂತಹ ಕರ್ಮವನ್ನು ಮಾಡದೇ ಇರಲು ಅವನಿಗೆ ಯಾವುದೇ ಕಾರಣವಿರುವುದಿಲ್ಲ. ಆತನು ಬೇರೋಬ್ಬ ಜೀವಿಯನ್ನು ಅವಲಂಬಿಸಲು ಕಾರಣವೂ ಇರುವುದಿಲ್ಲ.

 

೩-೧೯ - ಆದುದರಿಂದ ಕರ್ಮಫಲದಲ್ಲಿ ಆಸಕ್ತಿ ಇಲ್ಲದೆ, ಕರ್ತವ್ಯವೆಂದು ಕರ್ಮವನ್ನು ಮಾಡಬೇಕು. ಅನಾಸಕ್ತಿ ಕರ್ಮದಿಂದ ಮನುಷ್ಯನು ಪರಮ ಪ್ರಭುವನ್ನು ಹೊಂದಬಹುದು.

 

೩-೨೦ - ಜನ ಸಾಮಾನ್ಯರಿಗೆ ಶಿಕ್ಷಣ ನೀಡುವುದಕ್ಕಾಗಿ ನೀನು ನಿನ್ನ ಕೆಲಸವನ್ನು ಮಾಡಬೇಕು.

 

೩-೨೧ - ಶ್ರೇಷ್ಟನಾದವನು ಹೇಗೆ ನಡೆದರೆ ಹಾಗೆ ಸಾಮಾನ್ಯ ಜನರು ಅನುಸರಿಸುತ್ತಾರೆ. ಮೇಲ್ಪಂಕ್ತಿಯಾದ ತನ್ನ ಕಾರ್ಯಗಳಿಂದ ಆತನು ಯಾವುದನ್ನು ಪ್ರಮಾಣವನ್ನಾಗಿ ಮಾಡುತ್ತಾನೋ ಅದನ್ನೇ ಲೋಕವು ಅನುಸರಿಸುತ್ತದೆ.

 

೩-೨೨- ಮೂರು ಲೋಕಗಳಲ್ಲಿಯೂ ನನಗೆ ನಿಯತವಾದ ಯಾವುದೇ ಕಾರ್ಯವಿಲ್ಲ. ನಾನು ಬಯಸುವ ವಸ್ತು ಯಾವುದೂ ಇಲ್ಲ. ನಾನು ಪಡೆಯಬೇಕಾದದ್ದು ಏನೂ ಇಲ್ಲ. ಆದರೂ ನಾನು ನಿಯಮಿತ ಕರ್ತವ್ಯಗಳಲ್ಲಿ ನಿರತನಾಗಿದ್ದೇನೆ.

 

೩-೨೩- ನಾನು ಯಾವಗಲೇ ಆಗಲಿ ನಿಯಮಿತ ಕರ್ಮಗಳಲ್ಲಿ ನಿರತನಾಗದೆ ಹೋದರೆ ಎಲ್ಲ ಮನುಷ್ಯರೂ ನನ್ನ ಮಾರ್ಗವನ್ನು ಅನುಸರಿಸುವವರು.

 

೩-೨೪ - ನಾನು ನಿಯಮಿತ ಕರ್ತವ್ಯವನ್ನು ಮಾಡದಿದ್ದರೆ ಈ ಲೋಕಗಳೆಲ್ಲ ನಾಶವಾಗುವುವು. ನಾನೇ ವರ್ಣ ಸಂಕರಕ್ಕೆ ಕಾರಣನಾಗುತ್ತೇನೆ. ಅದರಿಂದಾಗಿ ನಾನೇ ಎಲ್ಲ ಜೀವಿಗಳ ಶಾಂತಿಯನ್ನು ನಾಶಮಾಡುತ್ತೇನೆ.

 

೩-೨೫ - ಅಜ್ಞಾನಿಗಳಾದವರು ಹೇಗೆ ಫಲಾಸಕ್ತರಾಗಿ ಕರ್ಮವನ್ನು ಮಾಡುತ್ತಾರೆಯೋ ಹಾಗೆ ವಿದ್ವಾಂಸರು ಆಸಕ್ತಿಯಿಲ್ಲದೆ, ಜನಸಾಮಾನ್ಯರನ್ನು ಯೋಗ್ಯ ಮಾರ್ಗದಲ್ಲಿ ಕರೆದೊಯ್ಯಲು ಕರ್ಮವನ್ನು ಮಾಡಬೇಕು.

 

೩-೨೬ - ನಿಯತ ಕರ್ತವ್ಯಗಳ ಕರ್ಮಫಲಕ್ಕೆ ಅಂಟಿಕೊಂಡಿರುವವರ ಕೆಲಸವನ್ನು ನಿಲ್ಲಿಸಿಬಿಟ್ಟರೆ ಅವರ ಬುದ್ದಿ ಕಲಕುತ್ತದೆ. ಆದುದರಿಂದ ವಿದ್ವಾಂಸನು ಅವರ ಕೆಲಸವನ್ನು ನಿಲ್ಲಿಸಿಬಿಡಬಾರದು. ಭಕ್ತಿ ಭಾವದಿಂದ ಕೆಲಸಮಾಡಿ ಆತನು ಅಜ್ಞಾನಿಗಳನ್ನು ಎಲ್ಲ ಬಗೆಯ ಚಟುವಟಿಕೆಗಳಲ್ಲಿ ತೊಡಗಿಸಬೇಕು.

 

೩-೨೭- ಕಾರ್ಯಗಳನ್ನು ವಾಸ್ತವವಾಗಿ ಪ್ರಕೃತಿಯ ತ್ರಿಗುಣಗಳೇ ಮಾಡುತ್ತವೆ. ಆದರೆ ಅಹಂಕಾರದಿಂದ ಮೂಢನಾದವನು ತಾನೇ ಕಾರ್ಯಗಳನ್ನು ಮಾಡುತ್ತೇನೆ ಎಂದು ಭಾವಿಸುತ್ತಾನೆ.

 

೩-೨೮ - ಪರಮ ಸತ್ಯವನ್ನು ತಿಳಿದವನು ಇಂದ್ರಿಯಗಳಲ್ಲಿ ಮತ್ತು ಇಂದ್ರಿಯ ತೃಪ್ತಿಯಲ್ಲಿ ತೊಡಗುವುದಿಲ್ಲ. ಅವನಿಗೆ ಭಕ್ತಿಸೇವೆ ಮತ್ತು ಫಲದಾಸೆ ಇರುವ ಕರ್ಮ ಇವುಗಳಲ್ಲಿನ ವ್ಯತ್ಯಾಸವು ತಿಳಿದಿರುತ್ತದೆ.

 

೩-೨೯ - ಪ್ರಕೃತಿಯ ಗುಣಗಳಿಂದ ಮೂಢರಾದ ಅಜ್ಞಾನಿಗಳು ಸಂಪೂರ್ಣವಾಗಿ ಐಹಿಕ ಚಟುವಟಿಕೆಗಳಲ್ಲಿ ತನ್ಮಯರಾಗುತ್ತಾರೆ. ಕೆಲಸ ಮಾಡುವವರ ಅಜ್ಞಾನದಿಂದ ಈ ಕರ್ತವ್ಯಗಳು ಕೆಳಮಟ್ಟದವಾದರೂ ವಿವೇಕಿಗಳು ಅವರನ್ನು ವಿಚಲಗೊಳ್ಳಿಸಲು ಪ್ರಯತ್ನಿಸಬಾರದು.

 

೩-೩೦ - ನಿನ್ನಎಲ್ಲ ಕರ್ಮಗಳನ್ನು ನನಗೆ ಅರ್ಪಿಸಿ, ನನ್ನನ್ನು ಸಂಪೂರ್ಣವಾಗಿ ಅರಿತುಕೊಂಡು, ಫಲಾಪೇಕ್ಷೆಯಿಲ್ಲದೆ, ಒಡೆತನದ ಭಾವವಿಲ್ಲದೆ, ಜಡತ್ವವಿಲ್ಲದೆ, ಯುದ್ದಮಾಡು.

 

೩-೩೧ - ನನ್ನ ಅಪ್ಪಣೆಗೆ ಅನುಸಾರವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿ ಈ ಭೋದನೆಯನ್ನು, ಅಸೂಯೆಯಿಲ್ಲದೆ, ಶ್ರದ್ದೆಯಿಂದ ಅನುಸರಿಸುವವರು ಕರ್ಮಫಲದ ಬಂಧನದಿಂದ ಮುಕ್ತರಾಗುತ್ತಾರೆ.

 

೩-೩೨ - ಯಾರು ಅಸೂಯೆಯಿಂದ ಈ ಬೋಧನೆಗಳನ್ನು ಅಲಕ್ಷಿಸುವರೋ ಮತ್ತು ಅವನ್ನು ಅನುಸರಿಸುವುದಿಲ್ಲವೋ ಅವರು ಯಾವ ತಿಳುವಳಿಕೆಯೂ ಇಲ್ಲದವರು, ವಿಮೂಢರು ಎಂದು ಭಾವಿಸಬೇಕು. ಪರಿಪೂರ್ಣತೆಗಾಗಿ ಅವರು ಪಡುವ ಕ್ರಮವೆಲ್ಲ ನಾಶವಾಗುವುವು.

 

೩-೩೩ - ಪ್ರತಿಯೊಬ್ಬನೂ ತಾನು ತ್ರಿಗುಣಗಳಿಂದ ಪಡೆದ ಸ್ವಭಾವಕ್ಕೆ ಅನುಗುಣವಾಗಿ ನಡೆಯುತ್ತಾನೆ. ಆದ್ದರಿಂದ ತಿಳುವಳಿಕೆಯುಳ್ಳವನು ಕೂಡ ತನ್ನ ಸ್ವಭಾವಕ್ಕೆ ಅನುಗುಣವಾಗಿ ನಡೆಸುತ್ತಾನೆ. ನಿಗ್ರಹದಿಂದ ಫಲವೇನು?

 

೩-೩೪ - ಇಂದ್ರಿಯಗಳು ಮತ್ತು ಅವುಗಳ ವಿಷಯಗಳಿಗೆ ಸಂಬಂದಿಸಿದಂತೆ ರಾಗದ್ವೇಷಗಳನ್ನು ನಿಯಂತ್ರಿಸುವ ತತ್ವಗಳಿವೆ. ಮನುಷ್ಯನು ಇಂತಹ ರಾಗದ್ವೇಷಗಳ ವಶನಾಗಬಾರದು. ಏಕೆಂದರೆ ಆತ್ಮ ಸಾಕ್ಷಾತ್ಕಾರದ ಮಾರ್ಗದಲ್ಲಿ ಅವು ಅಡ್ಡಿಗಳು.

 

೩-೩೫ - ತನ್ನ ನಿಯತ ಕರ್ತವ್ಯಗಳನ್ನು ತಪ್ಪಾಗಿಯಾದರೂ ನಿರ್ವಹಿಸುವುದು ಪರಧರ್ಮವನ್ನು ಪರಿಪೂರ್ಣವಾಗಿ ಮಾಡುವುದಕ್ಕಿಂತ ಉತ್ತಮವಾದದ್ದು. ಸ್ವಧರ್ಮದಲ್ಲಿ ನಾಶವು ಮತ್ತೊಬ್ಬರ ಧರ್ಮವನ್ನು ಆಚರಿಸುವುದಕ್ಕಿಂತ ಉತ್ತಮ. ಏಕೆಂದರೆ ಪರಧರ್ಮವು ಭಯಂಕರವಾದದ್ದು.

 

೩-೩೭ - ರಜೋಗುಣದ ಸಂಪರ್ಕದಿಂದ ಹುಟ್ಟಿ, ಅನಂತರ ಕ್ರೋಧವಾಗಿ ಮಾರ್ಪಾಡುವ ಕಾಮವೇ ಪಾಪಕಾರ್ಯಗಳು ಮಾಡಲಿಕ್ಕೆ ಕಾರಣವಾಗುತ್ತದೆ. ಕಾಮವು ಎಲ್ಲವನ್ನು ನುಂಗಿಹಾಕುವ ಈ ಜಗತ್ತಿನ ಪಾಪಪೂರಿತ ಶತ್ರು.

 

೩-೩೮ - ಹೊಗೆಯು ಬೆಂಕಿಯನ್ನು ಮುಚ್ಚುವಂತೆ, ಧೂಳು ಕನ್ನಡಿಯನ್ನು ಮುಚ್ಚುವಂತೆ, ಗರ್ಭಕೋಶವು ಭ್ರೂಣವನ್ನು ಮುಚ್ಚಿವಂತೆ, ವಿವಿಧ ಪ್ರಮಾಣಗಳ ಕಾಮವು ಜೀವಿಯನ್ನು ಮುಚ್ಚುತ್ತದೆ.

 

೩-೩೯ - ಹೀಗೆ ಪ್ರಜ್ಞನಾದ ಜೀವಿಯ ಶುದ್ದ ಪ್ರಜ್ಞೆಯನ್ನು ಅವನ ನಿತ್ಯವೈರಿಯು ಕಾಮರೂಪದಿಂದ ಆವರಿಸುತ್ತದೆ. ಅದಕ್ಕೆ ತೃಪ್ತಿ ಎನ್ನುವುದೇ ಇಲ್ಲ. ಅದು ಅಗ್ನಿಯಂತೆ ಉರಿಯುತ್ತಿರುತ್ತದೆ.

 

೩-೪೦ - ಈ ಕಾಮಕ್ಕೆ ಇಂದ್ರಿಯಗಳು, ಮನಸ್ಸು ಮತ್ತು ಬುದ್ದಿ ಆವಾಸ ಸ್ಠಾನಗಳು. ಅವುಗಳ ಮೂಲಕ ಕಾಮವು ಜೀವಿಯ ಜ್ಞಾನವನ್ನು ಆವರಿಸಿ ಅವನನ್ನು ದಿಕ್ಕು ಗೆಡಿಸುತ್ತದೆ.

 

೩-೪೧ - ಪ್ರಾರಂಭದಲ್ಲಿಯೇ ಇಂದ್ರಿಯಗಳನ್ನು ನಿಯಂತ್ರಿಸಿ ಪಾಪದ ಮಹಾ ಸಂಕೇತವಾದ ಕಾಮಕ್ಕೆ ಕಡಿವಾಣ ಹಾಕು. ಜ್ಞಾನ ಮತ್ತು ಆತ್ಮಸಾಕ್ಷಾತ್ಕಾರಗಳನ್ನು ನಾಶಮಾಡುವ ಈ ಕಾಮವನ್ನು ಧ್ವಂಸ ಮಾಡು.

 

೩-೪೨ -ಕ್ರಿಯಾಶಾಲಿಯಾದ ಇಂದ್ರಿಯಗಳು ಜಡವಸ್ತುವಿಗಿಂತ ಶ್ರೇಷ್ಟ. ಮನಸ್ಸು ಇಂದ್ರಿಯಗಳಿಗಿಂತ ಶ್ರೇಷ್ಟ. ಬುದ್ಡಿಯು ಮನಸ್ಸಿಗಿಂತ ಇನ್ನೂ ಬಹು ಶ್ರೇಷ್ಟ ಮತ್ತು ಆತ್ಮನು ಬುದ್ದಿಗಿಂತ ಬಹು ಶ್ರೇಷ್ಟನು.

 

೪-೬ - ನನಗೆ ಹುಟ್ಟು ಎನ್ನುವುದಿಲ್ಲ. ನನ್ನ ಆಧ್ಯಾತ್ಮಿಕ ಶರೀರವು ಕ್ಷಯಿಸುವುದಿಲ್ಲ. ನಾನು ಎಲ್ಲ ಜೀವಿಗಳ ಪ್ರಭು, ಆದರೂ ಪ್ರತಿಯುಗದಲ್ಲಿಯೂ ನನ್ನ ಮೂಲ ಆಧ್ಯಾತ್ಮಿಕ ರೂಪದಲ್ಲಿ ಅವತರಿಸುತ್ತೇನೆ.

 

೪-೭ - ಯಾವಾಗ ಎಲ್ಲೆಲ್ಲಿ ಧರ್ಮದ ಅವನತಿಯಾಗುತ್ತದೋ ಮತ್ತು ಅಧರ್ಮವು ಹೆಚ್ಚುತ್ತದೊ ಆಗ ಸ್ವಯಂ ಅವತಾರ ಮಾಡುತ್ತೇನೆ.

 

೪-೮ - ಸಜ್ಜನರನ್ನು ರಕ್ಷಿಸುವುದಕ್ಕಾಗಿಯೂ ದುಷ್ಟರನ್ನು ನಾಶಮಾಡುವುದಕ್ಕಾಗಿಯೂ ಮತ್ತು ಧರ್ಮದ ತತ್ವಗಳನ್ನು ಮತ್ತೆ ಸ್ಠಾಪಿಸುವುದಕ್ಕಾಗಿಯೂ ನಾನು ಪ್ರತಿಯುಗದಲ್ಲಿ ಅವತರಿಸುತ್ತೇನೆ.

 

೪-೯ - ಯಾರು ಹೀಗೆ ನನ್ನ ಹುಟ್ಟಿನ ಮತ್ತು ಕರ್ಮಗಳ ದಿವ್ಯ ಸ್ವರೂಪವನ್ನು ಯಾಥಾರ್ಥವಾಗಿ ತಿಳಿದುಕೊಳ್ಳುವರೋ ಅವರು ದೇಹತ್ಯಾಗ ಮಾಡಿದ ನಂತರ ಮತ್ತೇ ಈ ಐಹಿಕ ಜಗತ್ತಿನಲ್ಲಿ ಹುಟ್ಟುವುದಿಲ್ಲ. ಅವರು ನನ್ನ ನಿತ್ಯ ನಿವಾಸಕ್ಕೆ ಬರುತ್ತಾರೆ.

 

06.05.1999 – 2.00 a.m.

“ The God -6th Sense” : OH!MY GOD !!

AS I believed you’re firmly, whole heartedly in all my activities, in thinking and what not; you came like a friend, guided me and gave philosophical thoughts to my mind through sixth sense in times of need. You gave me peace of mind; you controlled my disturbed mind and allowed myself to reach myself to the destruct goal. Many times you saved me from death /accidents which could have occurred by accidents in vehicle for which I will be ever, ever and ever grateful to your. But for your indirect help in all times of needs I would not have come to this stage. Further, but for you only I am still in life/living otherwise I would have became worst element in the society making myself good for noting. I am spending happy life every day.

 

As I always chant you every moment in all my walks of life, there is no sunset for me in my life it is always sunrise. Sixth (6th) sense is my GOD.

02.10.1999 – 4.00 a.m.

 

ಮಾನವ ಗುಣಗಳ ವ್ಯತ್ಯಾಸ

ಸದ್ಗುಣ ದುರ್ಗುಣ

೧. ದೇವರು ಕೊಟ್ಟ ವರ - ಮಾನವ ಆಹ್ವಾನಿಸಿದ ಶಾಪ.

೨. ಅರಿಷಡ್ವರ್ಗಗಳ ಶತ್ರು - ಅರಿಷಡ್ವರ್ಗಗಳಿಗೆ ತೌರೂರು.

೩. ಸಮಾಜದ ಬೆಳವಣಿಗೆ - ಸಮಾಜದ ಕುಂಠಿತ.

೪. ಸಮಾಜಕ್ಕೆ ಹಿತ - ಸಮಾಜಕ್ಕೆ ಅಹಿತ.

೫. ಮೋಕ್ಷಕ್ಕೆ ದಾರಿ - ಪಾಪದ ದಾರಿ.

೬. ಮನಕೆ ಶಾಂತಿ - ಮನಕೆ ಅಶಾಂತಿ.

೭. ಮನದ ನೆಮ್ಮದಿ ಶಾಶ್ವತ - ಮನದ ನೆಮ್ಮದಿ ತಾತ್ಕಾಲಿಕ.

೮. ದೇವನಿರುವನು ಇವರಲ್ಲಿ - ದೇವನಿರುವನು ದೂರದಲ್ಲಿ.

೯. ಮರಣವೇ ಮಹಾನವಮಿ - ಮರಣಕ್ಕೆ ಸದಾ ಭಯ.

೧೦. ಮನಸು ಸದಾ ಹಗುರ - ಮನಸು ಸದಾ ಭಾರ.

೧೧. ಮನಸು ಸದಾ ನಿರಾತಂಕ - ಮನದಲಿ ಸದಾ ಆತಂಕ.

೧೨. ದೈವಾಂಶ ಗುಣ - ಭೂತಾಂಶ ಗುಣ

೧೩. ತಾನೇ ನಿರ್ಮಿಸಿದ ದಾರಿ - ತಾನೇ ಮಾಡಿಕೊಂಡ ಗೋರಿ.

೧೪. ಮೋಕ್ಷಕ್ಕೆ ಮನಸು ಸದಾ ಸಂತೃಪ್ತಿ - ಮರಣಕ್ಕೆ ಮನಸು ಸದಾ ಅತೃಪ್ತಿ.

೧೫. ಸಮಾಜಕ್ಕೆ ಸದಾ ಕಿರಿಯ - ಸದಾ ಅಹಂಭಾವಿ.

೧೬. ದೇವರ ರಕ್ಷಣೆ ಸದಾ - ಭೂತದ ಕಾಟ ಸದಾ.

27.01.1993
83. ಶ್ರೀ ಸದಾನಂದರ ಮಹಿಮೆ : ಭಕ್ತರೇ! ಕೇಳಿರಿ ಶ್ರೀ ಸದಾನಂದರ ಮಹಿಮೆಯೆ.
ಸಾಕಾರ ರೂಪವಾಗಿ ಬಂದಿಹರೆ ದೇವರ ಮಹಿಮೆಯ
ಬಹಳ ಜನ ಭಕ್ತರಿಗೆ ದೇವರಿವರು,
ತೋರಿಸಿದರು ನಾನ ರೀತಿಯ ಪವಾಡಗಳ
ನಿಲ್ಲಿತು ಮನಸ್ಸು ಶಾಂತಿಯ ಸಾಗರದಲ್ಲಿ,
ನಂಬಿದ ಭಕ್ತರಿಗೆ ಕೊಡುವನು ನೆಮ್ಮದಿಯ,
ಕೇಳುವುದಿಲ್ಲ ತನುವ ವ್ರತ, ನಿಯಮಾದಿಗಳಿಗೆ,
ಬೇಕು ಅವರಿಗೆ ವಿಶ್ವಾಸ, ನಂಬಿಕೆ ಮತ್ತು ಭಕ್ತಿ,
ಬೇಕು ಅವರಿಗೆ ಶುಭ್ರ ತಿಳಿ ಮನಸು
ಗೊತ್ತಿದೆ ಅವರಿಗೆ ಭಕ್ತರ ಅಂತರಂಗದ ಆಟ
ತೋರಿಸುವುದಿಲ್ಲ ಎಲ್ಲೂ ಜಾತಿ-ಮತ ಭೇದವ.

ಭವ ಬಂದನಗಳಿದ್ದರೂ ಭಕ್ತರ ಮನಸ್ಸು ಹಗುರ,
ದೂರ ಸರಿದಿವೆ ಅರಿಷಡ್ವರ್ಗಗಳ ವಾಸನೆ,
ಭಕ್ತರ ಮನಸು ಅಂತರ್ಮುಖಿಯಾಗಿ ನೆನೆಸುತ್ತಿದೆ,
ಭಕ್ತರ ಸದಾ ಸ್ಮರಣೆಯೇ ಅವರಿಗೆ ಸಹಸ್ರನಾಮ,
ಧ್ಯಾನ, ಭಜನೆ, ಆರತಿಯೇ ಪೂಜೆ, ವ್ರತ, ನಿಯಮಗಳು.

ಬಡವ ಬಲ್ಲಿದರೆಲ್ಲರೂ ಮಾಡಬಹುದಾದ ಭಕ್ತಿ,
ಆಡಂಬರದ ತೋರಿಕೆ ಇವರಲಿಲ್ಲ,
ಶಾಪಿಸಿ, ತೊಂದರೆ ಕೊಡುವುದ ಮಾಡುವುದಿಲ್ಲ.

ಹಗುರ ಮಾಡುವರು ಮನಸಿನ ಭಾರ
ಸರಿಯಾದ ಸಮಯದಲ್ಲಿ ಮಾಡುವರು ಸಹಾಯ,
ಭಕ್ತರೇ ಬಂಧು ಬಳಗಗಳು ಅವರಿಗೆ,
ಗೊತ್ತಿದ್ದರೂ ಗೊತ್ತಿಲ್ಲದ ಹಾಗೆ ಕುಳಿತಿರುವರು,
ತಿಳಿದಿದ್ದರೂ ತಿಳಿಯದ ಹಾಗೆ ನಟಿಸುವರು,
ಭಕ್ತಿ-ಪ್ರೀತಿ-ವಿಶ್ವಾಸ-ನಂಬಿಕೆಗಳಿಂದ ಬಂದ ಭಕ್ತರು,
ಸದಾನಂದರ ಹಿಡಿದರೆ ಸದಾನಗುತ್ತಿರುತ್ತಾರೆ
ಬಿಟ್ಟವರು ಅಳುತ್ತಿರುತ್ತಾರೆ
ಈ ರೀತಿ ಆಗಿ ಹೋದ ಭಕ್ತರು ಹಲವರು ಈಗಲೂ ಇದ್ದಾರೆ.

’ದತ್ತಾತ್ರೇಯ ಓಂ ನಮಃ ಶಿವಾಯ ಶ್ರೀ ಸದಾನಂದಾಯ ನಮಃ’
ಇದುವೇ ಇವರ ಬೀಜಮಂತ್ರ, ಭಕ್ತರ
ಈ ಬೀಜಮಂತ್ರ ಪಠಣೆಯೇ ಶ್ರೀ ಸದಾನಂದರಿಗೆ ಆಹಾರ
ಭಕ್ತರ ನಾಲಿಗೆಯಲ್ಲಿದ್ದರೆ ಬೀಜಮಂತ್ರ ಆಗುವುದು ಮಾತು ಶುದ್ದ
ಬೀಜ ಮಂತ್ರ ಪಠಣೆಯೇ ಭಕ್ತರಿಗೆ ರಕ್ಷಣೆ
ಭವ ಬಂದನದಿಂದ ದೂರವಾದರು ಹಲವು ಭಕ್ತರು
ಅರಿಷಡ್ವರ್ಗಗಳ ದೂರವಿಟ್ಟರು ಇನ್ನು ಕೆಲವು ಭಕ್ತರು,
ಶಾಂತಿ ನೆಮ್ಮದಿಗಾಗಿ ಬರುವರು ಹಲವಾರು ಭಕ್ತರು,
ಸ್ವಯಂ ಪ್ರೇರಣೆಯಿಂದ ಭಜನೆ ಆರತಿಗಾಗಿ ಬರುವರು, ಬಹಳ ಜನ ಭಕ್ತರು,
ಮನೆಮನೆಯಲ್ಲೇ ನೆನೆಸುವರು ಅನೇಕ ಜನ ಭಕ್ತರು.
ಈ ರೀತಿ ಇದೆ ಕೇಳಿ! ಶ್ರೀ ಸದಾನಂದರ ಮಹಿಮೆ.

 

18.4.1993
85. ಬೇಗ ಬಾ | ತಂದೆ, ಬೇಗ ಬಾ| ತಂದೆ,
ಬೇಗ ಬಾ| ತಂದೆ, ಶ್ರೀ ಸದಾನಂದ

ಕಾರಣವ ತಿಳಿಸುವೆ ಶ್ರೀ ಸದಾನಂದ
ವಿಧ ವಿಧ ರೀತಿ ಸಹಾಯವ ಮಾಡು ಬಾ.

ಮನಸು ನೊಂದಿಹುದು
ಅರಿಷಡ್ವರ್ಗಗಳು ಕುಣಿದಿಹವು
ಭವವು ಬಂಧನವಾಗಿಹುದು
ಒಳಗಣ್ಣು ಮುಚ್ಚಿಹುದು-ಬೇಗ ಬಾ | ತಂದೆ, ಬೇಗ ಬಾ.

ಹೃದಯದಲಿ ನೆಲೆಸು ಬಾ,
ಮಾರ್ಗದರ್ಶಿಯಾಗಿ ಬಾ,
ಸ್ನೇಹಿತನಾಗಿ ಬಾ,
ತತ್ವಜ್ಞಾನಿಯಾಗಿ ಉಪದೇಶಿಸು ಬಾ, ಬೇಗ ಬಾ | ತಂದೆ, ಬೇಗ ಬಾ.

ಒಳಗಣ್ಣ ತೆರೆಸು ಬಾ,
ಭವದ ಬಂಧನವ ಬಿಡಿಸು ಬಾ
ಅರಿಷಡ್ವರ್ಗಗಳ ಆಟವ ನಿಲ್ಲಿಸು ಬಾ
ಶಾಂತಿ ಗಾಳಿಯ ಬೀಸಿ ಹೋಗಿ ಬಾ, ಬೇಗ ಬಾ | ತಂದೆ, ಬೇಗ ಬಾ.

ಎನ್ನ ಕಾಮಕ್ಕೆ ಮಿತಿ ಇರಿಸು ಬಾ,
ಎನ್ನ ಕ್ರೋಧಕ್ಕೆ ಶಿಕ್ಷೆಕೊಡಿಸು ಬಾ,
ಎನ್ನ ಲೋಭ-ಮೋಹವ ಇಲ್ಲದಂತಿರಿಸು ಬಾ,
ಎನ್ನ ಮದ-ಮತ್ಸರಗಳ ಕಿತ್ತು ಬಿಸಾಡು ಬಾ-ಬೇಗ ಬಾ | ತಂದೆ, ಬೇಗ ಬಾ.

ಕಾಯಕದಲ್ಲಿ ನಿಷ್ಟೆ ಇರಿಸು ಬಾ,
ಕನಸಿನಲ್ಲಿ ಬಂದು ಹೋಗು ಬಾ,
ಮನದಲ್ಲಿ ಶಾಂತಿ ನೆಲೆಸು ಬಾ,
ನೆಮ್ಮದಿ ಶಾಂತಿ ಕೊಟ್ಟು ಹೋಗು ಬಾ -ಬೇಗ ಬಾ | ತಂದೆ, ಬೇಗ ಬಾ.

ಸದಾ ನಿನ್ನ ನೆನಪು ಇರುವ ಹಾಗೆ ಮಾಡು ಬಾ,
ಪ್ರಸಾದದಲ್ಲೂ ಇದ್ದು ಹೋಗು ಬಾ,
ಕಾಯಕದಲ್ಲಿ ಕಳಂಕ ರಹಿತ ಸೇವೆ ಇರಿಸು ಬಾ,
ಕಾಯಕದಲ್ಲಿ ಕಿರಿಕಿರಿ ಆಗದಂತೆ ಮಾಡಿ ಹೋಗಿ ಬಾ- ಬೇಗ ಬಾ | ತಂದೆ, ಬೇಗ ಬಾ.

ಮೌನವಾಗಿ ಇರಬೇಡ, ಬೇಗ ಬಾ,
ತಿದ್ದಿ ಬುದ್ದಿ ಹೇಳಲು ಬೇಗ ಬಾ,
ಪೂಜೆ, ಭಜನೆಯಲ್ಲಿ ನಿಷ್ಟೆ ಇರಿಸು ಬಾ,
ತಪ್ಪು ಮಾಡದ ರೀತಿ ತಿಳಿಸಿ ಹೇಳು ಬಾ -ಬೇಗ ಬಾ | ತಂದೆ, ಬೇಗ ಬಾ

ಪ್ರೀತಿ - ಪ್ರೇಮವ ಭಕ್ತಿಯಲ್ಲಿರಿಸು ಬಾ,
ನಂಬಿಕೆ-ವಿಶ್ವಾಸವ ಭಕ್ತಿಯಲ್ಲಿ ಹೆಚ್ಚಿಸು ಬಾ,
ಮನೆಯ ಆರತಿಯಲ್ಲಿ ಇದ್ದು ಹೋಗು ಬಾ,
ಎಲ್ಲ ದೇವರ ನಾಮಗಳಲ್ಲಿ ನೀನೆ ಆಗಿ ಹೋಗಿ ಬಾ -ಬೇಗ ಬಾ | ತಂದೆ, ಬೇಗ ಬಾ

ನಿನ್ನ ಬೀಜ ಮಂತ್ರವೇ ಎನಗೆ ಕಲ್ಪವೃಕ್ಷ,
ನಿನ್ನ ಬೀಜ ಮಂತ್ರವೇ ಎನಗೆ ನಿನ್ನ ಆಶ್ರೀರ್ವಾದ,
ನಿನ್ನ ಬೀಜ ಮಂತ್ರವೇ ಎನಗೆ ನಿನ್ನ ಅನುಗ್ರಹವು,
ನಿನ್ನ ಬೀಜ ಮಂತ್ರವೇ ಎನಗೆ ನಿನ್ನ ನಾಮ ಸ್ಮರಣೆ
ಈ ರೀತಿ ಇರಲೆಂದು ಸದಾ ಬೇಡುತ್ತಿರುವೆ ಬೇಗ ಬಾ | ತಂದೆ, ಬೇಗ ಬಾ.

18.4.1993
86. ಶ್ರೀ ಸದ್ಗುರು ಸದಾನಂದರ ಸುಪ್ರಭಾತ : ಸುಪ್ರಭಾತವು ನಿಮಗೆ, ಸುಪ್ರಭಾತವು ನಿಮಗೆ,
ಸುಪ್ರಭಾತವು ನಿಮಗೆ, ಸದ್ಗುರುವೆ ಸದಾನಂದ.

ಸುಪ್ರಭಾತ ಸಮಯದಲ್ಲಿ ನಿನ್ನ ಸ್ಮರಣೆಯಿಂದೆದ್ದಿಹೆನು, ಶೌಚ-ಸ್ನಾನದಿ ಕಾರ್ಯಗಳ ನಿನ್ನ ಸ್ಮರಣೆಯಿಂದಲೇ ಮುಗಿಸಿಹೆನು, ಎಲ್ಲ ಕಾಯಕ-ಕಾರ್ಯಗಳು ನಿನ್ನ ಸ್ಮರಣೆಯಿಂದಲೇ ಆಗಿಹುದು.
ಮಡದಿ ಮಕ್ಕಳು ನಿನ್ನ ಸ್ಮರಣೆಯಿಂದೆದ್ದಿಹರು ಅದ ಕಾರಣ ಸುಪ್ರಭಾತವು ನಿಮಗೆ

1. ಬೀಜಮಂತ್ರವೆ ಎನಗೆ ಅಷ್ಟೋತ್ತರ, ಸಹಸ್ರನಾಮ,
ಬೀಜಮಂತ್ರವೇ ಎನಗೆ ವ್ರತ ನಿಯಮಾದಿಗಳು,
ಬೀಜಮಂತ್ರವೇ ಎನಗೆ ಪೂಜಾದಿ ಕಾರ್ಯಗಳು,
ಬೀಜಮಂತ್ರವೇ ಎನಗೆ ಭಜನೆ-ಆರತಿಗಳು
ಆದಕಾರಣ ಸುಪ್ರಭಾತವು ನಿಮಗೆ.

2. ನಿನ್ನ ಸ್ಮರಣೆ ಮಾಡುತ ಹೂಪತ್ರ ತಂದಿಹೆನು,
ನಿನ್ನ ಸ್ಮರಣೆಯಿಂದಲೇ ಪೂಜೆ ಮುಗಿದಿಹುದು,
ನಿನ್ನ ಸ್ಮರಣೆ ಮಾಡುತ ತೀರ್ಥ-ಪ್ರಸಾದ ಮುಗಿಸಿಹೆನು,
ನಿನ್ನ ಸ್ಮರಣೆಯಿಂದಲೇ ಭಜನೆ ಆರತಿ ಆಗಿಹುದು,
ಆದ ಕಾರಣ ಸುಪ್ರಭಾತವು ನಿಮಗೆ.

3.ಭವದ ಬಂದನಗಳು ಸಡಿಲವಾಗುತ್ತಿಹವು,
ಅರಿಷಡ್ವರ್ಗಗಳು ದೂರ ಸರಿಯುತ್ತಿಹವು,
ನಂಬಿಕೆ, ವಿಶ್ವಾಸ ಭಕ್ತಿಯಲ್ಲಿ ಹೆಚ್ಚಿಹುದು,
ಪ್ರೀತಿ ಪ್ರೇಮಗಳು ಭಕ್ತರ ಕಂಡಾಗ ಉಕ್ಕುವುದು
ಆದ ಕಾರಣ ಸುಪ್ರಭಾತವು ನಿಮಗೆ.

4.ಬೀಜಮಂತ್ರ ಪಠಣೆಯಲ್ಲಿ ಮರೆತಿಹೆನು ಕಾಲವನು,
ಬೀಜಮಂತ್ರ ಪಠಣೆಯಿಂದ ಗೆದ್ದಿಹೆನು ಸೋಮಾರಿತನವನು,
ಬೀಜಮಂತ್ರವೇ ಎನಗೆ ಮಾರ್ಗದರ್ಶಿ ಆಗಿಹುದು,
ಬೀಜಮಂತ್ರದಿಂದಲೇ ಎನ್ನ ಕಾಯಕವು ನಡೆದಿಹುದು,
ಆದಕಾರಣ ಸುಪ್ರಭಾತವು ನಿಮಗೆ.

5.ನಿಮ್ಮ ಪವಾಡಗಳು ಎನ್ನ ಭಕ್ತಿಗೆ ತಳಪಾಯ,
ನಿಮ್ಮ ಪವಾಡಗಳು ಎನ್ನ ಕಾಯಕಕ್ಕೆ ಉತ್ಸಾಹ,
ನಿಮ್ಮ ಪವಾಡಗಳು ಎನ್ನ ನಿದ್ರೆಗೆ ಶಾಂತಿ,
ನಿಮ್ಮ ಪವಾಡಗಳು ಎನ್ನ ಶಕ್ತಿಗೆ ಸಹಾಯ,
ಆದಕಾರಣ ಸುಪ್ರಭಾತವು ನಿಮಗೆ.

6. ಕಾಮ, ಕ್ರೋದಾಧಿಗಳ ಆಟ, ತಣ್ಣಗಾಯಿತು ನಿನ್ನಿಂದ,
ಲೋಭ, ಮೋಹಗಳ ಕಾಟ, ದೂರವಾಯಿತು ನಿನ್ನಿಂದ,
ಮದ-ಮತ್ಸರಗಳ ಕೂಗಾಟ ಇಲ್ಲವಾಯಿತು ನಿನ್ನಿಂದ,
ದುರಾಶೆ-ಅಹಂಕಾರಗಳು ಕರಗಿ ಹೋಯಿತು ನಿನ್ನಿಂದ,
ಆದ ಕಾರಣ ಸುಪ್ರಭಾತವು ನಿಮಗೆ.

7. ಸಕಲ ಜೀವರಾಶಿಗಳ ಚೈತನ್ಯವೇ ನೀನು,
ಪರಿಸರಗಳ ಕೋಶ-ಕಣಗಳಲ್ಲಿರುವೆ ನೀನು,
ಪವಾಡಗಳ ಕಾರ್ಯಗಳಲ್ಲಿ ಅಡಗಿರುವೆ ನೀನು,
ಭಕ್ತರ ಕಾಯಕಗಳ ಹರಸುವೆಯು ನೀನು
ಆದ ಕಾರಣ ಸುಪ್ರಭಾತವು ನಿಮಗೆ.

8.ಶಾಂತಿಯ ಗಾಳಿಯು ಬೀಸಿತು ನಿನ್ನಿಂದ,
ನೆಮ್ಮದಿಯು ನೆಲೆಸಿತು ಮನಸಿನಲ್ಲಿ ನಿನ್ನಿಂದ,
ಶ್ರದ್ಧೆ, ನಿಷ್ಟೆ ಇದ್ದಿತು ಕಾಯಕದಲಿ ನಿನ್ನಿಂದ,
ನಿನ್ನ ನಾಮಸ್ಮರಣೆಯೇ ತನು ಮನದಲ್ಲಿ ನೆಲೆಸಿತು ನಿನ್ನಿಂದ
ಆದ ಕಾರಣ ಸುಪ್ರಭಾತವು ನಿಮಗೆ.

23.4.1993
87. ಸುಸ್ವಾಗತ -ಸ್ವಾಗತ-ಶ್ರೀ ಸದ್ಗುರುವಿಗೆ : ಸ್ವಾಗತವು ಸ್ವಾಗತವು ಸ್ವಾಗತವು ನಿಮಗೆ
ಸ್ವಾಗತವು ಸ್ವಾಗತವು ಶ್ರೀಸದ್ಗುರು ಸದಾನಂದರಿಗೆ

ಭವಬಂಧನದ ಬಿಡುಗಡೆಗಾಗಿ ಬಂದಿರುವ ಭಕ್ತರಿಂದ,
ಆರೋಗ್ಯದ ಒಳಿತಿಗಾಗಿ ಕಾದಿರುವ ಭಕ್ತರಿಂದ,
ಆರ್ಥಿಕ ತೊಂದರೆಯ ನಿವಾರಣೆಗಾಗಿ ಬಂದಿರುವ ಭಕ್ತರಿಂದ,
ಮಾನಸಿಕ ಕ್ಲೇಶದ ಬಿಡುಗಡೆಗಾಗಿ ಬಂದಿರುವ ಭಕ್ತರಿಂದ,

1. ಮಡದಿ, ಮಕ್ಕಳ ಒಳಿತಿಗಾಗಿ ಕುಳಿತಿರುವ ಭಕ್ತರಿಂದ,
ಸಮಾಜ ಸೇವೆಯಿಂದ ದೇಶದ ಒಳಿತನ್ನು ಬಯಸುವ ಭಕ್ತರಿಂದ,
ಭಜನೆಗಾಗಿ ಬಂದು ಆನಂದ ಪಡೆಯುವ ಭಕ್ತರಿಂದ,
ಭಕ್ತಿ ತುಂಬಿ ಹಾಡಿ ಮನದಲ್ಲಿ ಖುಷಿ ಪಡೆವ ಭಕ್ತರಿಂದ,

2. ಕಾಯಕದಲ್ಲಿ ಶ್ರೇಯಸ್ಸು ಸಿಗಲೆಂದು ಬಯಸುವ ಭಕ್ತರಿಂದ,
ವ್ಯಾಪಾರ, ವ್ಯವಹಾರಗಳಲ್ಲಿ ಒಳಿತನ್ನು ಬಯಸುವ ಭಕ್ತರಿಂದ,
ಕಛೇರಿ ಕೆಲಸಗಳು ಕಾರ್ಯಗಳು ಸಫಲವಾಗಲೆಂದು ಬಯಸುವ ಭಕ್ತರಿಂದ,
ನ್ಯಾಯಾಲಯದ ಕಟ್ಲೆಗಳಲ್ಲಿ ಒಳಿತಾಗಲಿ ಎಂದು ಬಯಸುವ ಭಕ್ತರಿಂದ,

3. ನಿಮ್ಮ ದರ್ಶನಕ್ಕಾಗಿ ಕಾದು ಕುಳಿತಿಹ ಭಕ್ತರಿಂದ,
ನಿಮ್ಮ ಪವಾಡಗಳನ್ನು ನೋಡಲು ಬಂದಿರುವ ಭಕ್ತರಿಂದ,
ಬಂದು ಬಳಗ ಸ್ನೇಹಿತರೊಡಗೂಡಿ ಬಂದಿರುವ ಭಕ್ತರಿಂದ,
ಅನಾರೋಗ್ಯ ನಿವಾರಣೆಗಾಗಿ ಬಂದು ಕುಳಿತಿಹ ಭಕ್ತರಿಂದ,

4.ನಿಮ್ಮಿಂದ ರುದ್ರಾಕ್ಷಿ ಪಡೆಯಲು ಕಾತರಿಸುತ್ತಿರುವ ಭಕ್ತರಿಂದ,
ನಿಮ್ಮಿಂದ ಸಾಲಿಗ್ರಾಮ, ದೇವರ ವಿಗ್ರಹಗಳ ಪಡೆಯಲು ಕಾದಿರುವ ಭಕ್ತರಿಂದ,
ನಿಮ್ಮಿಂದ ಆರ್ಶೀರ್ವಾದ, ಅನುಗ್ರಹ ಪಡೆಯಲು ನಿಂತಿರುವ ಭಕ್ತರಿಂದ,
ನಿಮ್ಮಿಂದ ಆಧ್ಯಾತ್ಮಿಕ ಶಾಂತಿ, ನೆಮ್ಮದಿ ಕೇಳಲು ಕೂತಿರುವ ಭಕ್ತರಿಂದ.

5. ನಿಮ್ಮ ಅನುಗ್ರಹದಿಂದ ಪುನರ್ಜನ್ಮ ಪಡೆದ ಭಕ್ತರಿಂದ,
ನಿಮ್ಮ ಅನುಗ್ರಹದಿಂದ ಭವದ ಬಂಧನದಿಂದ ದೂರಾದ ಭಕ್ತರಿಂದ,
ನಿಮ್ಮ ಅನುಗ್ರಹದಿಂದ ಅರಿಷಡ್ವರ್ಗಗಳ ದೂರವಿಟ್ಟ ಭಕ್ತರಿಂದ,
ನಿಮ್ಮ ಅನುಗ್ರಹದಿಂದ ಮನಸಿನಲ್ಲಿ ಸದಾ ಶಾಂತಿ, ನೆಮ್ಮದಿ ನೆಲೆಸಿರುವ ಭಕ್ತರಿಂದ.

28.4.1993
88. ಎದ್ದೇಳಿ | ಭಕ್ತರೇ | ಎದ್ದೇಳಿ ||
ಎದ್ದೇಳಿ | ಭಕ್ತರೆ | ಎದ್ದೇಳಿ ||

ಸುಪ್ರಭಾತ ಸಮಯದಲ್ಲಿ ಎದ್ದೇಳಿ |
ಬೀಜಮಂತ್ರವ ನೆನೆಯುತ ಎದ್ದೇಳಿ |
ಮನೆದೇವರ ನೆನೆಯುತ ಎದ್ದೇಳಿ |
ಸುಪ್ರಭಾತವ ಹೇಳುತ ಎದ್ದೇಳಿ |

೧. ಭವದಾಸೆಗಳಿಂದ ಕೂಡಿರುವ ಮನಸ್ಸನ್ನು ಕೊಡವಿ ಎದ್ದೇಳಿ |
ಅರಿಷಡ್ವರ್ಗಗಳಿಂದ ಸುತ್ತಿರುವ ಮನಸ್ಸನ್ನು ಬಿಡಿಸಿ ಎದ್ದೇಳಿ |
ಮನಸಿನಲಿ ಭಜನೆಯನಾಡುತ ಎದ್ದೇಳಿ |
ಶ್ರೀ ಗುರು ಸದಾನಂದರ ನೆನೆಯುತ ಎದ್ದೇಳಿ |

೨. ಸಕಲ ಜೀವರಾಶಿಗಳಲಿ ಲೇಸನ್ನೇ ಬಯಸುತ ಎದ್ದೇಳಿ |
ಮಾನವನ ಕಲ್ಯಾಣ ಬಯಸುತ ಎದ್ದೇಳಿ |
ವಿಶ್ವದಲಿ ಶಾಂತಿ ನೆಮ್ಮದಿ ಇರಲೆಂದು ಕೋರುತ ಎದ್ದೇಳಿ |
ಸಂಸಾರದಲ್ಲಿ ಸುಖ ಸಾಗರ ಕೋರುತ ಎದ್ದೇಳಿ |

೩. ಮಡದಿ ಮಕ್ಕಳ ಆರೋಗ್ಯವ ಕೋರುತ ಎದ್ದೇಳಿ |
ಬಂಧು-ಬಳಗಗಳ ಸುಖ ಕೋರುತ ಎದ್ದೇಳಿ |
ಸ್ನೇಹಿತರುಗಳಿಗೆ ಶುಭ ಸಿಗಲೆಂದು ಕೋರುತ ಎದ್ದೇಳಿ |
ನೆರೆ ಹೊರೆಯವರ ಶುಭ ಕೋರುತ ಎದ್ದೇಳಿ |
೪. ಸಮಾಜದ ಸೇವೆಗೆ ಕಂಕಣವ ಕಟ್ಟುತ ಎದ್ದೇಳಿ |
ದೇಶದ ಏಳಿಗೆ ಪ್ರಗತಿಗೆ ಶುಭ ಕೋರುತ ಎದ್ದೇಳಿ |
ರಾಜ್ಯದ ಸಕಲ ಕಾರ್ಯಗಳಿಗೆ ಶುಭ ಕೋರುತ ಎದ್ದೇಳಿ|
ಶ್ರೀ ಗಿರಿಜಾತೆಯ ಶಕ್ತಿ ಎಲ್ಲದರಲಿ ಇರಲೆಂದು ಕೋರುತ ಎದ್ದೇಳಿ |

೫.ಬಹಳ ಕಾಲದ ಭಾಗ್ಯವ ಕೇಳುತ ಎದ್ದೇಳಿ |
ಸದಾ ಕಾಲ ಆರೋಗ್ಯವ ಕೇಳುತ ಎದ್ದೇಳಿ |
ವಿದ್ಯೆ ಬುದ್ಧಿ ಮಾನವರಲಿ ಇರಲೆಂದು ಕೇಳುತ ಎದ್ದೇಳಿ |
ಐಶ್ವರ್ಯ ಕೊಟ್ಟು ಕಾಪಾಡು ಎಂದು ಕೇಳುತ ಎದ್ದೇಳಿ |

೬.ಮನಸ್ಸನು ಭಕ್ತಿಯಿಂದ ನೆನೆಸುತ ಎದ್ದೇಳಿ |
ಮನಸ್ಸಿನಲ್ಲಿ ಗುರುಗಳ ಆಶೀರ್ವಾದ ಪಡೆಯುತ ಎದ್ದೇಳಿ |
ಶ್ರೀ ಗುರು ಸದಾನಂದರ ಪಾದ ಹಿಡಿಯುತ ಎದ್ದೇಳಿ |
ಹೃದಯದಲ್ಲಿರುವ ಶ್ರೀ ಸದಾನಂದರಿಗೆ ನಮಿಸಿ ಎದ್ದೇಳಿ ||

27.05.1993
89. ಮಾನಸಿಕ ಪೂಜೆ : ಇದುವೇ ಶ್ರೇಷ್ಠವಾದ ಪೂಜೆ,
ಆಡಂಬರ ರಹಿತ ಪೂಜೆ,
ಬಡವ ಬಲ್ಲಿದ ಮಾಡಬಹುದಾದ ಪೂಜೆ,
ಭಕ್ತಿ ತುಂಬಿ ತುಳುಕಿದ ಪೂಜೆ,
ಹಣದ ಖರ್ಚಿನ ಅವಶ್ಯಕತೆ ಇಲ್ಲದ ಪೂಜೆ,
ಏಕಾಗ್ರತೆ ಇರಲೇ ಬೇಕಾದ ಪೂಜೆ,
ನಿಷ್ಟೆಯಿಂದಿರಬೇಕಾದ ಪೂಜೆ,
ಭಯರಹಿತ ಪೂಜೆ,
ಶಬ್ಧ ರಹಿತ ಪೂಜೆ,
ಜಾತಿ-ಮತ-ಪಂಥರಹಿತ ಪೂಜೆ,
ವ್ರತ ನಿಯಮಗಳಿಲ್ಲದ ಪೂಜೆ,
ನಂಬಿಕೆ ಇಡಬೇಕಾದ ಪೂಜೆ,
ವಿಶ್ವಾಸ ದೇವನಲ್ಲಿಡಬೇಕಾದ ಪೂಜೆ,
ತಾಳ್ಮೆ ಬೆಳೆಸಿಕೊಳ್ಳಬಹುದಾದ ಪೂಜೆ,
ಪ್ರೀತಿ ಉಕ್ಕಿ ಹರಿಸುವ ಪೂಜೆ,
ಮೌನದಿಂದಿರಬೇಕಾದ ಪೂಜೆ,
ಭಜನೆ, ಮಂತ್ರಗಳ ಪ್ರಚಾರವಿಲ್ಲದ ಪೂಜೆ,
ಕಾಲ ನಿಯಮಗಳ ಮೀರಿದ ಪೂಜೆ,
ಅರ್ಚಕರ ಸಹಾಯ ಬೇಡದ ಪೂಜೆ,
ಆನಂದದಾಯಕ ಪೂಜೆ,
ಪೂಜಾಫಲ ಸಿಗುವ ಪೂಜೆ,
ಮೋಕ್ಷ ಕೊಡುವ ಪೂಜೆ,
ಸರಳವಾಗಿ ಮಾಡಬಹುದಾದ ಪೂಜೆ,
ಸದಾ ಮಾಡಬಹುದಾದ ಪೂಜೆ,
ಅಡ್ಡಿ ಆತಂಕಗಳು ಇಲ್ಲದ ಪೂಜೆ,
ಕಿರಿಕಿರಿ ಆಗಲಾಗದ ಪೂಜೆ,
ಅನ್ಯರ ಅವಶ್ಯಕತೆ ಬೇಡದ ಪೂಜೆ,
ಮನಸ್ಸನ್ನು ಸ್ವಚ್ಛಗೊಳಿಸುವ ಪೂಜೆ,
ಭವದ ಬಂಧನ ಬಿಡಿಸಬಹುದಾದ ಪೂಜೆ,
ಅರಿಷಡ್ವರ್ಗಗಳ ಆಟ ನಡೆಯದ ಪೂಜೆ,
ದೈವ-ಭಕ್ತರ ಸಂಬಂಧ ಬೆಳೆಸುವ ಪೂಜೆ,
ಮನಸ್ಸಿಗೆ ಖುಷಿಕೊಡುವ ಪೂಜೆ,
ತರಲೆ ತಾಪತ್ರಯಗಳಿಲ್ಲದ ಪೂಜೆ,
ಮನಸ್ಸನ್ನು ಅಂತರ್ಮುಖಿಗೆ ತಿರುಗಿಸಿದ ಪೂಜೆ,
ಮನಸ್ಸನ್ನು ಹತೋಟಿಯಲ್ಲಿಟ್ಟ ಪೂಜೆ,
ಎಲ್ಲರೂ ಮಾಡಬಹುದಾದ ಪೂಜೆ,
ಇದುವೆ ಮಾನಸಿಕ ಪೂಜೆ.

16.06.1993
90. ದೇವ ಪೂಜೆಯ ಮಾಡಿರೊ : ದೇವ ಪೂಜೆಯ ಮಾಡಿರೊ ನಿರಂತರ
ಮನಸಿನಲಿ, ದೇವ ಪೂಜೆಯ ಮಾಡಿರೋ ||ಪ||

ಅಂತರ್ಮುಖಿಯಾಗಿ ಮನಸ್ಸನು ತಿರುಗಿಸಿ,
ಏಕಾಗ್ರತೆ, ನಿಷ್ಟೆಯಿಂದ ಭಕ್ತಿಯನು ಬೆಳೆಸುತ,
ಮನಸ್ಸಿಗೆ ಸದಾ ನೆಮ್ಮದಿ ಶಾಂತಿ ಇರಲು,
ಮನದಲಿ ಯಾವ ರೂಪದಲ್ಲಿ ಬೇಕಾದರೂ,
-ದೇವ ಪೂಜೆಯ ಮಾಡಿರೋ

೧. ಸುಪ್ರಭಾತ ಸಮಯದಲಿ ಆ ದೇವನ ನೆನೆಸುತ,
ಶೌಚ ಸ್ನಾನಾದಿ ಕಾರ್ಯಗಳಲೂ ನೆನಪಲಿ ಮುಗಿಸುತ,
ಭವ-ಬಂಧನ ಕಾರ್ಯಗಳ ಬದಿಗೊಟ್ಟುತ,
ಅರಿಷಡ್ವರ್ಗಗಳ ವಾಸನೆಯ ಕಿತ್ತೊಗೆದು,
-ದೇವ ಪೂಜೆಯ ಮಾಡಿರೋ
೨. ವಿಶ್ವ ಮಾನವರಲಿ ಭಾತೃತ್ವ ಇರಲಿ ಎಂದು ಕೇಳುತ,
ಸಕಲ ಜೀವರಾಶಿಗಳ ಆರೋಗ್ಯ ಭಾಗ್ಯವ ಕೇಳುತ,
ವಿಶ್ವವೇ ಒಂದು ರಾಷ್ಟ್ರವಾಗಲಿ ಎಂದು ಬಯಸುತ,
ಪರಿಸರಗಳ ನಾಶ ನಿಲ್ಲಲಿ ಎಂದು ಪ್ರಾರ್ಥಿಸುತ,
-ದೇವ ಪೂಜೆಯ ಮಾಡಿರೋ

೩. ಆ ದೇವನ ನಾನ ನಾಮಗಳ ಪಠಿಸುತ,
ಆ ದೇವ ಕೊಟ್ಟ ಭಾವನೆಯ ರೂಪದಲಿ ಸ್ಮರಿಸುತ,
ಎಲ್ಲ ಕಾಯಕ-ಕಾರ್ಯಗಳಲ್ಲಿ ಆ ದೇವನ ನೆನೆಸುತ,
ನಿದ್ರೆಗೂ ಮುಂಚೆ ಆ ದೇವನ ಸ್ಮರಿಸುತ
-ದೇವ ಪೂಜೆಯ ಮಾಡಿರೋ

೪. ಮಡದಿ ಮಕ್ಕಳ ಆರೋಗ್ಯ, ಭಾಗ್ಯವ ಕೇಳುತ,
ನೆರೆಹೊರೆಯವರ ಶಾಂತಿ ನೆಮ್ಮದಿ ಕೇಳುತ,
ಬಂಧು-ಬಳಗಗಳ ಪ್ರೀತಿ, ವಿಶ್ವಾಸ ಶುಭ ಕೋರುತ,
ಸ್ನೇಹಿತ-ನೆಂಟರಿಷ್ಟರುಗಳ ಹಾರೈಕೆಗೆ ಶುಭ ಕೋರುತ,
-ದೇವ ಪೂಜೆಯ ಮಾಡಿರೋ

೫. ರಾಜ್ಯ -ರಾಜ್ಯಗಳ ಸಂಬಂಧದಲ್ಲಿ ಶುಭ ಕೋರುತ,
ರಾಷ್ಟ್ರ -ರಾಷ್ಟ್ರಗಳ ಸ್ನೇಹ-ಸಂಬಂಧದಲ್ಲಿ ಪ್ರಗತಿಯ ಕೇಳುತ,
ಸಮಾಜದ ಏಳಿಗೆಯ ಪ್ರಗತಿಯ ಕೇಳುತ,
ನೆಮ್ಮದಿ-ಶಾಂತಿ ಎಲ್ಲಾ ಕಡೆ ನೆಲೆಸಲಿ ಎಂದು ಕೇಳುತ,
-ದೇವ ಪೂಜೆಯ ಮಾಡಿರೋ.
17.06.1993
91. ’ಮಹದೇಶ್ವರ’ ನೆಂಬೈದಕ್ಷರಗಳ ನೆನೆಯುತ್ತಿರಬೇಕು :
’ಮಹದೇಶ್ವರ’ ನೆಂಬೈದಕ್ಷರಗಳ ನೆನೆಯುತ್ತಿರಬೇಕು.
ಮನಸಿನಲಿ ಸದಾ ಅವನ ನಾಮವ ಜಪಿಸುತ್ತಿರಬೇಕು. ||ಪ||

ರಕ್ಷಿಸುತ್ತಿರುವವನು ಮಹದೇಶ್ವರ,
ಕಾಪಾಡುತ್ತಿರುವವನು ಮಹದೇಶ್ವರ,
ಹರಸುತ್ತಿರುವವನು ಮಹದೇಶ್ವರ,
ಆರೋಗ್ಯ ಕೊಟ್ಟಿರುವವನು ಮಹದೇಶ್ವರ-ಆದ ಕಾರಣ

೧. ಅನಾರೋಗ್ಯವ ನಿವಾರಿಸುವವನು ಮಹದೇಶ್ವರ,
ಕಷ್ಟಗಳನ್ನು ಪರಿಹರಿಸುವವನು ಮಹದೇಶ್ವರ,
ಭವ-ಬಂಧನಗಳ ದೂರವಿಡಿಸುವವನು ಮಹದೇಶ್ವರ,
ಅರಿಷಡ್ವರ್ಗಗಳ ದೂರ ತಳ್ಳುವವನು ಮಹದೇಶ್ವರ- ಆದ ಕಾರಣ

೨.ಮನಸಿನ ನೆಮ್ಮದಿ -ಶಾಂತಿಗೆ ಕಾರಣ ಮಹದೇಶ್ವರ,
ಮಡದಿ ಮಕ್ಕಳ ಸುಖಕ್ಕೆ ಕಾರಣ ಮಹದೇಶ್ವರ,
ಕಾಯಕ ಕಾರ್ಯಗಳ ಏಳಿಗೆಗೆ ಕಾರಣ ಮಹದೇಶ್ವರ,
ಮಕ್ಕಳ ಶ್ರೇಯಸ್ಸುಗಳಿಗೆ ಕಾರಣ ಮಹದೇಶ್ವರ-ಆದ ಕಾರಣ

೩. ತಂಬಡಿಗಳಿಗೆ ದೀಕ್ಷೆ ಕೊಟ್ಟವನು ಮಹದೇಶ್ವರ,
ದುಷ್ಟರುಗಳನ್ನು ಸಂಹರಿಸಿದವನು ಮಹದೇಶ್ವರ,
ಪವಾಡಗಳ ಮಾಲೆಯ ತೊಟ್ಟವನು ಮಹದೇಶ್ವರ,
ಭಕ್ತಿ ಜೀವರಾಶಿಗಳಿಗೆ ಮೋಕ್ಷ ಕೊಟ್ಟವನು ಮಹದೇಶ್ವರ- ಆದ ಕಾರಣ

೪. ವ್ಯಾಪಾರದ ಅಭಿವೃದ್ಧಿಗೆ ಕಾರಣ ಮಹದೇಶ್ವರ,
ಕೆಲಸ-ಕಾರ್ಯಗಳ ಜಯಕ್ಕೆ ಕಾರಣ ಮಹದೇಶ್ವರ,
ಕಲಿತ ವಿದ್ಯೆಯ ಶುಭ ಫಲಕ್ಕೆ ಕಾರಣ ಮಹದೇಶ್ವರ,
ದಾನವರು ಮಾನವರಾಗಲಿಕೆ ಕಾರಣ ಮಹದೇಶ್ವರ-ಆದ ಕಾರಣ

೫. ಮನಸಿನ ಭಾರವ ಇಳಿಸುವವನು ಮಹದೇಶ್ವರ,
ಕಷ್ಟ ಕಾರ್ಪಣ್ಯಗಳ ನಿವಾರಿಸುವವನು ಮಹದೇಶ್ವರ,
ಜೀವನಕ್ಕೆ ಉದ್ಯೋಗ ಕೊಡಿಸುವವನು ಮಹದೇಶ್ವರ,
ಮಕ್ಕಳ ಮದುವೆಗೆ ಕಾರಣ ಮಹದೇಶ್ವರ- ಆದ ಕಾರಣ

೬. ಭಕ್ತರ ಭಕ್ತಿ ಹೆಚ್ಚಲು ಕಾರಣ, ಮಹದೇಶ್ವರ,
ಭಕ್ತರ ನೆಮ್ಮದಿ-ಶಾಂತಿಗೆ ಕಾರಣ ಮಹದೇಶ್ವರ,
ಭಕ್ತರ ಹರಕೆಯ ಮನ್ನಿಸುವವನು ಮಹದೇಶ್ವರ,
ಭಕ್ತರ ಮೋಕ್ಷಕ್ಕೆ ಕಾರಣ- ಮಹದೇಶ್ವರ- ಆದ ಕಾರಣ

೭. ಇದ್ದರೂ ಇಲ್ಲದಂತಿರುವವನು ಮಹದೇಶ್ವರ,
ಸರಿಯಾದ ಸಮಯಕ್ಕೆ ಸಹಾಯ ಮಾಡುವವನು ಮಹದೇಶ್ವರ,
ಶ್ರೀ ಶೈಲದಿಂದ ಬಂದು ನೆಲೆಸಿರುವವನು ಮಹದೇಶ್ವರ,
ಬಹಳ ಜನ ಭಕ್ತರ ಆರಾಧ್ಯ ದೈವ ಮಹದೇಶ್ವರ- ಆದ ಕಾರಣ

೮. ಜಾತಿ-ಮತ ಪಂಥ ರಹಿತನು ನಮ್ಮ ಮಹದೇಶ್ವರ,
ಭಾಷೆ-ವರ್ಗ ರಹಿತನು ನಮ್ಮ ಮಹದೇಶ್ವರ,
ಲಿಂಗ-ಭೇದ ರಹಿತನು ನಮ್ಮ ಮಹದೇಶ್ವರ,
ದಲಿತ ವರ್ಗಗಳ ಸಂರಕ್ಷನು ನಮ್ಮ ಮಹದೇಶ್ವರ-ಆದ ಕಾರಣ

10.11.1993-1.30 a.m
92. ಶ್ರೀ ಸಿದ್ದಲಿಂಗೇಶ್ವರರ ಸೊಬಗು ನೋಡೋಣ | ಬನ್ನಿರಿ
ಬನ್ನಿರಿ, ಭಕ್ತರೇ | ಸೊಬಗು ನೋಡೋಣ ಬನ್ನಿರಿ ||
ಶ್ರೀ ಸಿದ್ಧ ಲಿಂಗೇಶ್ವರರ ಸೊಬಗು ನೋಡೋಣ, ಬನ್ನಿರಿ ||ಪ||

೧. ಸುಪ್ರಭಾತ ಸಮಯದಲಿ ಮನದಲಿ ನೆನೆಯುತ,
ಎದ್ದು ಶೌಚ ಸ್ನಾನಾದಿ ಕಾರ್ಯಗಳ ಮುಗಿಸುತ,
ಬೀಜ ಮಂತ್ರವ ಜಪಿಸುತ ದೇಹಕೆ ವಿಭೂತಿ ಧರಿಸುತ,
ಗಂಧಾಕ್ಷತೆ ಲೇಪಿಸುತ, ರುದ್ರಾಕ್ಷಿಯ ಧರಿಸುತ ಬನ್ನಿರಿ, ಭಕ್ತರೇ,

೨.ಭವದಾಸೆಗಳನ್ನು ಬದಿಗೊಟ್ಟು, ಅರಿಷಡ್ವರ್ಗಗಳಾಸೆಗಳನು ತಳುತ,
ಏಕಾತ್ರತೆ ನಿಷ್ಠೆಯಿಂದ ಇಷ್ಟಲಿಂಗಕ್ಕೆ ಮಜ್ಜನಗೈಯುತ,
ವಿಭೂತಿ ಧರಿಸಿ, ಗಂಧಾಕ್ಷತೆಯನು ಹಚ್ಚುತ,
ಬೀಜಮಂತ್ರ ಜಪಿಸುತ, ಪುಷ್ಪ ಬಿಲ್ವಾರ್ಚನೆ ಅರ್ಪಿಸುತ, ಬನ್ನಿರಿ ಭಕ್ತರೇ

೩. ಮನದಲಿ ಹರಕೆಯ ಸಲ್ಲಿಸುತ,
ಮನದ ಒಳ್ಳೆಯ ಆಸೆಯ ಪೂರೈಸೆಂದು ಕೇಳುತ,
ಮನದ ಆಸೆ-ಆಕಾಂಕ್ಷೆಗಳು ನೆರವೇರಿಸೆಂದು ಕೇಳುತ,
ಮೌನದಲಿ ಬೀಜಮಂತ್ರಗಳ ಸದಾ ಪಠಿಸುತ, ಬನ್ನಿರಿ ಭಕ್ತರೇ


10.11.1993. 2.30 a.m
93. ಹೇ || ಸದ್ಗುರು ಶ್ರೀ ಸದಾನಂದ ಕೇಳು ಬಾ|
ದೇವಾ ಕೇಳು ಬಾ, ನಮ್ಮ ಸಮಸ್ಯೆ-ಕೋರಿಕೆಗಳ ಕೇಳು ಬಾ|
ಬಗೆಹರಿಸು ಬಾ, ಸಾಂತ್ವನವ ನೀಡು ಬಾ||ಪ||

ಮನಸ್ಸು ಕದಡಿಹುದು, ಚಿಂತೆ ಕಾಡಿಹುದು,
ಬಯಕೆ ಚಿಗುರೊಡೆದು ಹರಿಯುತ್ತಿಹುದು,
ಆಸೆ-ಆಕಾಂಕ್ಷೆ ಹೆಚ್ಚಿ ಹುಚ್ಚಿನಂತಾಗಿಹುದು,
ದುರಾಸೆಗಳ ಬಿರುಗಾಳಿ ಬೀಸಿ ಮನಸು ಕಲುಕಿಹುದು ||೧|| ಹೇ ದೇವ ಕೇಳು ಬಾ||

ನೆಮ್ಮದಿ ಶಾಂತಿ ಕದಡಿಹೋಗಿಹುದು,
ಸುಖ-ನಿದ್ರೆ ಇಲ್ಲವಾಗಿಹುದು,
ಭಯ-ಭಕ್ತಿ ದೂರ ಹೋಗಿಹುದು,
ಭವ ಬಂಧನ ಸುತ್ತು ತಿರುಗಿತ್ತಿಹುದು ||೨|| ಹೇ ದೇವ ಕೇಳು ಬಾ||

ಕಾಮ ಕ್ರೋಧ ಹೆಚ್ಚಿಹುದು,
ಲೋಭ-ಮೋಹ ಸುತ್ತಿಹುದು
ಮದ-ಮತ್ಸರ ಬಂದು ಹೋಗುತ್ತಿಹುದು
ಮನಸು ಕಲ್ಮಷವಾಗಿಹುದು ||೩|| ಹೇ ದೇವ ಕೇಳು ಬಾ||

ಮನಸ ಹಿಡಿತದಲ್ಲಿಡಿಸು ಬಾ,
ಚಿಂತೆ ದೂರವಿಡಿಸು ಬಾ,
ಬಯಕೆಯ ಮಿತಿಯಲ್ಲಿರಿಸು ಬಾ,
ಆಸೆಯ ಹತೋಟಿಯಲ್ಲಿಡಿಸು ಬಾ,
ದುರಾಸೆಗಳ ಇಲ್ಲದಂತಿರಿಸು ಬಾ ||೪|| ಹೇ ದೇವ ಕೇಳು ಬಾ||

ಮನದಲಿ ಸದಾ ನೆಮ್ಮದಿ ಶಾಂತಿ ಇರಿಸು ಬಾ,
ನಿನ್ನ ನೆನಪಿನಲೇ ಸುಖ-ನಿದ್ರೆ ಇರಿಸು ಬಾ,
ಭಯ-ಭಕ್ತಿ ಸದಾ ಇರಿಸು ಬಾ,
ಭವ ಬಂಧನಕೆ ಕಡಿವಾಣ ಹಾಕು ಬಾ ||೫|| ಹೇ ದೇವ ಕೇಳು ಬಾ||

ಕಾಮ-ಕ್ರೋಧವ ದೂರ ಇರಿಸು ಬಾ,
ಲೋಭ-ಮೋಹಕ್ಕೆ ಮಿತಿ ಇರಿಸು ಬಾ,
ಮದ-ಮತ್ಸರಕ್ಕೆ ಬಲಿ ಹಾಕು ಬಾ,
ಮನಸ ನಿನ್ನ ಧ್ಯಾನಕ್ಕೆ ಇರಿಸು ಬಾ ||೬|| ಹೇ ದೇವ ಕೇಳು ಬಾ||

ಆರೋಗ್ಯ-ಭಾಗ್ಯವ ಕೊಟ್ಟು ಹೋಗು ಬಾ,
ವಿದ್ಯೆ-ಬುದ್ಧಿ ಐಶ್ವರ್ಯವ ಕರುಣಿಸು ಬಾ,
ನೆಮ್ಮದಿ-ಶಾಂತಿಯ ಹರಡಿಸಿ ಹೋಗಿ ಬಾ,
ಮಡದಿ-ಮಕ್ಕಳ ಆಸೆಯ ನೆರವೇರಿಸು ಬಾ ||೭|| ಹೇ ದೇವ ಕೇಳು ಬಾ||

11.11.1993 -1.45 a.m
94. ದೇವ ನಾಮವ ಜಪಿಸಿರೋ : ದೇವ ನಾಮವ ಜಪಿಸಿರೋ, ನಿರಂತರ
ಮನಸಿನಲಿ, ದೇವನಾಮವ ಜಪಿಸಿರೋ||ಪ||

ಆ ನಾಮ, ಈ ನಾಮ, ಯಾವ ನಾಮದಲಿ ಎಂದು
ಯೋಚಿಸದೇ, ಎಲ್ಲ ನಾಮಗಳ ಅರಿವಿನಲ್ಲಿರುವ
ಆ ದೇವನ, ಮನಕೆ ಬಂದ ನಾಮದಲೇ ಸ್ಮರಿಸುತ ||೧||

ಹರ-ಶಿವ ನಾಮವಾದರೂ ಚೆಂದ,
ರಾಮ-ಕೃಷ್ಣ-ವಿಷ್ಣು ನಾಮವಾದರೂ ಚೆಂದ,
ಅಲ್ಲ -ಕ್ರೈಸ್ತ ನಾಮವಾದರೂ ಚೆಂದ,
ಎಲ್ಲ ನಾಮಗಳಲ್ಲಿ ಅಡಗಿರುವ ಆ ದೇವನ ||೨||

ಭಯ-ಭಕ್ತಿ-ನಿಷ್ಠೆಗಳಿಂದ ಆ ದೇವನ ನೆನೆಸುತ,
ಅರಿಷಡ್ವರ್ಗಗಳ ವಾಸನೆಯ ಮನಸಿನಿಂದ ದೂರ ತಳ್ಳುತ,
ಮನದಲಿ ಕಾಣಿಕೆಯ ರೂಪವಾಗಿ ಹರಕೆಯ ಕಟ್ಟುತ,
ಮನದಲಿ ಬರುವ ಯಾವ ರೂಪದಲ್ಲಾದರೂ ದೇವನ ಸ್ಮರಿಸುತ ||೩||

ಸುಪ್ರಭಾತ ಸಮಯದಲೂ ಆ ದೇವನ ಸ್ಮರಿಸುತ,
ಕಾಯಕದಲೂ ಸಹ ಆ ದೇವನ ನಾಮವ ಜಪಿಸುತ,
ಪ್ರಸಾದ ಸ್ವೀಕರಿಸುವಲ್ಲಿ ಪ್ರತಿ ತುತ್ತಿಗೊಮ್ಮೆ ಆ ದೇವನ ಸ್ಮರಿಸುತ,
ದಣಿದು, ವಿಶ್ರಾಂತಿ ತೆಗೆದುಕೊಳ್ಳುವ ಮುನ್ನವೂ ಸಹ ||೪||

ದೇವ ನಾಮಸ್ಮರಣೆಯೇ ಭಕ್ತರ ಚೈತನ್ಯ,
ದೇವ ನಾಮ ಸ್ಮರಣೆಯಿಂದಲೇ ಭಕ್ತರ ಪಾಪ ಪರಿಹಾರ,
ದೇವ ನಾಮ ಸ್ಮರಣೆಯೇ ಭಕ್ತರಿಗೆ ದಾರಿದೀಪ,
ದೇವ ನಾಮ ಸ್ಮರಣೆಯಿಂದಲೇ ಜೀವನದ ಉದ್ದಾರ, ಅದಕೆ ||೫||

ಭವದ ಬಂಧನ ವಿಮೋಚನೆಗೆ ಕಾರಣ ಆ ದೇವ,
ಅರಿಷಡ್ವರ್ಗಗಳ ಹತೋಟಿಗೆ ಕಾರಣ ಆ ದೇವ,
ದುರಾಸೆಗಳ ಶಮನಕ್ಕೆ ಕಾರಣ ನಮ್ಮ ಆ ದೇವ,
ಮಾರ್ಗದರ್ಶಿ ಆಗಿ ಬಂದು ಸಲಹಿತ್ತಿರುವನು ಆ ದೇವ ಆದ ಕಾರಣ ||೬||

ಭವರೋಗ ವೈದ್ಯನಾಗಿ ಬಂದಿಹನು ಆ ದೇವ,
ತತ್ವಜ್ಞಾನಿ ಆಗಿ, ಗುರು ರೂಪದಲಿ ಬಂದಿಹನು ಆ ದೇವ,
ಮಾರ್ಗದರ್ಶಿ ಆಗಿ, ಜಂಗಮರೂಪದಲಿ ಬಂದಿಹನು ಆ ದೇವ,
ಸ್ನೇಹಿತನಾಗಿ, ಚಿಂತನ ರೂಪದಲಿ ಬಂದಿಹನು ಆ ದೇವ ಆದಕಾರಣ ||೭||

28.11.1993
95. ಭಜನೆಯ ಮಾಡೋಣ ಬನ್ನಿರೋ, ಭಕ್ತರೇ :
ಭಜನೆಯ ಮಾಡೋಣ ಬನ್ನಿರೋ,
ಆ ದೇವನ, ಮಹಾದೇವನ, ನೈಜ ದೇವನ ||ಪ||

ಸಮಯವ ಭಜನೆಗೆ ಮೀಸಲಿಟ್ಟು ಬನ್ನಿರೋ,
ಮನಸ್ಸನ್ನು ಭಜನೆಗೆ ತಿರುಗಿಸಿ ಬನ್ನಿರೋ,
ದೇಹದ ಭವದಾಸೆ ಮೀಸಲಿಟ್ಟು ಬನ್ನಿರೋ,
ಮನಸಿನ ಅರಿಷಡ್ವರ್ಗ ತಿರಿಸ್ಕರಿಸಿ ಬನ್ನಿರೋ ||೧||

ಮಡದಿ ಮಕ್ಕಳ ಕರೆತಂದು ಬನ್ನಿರೋ,
ಬಂದು-ಬಳಗಗಳಿಗೆ ತಿಳಿಸಿ ಬನ್ನಿರೋ,
ವಿಶ್ವಾಸಿ ಸ್ನೇಹಿತರುಗಳ ಕರೆತಂದು ಬನ್ನಿರೋ,
ಸುತ್ತ ಮುತ್ತ ಜನಕೆ ಹೇಳಿ ಬನ್ನಿರೋ ||೨||

ದೇಹವ ಜಲದಿಂದ ಶುಭ್ರಗೊಳಿಸಿ ಬನ್ನಿರೋ,
ಮನದ ಆಸೆಯನು ದೂರವಿಟ್ಟು ಬನ್ನಿರೋ,
ತನುವ ಭಕ್ತಿಯಿಂದ ಬಳಲಿಸಲಿಕ್ಕೆ ಬನ್ನಿರೋ,
ಧನವ ತಂದು ಹರಕೆಯಾಗಿ ಅರ್ಪಿಸಲು ಬನ್ನಿರೋ ||೩||

ದಾಸೋಹಕೆ ಅಲ್ಪ ಸ್ವಲ್ಪ ಧನ-ದಾನ್ಯ ತನ್ನಿರೋ,
ಪೂಜೆಗೆಂದು ಹೂವು-ಹಣ್ಣು-ಕಾಯಿಯ ತನ್ನಿರೋ,
ನೈವೇದ್ಯಕೆ ಹರಕೆಯ ಸಾಮಾನು ತನ್ನಿರೋ,
ದಾನಕ್ಕಾಗಿ ದೇವ ಕೊಟ್ಟ ಧನವ ತನ್ನಿರೋ ||೪||

ಮನದಲಿ ಧ್ಯಾನ ಮಾಡಲಿಕೆ ಬಂದು ಕುಳ್ಳಿರೋ,
ಆ ನೈಜ ದೇವನ ಪ್ರಾರ್ಥಿಸಲು ಬಂದು ಕುಳ್ಳಿರೋ,
ಆ ಮಹದೇವನ ಕೋರಲು ಬಂದು ಕುಳ್ಳಿರೋ,
ನೆಮ್ಮದಿ-ಶಾಂತಿ ಸದಾ ಕೊಡು ಎಂದು ಕೇಳಿರೋ ||೫||

ಆ ಭವರೋಗ ವೈದ್ಯನನು ಬಂದು ಕೇಳಿರೋ,
ಆ ದೇವನ ಪವಾಡಗಳ ಲೀಲೆ ಬಂದು ಹೇಳಿರೋ,
ಮನದಲಿ ಪ್ರಾರ್ಥನೆಗಳ ಸುರಿಮಳೆ ಸುರಿಸಿರೋ,
ಮನದಲ್ಲಿ ಆ ದೇವನ ಪಾದಪದ್ಮ ಹಿಡಿಯಿರೋ ||೬||


28.11.1993
96. ಹೇ ತಂದೆ|| ಪರಮಾತ್ಮ|| :
ಹೇ ತಂದೆ || ಪರಮಾತ್ಮ|| ಹೇಗೆ ಹೇಳಲಿ? ಎಂತು ವರ್ಣಿಸಲಿ?
ನೀ ಕರುಣಿಸಿದ ಆ ಆಶೀರ್ವಾದ ದ ಫಲವ ||ಪ||

ಮನದ ಭವದಾಸೆಯನು ಕಿತ್ತೊಗೆದವನು ನೀನು,
ಅರಿಷಡ್ವರ್ಗಗಳ ಆಸೆಗೆ ಕಡಿವಾಣ ಹಾಕಿದವನು ನೀನು,
ಕನಸಿನಲಿ ಸದಾನಂದರ ರೂಪದಲ್ಲಿ ಬಂದವನು ನೀನು,
ಮನಸ್ಸುನ್ನು ಹತೋಟಿಯಲ್ಲಿಟ್ಟವನು ನೀನು ||೧|| ಅದ ಕಾರಣ ಹೇ||

ಸುಪ್ರಭಾತ ಸಮಯದಲ್ಲಿ ಬಂದು ಏಳಿಸುವವನು ನೀನು,
ಸುಪ್ರಭಾತ ಸಮಯದಲ್ಲಿ ಪೂಜೆಗೊಳ್ಳಿಸುವವನು ನೀನು,
ಸುಪ್ರಭಾತ ಸಮಯದಲ್ಲಿ ಮನಕೆ ಆಹ್ಲಾದಕೊಟ್ಟವನು ನೀನು,
ಸುಪ್ರಭಾತ ಸಮಯದಿಂದ ಕಾಯಕಕ್ಕೆ ತೊಡಿಸುವವನು ನೀನು ||೨|| ಅದ ಕಾರಣ ಹೇ||

ಎನ್ನ ಕಾಯಕಕ್ಕೆ ರೂಪುರೇಷೆ ಕೊಟ್ಟವನು ನೀನು,
ಎನ್ನ ಕಾಯಕಕ್ಕೆ ಆಶೀರ್ವಾದ ನೀಡಿದವನು ನೀನು,
ಎನ್ನ ಕಾಯಕದ ಫಲವ ಹೆಚ್ಚಿಸಲು ಕಾರಣ ನೀನು,
ಎನ್ನ ಕಾಯಕಕ್ಕೆ ಭಕ್ತಿ ಲೇಪನ ಹೆಚ್ಚಿಸಿದವನು ನೀನು ||೩|| ಅದ ಕಾರಣ ಹೇ||

ಸಜ್ಜನರ ಸಂಗಕೆ ಸೇರಲು ಕಾರಣ ನೀನು,
ಮೌನದಿ ಕುಳಿತು ಪೂಜಿಸಲು ಕಾರಣ ನೀನು,
ಅನವಶ್ಯಕ ಮಾತುಗಳಿಗೆ ಕಡಿವಾಣ ಹಾಕಿದವನು ನೀನು,
ತಿದ್ದಿ ಹೇಳಲು ಮನಕೆ ಬಂದು ಎಚ್ಚರಿಸುವವನು ನೀನು ||೪|| ಅದ ಕಾರಣ ಹೇ||

ನಿರಾಕಾರವಾಗಿದ್ದು ಎಚ್ಚರಿಸುತ್ತಿರುವೆ ನೀನು,
ಸರಳ ರೀತಿಯ ಜೀವನಕೆ ಕಾರಣ ನೀನು,
ಮನದಲಿ ಶಾಂತಿ ನೆಲೆಸಲು ಕಾರಣ ನೀನು,
ಕಷ್ಟ ಕಾರ್ಪಣ್ಯಗಳಲ್ಲಿ ಸಹಾಯ ಮಾಡಿದವನು ನೀನು ||೫|| ಅದ ಕಾರಣ ಹೇ||

ಅಪಮೃತ್ಯವಿನಿಂದ ಕಾಪಾಡಿದವನು ನೀನು,
ಅನಾರೋಗ್ಯವನು ನಿವಾರಿಸಿದವನು ನೀನು,
ಅಂತರ್ಮುಖಿಗೆ ಮನವ ತಿರುಗಿಸಿದವನು ನೀನು,
ದುರ್ಜನರ ಸಂಗದಿಂದ ದೂರವಿಡಲು ಕಾರಣ ನೀನು ||೬|| ಅದ ಕಾರಣ ಹೇ||

ಮನಸು ಅಂತರ್ಮುಖಿಯಾಗಲು ಕಾರಣ ಕರ್ತನು ನೀನು,
ಮನಸು ಚಿಂತನದ ಕಡೆಹರಿಯಲು ಕಾರಣ ನೀನು,
ಮನಸು ಗಾಳಿಯಷ್ಟು ಹಗುರವಾಗಳು ಕಾರಣ ನೀನು,
ಮನಸಿನಲ್ಲಿ ಸದಾ ನಿನ್ನ ನೆನಪೇ ಇರಲು ಕಾರಣ ನೀನು ||೭|| ಅದ ಕಾರಣ ಹೇ||

ನಾನಾ ನಾಮಗಳಲ್ಲಿ ನಿನ್ನ ಭಜಿಸಲು ಕಾರಣ ನೀನು,
ನಾನಾ ರೂಪಗಳಲ್ಲಿ ತೋರುತ ಭಕ್ತಿ ಹೆಚ್ಚಿಸಿದವನು ನೀನು,
ಸಕಲ ಜೀವರಾಶಿಗಳಲ್ಲಿ ನಿನ್ನ ಇರುವಿಕೆಯನ್ನು ತೋರಿಸಿದವನು ನೀನು,
ಎನ್ನ ಹೃದಯದಲ್ಲಿ ನಿನ್ನ ಇರುವಿಕೆಯನ್ನು ತೋದಿಸಿದವನು ನೀನು ||೮|| ಅದ ಕಾರಣ ಹೇ||

ಸಂಕುಚಿತ ಮನೋಭಾವವ ಕಿತ್ತೊಗೆದವನು ನೀನು,
ವಿಶಾಲ ಹೃದಯವ ಬೆಳೆಯಲು ಕಾರಣನು ನೀನು,
ಎಲ್ಲ ನಾಮಗಳಲಿ ನಿನ್ನ ಪೂಜಿಸಲು ಕಾರಣನು ನೀನು,
ವಿಶ್ವದಾಕಾರದಲ್ಲಿ ನಿನ್ನ ಕುರುಹಾಗಿ ಲಿಂಗವ ಕೊಟ್ಟವನು ನೀನು ||೯|| ಅದ ಕಾರಣ ಹೇ||

ಎನ್ನ ಕಾಮ-ಕ್ರೋಧಕ್ಕೆ ಕಡಿವಾಣ ಹಾಕಿದವನು ನೀನು,
ಎನ್ನ ಲೋಭ-ಮೋಹಕ್ಕೆ ಅಂಕುಶ ಹಾಕಿದವನು ನೀನು,
ಎನ್ನ ಮದ-ಮತ್ಸರವ ಕಿತ್ತೊಗೆದವನು ನೀನು,
ಎನ್ನ ಅಹಂಕಾರಕ್ಕೆ ಶಿಕ್ಷೆ ಕೊಟ್ಟವನು ನೀನು ||೧೦|| ಅದ ಕಾರಣ ಹೇ||

ಮಡದಿ-ಮಕ್ಕಳ, ಸುಪ್ರಭಾತ ಪೂಜೆಗೆ ಕಾರಣನು ನೀನು,
ಲಿಂಗರೂಪದಿ ಬಂದು ಸದಾ ಎಚ್ಚರಿಸುತ್ತಿರುವೆ ನೀನು,
ಚಿಂತನ ರೂಪದಲ್ಲಿ ತತ್ವಜ್ಞಾನಿ ಆಗಿ ಬಂದವನು ನೀನು,
ಮಾರ್ಗದರ್ಶಿ, ಸ್ನೇಹಿತನಾಗಿ ಸದಾ ಜೊತೆ ಇರುವೆ ನೀನು ||೧೧|| ಅದ ಕಾರಣ ಹೇ||

30.11.1993 -3.30 a.m
97.ಕಂಡೆ ! ನಾ ದೇವನ ಕಂಡೆ!! ಭಕ್ತರೇ,
ನಾ ಕಂಡೆ! ಆ ದೇವನಾ ಕಂಡೆ|| ಪ||

ಜಾತ್ರೆಗಳಲಿ, ಬಡ ಭಕ್ತರ ಭಕ್ತಿ ನಿಷ್ಠೆಯಲಿ ಕಂಡೆ,
ಭಕ್ತರ ಹರಕೆ, ಆಚಾರ ಅನುಷ್ಟಾನಗಳಲ್ಲಿ ಕಂಡೆ,
ಭಕ್ತರ ಭಜನೆಗಳಲ್ಲಿ ಅಡಗಿರುವುದ ಕಂಡೆ,
ಭಕ್ತರ ದಾನ ಧರ್ಮ ಕಾರ್ಯದಲ್ಲಿ ನಿನ್ನ ಕಂಡೆ ||೧||

ಜಾತ್ರೆ-ಪರಿಷೆಗಳಲ್ಲಿರುವ ಪ್ರತಿ ಭಕ್ತರಲ್ಲಿದ್ದುದ ಕಂಡೆ,
ಉಪವಾಸ ಗೈದು ನೈಜ ಭಕ್ತಿ ಇರುವ ಭಕ್ತರಲಿ ಕಂಡೆ,
ಹರಕೆ ಪೂರೈಸಲು ಬಂದಿರುವ ಭಕ್ತರ ಮನದಲಿ ಕಂಡೆ,
ಭಕ್ತರರ್ಪಿಸುವ ಪ್ರಸಾದದ ಕಣಕಣದಲ್ಲಿ ನಿನ್ನ ನಾ ಕಂಡೆ ||೨||

ಸಕಲ ಜೀವರಾಶಿಗಳ ಚೈತನ್ಯದಲಿ ನಾ ಕಂಡೆ,
ಕಾಯಕದಲಿ ತೊಡಗಿರುವವರ ದೇಹದಲಿ ನಾ ಕಂಡೆ,
ಎಲ್ಲ ಕಡೆ ಹರಡಿರುವ ಹೂ ಪರಿಮಳಗಳಲಿ ನಾ ಕಂಡೆ,
ಸಕಲ ಜೀವರಾಶಿಗಳಿಗೆ ಜೀವನಾಡಿಯಾಗಿರುವ ಗಂಗೆಯೊಳು ನಾ ಕಂಡೆ ||೩||

ಸಾಧು-ಸಂತ-ಜ್ಞಾನಿಗಳ ವಿಚಾರಗಳಲ್ಲಿ ನಿನ್ನ ನಾ ಕಂಡೆ,
ವಚನಕಾರರ ಪದಗಳಲ್ಲಿ ಓಡಾಡಿರುವುದ ನಾ ಕಂಡೆ,
ದಾಸ ಸಾಹಿತ್ಯದ ಪದಗಳಲ್ಲಿ ಅಡಗಿರುವುದ ನಾ ಕಂಡೆ,
ಚಿಂತನಕಾರರ ಮಾತುಗಳಲ್ಲಿ ಹರಡಿರುವುದು ನಾ ಕಂಡೆ ||೪||

ಸಕಲ ಚರಾಚರ ವಸ್ತುವಿನ ಇರುವಿಕೆಯಲಿ ನಾ ಕಂಡೆ,
ವಿಶಾಲ ಹೃದಯದ ಭಕ್ತರ ಮನಸಿನಲಿ ನಾ ಕಂಡೆ,
ತನು ಮನ ಧನದಿಂದ ಸವೆಸುವ ಭಕ್ತರಲ್ಲಿದ್ದುದ ಕಂಡೆ,
ಧನ ದಾನ್ಯ ಆಹಾರ ಕಣಕಣಗಳಲ್ಲಿ ನಾ ಕಂಡೆ ||೫||

ಮುಗ್ಧ ಮಕ್ಕಳ ಆಟ-ಪಾಠಗಳಲಿ ನಾ ಕಂಡೆ,
ಪ್ರಾಣಿ- ಪಕ್ಷಿಗಳ ಓಟ-ಪಹಾರಗಳಲ್ಲಿ ನಾ ಕಂಡೆ,
ಬೆಳಗಿನ ಜಾವದ ಸಮಯದಿ ಪಕ್ಷಿಗಳ ಧ್ವನಿಗಳಲಿ ನಾ ಕಂಡೆ,
ಪ್ರಾಣಿ-ಪಕ್ಷಿಗಳ ಧ್ವನಿಗಳಲ್ಲಿ ಅಡಗಿರುವುದ ಕಂಡೆ||೬||

ವಿಚಾರ-ಮಂಥನಗಳಲ್ಲಿ ಅಡಗಿರುವುದ ನಾ ಕಂಡೆ,
’ಚಿಂತನ’ದಲ್ಲಿ ಬಂದು ಹೋಗುವುದ ನಾ ಕಂಡೆ,
ಸಮಯದ ಸದುಪಯೋಗ ಮಾಡುವವರಲ್ಲಿ ನಾ ಕಂಡೆ,
ಬೆವರು ಹರಿಸಿ ಕಾಯಕದಲ್ಲಿ ತೊಡಗಿರುವವರಲಿ ನಾ ಕಂಡೆ ||೭||

ಬಡಭಕ್ತರ ಮನದಲ್ಲಿ, ಮಾತುಗಳಲ್ಲಿ ನಾ ಕಂಡೆ,
ಬಡ ಭಕ್ತರ ನೈಜ ಪ್ರೀತಿಯಲ್ಲಿ ವಿಶ್ವಾಸಗಳಲಿ ನಾ ಕಂಡೆ,
ಬಡ ಭಕ್ತರ ವಿಶಾಲ ಹೃದಯವಂತಿಕೆಯಲ್ಲಿ ನಾ ಕಂಡೆ,
ಬಡ ಭಕ್ತರ ನೈಜ ಭಕ್ತಿ ಉಪಚಾರಗಳಲ್ಲಿ ನಾ ಕಂಡೆ ||೮||

ನಾನಾ ಫಲಗಳ ರುಚಿಯಲ್ಲಿರುವುದರಲ್ಲಿ ನಾ ಕಂಡೆ,
ವಾಯುವಿನಲ್ಲಿ ಅಡಗಿರುವ ಸುವಾಸನೆಯಲ್ಲಿ ನಾ ಕಂಡೆ,
ಹಾಡುಗಾರರ ಪ್ರತಿಭೆಯಲ್ಲಿ ಅಡಗಿರುವುದ ನಾ ಕಂಡೆ,
ಆಟಗಾರರ ನೈಪುಣ್ಯತೆ-ಪ್ರತಿಭೆಯಲ್ಲಿ ನಾ ಕಂಡೆ ||೯||

4.12.1993- 3.00 a.m
98.ಹೇ ದೇವಾ! ಪರಮಾತ್ಮ ||ಬೇಗ ಬಾ||

ಹೇ ದೇವಾ! ಪರಮಾತ್ಮ || ಬೇಗ ಬಾ||
ಎಲ್ಲಿದ್ದರೂ ಇದ್ದ ಹಾಗೆ ಬೇಗ ಬಾ,
ಸಾಕಾರ ರೂಪವಾಗಿ ಬೇಗ ಬಾ,
ನಮ್ಮ ಕೋರಿಕೆಗಳ ಕೇಳು ಬಾ,
ಸಮಸ್ಯೆಗಳಿಗೆ ಪರಿಹಾರ ನೀಗೂ ಬಾ,
ಓಡಿ ಬಾ, ಎದ್ದು ಬಾ, ರಕ್ಷಣೆಯ ನೀಡು ಬಾ|| ಪ ||

ಮಾನವನ ಮನಸಿನ ಆಸೆ ದುರಾಸೆಗಳು ಕುದಿಯುತ್ತಿರುವುವು,
ಅಹಂಕಾರ ಮನಸಿನಲಿ ಹುಚ್ಚಾಟವಾಡುತ್ತಿಹುದು,
ಕಾಮದಾಟ ಹೆಚ್ಚಾಗಿ ಹತೋಟಿ ತಪ್ಪಿಹುದು,
ಕ್ರೋಧದಾಟ ಮಿತಿಯಾಗಿ ಲಗ್ಗೆ ಹಾಕುತ್ತಿಹುದು ||೧||ಅದಕಾಗಿ ಹೇ ದೇವ||

ಲೋಭ ಮನಸಿನಲ್ಲಿ ಹೆಚ್ಚಿ ನಾಚಿಕೆ ಇಲ್ಲದಂತಾಗಿಹುದು,
ಮೋಹಕ್ಕೆ ಕಡಿವಾಣ ತಪ್ಪಿ ಅತ್ತಲಿತ್ತ ಹೋಗಿಹುದು,
ಮದದ ಹೆಚ್ಚಳತನ ಮೀರಿ ದಾರಿ ಕಾಣದಾಗಿಹುದು,
ಮತ್ಸರಕೆ ಕಣ್ಣು ಇಲ್ಲದಂತಾಗಿಹುದು ||೨|| ಅದಕಾಗಿ ಹೇ ದೇವ||

ವಿಶ್ವದಲಿ ಮಾನವಗೆ ಶಾಂತಿ ಇಲ್ಲವಾಗಿಹುದು,
ನೆಮ್ಮದಿಗಾಗಿ ಹಾಹಾಕಾರದ ಕೂಗು ಹೆಚ್ಚಿಹುದು,
ಮುತ್ಸದ್ದಿಗಳ ಸಲಹೆಗಳು ಬೇಡವಾಗಿಹುದು,
ಚಿಂತನೆಗಳ ವಿಚಾರಗಳು ಬಿಟ್ಟು ಹೋಗಿಹುದು ||೩|| ಅದಕಾಗಿ ಹೇ ದೇವಾ||

ರಾಷ್ಟ್ರಗಳ ಸೃಷ್ಟಿಯ ನೆಪದಲಿ ಬೇಲಿಗಳ ಸಂಖ್ಯೆ ಹೆಚ್ಚಿಹುದು,
ರಾಷ್ಟ್ರ ರಕ್ಷಣೆಗಳ ನೆಪದಲಿ ಹಣದ ಪೋಲು ಹೆಚ್ಚಿಹುದು,
ನೈಜ ಅಭಿವೃದ್ಧಿಗಳು ಕುಂಠಿತವಾಗಿ ಹಿಮ್ಮೆಟ್ಟಿಹುದು,
ಅಧಿಕಾರ ಲಾಲಸೆ ಹೆಚ್ಚಿ ವಿಶ್ವ ಕೊರಗಿ ಹೋಗುತ್ತಿಹುದು ||೪|| ಅದಕಾಗಿ ಹೇ ದೇವಾ||

ನೈಜ ಪ್ರೀತಿ-ಪ್ರೇಮಗಳು ಬರೀ ಕನಸುಗಳಾಗಿಹುದು,
ವಿಜ್ಞಾನದ ದುರುಪಯೋಗದಿಂದ ವಿಶ್ವಕೆ ಬರ ಬಡಿದಿಹುದು,
ದೂರದರ್ಶನದಿಂದಾಗಿ ವೈಚಾರಿಕತೆ ಇಲ್ಲದಂತಾಗಿಹುದು,
ಪರಿಸರದ ದುರ್ಬಳಕೆಯಿಂದಾಗಿ ಪ್ರಕೃತಿಗೆ ಪೆಟ್ಟಾಗಿಹುದು ||೫|| ಅದಕಾಗಿ ಹೇ ದೇವಾ||

ರಾಜಕಾರಣಿಗಳ ಆಟಕ್ಕೆ ಲಂಗು-ಲಗಾಮು ಇಲ್ಲವಾಗಿಹುದು,
ಅಧಿಕಾರಗಳ ಶೋಷಣೆಯ ಮಿತಿ ಇಲ್ಲದಂತಾಗಿಹುದು,
ಕೆಲಸಗಾರರಲ್ಲಿ ಸೋಂಬೇರಿತನ ಹೆಚ್ಚಾಗಿಹುದು,
ಬಹುಜನರಲಿ ಕಾಯಕದ ಕಲ್ಪನೆ ಇಲ್ಲವಾಗಿಹುದು ||೬|| ಅದಕಾಗಿ ಹೇ ದೇವಾ||

ವಿದ್ಯಾರ್ಜನೆಯ ಗುರಿ-ರೀತಿ ಇಲ್ಲವಾಗಿಹುದು,
ವ್ಯಾಪರದಲ್ಲಿ ಹಣದ ದುರಾಸೆ ಹೆಚ್ಚಿ ಬೆರಕೆ ಆಗಿಹುದು,
ಎಲ್ಲಿ ನೋಡಿದರಲ್ಲಿ ಅರಾಜಕತೆ ಎದ್ದು ನಿಂತಿಹುದು,
ನಿನ್ನ ಪೂಜಿಸುವ ನೆಪದಲ್ಲೂ ನಾಟಕ ನಡೆಯುತ್ತಿಹುದು ||೭|| ಅದಕಾಗಿ ಹೇ ದೇವಾ||

ಸತ್ಯ ನಡೆವವರಿಗೆ ಕಾಲವಿದಲ್ಲವಾಗಿಹುದು,
ಸತ್ಯ ಶೀಲರಿಗೆ ವಿಶ್ವ ಮಿಥ್ಯ ಎಂದೆನಿಸಿಹುದು,
ಸರಳ ಜೀವನಕ್ಕೂ ಅಡ್ಡ ಬರುತಿಹುದು ಸಮಾಜ,
ಬುದ್ಧಿ ಜೀವಿಗಳು ಸಲಹೆ ನೀಡಲು ದೂರವಾಗಿಹುದು ||೮|| ಅದಕಾಗಿ ಹೇ ದೇವಾ||

ಬಡತನ ನೀ ಕೊಟ್ಟ ಶಾಪ ಎಂದು ಹೊರೆಸಿತು ಸಮಾಜ,
ರೋಗ-ರುಜಿನ ಹಿಂದಿನ ಜನ್ಮದ ಫಲ ಎಂದು ವರ್ಣಿಸಿತು ಸಮಾಜ,
ದಾರಿದ್ರ್ಯತೆ ಪಾಪ ಕರ್ಮದ ಫಲ ಎಂದು ಹೇಳಿತು ಸಮಾಜ,
ಅವೈಚಾರಿಕತೆಯಿಂದ ಬಳಲುತ್ತಿಹುದು ಸಮಾಜ ||೯|| ಅದಕಾಗಿ ಹೇ ದೇವಾ||

ಅನಾಗರೀಕತೆಯಿಂದ ನಡೆಯುತ್ತಿದೆ ಸಮಾಜ,
ಅವೈಜ್ಞಾನಿಕತೆಯಿಂದ ಮುನ್ನೆಡೆಯುತ್ತಿದೆ ಸಮಾಜ,
ಅಕಾರಣಗಳಿಗೆಲ್ಲ ಹಣವ ವ್ಯಯಯಿಸುತ್ತಿದೆ ಸಮಾಜ,
ಅಪ್ರಕೃತ ಕಾರಣಗಳಿಗೆ ವೆಚ್ಚ ಮಾಡುತ್ತಿದೆ ಸಮಾಜ, ||೧೦|| ಅದಕಾಗಿ ಹೇ ದೇವಾ||

ಕೆಲವು ಚಿಂತಕರು ಸಮಾಜದಿಂದ ದೂರ ಸರಿದಿಹರು,
ಬುದ್ಧಿ ಜೀವಿಗಳು ಸಮಾಜದಿಂದ ಬಿಟ್ಟು ಹೋಗಿಹುರು,
ಸಾಧು-ಸಂತರು-ಜ್ಞಾನಿಗಳು ಸಮಾಜವ ಮರೆತಿಹರು,
ಕೆಳವು ಚಿಂತಕರು ಕಾರ್ಯ ಸಾಧನೆಯಲ್ಲಿ ಸೋತಿಹರು ||೧೧|| ಅದಕಾಗಿ ಹೇ ದೇವಾ||

17.12.1993-9.30 p.m.
99. ವ್ಯಾಪರ ಮಾಡೋಣ, ಬನ್ನಿರೀ,
ಭಕ್ತರೇ ವ್ಯಾಪಾರ ಮಾಡೋಣ, ಬನ್ನಿರಿ ||ಪ||
ಆ ದೇವನ-ನೈಜ ದೇವನ ಪರಮಾತ್ಮನೊಡನೆ ||ಪ|| ಪಾ||

ಭಕ್ತಿ ಎಂಬ ದವಸವು ಬೇಕು ದೇವಗೆ,
ಪ್ರೀತಿ ಎಂಬ ಧಾನ್ಯವು ಬೇಕು ದೇವಗೆ,
ನೀತಿ ಎಂಬ ಸಾಮಾನುಗಳು ಬೇಕು ದೇವಗೆ,
ಆದಕಾರಣ ಇವೆಲ್ಲವ ಆ ದೇವಗೆ ಕೊಟ್ಟು ||೧||

ವಿಶ್ವಾಸ ಎಂಬ ಅರಿವೆ ಬೇಕು ದೇವಗೆ,
ನಂಬಿಕೆ ಎಂಬ ಎಣ್ಣೆ ಬೇಕು ದೇವಗೆ,
ತಾಳ್ಮೆ ಎಂಬ ಡಬ್ಬ ಬೇಕು ದೇವಗೆ,
ಆದಕಾರಣ ಇವೆಲ್ಲವ ಆ ದೇವಗೆ ಕೊಟ್ಟು ||೨||

ಶ್ರದ್ಧೆ ಎಂಬ ದಾರವು ಬೇಕು ದೇವಗೆ,
ನ್ಯಾಯ ಎಂಬ ತಕ್ಕಡಿ ಬೇಕು ದೇವಗೆ,
ನಿಷ್ಟೆ ಎಂಬ ಬಟ್ಟಲು ಬೇಕು ದೇವಗೆ,
ಆದಕಾರಣ ಇವೆಲ್ಲವ ಆ ದೇವಗೆ ಕೊಟ್ಟು ||೩||

ಕಾಮದ ವಾಸನೆ ಹಚ್ಚದೇ,
ಕ್ರೋಧವ ಕೊಳಕು ಬೆರೆಸದೇ,
ಲೋಭದ ನಾರುಗಳ ಸೇರಿಸದೇ
ಅಚ್ಚ ಭಕ್ತಿಯ ಧವಸವ ದೇವಗೆ ಕೊಟ್ಟು ||೪||

ಮೋಹ ಎಂಬ ಜಿದ್ದು ಬೇರಸದೇ,
ಮದ ಎಂಬ ಮರಳು ಸೇರಿಸದೇ,
ಮತ್ಸರ ಎಂಬ ಕಲ್ಲು ಬೆರಸದೇ,
ಅಚ್ಚ ನೈಜ ಪ್ರೀತಿಯ ಧಾನ್ಯವ ಕೊಟ್ಟು ದೇವಗೆ ||೫||

ಆಸೆ ಎಂಬ ಧೂಳು ಸೇರಿಸದೇ,
ದುರಾಸೆ ಎಂಬ ವಿಷ ಕಲಸದೇ,
ತಾತ್ಸಾರ ಎಂಬ ಕೊಳಕು ಮಾಡದೇ,
ಅಚ್ಚ ನೀತಿ ಎಂಬ ಸಾಮಾನುಗಳ ದೇವಗೆ ಕೊಟ್ಟು ||೬||

 

೨೨.೦೧.೧೯೯೩.
೧. ಜಗತ್ತು ಮತ್ತು ದೇವರು :
ದೇವರ ಸೃಷ್ಟಿಯೇ ಜಗತ್ತು,
ಪರಿಸರಗಳು, ಜೀವಕೋಶಗಳು, ಜೀವರಾಶಿಗಳು
ಸಕಲವು ಕಚ್ಚಾ ಸಾಮಗ್ರಿಗಳು,
ಮಾನವನೇ ಶಿಲ್ಪಿ ಇದಕ್ಕೆ,
ಮಾನವನೇ ಮಾಡಬೇಕು ಈ ವಿಶ್ವವ
ಒಂದು ಸುಂದರ ತಾಣ-ದೇವನಿಗೆ.
ಸಾಕರ ರೂಪವಾಗಿ ಬಂದು ಇರಲಿಕೆ
ಪ್ರತಿ ಜೀವರಾಶಿಗಳಲಿ, ಮಾನವ ಹೃದಯದಲಿ,
ದೇವನಿದ್ದಾನೆಂದು ತೋರಿಸಲಿಕೆ,
ಇದು ಸಾಧ್ಯ ಮಾನವನಿಂದ ಮಾತ್ರ,
ಅರಿಷಡ್ವರ್ಗ ರಹಿತನಾಗಿ,
ಭವ ಬಂದನದಿಂದ ದೂರನಾಗಿ,
ಏಕಾಗ್ರತೆಯಿಂದ ನಿಷ್ಟೆಯಿಂದ,
ಭಕ್ತಿಯ ಲೇಪನವ ಶಿಲ್ಪಿಯ ಕಾಯಕಕ್ಕೆ ಮಾನವ ಕೊಟ್ಟನಾದರೆ,
ದೇವಲೋಕವಾಗುವುದು ಈ ಜಗತ್ತು,
ನೆಮ್ಮದಿ ಮತ್ತು ಶಾಂತಿ ನೆಲೆಸುವುದು,
ಸಕಲ ಜೀವರಾಶಿಗಳ ಹೃದಯದಲಿ,
ನೋಡಬೇಕು ಆಗ ದೇವರ ಸಾಕಾರ ರೂಪ.

23-01-1993
೨. ದೇವರು ಎಲ್ಲಿದ್ದಾನೆ ? :
ತುಪ್ಪವು ಹಾಲಿನಲ್ಲಿದ್ದಂತೆ,
ಬೆಂಕಿಯು ಮರದಲ್ಲಿದ್ದಂತೆ,
ದೇವರು ಎಲ್ಲೆಲ್ಲೂ ಒಂದಲ್ಲ ಒಂದು ರೀತಿಯಲ್ಲಿರುತ್ತಾನೆ.
ಮಾನವನ ಮನಸ್ಸಿನಲ್ಲಿರುತ್ತಾನೆ.
ನಾನ ರೀತಿಯ ಸಂಸ್ಕಾರ ಮಾಡಿದ ಮೇಲೆ
ಹಾಲಿನಿಂದ ತುಪ್ಪ ಬರುವ ಹಾಗೆ,
ಮರದಿಂದ ಬೆಂಕಿ ಬರುವ ಹಾಗೆ,
ಮಾನವ ಅವನ ಮನಸ್ಸಿಗೂ ’ಚಿಂತನ’ದಿಂದ ಸಂಸ್ಕಾರ ಮಾಡಿದರೆ,
ಆ ನಂತರ ಭವ ಬಂಧನದಿಂದ ದೂರ ಇದ್ದರೆ,
ಅರಿಷಡ್ವರ್ಗದ ವಾಸನೆಯಿಂದ ದೂರ ಇದ್ದರೆ,
ಮನದಲ್ಲಿಯೇ ಕಾಣುವನು ಆ ದೇವರ ಈ ಮಾನವ,
ಉದಾಹರಣೆಗೆ ಬುದ್ಧ, ಬಸವ, ಸರ್ವಜ್ಞ, ಗಾಂಧಿ, ಶ್ರೀ ರಾಘವೇಂದ್ರರು,
ಪುರಂದರದಾಸರು, ಕನಕದಾಸರು, ಶ್ರೀ ಸಿದ್ಧಲಿಂಗೇಶ್ವರರು,
ಶ್ರೀ ಮಲೈ ಮಹದೇಶ್ವರರು ಇತ್ಯಾದಿ ಇತ್ಯಾದಿ.
ಮನಸ್ಸನ್ನು ಮರ್ಕಟತನದಿಂದ ದೂರ ಇರಿಸಿದಾಗ, ಭಕ್ತಿಯ ಲೇಪನ ಮಾಡಿದಾಗ,
’ಚಿಂತನದ’ ಸವಿಯೂಟ ಬಡಿಸಿದಾಗ,
ಆಗ ಮಾನವನು ಆಗುವನು ದೇವ ಮಾನವ,
ಕಾಣುವನು ದೇವರ ಸಕಲ ಜೀವರಾಶಿಗಳಲಿ.

೩. ದೇವರಾಟ : ಮಾನವ ಅವನ ಮನಸ್ಸಿನ ರೀತಿಯಲ್ಲಿ ನಡೆದರೆ,
ಆ ಮನಸ್ಸು ’ದೇವನ’ ಹತೋಟಿಯಲ್ಲಿದೆ.
Man is being controlled by MIND, but MIND is being
always controlled by GOD.

5. ವಿಶ್ವ : ಈ ವಿಶ್ವದಲ್ಲಿರುವ ಮಾನವ ಕುಲವೇ ನಮ್ಮ ಕುಟುಂಬ,
ಸಕಲ ಜೀವರಾಶಿಗಳೇ ಬಂಧು ಬಳಗಗಳು,
ಪರಿಸರಗಳೇ ಆಹಾರ ಸಾಮಾಗ್ರಿಗಳು,
ಮನಸ್ಸು ಕತ್ತಿ ಇದ್ದ ಹಾಗೆ;
ಸದುಪಯೋಗಕ್ಕೆ ಬಳಸಬಹುದು ಅಥವಾ ಸಾಯಿಸುವುದಕ್ಕೂ
ಉಪಯೋಗಿಸಬಹುದು, ಮನಸ್ಸನ್ನು ಅರಿಷಡ್ವರ್ಗದಿಂದ ಲೇಪಿಸಿದರೆ
ಭವ ಬಂಧನಕ್ಕೊಳಗಾಗಿ ಹೀನ ಕೃತ್ಯಕ್ಕೊಳಗಾಗುತ್ತಾನೆ. ಅದೇ ’ಚಿಂತನ’ ದ
ಟಾನಿಕ್ ಲೇಪಿಸಿದರೆ, ದೇವ ಮಾನವನಾಗುತ್ತಾನೆ. ಇದುವೇ ಈ ’ವಿಶ್ವ’ ದ ಒಳಗುಟ್ಟು.

 

27.01.1993
8. ದೇವರ ರಕ್ಷಣೆ : ಬುದ್ಧಿಜೀವಿ ಮಾನವನನ್ನು ಮತ್ತು ಆತನನ್ನು ನಂಬಿರುವ ಇತರೆ ಜೀವರಾಶಿಗಳನ್ನು ಬಿಟ್ಟು, ಇತರೆ ಸಕಲ ಜೀವರಾಶಿಗಳನ್ನು ರಕ್ಷಿಸುವವನು ದೇವರು,
ಆದಾಗ್ಯೂ ಸಹ ಭಕ್ತರಾಗಿರುವ ಮಾನವರನ್ನು ಮಾತ್ರ ರಕ್ಷಿಸುವನು ದೇವರು. ಕಾರಣ
ದೇವರಿಗೆ ಭಕ್ತಿಯೇ ಆಹಾರ ಕೊಟ್ಟು ಕೊಳ್ಳುವ ವ್ಯವಹಾರ ದೇವನದು. ಭಕ್ತಿಯೆಂಬ ಆಹಾರ
ತೆಗೆದುಕೊಂಡು ಭಕ್ತರನು ರಕ್ಷಿಸುವನು ದೇವನು.

9. ಪ್ರತಿಭೆ : ಪ್ರತಿಭೆ [Talent] ಮಾನವನ ಸ್ವಂತ ಸ್ವತ್ತಲ್ಲ. ದೇವರು ಸಕಲ ಜೀವಿರಾಶಿಗಳ
ಮತ್ತು ವಿಶ್ವದ ಅಭಿವೃದ್ಧಿಗೋಸ್ಕರ, ಬುದ್ದಿ ಜೀವಿ ಮಾನವನಿಗೆ ಶಿಲ್ಪಿಯಾಗಲು ಕೊಟ್ಟಿರುವ
ವಿಶೇಷ ಕೊಡುಗೆ. ಈ ’ಪ್ರತಿಭೆಗೆ’, ಅರಿಷಡ್ವರ್ಗಗಳನ್ನು ಮಾನವ ಲೇಪಿಸಿದನಾದರೆ ಮನಸ್ಸು ತುಕ್ಕು ಹಿಡಿದು ಕುಂಠಿತವಾಗುವುದು ವಿಶ್ವದ ಅಭಿವೃದ್ಧಿ; ಸಿಪ್ಪೆ ತಿಂದು ತಿರುಳು ಬಿಸಾಡಿದ ಹಾಗೆ ಇರುವುದು ಉಪಯೋಗಿಸಬೇಕು ಸಮಾಜದ ಏಳಿಗೆಗೆ ಪ್ರತಿಭೆಯ.

28.01.1993
10. ಮನಸ್ಸು : ಗಾಜಿನ ರೀತಿಯಂತಿಹುದು ಮನಸ್ಸು ಭವ ಬಂಧನದಿಂದಾಗಿ ಅರಿಷಡ್ವರ್ಗಗಳ
ಅಂಟಿನಿಂದಾಗಿ ಹೊರ ಬರದಾಗಿದೆ; ಜೀವನ ಸುಗಮವಾಗಿ ದಾಟಲು ಕಾಣದಂತಾಗಿದೆ.
ಚಿಂತನವೆಂಬ ನಾರಿನಿಂದ ’ಭಕ್ತಿ’ಯೆಂಬ ನೀರನ್ನು ಹಾಕಿ ಚೆನ್ನಾಗಿ ಗಾಜಿನ ಮನಸ್ಸನ್ನು ಉಜ್ಜಿ ತೊಳೆದೆಯಾದರೆ, ಮನಸ್ಸು ಸ್ವಚ್ಛವಾಗಿ, ತಿಳಿಯಾಗಿ ಆಗಿ, ಅರಿಷಡ್ವರ್ಗಗಳು, ಭವ ಬಂದನಗಳು ದೂರಾಗಿ, ಅಂತರಂಗ ಬಹಿರಂಗಗಳ ವ್ಯತ್ಯಾಸಗೊತ್ತಾಗಿ, ನೆಮ್ಮದಿಯ ಮತ್ತು ಶಾಂತಿಯ ಕಡೆಗೆ ಕರೆದೊಯ್ಯುವುದು ಮನಸ್ಸು. ಭಕಿಯಲಿ ಬೇಡಿದಾಗ ಭಕ್ತನಿಗೆ ಸಿಗುವುದು ಮೋಕ್ಷ.
ಕೆಲವು ಸಲ ಆಗುವನು ಮಾನವ ದೇವ ಮಾನವ.
12. ಅರಿಷಡ್ವರ್ಗ : ಹೊರಗಿನ ತೆಂಗಿನ ಮೊಟ್ಟೆಯೇ ಅರಿಷಡ್ವರ್ಗ ;
ಎಳನೀರು ಭಕ್ತಿ; ಗಂಜಿ ’ಚಿಂತನ’ವೆಂಬ ಟಾನಿಕ್,
ರುಚಿಯೇ ದೇವರು.

13. ಒಳಗುಟ್ಟು : ಗಾಜು ’ಮನಸ್ಸು’ ಆದರೆ,
ಹೊರಗಿನ ಚೌಕಟ್ಟು ಭವ ಬಂಧನ,
ಅರಿಷಡ್ವರ್ಗಗಳು ಗಾಜಿಗೆ ಅಂಟಿರುವ ಕೊಳಕು,
ಭಕ್ತಿಯೆಂಬುದು ನೀರು,
’ಚಿಂತನ’ವೆಂಬುದು ನಾರು,
ಉಜ್ಜಿ ತೊಳೆದರೆ, ಹೊರಹೋಗುವುವು ಅರಿಷಡ್ವರ್ಗಗಳು;
ಅಂತರಂಗ ಕಾಣುವುದು, ಆಗ
’ಬಹಿರಂಗ’ದಾಟ ನಡೆಯದು,
ಶಾಂತಿ ನೆಮ್ಮದಿಗಾಗಿ ಹುಡುಕುವುದು ಮನಸ್ಸು
ಸಿಕ್ಕಿದೆಯಾದರೆ ಮಾನವ-ದೇವಮಾನವ
ಇದುವೇ ಜೀವನದ ಒಳಗುಟ್ಟು.

 

22.4.1993
18. ದೇವರು ಕಲ್ಪನೆ : ತೆಂಗಿನಕಾಯಿಯ, ಹೊರಗಿನ ಕವಚ ಅರಿಷಡ್ವರ್ಗವಾದರೆ,
ಆಗ ಎಳನೀರು ಭಕ್ತಿಯಾಗುವುದು, ಒಳಗಿನ ಗಂಜಿಯು ಚಿಂತನವಾಗುವುದು,
’ದೇವರು’ ರುಚಿಯಾಗಿ ಬಂದು ತೃಪ್ತಿ ಕೊಡುವನು.

24.5.1993
19. ದೇವರು-ಮೋಕ್ಷ : ದುಡಿಯುವ ಸಂಸ್ಥೆಯೇ ದೇವರು,
ಹೃದಯವೇ ದೇಗುಲ, ಕಾಯಕವೇ ಪೂಜೆ,
ಸಂಸ್ಥೆಯ ಅಭಿವೃದ್ಧಿಯ ಬಗ್ಗೆ ಮಾಡುವ ಯೋಚನೆಯೇ ಸ್ನಾನ,
ಏಕಾಗ್ರತೆಯೇ ಮಂತ್ರ, ಕಳಂಕ ರಹಿತ ಸೇವೆಯೇ ವ್ರತ ನಿಯಮಗಳು,
ಸದ್ಭಾವನೆಯೇ ಭಕ್ತಿ, ಸಲಕರಣೆಗಳೆ ಪುಷ್ಪಗಳು,
ನಿಷ್ಟೆಯೇ ತೀರ್ಥ, ಪ್ರತಿಫಲಗಳೇ ಪ್ರಸಾದ,
ಆನಂದದ [ನಿವೃತ್ತಿಯೇ] ಮರಣವೇ ಮೋಕ್ಷ.

 

22.9.1999-6.10 a.m.
ಈ ಮಾನವ ಜೀವನ ಏತಕ್ಕೊ?? : ಈ ಮಾನವ ಜೀವನ ಏತಕ್ಕೊ?? ಹೃದಯದಲಿ ನೆಲೆಸಿರುವ ಆ ದೇವ ಚೇತನವ ಮಾನಸಿಕವಾಗಿ ಸದಾ ಪೂಜಿಸದ ಮೇಲೆ ಈ ಮಾನವ ಜೀವನ ಏತಕ್ಕೊ???

ಸಕಲ ಜೀವರಾಶಿಗಳ ಹೃದಯದಲಿ ನೆಲೆಸಿರುವ, ಪರಮಾತ್ಮನಂಶ ಜೀವಾಂಶದ ದೇವ ಚೇತನವ ಮನದಲಿ ಸದಾ ನೆನೆಸದೆ, ಕಾಲ ಕಳೆಯುವ ಈ ಮೂಡ ಜನರ ಜೀವನ ಏತಕ್ಕೊ???

ಏಕ ಮನಸ್ಕನಾಗಿ ನಂಬಿ, ಮಾನಸಿಕವಾಗಿ ಸದಾ ಪೂಜಿಸಿದೆಡೆ, ಆಗ ದೇವ ಚೇತನ ಸದಾ ಬೆಂಬಲಿಗನಾಗಿದ್ದು, ನಮ್ಮ ಕಾಪಾಡುವ ಸಲಹುವ, ಮಾರ್ಗದರ್ಶಿ ಆಗಿರುವ ಸ್ನೇಹಿತನಾಗಿರುವ, ತತ್ವಜ್ಞಾನಿ ಆಗಿ ಸಲಹೆ ನೀಡುವ -ಹೀಗಿರುವ ಆ ಹೃದಯ ದೇವ ಚೇತನ ನೆನೆಸದೆ ಇರುವ ಈ ಜೀವನ ಏತಕೊ?? ಅದೇತಕೊ??

ಹರಕೆ ಕೇಳದ, ಹಣವ ಕೇಳದ, ವ್ರತವ ಕೇಳದ, ತನುವ ಹಿಂಸಿಸದ, ಪೂಜಾದಿ ನಿಯಮಗಳನು, ಕೇಳದ-ಮಾನಸಿಕ ಪೂಜೆ ಮಾತ್ರ ಸದಾ ಕೇಳುವ ಆ ದೇವ ಚೇತನವ ಸದಾ ನೆನೆಸದೆ, ಮಾನಸಿಕವಾಗಿ ಪೂಜಿಸದ ಈ ಜೀವನ ಏತಕೋ??

ನಂಬಬೇಕು ಹೃದಯ ಚೇತನವ ನಂಬಬೇಕು
ನಂಬಬೇಕು ನಾವು ಸದಾ ನಂಬಬೇಕು
ಸದಾ ನಮ್ಮ ಹೃದಯದಲಿ ನೆಲೆಸಿರುವ
ಆ ದೇವ ಚೇತನವ ನಂಬಬೇಕು

ಮಾನಸಿಕವಾಗಿ ಪೂಜಿಸಿ ನಂಬಬೇಕು
ಸದಾ ಮನದಲಿ ನೆನೆಸಿ ನಂಬಬೇಕು
ಭಕ್ತಿಯಿಂದ ಮನ ಅರ್ಪಿಸಿ ನಂಬಬೇಕು,
ಭಯವ ತೊರೆದು ತನುವ ಸವೆಸಿ ನಂಬಬೇಕು.

ಅರಿಷಡ್ವರ್ಗ ರಹಿತನಾಗಿ ಪೂಜಿಸಿ ನಂಬಬೇಕು
ಪರರ ಪೀಡಿಸದೆ ಪೂಜಿಸಿ ನಂಬಬೇಕು,
ಕಾಯಕದಲ್ಲಿದ್ದಾಗ ಮನದಲಿ ಪೂಜಿಸಿ ನಂಬಬೇಕು,
ಏಕಾಗ್ರತೆಯಿಂದ ನಂಬಿ ನಂಬಿ ಪೂಜಿಸಬೇಕು.

03.01.1999 – 2.30 a.m.
ಅರಿಷಡ್ವರ್ಗಗಳು [ಹತೋಟಿ ಮತ್ತು ಒಳಿತು] : ಈ ಜಗತ್ತಿನಲ್ಲಿರುವ ಸಕಲ ಜೀವರಾಶಿಗಳ ಚರಾ ಚರ ವಸ್ತುಗಳ ಸೃಷ್ಟಿಗೆ ಮತ್ತು ಈ ಜಗತ್ತಿನ ಚಾಲನೆಗೆ ದೇವರು ಕಾರಣ. ಪ್ರತಿಯೊಂದು ಸೃಷ್ಟಿಗೂ ಯಾವುದಾದರೊಂದು ಕಾರಣ ಇದ್ದೇ ಇರುತ್ತದೆ. ಕಾರಣವಿಲ್ಲದೆ ದೇವರು ಯಾವ ಜೀವಿಯನ್ನು ಸೃಷ್ಟಿಸಿಲ್ಲ. ಈ ಕಾರಣ ತಿಳಿದುಕೊಳ್ಳುವ ಶಕ್ತಿ ಮಾನವ ಜೀವರಾಶಿಗೆ ಮಾತ್ರ ಸಾಧ್ಯವಾಗಿದೆ. ಕಾರಣ -೮೪ ಲಕ್ಷ ಜೀವರಾಶಿಗಳಲ್ಲಿ ಮಾನವ ಜೀವರಾಶಿಗೆ ಮಾತ್ರ ವಿಚಾರಮಾಡುವಂತಹ ಶಕ್ತಿ ಮತ್ತು ಯೋಚನಾಶಕ್ತಿಯನ್ನು ದೇವರು ಕೊಟ್ಟಿದ್ದಾನೆ. ಈ ವಿಶೇಷ ಶಕ್ತಿ ಮಾನವನಿಗೆ ದೇವರು ಕೊಟ್ಟ ವರ ಮತ್ತು ವಿಶೇಷ ಪ್ರಸಾದ; ಮತ್ತು ಪ್ರತಿ ಮಾನವನಲ್ಲಿಯೂ ಒಂದಲ್ಲ ಒಂದು ರೀತಿಯಲ್ಲಿ ’ಪ್ರತಿಭೆ’ ಎಂಬ ವರಕೊಟ್ಟು ಅಡಗಿಸಿಟ್ಟಿದ್ದಾನೆ. ಈ/ಆ ಪ್ರತಿಭೆಯನ್ನು ಗುರುತಿಸಿ, ಹೊರತೆಗೆದು, ಪ್ರೋತ್ಸಾಹ ಮಾಡಿ ವಿಕಸಿಸುವಂತೆ ಮಾಡಿ, ಸಮಾಜದ ಒಳಿತಿಗಾಗಿ, ವಿಶ್ವದ ಅಭಿವೃದ್ಧಿಗಾಗಿ, ಜೀವರಾಶಿಗಳ ಚರಾಚರ ವಸ್ತುಗಳ ಏಳಿಗೆಗಾಗಿ ಮಾಡುವ ಕಾರ್ಯಗಳನ್ನು ಮತ್ತೊಬ್ಬ ಮಾನವನೇ ಮಾಡಬೇಕು. ಆ ದೇವರೇ ಬಂದು ಈ ಮನಸ್ಸನ್ನು ಕೊಡಬೇಕು.

ಈ ಪ್ರತಿಭೆಗಳನ್ನು ’ಅರಿಷಡ್ವರ್ಗಗಳ ಸೋಂಕಿಲ್ಲದೆ ಮಾನವ ಉಪಯೋಗಿಸುವುದಾದರೆ, ಈಗ ಜಗತ್ತಿನಲ್ಲಿ ಆಗುತ್ತಿರುವ ಸಮಸ್ಯೆಗಳಿಗೆಲ್ಲ ಉತ್ತರ ಸಿಗುತ್ತದೆ. ಆಗ ಈ ಜಗತ್ತು ದೈವ ಜಗತ್ತು ಆಗಿ ದೇವನೇ ಮಾನವರೂಪನಾಗಿ ಬಂದು ನೆಲೆಗೊಳ್ಳಿಸಬಹುದು-ನೆಲೆಗೊಳ್ಳೂತ್ತಾನೆ. ಇದರಲ್ಲಿ ಸಂಶಯವಿಲ್ಲ. ಎರಡು ಮಾತಿಲ್ಲ. ಸಮಸ್ಯೆಗಳೆಲ್ಲಾ ತಾನೇ ತಾನಗಿ ಬಗೆಹರಿದುಕೊಳ್ಳುತ್ತದೆ. ಹೊಸ ಹೊಸ ಸಮಸ್ಯೆಗಳೂ ಸೃಷ್ಟಿಯಾಗಲಿಕ್ಕೆ ಸಾಧ್ಯವಾಗುವುದಿಲ್ಲ. ಅರಿಷಡ್ವರ್ಗಗಳ ಹತೋಟಿಯು ಸಮಸ್ಯೆಯನ್ನು ಬಗೆಹರಿಸುತ್ತದೆ.

ಈಗ ಮಾನವನಲ್ಲಿ ಅರಿಷಡ್ವರ್ಗಗಳು ಪ್ರತಿ ಮಾನವನ ಕೆಲಸದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಬಂದು ಸಮಸ್ಯೆಗಳ ಹಗರಣಗಳನ್ನೇ ಏರ್ಪಡಿಸಿದೆ. ಕೋಟ್ಯಾನು ಕೋಟಿ ಸಮಸ್ಯೆಗಳಿಗೆ ಕಾರಣವಾಗಿದೆ. ಇದರಿಂದ ಜಗತ್ತಿನಲ್ಲಿ ಅಶಾಂತಿ ವ್ಯಾಪಿಸಿ, ಸಕಲ ಜೀವರಾಶಿಗಳಿಗೆ ಮತ್ತು ಚರಾಚರ ವಸ್ತುಗಳಿಗೆ ಬಹಳ ದೊಡ್ಡ ಪೆಟ್ಟು ಬಿದ್ದಿದೆ. ಜಗತ್ತಿನಲ್ಲಿ ಶಾಂತಿ ನೆಲೆಗೊಳ್ಳಬೇಕಾದರೆ ’ಅರಿಷಡ್ವರ್ಗಗಳ ಹತೋಟಿ’ ಯಿಂದ ಮಾತ್ರ ಸಾಧ್ಯ. ಈ ಹತೋಟಿಯು ಮಾನವನನ್ನು ಬಹಳ ಸಹಕಾರಿಯನ್ನಾಗಿ ಮಾಡುತ್ತದೆ.

ಈ ಅರಿಷಡ್ವರ್ಗಗಳ ಹತೋಟಿಯಿಂದ ಮಾತ್ರ ಮಾನವ ವಿಶ್ವ ಮಾನವನಾಗಲೂ ಸಾಧ್ಯ, ದೇವ ಮಾನವನೂ ಆಗಬಹುದು ಮತ್ತು ಜೀವಾತ್ಮ ಪರಮಾತ್ಮನೊಂದಿಗೆ ಬೆರೆಯಬಹುದು ಅಂದರೆ ಮೋಕ್ಷ ಸಾಧ್ಯ.

ಶಿವಶರಣರ, ದಾಸರ, ಸಾಧು ಸಂತರುಗಳ ಸನ್ಯಾಸಿಗಳ, ಜೀವನದ ಶೈಲಿಯೇ ಇದಕ್ಕೆ ಜ್ವಲಂತ ಉದಾಹರಣೆಗಳು.

 

7.01.1995 - 5 a.m. Kunigal
ನನ್ನ ಅನಿಸಿಕೆಗಳು : ಆತ್ಮವೆಂಬುದೊಂದು ಬೆಲೂನ್, ಜೀವನವೇ ಅದರ ದಾರ, ಸೂತ್ರದಾರಿ ’ಆ ದೇವ’ ನಲ್ಲಿಹುದು ಈ ದಾರ.

ಆಸೆ ಆಕಾಂಕ್ಷೆಗಳೆಂಬ ಭಾರವ ಹಾಕಿದರೆ ಆತ್ಮಕೆ, ಅರಿಷಡ್ವರ್ಗಗಳೆಂಬ ಅಂತನು ಲೇಪಿಸಿದರೆ ಆತ್ಮಕೆ, ಹಾರುವುದಾದರೂ ಎಂತು?
ವಿಶ್ವವ ನೋಡುವುದಾದರೂ ಎಂತು?
ಮನಸು ಹಗುರವಾಗುವುದಾದರೂ ಎಂತು?
ಜೀವನ ಸುಲಲಿತವಾಗುವುದಾದರೂ ಎನಿತು?

ಅದಕಾಗಿ ಬಿಡು ಆಸೆ-ಆಕಾಂಕ್ಷೆಗಳ, ಭಕ್ತಿ ಎಂಬ ಆಯುಧದಿಂದ ಕಿತ್ತು ಎಸೆ ಅರಿಷಡ್ವರ್ಗಗಳ, ಪ್ರೀತಿ-ವಾತ್ಸಲ್ಯ-ಮಮತೆಗಳಿಂದ ತುಂಬು ಆತ್ಮವ,
ಭಜನೆ ಎಂಬ ಗಂಟೆಯಿಂದ ಬಾರಿಸು ಮನವ, ಆಗ ನೋಡು ನೀನು ದೇವನಾಟವ, ಹಗುರವಾಗಿ ಹೋಗುವೆ ಮೇಲಕ್ಕೆ, ಬಹು ಎತ್ತರಕೆ, ನೋಡುವೆ ವಿಶ್ವವ ಪ್ರಕೃತಿಯ ಸೊಬಗ, ಆಸೆ ಆಕಾಂಕ್ಷೆ, ಅರಿಷಡ್ವರ್ಗ ಮತ್ತೆ ಚಿಗುರೊಡೆದಾಗ, ಬೀಳುವೆ ನೀನು ಮೇಲೇಳದ ಹಾಗೆ, ಅದಕಾಗಿ ಕೊಡದಿರು ಅವಕಾಶ ಆಸೆ-ಅರಿಷಡ್ವರ್ಗಕೆ, ಈ ರೀತಿಯಾದರೆ ನೀನು ಹೇ ಮಾನವ, ಸದಾ ಹಾರಡುತ್ತಿರುವೆ ಮೋಕ್ಷವೆಂಬ ಆಕಾಶದಲಿ.

02.06.1995 - 1.30 a.m. Kunigal
ಹೇ ದೇವಾ ! ಈ ನನ್ನ ಸಾಧನೆ- ನನ್ನ ತೃಪ್ತಿಗೆ : ಹೇ ದೇವಾ!! ಈ ನನ್ನ ಸಾಧನೆ-ನನ್ನ ತೃಪ್ತಿಗೆ-ಹೃದಯದಲ್ಲಡಗಿರುವ, ಮನದಲ್ಲಿ ಕುಳಿತಿರುವ ಆ ನಿನ್ನ ತೃಪ್ತಿಗೆ ||ಪ||

ಪುನರ್ಜನ್ಮವಿದೆಯೆಂದು ನಂಬಿರುವೆನು ನಾನು, ಈಗಿನ ಫಲಾಫಲ ಹಿಂದಿನ ಜನ್ಮದ ಪಾಪ ಪುಣ್ಯದ ಫಲ, ಈಗ ಮಾಡುವ ಸತ್ಯ ಕಾಯಕ ಫಲ, ಮುಂದಿನ ಜನ್ಮಕ್ಕಾಗಿ ಕೂಡಿಡುವ ಫಲದ ಬುತ್ತಿ, ಎಂದು ನಂಬಿ ನಡೆಸುತಿರುವೆ ಈ ಜೀವನವ. |೧|

ಅರಿಷಡ್ವರ್ಗಗಳಾಟವ ಕಡಿವೆಗೊಳಿಸಿ, ಕುಣಿಯುವ ಆಸೆಗಳ ಮುದುಡಿ ಅದುಮಿಟ್ಟು, ಸಾಧ್ಯವಾದರೆ ಪರರಿಗೆ ಸಹಾಯ ಮಾಡುತ, ಸಕಲ ಜೀವರಾಶಿಗಳಲಿ, ಸದಾ ಮನದಲಿ ಲೇಸನೇ ಬಯಸುತ, ಬಿಡುವಾದ ಸಮಯದಲಿ ಸದಾ ನಿನ್ನ ಸ್ಮರಣೆ ಮಾಡುತ, ಕಾಲ ಕಳೆಯುವೆನು ನಾನು |೨|

ಭಾವ ಜೀವಿಯಾಗಿರಲು ಒಂಟಿ ಇರಲು ಬಯಸುತ್ತ, ನಿದ್ರೆ ಹೀನತೆ (ನನ್ನ) ವರದಾನ ಎಂದು ಬಯಸುತ,
ಮನವ ಅಂತರ್ಮುಖಿಯಾಗಿಸಿ ಸದಾ (ಆ ದೇವನ) ನಿನ್ನ ಸ್ಮರಿಸುತ,
ಈ ವಿಶ್ವವೇ ಒಂದು ದೇಶವಾಗಲಿ ಎಂದು ಬಯಸುತ,
ಚಿಂತನದಲಿ ಮನವಿಟ್ಟು, ಮನವ ವಿಕಸಿಸಲು ಪ್ರಯತ್ನಿಸುತ,
ಕಾಲ ಕಳೆಯುವೆ ನಾನು. |೩|

ಈ ನನ್ನ ನಡೆ-ನುಡಿ ಮನದಾಟವೆಂದು ನಂಬಿ,
ಈ ಮನದಾಟ ನಿನ್ನ ಕೈಗೊಂಬೆ ಎಂದು ನಂಬಿ,
ಆದುದೆಲ್ಲವೂ ಒಳಿತಕ್ಕೆ ಎಂದು ನಂಬಿ,
ಕಳಂಕ ರಹಿತ ಕಾಯಕಕ್ಕೆ ಈ ದೇಹ ಮೀಸಲಿಟ್ಟು,
ವಿಶ್ವ ಜೀವಿಗಳ ಚಿಂತನೆಯಲಿ ಮನ ತಿರುಗಿಸಿ,
ಸಕಲ ಚರಾಚರ ವಸ್ತುಗಳ ನೋಟ ಆಟಕೆ ಬೆರಗಾಗಿ,
ಹೇ ದೇವಾ! ನಿನ್ನ ಈ ಸೃಷ್ಟಿಗೆ,
ಅದರಲ್ಲಡಗಿರುವ ಸತ್ಯ ಶುದ್ಧ ಕಾಯಕಕ್ಕೆ ತಲೆಬಾಗಿ,
ಸದಾ ನಿನ್ನ ಚಿಂತನೆಯಲಿ ಮುಳುಗುತ ಕಾಲ ಕಳೆಯುವೆ ನಾನು |೪|

ಹುಲಿಯೂರು ದುರ್ಗ ದಲ್ಲಿ ಬರೆದದ್ದು ೧೮.೮.೧೯೯೫-೧೧.೦೦ p.m.

 

PRAY GOD : Be Good- Do Good, Act Good, Think Good, Forget Not GOD.


20.05.1995
ನನ್ನ ಅನಿಸಿಕೆ :- ಜೀವಾತ್ಮ ಮತ್ತು ಪರಮಾತ್ಮ : ಪರಮಾತ್ಮನ ಒಂದು ಅತಿ ಅತಿ ಸಣ್ಣ ಅಂಶವೇ ಜೀವಾತ್ಮ. ಕಿಡಿಯು (ಬೆಂಕಿಯ ಕಿಡಿ) ಕೆಂಡದ ಒಂದು ಭಾಗ ಇದ್ದ ಹಾಗೆ, ಪರಮಾತ್ಮನ ಅಂಶವೇ ಜೀವಾತ್ಮ. ಈ ಜೀವಾತ್ಮದ ವಾಸ ಸ್ಥಾನ ಸಕಲ ಜೀವರಾಶಿಗಳ ಹೃದಯ. ಮಾನವನ ಹೃಧಯದಲ್ಲಿ ಕೂದಲಿನ ೧/೧೦೦೦ ನೇ [ಹತ್ತು ಸಾವಿರ ಭಾಗಗಳಲ್ಲಿ ೧ ಭಾಗ] ಭಾಗದಷ್ಟು ಗಾತ್ರದಲ್ಲಿ ಜೀವಾತ್ಮ ನೆಲೆಸಿದ್ದಾನೆ. ಜೀವ ಇದ್ದಾಗ ಆತ್ಮವನ್ನು ಅರಿಷಡ್ವರ್ಗಗಳು ಆವರಿಸಿದ್ದರೆ, ಆ ಜೀವಿಯು ಮೃತ ಪಟ್ಟಾಗ ಮೋಕ್ಷ ಸೇರದೆ ಪುನಃಜನ್ಮವನ್ನು ಕರ್ಮಾನುಸಾರ ಯಾವುದಾದರೊಂದು ಜೀವಿಯ ರೂಪದಲ್ಲಿ ಅನುಭವಿಸಬೇಕಾಗುತ್ತದೆ. ಆದರೆ ಅದೇ ಜೀವುಯು ಅರಿಷಡ್ವರ್ಗಗಳ ರಹಿತನಾಗಿ ಸದ್ಗುಣಗಳನ್ನು ಹೊಂದಿದ್ದರೆ, ಮೋಕ್ಷದ ಆನಂದವನ್ನು ಜೀವ ಇದ್ದಾಗಲೇ ಅನುಭವಿಸಿ, ಇತರ ಸಕಲ ಜೀವರಾಶಿಗಳಿಗೆ ಆದರ್ಶ ಜೀವಿಯಾಗಿ ಬಾಳುತ್ತಾ ಸದಾ ಆನಂದವಾಗಿ, ನಿತ್ಯಾನಂದನಾಗಿ, ಸಚ್ಚಿದಾನಂದ ಸ್ವರೂಪಿ ಆ ಪರಮಾತ್ಮನ ಪಾದಪದ್ಮಂಗಳಲ್ಲಿ ಸದಾ ಮನಸ್ಸನ್ನು ಸ್ಥಿರದಲ್ಲಿಟ್ಟು, ಮೋಕ್ಷ ಪಡೆಯುತ್ತಾನೆ. ಈ ಅನುಭವ ಅನುಭವಿಸಿರುವ ನೈಜ ಸ್ವರೂಪಿಗಳಿಗೆ ಮಾತ್ರ ಗೊತ್ತು ಇದಕ್ಕೆ ನಿದರ್ಶನ, ಶರಣೆಯರು, ಶರಣರು, ದಾಸರು, ಸಾಧು ಸಂತರುಗಳು ಇತ್ಯಾದಿ ಇತ್ಯಾದಿ.

ಮೋಕ್ಷ ಜೀವಿಗಳನ್ನು ನೋಡಬಹುದಾಗಿದೆ ಸದಾ


 

ಶ್ರೀ ಬಸವಣ್ಣನವರ ವಚನಗಳು [ಮುಖ್ಯವಾದವು]
ಪರಮತತ್ವ ನಿಜ ಸಂಯುಕ್ತರ ಆನು ನೀನೆಂಬ ಶಬ್ದ ಸುಖಿಗಳ ತೋರಾ ಎನಗೆ, ಮಹಾನುಭಾವರ ತೋರಾ ಎನಗೆ ಲಿಂಗೈಕ್ಯರ, ಲಿಂಗ ಸುಖಿಗಳ, ಲಿಂಗ ಗೂಡಾಗಿಪ್ಪವರ, ಲಿಂಗಾಭಿಮಾನಿಗಳ ತೋರಾ ಎನಗೆ. ಆಹೋ ರಾತ್ರಿಯಲ್ಲಿ ನಿಮ್ಮ ಶರಣರ ಸೇವೆಯಲ್ಲಿರಿಸು ಕೂಡಲ ಸಂಗಮ ದೇವಾ.
***
ಅಯ್ಯಾ, ಸಜ್ಜನ ಸದ್ ಭಾವರ ಸಂಗದಿಂದ ಮಹಾನುಭಾವರ ಕಾಣಬಹುದಯ್ಯ, ಮಹಾನುಭಾವರ ಸಂಗದಿಂದ ಶ್ರೀ ಗುರುವನರಿಯಬಹುದು, ಲಿಂಗವನರಿಯಬಹುದು, ಜಂಗಮವನರಿಯಬಹುದು, ಜಂಗಮವನರಿಯಬಹುದು, ಪ್ರಸಾದವನರಿಯಬಹುದು, ಇದು ಕಾರಣ, ಸದ್ ಭಕ್ತರ ಸಂಗವನೆ ಕರುಣಿಸು, ಕೂಡಲಸಂಗಮ ದೇವಾ ನಿಮ್ಮ ಧರ್ಮ.
***
ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ, ಜಲವೊಂದೆ ಶೌಚಾಚಮನಕ್ಕೆ, ಕುಲವೊಂದೆ ತನ್ನ ತಾನರಿದವಂಗೆ, ಫಲವೊಂದೆ ಷಡುದರುಶನ ಮುಕ್ತಿಗೆ, ನಿಲವೊಂದೆ, ಕೂಡಲ ಸಂಗಮದೇವಾ ನಿಮ್ಮ ನರಿದವಂಗೆ.
***
ಉಪವಿಸಬಾರದು ಉಪಮಾತೀತರು, ಕಾಲಕರ್ಮರಹಿತರು, ಭವವಿರಹಿತರು, ಕೂಡಲ ಸಂಗಮದೇವಾ, ನಿಮ್ಮ ಶರಣರು.


ಕೆಂಚ ಕರಿಕನ ನೆನೆದರೆ ಕರಿಕನಾಗಬಲ್ಲನೆ? ಕರಿಕ ಕೆಂಚನ ನೆನೆದರೆ ಕೆಂಚನಾಗಬಲ್ಲನೆ? ದರಿದ್ರ ಸಿರಿವಂತನ ನೆನೆದರೆ ಸಿರಿವಂತನಾಗಬಲ್ಲನೆ? ಸಿರಿವಂತ ದರಿದ್ರನ ನೆನೆದರೆ ದರಿದ್ರನಾಗಬಲ್ಲನೆ? ಮುನ್ನಿನ ಪುರಾತರ ನೆನೆದು ಧನ್ಯನಾದಹೆನೆಂಬ ಮಾತಿನ ರಂಜಕರನೇನೆಂಬ ಕೂಡಲ ಸಂಗಮದೇವಾ?

ಇಂದ್ರಿಯ ನಿಗ್ರಹವ ಮಾಡಿದರೆ ಹೊಂದುವುವು ದೋಷಂಗಳು ಮುಂದೆ ಬಂದು ಕಾಡುವುವು ಪಂಚೇಂದ್ರಿಯಗಳು ! ಸತಿ ಪತಿ ರತಿ ಸುಖವ ಬಿಟ್ಟರೆ ಸಿರಿಯಾಳ ಚಂಗಳೆಯವರು? ಸತಿ ಪತಿ ರತಿಸುಖ ಭೋಗೋಪ ಭೋಗ ವಿಲಾಸವ ಬಿಟ್ಟನೆ ಸಿಂಧು ಬಲ್ಲಾಳನು? ನಿಮ್ಮ ಮುಟ್ಟಿ ಪರಧನ, ಪರಸತಿಯರಿಗೆಳಸಿದರೆ ನಿಮ್ಮ ಚರಣಕ್ಕೆ ದೂರ ಕೂಡಲ ಸಂಗಮದೇವಾ.

ಬೇವಿನ ಬೀಜವ ಭಿತ್ತಿ, ಬೆಲ್ಲದ ಕಟ್ಟೆಯ ಕಟ್ಟಿ, ಆಕಳ ಹಾಲ ನೆರೆದು, ಜೇನು ತುಪ್ಪವ ಹೊಯ್ದರೆ, ಸಿಹಿಯಾಗ ಬಲ್ಲುದೆ ಕಹಿಯಹುದಲ್ಲದೆ? ಶಿವಭಕ್ತರಲ್ಲದವರ ಕೂಡೆ ನುಡಿಯಲಾಗದು ಕೂಡಲ ಸಂಗಮದೇವಾ.

ಮಾರಿ ಮಸಣಿಯೆಂಬವು ಬೇರಿಲ್ಲ ಕಾಣಿರೋ! ಮಾರಿಯೆಂಬುದೇನು? ಕಂಗಳು ತಪ್ಪಿ ನೋಡಿದರೆ ಮಾರಿ, ನಾಲಿಗೆ ತಪ್ಪಿ ನುಡಿದರೆ ಮಾರಿ, ನಮ್ಮ ಕೂಡಲ ಸಂಗಮದೇವರ ನೆನೆಹ ಮರೆದರೆ ಮಾರಿ !

ಆಯುಧವಿಕ್ಕಿದವಂಗೆ ವೀರದ ಮಾತೇಕೆ? ಲಿಂಗವನಂತ ಧರಿಸದವನಿಗೆ ಒಳ ನುಡಿಯೇಕೆ? ಆಯಿದೆ ಅಣಚಿಯಿಲ್ಲದವಳಿಗೆ ಸೌಭಾಗ್ಯದ ಹೂವಿನ ಬೊಟ್ಟೇಕೆ? ಸತ್ಯನಲ್ಲದವಂಗೆ ನಿತ್ಯನೇಮವೇಕೆ? ಕರ್ತಾರ, ನಿಮ್ಮ ಒಲವಿಲ್ಲದವಂಗೆ ಶಂಭುವಿನ ಬಂಧುಗಳೇಕೆ? ಕೂಡಲ ಸಂಗಮ ದೇವಯ್ಯ, ನೀವಿಲ್ಲದವಂಗೆ ಶಿವಾಚಾರದ ಮಾತೇಕೆ?

ಇರುಳೆಂದೇನೊ ಕುರುಡಂಗೆ, ಹಗಲೆಂದೇನೊ ಕುರುಡಂಗೆ, ತಾಳವ ಬಾರಿಸಿದರೇನೋ, ಪಂಚಮಾಹಶಬ್ಧವ ಬಾರಿಸಿದರೇನೊ ಕಿವುಡಂಗೆ, ಕೂಡಲಸಂಗಯ್ಯನ ಪಥವಿನ್ನಾವುದೆಂದರಿಯದವಂಗೆ.

ಉದಕದೊಳಗೆ ಬಚ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು, ಸಸಿಯೊಳಗಣ ರಸದ ರುಚಿಯಂತಿದ್ದಿತ್ತು, ನನೆಯೊಳಗಣ ಪರಿಮಳದಂತಿದ್ದಿತ್ತು, ನಿಮ್ಮ ನಿಲವು ಕೂಡಲ ಸಂಗಮದೇವಾ, ಕನ್ಯೆಯ ಸ್ನೇಹದಂತಿದ್ದಿತ್ತು.

’ಕರಿಘನ ಅಂಕುಶ ಕಿರಿದೆ’ನ್ನಬಹುದೆ? ಬಾರದಯ್ಯ.
’ಗಿರಿಘನ ವಜ್ರ ಕಿರಿದೆ’ನ್ನಬಹುದೆ? ಬಾರದಯ್ಯ.
’ತಮಂದ ಘನ ಜ್ಯೋತಿ ಕಿರಿದೆ’ನ್ನಬಹುದೆ ಬಾರದಯ್ಯ.
’ಮರಹು ಘನ ನಿಮ್ಮ ನೆನೆವ ಮನ ಕಿರಿದೆ’ನ್ನಬಹುದೆ? ಬಾರದಯ್ಯ, ಕೂಡಲ ಸಂಗಮದೇವಾ.


ಅಯ್ಯಾ, ನಿಮ್ಮ ಶರಣನ ಮತ್ಸ್ರ್ಯಕ್ಕೆ ತಂದೆಯಾಗಿ ನೆನೆ ನೆನೆದು ಸುಖಿಯಾಗಿಯಾನು ಬದುಕಿದೆನಯ್ಯ, ಅದೇನು ಕಾರಣ ತಂದೆಯಿಂದರಿದೆನಯ್ಯಾ ಅರಿದರಿದು ನಿಮ್ಮ ಶರಣನು ಆಚರಿಸುವಾಚರಣೆಯ ಕಂಡು ಕಣ್ ದೆರೆದೆನಯ್ಯ, ಕೂಡಲ ಸಂಗಮದೇವಾ.

ಭವಬಂಧನ ಭವಪಾಶವಾದ ಕಾರಣವೇನಯ್ಯ? ಹಿಂದಣ ಜನ್ಮದಲ್ಲಿ ಲಿಂಗವ ಮರೆದನಾಗಿ, ಹಿಂದಣ ಸಿರಿಯಲ್ಲಿ ಜಂಗಮವ ಮರೆದನಾಗಿ ಅರಿದೋಡಿ ಸಂಸಾರವ ಹೊದ್ದಲೀವನ ಕೂಡಲ ಸಂಗಮದೇವಾ.

ಸಂಸಾರ ಸಾಗರನ ತೆರೆಕೊಬ್ಬ ಮುಖದ ಮೇಲೆ ಅಲೆಯುತ್ತಿದ್ದುದೇ ನೋಡಾ! ಸಂಸಾರ ಸಾಗರ ಉರುದುದ್ದವೇ? ಹೇಳಾ! ಸಂಸಾರ ಸಾಗರ ಕೊರಲುದ್ದವೇ? ಹೇಳಾ! ಸಂಸಾರ ಸಾಗರ ಸಿರದುದ್ದವಾದ ಬಳಿಕ ಏನ ಹೇಳುವೆನಯ್ಯಾ? ಅಯ್ಯಾ, ಅಯ್ಯಾ, ಎನ್ನ ಹುಯ್ಯಾ ಕೇಳಯ್ಯಾ ಕೂಡಲ ಸಂಗಮದೇವಾ ನಾನೇನೆವೆನಯ್ಯ?

ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ ಸಂಸಾರವೆಂಬ ರಾಹು ಸರ್ಪಗ್ರಾಸಿಯಾಗಿ ನುಂಗಿತ್ತಯ್ಯ! ಇಂದೆನ್ನ ದೇಹಕ್ಕೆ ಗ್ರಹಣವಾಯಿತು, ಇನ್ನೆಂದಿಗೆ ಮೋಕ್ಷವಹುದೋ ಕೂಡಲ ಸಂಗಮದೇವಾ.

ಇಲಿಗಡಹನೊಡ್ದಿದಲ್ಲಿರ್ಪಂತೆ ಎನ್ನ ಸಂಸಾರ ತನು ಕೆಡುವನ್ನಕ್ಕ ಮಾಣದು ; ಹೆರರ ಭಾದಿಸುವುದು ತನು ಕೆದುವನ್ನಕ್ಕ ಮಾಣದು. ಹೆರರ ಛಿದ್ರಿಸುವುದು ತನು ಕೆದುವನಕ್ಕ ಮಾಣದು ಅಕಟಕಟಾ! ಸಂಸಾರಕ್ಕಾ ಸತ್ತೆ ಕೂಡಲ ಸಂಗಮದೇವಾ.

ಕಪ್ಪೆ ಸರ್ಪನ ನೆಳಲಲ್ಲಿಪ್ಪಂತೆನಗಾಯಿತ್ತಯ್ಯ! ಅಕಟಕಟಾ! ಸಂಸಾರ ವೃಥಾ ಹೋಯಿತಲ್ಲಾ! ಕರ್ತುವೇ ಕೂಡಲ ಸಂಗಮದೇವಾ, ಇವ ತಪ್ಪಿಸಿ ಎನ್ನನು ರಕ್ಷಿಸಯ್ಯಾ.

ಶೂಲದ ಮೇಲಣ ವಿಭೋಗವೇನಾದೊಡೇನೊ? ನಾನಾವರ್ಣದ ಸಂಸಾರ ಹಾವ ಹಾವಡಿಗನ ಸ್ನೇಹದಂತೆ! ತನ್ನತ್ಮ ತನಗೆ ಹಗೆಯಾದ ಬಳಿಕ ಬಿನ್ನಾಣವುಂಟೆ ! ಮಹಾದಾನಿ ಕೂಡಲ ಸಂಗಮದೇವಾ.

ಸಂಸಾರವೆಂಬ ಬಲೆಯಲ್ಲಿ ಸಿಲುಕಿದೆನಯ್ಯ, ಎನ್ನನು ಕಾಯಯ್ಯ ಸಂಗಮದೇವಾ ಹುರುಳಿಲ್ಲ ಹುರುಳಿಲ್ಲ! ಶಿವಧೋ ! ಶಿವಧೋ||

ನಾನೊಂದ ನೆನೆದೊಡೆ ತಾನೊಂದು ನೆನೆವುದು, ನಾವಿತ್ತಲೆಳೆದೊಡೆ ತಾನತ್ತಲೆಳೆವುದು, ತಾ ಬೇರೆಯೆನ್ನನಳಲಿಸಿ ಕಾಡಿತ್ತು, ತಾ ಬೇರೆಯನ್ನ ಬಳಲಿಸಿ ಕಾಡಿತ್ತು, ಕೂಡಲ ಸಂಗನ ಕೂಡಿಸಿಹೆನೆಂದೊಡೆ ತಾನೆನ್ನ ಮುಂದುಗೆಡಿಸಿತ್ತು ಮಾಯೆ!

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ! ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ! ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ! ಇದಾವ ಪರಿಯಲ್ಲಿ ಕಾಡಿತ್ತು ಮಾಯೆ. ಈ ಮಾಯೆಯ ಕಳೆವೋಡೆಯೆನ್ನಳವಲ್ಲ, ನೀವೇ ಬಲ್ಲಿರಿ ಕೂಡಲ ಸಂಗಮದೇವಾ.

ಎನ್ನ ಚಿತ್ತವು ಅತ್ತಿಯ ಹಣ್ಣು, ನೋಡಯ್ಯ, ವಿಚಾರಿಸಿದೊಡೇನೂ ಹುರುಳಿಲ್ಲಯ್ಯ, ಪ್ರಪಂಚನ ಡಂಬಿನಲ್ಲಿ ಎನ್ನನೊಂದು ರೂಹಮಾಡಿ ನೀವಿರಿಸಿದರಿ, ಕೂಡಲಸಂಗಮದೇವಾ.

ಇಂದಿಗೆಂತು ನಾಳಿಗೆಂತು ಎಂದು ಬೆಂದೊಡಲ ಹೊರೆಯ ಹೋಯಿತ್ತೆನ್ನ ಸಂಸಾರ! ಹಿಂದೆ ನಾನಾ ಯೋನಿಯಲ್ಲಿ ಬಂದೆನೆಂಬ ಹೇಯವಿಲ್ಲಾ, ಮುಂದೆ ಮುಕ್ತಿಯಾಗಬೇಕೆಂಬ ಯುಕ್ತಿಯಿಲ್ಲಾ! ಎಂದೆಂದೂ ಸದಾ ಶಿವನ ಕುಂದದೆ ನೆನೆಯಲೀಯದೆ ಕೊಂದುದಯ್ಯ ಈ ಮಾಯೆ ಕೂಡಲಸಂಗಮದೇವಾ.

ದಿಟಪುಟ ಭಕುತಿ ಸಂಪುಟ ನೆಲೆಗೊಳ್ಳದಾಗಿ ಟಿಂಬಕನನಾಡಿಸುತ್ತಿದ್ದಿತಯ್ಯ ನಿನ್ನ ಮಾಯೆ, ಟೀಕವ ಟಿಂಬಕನಾಡಿಸುತಿದ್ದಿತಯ್ಯ ನಿನ್ನ ಮಾಯೆ, ಕೂಡಲ ಸಂಗಮದೇವಯ್ಯ, ಹೊನ್ನ, ಹೆಣ್ಣ ಮಣ್ಣ ತೋರಿ.

ಆಸತ್ತೆ ನಲಸಿದೆನೆಂದೊಡೆ ಮಾಣದು; ಬೇಸತ್ತೆ ಟಿಂಬಿದ್ದೆನೆಂದೊಡೆ ಮಾಣದು; ಏವೆನೇವೆನೆಂದೊಡೆ ಮಾಣದು ಕಾಯದ ಕರ್ಮದ ಫಲ ಭೋಗವು! ಕೂಡಲ ಸಂಗನ ಶರಣರು ಬಂದು ಹೊ, ಹೊ, ಅಂಜದಿರೆಂದೊಡಾನು ಬರ್ದುಂಕುವೆನು.

ಸಂಸಾರವೆಂಬ ಸರ್ಪ ಮುಟ್ಟಲು ಪಂಚೇಂದ್ರಿಯ ವಿಷಯವೆಂಬ ವಿಷದಿಂದೆ ಆನು ಮುಂದುಗೆಟ್ಟೆನಯ್ಯ, ಆನು ಹೊರಳಿ ಬೀಳುತ್ತಿರ್ದೆನಯ್ಯ, ಓಂ ನಮಃಶಿವಾಯ ಎಂಬ ಮಂತ್ರದ ಜಪಿಸುತ್ತೆರ್ದೆನಯ್ಯ, ಕೂಡಲ ಸಂಗಮ ದೇವಾ.

ಅರಿಯದೆ ಜನನಿಯ ಜಠರದಲ್ಲಿ ಬಾರದ ಭವಂಗಳಲ್ಲಿ ಬರಿಸಿದೆ, ತಂದೆ! ಹುಟ್ಟಿದ್ದೇ ತಪ್ಪಾಯಿತ್ತೆ ಎಲೆ ಲಿಂಗವೇ? ಮುನ್ನ ಹುಟ್ಟಿದುದಕ್ಕೆ ಕೃಪೆ ಮಾಡು, ಲಿಂಗವೇ, ನಿಮ್ಮಾಣೆ ಇನ್ನು ಹುಟ್ಟಿದೆನಾದೊಡೆ ಕೂಡಲ ಸಂಗಮದೇವಾ.

ಎಂದೋ ಸಂಸಾರದ ದಂದುಗ ಹಿಂಗುವುದು? ಎಂದೋ ಮನದಲ್ಲಿ ಪರಿಣಾಮವಹುದೆನಗೆಂದೋ ಎಂದೋ? ಕೂಡಲ ಸಂಗಮದೇವಾ, ಇನ್ನೆಂದೋ ಪರಮ ಸಂತೋಷವಹುದೆನಗೆಂದೋ?

ಲೇಸ ಕಂಡು ಮನ ಬಯಸಿ ಬಯಸಿ ಆಶೆ ಮಾಡಿದೊಡಿಲ್ಲ ಕಂಡಯ್ಯ! ತಾಳಮರಕ್ಕೆ ಕೈಯ ನೀಡಿ ಮೇಲೆ ನೋಡಿ ಗೋಣುನೊಂದುದಯ್ಯ, ಕೂಡಲ ಸಂಗಮದೇವ, ಕೇಳಯ್ಯಾ, ನೀವೀವ ಕಾಲಕ್ಕಲ್ಲದಿಲ್ಲ ಕಂಡಯ್ಯಾ!

ಮುನ್ನ ಮಾಡಿದ ಪಾಪ ಬೆನ್ನ ಬಿಡದನ್ನಕ್ಕ, ಇನ್ನು ಬಯಸಿದರುಂಟೆ? ಭಕ್ತಿಯುಳ್ಳವರ ನೋಡಿ ನೋಡಿ ಬಯಸಿದರುಂಟೆ? ಕೂಡಲ ಸಂಗಮದೇವರಲ್ಲಿ ಮುನ್ನ ವರವ ಪಡೆಯದನ್ನಕ್ಕ?

ತನ್ನಿಚ್ಛೆಯ ನುಡಿದರೆ ನಚ್ಚುವುದೀಮನವು ಇದಿರಿಚ್ಛೆಯ ನುಡಿದರೆ ಮೆಚ್ಚದೀ ಮನವು, ಕೂಡಲ ಸಂಗನ ಶರಣರೆ ನಚ್ಚದ ಮನವ ಕಿಚ್ಚಿನೊಳಗಿಕ್ಕುವೆ.

ಸುಡಲೀ ಮನವೆನ್ನನುಡುಹನ ಮಾಡಿತ್ತು! ನಡೆವಲ್ಲಿ ನುಡವಲ್ಲಿ ಮಧಿಕನೆಂದೆನಿಸಿತ್ತು, ಬೆಡಗಿನ ಕೀಲು ಕಳೆದು ಕೆಡೆದ ಬಳಿಕ ಕಡುಗೂರ್ಪ ಮಡದಿ ತಾ ಮುಟ್ಟಲಮ್ಮಳು, ಒಡಲನುರಿಕೊಂಬುದು, ಒಡವೆಯನರಸು ಕೊಂಬ, ಕಡುಗೂರ್ಪ ಮಡದಿಯ ಮತ್ತೊಬ್ಬ ಚೆನ್ನಿಗ ಕೊಂಬ! ಮುನ್ನ ಮಾಡಿದುದು ತನ್ನ ಬೆನ್ನ ಬಿಡದನ್ನಕ್ಕ, ಇನ್ನು ಮಾಡಿದೊಡೊಳವೆ, ಕೂಡಲ ಸಂಗಮದೇವಾ?

ವಚನದ ಹುಸಿ, ನುಸುಳೆಂತು, ಮಾಣ್ಬುದೆನ್ನಾ? ಮನದ ಮರ್ಕಟತನವೆಂತು ಮಾಣ್ಬುದೆನ್ನಾ? ಹೃದಯದ ಕಲ್ಮಷವೆಂತು ಮಾಣ್ಬುದೆನ್ನಾ? ಕಾಯವಿಕಾರಕ್ಕೆ ತರಿಸಲು ವೋದೆನು, ಎನಗಿದು ವಿಧಿಯೇ, ಕೂಡಲಸಂಗಮದೇವಾ.

ಅಂಗದ ನೋಟವು ಸಿಂಗದ ಗಾತ್ರವು, ಹಿಂಗದು ಮನದಲ್ಲಿ ನಾನಾ ವಿಕಾರವು. ಬಂದಹನೆಂದರಿಯಲಿಕ್ಕಿಲ್ಲವಾಗಿ ಸಂದೇಹ ಬಿಡದು, ಮುಂದುಗಾಣಾದು ಲೋಕ! ಬೆಂದ ಮಾಯಕ್ಕಂಜಿ ನಿಮ್ಮ ಮರೆವೊಕ್ಕೆ, ಕೂಡಲ ಸಂಗಮದೇವಾ/

ವಿಕಳನಾದೆನು ಪಂಚೇಂದ್ರಿಯ ಧಾತುವಿನಿಂದ; ಮತಿಗೆಟ್ಟೆನು ಮನದ ವಿಕಾರದಿಂದ; ಧೃತಿಗೆಟ್ಟೆನು ಕಾಯ ವಿಕಾರದಿಂದ, ಶರಣುವೊಕ್ಕೆನು ಕೂಡಲ ಸಂಗಮದೇವಾ.

ಮುನಿದೆಯಾದೊಡೆ ಒಮ್ಮೆ ಜರಿದೊಡೆ ಸಾಲದೆ? ಅಕಟಕಟ! ಮದನಂಗೆ ಮಾರುಗೊಡುವರೆ? ಹಗೆಗೆ ಮಾರುಗೊಟ್ಟು ನಿನ್ನವರನೊಪ್ಪಿಸುವರೆ ಕೂಡಲಸಂಗಮದೇವಾ?

ಆನೊಬ್ಬನು ಸುಡುವರೈವರು? ಮೇಲೆ ಕಿಚ್ಚುಘನ ನಿಲ್ಲಲುಬಾರದು! ಕಾಡ ಬಸವನ ಹುಲಿ ಕೊಂಡೊಯ್ಯದೆ ಆರಯ್ಯಲಾಗದೆ, ಕೂಡಲಸಂಗಮದೇವಾ.

ಆಸೆಯಾಮಿಷ, ತಾಮಸ, ಹುಸಿ, ವಿಷಯ, ಕುಟಿಲ, ಕುಹಕ, ಕ್ರೋಧ, ಕ್ಷುದ್ರ, ಮಿಥ್ಯ ಇವನ್ನೆನ್ನ ನಾಲಿಗೆಯ ಮೇಲಿಂದತ್ತ ತೆಗೆದು ಕಳೆಯಯ್ಯಾ, ಅದೇಕೆಂದೊಡೆ ನಿಮ್ಮತ್ತಲೆನ್ನ ಬರಲೀಯವು, ಇದು ಕಾರಣ ಇವೆಲ್ಲವ ಕಳೆದು ಎನ್ನ ಪಂಚಯೈವರ ಭಕ್ತನ ಮಾದು ಕೂಡಲ ಸಂಗಮದೇವಾ.

ಎಂತೋ ಶಿವಭಕ್ತಿಯ ನಾನುಪಮಿಸುವೆನಯ್ಯಾ? ಎಂತೋ ಶಿವಾಚಾರವೆನಗೆ ವೇದ್ಯವಪ್ಪುದಯ್ಯಾ? ಕಾಮ, ಕ್ರೋಧ, ಲೋಭ, ಮೋಹದಿಂದ ಕಟ್ಟುವಡೆದೆನು ಹಸಿವು, ತೃಷೆ, ವ್ಯಸನದಿಂದೆ ಕುದಿಯುತ್ತಿದ್ದೇನೆ. ಪಂಚೇಂದ್ರಿಯ ಸಪ್ತಧಾತು ಹಂಚು ಹರಿ ಮಾಡಿ ಕಾಡಿಹುದಯ್ಯಾ! ಅಯ್ಯಾ, ಅಯ್ಯಾ, ಎನ್ನ ಹುಯ್ಯಲ ಕೇಳಯ್ಯಾ, ಕೂಡಲ ಸಂಗಮದೇವಾ, ನಾನೇವೆ ನೇವೆನಯ್ಯಾ?

***

ಪ.ರಾ.ಶ್ರೀ : ಪ.ರಾಶ್ರೀ ಯವರಿಗೆ ಚ.ಬ.ದೇ ರ ಅನೇಕ ನಮನ ನಮನಗಳು. ಪತ್ರಿಕೆಯ ಮೂಲ ಪರಿಚಯ ಭೇಟಿ ಆದುದ್ದು ಎರಡು ಸಲ ಮನೆ-ಮನೆ ದೂರ ಇದ್ದರೂ ಮನ-ಮನ ಹತ್ತಿರ ಹತ್ತಿರ ತಿಳಿದಿದ್ದು. ಅಪಾರ- ನಿಮ್ಮಿಂದ ತಿಳಿಯಬೇಕಾದ್ದು. ಬಹಳ -ಬಹಳ-ಬಹಳ ಒಲಿದಲು ನಿಮಗೆ ಸರಸ್ವತಿ ದೂರ ಆದಲು ಲಕ್ಷಿ -ಅದು ನನಗೆ ಬೇಸರ ಆ ದೇವ ಕೊಟ್ಟ ಸ್ಪೂರ್ತಿ [sixth sense] ಆ ಸ್ಪೂರ್ತಿಯೇ ನಿಮ್ಮ ಪಾಲಿನ ಆಸ್ತಿ. ಈ ಇಳಿ ವಯಸ್ಸಿನಲೂ ನಿಮ್ಮ ಧೈರ್ಯ- ಸ್ಥೈರ್ಯಕ್ಕೆ ಮೆಚ್ಚಬೇಕು. ನಾನಾಗಿದ್ದರೆ ನಡಗುತ್ತಿದ್ದೆ ಗಡ-ಗಡ ನಿಮ್ಮಲ್ಲಿ ಆಧ್ಯಾತ್ಮಿಕ ವಿಷಯ ಅಪಾರ ತಿಳಿದಷ್ಟು ಸಿಗುವುದು ಬಹಳ ಬಹಳ. ಮನಕೆ ಹಿತ- ಬುದ್ಧಿಗೆ ಕಸರತ್ತು. ವಿಚಾರಗಳಿಗೆ ಒತ್ತು ಬಿತ್ತು. ಅದ್ಬುತ ವಿಷಯಗಳು ನನ್ನ ಪಾಲಿಗೆ ಕೂತರೆ ಕಾಲ ಕಳೆಯುವುದೇ ಗೊತ್ತಾಗುವುದಿಲ್ಲ. ಮನಕೆ ಹಗುರ-ಬುದ್ದಿ ತುಂಬುತ್ತದೆ. ಪ್ರತಿ ಪದವೂ ಅರ್ಥಗರ್ಭಿತ. ಭಾಷೆ ಸರಳ-ಸುಳಿದ ಬಾಳೆ ಹಣ್ಣಿನ ರೀತಿ.

ಇಳಿವಯಸ್ಸಿನಲ್ಲೂ ನಿಮ್ಮ ಚೈತನ್ಯ -ಹುರುಪಿಗೆ ಹದಿ ಹರೆಯರೂ ತಲೆ ಬಾಗಬೇಕು. ಕಷ್ಟ ಕಾರ್ಪಣ್ಯ ಒಳಗೆ ನುಂಗಿ ಇದ್ದರೂ ಹೊರಗೆ ತೋರಿಸದೆ ನಗುನಗುತ ಆ ದೇವನ ಮೇಲೆ ಭಾರಬಿಟ್ಟು ನಡೆಸುತಿಹ ಜೀವನವ- ನಿಮ್ಮ ಆದರ್ಶ ಕಲಿಯಬೇಕು ತಿಳಿಯದವರು. ನಿಮ್ಮ ಬುದ್ದಿ ಕೆದಕಿದಷ್ಟು. ಬೂದಿ ತುಂಬಿದ ಕೆಂಡದಂತೆ, ತಿಳಿಯುವುದು ಅಪಾರ ವಿಚಾರ ಲೌಕಿಕ ಅಲ್ಲ-ಜೀವನದ ಗುಟ್ಟಿನ ವಿಷಯ. ಆಧ್ಯಾತ್ಮಿಕ ಸಾರಾಂಶದ ವಿಷಯ. ನನ್ನ ಮನ ತಿಳಿಯಾಯಿತು. ಬುದ್ದಿ ವಿಕಾಸವಾಯಿತು ಸ್ವಲ್ಪ ಮಟ್ಟಿಗೆ ಕವನ-ಲೇಖನ ಬರೆಸಲು ಸ್ಪೂರ್ತಿ ಕೊಟ್ಟಿತು. ಕೇವಲ ಎರಡು ದಿನದ ಭೇಟಿಯಿಂದ ನಿಮ್ಮ ತಲೆ ಚೈತನ್ಯದ ಗಣಿ ಆಧ್ಯಾತ್ಮ ತುಂಬಿ ತುಳುಕುತ್ತಿರಬಹುದು. ವಿಚಾರಗಳು ಸುಳಿದಾಡುತ್ತಿರಬಹುದು. ನೀವು ಸದಾ ಆರೋಗ್ಯದಿಂದಿರಲಿ, ಸುಖದಿಂದಿರಲಿ, ಸಂತೋಷದಿಂದಿರಲಿ ಎಂದು ಹಾರೈಸುತ, ಆ ಸರಸ್ವತಿ ಒಲಿದ ಹಾಗೆ - ಲಕ್ಷಿಯೂ ಬರಲಿ- ಒಲಿಯಲಿ ಎಂದು ಬಯಸುತ- ಆ ದೇವನ ಕೇಳುತ, ನಿಮ್ಮ ಆಶೀರ್ವಾದ- ಹಾರೈಕೆ ನಮಗಿರಲಿ, ಎಂದು ನಮಿಸುತ-ಹೇಳುತ, ನಿಮಗೆ ಅನೇಕ ಅನೇಕ ನಮನ ನಮನ ನಮನಗಳು.

*******

೧೪.೦೨.೧೯೯೯- ಮಹಾಶಿವರಾತ್ರಿ
ಹೇಗಿರಬೇಕು ಜೀವನಶೈಲಿ? ಹೀಗಿರಬೇಕು!!!
ಶಿವಶರಣರ ಜೀವನಕ್ರಮದ ರೀತಿಯಲಿ
ಸುಪ್ರಭಾತ ಸಮಯದಲ್ಲಿ ಎದ್ದಿರಬೇಕು. ಏಳುವ ಸಮಯದಲ್ಲಿ ಕೈಕೈ ಹೊಸೆಯುತ್ತ ಸೃಷ್ಟಿ ಕರ್ತ ಶಿವನ ಲಿಂಗದ ರೂಪದಲ್ಲಿ ನನೆದು, ಲಿಂಗಕ್ಕೆ ಕೈಮುಗಿದು, ಮಾನಸಿಕವಾಗಿ ಕಿರು ಪೂಜೆಯಲಿ ಮನದಲ್ಲಿ ಮಾಡಬೇಕು. ಆನಂತರ ಸ್ನಾನ ಶೌಚಾದಿ ಕಾರ್ಯಗಳ ಮುಗಿಸುತ ಪರಮಾತ್ಮ ಶಿವನ ಶಿವಪೂಜೆಯಲಿ ನಿರತನಾಗುತ ಹೊತ್ತು ಹೋಗದ ಮುನ್ನ ಪೂಜೆಯ ಮುಗಿಸಬೇಕು. - ಪ್ರತಿದಿನ ತ್ರಿಕಾಲದಲ್ಲಿಯೂ ಶಿವಪೂಜೆಯಂ ಗೈಯಬೇಕು. ಕಾಯಕವಿಲ್ಲದೆ ಪ್ರಸಾದ ಸ್ವೀಕರಿಸಬಾರದು. ಪ್ರಸಾದ ಸ್ವೀಕರಿಸಬೇಕಾದ ಸಮಯದಲ್ಲಿ ಅನವಶ್ಯಕ ಮಾತನಾಡದೇ ಪ್ರತಿ ತುತ್ತಿಗೊಮ್ಮೆ ’ಓಂ ನಮಃ ಶಿವಾಯ’ ಎಂಬ ಮಂತ್ರ ಪಠಿಸುತ್ತ, ಮನದಲಿ ಆ ದೇವ ’ಶಿವ’ ನಿಗೆ ಪ್ರಸಾದ ಅರ್ಪಿಸುತ ಪ್ರಸಾದ ಸ್ವೀಕರಿಸಬೇಕು.

ಹಣೆಯಲ್ಲಿ ಸದಾ ಗಂಧಾಕ್ಷತೆ ವಿಭೂತಿ ಧರಿಸಿರಬೇಕು. ಕಾಯಕದಲ್ಲಿ ಸದಾ ನಿರತನಾಗಿರಬೇಕು- ಕಾಯಕದಿಂದ ಬಂದ ಹಣದಲ್ಲಿ ಆ ದಿನಕ್ಕೆ ಬೇಕಾದ ಹಣ ಮಾತ್ರ ಉಪಯೋಗಿಸಿ, ಉಳಿದ ಹಣವನ್ನು ಧರ್ಮ, ಸಮಾಜಕ್ಕೆ ತಿರುಗಿಸಿಕೊಡಬೇಕು.

ಇಂದಿಗೆಂದು, ನಾಳೆಗೆಂದು, ಮಡದಿ ಮಕ್ಕಳಿಗೆಂದು ಹಣವ, ಆಸ್ತಿಯ ಕೂಡಿಡಬಾರದು. ಧನ, ದ್ರವ್ಯ, ಒಡವೆ, ಆಸ್ತಿ, ಚರಾಸ್ತಿ, ಇತರೆ ಎಲ್ಲವುಗಳು, ಆ ದೇವ ಶಿವ ನಂತಿರುವ ಧರ್ಮಸಮಾಜಕ್ಕೆ ಸೇರಿದ್ದು ಎಂಬ ಭಾವನೆ ಸದಾ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯುವಂತೆ ಇರಲು, ಅರಿಷಡ್ವರ್ಗಗಳನ್ನು ಮನಸ್ಸಿನಿಂದ ದೂರ ತಳ್ಳಲು ಸದಾ ಪ್ರಯತ್ನಿಸುತ್ತಿರಬೇಕು.

ಧರ್ಮ ಸಮಾಜದಿಂದ ನನಗೇನು ಬಂದಿದೆ ಎಂಬುದನ್ನು ಯೋಚಿಸದೆ, ಆ ಸಮಾಜದ ಅಭಿವೃಧ್ಧಿಗಾಗಿ ನಾನೇನು ಮಾಡಬಲ್ಲೆನೆಂದು ಸದಾ ಯೋಚಿಸುತ್ತಿರಬೇಕು. ಸಾಧ್ಯವಾದಾಗಲೆಲ್ಲೆ ಆ ಯೋಚನೆಯನ್ನು ಕಾರ್ಯರೂಪದಲ್ಲಿ ತರಲು ಪ್ರಯತ್ನಿಸುತ್ತಿರಬೇಕು. ಸಕಲ ಜೀವರಾಶಿಗಳ ಚರಾಚರ ವಸ್ತುಗಳ ಲೇಸ್ಸನ್ನು ಬಯಸಬೇಕು. ಪ್ರತಿದಿನ ಪ್ರಸಾದಕ್ಕೆ ಒಬ್ಬ ಶರಣರನ್ನು ಕರೆದು, ಅವರ ಜೊತೆ ಸೇರಿ ಪೂಜೆ ಪ್ರಸಾದ ಸೇವಿಸಬೇಕು.

ಗುರುವಿಗೂ ಕಾಯಕ, ಲಿಂಗಕ್ಕೂ ಕಾಯಕ, ಜಂಗಮಕ್ಕೂ ಕಾಯಕ, ಎಂಬುದನ್ನು ಸದಾ ನೆನಪಿನಲ್ಲಿಡಬೇಕು. ಸಮಯವಿದ್ದಾಗಲೆಲ್ಲ, ಬಿಡುವು ಮಾಡಿಕೊಂಡು ಶರಣರ ಗೋಷ್ಟಿಯಲ್ಲಿ ಸೇರಿ /ಶರಣರ ಗೋಷ್ಟಿ ಮಾದಿ, ಅನುಭವದ ಚಿಂತನೆ ಮಾಡುತ್ತ, ಮನದಲ್ಲಿ ಮಂಥನ ಮಾಡಿ ಜೀವನ ಶೈಲಿಯನ್ನು ಉತ್ತಮಪಡಿಸಿಕೊಳ್ಳಲು, ಬೇರೆ ಬೇರೆ ಶಿವಶರಣರ ಉತ್ತಮ ಜೀವನಕ್ರಮವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿರಬೇಕು.

ಸೂಕ್ತ ಸಲಹೆಗಳನ್ನು ಕೊಡುವುದಕ್ಕಾಗಲೀ ಅಥವಾ ಅನ್ಯ ಶರಣರ ಸಲಹೆಗಳನ್ನು ಸ್ವೀಕರಿಸುವುದಕ್ಕಾಗಲೀ ಶರಣರ ಗೋಷ್ಟಿ ಯನ್ನು ಆಗಾಗ್ಗೆ ಮಾಡುತ್ತಿರಬೇಕು. ಅನ್ಯರ ಜೀವನಕ್ರಮ ಸಮಾಜಕ್ಕೆ ತೊಂದರೆ ಆಗುತ್ತಿದ್ದರೆ/ಆಗುವಂತಿದ್ದರೆ, ಸಂಘಟನೆ ಮಾಡಿ, ಅಹಿಂಸೆಯ ರೀತಿಯಲ್ಲಿ ಆ ವ್ಯಕ್ತಿಗೆ ತಿಳಿಸಿ, ಪ್ರತಿಭಟಿಸಿ ಅವರ ಜೀವನಕ್ರಮ ಉತ್ತಮಗೊಳ್ಳಲು ಪ್ರಯತ್ನಿಸಬೇಕು. ಇದಕ್ಕೆ ಉಪವಾಸ, ಸತ್ಯಾಗ್ರಹ, ಇತ್ಯಾದಿಗಳು ಅಹಿಂಸೆಯ ರೂಪದಲ್ಲಿ ಕೈಗೊಳ್ಳಬೇಕು.

ಅರಿಷಡ್ವರ್ಗಗಳ ಭಾವನೆಗಳನ್ನು ಮನಸ್ಸಿನಿಂದ ದೂರ ತಳ್ಳುತ್ತ, ಜೀವನಶೈಲಿಯಲ್ಲಿ ಅಥವಾ ಕಾಯಕದಲ್ಲಿ ಯಾವುದೇ ರೀತಿಯಲ್ಲಿ ಸೇರಿಸಲು ಪ್ರಯತ್ನಿಸಬಾರದು. ಕಾಯಕದಲ್ಲಿ ತೊಡಗಿರುವಾಗ ಏಕಾಗ್ರತೆಯಿಂದ ಇರಬೇಕು. ಸದಾ ಆ ದೇವ ’ಶಿವ’ ನ ನೆನೆಯುತ ಕಾಯಕ ಮಾಡಬೇಕು.

ಸಮಾಜದ ಹಿತಕ್ಕಾಗಿ, ಅಭಿವೃದ್ಧಿಗಾಗಿ ಕಾಯಕ ಮಾಡುತ್ತಿರುವುದರಿಂದ ಕಾಯಕದಲ್ಲೇ ಗುರುವನ್ನು, ಶಿವನನ್ನು ಮತ್ತು ಜಂಗಮನನ್ನು ನೋಡಬೇಕು. ಗುರು-ಲಿಂಗ-ಜಂಗಮರ ಸೇವೆ ಕಾಯಕದ ನಂತರವೇ ಹೊರತು, ನಿತ್ಯ ಕಾಯಕ ಬಿಟ್ಟು ಮಾಡಬಾರದು ಎಂಬುದನ್ನು ಸದಾ ತಿಳಿದಿರಬೇಕು.

ಸಮಾಜದ ಹಿತಕ್ಕಾಗಿ, ಅಭಿವೃದ್ಧಿಗಾಗಿ ಕಾಯಕವೇ ಹೊರತು, ಸ್ವಂತ ಅಭಿವೃದ್ಧಿಗಾಗಿ ಅಲ್ಲ ಎಂಬುದನ್ನು ಸದಾ ನೆನಪಿನಲ್ಲಿಡಬೇಕು. ಕಾಯಕದಲ್ಲಿ ಆ ದೇವ ’ಶಿವ’ ಕೊಟ್ಟಿರುವ ಪ್ರತಿಭೆಯನ್ನು ಸಂಪೂರ್ಣವಾಗಿ ಉಪಯೋಗಿಸಿ ಸಮಾಜದ ಅಭಿವೃದ್ಧಿಯನ್ನು ಕಾಣಬೇಕು.

ಕಾಯಕ ಮಾಡುವಾಗ ಅರಿಷಡ್ವರ್ಗಗಳ ಲೇಪನ ಇರಬಾರದು ಕಾಯಕವು ಭಕ್ತಿಭಾವದಿಂದ, ಪ್ರತಿಭೆಯ ನೈಪುಣ್ಯತೆಯಿಂದ ತುಂಬಿ ತುಳುಕುತ್ತಿರಬೇಕು. ಅರಿಷಡ್ವರ್ಗಗಳ ವಾಸನೆ ಸೇರಿದ ಕಾಯಕ ಅದು ಕಾಯಕ ಎಂದೆನಿಸುವುದಿಲ್ಲ. ಅದು ನಿಷ್ಪ್ರಯೋಜಕೆ ಕಾಯಕ ಎಂಬ ಭಾವನೆ ತಿಳಿದಿರಬೇಕು.

ನಮ್ಮ ಜೀವನ ರೀತಿ ಸಮಾಜಕ್ಕೆ ಮಾರ್ಗದರ್ಶಿಯಾಗಿರಬೇಕು. ಅದೇ ರೀತಿ ಸಮಾಜದ ಪ್ರತಿ ಶರಣರ ಜೀವನ ಕ್ರಮ ಉಳಿದ ಶರಣರಿಗೆ ಮಾರ್ಗದರ್ಶಿಯ ರೀತಿಯಲ್ಲಿರಬೇಕು. ಈ ಶಿವ ಶರಣರ ರೀತಿಯ ಜೀವನಕ್ರಮ ಸಮಾಜದಲ್ಲಿದ್ದರೆ, ಆಗ ಇರುವುದಿಲ್ಲ ನಿರುದ್ಯೋಗ, ಹಸಿವು, ಬಡತನ, ದಾರಿದ್ರ್ಯತೆ, ನಿರಕ್ಷರತೆ, ವಿಷಯ ಲಂಪಟತೆ, ಇತ್ಯಾದಿ, ಇತ್ಯಾದಿ, ಇತ್ಯಾದಿ.

ವಿಶ್ವವೇ ದೇವ ದೇಗುಲವಾಗುವುದು. ಪ್ರತಿ ಶರಣರ ಹೃದಯದಲ್ಲಿ ಅಡಗಿರುವ ಆ ದೇವ ಶಿವ ಹೊರಬಂದು ಸಾಕಾರ ರೂಪದಲ್ಲಿ ಬಂದು, ಮನಸ್ಸನ್ನು ಸಂತೋಷ ಪಡಿಸುತ್ತ ಮುಕ್ತಿಯ ಧಾಮಕ್ಕೆ ನಮ್ಮೆಲ್ಲರನ್ನು ಕರೆದುಕೊಂಡು ಹೋಗುವನು.

ಇದನ್ನು ಅರಿತನಾದೊಡೆ ಶರಣ
ಇಲ್ಲದಿದ್ದೊಡೆ ಆಗುವ ಕಷ್ಟದ ಮಾನವ.
 

25.02.1999 – 1.50 a.m.
ನೋಡು ಬಾ! ನೋಡು ಬಾ! ಆ ದೇವನ||
ಹೃದಯದಲಿ ನೆಲೆಸಿದವನಾ|
ಅಂತರ್ಮುಖಿಯಾಗಿ ಕುಳಿತವನಾ||
ನಿನಗಾಗಿ ಕಾದಿರುವನಾ|
ಇದ್ದರೂ ಇಲ್ಲದಹಾಂಗ ಕುಳಿತವನಾ|| ನೋಡು ಬಾ||

ಅರಿಷಡ್ವರ್ಗಗಳ ಬಿಟ್ಟು ಬಾ|
ಅಂತರ್ಮುಖಿಯಾಗಿ ಅರಿತು ಬಾ||
ಸರಳ ಜೀವನ ನಡೆಸುತ ಬಾ|
ಆಸೆ ಆಕಾಂಕ್ಷೆಗಳ ತೊರೆದು ಬಾ|| ನೋಡು ಬಾ||

ಅರಿತ ಶರಣನಾಗಿ ಬಾ|
ಇರುವುದೆಲ್ಲವಾ ಕೊಟ್ಟು -ಬಿಟ್ಟು ಬಾ||
ನಿಗರ್ವಿಯಾಗಿ ಬಾ ಬಾ|
ಶೂನ್ಯ ಸಂಪಾದನೆ ಮಾಡಿ ಬಾ || ನೋಡು ಬಾ||

ಜೀವರಾಶಿಗಳ ಕಾಪಾಡಿದವನಾ|
ಸ್ಠಿರ ಶಾಂತಿ ನೆಮ್ಮದಿ ಕೊಡುವವನಾ||
ಮನಸ್ಸನ್ನು ಕದಡದವನಾ|
ಏಕಾಗ್ರತೆ ಕಳಿಸಿಕೊಟ್ಟವನಾ|| ನೋಡು ಬಾ||

ಸದಾ ನಮ್ಮ ಮುಂದೆ ಇರುವವನಾ|
ಸ್ನೇಹಿತನಾಗಿ ಇರುವವನಾ||
ಮಾರ್ಗದರ್ಶಿಯಾಗಿರುವವನಾ|
ತತ್ವಜ್ಞಾನಿಯಾಗಿ ಮನಸ ತುಂಬಿರುವವನಾ|| ನೋಡು ಬಾ||

ಮೋಕ್ಷ, ಇಲ್ಲೇ ಕೊಟ್ಟವನಾ|
ಹರಕೆ ಎಂದೂ ಕೇಳದವನಾ||
ಸರಳತೆ ಮುಗ್ಥತೆ ಬಯಸುವವನಾ|
ನೈಜ ಸಾಧು-ಸಂತರ ಜೊತೆ ಇರುವವನಾ|| ನೋಡು ಬಾ||

ಆಸೆ-ಪಾಸೆ ಬಿಟ್ಟು ಬಾ|
ಸಮಾಜಕ್ಕೆ ತಿಳಿಸಿ ಬಾ||
ದೇವ ಮಾನವನಾಗಿ ಬಾ|
ವಿಶ್ವಮಾನವನಾಗಿ ಬಾ|| ನೋಡು ಬಾ||

 

**********
೨೧.೦೩.೧೯೯೯-೧.೩೦ ಬೆಳಿಗ್ಗೆ [ಸ್ಪೂರ್ತಿಯ ದಿನ]

ದೈವ ಗುಣವಿರುವ ಮಾನವ
ಓ| ಮಾನವ| ನೀ ಇದ ತಿಳಿದು ದೇವ ಮಾನವನಾಗು||
ಮಾನವನಿಗೆ ಕೊಟ್ಟಿರುವ ಆ ದೇವ|
ಸದ್ಗುಣ ಮತ್ತು ದುರ್ಗುಣ ಅಂಶಗಳ,
ಅಂತರ್ಮುಖಿಯಾಗಿ ಅರಿತಾಗಿ ತಿಳಿಯುವೆ ಸದ್ಗುಣಗಳ,
ಅರಿಷಡ್ವರ್ಗಗಳ ಹಿಡಿದಾಗ ತಿಳಿಯುವೆ ದುರ್ಗುಣಗಳ,
ಸದ್ಗುಣಗಳು ಕೂಡಿಸುತ್ತದೆ ಸಮಾಜವ,
ದುರ್ಗುಣಗಳು ಬೇರ್ಪಡಿಸುತ್ತದೆ ಸಮಾಜವ,
ಸದ್ಗುಣ, ದುರ್ಗುಣಗಳ ಉಪಯೋಗ
ದುರುಪಯೋಗ ಇರುವುದು ಮಾನವನ ಕೈಲಿ.

ಈಗಿನ ಜೀವನದ ಜಂಜಾಟಕ್ಕೆಲ್ಲಾ ಕಾರಣ
ಅರಿಷಡ್ವರ್ಗಗಳ ದೊಂಬರಾಟದ ದುರ್ಗುಣಗಳ
ಪ್ರಕ್ರಿಯೆಗಳ ಫಲಿತಾಂಶ, ತಿಳಿದೂ ತಿಳಿದೂ
ಮಾಡುತ್ತಿರುವ ಮಾನವ ತಪ್ಪು ತಪ್ಪು,
ಅರಿಷಡ್ವರ್ಗಗಳಿಗೆ ದಾಸನಾಗಿ.

ಆ ದೇವ| ಕೊಟ್ಟಿರುವ ಸದ್ಗುಣ ಮಾನವಗೆ, ಜೀವನದ ಪರೀಕ್ಷೆಯಲಿ ಗೆಲಲಿಕ್ಕಾಗಿ,
ಸದ್ಗುಣಗಳ ಸದುಪಯೋಗ ಪಡಿಸುವೆಯಾದರೆ,
ಆಗುವೆ ದೇವ ಮಾನವ-ದುರ್ಗುಣಗಳ ದುರುಪಯೋಗ ಪಡಿಸುವೆಯಾದರೆ ಆಗುವೆ ದಾನವ.

ಸದ್ಗುಣಗಳ ಫಲಿತಾಂಶ ಮುಕ್ತಿ ಮೋಕ್ಷ,
ದುರ್ಗುಣಗಳ ಫಲಿತಾಂಶ ಅಶಾಂತಿ, ಪುನರ್ಜನ್ಮ,
ಸದ್ಗುಣಗಳಿಂದ ಸಮಾಜದ ಬೆಳವಣಿಗೆ,
ದುರ್ಗುಣಗಳಿಂದ ಸಮಾಜದ ಕುಂಠಿತ.

ಈಗ ನಿರ್ಧರಿಸು ಏನು ಉಪಯೋಗಿಸಬೇಕೆಂಬುದ|
ಓ ಮಾನವ| ಈಗಲಾದರೂ ಆಗು ದೇವ ಮಾನವ|
ಸದ್ಗುಣಗಳ ಪ್ರಕ್ರಿಯೆಗಳಿಂದ ಮರೆತು ಮಾನವನಾಗಬೇಕು.
ಅರಿತು ಶರಣನಾಗು| ಎಲ್ಲರ ಒಳಿತಿಗಾಗಿ.
 

​**********

​30.12.2000. 3.20. am.

ಇದಾದರೆ ಧನ್ಯ! ಧನ್ಯ!! ಧನ್ಯ!!! ದೇವರೇ??
೮೪ ಲಕ್ಷ ಜೀವರಾಶಿಗಳಲ್ಲಿ, ಮಾನವನೊಬ್ಬನೇ ವಿಶೇಷ ಜೀವರಾಶಿ-ದೈವಾಂಶ ಇರುವುದೂ ಸಹ ಅವನೊಬ್ಬನಲ್ಲಿಯೇ, ಹಾಗೆಯೇ ಪ್ರತಿಭೆಯೂ ಕೂಡ-ಸದ್ಗುಣಗಳ ರಾಶಿ ಮತ್ತು ಜೀವನದಲ್ಲಿ ಅಳವಡಿಕೆಯೇ ದೈವಾಂಶ ರೂಪ. ಪ್ರತಿಭೆಗಳ ಸದುಪಯೋಗ ಸಮಾಜಕ್ಕೆ ಒದಗುವುದಾದರೆ ಎಷ್ಟು ಚೆಂದ! ಎಷ್ಟು ಅಂದ! ಸಮಾಜವೇ ಧನ್ಯ! ಅಲ್ಲವೇ ಯೋಚಿಸಿ.

ಮಾನವ ತನ್ನಲ್ಲಡಗಿರುವ ಪ್ರತಿಭೆಯನ್ನು ವಿಕಸಿಸಿ, ಸಮಾಜದ ಏಳಿಗೆಗಾಗಿ, ವಿಶ್ವದ ಅಭಿವೃಧ್ದಿಗಾಗಿ, ರಾಜ್ಯದ -ರಾಷ್ಟ್ರದ ಅಭ್ಯುದಯಕ್ಕಾಗಿ ಮುಡುಪಾಗಿಟ್ಟರೆ ಎಷ್ಟು ಚೆಂದ! ಇದಕ್ಕೆ ಆಗಬೇಕಾಗಿರುವುದು ಪ್ರತಿಭೆಯ ಸದುಪಯೋಗ ದುರುಪಯೋಗ ಅಲ್ಲ. ಅರಿಷಡ್ವರ್ಗಗಳ ಲೇಪನ ಇರಕೂಡದು ಪ್ರತಿಭೆಯಲ್ಲಿ -ಪ್ರೀತಿ, ವಿಶ್ವಾಸ, ಮಮತೆ, ಇತರೆ ಎಲ್ಲ ಸದ್ಗುಣಗಳನ್ನು ಪ್ರತಿಭೆಗೆ ಅಳವಡಿಸಬೇಕು, ಉಪಯೋಗಿಸಬೇಕು, ವಿನಿಯೋಗಿಸಬೇಕು ಸಮಾಜಕ್ಕಾಗಿ. ಈ ತರಹ ಆದರೆ, ಆಗ ನೋಡಿ, ಎಲ್ಲೆಲ್ಲೂ ಹೇರಳ ರಾಶಿ ರಾಶಿಗಳ ಉತ್ಪಾದನೆ-ಕೃಷಿ ಕ್ಷೇತ್ರದಲ್ಲಿ, ಕೈಗಾರಿಕಾ ಕ್ಷೇತ್ರದಲ್ಲಿ ಮತ್ತು ವಿಜ್ಞಾನ ಕ್ಷೇತ್ರದಲ್ಲಿ- ಕಲೆ, ಸಾಹಿತ್ಯದಲ್ಲೂ ಸಹ.
ಮನರಂಜನಾ ವಿಭಾಗದಲ್ಲೂ ಕೂಡ-ಎಲ್ಲರಿಗೂ ಸಿಗುವುದು. ಉಚಿತ ಆಹಾರ, ಉದ್ಯೋಗ, ವಿಧ್ಯಾಭ್ಯಾಸ, ಮನರಂಜನೆ, ಇತ್ಯಾದಿ, ಇತ್ಯಾದಿ-ಆರೋಗ್ಯ, ಭಾಗ್ಯ ನೆಮ್ಮದಿ, ಶಾಂತಿ, ವಿದ್ಯೆ, ಬುದ್ದಿ ಮತ್ತು ಐಶ್ವರ್ಯ ಎಲ್ಲೆಲ್ಲೂ ತುಂಬಿ ತುಳುಕಾಡುತ್ತಿರುತ್ತದೆ.

ಇದಕ್ಕೆಲ್ಲಾ ಕಾರಣ ಕಳಂಕರಹಿತವಾದ, ಅರಿಷಡ್ವರ್ಗ ಲೇಪನ ಇಲ್ಲದ ಮಾನವ ತನ್ನ ಪ್ರತಿಭೆಯನ್ನು ವಿಕಸಿಸುವ ಮತ್ತು ಅದರ ಉಪಯೋಗವನ್ನು ಅನುಭವಿಸುವ ಸಮಾಜ ಮತ್ತು ವಿಶ್ವ.

ಈ ರೀತಿಯ ಪ್ರತಿಭೆಯ ವಿಕಸನವೇ ದೇವರು! ಏನಂತೀರಿ!?

Maximum Exploitation & Utilization of God given Hidden TALENT for the use of the Society & the World is God HIMSELF.

ದೇವರೇ ಪ್ರತಿಭೆಯೋ! ಪ್ರತಿಭೆಯೇ ದೇವರೋ!! ಹೇಳಿ ನೋಡೋಣ. ಕಳಂಕ ರಹಿತವಾಗಿ ’ಪ್ರತಿಭೆ’ಯ ವಿಕಸನವಾದರೆ, ಸಮಾಜವೂ ಮತ್ತು ವಿಶ್ವ ಧನ್ಯ! ಧನ್ಯ!! ಧನ್ಯ!!! ದೇವರೇ!?


31.12.2000 sunday- 1.50 a.m.
ಪ್ರತಿಭೆ! ಪ್ರತಿಭೆ !! ಪ್ರತಿಭೆ!!!
ಓ! ದೇವರೇ!! ಅಡಗಿರುವೆಯಾ!
ನೀ ಮಾನವನ ಪ್ರತಿಭೆಯಲ್ಲಿ!

ವಿಕಸಿತನಾಗಿ ಹೊರಬಾ,
ಸಮಾಜಕ್ಕೆ ಕೊಡುಗೆಯಾಗಿ ಬಾ,
ನೀ ಸೃಷ್ಟಿಸಿದ ವಿಶ್ವಕೆ,
ಸಕಲ ಜೀವರಾಶಿಗಳಿಗೆ,
ಸಕಲ ಚರಾಚರ ವಸ್ತುಗಳಿಗೆ
ಉಪಯೋಗವಾಗಲೆಂದು ಬಾ. ||ಓ ದೇವರೇ||

ವಿಜ್ಞಾನಿಗಳಾದರು ಪ್ರತಿಭೆಯಿಂದ,
ಕಲಾ ತಪಸ್ವಿಗಳಾದರು ಪ್ರತಿಭೆಯಿಂದ,
ಸಾಹಿತಿಗಳಾದರು ಪ್ರತಿಭೆಯಿಂದ,
ಸಂತರಾದರು ಪ್ರತಿಭೆಯಿಂದ,
ಸಾಧುಗಳಾದರು ಪ್ರತಿಭೆಯಿಂದ,
ಶರಣರಾದರು ಪ್ರತಿಭೆಯಿಂದ,
ಕ್ರೀಡೆಯಲ್ಲಿ ಶೂರರಾದರು ಪ್ರತಿಭೆಯಿಂದ,
ಮುತ್ಸದ್ದಿಗಳಾದರು ಪ್ರತಿಭೆಯಿಂದ,
ಭಕ್ತರಾದರು ಪ್ರತಿಭೆಯಿಂದ,
ಮೌನಿಗಳಾದರು ಪ್ರತಿಭೆಯಿಂದ || ಓ ದೇವರೇ||

ಆದ ಕಾರಣ, ಪ್ರತಿಭೆಗಾಗಿ,
ಪ್ರತಿಭೆಗೋಸ್ಕರ, ಪ್ರತಿಭೆಯಿಂದಲೇ
ಈ ಸೃಷ್ಟಿಯ ವಿಕಸನ,
ಈ ಜಗತ್ತಿನ ಉದ್ದಾರ,
ಈ ಜಗತ್ತಿನ ಉಳಿವು-ಅಳಿವು || ಓ ದೇವರೇ||

ಪ್ರತಿಭೆಗೆ ಅರಿಷಡ್ವರ್ಗ ಸೋಂಕದಿದ್ದರೆ,
ಪ್ರತಿಭೆಯಲ್ಲಿ ಪ್ರೀತಿ-ವಿಶ್ವಾಸ-ಮಮತೆ ತುಂಬಿಕೊಂಡಿದ್ದರೆ,
ಪ್ರತಿಭೆ ಸದುಪಯೋಗವಾದರೆ,
ಆಗ ಇರುವುದಿಲ್ಲ ನಿರುದ್ಯೋಗ-ದರಿದ್ರ-ಬಡತನ-ಅಸ್ಪೃಶ್ಯತೆ-ಹಸಿವು, ಇತ್ಯಾದಿ, ಇತ್ಯಾದಿ,
ತುಂಬಿ ತುಳುಕಾಡುವುವು ಎಲ್ಲೆಲ್ಲೂ,
ಮಾನವರ ಮನದಲ್ಲಿ-ಸಕಲ ಜೀವರಾಶಿಗಳಲ್ಲಿ ನೆಮ್ಮದಿ ಮತ್ತು ಶಾಂತಿ
ಇದಕ್ಕಾಗಿಯೇ ಅಲ್ಲವೇ -ಈಗ ಹೋರಾಟ ಮಾನವರಿಂದ
ಅದಕಾಗಿ ಬಾ ದೇವರೇ!
ಪ್ರತಿಭೆಯಿಂದ ಹೊರಹೊಮ್ಮಿ.

20.1.2001-Satrday -1.30.a.m.
ಹೇ ಮಾನವ! ದೇವರನ್ನು ತಿಳಿ, ಹೀಗೆ!?
ದೇವರನ್ನು ತಿಳಿದುಕೊಳ್ಳುವುದು ಹೇಗೆ? ಹೀಗೆ!
ಮಾನವ, ತನ್ನ ಮಗುವನ್ನು ಕಂಕುಳಲ್ಲಿ
ಇಟ್ಟುಕೊಂಡು ಊರಲ್ಲಿ ಹುಡುಕುವ ಹಾಗೆ!
ಹುಡುಕಿದರೆ ಸಿಗುವುದಿಲ್ಲ ದೇವರು.

ಮಾನವ ತನ್ನ ಹೃದಯದಲ್ಲಡಗಿರುವ ದೇವರನ್ನು ನೋಡಬೇಕಾದರೆ, ಅಂತರ್ಮುಖಿಯಾಗಿ
ಒಳಗಣ್ಣಿನಿಂದ ನೋಡಿ, ಅರಿಷಡ್ವರ್ಗಗಳನ್ನು ಮನಸ್ಸಿನಿಂದ ದೂರಮಾಡಿ| ಹತೋಟಿಯಲ್ಲಿಟ್ಟು,
ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿ, ಸಕಲ ಜೀವರಾಶಿಗಳಿಗೆ ಲೇಸನ್ನೇ ಬಯಸಿ, ಸಕಲ
ಚರಾಚರವಸ್ತುಗಳಿಗೆ ಕೆಡುಕು ಮಾಡದೇ, ಮನದಲ್ಲಿ ಶೂನ್ಯ ಸಂಪಾದನೆ [ಸ್ಠಿತಪ್ರಜ್ಞ] ಮಾಡಿದೆಯಾದಡೇ,
ಅಲ್ಲೇ ಕಾಣುವೆ ದೇವರ, ನೀನೇ ಆಗುವೆ ದೇವ ಮಾನವ!
ಬಹಿರ್ಮುಖಿಯಾದಾಗ ದಾನವ ನೀನು,
ಅಂತರ್ಮುಖಿಯಾದಾಗ ದೇವ ಮಾನವ ನೀನು ಮತ್ತು
ಸತ್ಯ ಶುದ್ದ ಕಾಯಕ ಫಲವೇ ದೇವರು.


23.8.2001- 3.30.am.Thursday

ಮೋಕ್ಷಕ್ಕೆ ದಾರಿ : ದೇವರ [ಸೃಷ್ಟಿಕರ್ತ-ನಿರಾಕಾರ] ಮೇಲೆ ಇಟ್ಟಿರುವ ಭಾವನೆ, ನಂಬಿಕೆ ಮತ್ತು ಏಕನಿಷ್ಟೆಯ ಭಕ್ತಿಯ ಪ್ರಕ್ರಿಯೆಯೇ
ಭಗವಂತನ ಸಾಕ್ಷಾತ್ಕಾರಕ್ಕೆ ದಾರಿ, ಅಂದರೆ ದೇವರ ಮೇಲಿನ ಭಾವನೆಯನ್ನು, ನಂಬಿಕೆಯಿಂದ ದೃಡೀಕರಿಸಿ ಮತ್ತು ಏಕನಿಷ್ಟೆಯೇ ಭಕ್ತಿಯಿಂದ ಮಾನಸಿಕ ಪೂಜೆಯಿಂದ ಆ ನಿರಾಕಾರ ದೇವನನ್ನು ನೆನೆಸುವುದೇ -ಮೋಕ್ಷದ ದಾರಿ.

23.8.2001-400 a.m.
ಭಗವಂತ-ಭಕ್ತಿ :- ಭಗವಂತನಿಗೆ ಭಕ್ತಿಯೇ ಆಹಾರ, ಭಕ್ತಿ [ಅದು] ನೈಜ ಭಕ್ತನಲ್ಲಿ ಮಾತ್ರ ಇರುತ್ತದೆ. ಆಷಾಡ ಭೂತಿಗಳಲ್ಲಿಲ್ಲ. ಭಕ್ತಿಯೆಂಬ ಆಹಾರಕ್ಕೋಸ್ಕರ ಭಗವಂತನ್ನು ಭಕ್ತನಿಗೆ ಪರಾಧೀನನಾಗಿರುತ್ತಾನೆ. ಅದೇ ರೀತಿಯಲ್ಲಿ ಮೋಕ್ಷಗಳಿಸಲು, ಭವ ಬಂಧನದಿಂದ ಪಾರಾಗಲು, ಭಕ್ತ ದೇವನಿಗೆ ಪರಾಧೀನನಾಗಿರುತ್ತಾನೆ. ಇದಕ್ಕೆಲ್ಲ ಸಂತರುಗಳ ಜೀವನ ಕ್ರಮಗಳೇ ಸಾಕ್ಷಿ. ಇದು ಎಲ್ಲ ಧರ್ಮಗಳಲ್ಲಿರುವ ಸಂತರುಗಳು.

ಪರಮಾತ್ಮ ಬೇಕಂತಲೇ ಜಗತ್ತು ಸೃಷ್ಟಿಯಾದಗಲೇ, ಭಕ್ತಿಯನ್ನು ತನ್ನಲ್ಲಿ ಇಟ್ಟುಕೊಳ್ಳದೇ ಮಾನವರಾಶಿಯಂಶದಲ್ಲಿ ಬಿಟ್ಟು, ಆತ್ಮ ಪರಮಾತ್ಮ ಸಂಯೋಗ ತೋರಿಸುತ್ತಲಿದ್ದಾನೆ.

ಭಕ್ತಿಯೆಂಬ ಆಯುಧ : ಹರಿತವಾದ ಆಯುಧವೇ ಭಕ್ತಿ. ಸದುಪಯೋಗವಾದರೆ ಮೋಕ್ಷ ಸಾಧ್ಯ. ದುರುಪಯೋಗವಾದರೆ ಪುನರ್ಜನ್ಮ ಕಟ್ಟಿಟ್ಟ ಬುತ್ತಿ. ನಿರಾಕಾರ ದೇವನ ಸದಾ ನಾಮ ಸ್ಮರಣೆಯಿಂದ, ಆಸೆ ದುರಾಸೆ, ಅರಿಷಡ್ವರ್ಗಗಳನ್ನು ಭಕ್ತಿಯೆಂಬ ಆಯುಧದಿಂದ ಕತ್ತರಿಸಿ, ಮತ್ತು ಬಿಸಾಡಿ ಮನವೆಂಬ ಆವರಣವನ್ನು ಬಾವನೆ ಮತ್ತು ನಂಬಿಕೆಯಿಂದ ಆವರಿಸಿದರೆ, ಆಗ ಈ ಮನವೇ ನಿರಾಕಾರ ದೇವನಿಗೆ ತಾಣ.

ಭಕ್ತಿಯೆಂಬ ನಾಣ್ಯ : ಭಕ್ತಿಯೆಂಬುದೊಂದು ನಾಣ್ಯ, ದೇವನು ಭಕ್ತ ಎಂಬ ಎರಡು ಮುಖಗಳು ಎರಡು ಬದಿಗಳಲ್ಲಿ, ಒಂದಕ್ಕೊಂದು ಪೂರಕ,
ಒಂದು ಬಿಟ್ಟು ಇನ್ನೊಂದಿರಲಾರದು, ಇದಕ್ಕಲ್ಲವೇ ಮೋಕ್ಷ ಎನ್ನುವುದು. ದೇವನ ಜೊತೆ ಭಕ್ತನ ಅಪ್ಪುಗೆ ಇದರಿಂದಲೇ -ಭಕ್ತನಿಗಿಲ್ಲ ಪುನರ್ಜನ್ಮ.

ದೇವನ ಪೂಜೆ : ದೇವರು ನಿರಾಕಾರ. ಆದರೂ ಮಾನವ ಸಾಕಾರ ರೂಪದಲ್ಲಿ ಪೂಜಿಸಲು ಬಯಸುತ್ತಾನೆ. ಮಾನವನಿಗೆ-ಭಕ್ತನಿಗೆ ಮನಸ್ಸಿನಲ್ಲಿ ದೇವರ ಬಗ್ಗೆ ಭಾವನೆ, ನಂಬಿಕೆ ಮತ್ತು ಭಕ್ತಿ ಉಂಟಾಗಿ ಬಹಳ ಕಾಲ ಇರಬೇಕಾದರೆ ಸಾಕಾರ ರೂಪ ಅತಿ ಅವಶ್ಯ. ನಿರಾಕಾರ ದೇವನ ಮನದಲ್ಲಿ ನಿಲ್ಲಿಸಿ ಪೂಜಿಸುವುದು ಸಾಮಾನ್ಯ ಮಾನವನಿಗೆ ಬಹು ಕಷ್ಟ-ತಾಳ್ಮೆ ಇರಲಾರದು. ಅದಕಾರಣ ಮಾನವನ ಆಕಾರದಲ್ಲೇ ಪೂಜಿಸಲು ಇಚ್ಛೆ ತರುವುದು ಸಹಜ. ಆದ ಕಾರಣ ಮಾನವ ದೇವತೆಗಳ, ಸಾಧುಗಳ, ಸಂತರುಗಳು, ಶರಣರ ರೂಪಗಳ ಚಿತ್ರಗಳನ್ನಿಟ್ಟು ಪೂಜಿಸಲುಇಚ್ಚಿಸುತ್ತಾನೆ.

ಆದರೆ ಆ ಸೃಷ್ಟಿಕರ್ತ ಲಿಂಗದೇವನಿಗೆ, ಭಕ್ತನ ಮನದಲ್ಲಿರುವ ನಂಬಿಕೆ, ಭಾವನೆ ಮತ್ತು ಭಕ್ತಿಯ ಪ್ರಕ್ರಿಯೆಯೇ ಮುಖ್ಯವಾಗಿರುತ್ತದೆ. ನಿರ್ಮಲ ಮನಸ್ಸು ಮತ್ತು ಏಕನಿಷ್ಟೆಯಿಂದ ಪೂಜಿಸಿದ ಫಲ ಭಕ್ತನಿಗೆ ಸಿಗುವುದು ಮತ್ತು ಫಲ ಸಿದ್ದಿಸುವುದು ಗಟ್ಟಿ. ಸಂಶಯಾತ್ಮಕ ದೃಷ್ಟಿಯಿಂದ ಮತ್ತು ಆಸೆ, ದುರಾಸೆ ಮತ್ತು ಆಡಂಬರ ದೃಷ್ಟಿಯಿಂದ ಪೂಜಿಸಿದ ಫಲ ಏನೆಂದರೆ "ನೀರಿನಲ್ಲಿ ಹುಣಸೇಹಣ್ಣು ತೊಳೆದಹಾಗೆ" -ಇದು ಸತ್ಯ.

7.11.2001-2.15 a.m.
ಅರಿಷಡ್ವರ್ಗಗಳ ಆಟ-ಹತೋಟಿ ಹೇಗೆ?

ಆ ದೈವ ಸೃಷ್ಟಿಯಲ್ಲಿ ಪ್ರತಿಯೊಂದು ಗುಣಕ್ಕು ಅರ್ಥ ಇದ್ದೇ ಇರುತ್ತದೆ. ಅರಿಷಡ್ವರ್ಗ ದುರ್ಗುಣಗಳಲ್ಲೂ ಅರ್ಥ ಇದೆ-ಇರುತ್ತದೆಯೂ ಕೂಡ. ಆದರೆ ಅದನ್ನು ಚಿಂತಿಸುವ ರೀತಿ, ಉಪಯೋಗಿಸುವ ರೀತಿ ಬೇರೆ ಬೇರೆ ರೀತಿಯಾಗಿದ್ದಿರಬೇಕು.

೧. ದೇವರೇ ಪತಿಯೆಂದು ನಂಬಿ, ದೇವರ ಮೇಲೆ ಭಕ್ತಿ, ಪ್ರೇಮವೆಂಬ ಕಾಮವನ್ನು ಹೆಚ್ಚುಸುತ್ತಾ ಹೋಗಿ, ಸದಾ ದೇವರ ಸೇವೆಯಲ್ಲೇ ತೊಡಗಿಕೊಳ್ಳೂವುದು ಸತ್ಯ-ಶುದ್ಧ ಕಾಮ-ದೇವನೂ ಸಹ ಮೆಚ್ಚಿಕೊಳ್ಳುವನು- ಕಾಮ.

೨. ದೇವರಲ್ಲಿ ಮನದಿಂದ ಹೃದಯದಿಂದ ದೂರಾಗಿ ಪರರ ಬೇರೆ ಭಕ್ತರ ಭಕ್ತಿಗೆ ಮೆಚ್ಚಿ ಅವರ ಮನಕ್ಕೆ-ಸೇವೆಗೆ ಹೋಗುತ್ತಾನೋ ಎಂಬ ಮಾನಸಿಕ ಶಂಕೆಗೆ ಒಳಗಾಗಿ, ಸದಾ ದೇವರ ಮೇಲೆ ಮಾಡುವ ಮಾನಸಿಕ ಭಜನೆಯೇ ಕ್ರೋಧ. ಭಕ್ತನೇ ತಾನಾಗಿ ಮನದಲ್ಲಿ ಬ್ರಾಂತಿಯಾಗಿ ಮನದಿಂದ ದೇವರು ಹೋಗದ ಹಾಗೆ ನಿರ್ಮಿಸಿದ ಮಾನಸಿಕ ಗೋಡೆಯೇ- ಕ್ರೋಧ.

೩. ಜೀವನದ ಜಂಜಾಟದಿಂದ ದೂರಾಗಿ, ಭಕ್ತ-ಮಾನವ ಸದಾ ದೇವರ ಬಗ್ಗೆಯೇ ಯೋಚಿಸುತ್ತಾ, ಕಾಲ ಕಳೆಯುತ್ತಾ, ಭಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ, ದೇವರ ಬಗ್ಗೆ ಆಸಕ್ತಿಯನ್ನು ಹೆಚ್ಚಿಸಿಕೊಳ್ಳುತ್ತ, ಹೋಗುವುದೇ-ಲೋಭ.

೪. ಸದಾ ದೇವರ ಬಗ್ಗೆಯೇ ಭಜನೆ ಮಾಡುತ್ತಾ, ಸಂಗೀತ ಹಾಕುತ್ತಾ, ಪ್ರವಚನದ ಮೂಲಕ ಸದಾ ಪ್ರಚಾರ ಮಾಡುತ್ತಾ, ಜೀವನವಿಡೀ ಕಾಲ ಕಳೆಯುವುದೇ ಮೋಹ. ಮನದಲ್ಲಿ ಸದಾ ದೇವರ ಬಗ್ಗೆ ಗುಂಗುರಿನಲ್ಲಿರುವುದೇ -ಮೋಹ.

೫. ಸದಾ ಮನದಲ್ಲಿ ದೇವರ ಬಗ್ಗೆ ಚಿಂತನೆಗೈಯುತ, ಮನಸ್ಸಿನಲ್ಲಿ ಬರುವ ನಾನಾ ಸಮಸ್ಯೆಗಳನ್ನು ದೇವರಲ್ಲೇ ಮನಸ್ಸಿನಲ್ಲಿಯೇ ಕೇಳಿ ಪರಿಹಾರ ಮಾಡಿಕೊಳ್ಳುತ್ತಾ, ಮನಸ್ಸಿನಲ್ಲಿ ಸಮಸ್ಯೆಗಳು ಇಲ್ಲದಾಗಿ ಮಾಡಿ ಶೂನ್ಯ ವಾಗಿರಿಸುವುದೇ- ಮದ.
ಮನಸ್ಸಿನಲ್ಲಿರುವ ಸಮಸ್ಯೆಗಳನ್ನು ದೇವರಿಗೆ ಭಕ್ತಿಯಿಂದ ಕೊಟ್ಟು, ದೇವರಿಂದಲೇ ಪರಿಹರಿಸಿಕೊಳ್ಳುವುದೇ ಮಾನಸಿಕ ಮದ-ಹಿತವಾದ ಮದ.

೬. ದೇವರು ಅನ್ಯ ಭಕ್ತರ ಬಳಿಗೆ ಹೋಗಿ, ಅಲ್ಲೇ ನೆಲೆಸಿ, ತನ್ನ ಮನಸ್ಸಿನಲ್ಲಿ ಹೃದಯದಲ್ಲಿ ಎಲ್ಲಿ ನೆಲೆಸುತ್ತಾನೋ, ಇಲ್ಲವೋ ಎಂಬ ಮಾನಸಿಕ ಶಂಕೆಯಿಂದ, ದೇವರ ಬಗ್ಗೆಯೇ ಬೇಜಾರು/ಸಿಟ್ಟು ಮಾಡಿಕೊಳ್ಳುವುದು ಮತ್ಸರ. ಮನದಲ್ಲಿ ತಾನು ದೇವರಿಗಾಗಿ-ದೇವರು ತನಗಾಗಿ ಎಂಬ ವಿಚಾರವಿದ್ದರೆ ಅದೇ ಮತ್ಸರ. ಅನ್ಯ ಭಕ್ತರ ಬಳಿಗೆ ದೇವರನ್ನು ಕಳಿಸಬಾರದೆಂಬ ಮನದ ಫಲವೇ ಮತ್ಸರ.

ಈ ರೀತಿಯಾಗಿ ದೇವರಿಗೋಸ್ಕರ, ದೇವರಿಗಾಗಿ, ದೇವರಿಂದಲೇ ತಾನು ಜೀವಿಸುತ್ತಿರುವುದು ಎಂಬ ಮಾನಸಿಕ ಕ್ರಿಯೆಗಳು, ಮಾನವನಿಗೆ ದೇವರು ಕೊಟ್ಟ ಅರಿಷಡ್ವರ್ಗಗಳು.

ಯಾವುದೇ ವಿಷಯವನ್ನು ವೈಭವೀಕರಣಗೊಳಿಸದೆ, ವಾಸ್ತು ಸ್ಥಿತಿಯಲ್ಲಿ ಅರಿತುಕೊಳ್ಳುವುದು ನೈಜಕ್ರಿಯೆ ಮತ್ತು ಸತ್ಯಕ್ಕೆ ಸಮೀಪ-ಅಂದರೆ ಹೂಗಳು ಭಟ್ಟಹಾಗದೆ, ಕಾಯಕದಿಂದಲೇ ಜೀವನ ನಡೆಸುವುದು.
[Patience Hearing is God's GIFT].

 

​08.11.2001-2.40 a.m.
ಅ] ಬುದ್ದಿವಂತ ಖರ್ಚಿಗೆ ದೇವರ ಅನುಗ್ರಹ ಸದಾ ಇರುತ್ತದೆ. -Wise spending has God's blessings always.

ಆ] ಮನಸ್ಸನ್ನು ಅಂತರ್ಮುಖಿಯಾಗಿಸಿ ಯೋಚಿಸುವುದೇ ಒಳಗಣ್ಣು ಅಂದರೆ ಅರಿತರೆ ಶರಣ.

ಇ] ಮರೆವು ಸುಖಜೀವನಕ್ಕೆ ದೇವರು ಕೊಟ್ಟ ಮಹಾ ಕೊಡುಗೆ.- Absent mindedness is God's gift to man for leading a happy life.

ಈ] ಆಸೆಯನ್ನು ಮರೆತು, ಅತಿ ಆಸೆಯನ್ನು ಕಡೆಗಣಿಸಿ, ಜೀವನದ ಸುಖ ಅನುಭವಿಸು, ಅದರ ಆನಂದವೇ ದೇವರ ಆನಂದ. -ಅಂದರೆ ಹಾಸಿಗೆ ಇದ್ದಷ್ಟು ಕಾಲು ಚಾಚು.

-Once a borrower is always a borrower. Credit card is noting but AIDS slow poison food.

ಉ] Sixth Sense is God- ಅನಿರೀಕ್ಷಿತ ಸಲಹೆ ಸ್ವೀಕಾರವೇ ದೇವರು.

ಊ] ಕೆಟ್ಟದ್ದನ್ನು ಮಾಡಬೇಡ-ಮಾಡಲೇ ಬೇಕಾಗಿ ಬಂದರೆ ಯೋಚಿಸಿ, ನಿಧಾನಿಸಿ, ದೇವರ ನೆನೆಸಿ, ಮಾಡಿ ಮುಗಿಸಿ, ಮರೆತುಬಿಡು-ಕೊರಗಬೇಡ. ಯಾರ ಜೊತೆಗೂಡಿ ಮಾಡಬೇಡ-ಸಮಾಜಕ್ಕೆ ಕೆಡುಕು- Do it alone.

ಋ] ಒಳ್ಳೆಯದನ್ನು ಮಾಡು-ಬೇಗ ಮಾಡು-ಜೊತೆಗೂಡಿ ಮಾಡು-ಸಮಾಜಕ್ಕೆ ಒಳಿತು ನಿಧಾನಿಸಬೇಡ. - Do it in Group.

ೠ] ಆದರೆ ಒಳ್ಳೆಯದನ್ನೇ ಮಾಡೋಣ- ಇಲ್ಲದಿದ್ದರೆ ಬೇಡ-ಸುಮ್ಮನಿದ್ದು ಬಿಡೋಣ.

ಎ] ಮನಸ್ಸಿನ ಶೂನ್ಯ ಸ್ಠಾನ ದೇವರ ತಾಣ- God resides in Empty mind.
ಸ್ಠಿತಪ್ರಜ್ಞನೇ ದೇವರು. ಸ್ಠಿತಪ್ರಜ್ಞನಾಗಿರುವುದೇ ದೇವರು ಕೊಟ್ಟ ಕೆಲಸ.

ಏ] ಆಸೆಯಿಂದ ಹಿಗ್ಗದೇ, ನಿರಾಶೆಯಿಂದ ಕುಗ್ಗದೇ, ಮಾನಸಿಕ ಸ್ಠಿತಿ ಕಾಪಾಡುವುದೇ ನಿಜವಾದ ಕೆಲಸ-ದೇವರ ಕೆಲಸ.

 

13.05.2002 – 4.30 a.m.
ಮುಕ್ತಿಗೆ ದಾರಿ :- ಒಳ್ಳೆಯವನಾಗಿರು, ಒಳ್ಳೆಯದನ್ನೇ ಮಾತಾಡು, ಒಳ್ಳೆಯದನ್ನು ಮಾಡು, ಒಳ್ಳೆಯದನ್ನೇ ಯೋಚಿಸು, ಒಳ್ಳೆಯದನ್ನೇ ಪ್ರಾರ್ಥಿಸು, ಇದುವೇ ಪರಮಾತ್ಮನ ಜೊತೆ ಒಡನಾಟಕ್ಕೆ ದಾರಿ, ಮೋಕ್ಷಕ್ಕೆ ದಾರಿ. ಪುನರ್ಜನ್ಮವನ್ನು ತಪ್ಪಿಸಿಕೊಳ್ಳಲಿಕ್ಕೆ ದಾರಿ ಮತ್ತು ಪರಮಾತ್ಮನ ರಕ್ಷ ಕವಚವನ್ನು ಸದಾ ಇಟ್ಟುಕೊಳ್ಳಲು ಸಿಗುವ ಅವಕಾಶ.



31.12.2001-4.00 a.m.
ಓ ಮಾನವ ! ದೇವರನ್ನು ಪ್ರಾರ್ಥಿಸುವ ಮೊದಲು, ಪೂಜೆಗೆ ಉಪಯೋಗಿಸುವ ವಸ್ತುಗಳ ಸಂಕೇತಗಳನ್ನು ತಿಳಿ.
ನೀರು - ಸ್ವಚ್ಛತೆಯ ಸಂಕೇತ.
ವಿಭೂತಿ - ಪರಿಶುದ್ಧತೆಯ ಸಂಕೇತ.
ರುದ್ರಾಕ್ಷಿ - ಸದಾ ಜಾಗೃತಿಯ ಸಂಕೇತ.
ಮಂತ್ರ - ಪ್ರಾರ್ಠನೆಯ ಸಂಕೇತ.
ಅ[ಹ]ರಿಶಿನ - ಬೆಂಕಿಯ ಸಂಕೇತ.
ಕುಂಕುಮ - ಶಕ್ತಿಯ ಸಂಕೇತ.
ಅಕ್ಷತೆ - ಅಭಿವೃದ್ಧಿಯ ಸಂಕೇತ.
ಹೂ - ಅಲ್ಪಾಯುಷಿಯ ಸಂಕೇತ.
ಗಂಧ - ಸೇವೆಯ ಸಂಕೇತ.
ಉದುಗಡ್ಡಿ - ತ್ಯಾಗದ ಸಂಕೇತ.
ಕರ್ಪೂರ - ಕಳಂಕ ರಹಿತ ಸೇವೆಯ ಸಂಕೇತ.
ಧ್ಯಾನ - ಏಕಾಗ್ರತೆಯ ಸಂಕೇತ.
ದಾಸೋಹ - ದೇಹದ ಪೋಷಣೆಯ ಸಂಕೇತ.
ಕಾಯಕ - ಸದುಪಯೋಗ ಜೀವನದ ಸಂಕೇತ.
ಲಿಂಗ -ವಿಶ್ವರೂಪದಲ್ಲಿರುವ ’ದೇವನ ಸಂಕೇತ’ [ದೇವರು ಸರ್ವ ವ್ಯಾಪಿ ಎಂದರ್ಥ]
ಗುರು - ಅಜ್ಞಾನ ಹೋಗಲಾಡಿಸಲು ಬಂದಿರುವ ದೇವನ ಧೂತ. ಬಂದ ಶಿಷ್ಯರಿಗೆ ಮಾರ್ಗದರ್ಶನ ಮಾಡುವುದೇ ಆತನ ಕಾಯಕ.
ಜಂಗಮ - ಸದಾ ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸುತ್ತ, ಎಲ್ಲ ಸದ್ಭಕ್ತರಿಗೂ / ಸಮಾಜಕ್ಕೂ, ಅಂಕು-ಡೊಂಕುಗಳನ್ನು ತಿದ್ದಿಸಿ, ಮಾರ್ಗದರ್ಶನಕ್ಕಾಗಿ ಕಳಿಸಿರುವ ದೇವ ಧೂತ.
ಗುರುವಿಗೂ ಕಾಯಕ - ಜಂಗಮಕ್ಕೂ ಕಾಯಕ - ಲಿಂಗಕ್ಕೂ ಕಾಯಕ.

22.06.2002-5.30 p.m.

ವಿಶ್ವದ ಹುಚ್ಚರು ಯಾರು?!!!- ವಿಚಾರಿಸಿ, ವಿಮರ್ಶಿಸಿ, ತಿಳಿದುಕೊಳ್ಳಿ.
ವಿಶ್ವ ಸೃಷ್ಟಿಕರ್ತ ದೇವನನ್ನು ನಂಬದವರು.
ಸಕಲ ಜೀವರಾಶಿಗಳಿಗೆ ಲೇಸನ್ನು ಬಯಸದವರು.
ಪರಿಸರ ಮಾಲಿನ್ಯಕ್ಕೆ ಕಾರಣರಾಗಿರುವವರು.
ವಿಶ್ವ ಬಂದುತ್ವ ಬಯಸದವರು.
ದೇವನೊಬ್ಬನೇ ಎಂದು ನಂಬದವರು.
ಸರಳ ಜೀವನ ನಡೆಸದವರು.
ನಡೆ ಒಂದು ರೀತಿ-ನುಡಿ ಒಂದು ರೀತಿಯಲ್ಲಿರುವವರು.
ಧನ ಅನಾವಶ್ಯಕವಾಗಿ ವ್ಯಯ ಮಾಡುವವರು.
ಕಾಯಕ ಇಲ್ಲದೇ ಪರಾವಲಂಬಿಗಳಾಗಿ ಜೀವಿಸುವವರು.
ಮಾರ್ಗದಶನ ಇಲ್ಲದೇ, ಸ್ವೇಚ್ಛಾಚಾರಿಗಳಾಗಿ, ಜೀವಿಸುತ್ತಿರುವವರು.
ವಿಚಾರ ಶಕ್ತಿಯನ್ನು ಕಳೆದುಕೊಂಡವರು.
ಆಡಂಬರ ಜೀವನಕ್ಕೆ ಜೋತು ಬಿದ್ದವರು.
ಏಕಾಗ್ರತೆ ಇಲ್ಲದೆ ದೇವನ ಪೂಜಿಸುವವರು.
ಸಮಾಜಕ್ಕೆ ದ್ರೋಹ ಮಾಡಿ ಜೀವಿಸುತ್ತಿರುವವರು.
ಭ್ರಷ್ಟಾಚಾರಿಗಳು, ಸಮಾಜ ಕಂಟಕರು.
ಹೃದಯದಲ್ಲಡಗಿರುವ ದೇವನನ್ನು ನಂಬದವರು.
ಮೂಢನಂಬಿಕೆಯಿಂದ ಜೀವನ ನಡೆಸುವವರು.
ಪಾರಮಾರ್ಥಿಕ ವಿಷಯ ತಿಳಿಯದವರು.
ಅರಿಷಡ್ವರ್ಗ ಗುಣಗಳಿಗೆ ದಾಸರಾಗಿರುವವರು.
ಸ್ವಧರ್ಮ ಬೆಳೆಸದೇ ಪ್ರೋತ್ನಾಹಿಸದೇ ಇರುವವರು.
ಅನ್ಯ ಧರ್ಮಗಳಿಗೆ ಗೌರವ ಕೊಡದವರು.
ಎಲ್ಲ ಧರ್ಮಗಳಲ್ಲಿರುವ ಸಾಧು ಸಂತರ, ಶರಣರ, ವಿಚಾರಗಳನ್ನು, ಆಚಾರಗಳನ್ನು ತಿಳಿಯದವರು.

23.06.2002 - 9.11. a.m
:: ಸೃಷ್ಟಿಕರ್ತ ಲಿಂಗದೇವನಿಗೆ ನಮನಗಳು::
ಹೇ!! ಈ ಜಗತ್ತಿನ ಸೃಷ್ಟಿಕರ್ತ ಲಿಂಗದೇವ ನಿನಗೆ ನಮಸ್ಕಾರ.
ನಿರಾಕಾರನಾದ ಲಿಂಗದೇವ ನಿನಗೆ ನಮಸ್ಕಾರ.
ನಿರ್ಗುಣನಾದ ಲಿಂಗದೇವ ನಿನಗೆ ನಮಸ್ಕಾರ.
ಸಾಕಾರ ರೂಪವಾಗಿಯೂ ಕಾಣುವ ಲಿಂಗದೇವ ನಿನಗೆ ನಮಸ್ಕಾರ.
ಭಕ್ತರ ಭಾವಕ್ಕೆ ತಕ್ಕಂತೆ ತೋರುವ ಲಿಂಗದೇವ ನಿನಗೆ ನಮಸ್ಕಾರ.
ವಿಶ್ವ ರೂಪದ ಕುರುಹಾಗಿರುವ ಲಿಂಗವಾಗಿ ಬಂದಿರುವ ನಿನಗೆ ನಮಸ್ಕಾರ.
ಧರ್ಮಗುರು/ಪಿತ ಬಸವಣ್ಣ ಆದಿ ದೈವ ಲಿಂಗದೇವ ನಿನಗೆ ನಮಸ್ಕಾರ.
ಶರಣರ ಕೊರಳುಗಳಲ್ಲಿರುವ/ಧರಿಸಿರುವವರ ಲಿಂಗದೇವ ನಿನಗೆ ನಮಸ್ಕಾರ.
ಇಂದ್ರಿಯಗಳ ನಿಗ್ರಹಕ್ಕೆ ಕಾರಣನಾಗಿರುವ ಲಿಂಗದೇವ ನಿನಗೆ ನಮಸ್ಕಾರ.
ಭವವೈದ್ಯನಾಗಿರುವ ಲಿಂಗದೇವ ನಿನಗೆ ನಮಸ್ಕಾರ.
ಪೂಜ್ಯಶ್ರೀ ಲಿಂಗಾನಂದರ ಆರಾಧ್ಯ ದೈವ ಲಿಂಗದೇವ ನಿನಗೆ ನಮಸ್ಕಾರ.
ಪೂಜ್ಯಶ್ರೀ ಮಾತಾಜಿಯವರ ಆರಾಧ್ಯ ದೈವ ಲಿಂಗದೇವ ನಿನಗೆ ನಮಸ್ಕಾರ.
ಬಸವ ಮಂಟಪದ ಶರಣರ ಆರಾಧ್ಯ ದೈವ ಲಿಂಗದೇವ ನಿನಗೆ ನಮಸ್ಕಾರ.
ಕೂಡಲಸಂಗಮ ಕ್ಷೇತ್ರವನ್ನು ’ದೈವಾಂಶಕ್ಷೇತ್ರ’ ವನ್ನಾಗಿ ಮಾಡಿರುವ ಲಿಂಗದೇವ ನಿನಗೆ ನಮಸ್ಕಾರ.
ಅರಿಷಡ್ವರ್ಗಗಳ ಅಡಗಿಸಿದ ಲಿಂಗದೇವ ನಿನಗೆ ನಮಸ್ಕಾರ.
ಬೆಳಾಗಾಗುವ ಮುನ್ನ ಎಚ್ಚರಿಸಿ, ಆಶೀರ್ವದಿಸುವ ಲಿಂಗದೇವ ನಿನಗೆ ನಮಸ್ಕಾರ.
ಪ್ರಾಣ ಸ್ನೇಹಿತನಾಗಿ ಸದಾ ಇರುವ ಲಿಂಗದೇವ ನಿನಗೆ ನಮಸ್ಕಾರ.
ಚಿಂತನಕ್ಕೆ, ವೈಚಾರಿಕ ಕಾರಣಕ್ಕೆ ಕಾರಣನಾದ ಲಿಂಗದೇವ ನಿನಗೆ ನಮಸ್ಕಾರ.
ಎನ್ನ ಬರಹಗಳಿಗೆ ಕಾರಣನಾದ ಲಿಂಗದೇವ ನಿನಗೆ ನಮಸ್ಕಾರ.
ಲಿಂಗರೂಪದಲ್ಲಿ ಸಾಕಾರವಾಗಿರುವ ಲಿಂಗದೇವ ನಿನಗೆ ನಮಸ್ಕಾರ.
ಎನಗೆ ಪುನರ್ಜನ್ಮ ನೀಡಿನ ನಿನಗೆ, ಲಿಂಗದೇವನಿಗೆ ನನ್ನ ನಮಸ್ಕಾರ.
ನೆಮ್ಮದಿ ಮತ್ತು ಶಾಂತಿ ನೆಲಸಲಿಕ್ಕೆ ಕಾರಣನಾದ ಲಿಂಗದೇವ ನಿನಗೆ ನಮಸ್ಕಾರ.
ಲಿಂಗಾಯತರ ಎದೆಯಲ್ಲಿ ಲಿಂಗಧಾರಿಯಾಗಿರುವ ಲಿಂಗದೇವ ನಿನಗೆ ನಮಸ್ಕಾರ.
ನೈಜ ಸಾಧು ಸಂತರಿಗೆ ಸಾಕ್ಷತ್ಕರಿಸಿರುವ ಲಿಂಗದೇವ ನಿನಗೆ ನಮಸ್ಕಾರ.
ಶರಣ-ಶರಣೆಯರ ಉಸಿರಲ್ಲಿ ಉಸಿರಾಗಿರುವ ಲಿಂಗದೇವ ನಿನಗೆ ನಮಸ್ಕಾರ.
ಅನೇಕ ಧರ್ಮಗಳಿಗೆ ಚೈತನ್ಯರೂಪವಾಗಿರುವ ಲಿಂಗದೇವ ನಿನಗೆ ನಮಸ್ಕಾರ.
ಅನೇಕ ಧರ್ಮಗಳ ವೈವಿಧ್ಯತೆಯಲ್ಲಿ ಏಕತೆ ಕಾಣುತ್ತಿರುವ ಲಿಂಗದೇವ ನಿನಗೆ ನಮಸ್ಕಾರ.
ದೇವಸ್ಥಾನ ಪೂಜೆಗಳಿಂದ ಅನೇಕ ಭಕ್ತರುಗಳನ್ನು ಒಟ್ಟು ಗೂಡಿಸುವ ಲಿಂಗದೇವ ನಿನಗೆ ನಮಸ್ಕಾರ.
ಚರ್ಚ್ ಗಳ ಪೂಜೆಗಳಿಂದ ಅನೇಕ ಭಕ್ತರುಗಳನ್ನು ಒಟ್ಟುಗೂಡಿಸುವ ಲಿಂಗದೇವ ನಿನಗೆ ನಮಸ್ಕಾರ.
ಮಸೀದಿಗಳ ಪೂಜೆಗಳಿಂದ ಅನೇಕ ಭಕ್ತರುಗಳನ್ನು ಒಟ್ಟುಗೂಡಿಸುವ ಲಿಂಗದೇವ ನಿನಗೆ ನಮಸ್ಕಾರ.
ಅನೇಕ ಸಮುದಾಯ ಪ್ರಾರ್ಥನೆಗಳಿಗೆ ಕಾರಣನಾದ ಲಿಂಗದೇವ ನಿನಗೆ ನಮಸ್ಕಾರ.
ಜೀವರಾಶಿಗಳ ಹೃದಯಗಳಲ್ಲಿ ನೆಲೆಸಿರುವ ಲಿಂಗದೇವ ನಿನಗೆ ನಮಸ್ಕಾರ.
ಅನೇಕ ದೈವಾಂಶಗಳನ್ನು ಹೊಂದಿರುವ ದೇವ ದೇವತೆಗಳಿಗೆಲ್ಲಾ ಮಹಾದೇವನಾಗಿರುವ ಲಿಂಗದೇವ ನಿನಗೆ ನಮಸ್ಕಾರ.
ಬುದ್ದಿ ಜೀವಿಗಳ ಪ್ರತಿಭೆಗಳಿಗೆ ಕಾರಣನಾಗಿರುವ ಲಿಂಗದೇವ ನಿನಗೆ ನಮಸ್ಕಾರ.
ಶರಣರ ವಚನಗಳಿಗೆ ಸ್ಪೂರ್ತಿದಾಯಕನಾದ ಲಿಂಗದೇವ ನಿನಗೆ ನಮಸ್ಕಾರ.
ದಾಸರುಗಳ ಪದಗಳಿಗೆ ಚೈತನ್ಯನಾಗಿರುವ ಲಿಂಗದೇವ ನಿನಗೆ ನಮಸ್ಕಾರ.
ನೈಜ ಸಾಧು ಸಂತರ ನಾಲಗೆಗಳಲ್ಲಿ ನಲಿದಾಡುತ್ತಿರುವ ಲಿಂಗದೇವ ನಿನಗೆ ನಮಸ್ಕಾರ.
ಶರಣ ಶರಣೆಯರಲ್ಲಿ ರಕ್ತಗತವಾಗಿರುವ ಲಿಂಗದೇವ ನಿನಗೆ ನಮಸ್ಕಾರ.
ದೇವಾಧಿದೇವತೆಗಳ ರೂಪಗಳಲ್ಲಿ ಭಕ್ತರ ಭಾವನೆಗಳಿಗೆ ಮನಗಳಿಗೆ ಬಂದಿರುವ ಲಿಂಗದೇವ ನಿನಗೆ ನಮಸ್ಕಾರ.
ಭಕ್ತರ ಭಾವನೆಗಳಿಗೆ ತಕ್ಕಂತೆ ಪೂಜಿಸಿಕೊಳ್ಳುತ್ತಿರುವ ಲಿಂಗದೇವ ನಿನಗೆ ನಮಸ್ಕಾರ.
ಕೆಲವು ಭಕ್ತರುಗಳ ಪುರ್ನಜನ್ಮಕ್ಕೆ ಕಾರಣನಾಗಿರುವ ಲಿಂಗದೇವ ನಿನಗೆ ನಮಸ್ಕಾರ.
ಹಲವು ಭಕ್ತರುಗಳ ಕಾಯಕಗಳಿಗೆ ಕಾರಣನಾಗಿರುವ ಲಿಂಗದೇವ ನಿನಗೆ ನಮಸ್ಕಾರ.
ಕೆಲವು ಭಕ್ತರುಗಳಿಗೆ ಪವಾಡಗಳನ್ನು ತೋರಿಸಿರುವ ಲಿಂಗದೇವ ನಿನಗೆ ನಮಸ್ಕಾರ.
ನಂಬಿದ ಭಕ್ತರುಗಳ ಮಕ್ಕಳುಗಳ ವಿವಾಹಕ್ಕೆ ಕಾರಣನಾಗಿರುವ ಲಿಂಗದೇವ ನಿನಗೆ ನಮಸ್ಕಾರ.
ಭವ ಬಂಧನಗಳಿಂದ ಪಾರು ಮಾಡುತ್ತಿರುವ ಲಿಂಗದೇವ ನಿನಗೆ ನಮಸ್ಕಾರ.
ಆರೋಗ್ಯ, ಭಾಗ್ಯಕ್ಕೆ ಕಾರಣನಾಗಿರುವ ಲಿಂಗದೇವ ನಿನಗೆ ನಮಸ್ಕಾರ.
ಐಹಿಕ ಸುಖ ಕೊಟ್ಟರು, ಸದಾ ನಿನ್ನ ಧ್ಯಾನಕ್ಕೆ ಕಾರಣವಾಗಿರುವ ಲಿಂಗದೇವ ನಿನಗೆ ನಮಸ್ಕಾರ.
ನನ್ನ ಹಲವು ಅಪಮೃತ್ಯುಗಳನ್ನು ತಪ್ಪಿಸಿರುವ ಲಿಂಗದೇವ ನಿನಗೆ ನಮಸ್ಕಾರ.
ಬಂಡೆಯಂತಿದ್ದ ಮಾನಸಿಕ ಸಮಸ್ಯಗಳನ್ನು ಹೂಎತ್ತಿದಹಾಗೆ ಮಾಡಿರುವ ಲಿಂಗದೇವ ನಿನಗೆ ನಮಸ್ಕಾರ.

******

13.12.2003- 2.40 a.m.

ಯುಗ ಪುರುಷ ಶ್ರೀ ಮಹದೇಶ್ವರರು :- ಸಾಕಾರ ರೂಪವಾಗಿ ಕಳಿಸಿಹನು ಸೃಷ್ಟಿಕರ್ತ ಆ ದೇವನು. ದೈವಾಂಶಸಂಭೂತನಾಗಿ ಬಂದಿಹನು ಈ ಮಹದೇಶ್ವರನು ಜಾತಿ-ವರ್ಗ ರಹಿತನು ನಂಬಿದವನ ಕೈಬಿಡನು ಇದಕಾಗಿ ಇರುವುದು ಲಕ್ಷೋಪಲಕ್ಷ ಭಕ್ತವಂತರ ಉದಾಹರಣೆಗಳು ಶ್ರೀಕ್ಷೇತ್ರ ಸೇರುತ್ತಲೇ ಸಿಗುವುದು ಮನಸಿಗೆ ನೆಮ್ಮದಿ ಕ್ಷೇತ್ರದಲ್ಲಿದ್ದಾಗ ಮರೆತು ಹೋಗುವುದು ಭವಬಂಧನದ ಜಂಜಾಟ ಈ ಕ್ಷೇತ್ರದಲ್ಲಿದ್ದಾಗ ಇಲ್ಲವಾಗುವುದು ಅರಿಷಡ್ವರ್ಗಗಳ ಕಾಟ ಕ್ಷೇತ್ರ ಸುತ್ತಮುತ್ತಗಳ ಪರಿಸರವೇ ದೈವಾಂಶದ ಪರಿಸರ ಇದ್ದು ಅನುಭವಿಸಿದವರಿಗೇ ಗೊತ್ತು ಆ ಮಹದೇಶ್ವರನ ಆಟ, ಹರಕೆ ಹೊತ್ತು ತೀರಿಸಿದ ಋಣ ವಿಮುಕ್ತಿ ಭಕ್ತರು ಲಕ್ಷ-ಲಕ್ಷ, ಕಾರಣ ಅದಕೆ ಮಹದೇಶ್ವರರು ತೀರಿಸಿದ ಹರಕೆಯ ಫಲಗಳು. ಪ್ರತಿವರುಷ ಏರುತಿಹುದು ಭಕ್ತರ ಕಾಣಿಕೆಗಳು-ಹರಕೆಗಳು. ನಂಬಿದ ಭಕ್ತರಲಿ ಸದಾ ನೆಲೆಸಿಹನು ಹೃಧಯದಲಿ ಆ ಮಹದೇಶನು ವ್ರತ-ನಿಯಮಗಳನು ಆ ಭಕ್ತರಿಗೆ ಬಿಟ್ಟಿಹನು ಅವರವರ ಭಾವಕ್ಕೆ -ಮನಸಿಗೆ ಬಿಟ್ಟು ಗಮನಿಸಿಹನು. ಸತ್ಯ-ನಿಷ್ಟೆ-ಭಾವನೆ-ನಂಬಿಕೆಗಳೇ ಆ ಮಹದೇವನ ಬೇಡಿಕೆ ಇವನ ನಂಬಿ ಕೆಟ್ಟವರಿಲ್ಲ- ನಂಬಿ ಬೆಳೆದರು ಎಲ್ಲ. ಈ ಕ್ಷೇತ್ರಧ ವಾಯುವಿನೆಲ್ಲೆಲ್ಲ ಪಸರಿಸಿ ಸುತ್ತಿ ಸುಳಿದಾಡುತಿಹನು. ಆ ಮಹದೇಶ್ವರನ ಪವಾಡ-ಮಹಿಮೆಗಳು ಅಪಾರ. ನೆಪ ಮಾತ್ರಕೆ ಮಾತ್ರ ಮಾನವನ ರೂಪ ಆದರೆ ಮನ-ಭಾವ-ದೇಹ ಪೂರ್ತಿ ದೈವಾಂಶ ರೂಪ ಇವನ ಭಕ್ತರು ಹರಡಿಹರು ದೇಶ-ವಿದೇಶಗಳಲ್ಲಿ ಆದರೂ ಕ್ಷೇತ್ರಕ್ಕೆ ಬಂದು ಹೋಗುವರು ವರುಷ -ವರುಷಕ್ಕೆ ಆಗಾಗ್ಗೆ. ಕಾರಣ ಹರಕೆ ತೀರಿಸಲಿಕೆ-ಕಾರ್ಯ ನೆರವೇರಿಸಿದ್ದಕ್ಕೆ ಇವನಲ್ಲಿಲ್ಲ ಯಾವ ಭೇದ-ಜಾತಿ, ವರ್ಗ, ವರ್ಣರಹಿತನು. ಜಾನಪದ ಗೀತೆಗಳಲ್ಲಿ ಕೇಳಬೇಕು ಇವರ ಪವಾಡಗಳ, ಪ್ರತಿಯೊಬ್ಬ ಭಕ್ತರಿಗೂ ಅನುಭವಗಳು ಅನೇಕ ರೀತಿ. ಎಲ್ಲರಲ್ಲಿಲ್ಲ ಏಕ ರೀತಿಯ ಪವಾಡದ ಅನುಭವಗಳು ಮನನೊಂದಿ ಬಂದ ಭಕ್ತರು ಹೋಗಿಹರು ಮನ ಹಗುರವಾಗಿ ಕ್ಷೇತ್ರದಲ್ಲಿದ್ದಾಗ ಭಕ್ತರು ಮರೆತಿಹರು ಮನೆ ತಾಪತ್ರಯಾದಿ ವಿಷಯಗಳ. ಶ್ರೀ ಮಹದೇಶ್ವರ ಸ್ವಾಮಿಯಲ್ಲಿರುವುದು ಒಂದೇ ನೀತಿ, ಭಕ್ತಿಯಿದ್ದವನನ್ನು ಆಶೀರ್ವದಿಸಿದ, ಅರಿಷಡ್ವರ್ಗವಿದ್ದವರನ್ನು ದೂರವಿರಿಸಿದ. ನಂಬಿಕೆ-ವಿಶ್ವಾಸ-ಭಕ್ತಿ ಇದ್ದವರನ್ನು ಕ್ಷೇತ್ರಕ್ಕೆ ಕರಿಸಿದ. ಸಂಪೂರ್ಣ ಶರಣಾಗತರಾದವರಿಗೆ ಅಭಯ ನೀಡಿದ, ಸದಾ ನೆರಳು ನೀಡಿ, ಸಹಕರಿಸಿ, ಸ್ನೇಹಿತನಾದ, ಮಾರ್ಗದರ್ಶಿಯೂ ಆಗಿಹನು, ತತ್ವಜ್ಞಾನಿಯೂ ಆಗಿಹನು. ಮಕ್ಕಳಿಲ್ಲದ ಸಂಸಾರ ಮಕ್ಕಳನ್ನು ಪಡೆದರು ಹಲವರು. ನಿರುದ್ಯೋಗಿಗಳಾಗಿದವರಲ್ಲಿ ಉದ್ಯೋಗಿಗಳಾದವರು ನಂಬಿದ ಭಕ್ತರು. ನಷ್ಟ ಹೊಂದಿದ ವ್ಯಾಪಾರಸ್ಥರು ಲಾಭ ಹೊಂದಿದರು ಇನ್ನು ಹಲವು ಭಕ್ತರು ಬರಿಗೈಲಿ ಹೋದವರಿಲ್ಲ ಕ್ಷೇತ್ರಕ್ಕೆ ಬಂದ ನಂಬಿದ ಭಕ್ತರು. ಮಾನಸಿಕವಾಗಿ ನೆಮ್ಮದಿ ಹೊಂದಿ ಹೋದವರು ಅನೇಕರು ಬುದ್ದಿ ವಿಕಲ್ಪ ಹೋಗಿ ಹೃದಯ ವೈಶಾಲತೆ ಹೊಂದಿದವರು ಅನೇಕರು. ಅನಾರೋಗ್ಯದಿಂದ ಬಳಲಿದವರು ಆರೋಗ್ಯವಂತರಾದರು ಇನ್ನು ಕೆಲವರು ಕ್ಷೇತ್ರದಲ್ಲಿದ್ದು ಅನುಭವಿಸಬೇಕು, ಮಹದೇಶ್ವರನ ಮಹಿಮೆಯ. ನಂಬಿಕೆ ಇಟ್ಟು ವೇದನೆ ತಿಳಿಸಿದ ಭಕ್ತರಿಗೆ ಪರಿಹಾರ ಸಿಕ್ಕಿ ಶರಣಾಗತರಾದರು. ನಾನಾ ಪರಿಯಲಿ ಈ ರೀತಿ ಅನುಗ್ರಹಿಸುತಲಿಹನು ಸದಾ, ಶ್ರೀ ಶ್ರೀ ಶ್ರೀ ಸ್ವಾಮಿ ಮಹದೇಶ್ವರರು ಅನೇಕರ ನಂಬಿದ ಭಕ್ತರಿಗೆ.

 

ದೇವಸ್ಠಾನಗಳು : ಇರಬೇಕು ನಾನಾ ಕಡೆಗಳಲ್ಲಿ. ಮಾನಸಿಕ ಪೂಜೆ-ಪ್ರಾರ್ಥನೆಗಳು ಸಾಕು. ದೇವರ ಅನುಗ್ರಹ -ಭಕ್ತರುಗಳು [ಇದ್ದರೆ] ಮೂಲಕ ಪಡೆಯಲು ಹೋಗಬೇಕು. ಅರ್ಥವಾಗುವಂತಹ ಚಿಂತನಗಳು, ದೇವರ ನಾಮಗಳು, ಮಂತ್ರದ ಅರ್ಥಗಳು ಇದ್ದರೆ ಕೇಳಲಿಕೆ, ಮನಃಶಾಂತಿಗೆ ಹೋಗಬೇಕು. ಅಭಿವೃಧ್ಧಿಗಾಗಿ ಹುಂಡಿಗೆ ಹಣ ಜಾಸ್ತಿ ಹಾಕಿ, ಜೀವನೋಪಾಯಕ್ಕೆ ಅರ್ಚಕರಿಗೆ ಸ್ವಲ್ಪ ದಕ್ಷಿಣೆ ಉದಾರ ಮನಸ್ಸಿನಿಂದ ಹಾಕಿದರೆ ಸಾಕು. ನೈಜ ಭಕ್ತರುಗಳ ಮೂಲಕ ದೇವನನ್ನು ನೋಡಬೇಕು. ಸದ್ದು-ಗದ್ದಲವಿರುವ ದೇವಸ್ಠಾನಗಳು ಮನಕೆ ಶಾಂತಿ ಕೊಡುವುದರ ಬದಲು, ವಿಕಲ್ಪಗೊಂಡು ಏಕಾಗ್ರತೆಗೆ ಧಕ್ಕೆಯಾಗುತ್ತದೆ. ಚಿಂತನಗಳು ಮನಕೆ ನೆಮ್ಮದಿ ಕೊಟ್ಟರೆ, ದೇವರನಾಮಗಳು ಆ ದೇವನ ಮಹಿಮೆ ತಿಳಿಸುತ್ತವೆ. ಅರ್ಥವಾಗುವ ಮಂತ್ರಗಳು ಆ ದೇವನ ಆಚಾರ ವಿಚಾರಗಳನ್ನು ತಿಳಿಸುತ್ತವೆ. ಪೂಜೆಗೆ ಉಪಯೋಗಿಸುವ ಸಾಮಗ್ರಿಗಳ ವಿವರಗಳಿದ್ದರೆ-ಕಾರಣಗಳಿದ್ದರೆ, ಮನದಲ್ಲಿ ಭಕ್ತಿ ಇಮ್ಮಡಿಯಾಗಿ ದೇವನ ಬಗ್ಗೆ ನಂಬಿಕೆ -ವಿಶ್ವಾಸ-ಶ್ರದ್ದೆ ಹೆಚ್ಚಿಸುತ್ತದೆ. ಇಂತಹ ಅನುಕೂಲಗಳಿರುವ ದೇವಸ್ಠಾನಗಳಿಗೆ ಹೋಗಿ ಬಂದು ಹೆಚ್ಚಿಸುವ ಮನದಲ್ಲಿ ಭಕ್ತಿಯನ್ನು. ಈ ಬಗ್ಗೆ ದೇವರು ನಮ್ಮನ್ನು ಅನುಗ್ರಹಿಸಲಿ.

29.12.2003-12.00 a.m.

ನನ್ನ ಪೂಜೆ- ಕೆಲವು ಸಲ ಆಡಂಬರ : ಹೇ ದೇವಾ, ವಿಶ್ವ ಸೃಷ್ಟಿಕರ್ತ, ಎನ್ನ ಪೂಜೆಯಲ್ಲಿ ಏಕಾಗ್ರತೆ ಇಲ್ಲವಾಗುತ್ತಿದೆ, ಮನ ಅತ್ತ-ಇತ್ತ ಹರಿದಾಡುತ್ತಿದೆ, ದೇಹ ಅನಾರೋಗ್ಯ ಆದಾಗ ಮಾನಸಿಕ ಪೂಜೆ ಆಗುತ್ತಿದೆ, ಬುದ್ದಿ ವಿಕಲ್ಪಗೊಂಡು ಮನದಲ್ಲಿ, ಕೆಲವು ಅರಿಷಡ್ವರ್ಗ ಗುಣಗಳು ಕುಣಿಯುತ್ತವೆ, ಬುದ್ದಿ ಹತೋಟಿಯಲ್ಲಿಡಲು ಸಾಧ್ಯವಾಗುವುದಿಲ್ಲ, ಮನ ಬುದ್ದಿಯ ಹತೋಟಿಗೆ ಬರುವುದಿಲ್ಲ, ದೇಹ ವಿಚಿತ್ರ ಆಟ ಆಡುತ್ತಿದೆ. ಮಾನಸಿಕ ಪೂಜೆಯೇ ನನ್ನ ದೈವ ಪೂಜೆ ಬಾಹ್ಯ ಪೂಜೆ-ಸಾಂಕೇತಿಕವಾಗಿ, ಮನೆಗೆ ಮಾರ್ಗದಶನವಾಗಲಿಕೆ, ಭಾವಲಿಂಗಪೂಜೆ -ಪ್ರಾಣಲಿಂಗಪೂಜೆ ಇಷ್ಟಲಿಂಗ ಪೂಜೆ- ಇದು ನನ್ನ ನಿತ್ಯ ಪೂಜೆ. ದಿನಕ್ಕೆ ಎರಡು ಬಾರಿ ಪೂಜೆ. ಮಾನಸಿಕ ಪೂಜೆ ೩ ಸಲ ಏಳುವುದಕ್ಕೆ ಮುಂಚೆ, ಮುಖತೊಳೆದು ವಿಭೂತಿ ಧಾರಣೆ ನಂತರ, ರಾತ್ರಿ ೮ರ ಹೊತ್ತಿಗೆ ೩ನೇ ಸಲ ಬಾಹ್ಯ ಮತ್ತು ಮಾನಸಿಕ ಪೂಜೆ ಬೆಳಿಗ್ಗೆ ಸ್ನಾನದ ನಂತರ. ನಾನು ಮನಸ್ಸಿನ ಹತೋಟಿಯಲ್ಲಿ, ಮನ ನಿನ್ನ ಹತೋಟಿಯಲ್ಲಿದೆ ಎಂದು ನಂಬಿ ಪೂಜಿಸುತ್ತಿರುವೆ. ಇವು ನನ್ನ ಪೂಜೆಯ ವಿವರ. ದಿನ ನಿನ್ನ ಬೇಡುವುದು, ಪ್ರಾರ್ಥಿಸುವುದು ನನ್ನ ಕಾಯಕ. ಅನುಗ್ರಹ- ಆಶೀರ್ವಾದ ನಿನಗೆ ಬಿಟ್ಟಿದ್ದು. ನಿನ್ನ ಪಾದಕ್ಕೆ ನನ್ನ ಸೇರಿಸುವವರೆಗೆ ಆರೋಗ್ಯ ಕೊಟ್ಟು ಕಾಪಾಡು ಮಹದೇವ.

ನನ್ನ ಪೂಜೆ -ಅದರರ್ಥ : ಪ್ರಾರಂಭದಲ್ಲಿ ಧರ್ಮಪಿತ ಬಸವಣ್ಣನ ಪೂಜೆಮಾಡಲಿಕ್ಕೆ ಒಪ್ಪಿಗೆಯ ಪೂಜೆ.
೨೦-೨೫ ನಿಮಿಷಗಳ ನನ್ನ ಪೂಜೆ.
ಈ ವಿಶ್ವದ ಸೃಷ್ಟಿಕರ್ತನ ದೇವನ ಪೂಜೆ.
ಸಾಕಾರ ರೂಪವಾಗಿ ಇಷ್ಟಲಿಂಗದ ಪೂಜೆ.
ಭಾವನೆಯಲ್ಲಿ ಭಾವಲಿಂಗದ ಪೂಜೆ.
ಹೃದಯದಲ್ಲಿರುವ ಪ್ರಾಣಲಿಂಗದ ಪೂಜೆ.
ಪ್ರತಿನಿಧಿಗಳಾಗಿರುವ ಸಾಧು ಸಂತರ ಪೂಜೆ.
ವಚನಕಾರರ ಶಿವಶರಣೆಯರ ಪೂಜೆ.
ಹಿಂದಿನ ಯುಗಗಳಲ್ಲಿ ಆಗಿ ಹೋಗಿರುವ, ಎಂದು ನಂಬಿದ ದೇವಾದಿದೇವತೆಗಳ, ದೇವನ ಪ್ರತಿನಿಧಿಗಳ ಪೂಜೆ.
ದೇಶಗಳನ್ನು ರಕ್ಷಿಸುತ್ತಿರುವ ವೀರಯೋಧರುಗಳ ಪೂಜೆ.
ವಿಜ್ಞಾನ ಮತ್ತು ತಾಂತ್ರಿಕತೆಗೆ ಕಾರಣರಾದ ವಿಜ್ಞಾನಿಗಳ ಪೂಜೆ.
ಪ್ರತಿ ದಿನ ರಕ್ಷಿಸುತ್ತಿರುವ ನೈಜ ವೀರ ಆರಕ್ಷಕರ ಪೂಜೆ.
ಇಡೀ ವಿಶ್ವಕ್ಕೆ ಬೆನ್ನೆಲುಬು ಆಗಿರುವ ರೈತರ ಪೂಜೆ.
ಹಿಂದೆ ರಾಷ್ಟ್ರಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಪೂಜೆ.
ಹೀಗೆ ನಾನಾ ವಿಧ ರೀತಿಯ ಪೂಜೆ. ಎಲ್ಲವೂ ಭಾವನೆಯಿಂದ ಹೊರಬಂದ ಮಾನಸಿಕ ಪೂಜೆ.
ನನ್ನ ಇಷ್ಟ ಲಿಂಗದ ಪೂಜೆ ವಿಶ್ವದ ಜೀವರಾಶಿಗಳ ಪೂಜೆ.
ಸಕಲ ಜಿವರಾಶಿಗಳಿಗೆ ಲೇಸನ್ನೆ ಬಯಸುವ ಪೂಜೆ.
ಎಲ್ಲ ಜೀವರಾಶಿಗಳು ಆರೋಗ್ಯ -ಸುಖ- ಸಂತೋಷದಿಂದಿರಲಿ ಎಂದು ಪ್ರಾರ್ಥಿಸುವ ಪೂಜೆ.
ವಿಶ್ವದಲ್ಲೆಲ್ಲ ಮಳೆ-ಬೆಳೆ ಚೆನ್ನಾಗಿ ಆಗಲಿ ಸದಾ ಎಂದು ಬಯಸುವ ಪೂಜೆ.
ಗೊತ್ತಿಲ್ಲದೆ ಮಾಡಿರುವ ತಪ್ಪನ್ನು ಕ್ಷಮಿಸು ಎಂದು ಕೇಳುವ ಪೂಜೆ.
ಮಾನವ ಜೀವರಾಶಿಗಳಿಗೆ ವಿವೇಕ-ಬುದ್ದಿಕೊಟ್ಟು, ಎಲ್ಲ ಜೀವರಾಶಿಗಳನ್ನು ಬದುಕಿ-ಬಾಳಲು ಬಿಟ್ಟು ಬಿಡಲು ಅವಕಾಶಕೊಡು ಎಂದು ಕೇಳುವ ಪೂಜೆ.
ಎನ್ನ ಜೀವಕ್ಕೆ ಮುಕ್ತಿಕೊಟ್ಟು ನಿನ್ನ ಪಾದ ಸೇರಿಸಿಕೋ ಎಂದು ಕೇಳುವ ಪೂಜೆ.
ಜೀವವಿರುವವರೆಗೂ ಆರೋಗ್ಯ ಕಾಪಾಡು ಎಂದು ಕೇಳುವ ಪೂಜೆ.
ವೈವಿಧ್ಯತೆಯಲ್ಲಿ ಏಕತೆಯಿದೆ ಎಂದು ನಂಬಿ ಮಾಡುತ್ತಿರುವ ನೈಜ ಪೂಜೆ.
ಅನ್ಯ ಧರ್ಮಗಳಲ್ಲಿ ಸಹಿಷ್ಣುತೆ ಮತ್ತು ಸ್ವಧರ್ಮದಲ್ಲಿ ನಂಬಿಕೆ-ಏಕಾಗ್ರತೆ ಇಟ್ಟಿರುವ ಪೂಜೆ.
ಅರಿಷಡ್ವರ್ಗ ಗುಣ ಆಸ್ವದ ಕೊಡದೆ ಮಾಡುತ್ತಿರುವ ಪೂಜೆ.
ಆಡಂಬರಕೆ ಅವಕಾಶಕೊಡದೆ, ನಿರಾಡಂಬರದ ಪೂಜೆ.
ಮಾನಸಿಕ ಪೂಜೆಯಲ್ಲಿ ನಂಬಿಕೆ ಇಟ್ಟಿರುವ ಪೂಜೆ.
ವಿಭೂತಿ, ದೇಹ-ಮನ-ಭಾವಗಳಲ್ಲಿರುವ ಕೆಟ್ಟ ಗುಣಗಳನ್ನು ಸುಟ್ಟು, ಶುದ್ದತೆಯ ಸಂಕೇತ ಎಂದು ಧರಿಸುವ ಪೂಜೆ.
ಹರಿಶಿನ-ದೇವನು ಬೆಂಕಿಯೂ ಹೌದು ಎಂದು ನಂಬಿರುವ, ಕುಂಕುಮ -ದೇವನು ಶಕ್ತಿಯೂ ಹೌದು ಎಂದು ನಂಬಿರುವ, ಅಕ್ಷತೆ-ದೇವನ ಆಶೀರ್ವಾದದ ಸಂಕೇತ ಎಂದು ನಂಬಿರುವ, ಹೂ-ಪತ್ರೆ, ಅಲ್ಪ ಜೀವಿಗಳು ದೇವನಿಗೆ ಪ್ರಿಯ ಎಂದು ನಂಬಿರುವ ಪಾದೋದಕೆ-ಪ್ರಾಣಲಿಂಗಕ್ಕೆ ಕಾರಣ ಎಂದು ನಂಬಿರುವ ಪ್ರಸಾದ-ಸೃಷ್ಟಿಕರ್ತನ ಸದಾ ಕೊಡುಗೆ ಎಂದು ನಂಬಿರುವ ಕರ್ಪೂರ ಕಳಂಕರಹಿತ ಸೇವೆಯ ಸಂಕೇತ ಎಂದು ನಂಬಿರುವ ಆ ಭಾವನೆ-ನಂಬಿಕೆ -ವಿಶ್ವಾಸಗಳಿಂದ ಉಪಯೋಗಿಸುವ ಪೂಜೆ.
ಹೀಗೆ ನಾನಾ ಪರಿಯಲಿ, ಭಾವನೆಯ ಮಾನಸಿಕ ಪೂಜೆಯಲ್ಲಿ ೨೦-೨೫ ನಿಮಿಷಗಳಲ್ಲೆ ಬಾಹ್ಯ-ಮಾನಸಿಕ ಪೂಜೆಯೇ ನನ್ನ ಪೂಜೆ.
ವಿಶ್ವದಲ್ಲೆಲ್ಲ ಮಳೆ-ಬೆಳೆ ಚೆನ್ನಾಗಿ ಆಗಲಿ ಸದಾ, ಎಂದು ಬಯಸುವ ಪೂಜೆ. ಗೊತ್ತಿಲ್ಲದೆ ಮಾಡಿರುವ ತಪ್ಪನ್ನು ಕ್ಷಮಿಸು ಎಂದು ಕೇಳುವ ಪೂಜೆ.

 

*******
ಗೀತ ಸಾರಾಂಶ [ಮುಖ್ಯ]
೨-೧೧ : ಪಂಡಿತರು ಸತ್ತವರಿಗಾಗಿ ಆಗಲಿ ಬದುಕಿದವರಿಗಾಗಲಿ ದುಃಖಪಡುವುದಿಲ್ಲ.

೨-೧೩ : ದೇಹಸ್ಥ ಆತ್ಮವು ಈ ದೇಹದಲ್ಲಿ ಬಾಲ್ಯದಿಂದ ಯೌವನಕ್ಕೆ, ಮುಪ್ಪಿಗೆ ಒಂದೇ ಸಮನೆ ಸಾಗುವ ರೀತಿಯಲ್ಲೆ ಆತ್ಮನು ಸಾವಿನನಂತರ ಮತ್ತೊಂದು ದೇಹಕ್ಕೆ ಸಾಗುತ್ತದೆ. ಧೀರನಾದವನು ಇದರಿಂದ ಗೊಂದಲಕ್ಕೆ ಒಳಗಾಗುವುದಿಲ್ಲ.

೨-೧೪ : ಸುಖ ದುಃಖಗಳು ಸ್ವಲ್ಪ ಕಾಲ ಕಾಣಿಸಿಕೊಳ್ಳುವುವು, ಕ್ರಮೇಣ ಮಾಯವಾಗುವುವು. ಚಳಿಗಾಲ ಮತ್ತು ಬೇಸಿಗೆಗಳು ಕಾಣಿಸಿಕೊಂಡು ಮಾಯವಾಗುವಂತೆ, ಅವು ಇಂದ್ರಿಯಗಳ ಗ್ರಹಣಶಕ್ತಿಯಿಂದ ಉದ್ಭವವಾಗುತ್ತವೆ. ಅವುಗಳಿಂದ ಕ್ಷೋಬೆಗೊಳಗಾಗದೆ ಸಹಿಸುವುದನ್ನು ಕಲಿಯಬೇಕು.

೨-೧೫ : ಸುಖ ದುಃಖಗಳಿಂದ ವಿಚಲಿತನಾಗದೆ ಉಭಯ ಸ್ಥಿತಿಗಳಲ್ಲಿಯೂ ದೃಡನಾಗಿರುವ ಮನುಷ್ಯನು ಮೋಕ್ಷಕ್ಕೆ ಅರ್ಹನಾದವನು.

೨-೧೬ : ಐಹಿಕ ದೇಹ ಉಳಿಯುವುದಿಲ್ಲ ಮತ್ತು ಆತ್ಮ ಬದಲಾವಣೆ ಹೊಂದುವುದಿಲ್ಲ.

೨-೧೭ : ದೇಹವನ್ನು ಯಾವುದು ವ್ಯಾಪಿಸಿದೆಯೋ ಅದು ಅವಿನಾಶಿ. ನಾಶವಿಲ್ಲದ ಆತ್ಮವನ್ನು ಯಾರೂ ನಾಶಮಾಡಲಾರರು.

೨-೧೯ : ಜೀವಿಯು ಕೊಲ್ಲುತ್ತಾನೆ ಎಂದು ಭಾವಿಸುವವನಿಗೂ ಅದು ಕೊಲ್ಲಲ್ಪಟ್ಟಿತು ಎಂದು ಭಾವಿಸುವವನಿಗೂ ತಿಳಿವಳಿಕೆ ಇಲ್ಲ. ಏಕೆಂದರೆ ಆತ್ಮನು ಕೊಲ್ಲುವುದೂ ಇಲ್ಲ. ಕೊಲ್ಲಲ್ಪಡುವುದು ಇಲ್ಲ.

೨-೨೦ : ಆತ್ಮಕ್ಕೆ ಯಾವಗಲೂ ಹುಟ್ಟು ಎನ್ನುವುದಿಲ್ಲ. ಸಾವು ಎನ್ನುವುದಿಲ್ಲ- ಅದು ಹಿಂದೆ ಹುಟ್ಟಿದ್ದಿಲ್ಲ - ಈಗ ಹುಟ್ಟಿ ಬರುವುದಿಲ್ಲ. ಮುಂದೆ ಹುಟ್ಟುವುದೂ ಇಲ್ಲ. ಅದು ಜನ್ಮ ರಹಿತವಾದದ್ದು- ನಿತ್ಯವಾದದ್ದು. ಶಾಶ್ವತವಾದದ್ದು- ಪುರಾತನವಾದದ್ದು -ದೇಹವನ್ನು ಕೊಂದಾಗ ಅದು ಸಾಯುವುದಿಲ್ಲ.

೨-೨೧ : ಆತ್ಮವು ಅವಿನಾಶಿ ; ನಿತ್ಯ -ಅದಕ್ಕೆ ಹುಟ್ಟಿಲ್ಲ, ಕ್ಷಯವಿಲ್ಲ -ಆದ ಕಾರಣ ಯಾರನ್ನಾದರೂ ಕೊಲ್ಲುವನಾಗಲೀ, ಕೊಲ್ಲಿಸುವವನಾಗಲೀ ಇಲ್ಲ.

೨-೨೨ : ಆತ್ಮವು ಜೀರ್ಣವಾದ ದೇಹವನ್ನು ಬಿಟ್ಟು ಹೊಸ ದೇಹವನ್ನು ಸ್ವೀಕರಿಸುತ್ತದೆ.

೨-೨೩ : ಆತ್ಮವನ್ನು ಶಸ್ತ್ರಗಳು ಕತ್ತರಿಸಲಾರವು - ಅಗ್ನಿಯು ಸುಡಲಾರದು - ನೀರು ನೆನೆಯಿಸಲಾರದು ಮತ್ತು ಗಾಳಿಯು ಒಣಗಿಸಲಾರದು.

೨-೨೪ : ಜೀವಾತ್ಮನನ್ನು ಮುರಿಯಲಾಗುವುದಿಲ್ಲ. ನೀರಿನಲ್ಲಿ ಕರಗಿಸಲು ಸಾಧ್ಯವಿಲ್ಲ-ಸುಡಲು ಸಾಧ್ಯವಿಲ್ಲ- ಈತನು ನಿತ್ಯನು, ಎಲ್ಲೆಡೆ ಇರುವವನು, ಬದಲಾವಣೆಯಿಲ್ಲದವನು, ಅಚಲನಾದವನು ಮತ್ತು ಸನಾತನವಾಗಿಯೂ ಒಂದೇ ಆಗಿರುತ್ತಾನೆ.

೨-೨೫ : ಆತ್ಮನು ಕಣ್ಣಿಗೆ ಕಾಣುವುದಿಲ್ಲ-ಅದನ್ನು ಗ್ರಹಿಸಲು ಸಾಧ್ಯವಿಲ್ಲ- ಅದು ವಿಕಾರ ಹೊಂದುವುದಿಲ್ಲ-ಅದಕ್ಕಾಗಿ ದೇಹಕ್ಕಾಗಿ ದುಃಖಿಸಬಾರದು.

೨-೪೧ : ದೃಢಸಂಕಲ್ಪ ಹೊಂದಿರುವವರಿಗೆ ಒಂದೇ ಗುರಿ-ನಿಶ್ಚಯ ಸ್ವಭಾವವಿಲ್ಲದವರಿಗೆ, ಅವರ ಬುದ್ದಿಗೆ ಅನೇಕ ಶಾಖೆಗಳಿರುತ್ತವೆ.

೨-೪೨/೪೩ : ಅಲ್ಪ ಜ್ಞಾನಿಗಳಾದವರು ವೇದಗಳಲ್ಲಿನ ಅಲಂಕಾರದ ಮಾತುಗಳಿಗೆ ಮೋಹಗೊಳ್ಳುತ್ತಾರೆ. ಈ ಮಾತುಗಳು ಸ್ವರ್ಗಲೋಕಗಳ ಪ್ರಾಪ್ತಿ, ಒಳ್ಳೆಯ ಜನ್ಮ ಅಧಿಕಾರ ಮೊದಲಾದವುಗಳಿಗಾಗಿ ಹಲವಾರು ಕಾಮ್ಯ ಕರ್ಮಗಳನ್ನು ಪ್ರಶಂಸಿಸಿ ಹೇಳುತ್ತವೆ. ಇಂದ್ರಿಯ ತೃಪ್ತಿ ಮತ್ತು ಭೋಗಜೀವನಗಳನ್ನು ಬಯಸಿ ಇವಕ್ಕಿಂತ ಉತ್ತಮವಾದದ್ದು ಏನೂ ಇಲ್ಲ ಎಂದು ಅವರು ಹೇಳುತ್ತಾರೆ.

೨-೪೪ : ಭೋಗ ಮತ್ತು ಪ್ರಾಪಂಚಿಕ ಸಂಪತ್ತಿಗೆ ಅತಿಯಾಗಿ ಅಂಟಿಕೊಂಡವರಲ್ಲಿ ಮತ್ತು ಇಂತಹ ವಿಷಯಗಳಿಂದ ಚಿತ್ತಭ್ರಮಣೆಯಾದವರಲ್ಲಿ, ಭಗವಂತನ ಭಕ್ತಿ ಸೇವೆಗಾಗಿ ದೃಢಸಂಕಲ್ಪವು ಇರುವುದಿಲ್ಲ.

೨-೪೭ : ನಿಯೋಜಿತ ಕರ್ತವ್ಯವನ್ನು ಮಾಡುವುದಕ್ಕಷ್ಟೇ ಅಧಿಕಾರ. ಕರ್ಮಫಲಕ್ಕೆ ಅಧಿಕಾರವಿಲ್ಲ. ಕರ್ಮಫಲಕ್ಕೆ ಕಾರಣ ಎಂದು ಭಾವಿಸಬಾರದು.

೨-೪೮ : ಗೆಲವು ಸೋಲುಗಳಲ್ಲಿ ಯಾವುದೇ ಆಸಕ್ತಿಯನ್ನು ಇಟ್ಟುಕೊಳ್ಳದೆ ಸಮಚಿತ್ತದಿಂದ ಕರ್ತವ್ಯವನ್ನು ಮಾಡು.

೨-೪೯ : ಭಕ್ತಿಪೂರ್ವಕ ಸೇವೆಯಿಂದ ಎಲ್ಲ ಹೇಯ ಕಾರ್ಯಗಳನ್ನು ದೂರಮಾಡು. ಇಂತಹ ಪ್ರಜ್ಞೆಯಲ್ಲಿ ಭಗವಂತನಿಗೆ ಶರಣಾಗತನಾಗು. ತಮ್ಮ ಕರ್ಮಗಳ ಫಲಕ್ಕಾಗಿ ಆಸೆ ಪಡುವವರು ಕೃಪಣರು.

೨-೫೦ : ಭಕ್ತಿ ಸೇವೆಯಲ್ಲಿ ನಿರತನಾದವನು ಈ ಜನ್ಮದಲ್ಲಿಯೇ ಸುಕೃತ್ಯ ದುಷ್ಕೃತ್ಯಗಳನ್ನು ದೂರಮಾಡುತ್ತಾನೆ. ಆದುದರಿಂದ ಯೋಗವನ್ನು ಪಡೆಯಲು ಶ್ರಮಿಸು. ಅದೇ ಕರ್ಮ ಕೌಶಲ.

೨-೫೧ : ಭಕ್ತಿ ಸೇವೆಯಲ್ಲಿ ನಿರತರಾಗಿ ಮಹರ್ಷಿಗಳು ಅಥವಾ ಭಕ್ತರು ಐಹಿಕ ಜಗತ್ತಿನಲ್ಲಿ ಕರ್ಮಫಲದಿಂದ ಮುಕ್ತರಾಗುತ್ತಾರೆ. ಹೀಗೆ ಅವರು ಹುಟ್ಟು ಸಾವುಗಳ ಚಕ್ರದಿಂದ ಬಿಡುಗಡೆ ಹೊಂದುತ್ತಾರೆ ಮತ್ತು [ಭಗವದ್ದಾಮಕ್ಕೆ ಮರಳಿ] ಎಲ್ಲ ದುಃಖಗಳನ್ನು ಮೀರಿದ ಸ್ಠಿತಿಯನ್ನು ಪಡೆಯುತ್ತಾರೆ.

೨-೫೨ : ನಿನ್ನ ಬುದ್ದಿಯು ಬ್ರಾಂತಿಯ ದಟ್ಟವಾದ ಕಾಡಿನಿಂದ ಹೊರಕ್ಕೆ ಬಂದನಂತರ ನೀನು ಹಿಂದೆ ಕೇಳಿರುವುದೆಲ್ಲಕ್ಕೆ ಮತ್ತು ಮುಂದೆ ನಿರ್ಲಕ್ಷವನ್ನು ತೋರಬೇಕು.

೨-೫೩ : ವೇದಗಳ ಅಲಂಕಾರಿಕ ಭಾಷೆಯು ನಿನ್ನ ಮನಸ್ಸನ್ನು ಕಲಕದೇ ಇರುವಾಗ, ಮನಸ್ಸು ಸಮಾಧಿಯಲ್ಲಿ ನಿಶ್ಚಲವಾಗಿರುವಾಗ ನೀನು ದಿವ್ಯ ಪ್ರಜ್ಞೆ ಪಡೆಯುತ್ತೀಯೆ.

೨-೫೫ : ಮನಸ್ಸಿನ ಕಲ್ಪನೆಗಳಿಂದ ಇಂದ್ರಿಯ ಸುಖದ ವಿವಿಧ ಬಯಕೆಗಳು ಉಂಟಾಗುತ್ತವೆ - ಒಬ್ಬ ಮನುಷ್ಯನು ಇಂದ್ರಿಯಸುಖದ ಎಲ್ಲ ಬಗೆಯ ಆಸೆಗಳನ್ನು ತ್ಯಜಿಸಿ, ಅವನ ಮನಸ್ಸು ಪರಿಶುದ್ಧವಾಗಿ ಆತ್ಮದಲ್ಲೇ ಸಂತುಷ್ಟನಾದಾಗ ಆತನನ್ನು ಶುದ್ಧ ದಿವ್ಯ ಪ್ರಜ್ಞೆಯಲ್ಲಿ ಇರುವವನೆಂದು ಕರೆಯುವರು.

೨-೫೬ : ತ್ರಿವಿಧವಾದ ದುಃಖಗಳಿಂದ ಮನಸ್ಸಿನಲ್ಲಿ ಉದ್ವಿಗ್ನನಾಗದವನು, ಸುಖದಿಂದ ಉಬ್ಬಿದವನು, ರಾಗ, ಭಯ, ಕ್ರೋಧಗಳಿಲ್ಲದವನು ಸ್ಥಿರ ಮನಸ್ಸಿನ ಋಷಿ ಎನಿಸಿಕೊಳ್ಳುತ್ತಾನೆ.

೨-೫೭ : ಐಹಿಕ ಜಗತ್ತಿನಲ್ಲಿ ಒಳ್ಳೆಯದಾಗಲಿ ಕೆಟ್ಟದಾಗಲಿ ಯಾರ ಮನಸ್ಸನ್ನು ತಾಗುವುದಿಲ್ಲವೋ, ಯಾರು ಅದನ್ನು ಹೊಗಳುವುದೂ ಇಲ್ಲವೋ ತೆಗಳುವುದೂ ಇಲ್ಲವೋ, ಅಂತಹವರು ಪರಿಪೂರ್ಣ ಜ್ಞಾನದಲ್ಲಿ ಸ್ಠಿರವಾಗಿರುತ್ತಾರೆ.

೨-೫೮ : ಆಮೆಯು ತನ್ನ ಅಂಗಗಳನ್ನು ಚಿಪ್ಪಿನೊಳಕ್ಕೆ ಎಳೆದುಕೊಳ್ಳುವಂತೆ ಯಾರು ತನ್ನ ಇಂದ್ರಿಯಗಳನ್ನು ಇಂದ್ರಿಯ ವಿಷಯಗಳಿಂದ ಹಿಂದಕ್ಕೆ ಎಳೆದುಕೊಳ್ಳಬಲ್ಲರೋ ಅವರು ಪರಿಪೂರ್ಣ ಪ್ರಜ್ಞೆಯಲ್ಲಿ ಸ್ಠಿರವಾಗಿರುತ್ತಾರೆ.

೨-೫೯ : ದೇಹಸ್ಥ ಆತ್ಮವನ್ನು ಇಂದ್ರಿಯ ಸುಖದಿಂದ ದೂರವಿಡಬಹುದು. ಆದರೆ ಇಂದ್ರಿಯಸುಖದ ವಸ್ತುಗಳ ರುಚಿಯು ಉಳಿಯುತ್ತದೆ. ಆದರೆ ಇನ್ನು ಉತ್ತಮವಾದ ರುಚಿಯ ಅನುಭವದಿಂದ ಈ ಆಸಕ್ತಿಗಳನ್ನು ಕೊನೆಗಾಣಿಸಿದರೆ ಆತನ ಪ್ರಜ್ಞೆಯು ಸ್ಠಿರವಾಗಿರುತ್ತದೆ.

೨-೬೦ : ಇಂದ್ರಿಯಗಳು ಎಷ್ಟು ಬಲಶಾಲಿ ಮತ್ತು ಆವೇಶದಿಂದ ಕೆಲಸ ಮಾಡುತ್ತವೆ ಎಂದರೆ ಅವುಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ವಿವೇಚನಾವಂತನ ಮನಸ್ಸನ್ನು ಸೆಳೆದುಕೊಂಡು ಹೋಗಿಬಿಡುತ್ತವೆ.

೨-೬೧ : ಯಾರು ತನ್ನ ಇಂದ್ರಿಯಗಳನ್ನು ಸಂಪೂರ್ಣವಾಗಿ ನಿಯಂತ್ರಿಸಿ ಅಂಕೆಯಲ್ಲಿಡುತ್ತಾನೋ ಮತ್ತು ತನ್ನ ಪ್ರಜ್ಞೆಯನ್ನು ನನ್ನಲ್ಲಿ ಕೆಂದ್ರೀಕರಿಸುತ್ತಾನೋ ಅವನನ್ನು ಸ್ಠಿರಬುದ್ದಿಯವನು ಎಂದು ಕರೆಯುತ್ತಾರೆ.

೨-೬೨ : ಇಂದ್ರಿಯ ವಸ್ತುಗಳನ್ನು ಕುರಿತು ಚಿಂತಿಸುವ ಮನುಷ್ಯನಿಗೆ ಅವುಗಳಲ್ಲಿ ಆಸಕ್ತಿ ಹುಟ್ಟುತ್ತದೆ. ಇಂತಹ ಆಸಕ್ತಿಯಿಂದ ಕಾಮವು ಹುಟ್ಟುತ್ತದೆ. ಕಾಮದಿಂದ ಕ್ರೋಧವು ಉದ್ಭವವಾಗುತ್ತದೆ.

೨-೬೩ : ಕ್ರೋಧದಿಂದ ಸಂಮೋಹವು ಉಂಟಾಗುತ್ತದೆ; ಸಂಮೋಹದಿಂದ ಸ್ಪೂರ್ತಿಯ ಭ್ರಮೆಯುಂಟಾಗುತ್ತದೆ. ಸ್ಮೃತಿ ಭ್ರಮೆಯಿಂದ ಬುದ್ದಿ ನಾಶವಾಗುತ್ತದೆ; ಬುದ್ದಿನಾಶವಾದಾಗ ಮನುಶ್ಯನು ಮತ್ತೆ ಐಹಿಕ ಪ್ರಪಂಚದಲ್ಲಿ ಮುಳುಗುತ್ತಾನೆ.

೨-೬೪ : ಆದರೆ ರಾಗದ್ವೇಷಗಳಿಂದ ಬಿಡುಗಡೆಯಾಗಿ ಸ್ವಾತಂತ್ರ್ಯವನ್ನು ಕ್ರಮಗೊಳಿಸುವ ತತ್ವಗಳ ಮೂಲಕ ತನ್ನ ಇಂದ್ರಿಯಗಳನ್ನು ನಿಯಂತ್ರಿಸಬಲ್ಲವನು ಭಗವಂತನ ಪೂರ್ಣ ದಯೆಯನ್ನು ಪಡೆಯಬಲ್ಲ.
೩-೧೮ - ಆತ್ಮಸಾಕ್ಷಾತ್ಕಾರವನ್ನು ಸಾಧಿಸಿದವನಿಗೆ ನಿಯಮಿತ ಕರ್ಮಗಳ ಅನುಷ್ಟಾನದಲ್ಲಿ ಯಾವ ಉದ್ದೇಶವೂ ಇರುವುದಿಲ್ಲ. ಅಂತಹ ಕರ್ಮವನ್ನು ಮಾಡದೇ ಇರಲು ಅವನಿಗೆ ಯಾವುದೇ ಕಾರಣವಿರುವುದಿಲ್ಲ. ಆತನು ಬೇರೋಬ್ಬ ಜೀವಿಯನ್ನು ಅವಲಂಬಿಸಲು ಕಾರಣವೂ ಇರುವುದಿಲ್ಲ.

೩-೧೯ - ಆದುದರಿಂದ ಕರ್ಮಫಲದಲ್ಲಿ ಆಸಕ್ತಿ ಇಲ್ಲದೆ, ಕರ್ತವ್ಯವೆಂದು ಕರ್ಮವನ್ನು ಮಾಡಬೇಕು. ಅನಾಸಕ್ತಿ ಕರ್ಮದಿಂದ ಮನುಷ್ಯನು ಪರಮ ಪ್ರಭುವನ್ನು ಹೊಂದಬಹುದು.

೩-೨೦ - ಜನ ಸಾಮಾನ್ಯರಿಗೆ ಶಿಕ್ಷಣ ನೀಡುವುದಕ್ಕಾಗಿ ನೀನು ನಿನ್ನ ಕೆಲಸವನ್ನು ಮಾಡಬೇಕು.

೩-೨೧ - ಶ್ರೇಷ್ಟನಾದವನು ಹೇಗೆ ನಡೆದರೆ ಹಾಗೆ ಸಾಮಾನ್ಯ ಜನರು ಅನುಸರಿಸುತ್ತಾರೆ. ಮೇಲ್ಪಂಕ್ತಿಯಾದ ತನ್ನ ಕಾರ್ಯಗಳಿಂದ ಆತನು ಯಾವುದನ್ನು ಪ್ರಮಾಣವನ್ನಾಗಿ ಮಾಡುತ್ತಾನೋ ಅದನ್ನೇ ಲೋಕವು ಅನುಸರಿಸುತ್ತದೆ.

೩-೨೨- ಮೂರು ಲೋಕಗಳಲ್ಲಿಯೂ ನನಗೆ ನಿಯತವಾದ ಯಾವುದೇ ಕಾರ್ಯವಿಲ್ಲ. ನಾನು ಬಯಸುವ ವಸ್ತು ಯಾವುದೂ ಇಲ್ಲ. ನಾನು ಪಡೆಯಬೇಕಾದದ್ದು ಏನೂ ಇಲ್ಲ. ಆದರೂ ನಾನು ನಿಯಮಿತ ಕರ್ತವ್ಯಗಳಲ್ಲಿ ನಿರತನಾಗಿದ್ದೇನೆ.

೩-೨೩- ನಾನು ಯಾವಗಲೇ ಆಗಲಿ ನಿಯಮಿತ ಕರ್ಮಗಳಲ್ಲಿ ನಿರತನಾಗದೆ ಹೋದರೆ ಎಲ್ಲ ಮನುಷ್ಯರೂ ನನ್ನ ಮಾರ್ಗವನ್ನು ಅನುಸರಿಸುವವರು.

೩-೨೪ - ನಾನು ನಿಯಮಿತ ಕರ್ತವ್ಯವನ್ನು ಮಾಡದಿದ್ದರೆ ಈ ಲೋಕಗಳೆಲ್ಲ ನಾಶವಾಗುವುವು. ನಾನೇ ವರ್ಣ ಸಂಕರಕ್ಕೆ ಕಾರಣನಾಗುತ್ತೇನೆ. ಅದರಿಂದಾಗಿ ನಾನೇ ಎಲ್ಲ ಜೀವಿಗಳ ಶಾಂತಿಯನ್ನು ನಾಶಮಾಡುತ್ತೇನೆ.

೩-೨೫ - ಅಜ್ಞಾನಿಗಳಾದವರು ಹೇಗೆ ಫಲಾಸಕ್ತರಾಗಿ ಕರ್ಮವನ್ನು ಮಾಡುತ್ತಾರೆಯೋ ಹಾಗೆ ವಿದ್ವಾಂಸರು ಆಸಕ್ತಿಯಿಲ್ಲದೆ, ಜನಸಾಮಾನ್ಯರನ್ನು ಯೋಗ್ಯ ಮಾರ್ಗದಲ್ಲಿ ಕರೆದೊಯ್ಯಲು ಕರ್ಮವನ್ನು ಮಾಡಬೇಕು.

೩-೨೬ - ನಿಯತ ಕರ್ತವ್ಯಗಳ ಕರ್ಮಫಲಕ್ಕೆ ಅಂಟಿಕೊಂಡಿರುವವರ ಕೆಲಸವನ್ನು ನಿಲ್ಲಿಸಿಬಿಟ್ಟರೆ ಅವರ ಬುದ್ದಿ ಕಲಕುತ್ತದೆ. ಆದುದರಿಂದ ವಿದ್ವಾಂಸನು ಅವರ ಕೆಲಸವನ್ನು ನಿಲ್ಲಿಸಿಬಿಡಬಾರದು. ಭಕ್ತಿ ಭಾವದಿಂದ ಕೆಲಸಮಾಡಿ ಆತನು ಅಜ್ಞಾನಿಗಳನ್ನು ಎಲ್ಲ ಬಗೆಯ ಚಟುವಟಿಕೆಗಳಲ್ಲಿ ತೊಡಗಿಸಬೇಕು.

೩-೨೭- ಕಾರ್ಯಗಳನ್ನು ವಾಸ್ತವವಾಗಿ ಪ್ರಕೃತಿಯ ತ್ರಿಗುಣಗಳೇ ಮಾಡುತ್ತವೆ. ಆದರೆ ಅಹಂಕಾರದಿಂದ ಮೂಢನಾದವನು ತಾನೇ ಕಾರ್ಯಗಳನ್ನು ಮಾಡುತ್ತೇನೆ ಎಂದು ಭಾವಿಸುತ್ತಾನೆ.

೩-೨೮ - ಪರಮ ಸತ್ಯವನ್ನು ತಿಳಿದವನು ಇಂದ್ರಿಯಗಳಲ್ಲಿ ಮತ್ತು ಇಂದ್ರಿಯ ತೃಪ್ತಿಯಲ್ಲಿ ತೊಡಗುವುದಿಲ್ಲ. ಅವನಿಗೆ ಭಕ್ತಿಸೇವೆ ಮತ್ತು ಫಲದಾಸೆ ಇರುವ ಕರ್ಮ ಇವುಗಳಲ್ಲಿನ ವ್ಯತ್ಯಾಸವು ತಿಳಿದಿರುತ್ತದೆ.

೩-೨೯ - ಪ್ರಕೃತಿಯ ಗುಣಗಳಿಂದ ಮೂಢರಾದ ಅಜ್ಞಾನಿಗಳು ಸಂಪೂರ್ಣವಾಗಿ ಐಹಿಕ ಚಟುವಟಿಕೆಗಳಲ್ಲಿ ತನ್ಮಯರಾಗುತ್ತಾರೆ. ಕೆಲಸ ಮಾಡುವವರ ಅಜ್ಞಾನದಿಂದ ಈ ಕರ್ತವ್ಯಗಳು ಕೆಳಮಟ್ಟದವಾದರೂ ವಿವೇಕಿಗಳು ಅವರನ್ನು ವಿಚಲಗೊಳ್ಳಿಸಲು ಪ್ರಯತ್ನಿಸಬಾರದು.

೩-೩೦ - ನಿನ್ನಎಲ್ಲ ಕರ್ಮಗಳನ್ನು ನನಗೆ ಅರ್ಪಿಸಿ, ನನ್ನನ್ನು ಸಂಪೂರ್ಣವಾಗಿ ಅರಿತುಕೊಂಡು, ಫಲಾಪೇಕ್ಷೆಯಿಲ್ಲದೆ, ಒಡೆತನದ ಭಾವವಿಲ್ಲದೆ, ಜಡತ್ವವಿಲ್ಲದೆ, ಯುದ್ದಮಾಡು.

೩-೩೧ - ನನ್ನ ಅಪ್ಪಣೆಗೆ ಅನುಸಾರವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿ ಈ ಭೋದನೆಯನ್ನು, ಅಸೂಯೆಯಿಲ್ಲದೆ, ಶ್ರದ್ದೆಯಿಂದ ಅನುಸರಿಸುವವರು ಕರ್ಮಫಲದ ಬಂಧನದಿಂದ ಮುಕ್ತರಾಗುತ್ತಾರೆ.

೩-೩೨ - ಯಾರು ಅಸೂಯೆಯಿಂದ ಈ ಬೋಧನೆಗಳನ್ನು ಅಲಕ್ಷಿಸುವರೋ ಮತ್ತು ಅವನ್ನು ಅನುಸರಿಸುವುದಿಲ್ಲವೋ ಅವರು ಯಾವ ತಿಳುವಳಿಕೆಯೂ ಇಲ್ಲದವರು, ವಿಮೂಢರು ಎಂದು ಭಾವಿಸಬೇಕು. ಪರಿಪೂರ್ಣತೆಗಾಗಿ ಅವರು ಪಡುವ ಕ್ರಮವೆಲ್ಲ ನಾಶವಾಗುವುವು.

೩-೩೩ - ಪ್ರತಿಯೊಬ್ಬನೂ ತಾನು ತ್ರಿಗುಣಗಳಿಂದ ಪಡೆದ ಸ್ವಭಾವಕ್ಕೆ ಅನುಗುಣವಾಗಿ ನಡೆಯುತ್ತಾನೆ. ಆದ್ದರಿಂದ ತಿಳುವಳಿಕೆಯುಳ್ಳವನು ಕೂಡ ತನ್ನ ಸ್ವಭಾವಕ್ಕೆ ಅನುಗುಣವಾಗಿ ನಡೆಸುತ್ತಾನೆ. ನಿಗ್ರಹದಿಂದ ಫಲವೇನು?

೩-೩೪ - ಇಂದ್ರಿಯಗಳು ಮತ್ತು ಅವುಗಳ ವಿಷಯಗಳಿಗೆ ಸಂಬಂದಿಸಿದಂತೆ ರಾಗದ್ವೇಷಗಳನ್ನು ನಿಯಂತ್ರಿಸುವ ತತ್ವಗಳಿವೆ. ಮನುಷ್ಯನು ಇಂತಹ ರಾಗದ್ವೇಷಗಳ ವಶನಾಗಬಾರದು. ಏಕೆಂದರೆ ಆತ್ಮ ಸಾಕ್ಷಾತ್ಕಾರದ ಮಾರ್ಗದಲ್ಲಿ ಅವು ಅಡ್ಡಿಗಳು.

೩-೩೫ - ತನ್ನ ನಿಯತ ಕರ್ತವ್ಯಗಳನ್ನು ತಪ್ಪಾಗಿಯಾದರೂ ನಿರ್ವಹಿಸುವುದು ಪರಧರ್ಮವನ್ನು ಪರಿಪೂರ್ಣವಾಗಿ ಮಾಡುವುದಕ್ಕಿಂತ ಉತ್ತಮವಾದದ್ದು. ಸ್ವಧರ್ಮದಲ್ಲಿ ನಾಶವು ಮತ್ತೊಬ್ಬರ ಧರ್ಮವನ್ನು ಆಚರಿಸುವುದಕ್ಕಿಂತ ಉತ್ತಮ. ಏಕೆಂದರೆ ಪರಧರ್ಮವು ಭಯಂಕರವಾದದ್ದು.

೩-೩೭ - ರಜೋಗುಣದ ಸಂಪರ್ಕದಿಂದ ಹುಟ್ಟಿ, ಅನಂತರ ಕ್ರೋಧವಾಗಿ ಮಾರ್ಪಾಡುವ ಕಾಮವೇ ಪಾಪಕಾರ್ಯಗಳು ಮಾಡಲಿಕ್ಕೆ ಕಾರಣವಾಗುತ್ತದೆ. ಕಾಮವು ಎಲ್ಲವನ್ನು ನುಂಗಿಹಾಕುವ ಈ ಜಗತ್ತಿನ ಪಾಪಪೂರಿತ ಶತ್ರು.

೩-೩೮ - ಹೊಗೆಯು ಬೆಂಕಿಯನ್ನು ಮುಚ್ಚುವಂತೆ, ಧೂಳು ಕನ್ನಡಿಯನ್ನು ಮುಚ್ಚುವಂತೆ, ಗರ್ಭಕೋಶವು ಭ್ರೂಣವನ್ನು ಮುಚ್ಚಿವಂತೆ, ವಿವಿಧ ಪ್ರಮಾಣಗಳ ಕಾಮವು ಜೀವಿಯನ್ನು ಮುಚ್ಚುತ್ತದೆ.

೩-೩೯ - ಹೀಗೆ ಪ್ರಜ್ಞನಾದ ಜೀವಿಯ ಶುದ್ದ ಪ್ರಜ್ಞೆಯನ್ನು ಅವನ ನಿತ್ಯವೈರಿಯು ಕಾಮರೂಪದಿಂದ ಆವರಿಸುತ್ತದೆ. ಅದಕ್ಕೆ ತೃಪ್ತಿ ಎನ್ನುವುದೇ ಇಲ್ಲ. ಅದು ಅಗ್ನಿಯಂತೆ ಉರಿಯುತ್ತಿರುತ್ತದೆ.

೩-೪೦ - ಈ ಕಾಮಕ್ಕೆ ಇಂದ್ರಿಯಗಳು, ಮನಸ್ಸು ಮತ್ತು ಬುದ್ದಿ ಆವಾಸ ಸ್ಠಾನಗಳು. ಅವುಗಳ ಮೂಲಕ ಕಾಮವು ಜೀವಿಯ ಜ್ಞಾನವನ್ನು ಆವರಿಸಿ ಅವನನ್ನು ದಿಕ್ಕು ಗೆಡಿಸುತ್ತದೆ.

೩-೪೧ - ಪ್ರಾರಂಭದಲ್ಲಿಯೇ ಇಂದ್ರಿಯಗಳನ್ನು ನಿಯಂತ್ರಿಸಿ ಪಾಪದ ಮಹಾ ಸಂಕೇತವಾದ ಕಾಮಕ್ಕೆ ಕಡಿವಾಣ ಹಾಕು. ಜ್ಞಾನ ಮತ್ತು ಆತ್ಮಸಾಕ್ಷಾತ್ಕಾರಗಳನ್ನು ನಾಶಮಾಡುವ ಈ ಕಾಮವನ್ನು ಧ್ವಂಸ ಮಾಡು.

೩-೪೨ -ಕ್ರಿಯಾಶಾಲಿಯಾದ ಇಂದ್ರಿಯಗಳು ಜಡವಸ್ತುವಿಗಿಂತ ಶ್ರೇಷ್ಟ. ಮನಸ್ಸು ಇಂದ್ರಿಯಗಳಿಗಿಂತ ಶ್ರೇಷ್ಟ. ಬುದ್ಡಿಯು ಮನಸ್ಸಿಗಿಂತ ಇನ್ನೂ ಬಹು ಶ್ರೇಷ್ಟ ಮತ್ತು ಆತ್ಮನು ಬುದ್ದಿಗಿಂತ ಬಹು ಶ್ರೇಷ್ಟನು.

೪-೬ - ನನಗೆ ಹುಟ್ಟು ಎನ್ನುವುದಿಲ್ಲ. ನನ್ನ ಆಧ್ಯಾತ್ಮಿಕ ಶರೀರವು ಕ್ಷಯಿಸುವುದಿಲ್ಲ. ನಾನು ಎಲ್ಲ ಜೀವಿಗಳ ಪ್ರಭು, ಆದರೂ ಪ್ರತಿಯುಗದಲ್ಲಿಯೂ ನನ್ನ ಮೂಲ ಆಧ್ಯಾತ್ಮಿಕ ರೂಪದಲ್ಲಿ ಅವತರಿಸುತ್ತೇನೆ.

೪-೭ - ಯಾವಾಗ ಎಲ್ಲೆಲ್ಲಿ ಧರ್ಮದ ಅವನತಿಯಾಗುತ್ತದೋ ಮತ್ತು ಅಧರ್ಮವು ಹೆಚ್ಚುತ್ತದೊ ಆಗ ಸ್ವಯಂ ಅವತಾರ ಮಾಡುತ್ತೇನೆ.

೪-೮ - ಸಜ್ಜನರನ್ನು ರಕ್ಷಿಸುವುದಕ್ಕಾಗಿಯೂ ದುಷ್ಟರನ್ನು ನಾಶಮಾಡುವುದಕ್ಕಾಗಿಯೂ ಮತ್ತು ಧರ್ಮದ ತತ್ವಗಳನ್ನು ಮತ್ತೆ ಸ್ಠಾಪಿಸುವುದಕ್ಕಾಗಿಯೂ ನಾನು ಪ್ರತಿಯುಗದಲ್ಲಿ ಅವತರಿಸುತ್ತೇನೆ.

೪-೯ - ಯಾರು ಹೀಗೆ ನನ್ನ ಹುಟ್ಟಿನ ಮತ್ತು ಕರ್ಮಗಳ ದಿವ್ಯ ಸ್ವರೂಪವನ್ನು ಯಾಥಾರ್ಥವಾಗಿ ತಿಳಿದುಕೊಳ್ಳುವರೋ ಅವರು ದೇಹತ್ಯಾಗ ಮಾಡಿದ ನಂತರ ಮತ್ತೇ ಈ ಐಹಿಕ ಜಗತ್ತಿನಲ್ಲಿ ಹುಟ್ಟುವುದಿಲ್ಲ. ಅವರು ನನ್ನ ನಿತ್ಯ ನಿವಾಸಕ್ಕೆ ಬರುತ್ತಾರೆ.

Prayer to God

​23-01-1993

OH ! GOD!- Please have mercy on all of us;

give peace of mind to all of us,

be a GUIDE, FRIEND and PHILOSOPHER to all of us;

treat our work as worship;

allow us to see you in all living beings and in our works.

​World Leader

​02.06.1995

​World Leader or father of the world has not born so far; but father of the nations have born. As god is only one so also there shall be only one uniform laws to the whole world; then only common man in the world can ensure better standard of living.​

Pray God​

03.12.1995

Kunigal

 

​Be Good

Do Good,

Act Good,

Think Good,

Forget Not GOD.

Presumptions: Oh ! My God!!!

03.12.1995

Kunigal

I am presuming and firmly believing that you are the creations of this universe,

living creatures,

living beings and non-living things; and natural resources of the universe.

 

You have made same definite purpose before making creations,

which I mean;

human being is unable to understand the same.

 

However, you are very kind and very very generous to all living creatures;

and also a guide,

a friend and

a philosopher to all the human beings in the universe,

to move and analyse their ideas in understanding the reasoning behind the creations.

 

I presume that you have made this human being on a sculpture and using him as an agent/your agent to move forward of this creations for the well being of all the living creative’s.

 

If human being assumes that he is the sculpture made and appointed by god and also assumes that all the living creative’s, non living things and natural resources of the universe - all the raw materials and equipments to the (human beings) sculpture for making this universe as a divine kingdom, then what would be this universe?

 

If man really believes in the existence of God and do all the won in full dedications and concentration without having any ego mind/devises in his mind for the benefit of the universal living creative’s, then you, god, may perhaps may come and stay in this universe and show your physical presence to all your creations.

 

May I presume so??? 

God a Super Computer 

​5.1.2001 - 5.10 a.m

.
God is a Super Computer and in it masterly created programmers are embedded on it. Man is a computer operator -what man operates on the computer, depends on his mind, he will get result. As is man's mind so is the result. Good thoughts good result. Bad thoughts bad result. Floppies are of mans thoughts in their minds. It is the result of man's total previous karma's [actives]. Floppies are required to be updated by Man often by good actives/reading habits & removal of bad notices in the mind to get/ensure "Moksha" result in the computer god's kit.

Art of Living

​23.08.2001 - 2.30.a.m

 

Disciplining the WATCH is the Art of Living - WATCH means

W - Work- in order of merit.

A - Action - to ensure quick result.

T - Thought -mentally planning good thoughts for action plan in order of merit.

C - Character - to ensure no one living being in hosted in any way.

H - Heart- chanting always God's values names to avoid stress & strain.

 

viz Watching [verb] and WATCH in the ART of Living.

viz- The result of the multiple actions of trust, belief, notions & devotion to almighty.

 

GOD is the path to get salvation.

salvation is no rebirth & unifies with the Gods such. 

God and Devotees are supplement to each other.

 

In the coin of Devotion, God and Devotee are the two Faces.

MAN-MIXI

23.08.2001-5.10.am

 

Man is a Mixi Grinding machine

mind is the Jar-all good activities

 

[ಪ್ರೀತಿ-ಪ್ರೇಮ-ವಿಶ್ವಾಸ- ನಂಬಿಕೆ-ಕರುಣೆ-ಮಮತೆ-ಸದ್ಭಾವನೆ, ಇತ್ಯಾದಿ ಇತ್ಯಾದಿ] are the inputs to be kept in the Jar,

Rationale positive thinking is the starter

If the starter is put on action for start,

it starts grinding the inputs and the final result is ಭಕ್ತಿ- Devotion.

 

Thus Man becomes, Devotee.

 

God will take devotion

for taste and take mixi machine [Man] itself for HIS use

to prepare and eat Devotion as and when required.

 

So no question of retaining Mixi machine [Man] in the World Arises - [ಆಗ ಪುನರ್ಜನ್ಮ ಮಾನವನಿಗಿಲ್ಲ].

 

If Otherwise: 

 

If bad qualities [in puts]-viz ಅರಿಷಡ್ವರ್ಗ, ಆಸೆ, ದುರಾಸೆ, ಇತ್ಯಾದಿ, ಇತ್ಯಾದಿ,

are poured /kept in the Jar [mind] and

press the starter [thinking]

it starts grinding,

but not for a long time and stops afterwards due to degrading and

comes to a halt and

all blades in the jar will become rust and poisons.

 

Then all the blades in the jar has to be replaced

by new one/ones to ensure Mixi becomes functioning once again.

 

For repairing the Jar [mind] saints, sadhus etc, etc, 

have to come as repairer/maintenance to repair the Mixi.

 

Solutions of the mixi/jar depends upon the inputs usage.

 

If the jar is filled with false notices [ಮೂಡನಂಬಿಕೆ] and starter is put and to function,

it is like filling water into the jar for grinding, but the result is a BIG ZERO.

 

Man a Coin

23.10.2001-5.50

 

Man is a coin

attachments & detachments are the two faces.

 

When god tosses the coin,

and in a toss, if detachments face win it, then coin is lucky.

God will take the coin for himself.

 

Because god likes detachment of all desires by the man.

God settles in the mind which is empty in all respects.

He guides and act like a friend and philosopher to man at all times,

till such time mind is not filled with any desires. [ಆಸೆಯೇ ದುಃಖಕ್ಕೆ ಮೂಲ].

 

If otherwise, in tossing the coin if attachments face win,

then man’s life began for deterioration due to increase of desires in the mind.

It is the worst part of life and man has to undergo various births/rebirths

till such time mind is detached with all attachments.

 

UNITY OF ACTIONS in detaching all attachments in the mind is a must.

Speak Good

13.05.2002 – 4.30 a.m

Be good,

do good,

think good,

pray good.

 

This is the way to get salvation/mukthi,

of otherwise to avoid rebirth;

and one and the only one way to wear permanent Safe Guard

Like a shelter in the tree of God.

 

God and Goodness

13.07.2002 – 1.35 a.m

God is in the goodness of an individual.

Institutions itself is God.

 

Therefore Be Good

Do Good

Think Good

Speak Good &

Pray Good.

Develop Goodness in all the activities.

Where there is goodness

there you can see the act of God.

 

One should have inner eye to see it and

to understand the concept

of the feelings of the Goodness

of the divine feelings of individuals.

The God - Sixth Sense

06.05.1999 – 2.00 a.m

OH!MY GOD !!

AS I believed you’re firmly,

whole heartedly in all my activities,

in thinking and what not;

 

you came like a friend,

guided me and gave philosophical thoughts to my mind

through sixth sense in times of need.

 

You gave me peace of mind;

you controlled my disturbed mind and

allowed myself to reach myself to the destruct goal.

 

Many times you saved me from death /accidents

which could have occurred by accidents in vehicle

for which I will be ever, ever and ever grateful to you.

 

But, for your indirect help in all times of needs

I would not have come to this stage.

 

Further, but for you only I am still in life/living

otherwise I would have

became worst element in the society

making myself good for noting.

 

I am spending happy life every day.

As I always chant you every moment in all my walks of life,

there is no sunset for me in my life it is always sunrise.

 

Sixth (6th) sense is my GOD.

bottom of page